Print

೧. ಒಟ್ಟು ಕಾರ್ಯಕ್ರಮಗಳ ಸಂಖ್ಯೆ - 45
೨. ಗ್ರಂಥ ಪ್ರಕಟಣೆ - 1
೩. ಒಟ್ಟು ಕಾರ್ಯಕ್ರಮಗಳು - 46

1.    ಅಖಿಲ ಕೊಂಕಣಿ ಸಂಸ್ಕೃತಿ ಕಲಾ ದರ್ಶನ :ಬೆಂಗಳೂರು
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಸಾಹಿತ್ಯ ಮತ್ತುಸಾಂಸ್ಕೃತಿಕ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಕೊಂಕಣಿ ಸಂಸ್ಕೃತಿ ಕಲಾದರ್ಶನ ಕಾರ್ಯಕ್ರಮವನ್ನು ದಿನಾಂಕ ೧೪-೪-೨೦೦೨ ರಂದು ನಡೆಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಹ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಹಾಗೂ ಮಂಗಳೂರಿನ ಸಂದೇಶ ಪ್ರತಿಷ್ಟಾನದ ನಿರ್ದೇಶಕರವರು ಭಾಗವಹಿಸಿದ್ದರು.

2. ತುಳುವ ದರ್ಶನ ಕಾರ್ಯಕ್ರಮದಲ್ಲಿ ಕೊಂಕಣಿ ಕಾರ್ಯಕ್ರಮ -ಸಸಿಹಿತ್ಲು
ತುಳು ನಾಡಿನ ಸಂಸ್ಕೃತಿಯ ಬಗ್ಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ  ಡಾ|ಶಿವರಾಮ ಕಾರಂತರ ವ್ಯಕ್ತಿತ್ವ ಗುರುತಿಸುವ ಕಾರ್ಯಕ್ರಮಕ್ಕೆ ಕೊಂಕಣಿ ಅಕಾಡೆಮಿಯು ಸಹಯೋಗಗ ನೀಡಿ ಸಹಕಾರಿಸಲಾಗಿದೆ. ಈ ಕಾg೦iಕ್ರಮವು ರಂಗ ಸುದರ್ಶನ ಮಂಗಳೂರು ಇವರು ಸಸಿಹಿತ್ಲುವಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಕರ್ನಾಟಾಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ದೀಪ ಬೆಳಗಿಸಿ ಉದ್ಘಾಟಿಸಿದರು. ದ.ಕ. ಜಿಲಾಧಿಕಾರಿಗಳಾದ ಶ್ರೀ ಎ.ಕೆ. ಮೊನ್ನಪ್ಪ ಹಿಂಗಾರ ಅರಳಿಸಿ ಉದ್ಘಾಟಿಸಿದರು. ಶಾಸಕರಾದ ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

