ಕರ್ನಾಟಕ ಕೊಂಕ್ಣಿ ಸಾಹಿತ್ಯ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಡನೆ ರಾಜ್ಯ ಮಟ್ಟದ ಕೊಂಕಣಿ ನಾಟಕ ಕಾರ್ಯಾಗಾರವನ್ನು 2014 ಅಕ್ಟೋಬರ್ 02 ರಿಂದ 04ರವರೆಗೆ ಹಮ್ಮಿಕೊಂಡಿದೆ.
ಆರಂಭಿಕ ಹಂತದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕಾಸರಗೋಡು, ಧಾರವಾಡ, ಬೆಂಗಳೂರು ಮತ್ತು ಮೈಸೂರು ಈ ಎಂಟು ಜಿಲ್ಲೆಗಳಲ್ಲಿ ಕೊಂಕಣಿ ನಾಟಕ ರೆಪರ್ಟರಿಗಳನ್ನು ಆರಂಭಿಸುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಸಲಾಗುವುದು. ಒಂದು ಜಿಲ್ಲೆಯಿಂದ ಕೇವಲ ಹತ್ತು ಜನರಿಗೆ ಮಾತ್ರ ಅವಕಾಶವಿರುವುದು.
ಈ ಜಿಲ್ಲೆಗಳ 16 ರಿಂದ 35 ವರ್ಷ ಪ್ರಾಯದೊಳಗಿನ ಯಾವುದೇ ಸಮುದಾಯದ ಕೊಂಕಣಿ ಮಾತೃಭಾಷಿಕ ಯುವಜನರಿಗೆ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ.

ಈ ಕಾರ್ಯಾಗಾರವು ಮಂಗಳೂರು ಶಕ್ತಿನಗರದ ಕಲಾಂಗಣ್‌ನಲ್ಲಿ ಕೊಂಕಣಿಯ ಏಕ ಮಾತ್ರ ರೆಪರ್ಟರಿ ‘ಕಲಾಕುಲ್’ ಇದರ ಸಹಕಾರದೊಡನೆ ನಡೆಯಲಿದ್ದು, ಕಾರ್ಯಾಗಾರದಲ್ಲಿ ನಾಟಕದ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿ, ಒಂದು ಕಿರು ನಾಟಕವನ್ನು ಪ್ರದರ್ಶಿಸಲು ತರಬೇತಿ ನೀಡಲಾಗುವುದು.

ಕಾರ್ಯಾಗಾರಕ್ಕೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಅಲ್ಲದೇ ಬರುವ ಶಿಬಿರಾರ್ಥಿಗಳಿಗೆ ಅಕಾಡೆಮಿ ನಿಯಮಾವಳಿಗಳ ಪ್ರಕಾರ ವಸತಿ, ಊಟೋಪಚಾರದೊಡನೆ ಪ್ರಯಾಣ ಭತ್ಯೆಯನ್ನು ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 20ರೊಳಗೆ ತಮ್ಮ ಹೆಸರುಗಳನ್ನು ಅಕಾಡೆಮಿ ಕಛೇರಿಯಲ್ಲಿ 0824-2453167 ಅಥವಾ This email address is being protected from spambots. You need JavaScript enabled to view it. ಮುಖಾಂತರ ನೊಂದಾಯಿಸಲು ಕೋರಲಾಗಿದೆ.

 

 

 

Add comment


Security code
Refresh

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]