Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಚುಟುಕು ಬ್ರಹ್ಮ ದಿ.ಡಾ| ದಿನಕರ ದೇಸಾಯಿ ಹಾಗೂ ತ್ರಿಭಾಷಾ ಸಾಹಿತಿ ದಿ. ಎನ್.ಬಿ ಕಾಮತ ಸ್ಮರಣಾರ್ಥ ದಿನಾಂಕ 12.01.2019 ರಂದು ಅಂಕೋಲಾದ ಪಿ.ಎಮ್.ಹೈಸ್ಕೂಲ್‍ನಲ್ಲಿ ಕೊಂಕಣಿ ಕನ್ನಡ ದ್ವಿಭಾಷಾ ಕವಿಗೋಷ್ಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂಕೋಲಾದ ನಾಮಾಂಕಿತ ಸಾಹಿತಿಗಳಾದ ಶ್ರೀ ವಿಷ್ಣು ನಾಯ್ಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು. ಪಿ.ಎಮ್ ಹೈಸ್ಕೂಲ್ ಪ್ರಾಚಾರ್ಯರಾದ ಶ್ರೀ ರವೀಂದ್ರ ವಿ ಕಿಣಿ, ಅಂಕೋಲಾ ಕೆಥೋಲಿಕ್ ಚರ್ಚ್‍ನ್ ಧರ್ಮಗುರುಗಳಾಸ ಫಾ| ಜೋನ್ ಅಬೆಲ್ ಡಿಸೋಜಾ, ಶ್ರೀ ರಘವೀರ ಎನ್ ಕಾಮತ್, ಶ್ರೀ ಸುರೇಶ್ ವರ್ಣೇಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಫ್ರೋ| ನಾಗೇಶ ದೇವು ಅಂಕೋಲೆಕರ ಅಧ್ಯಕ್ಷತೆಯಲ್ಲಿ ಶ್ರೀ ಶಿವಾ ಬಾಬಾ ನಾಯ್ಕ, ಶ್ರೀ ಪಾಲ್ಗುಣ, ಶ್ರೀ ಉಲ್ಲಾಸ ಹುದ್ದಾರ, ಶ್ರೀಮತಿ ಆಯ್ ಬಂಟ, ಶ್ರೀ ಆನಂದು ಮಹಾಲೆ, ಶ್ರೀ ನಾಗಪತಿ ಹೆಗಡೆ, ಶ್ರೀ ಜೆ ಪ್ರೇಮಾನಂದ, ಶ್ರೀ ರಾಘವೇಂದ್ರ ಮಹಾಲೆ, ಶ್ರೀ ಪ್ರಶಾಂತ ನಾರ್ವೇಕರ, ಶ್ರೀ ಗಣಪತಿ ಆರ್ ಗಾಂವಕರ, ಶ್ರೀಮತಿ ದೇವಳಬಾಯಿ, ಶ್ರೀಮತಿ ರೇಷ್ಮಾ ಮಾನಾಕಾಮೆ ಕವಿಗಳಾಗಿ ಭಾಗವಹಿಸಿದ್ದರು. ಪ್ರತೀಕ ಕಾಮತ ಅಧ್ಯಕ್ಷತೆಯಲ್ಲಿ ಬಾಲಕವಿಗೋಷ್ಠಿ ಆಯೋಜಿಸಿದ್ದು ದರ್ಶನ ಬಿ ರಾಯ್ಕರ, ಆದಿತ್ಯ ಮೆಹತಾ, ಜೀವೋತ್ತಮ ಭಟ್, ಆದೀಶ್ವರಿ ನಾಯ್ಕ, ಸೌಜನ್ಯ ಖಾರ್ವಿ ಹಾಗೂ ನಿಶಾ ನಾಯ್ಕ ತಮ್ಮ ಕವನ ಪ್ರಸ್ತುತಪಡಿಸಿದರು.