ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 25 ವರ್ಷ ಸಂದ ಸಲುವಾಗಿ 2017-18 ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತ ಬರುತ್ತಿದ್ದು. ಸರಣಿಯ ಎಂಟನೇ ಕಾರ್ಯಕ್ರಮವನ್ನು ದಿನಾಂಕ 16-11-2017 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಪ್ರಚಾರ ಸಂಚಲನ ಸಹಯೋಗದಲ್ಲಿ “ಕೊಂಕಣಿ ಮಕ್ಕಳ ದಿನಾಚರಣೆ"ಯನ್ನಾಗಿ ಮಂಗಳೂರಿನ ಪುರಭವನದಲ್ಲಿ ಆಚರಿಸಲಾಯಿತು.

 

 

 

 

 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಕವಿತಾ ಸನಿಲ್ ಮಕ್ಕಳ ಪ್ರತಿಬೆ ಬೆಳೆಯಲು ಇಂತಹ ಕಾರ್ಯಕ್ರಮಗಳ ಮೂಲಕ ವೇದಿಕೆ ಲಭಿಸಿದ್ದು, ಮಕ್ಕಳು ಅದನ್ನು ಸಮರ್ಥವಾಹಿ ಬಳಸಬೇಕೆಂದು ಕರೆ ನೀಡಿದರು. ಮೊಬೆಲ್, ಸಾಮಾಜಿಕ ಜಾಲತಾನಗಳಲ್ಲಿ ಮಕ್ಕಳು ಸಾಕಷ್ಟು ಸಮಯ ವ್ಯಯ ಮಾಡುತ್ತಿದ್ದಾರೆ. ಇದರ ಬದಲು ಇತರ ಚಟುವಟಿಕೆಗಳಲ್ಲ್ಲಿ ತೊಡಗಿಸಿಕೊಳ್ಳುವಂತಹ ವಾತಾವರಣವನ್ನು ಹೆತ್ತವರು ಹಾಗೂ ಶಿಕ್ಷಕರು ಮಾಡಬೇಕು ಎಂದರು. ಅಕಾಡೆಮಿಯ ಅಧ್ಯಕ್ಷರಾ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ರೋಯ್ ಕ್ಯಾಸ್ಟಲಿನೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಡಾ. ದೇವದಾಸ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಅಕಾಡೆಮಿಯ ಸದಸ್ಯರಾದ ಶ್ರೀ ಲಕ್ಷ್ಮಣ ಪ್ರಭು, ಶ್ರೀ ಉಲ್ಲಾಸ್ ಪ್ರಭು, ಶ್ರೀ ದಾಮೋದರ್ ಭಂಡಾರ್ಕರ್, ಪ್ರಚಾರ ಸಂಚಲನದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜ, ಕಾರ್ಯದರ್ಶಿ ಶ್ರೀ ಜೇಮ್ಸ್ ಡಿಸೋಜ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯರಾದ ಶ್ರೀ ಸ್ಟ್ಯಾನಿ ಅಲ್ವಾರಿಸ್ ಸ್ವಾಗತಿಸಿದರು, ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.

 

 

 

 

Add comment


Security code
Refresh

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]