1. ಗೌರವ ಪ್ರಶಸಿ 2018
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2018 ನೇ ಸಾಲಿನಲ್ಲಿ  1.ಕೊಂಕಣಿ ಸಾಹಿತ್ಯ  2. ಕೊಂಕಣಿ ಕಲೆ  3. ಕೊಂಕಣಿ ಜಾನಪದ ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಅರ್ಹರಿಂದ  ಗೌರವ ಪ್ರಶಸ್ತಿಗಳಿಗಾಗಿ ಅರ್ಜಿ ಕರೆಯಲಾಗಿದೆ. ಈ ಪ್ರಶಸ್ತಿಯು ರೂ.50,000/- ಗೌರವಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣಪತ್ರ ಫಲತಾಂಬೂಲವನ್ನು ಒಳಗೊಂಡಿದೆ.  ಸಾಧಕರು ನೇರವಾಗಿ ಅರ್ಜಿಸಲ್ಲಿಸಬಹುದಾಗಿದೆ.  ಸಂಘ ಸಂಸ್ಥೆಗಳು, ಸಾರ್ವಜನಿಕರೂ ಸಹ ಸಾಧಕರ ಹೆಸರು ಸೂಚಿಸಿ ಅರ್ಜಿ ಸಲ್ಲಿಸಬಹುದು.


 2. ಪುಸ್ತಕ ಬಹುಮಾನ 2018:
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2018 ರ ಕ್ಯಾಲೆಂಡರ್ ವರ್ಷದಲ್ಲಿ( ಜನವರಿ 1 ರಿಂದ ಡಿಸೆಂಬರ್ 31 ) ಪ್ರಕಟಿತವಾದ   (1) ಕೊಂಕಣಿ ಕವನ ಅಥವಾ ಲೇಖನ ಅಥವಾ  ವಿಮರ್ಶೆ  (2) ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ ಅಥವಾ ಅಧ್ಯಯನ ಕೃತಿ.(3) ಕೊಂಕಣಿಗೆ ಭಾಷಾಂತರಿಸಿದ ಕೃತಿ ಬಗ್ಗೆ ಲೇಖಕರಿಂದ, ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕದ 4 ಪ್ರತಿಗಳ ಜೊತೆಗೆ  ಅರ್ಜಿಯನ್ನು ಅಹ್ವಾನಿಸಲಾಗಿದೆ. ಪುಸ್ತಕ ಬಹುಮಾನವು ರೂ.25,000/-ಗೌರವಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣಪತ್ರ, ಫಲತಾಂಬೂಲವನ್ನು ಒಳಗೊಂಡಿದೆ.  

ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ “ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ-2018” ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು “ಕೊಂಕಣಿ ಅಕಾಡೆಮಿ ಪುಸ್ತಕ ಬಹುಮಾನ ಯೋಜನೆ-2018” ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ  ಕೊಂಕಣಿ  ಸಾಹಿತ್ಯ  ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ,   ಲಾಲ್‍ಭಾಗ್  ಮಂಗಳೂರು-3   ಇವರಿಗೆ   ದಿನಾಂಕ 15-01-2019 ರೊಳಗಾಗಿ  ಕಳುಹಿಸಿಕೊಡುವಂತೆ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಪತ್ರಿಕಾ ಪ್ರಕಣೆಯಲ್ಲಿ ವಿನಂತಿಸಿದ್ದಾರೆ

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]