Print

``ಈ ಭಾಗದ ಬಹುಜನರ ಮನೆ ಭಾಷೆ, ಊರಿನ ಭಾಷೆಯಾಗಿರುವ ಕೊಂಕಣಿಯಲ್ಲಿ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ಮಾಜಿ ಶಾಸಕ ಗಂಗಾಧರ ಭಟ್ ಹೇಳಿದರು. ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕೊಂಕಣಿಯನ್ನು ಕಲಿಸುವ ಕುರಿತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭವನ್ನು ಶಿವಾಜಿ ವಿದ್ಯಾಮಂದಿರ ಅಸ್ನೊಟಿಯಲ್ಲಿ ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಂಕಣಿ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತಲಿನೊ, ``ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕೊಂಕಣಿಯನ್ನು ಕಲಿಯಲು ಸರ್ಕಾರ 2007-08 ನೇ ಸಾಲಿನಲ್ಲೇ ಅವಕಾಶ ಕಲ್ಪಿಸಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ಎರಡು ಶಾಲೆಗಳಲ್ಲಿ ಮಾತ್ರ ಕೊಂಕಣಿಯನ್ನು ಕಲಿಸಲಾಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು2016 ಮಾರ್ಚ್ 10-15 ಅವಧಿಯಲ್ಲಿ 74 ಹಾಗೂ ಕಳೆದ ಡಿಸೆಂಬರ್‌ನಲ್ಲಿ 26 ಹೀಗೆ ಒಟ್ಟು 100 ಶಾಲೆಗಳಿಗೆ ಭೇಟಿ ನೀಡಿ ಕೊಂಕಣಿ ಶಿಕ್ಷಣ ಜಾಗೃತಿ ಮೂಡಿಸಲಾಗಿದೆ. ಈ ಕುರಿತು ಕಾರವಾರ ಶಾಸಕರಾದ ಶ್ರೀ ಸತೀಶ್ ಸೈಲ್,  ಡಿಡಿಪಿಐ ಎ ಬಿ ಪುಂಡಲೀಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗ್ಡೆ ಇವರನ್ನು ಭೇಟಿಯಾಗಿ ಮಾಹಿತಿ ನೀಡಲಾಗಿದೆ. ಕೊಂಕಣಿಯಲ್ಲಿ ಪಠ್ಯಪುಸ್ತಕಗಳು ಸಹ ಲಭ್ಯವಿದೆ. ಮಾತೃಭಾಷೆಯನ್ನು ಒಂದು ಮಾಧ್ಯಮವಾಗಿ ಕಲಿಯಲು ಉತ್ತಮ ಅವಕಾಶ ಇದಾಗಿದ್ದು, ಈ ಕುರಿತು ಪೋಷಕರು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕಾಗಿದೆ. ಶಿಕ್ಷಕರು ಈ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕಿದೆ. ಈ ನಿಟ್ಟಿನಲ್ಲಿ ಅಕಾಡೆಮಿ ವತಿಯಿಂದ ಸರ್ವ ನೆರವು ಒದಗಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಥಮ `ಕೊಂಕಣಿ ಕ್ಲಬ್ ಅನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಅಸ್ನೋಟಿ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಯ ಸಾವಂತ, ಶಿಕ್ಷಣ ಸಂಯೋಜಕರಾದ ಉಮೇಶ ನಾಯಕ, ಪ್ರದೀಪ ಬಂಟ, ಅಕಾಡೆಮಿ ಸದಸ್ಯರಾದ ಲಾರೆನ್ಸ್ ಡಿಸೊಜಾ, ರಿಜಿಸ್ಟಾರ್ ಡಾ. ಬಿ.