Print

2005-06 ನೇ ಸಾಲಿನಲ್ಲಿ ನಡೆದ ಕಾರ್ಯಕ್ರಮಗಳ ವಿವರಗಳು :

೧. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ‘ಮ್ಹಾನ್ ಮನಿಸ್ ಏಕ್ ಮುಲಾಖತ್’ ಮೊದಲ ಕಾರ್ಯಕ್ರಮ ದಿನಾಂಕ ೨೯-೦೫-೨೦೦೫ರಂದು ಉಡುಪಿ -ಶಂಕರಪುರದ ರೋಟರಿ ಭವನದಲ್ಲಿ ಸಂಜೆ ೪.೦೦ ಗಂಟೆಗೆ ಅಕಾಡೆಮಿ ಸದಸ್ಯ ಶ್ರೀ ವಿನ್ಸೆಂಟ್ ಆಳ್ವರ ನೇತೃತ್ವದಲ್ಲಿ ಜರಗಿತು.

೨. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ ೧೯-೦೬-೨೦೦೫ ರಂದು ಬೆಳಗಾವಿಯ ಹೋಟೆಲ್ ಮಿಲನ್ ಸಭಾಂಗಣದಲ್ಲಿ ಬೆಳಗಾವಿಯ ಕೊಂಕಣಿ ಪರಿಷದ್‌ನ ನೇತೃತ್ವದಲ್ಲಿ ‘ಮ್ಹಾನ್ ಮನಿಸ್ ಏಕ್ ಮುಲಾಖತ್’ ಕಾರ್ಯಕ್ರಮ ಜರಗಿತು.

೩. ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ(೨೦೦೪) ಪ್ರದಾನ ಸಮಾರಂಭವನ್ನು ದಿನಾಂಕ೦೯-೦೭-೨೦೦೫ ರಂದು ನಡೆಸಲಾಯಿತು.

೪. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು, ಗೌಡ ಸಾರಸ್ವತ ಬ್ರಾಹ್ಮಣ ಸಭಾ ಮೈಸೂರು ಮತ್ತು ಕೊಂಕಣಿ ಕ್ರಿಶ್ಚಿಯನ್ ಎಸೋಸಿಯೇಶನ್ ಮೈಸೂರು ಇವರ ಸಹಯೋಗದಲ್ಲಿ ದಿನಾಂಕ ೨೪-೦೭-೨೦೦೫ ರಂದು ಸಂಜೆ ೪.೩೦ಕ್ಕೆ ಮೈಸೂರು ಗೋವಿಂದ ರಾವ್ ಮೆಮೋರಿಯಲ್ ಹಾಲ್‌ನಲ್ಲಿ ಕೊಂಕಣಿ ‘ಮ್ಹಾನ್ ಮನಿಸ್’ ಕಾರ್ಯಕ್ರಮ  ಮತ್ತು ಕವಿಗೋಷ್ಠಿ ಜರುಗಿತು.

೫. ಕರ್ನಾಟಕದ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಗಂಗೊಳ್ಳಿಯ ವಿಜಯ ವಿಠಲ ಕಲ್ಯಾಣ ಮಂಟಪದಲ್ಲಿ ದಿನಾಂಕ ೦೭-೦೮-೨೦೦೫ರಂದು ಮ್ಹಾನ್ ಮನಿಸ್ ಏಕ್ ಮುಲಾಖತ್ ಕಾರ್ಯಕ್ರಮ ಜರಗಿತು.

೬. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಾಂಡ್ ಸೊಭಾಣ್ ಸಹಕಾರದಲ್ಲಿ ದಿನಾಂಕ ೧೪-೦೮-೦೫ರಂದು ಶಕ್ತಿನಗರ, ಕಲಾಂಗಣ್ ಸಭಾಂಗಣದಲ್ಲಿ ಕವಿ ಮೆಲ್ವಿನ್ ರೊಡ್ರಿಗಸ್‌ರ ನಿರ್ದೇಶನದಲ್ಲಿ ಕವಿತಾ ಕಾರ್ಯಗಾರ ನಡೆಯಿತು.

೭.   ಕೊಂಕಣಿ ಭಾಷೆಯು ಭಾರತದ ಸಂವಿಧಾನಕ್ಕೆ ಸೇರ್ಪಡೆಯಾದ ದಿನವಾದ ಆಗಸ್ಟ್ ೨೦ನ್ನು ಕೊಂಕಣಿ ದಿವಸವಾಗಿ ಆಚರಿಸಲಾಯಿತು. ಈ ಸಾಲಿನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ವಿವಿಧ ಸಂಘ-ಸಂಸ್ಥೆಗಳ  ಸಹಕಾರದಲ್ಲಿ  ಕೊಂಕಣಿ ದಿವಸವನ್ನು ವಿಜೃಂಭಣೆಯಿಂದ  ಮಂಗಳೂರಿನ ಡಾನ್ ಬೊಸ್ಕೊ ಸಭಾ ಭವನದಲ್ಲಿ ಆಚರಿಸಲಾಯಿತು.

