Print

ಕೊಂಕಣಿ ಮಾನ್ಯತಾ ಬೆಳ್ಳಿಹಬ್ಬ ವರ್ಷಾಚರಣೆಯ ಸಮಾರೋಪ

ಫೆ.12, 2018: ಕಾರ್ಯಕ್ರಮದ ಮೂರನೇ ದಿನದಂದು ಮೂರುದಿನಗಳ ಸಾಹಿತ್ಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು. “ಕೊಂಕಣಿ ಭಾಷೆ, ಸಾಹಿತ್ಯ ಮತ್ತು ಸಂಘಟನೆ” ಕುರಿತ ವಿಚಾರ ಗೋಷ್ಠಿ ಹಮ್ಮಿಕೊಂಡಿದ್ದು, ಕೊಂಕಣಿ ಸಾಹಿತ್ಯ ಮತ್ತು ಭಾಷಾಂತರ ಕುರಿತು ಡಾ ಪ್ರಭಾ ವಿ.ಭಟ್, ಕೊಂಕಣಿ ಭಾಷೆಯ ಸ್ಥಿತಿಗತಿ ಕುರಿತು ಡಾ ಸರಯು ಎಲ್.ಪ್ರಭು, ಉನ್ನತ ಶಿಕ್ಷಣದಲ್ಲಿ ಕೊಂಕಣಿ ಕುರಿತು ಡಾ ಉದಯ ರಾಯ್ಕರ್ ಹಾಗೂ ಯುವಜನರಿಗೆ ಸಂದೇಶವಾಗಿ ಶ್ರೀಮತಿ ಉಷಾ ನಾಯಕ ಪ್ರಬಂದ ಮಂಡನೆ ಮಾಡಿದರು

 

 

 

 

 

ಕೊಂಕಣಿ ಮಾನ್ಯತೋತ್ಸವ ಶಿಖರ ಸಂದೇಶ
ಕೂಂಕಣಿ ನಡೆದು ಬಂದ ದಾರಿ - ಶ್ರೀ ಬಸ್ತಿ ವಾಮನ್ ಶೆಣೈ
ಕೊಂಕಣಿ ಅಭಿವೃದ್ಧಿಯಲ್ಲಿ ಸಂಯಮ ಮತ್ತು ಶಿಸ್ತು - ಶ್ರೀ ಎರಿಕ್ ಒಝೇರಿಯೊ
ಕೊಂಕಣಿ ಅಕಾಡೆಮಿ ಮತ್ತು ನಾವು - ಶ್ರಿ ರೊಯ್ ಕ್ಯಾಸ್ತೆಲಿನೊ

ಕಾರ್ಯಕ್ರಮದ ಅಧ್ಯಕ್ಶತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ವಹಿಸಿದ್ದರು, ಶ್ರೀ ಅಶೋಕ್ ಛಲವಾದಿ, ಸಹ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರೆ.ಪಾ ಇಗ್ನೇಶಿಯಸ್ ಡಿಸೋಜ, ಧರ್ಮಗುರುಗಳು, ಸಂತ ಅಂತೋನಿ ಚರ್ಚ್ ದಾಂಡೇಲಿ ಹಾಗೂ ಡಾ. ಜಯವಂತ್ ನಾಯಕ್, ಸಂಯೋಜಕರು ಕೊಂಕಣಿ ಪೀಠ ಮಂಗಳೂರು ವಿ.ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

25 ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ರಾಜ್ಯಾದ್ಯಂತ ಆಯ್ಕೆಗೊಂಡಿರುವ ಕೊಂಕಣಿ ಸಾಧಕರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಾರ್ಪಣೆ.

ಸಮಾರೋಪ ಸಮಾರಂಭದ ನಂತ ವಿವಿಧ ಸಾಂಸ್ಕೃತಿಕ ವಿನೋಧಾವಳಿ ಪ್ರದರ್ಶನಗೊಂಡಿತು.