ದೇವದಾಸ ಪೈ, ಉತ್ತರ ಕನ್ನಡ ಜಿಲ್ಲೆಯ ಕೊಂಕಣಿ ಶಿಕ್ಷಣ  ರಾಯಭಾರಿ ಉಲ್ಹಾಸ ಪ್ರಭು ಉಪಸ್ಥಿತರಿದ್ದರು. ಶ್ವೇತಾ ನಾಯಕ್ ಮತ್ತು ಪಂಗಡದವರು ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯಾಧ್ಯಾಪಕ ದಿನೇಶ ಗಾಂವ್ಕರ್ ಸ್ವಾಗತಿಸಿದರು. ಸಹ ಶಿಕ್ಷಕ ಗಣೇಶ್ ಬಿಷ್ಠಣ್ಣನವರ್ ವಂದಿಸಿದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಬಿಆರ್ ಸಿ ಮತ್ತು ಸಿ ಆರ್ ಪಿ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊಂಕಣಿ ಅಕಾಡೆಮಿ ತಂಡವು ಈ ಕೆಳಗಿನ ಪ್ರದೇಶಗಳಲ್ಲಿನ 100 ಶಾಲೆಗಳಿಗೆ ಭೇಟಿ ನೀಡಿತು.   ಕಿನ್ನರ, ಘಾಡಸಾಯಿ, ಅಂಬೆಜೂಗ, ನಿರಾಕಾರ, ಸಿದ್ದರ, ಉಳಗಾ, ಹಳಗಾ, ಹಣಕೋಣ, ಚಿತ್ತಾಕುಲ, ಮಾಜಾಳಿ, ಮೆಡಿಸಿಟ್ಟಾ, ಗಾಬಿತ್‌ವಾಡಾ, ಸದಾಶಿವಗಡ, ಕೋಡಿಬಾಗ, ಹೊಸಾಳಿ, ಅಂಗಡಿ, ಮುಡಗೇರಿ, ಅಸ್ನೋಟಿ, ಬೈತಕೋಲ, ಬಜಾರ್, ಕಾಜುಬಾಗ, ಕೋಡಿಬಾಗ, ಹೋಟೆಗಾಳಿ, ಭೀಮಖೋಲ, ಗೋಪಶಿಟ್ಟಾ, ಬಾಳ್ನಿ, ಭೈರೆ, ಗೋಟೆಗಾಳಿ, ಗೋಯರ್-೨, ಕದ್ರಾ, ವಿರ್ಜೆ, ಕುರ್ನಿಪೇಟ, ಶಿರವಾಡ, ಹಳೆಕೋಟ, ಕಡವಾಡ, ಮಾಡಿಬಾಗ, ಖಾರ್ಗೆ, ನೈತಿಸಾಂವರ, ವೈಲವಾಡಾ, ಬರ್ಗಲ್, ಬೇಳೂರ, ನಗೆ, ಕೊವೆ, ದೇವಳಮಕ್ಕಿ, ಶಿರ್ವೆ, ಕಡಿಯೆ, ಕೇರವಾಡಿ, ಮಲ್ಲಾಪುರ, ಮುದಗಾ, ಅರ್ಗಾ, ಅಚ್ಚ ಕನ್ಯೆ, ಆಮದಳ್ಳಿ, ಸಾಣೆಮಕ್ಕಿ, ಚೆಂಡಿಯಾ ನಂ-೧, ತೋಡೂರು, ಚೆಂಡಿಯಾ ನಂ-೨, ಅರಗಾ, ಬಿಣಗಾ, ಮೂಡ್ಲಮಕ್ಕಿ. ಪ್ರತಿ ಶಾಲೆಗೆ ಕೊಂಕಣಿ ಪುಸ್ತಕಗಳು ಹಾಗೂ ಕೊಂಕಣಿ ಬಾವುಟದ ಸ್ಮರಣಿಕೆಯನ್ನು ನೀಡಲಾಯಿತು.

ಈ ಅಭಿಯಾನಕ್ಕೆ ಕೊಂಕಣಿ ಪ್ರಚಾರ ಸಂಚಾಲನವು ಸಹಕಾರ ನೀಡಿತ್ತು. ಈ ತಂಡದಲ್ಲಿ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ, ರಿಜಿಸ್ಟ್ರಾರ್ ಡಾ ಬಿ. ದೇವದಾಸ ಪೈ, ಸದಸ್ಯ ಲಾರೆನ್ಸ್ ಡಿಸೋಜ, ಉತ್ತರ ಕನ್ನಡದ ಕೊಂಕಣಿ ರಾಯಭಾರಿಯಾಗಿರುವ ಉಲ್ಹಾಸ ಪ್ರಭು, ಕೊಂಕಣಿ ಕಾರ್ಯಕರ್ತರಾದ ವಿಕ್ಟರ್ ಮತಾಯಸ್, ಸ್ಟ್ಯಾನ್ಲಿ ಡಿಕುನ್ಹಾ, ಸಂತೋಶ್ ಫೆರ್ನಾಂಡಿಸ್, ರೊನಾಲ್ಡ್, ಕ್ಲಾನೆಟ್,  ಕೊಂಕಣಿ ಮೊಬೈಲ್ ಬಜಾರ್‌ನ ಸಂದೀಪ್ ಮೊಂತೇರೊ, ಜೆರೊಮ್ ಡಿಸೋಜ ಹಾಗೂ ಮದರ್ ತೆರೆಜಾ ಬ್ರಾಸ್ ಬ್ಯಾಂಡ್ ಹೊನ್ನಾವರ ಇದರ ಕಲಾವಿದರಾದ ಉಲ್ಲಾಸ್ ಲೋಪಿಸ್, ಕಿರಣ್ ಮಿರಾಂದಾ, ಆನಂದ ಮಿರಾಂದಾ, ಪ್ಯಾಟ್ರಿಕ್ ಲೋಪಿಸ್ ಸಹಕರಿಸಿದರು.