3. 2001-02ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿ ಸಮರಂಭ:-ಹೊನ್ನಾವರ
ಅಕಾಡೆಮಿಯ ೨೦೦೧-೦೨ನೇ ಸಾಲಿನ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ ೧೪-೭-೨೦೦೨ ರಂದು ಹೊನ್ನಾವರದಲ್ಲಿ ನಡೆಸಲಾಯಿತು.  ಕೊಂಕಣಿ ಸಾಹಿತ್ಯದಲ್ಲಿ ಎಮ್.ಮಾಧವ ಪೈ, ನಾಟಕದಲ್ಲಿ ಶ್ರೀ. ಎನ್.ಬಿ.ಕಾಮತ್, ಶ್ರೀ.ಸಂಗೀತದಲ್ಲಿ ಹ್ಯಾರಿ ಡಿ’ಸೋಜ, ಪತ್ರಿಕೋದ್ಯಮದಲ್ಲಿ ವಂ.ವಿಶೆಂತ್ ವಿತೊರ್ ಮಿನೇಜಸ್, ಜಾನಪದದಲ್ಲಿ ಮಿಂಗೆಲ್ ಅಂತೊನ್ ಸಿದ್ದಿ, ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಖಾರ್ವಿ ಸಮುದಾಯದ ಜಾನಪದ, ಕಲೆಗಳ ಬೆಳವಣಿಗೆಗೆ ದುಡಿಯುತ್ತಿರುವ ವಿದ್ಯರಂಗ ಮಿತ್ರ ಮಂಡಳಿ  ಸಂಸ್ಥೆಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾದ ಮಾನ್ಯ ಶ್ರೀ ಸಿ. ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಕುಮಟ ವಿಧಾನಸಭಾ ಕ್ಷೇತ್ರ ಶಾಸಕರಾದ ಮಾನ್ಯ ಶ್ರೀ ಮೋಹನ್ ಶೆಟ್ಟಿ,  ಭಟ್ಕಳ ವಿಧಾನ ಸಭಾ ಕ್ಷೇತ್ರ ಶಾಸಕರಾದ ಶ್ರೀ ಜೆ.ಡಿ. ನಾಯಕ್‌ರವರು ಗೌರವ ಅತಿಥಿಗಳಾಗಿ ಭಗವಹಿಸಿದರು. ಕಾರವಾರದ ಧರ್ಮಾಧ್ಯಕ್ಷರಾದ ಅ.ವಂ. ವಿಲಿಯಂ ಡಿಮೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

4.ಡಾ|ಕಾರಂತರ ಪ್ರಬಂಧ ಸ್ಪರ್ಧ ಕಾರ್ಯಕ್ರಮ: ಕುಂದಾಪುರ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ನೇತೃತ್ವದಲ್ಲಿ ದಿನಾಂಕ ೧೬-೭-೨೦೦೨ ರಂದು ಏರ್ಪಡಿಸಿದ ಡಾ|ಶಿವರಾಮ ಕಾರಂತರ ಕುರಿತು ಪ್ರಬಂಧ ಸ್ಪರ್ದೆ, ಮತ್ತು ರಸಪ್ರಶ್ನೆ ಕಾರ್ಯಕ್ರಮವನ್ನು ಕುಂದಾಪುರದಲ್ಲಿ  ನಡೆಸಲಾಯಿತು.

5. ಡಾ| ಶಿವರಾಮ ಕಾರಂತರ ಜನ್ಮಶತಮಾನೋತ್ಸವ ಕಾರ್ಯಕ್ರಮ: ಕುಂದಾಪುರ
ದಿನಾಂಕ ೪-೮-೨೦೦೨ ರಂದು ಕಾರಾಂತರ ಜನ್ಮ ಶತಮಾನೋತ್ಸವದ ಅಂಗವಾಗಿ ಕುಂದಾಪುರದಲ್ಲಿ ಎರ್ಪಡಿಸಿದ ಕಾರ್ಯಕ್ರಮವನ್ನು ಡಾ.ಜಯಪ್ರಕಾಶ್ ಮಾವಿನಕುಳಿ ಇವರು ಉದ್ಗಾಟಿಸಿದರು.  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರುರು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.ಈ ಕಾರ್ಯಕ್ರಮವು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ತುಳು ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಜಂಟಿ ನೇತೃತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರಂತರ ಕುರಿತು ಹಲವು ವಿಚಾರ ಸಂಕಿರಣಗಳು ನಡೆದವು. ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು.ಈ ಕಾರ್ಯಕ್ರಮಗಳು ಕ್ರಮವಾಗಿ ಕುಂದಾಪುರ, ಕಾರವಾರ, ಪುತ್ತೂರು, ಬೆಂಗಳೂರು ಈ ನಾಲ್ಕು ಕಡೆಗಳಲ್ಲಿ ನಡೆಸಲಾಯಿತು.

