Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಜೆಸಿಐ ಜ್ಯುನಿಯರ್ ಛೇಂಬರ್ ಕಾರ್ಕಳ ಇವರ ಸಹಯೋಗದಲ್ಲಿ ದಿನಾಂಕ 3.10.2018 ರಂದು ಕಾರ್ಕಳದ ಶ್ರೀ ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನದಲ್ಲಿ ಕೊಂಕಣಿ ಉತ್ಸವ್ ಕಾರ್ಯಕ್ರಮವನ್ನು ನಡೆಸಲಾಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಉಧ್ಘಾಟನೆಯನ್ನು ನೆರವೇರಿಸಿಕೊಟ್ಟರು. ಅತ್ತೂರು ಚರ್ಚ್‍ನ ಧರ್ಮಗುರುಗಳಾದ ಮಾ.ಜೋರ್ಜ್ ಡಿಸೋಜ ಹಾಗೂ ಆರ್.ಎಸ್.ಬಿ ಸಮಾಜದ ಮುಖಂಡರಾದ ಶ್ರೀ ಪುಂಡಲೀಕ್ ಮರಾಠೆ ಹಾಗೂ ಕೊಂಕಣಿಯ ವಿವಿಧ ಸಮುದಾಯಗಳ ಮುಖಂಡರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ಸದಸ್ಯರಾದ ಶೀ ಲಕ್ಷ್ಮಣ ಪ್ರಭು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ಜೋರ್ಜ್ ಕ್ಯಾಸ್ತೆಲಿನೊ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಮ್ಮಿಕೊಂಡಿದ್ದು ಕವಿಗಳಾದ ಶಿವಾನಂದ ಶೆಣಯ್, ಕುಸುಮಾ ಕಾಮತ್, ಆಲ್ವಿನ್ ದಾಂತಿ ಪೆರ್ನಾಲ್, ಎಲ್ಸನ್ ಹಿರ್ಗಾನ್, ಪ್ರಮಿಳಾ ಫ್ಲಾವಿಯಾ ರೆಂಜಾಲ್ ಕವಿತಾ ವಾಚನ ನಡೆಸಿಕೊಟ್ಟರು. ವಿವಿಧ ಸಾಂಸ್ಕೃತಿಕ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಿತು.