ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ (1) ಗಿರಿಜನ ಉಪಯೋಜನೆಯಡಿಯಲ್ಲಿ ಕೊಂಕಣಿ ಪರಿಶಿಷ್ಟ ಪಂಗಡದ ಹಾಗೂ (2) ವಿಶೇಷ ಘಟಕ ಯೋಜನೆಯಡಿಯಲ್ಲಿ ಕೊಂಕಣಿ ಪರಿಶಿಷ್ಟ ಜಾತಿಯ ಜನಪದ ಕಲೆಗಳ ಫೆಲೋಶಿಪ್ ಯೋಜನೆಗಳನ್ನು ಹಮ್ಮಿಕೊಂಡಿದ್ದು. ಈ ಎರಡೂ ಯೋಜನೆಗಳು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿವೆ. ಈ ಯೋಜನೆಗಳಿಗೆ ಸಂಬಂಧಿಸಿ ದತ್ತಾಂಶ ಸಂಗ್ರಹ ಮಾಡಲು ಇಬ್ಬರು ಅಧ್ಯಯನ ಸಹಾಯಕರ ಆಗತ್ಯವಿರುತ್ತದೆ. ಪದವೀಧರ ಆರ್ಹತೆಯುಳ್ಳ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ಮಾಹಿತಿಯೊಂದಿಗೆ, ಮಂಗಳೂರು ಲಾಲ್ಬಾಗ್ನ ಮಹಾನಗರಪಾಲಿಕೆ ಕಟ್ಟಡದಲ್ಲಿರುವ ಅಕಾಡೆಮಿ ಕಛೇರಿಯನ್ನು ಸಂಪರ್ಕಿಸಬೇಕಾಗಿ ವಿನಂತಿ.