6. ಕೊಂಕಣಿ  ಬಾಲ ಪ್ರತಿಭಾ ಸ್ಪರ್ಧೆ-ಮಂಗಳೂರು
ದಿನಾಂಕ ೧೮-೮-೨೦೦೨ರಂದು ಮಂಗಳೂರಿನ ಪುರಭವನದಲ್ಲಿ ಬಾಲವಾಡಿಯಿಂದ ೨ನೇ ತರಗತಿಯವರೆಗೆ ಬಾಲಪ್ರತಿಭಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು ೩೬೦ ಮಂದಿ ಮಕ್ಕಳು(೧೭೦ ತಂಡಗಳು) ಭಾಗವಹಿಸಿದ್ದರು, ಕಾರ್ಯಕ್ರಮವನ್ನು ಮಂಗಳೂರಿನ ಮೇಯರ್ ಶ್ರೀ ಎಂ. ಶಶಿಧರ ಹೆಗ್ಡೆರವರು ಉದ್ಗಾಟಿಸಿದರು. ಆಕಾಶವಾಣಿ, ಮಂಗಳೂರು ಇದರ ಕಾರ್ಯಕ್ರಮ ನಿರ್ದೇಶಕಿಯಾದ ಶ್ರೀಮತಿ ಶಕುಂತಳಾ ಆರ್. ಕಿಣಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.  ಅಕಾಡೆಮಿಯ ಅಧ್ಯಕ್ಶರ ಅಧ್ಯಕ್ಷೆತೆಯಲ್ಲಿ ಈ ಕಾರ್ಯಕ್ರಮವು ಜರಗಿತು.

7. ತ್ರಿಭಾಷಾ ತಾಳಮದ್ದಳೆ: ಸುರತ್ಕಲ್
ಡಾ|ಶಿವರಾಮ ಕಾರಂತರ ಜನ್ಮಶತಮನೋತ್ಸವದ ಅಂಗವಾಗಿ ತ್ರಿಭಾಷಾ  ತಾಳಮದ್ದಲೆ ಕಾರ್ಯಕ್ರಮವು ಸುರತ್ಕಲನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಂಕಣಿ ಅಕಾಡೆಮಿ ಮತ್ತು ತುಳು ಸಾಹಿತ್ಯ ಅಕಾಡೆಮಿಗಳ ಸಹಯೋಗದಲ್ಲಿ ಕರಾವಳಿ ಜಾನಪದ ಕಲಾವೇದಿಕೆ ಇವರ ಸಹಕಾರದಲ್ಲಿ ನಡೆಸಲಾಯಿತು ಈ ಸಂದರ್ಭದಲ್ಲಿ ಮೂರು ಭಾಷೆಯ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

8. ಕೊಂಕಣಿ ದಿವಸ್ ಅಚರಣೆ: ಬೆಂಗಳೂರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ದಿನಾಂಕ ೨೫-೮-೨೦೦೨ ರಂದು ಕೊಂಕಣಿ ದಿವಸಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಅಚಾರಿಸಲಾಯಿತು. ಈ ಸಂದರ್ಭದಲ್ಲಿ ಕೊಂಕಣಿ ಭಾಷೆ ಬಗ್ಗೆ ಅಭಿಮಾನ ಮತ್ತು ಕೊಂಕಣಿ ನಮ್ಮ ಭಾಷೆ ಈ ವಿಷಯಗಳ ಮೇಲೆ ಉಪನ್ಯಾಸ ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ  ದೀನ ಸೇವಾಶ್ರಮದ ನಿರ್ದೇಶಕರಾದ ಫಾ|ಹೆನ್ರಿಯವರು ಮುಖ್ಯ ಅತಿಥಿಗಳಾಗಿದ್ದರು.

9. ಡಾ|ಶಿವರಾಮ ಕಾರಂತರ ಜನ್ಮ ಶತಮಾನೋತ್ಸವ ಕಾರ್ಯಕ್ರಮ:ಬೆಂಗಳೂರು
ಕಾರಂತರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ಧೇಶನಾಲಯ ಬೆಂಗಳೂರು ಮತ್ತು ಕೊಂಕಣಿ ಅಕಾಡೆಮಿಯ ನೇತೃತ್ವದಲ್ಲಿ ಬೆಂಗಳುರಿನಲ್ಲಿ ನಡೆಸಲಾಯಿತು.  ಕಾರ್ಯಕ್ರಮವನ್ನು ಪ್ರೋ!ಎಲ್.ಎಸ್.ಶೇಷಗಿರಿ ರಾವ ಇವರು ಉದ್ಗಾಟಿಸಿದರು, ನಿರ್ದೇಶನಾಲಯದ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು, ಆಕಾಡೆಮಿ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

