Print

ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ಸಮಾರಂಭ

ಫೆ.11, 2018: ಆದಿಶಕ್ತಿ ಮಹಿಳಾ ಕುಣಬಿ ಸಂಘ ಜೊಯಿಡಾ ಇವರ ಕುಣಬಿ ಜಾನಪದ ನೃತ್ಯ ಪ್ರದರ್ಶನದೊಂದಿಗೆ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಾ ಅರವಿಂದ ಶಾನಭಾಗ್, ಸಂಯೋಜಕರು ಎಂ.ಎ ಕೊಂಕಣಿ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಶ್ರೀ ಪ್ರೇಮ್ ಮೊರಾಸ್, ಮಂಗಳೂರು ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

 

 

 

 

 

ಇದೇ ದಿನ ಸಂಜೆ 3.30 ರಿಂದ ದಾಂಡೇಲಿ ಒಳಾಂಗಣ ಕ್ರೀಡಾಂಗಣದಿಂದ ರಂಗನಾಥ ಆಡಿಟೋರಿಯಂ ವರೆಗೆ ಭವ್ಯ ಜಾನಪದ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಶ್ರೀ ಪ್ರಶಾಂತ ದೇಶಪಾಂಡೆ, ದರ್ಮದರ್ಶಿಗಳು ವಿ.ಅರ್.ದೇಶ್‍ಪಂಡೆ ಮೆಮೊರಿಯಲ್ ಟ್ರಸ್ಟ್, ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಸಂಜೆ 5.00 ಗಂಟೆಗೆ ನಡೆಸ ಸಭಾ ಕ್ರಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ವಿಜೇತರಿಗೆ ಹಾಗೂ ಪುಸ್ತಕ ಬಹುಮಾನ ವಿಜೇತರಿಗೆ ಶ್ರೀ ಆರ್.ವಿ.ದೇಶ್‍ಪಾಂಡೆಯವರು ಪ್ರಶಸ್ತಿ ಪ್ರದಾನ ಮಾಡಿದರು.

ಗೌರವ ಪ್ರಶಸ್ತಿ : ಶ್ರೀ ಹೆರೊಲ್ಪಿಯಸ್-ಸಾಹಿತ್ಯ ವಿಭಾಗ, ಶ್ರೀ ಓಂ ಗಣೇಶ್-ಕಲಾ ವಿಭಾಗ, ಶ್ರೀಮಹಾದೇವ್ ವೇಳಿಪ- ಜಾನಪದ ವಿಭಾಗ.

ಪುಸ್ತಕ ಬಹುಮಾನ : ಶ್ರಿ ವಲ್ಲಿಕ್ವಾಡ್ರಸ್-ಬಂದ್, ಶ್ರೀ ವಿಶ್ವನಾಥ ಶೇಟ್- ಶ್ರೀರಾಮ ಚರಿತ

ಡಾ. ವಸಂತ ಬಾಂಡೆಕರ್, ಶ್ರೀ ಅರುಣ್ ಉಭಯಕರ್, ಶ್ರೀ ಕೂಡ್ಲು ಆನಂದ ಶಾನಭಾಗ್ ರವರಿಗೆ ಕೊಂಕಣಿ ಕಿರೀಟ ಗೌರವ ಪ್ರದಾನ ಮಾಡಲಾಯಿತು.