ದಿನಾಂಕ 10.03.2019 ರಂದು ದಾಂಡೇಲಿಯ ರಂಗನಾಥ ಆಡಿಟೋರಿಯಂನಲ್ಲಿ 2018 ನೇ ಸಾಲಿನ ಪುಸ್ತಕ ಬಹುಮಾನ ಹಾಗೂ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವು ಬೆಳಿಗ್ಗೆ 10 ಗಂಟೆಗೆ ಭವ್ಯ ಜಾನಪದ ಮೆರವಣಿಗೆಯೊಂದಿಗೆ ಆರಂಭವಾಯಿತು. ಸುಮಾರು ಹತ್ತು ಜಾನಪದ ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಸಂಜೆ 3 ಗಂಟೆಗೆ ಸರಿಯಾಗಿ ಪ್ರಶಸ್ತಿ ಪುರಸ್ಕೃತರೊಂದಿಗೆ ಹಾಗೂ ಪುಸ್ತಕ ಬಹುಮಾನ ವಿಜೇತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಶ್ರೀ ವಲ್ಲಿಕ್ವಾಡ್ರಸ್ ಈ ಸಂವಾದ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

 

 

 

 

 

 

 

 

 

 

 

 

 

 

ಸಂಜೆ 5 ಗಂಟೆಗೆ ಸರಿಯಾಗಿ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ನಡೆಯಿತು. ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕಾಗಿ ಮಂಗಳೂರಿನ ಶ್ರೀ ಜೆ. ಎಪ್ ಡಿಸೋಜಾ, ಕೊಂಕಣಿ ಕಲಾ ಕ್ಷೇತ್ರಕ್ಕಾಗಿ ಶಿರಸಿಯ ಶ್ರೀ ಕೂಡ್ಲು ಆನಂದ ಶಾನಭಾಗ್, ಕೊಂಕಣಿ ಜಾನಪದ ಕ್ಷೇತ್ರದಲ್ಲಿ ಕಾರವಾರದ ಶ್ರೀ ವಸಂತ ಬಾಂದೇಕರ್ 2018 ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2018 ನೇ ಸಾಲಿನ ಪುಸ್ತಕ ಪುರಸ್ಕಾರಕ್ಕೆ ಶ್ರೀಮತಿ ಲವಿ ಗಂಜಿಮಠ ಇವರ ‘ಚುಕ್‍ಲ್ಲಿಂ ಮೆಟಾಂ’, ಶ್ರೀ ರೋಶು ಬಜ್ಪೆ ಇವರ ‘ತೀಂತ್ ಜಾಲೆಂ ರಗತ್’, ಶ್ರೀಮತಿ ಜೆಯಲ್ ಮಂಜರ ಪಲ್ಕೆ ಇವರ ‘ಚಂದ್ರೆಮಾಚಿಂ ಖತಾಂ’ ಪುಸ್ತಕಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರೋಯ್ ಕ್ಯಾಸ್ಟಲಿನೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿದ್ದರೂ ಅವರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು. ಕೊಂಕಣಿ ಕಲೆ, ಸಾಹಿತ್ಯ, ಜನಪದ ಕ್ಷೇತ್ರಗಳ ಪೆÇ್ರೀತ್ಸಾಹಿಸುವ ಕೆಲಸ ಎಲ್ಲರಿಂದಾಗಬೇಕು ಎಂದರು. ನಂತರ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿ ವೈವಿದ್ಯತೆಯ ಪ್ರದರ್ಶನ ನಡೆಯಿತು.

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]