10. ಡಾ|ಶಿವರಾಮ ಕಾರಂತರ ಜನ್ಮ ಶತಮಾನೋತ್ಸವ ಕಾರ್ಯಕ್ರಮ:ಕಾರವಾರ.
ಡಾ.ಶಿವರಾಮ ಕಾರಂತರ ಜನ್ಮ ಶತಮಾನ ಕಾರ್ಯಕ್ರಮವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಮೇಲ್ವಿಚಾರಣೆಯಲ್ಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಇತರ ಎಲ್ಲಾ ಅಕಾಡೆಮಿಗಳ ಸಂಯೋಜನೆಯಲ್ಲಿ ೧-೯-೨೦೦೨ ರಂದು ಕಾರವಾರದಲ್ಲಿ ಆತ್ಯಂತ ವೈಭವಭೂತವಾಗಿ ಅಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ವಿಚಾರಗೋಷ್ಟಿ, ಕವಿಗೋಷ್ಟಿ, ಮತ್ತು ಕೊಂಕಣಿ, ತುಳು, ಕನ್ನಡ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ, ಕಾರಂತ ಭಾವ ಪ್ರಪಂಚ ಪ್ರದರ್ಶನ, ಜಲವರ್ಣದಲ್ಲಿ ಪ್ರಕೃತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

11. ಕೊಂಕಣಿ ಪ್ರತಿಭಾ ದಿನಾಚರಣೆ:ಸಿದ್ದಕಟ್ಟೆ
ಭಾರತೀಯ ಸಂವಿಧಾನದಲ್ಲಿ ಕೊಂಕಣಿ ಭಾಷೆಗೆ ಮಾನ್ಯತೆ ದೊರೆತು ಹತ್ತು ವರುಷಗಳಾದ  ಅಂಗವಾಗಿ ಸಿದ್ದಕಟ್ಟೆಯಲ್ಲಿ ಕೊಂಕಣಿ ಪ್ರತಿಭಾ ದಿನಾಚರಣೆಯನ್ನು ಕರ್ನಾಟಕ ಕೊಂಕ್ಣಿ ಈಶ್ಟ್ ಸಂಸ್ಥೆಯವರು ಅಯೋಜಿಸಿದ್ದು ಈ ಕಾರ್ಯಕ್ರಮವು ಅಕಾಡೆಮಿಯ ಸಹಯೋಗದಲ್ಲಿ ದಿನಾಂಕ ೧೫-೯-೨೦೦೨ ರಂದು ನಡೆಸಲಾಯಿತು.

13. ಕೊಂಕಣಿ ಶಿಕ್ಷಕರ ತರಬೇತಿ ಶಿಬಿರ: ಮಂಗಳೂರು
ಶಾಲೆಯಲ್ಲಿ ಕೊಂಕಣಿ ಅಳವಡಿಸಲು ಉಪಯೋಗವಾಗುವಂತೆ ಶಿಕ್ಷಕರಿಗೆ ತರಬೇತಿ ನೀಡುವ ಶಿಬಿರವನ್ನು ದಿನಾಂಕ ೧೭-೯-೨೦೦೨ರಂದು ಮತ್ತು ೧೮-೯-೨೦೦೨ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು ಅಕಾಡೆಮಿ ವತಿಯಿಂದ ಪ್ರಕಟಿಸಿದ ಕೊಂಕಣಿ ಕಳೊ ಪಠ್ಯಪುಸ್ತಕವನ್ನು ಅಧಾರಿಸಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಗಾರವು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಇವರ ಸಹಕಾರದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಫಾತಿಮಾ ರಿಟ್ರೀಟ್ ಹೌಸ್‌ನ ನಿರ್ದೇಶಕರಾದ ಫಾ|ಡೆನಿಸ್ ರಸ್ಕಿನ್ಹಾರವರು ಉದ್ಘಾಟನೆಯನ್ನು ನೆರವೇರಿಸಿದರು.

