Print

ಜನವರಿ 21, 2019 ಹದಿನೈದು ದಿನಗಳ ’ಗುಮಟ್ ಆಮ್ಚೆಂ ದಾಯ್ಜ್” ಕೊಂಕಣಿ ಜಾನಪದ ವಾದ್ಯ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಿಲಾಗ್ರಿಸ್ ಕಾಲೇಜಿನ ಸಹಯೋಗದೊಂದಿಗೆ ದಿನಾಂಕ ಜನವರಿ 21, 2019 ರಿಂದ ಫೆಬ್ರವರಿ 9, 2019 ರ ವರೆಗೆ ಜರುಗಲಿದೆ. ಈ ಶಿಬಿರದಲ್ಲಿ ಗುಮಟೆ ಮತ್ತು ಬ್ರಾಸ್ ಬ್ಯಾಂಡ್ ವಾದ್ಯಗಳ ತರಬೇತಿಯನ್ನು ನೀಡಲಾಗುವುದು.
        

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಫಾI ಮೈಕಲ್ ಸಾಂತುಮಾಯೊರ್, ಶ್ರೀ ಸಂತೋಷ್ ಶೆಣೈ, ಸದಸ್ಯರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಶ್ರೀ ನವೀನ್ ಅಲ್ವಾರಿಸ್, ಸಂಪಾದಕರು, ದಿವೊ ವಾರಪತ್ರಿಕೆ, ಶ್ರೀ ಜೋಯೆಲ್ ಪಿರೇರಾ, ಪ್ರಖ್ಯಾತ ಸಂಗೀತಕಾರರು, ಕುಮಾರಿ ನೆಸ್ಲಿನ್ ಡಿಸೋಜಾ, ಸಹ ಸಂಯೋಜಕರು, ಕೊಂಕಣಿ ವಿಭಾಗ, ಮಿಲಾಗ್ರಿಸ್ ಕಾಲೇಜ್, ಶ್ರೀ ಪ್ರೇಮ್ ಮೊರಾಸ್, ಸಂಯೋಜಕರು, ಕೊಂಕಣಿ ವಿಭಾಗ, ಮಿಲಾಗ್ರಿಸ್ ಕಾಲೇಜ್, ಶ್ರೀ ಅಶ್ವಿನ್ ಫೆರ್ನಾಂಡಿಸ್, ಅಧ್ಯಕ್ಷರು, ಕೊಂಕಣಿ ವಿಭಾಗ, ಮಿಲಾಗ್ರಿಸ್ ಕಾಲೇಜ್ ದೀಪ ಬೆಳಗಿಸಿ ಕಾರ್ಯವನ್ನು ಉದ್ಗಾಟಿಸಿದರು.
        

ಸ್ವಾಗತ ಭಾಶಣವನ್ನು ಮಾಡಿ ಫಾI ಮೈಕಲ್ ಸಾಂತುಮಾಯೊರ್ ಹದಿನೈದು ದಿನಗಳ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಶ್ರೀ ಜೋಯೆಲ್ ಪಿರೇರಾರವರು ಮಾತನಾಡಿ ನಾವು ಯಾವಾಗಲೂ ಸಾಂಪ್ರದಾಯಿಕ ವಾದ್ಯಗಳಿಂದ ನಮ್ಮ ಬಾಂದ್ಯವನ್ನು ಕಳೆದುಕೊಳ್ಳಬಾರದೆಂದು ಹೇಳಿದರು. ನಮ್ಮ ಸಂಪ್ರದಾಯದ ಪರಿಚಯ ಸಾಂಪ್ರದಾಯಿಕ ವಾದ್ಯಗಳಲ್ಲಿವೆ ಎಂದು ಹೇಳಿದರು. ಶ್ರೀ ಸಂತೋಷ್ ಶೆಣೈರವರು ಮಾತನಾಡಿ ಈ ಶಿಬಿರದ ಲಾಭವನ್ನು ಪಡೆದುಕೊಳ್ಳಲು ಕರೆ ನೀಡಿದರು. ಶ್ರೀ ನವೀನ್ ಅಲ್ವಾರಿಸ್ ಮಾತನಾಡಿ ನಮ್ಮ ಪೂರ್ವಜರ ಜೀವನದಲ್ಲಿ ಸಾಂಪ್ರದಾಯಿಕ ವಾದ್ಯಗಳನ್ನು ಬಳಸುತ್ತಿದ್ದ ರೀತಿಯನ್ನು ವಿವರಿಸಿದರು. ಕುಮಾರಿ ಡ್ಯಾಫ್ನಿ ಫೊನ್ಸೆಕಾ ಮತ್ತು ತಂಡ ನೃತ್ಯ ಪ್ರದರ್ಶಿಸಿದರು.
        

ಫೆಬ್ರವರಿ 9, 2019 ರಂದು ಗುಮಟೆ ಹಾಗೂ ಬ್ರಾಸ್ ಬ್ಯಾಂಡ್ ವಾದ್ಯಗಳ ಪ್ರದರ್ಶನ ನಡೆಯಲಿದೆ. ಶ್ರೀ ಅಶ್ವಿನ್ ಫೆರ್ನಾಂಡಿಸ್ ವಂದನಾರ್ಪಣ ಕಾರ್ಯವನ್ನು ನಡೆಸಿದರು. ಕುಮಾರಿ ಐವಿನ್ ಡಿಸೋಜಾ ಕಾರ್ಯಕ್ರಮದ ಸಂಚಾಲನೆ ನಡೆಸಿದರು.