೮. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕುಡುಬಿ ಸಮಾಜೋದ್ದಾರಕ ಸಂಘ, ಯೆಡ್ತಾಡಿ, ಜಿ.ಎಸ್.ಬಿ ಸಭಾ ಕಲ್ಯಾಣಪುರ, ನವಾಯ್ತಿ ಪ್ರೆಂಡ್ಸ್ ಹೂಡೆ, ಐಕಪ್ ಮಿಲಾಗ್ರಿಸ್ ಕಾಲೇಜು, ಕಥೋಲಿಕ್ ಸಭಾ ಮತ್ತು ಐ.ಸಿ.ವೈ.ಎಂ. ಇವರ ಸಹಯೊಗದೊಂದಿಗೆ, ಕೊಂಕಣಿ ಭಾಷೆಗೆ ಸಂವಿಧಾನದ ಸ್ಥಾನ ದೊರಕಿದ ದಿವಸವನ್ನು ೨೨.೮.೨೦೦೫ರಂದು ಅಚರಿಸಲಾಯಿತು.

೯.   ಕರ್ನಾಟಕ ಕೊಂಕಣಿ ಅಕಾಡೆಮಿ, ಕರ್ನಾಟಕ ತುಳು ಅಕಾಡೆಮಿ, ಕರ್ನಾಟಕ ಕೊಡವ ಅಕಾಡೆಮಿ ಮತ್ತು ಕರ್ನಾಟಕ ಉರ್ದು ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೨೮-೦೮-೦೫ರಂದು ರವಿವಾರ ಅಪರಾಹ್ನ ೪.೦೦ ಗಂಟೆಗೆ ಮಂಗಳೂರಿನ ಸಂದೇಶ ಪ್ರತಿಷ್ಠಾನದ ಸಭಾಂಗಣದಲ್ಲಿ “ಸಾಂಸ್ಕೃತಿಕ ಸಂಗಮ” ಕಾರ್ಯಕ್ರಮ ಜರಗಿತು.

೧೦. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಸೆಪ್ಟೆಂಬರ್ ೧೪, ೧೫, ಮತ್ತು ೧೬ರಂದು ಮೂರು ದಿನದ ಕಾರ್ಯಗಾರ ಏರ್ಪಡಿಸಿದ್ದು ಇದರ ಸಮಾರೋಪ ಸಮಾರಂಭವು ದಿನಾಂಕ ೧೬-೦೯-೨೦೦೫ರಂದು ಮಂಗಳೂರು ಶಕ್ತಿನಗರದ ಕಲಾಂಗಣ್‌ನಲ್ಲಿ ಸಂಜೆ ೫.೩೦ಕ್ಕೆ ಜರಗಿತು.

೧೧.  ದಿನಾಂಕ ೧೭-೯-೨೦೦೫ರಂದು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಂಕಣಿ ಪಠ್ಯವಸ್ತು ಕಾರ್ಯಗಾರ ಜರುಗಿತು.

೧೨.     ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ ೨೩-೧೦-೨೦೦೫ರಂದು ರವಿವಾರ ಸಂಜೆ ೩.೩೦ಕ್ಕೆ ಕಾರವಾರ ಸದಾಶಿವಗಡದ ಬಿ.ಜಿ.ವಿ.ಎಸ್., ಶ್ರೀಮತಿ ಸುಮತಿ ನಾಯ್ಕ್ ನರ್ಸಿಂಗ್ ಇನ್ಸ್ಟಿಟ್ಟ್ಯೂಟ್ ಒಫ್ ಸಾಯನ್ಸ್ ವಠಾರದಲ್ಲಿ ಕೊಂಕಣಿ ‘ಮ್ಹಾನ್ ಮನಿಸ್ ಏಕ್ ಮುಲಾಖತ್’ ಕಾರ್ಯಕ್ರಮ  ಜರುಗಿತು.   

೧೩ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ  ಕರ್ನಾಟಕ ತುಳು, ಕೊಂಕಣಿ ಮತ್ತು ಉರ್ದು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ದಿನಾಂಕ ೨೨.೧೧.೨೦೦೫ ಮಡಿಕೇರಿಯ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ನಾಲ್ಕು ಅಕಾಡೆಮಿಗಳ ‘ಸಾಂಸ್ಕೃತಿಕ ಸಂಗಮ’ ಕಾರ್ಯಕ್ರಮ ಜರಗಿತು.

೧೪.  ಕರ್ನಾಟಕ   ಕೊಂಕಣಿ   ಸಾಹಿತ್ಯ  ಅಕಾಡೆಮಿಯ  ವತಿಯಿಂದ   ದಿನಾಂಕ ೨೭-೧೧-೨೦೦೫ ರಂದು ರವಿವಾರ ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದ ನಯನ ರಂಗಮಂದಿರದಲ್ಲಿ ಮ್ಹಾನ್ ಮನಿಸ್ ಏಕ್ ಮುಲಾಖತ್ ಕಾರ್ಯಕ್ರಮ ಜರಗಿತು.