14. ಕೊಂಕಣಿ ಶಿಕ್ಷಕರ ತರಬೇತಿ ಶಿಬಿರ: ಕುಮಟ
ಶಾಲೆಯಲ್ಲಿ ಕೊಂಕಣಿ ಅಳವಡಿಸಲು ಉಪಯೋಗವಾಗುವಂತೆ ಶಿಕ್ಷಕರಿಗೆ ತರಬೇತಿ ನೀಡುವ ಶಿಬಿರವನ್ನು ದಿನಾಂಕ ೧೯-೯-೨೦೦೨ರಂದು ಮತ್ತು ೨೦-೯-೨೦೦೨ ಕುಮಟದಲ್ಲಿ ಹಮ್ಮಿಕೊಳ್ಳಲಾಯಿತು ಅಕಾಡೆಮಿ ವತಿಯಿಂದ ಪ್ರಕಟಿಸಿದ ಕೊಂಕಣಿ ಕಳೊ ಪಠ್ಯಪುಸ್ತಕವನ್ನು ಅಧಾರಿಸಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಗಾರವು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಇವರ ಸಹಕಾರದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ರೋಟರಿ ಕ್ಲಬ್, ಕುಮಟದ ಅಧ್ಯಕ್ಷರಾದ ಪ್ರೊ| ಪ್ರಕಾಶ್ ಪ್ರಭುರವರು ಉದ್ಘಾಟಿಸಿದರು.

15.ವಿಭಾಗಮಟ್ಟದ ಕಲಾಮೇಳ ಕಾರ್ಯಕ್ರಮ: ಬೆಳಗಾವಿ,ಮೈಸೂರು,ಶಿವಮೊಗ್ಗ, ಗುಲ್ಬರ್ಗ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಜ್ಯದ ಎಲ್ಲ ಅಕಾಡೆಮಿಗಳು ಮತ್ತು ಪುಸ್ತಕ ಪ್ರಾಧಿಕಾರ ಇವರ ಸಂಯುಕ್ತ ಅಶ್ರಯದಲ್ಲಿ ಬೆಳಗಾವಿಯಲ್ಲಿ ವಿಭಾಗಮಟ್ಟದ ಕಲಾಮೇಳ ಕಾರ್ಯಕ್ರಮವನ್ನು ದಿನಾಂಕ ೨೨ ಮತ್ತು ೨೩ ಸೆಪ್ಟೆಂಬರ್ ೨೦೦೨ ರಂದು ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಕೊಂಕಣಿ ಅಕಾಡೆಮಿವತಿಯಿಂದ ಕೊಂಕಣಿ ಸಂಸ್ಕೃತಿ ಬಿಂಬಿಸುವ  ಜಾನಪದ ಕಲಾ ಪ್ರದರ್ಶನವನ್ನು ಪ್ರಸ್ತುತಪಡಿಸಲಾಯಿತು. ಈ ಕಾರ್ಯಕ್ರಮಗಳನ್ನು ಮೈಸೂರು, ಶಿವಮೊಗ್ಗ, ಗುಲ್ಬರ್ಗದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವ್ಹಿ. ಎಸ್. ಕೌಜಲಗಿಯವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಬೆಳಗಾವಿ ಯ ಶಾಸಕರಾದ ಶ್ರೀ ರಮೇಶ ಕುಡಚಿಯವರು ವಹಿಸಿದ್ದರು.  ಬೆಳಗಾವಿ ಜಿಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುನಿತಾ ಹರಿಜನರವರು ಮುಖ್ಯ ಅತಿಥಿಗಳಾಗಿ  ಭಾಗವಹಿಸಿದರು.  ಸಮಾರೋಪ ಸಮಾರಂಭವನ್ನು ಕರ್ನಾಟಕ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರಾದ ಶ್ರೀ ಎಂ. ವೀರಪ್ಪ ಮೊಯಿಲಿ ಯವರು ನೆರವೇರಿಸಿದರು.

