ಸರ್ಕಾರದಿಂದ  ಅಕಾಡೆಮಿಗೆ ಬಿಡುಗಡೆಯಾಗುವ ಅನುದಾನಗಳ ವಿವರಗಳು:

ಅಕಾಡೆಮಿಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಯೋಜಗೆಗಾಗಿ ಅನುದಾನ      ರೂ. ೪೦,೦೦,೦೦೦-೦೦
ಯೊಜನೇತರ ವೆಚ್ಚಗಳ ಅನುದಾನ                                               ರೂ.  ೫,೦೦,೦೦೦-೦೦ 
ಫೆಲೋಶಿಫ್  ಯೋಜನೆ                                                          ರೂ.  ೫,೦೦,೦೦೦-೦೦


1.     ತ್ರೈಮಾಸಿಕ ಕೊಂಕಣಿ ಸಿರಿಸಂಪದ ವಾರ್ತಾಸಂಚಿಕೆ ಪ್ರಕಟಣೆ-ಮೂರು ತಿಂಗಳಿಗೊಮ್ಮೆ  ಅಕಾಡೆಮಿಯ ಕಾರ್ಯಚಟಿವಟಿಕೆಗಳ ವಿವರಗಳನ್ನು ಪ್ರಕಟಿಸುವುದು.

2.     ಸಂಶೋಧನಾ ಕಾರ್ಯಗಳು: ಕೊಂಕಣಿಯ ಪ್ರಮುಖ ಸಮೂದಾಯಗಳ ಸಂಸ್ಕೃತಿ, ಕಲೆ,  ಸಾಹಿತ್ಯ, ಜಾನಪದಗಳ ಸಂಗ್ರಹ ಕುರಿತು ಸಂಶೋಧನ ಕಾರ್ಯಗಳನ್ನು     ಹಮ್ಮಿಕೊಳ್ಳಲಾಗಿದೆ.

3.     ಗ್ರಂಥ ಪ್ರಕಟಣೆಗಳು;ಕೊಂಕಣಿಯ ವಿವಿಧ ಪ್ರಕಾರದ ಲೇಖಕರಿಂದ ಸ್ವೀಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಸೌಲಬ್ಯವಿದೆ.

4.     ಅಕಾಡೆಮಿ ಗೌರವ ಪ್ರಶಸ್ತಿ ಮತ್ತು  ಪುಸ್ತಕ ಪುರಸ್ಕಾರ : ಅಕಾಡೆಮಿಯು ನೀಡುವ ಗೌರವ ಪ್ರಶಸ್ತಿಯಲ್ಲಿ  ಮೂರು ಪ್ರಕಾರಗಳ ೧. ಕೊಂಕಣಿ ಭಾಷೆ - ಸಾಹಿತ್ಯ, ೨. ಕೊಂಕಣಿ ಕಲೆ-ನಾಟಕ/ ಸಂಗೀತ ಮತ್ತು ೩. ಕೊಂಕಣಿ  ಜನಪದ ಕ್ಷೇತ್ರಗಳಲ್ಲಿನ ಅನನ್ಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇವರುಗಳಿಗೆ ರೂ 10,000/-ಗಳ ಗೌರವ ಧನ ಮತ್ತು ಸ್ಮರಣಿಕೆ ಶಾಲು ಗಂಧದ ಹಾರ,   ಫಲತಾಂಬುಲ ನೀಡಿ  ಗೌರವಿಸುವುದು.

5.     ಅಕಾಡೆಮಿಯ ಪುಸ್ತಕ ಬಹುಮಾನಕ್ಕೆ.ಕನ್ನಡ-ಕೊಂಕಣಿ ಯಾ ಕೊಂಕಣಿ-ಕನ್ನಡ  ಭಾಷಾಂತರ, ೨. ಕವನ ಸಂಕಲನ, ಮತ್ತು ೩. ಕಥಾ ಸಂಕಲನ ಈ ಮೂರು ಪ್ರಕಾರಗಳನ್ನು ಬಹುಮಾನಕ್ಕೆ ಆಯ್ಕೆಮಾಡಲಾಗಿದೆ. ರೂ 5,000/- ಗೌರವಧನ ಮತ್ತು  ಶಾಲು  ಗಂಧದ ಹಾರ ಫಲತಾಂಬುಲ ನೀಡಿ ಗೌರವಿಸಲಾಗುತ್ತಿದೆ

 

 

 

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]