ದಿನಾಂಕ 08.03.2019 ರಂದು ಗುಂದಾ ಪಂಚಾಯತ ಸಭಾಭವನದಲ್ಲಿ ಕೊಂಕಣಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಪೂರ್ತಿ ಕಾರ್ಯಕ್ರಮ ಮಹಿಳೆಯರಿಗಾಗಿ ಮೀಸಲಿರಿಸಲಾಗಿತ್ತು. ಸಂಜೆ 5 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅಖಿಲ ಭಾರತ ಕೊಂಕಣಿ ಪರಿಷತ್‍ನ ಅಧ್ಯಕ್ಷರಾದ ಶ್ರೀಮತಿ ಉಷಾರಾಣೆ ಕಾರ್ಯಕ್ರಮದ ಉದ್ಗಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಅಕಾಡೆಮಿಯ ಮೂಲಕ ನಡೆಯುತ್ತಿರುವ ಜನಪರ ಕಾರ್ಯಕ್ರಮಗಳನ್ನು ತಿಳಿಸಿದರು. ಗುಂದ ಸಂತ ಅಂತೋನಿ ಚರ್ಚ್‍ನ ಧರ್ಮಗುರುಗಳು ರೆ| ಫಾ| ನತಿವಿದಾದ ರೊಡ್ರಿಗಸ್, ಡಾ| ವಿದ್ಯಾಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯಿಂದ ಕೊಂಕಣಿ ಮಾನ್ಯತೋತ್ಸವ ಸ್ಮೃತಿ ಲೇಖನಮಾಳಾ ಯೋಜನೆಯಡಿಯಲ್ಲಿ ಪ್ರಕಟಗೊಂಡಿರುವ ಮಹಿಳೆಯರ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಕೊಂಕಣಿ ಸ್ತ್ರೀ ವಿಚಾರಗೋಷ್ಠಿಯನ್ನು ಆಯೋಜಿಸಿದ್ದು “ಸಾಮಾಜಿಕ ಕ್ಷೇತ್ರದಲ್ಲಿ ಗ್ರಾಮೀಣ ಮಹಿಳೆ ಕುರಿತಂತೆ ಡಾ ಸುವರ್ಣಾ ಗಾಡ್, ಕೊಂಕಣಿ ಜಾನಪದವನ್ನು ಉಳಿಸುವಲ್ಲಿ ಕೊಂಕಣಿ ಸ್ತ್ರೀ ಕುರಿತಂತೆ ಶ್ರೀಮತಿ ಅಚಲಾ ಬಿಳಗಿ, ಮಕ್ಕಳ ಬೆಳವಣಿಗೆಯಲ್ಲಿ ತಾಯಿತ ಪಾತ್ರ ಕುರಿತಂತೆ ಡಾ| ಚಿತ್ರಾ ನಾಯಕ್ ವಿಚಾರ ಮಂಡನೆ ಮಾಡಿದರು.  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಕಲಾತಂಡಗಳಿಂದ ಕೊಂಕಣಿ ಜಾನಪದ, ಸಂಸ್ಕೃತಿಯನ್ನು ಬಿಂಬಿಸುವ ಕಲಾಪ್ರದರ್ಶನಗಳು ನಡೆದವು.

 

 

 

 

 

 

 

 

 

 

 

Add comment


Security code
Refresh

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]