16.ಕಾರಂತ ಜನ್ಮಶತಮಾನೋತ್ಸವ ಸಂಭ್ರಮ: ಪುತ್ತೂರು.
ದಿನಾಂಕ ೧೦-೧೦-೨೦೦೨ರಂದು ಜರಗಿದ ಈ ಕಾರ್ಯಕ್ರಮದಲ್ಲಿ ಕೊಂಕಣಿ ಅಕಾಡೆಮಿ ವತಿಯಿಂದ ಕೊಂಕಣಿ ಜಾನಪದ ಕಲೆ ಪ್ರದರ್ಶನ ಮತ್ತು ಡಾ|ಶಿವರಾಮ ಕಾರಂತರ ಜೀವನ ಚರಿತ್ರೆಯ ಸಂಕ್ಷೀಪ್ತ ಪರಿಚಯ ನೀಡುವ ಪುಸ್ತಕ ‘ಅಮ್ಗೆಲೊ ಕಾರಂತು’ ಕೊಂಕಣಿಯಲ್ಲಿ ಮುದ್ರಿಸಿ ಪ್ರಕಟಿಸಲಾಯಿತು.  ಹಾಗೂ ಕೊಂಕಣಿ ಪುಸ್ತಕಗಳ ಮಾರಾಟ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರಂತ ವಸ್ತುಸಂಗ್ರಹಾಲಯ ಉದ್ಘಾಟನೆಯನ್ನು ಶ್ರೀ ಎಂ. ವೀರಪ್ಪ ಮೊಯಿಲಿಯವರು ಉದ್ಘಾಟಿಸಿದರು. ಈಜುಕೊಳದ ಉದ್ಘಾಟನೆಯನ್ನುಹಿರಿಯ ಸಾಹಿತಿಗಳಾದ  ಶ್ರೀ ಕಯ್ಯಾರ ಕಿಂಇಣ್ಣ ರೈಯವರು ಉದ್ಘಾತಿಸಿದತ್ರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರಾಣೆ ಸತೀಶವರು ನೆರವೇರಿಸಿದರು.

17. ಶೆಣೈ ಗೊಂಯ್ ಬಾಬ್ ಜೀವನ ಮತ್ತು ಕಾರ್ಯ-ವಿಚಾರ ಸಂಕಿರಣ:ಮಂಗಳೂರು
ಕೊಂಕಣಿ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಗಳಿಸಿದ ಶೆಣೈ ಗೊಂಯ್ ಬಾಬ್ ರವರ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ ೨೯ ಮತ್ತು ೩೦ ನವಂಬರ್ ೨೦೦೨ ರಂದು ಮಂಗಳೂರಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿ ಮತ್ತು ಕೊಂಕಣಿ ಅಕಾಡೆಮಿಯ ಸಹಯೋಗದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಫಾ. ಪ್ರಶಾಂತ್ ಮಾಡ್ತರವರು ನೆರವೇರಿಸಿದರು.

18. ಕೊಂಕಣಿ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾಮೇಳಾ-ಬೆಂಗಳೂರು
 ಮಕ್ಕಳಲ್ಲಿ ಕೊಂಕಣಿ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿ, ಕಲೆಗಳಲ್ಲಿ ಅಭಿಮಾನ ಮೂಡಿಸುವಂತಹ ಕಾಯುಕ್ರಮವಾದ ಮಕ್ಕಳ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವು ದಿನಾಂಕ ೬-೧೨-೨೦೦೨ ರಂದು ಮಂಗಳೂರಿನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಹಲವು ಶಾಲಾ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಈ ಕಾರ್ಯಕ್ರಮವು ಕೊಂಕ್ಣಿ ಸಾಹಿತ್ಯ್ ಆನಿ ಸಾಂಸ್ಕೃತಿಕ ಕೇಂದ್ರ್ ಬೆಂಗ್ಳುರ್ ಇವರ ಸಹಕಾರದಲ್ಲಿ ನಡೆಸಲಾಯಿತು. ಈ ಕಲಾಮೇಳದ ಉದ್ಘಾಟನೆಯನು  ಕರ್ನಾಟಾಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ಫಿಲೊಮಿನ ಪೆರಿಸ್‌ರವರು ನಿರವೇರಿಸಿದರು.

19. ಕೊಂಕಣಿ ಪುಸ್ತಕ ಪುರಸ್ಕಾರ ಸಮರಂಭ-ಮಂಗಳೂರು
ಅಕಾಡೆಮಿಯ ೨೦೦೧-೦೨ನೇ ಸಾಲಿನ ಪುಸ್ತಕ ಪುರಸ್ಕಾರಕ್ಕಾಗಿ ಸ್ಟೇನ್ ರೋ ರವರ ಕೊಂಕಣಿ ಕಾದಾಂಬರಿ- ಶಿರಾಪ್, ಮಿಕ್ ಮ್ಯಾಕ್ಸ್ ರವರ ನಾಟಕ-ತೀನ್ ತಿಯಾತ್ರ್, ಕಿಶೂ ಬಾರ್ಕುರ್ ರವರ  ಸಣ್ಣಕತೆಗಳು- ರುಪ್ಣಿಂ ಈ ಮೂರು ಪುಸ್ತಕಗಳನ್ನು ಅಯ್ಕೆ ಮಾಡಲಾಗಿದ್ದು, ಈ ಪುರಸ್ಕಾರ ನೀಡುವ ಕಾರ್ಯಕ್ರಮವು ದಿನಾಂಕ ೨೨-೧೨-೨೦೦೨ ರಂದು ಮಂಗಳುರಿನಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮಿಕ್ ಮ್ಯಾಕ್ಸ್ ರವರ ಪಾಟಿಮ್ ಪಳೆನಾಕಾ ನಾಟಕವನ್ನು ಪ್ರಸ್ತುತ ಪಡಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಮಾನ್ಯ ಶ್ರೀ ಯೋಗೀಶ್ ಭಟ್‌ರವರು ಉದ್ಘಾಟಿಸಿದರು. ಧಾರವಾಡದ ಭಾಷಾ ತಜ್ಞರಾದ ಪ್ರೊ|ವಿಲಿಯಂ ಮಾಡ್ತಾರವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಅದ್ಯಕ್ಷತೆಯನ್ನು ವ|ಡಾ| ಅಲೆಕ್ಸಾಂಡರ್ ಎಫ್. ಡಿಸೋಜರವರು ವಹಿಸಿದರು.

20.ಕರ್ನಾಟಕಕ್ಕೆ ಕೊಂಕಣಿಗರ ಕೊಡುಗೆ ವಿಚಾರ ಸಂಕಿರಣ-ಮಂಗಳೂರು
ಸಾಹಿತ್ಯ, ಸಂಪರ್ಕ ಮತ್ತು ಮಾಧ್ಯಮ, ವಾಣಿಜ್ಯ, ಶಿಕ್ಷಣ, ಕಲೆ, ಸಂಸ್ಕೃತಿ ಈ ಕ್ಷೇತ್ರದಲ್ಲಿ ಕೊಂಕಣಿ ಜನರು ಕರ್ನಾಟಕಕ್ಕೆ ನೀಡಿದ ಕೊಡುಗೆಯ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ ೨೨-೧೨-೨೦೦೨ರಂದು ಮಂಗಳೂರಿನಲ್ಲಿ ನಡೆಸಲಾಯಿತು.

21.ಹೊರನಾಡು ಕನ್ನಡ ಸಂಸ್ಕೃತಿ ಮೇಳಾ ಕಾರ್ಯಕ್ರಮ(ಮಂಗಳೂರು, ಕಾಸರಗೋಡು,ಗೋವಾ)
ಇಲಾಖ ಸಹಯೋಗದಲ್ಲಿ ಹೊರನಾಡು ಸಂಸ್ಕೃತಿ ಮೇಳ ಕಾರ್ಯಕ್ರಮವನ್ನು ಅಕಾಡೆಮಿ ನೇತೃತ್ವದಲ್ಲಿ ಗೋವಾದಲ್ಲಿ ದಿನಾಂಕ ೧೧-೧-೨೦೦೩ ಮತ್ತು ೧೨-೧-೨೦೦೩ ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು  ಕರ್ನಾಟಕ ರಾಜ್ಯ ಅಕಾಡೆಮಿಗಳು ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಅಖಿಲ ಗೋವಾ ಕನ್ನಡ ಪರಿಷತ್ತು ಪಣಜಿ ಗೋವಾ ಇವರ ಸಹಕಾರದಲ್ಲಿ ನಡೆಸಲಾಯಿತು. ಅಂತೆಯೇ ಕಾಸರಗೋಡು ಹಾಗೂ ಮಂಗಳೂರಿನಲ್ಲಿ ಕೊಂಕಣಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಯಿತು.

22.ಮಕ್ಕಳ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ: ಮಂಗಳೂರು
ಮಕ್ಕಳಲ್ಲಿ ಕೊಂಕಣಿ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿ, ಕಲೆಗಳಲ್ಲಿ ಅಭಿಮಾನ ಮೂಡಿಸುವಂತಹ ಕಾಯುಕ್ರಮವಾದ ಮಕ್ಕಳ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವು ದಿನಾಂಕ ೧೬-೧-೨೦೦೩ ರಂದು ಮಂಗಳೂರಿನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಹಲವು ಶಾಲಾ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕೊಂಕಣಿ ಭಾಷೆಯನ್ನು ಶಾಲೆಯಲ್ಲಿ ಅಳವಡಿಸಲು ಶಾಲೆಗಳ ಮುಖ್ಯಸ್ಥರು, ಮಕ್ಕಳ ಹೆತ್ತವರಿಗೆ ಸಹಕರಿಸಿ ಮಕ್ಕಳಿಗೆ ಪ್ರೋತ್ಸಾಹಿಸಲು ವಿನಂತಿಸಲಾಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕ್ಷೇತ್ರ ಶಿಕ್ಷಕಾಧಿಕಾರಿಗಲಾ ಶ್ರೀಮತಿ ಫಿಲೊಮಿನ ಲೋಬೊರವರು ಉದ್ಘಾಟಕರಾಗಿ ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಡಾ| ಯು.ಎಸ್. ಮೋಹನದಾಸ ನಾಯಕ್, ಕೆನರಾ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಮತ್ತು ಶ್ರೀ ಬಸ್ತಿ ನಾರಾಯಣ ಶೆಣೈಯವರು ಭಾಗವಹಿಸಿದರು.

23. ಕೊಂಕಣಿ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾಮೇಳಾ; ಮೈಸೂರು.
ಮಕ್ಕಳಲ್ಲಿ ಕೊಂಕಣಿ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿ, ಕಲೆಗಳಲ್ಲಿ ಅಭಿಮಾನ ಮೂಡಿಸುವಂತಹ ಕಾರ್ಯಕ್ರಮವಾದ ಮಕ್ಕಳ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವು ದಿನಾಂಕ ೨೬-೧-೨೦೦೩ ರಂದು ಮಂಗಳೂರಿನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಹಲವು ಶಾಲಾ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮಕ್ಕೆ ಮೈಸೂರಿನ ಕೊಂಕಣಿ ಸಂಘ-ಸಂಸ್ಥೆಗಳ ಒಕ್ಕೂಟ ಇವರ ಸಹಕಾರವಿತ್ತು. ಈ ಕಾರ್ಯಕ್ರಮಕ್ಕೆ ಮೈಸೂರಿನ ಗೌಡ ಸಾರಸ್ವತ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀಯುವ ಎಂ. ಆನಂದರಾವ್‌ರವರು ಉದ್ಘಾಟಕರಾಗ