೧೫ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ನಗರದ ಶಕ್ತಿನಗರದ ಕಲಾಂಗಣ್‌ನಲ್ಲಿ ಡಿಸೆಂಬರ್ ೨, ೩ ಮತ್ತು ೪ರಂದು ಮೂರು ದಿನಗಳ ಕಾಲ ನಡೆದ ಕೊಂಕ್ಣಿ ಯುವಮಹೋತ್ಸವದ ಕಾರ್ಯಕ್ರಮ ನಡೆಯಿತು.

೧೬  ಕರ್ನಾಟಕ   ಕೊಂಕಣಿ   ಸಾಹಿತ್ಯ   ಅಕಾಡೆಮಿಯ   ವತಿಯಿಂದ   ದಿನಾಂಕ   ೧೧-೧೨-೨೦೦೫ ರಂದು ರವಿವಾರ ಸಂಜೆ ೪.೩೦ ಗಂಟೆಗೆ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನ, ಹೊನ್ನಾವರದಲ್ಲಿ ‘ಮ್ಹಾನ್ ಮನಿಸ್ ಏಕ್ ಮುಲಾಖತ್’ ಕಾರ್ಯಕ್ರಮ ಜರಗಿತು.      
                                                                                                                          
೧೭. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ದಿನಾಂಕ ೧೭-೧೨-೨೦೦೫ರಿಂದ ೨೪-೧೨-೨೦೦೫ ರವರೆಗೆ ಮಂಗಳೂರಿನ ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕೊಂಕಣಿ ಬಜಾರ್ ಕಾರ್ಯಕ್ರಮ  ನಡೆಸಲಾಯಿತು.

೧೮. ಕೊಂಕಣಿಯಲ್ಲಿ ಈವರೆಗೆ ರಾಷ್ಟ್ರ ಮಟ್ಟದಲ್ಲಿ ಒಂದೇ ಲಿಪಿ(ದೇವನಾಗರಿ)ಗೆ ಸರ್ಕಾರಿ ಸೌಲಭ್ಯಗಳು ಲಭಿಸುತ್ತಿದ್ದು, ಉಳಿದ ಲಿಪಿಗಳಲ್ಲಿ ಬೆಳೆದ ಸಾಹಿತ್ಯಕ್ಕೆ  ಯಾವುದೇ ಮಾನ್ಯತೆ ಸಿಗುತ್ತಿಲ್ಲ. ಅದರಲ್ಲೂ ಅತಿ ಹೆಚ್ಚು  ಸಾಹಿತ್ಯವಿರುವ ಕನ್ನಡ ಲಿಪಿಗೆ ಹಾಗೂ ರೋಮಿ ಲಿಪಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಚರ್ಚಿಸಲು ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳು, ಸದಸ್ಯರುಗಳು ಮತ್ತು ರೋಮಿ ಲಿಪಿಗೆ ಸಂಬಂಧಿಸಿದಂತೆ ಗೋವಾದಿಂದ ಒಬ್ಬ ಸದಸ್ಯರನ್ನು ಹಾಗೂ ಕನ್ನಡ ಲಿಪಿಯ ಪರವಾಗಿ ಕೊಂಕಣಿ ಲೇಖಕರ ಒಕ್ಕೂಟದ ಓರ್ವ ಸದಸ್ಯರನ್ನು ಒಳಗೊಂಡ ಒಂದು ಸಭೆಯನ್ನು ದಿನಾಂಕ ೨೯.೦೧.೨೦೦೬ರಂದು ಅಕಾಡೆಮಿಯಲ್ಲಿ ನಡೆಸಲಾಯಿತು.

೧೯. ಕೊಂಕಣಿ ಸಾಹಿತಿಗಳು ಹಾಗೂ ಕಲಾವಿದರುಗಳ ಸಭೆಯನ್ನು ದಿನಾಂಕ ೧೮.೦೨.೨೦೦೬ ರಂದು ಶನಿವಾರ ಅಪರಾಹ್ನ ೪.೦೦ ಗಂಟೆಗೆ ಕೊಂಕಣಿ ಅಕಾಡೆಮಿಯಲ್ಲಿ ನಡೆಸಲಾಯಿತು.

೨೦. ಕೊಂಕಣಿ ಜಾನಪದ ಕಲಾಮೇಳಾ ಕಾರ್ಯಕ್ರಮವನ್ನು ದಿನಾಂಕ ೦೨-೦೪-೨೦೦೬ ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ನಡೆಸುವ ಕುರಿತು ಕೊಂಕಣಿ ಎಲ್ಲಾ ಜಾನಪದ ಕಲಾ ತಂಡಗಳ ಮುಖ್ಯಸ್ಥರೊಂದಿಗೆ ದಿನಾಂಕ ೨೭-೦೨-೨೦೦೬ ರಂದು ಅಕಾಡೆಮಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.

೨೧. ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು, ಕೊಂಕಣಿ ಸಂಘಟಕರು ಹಾಗೂ ಉದ್ಯಮಿಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಎ.ವಿ.ರೇಗೊರವರು ದಿನಾಂಕ ೦೫.೦೩.೨೦೦೬ರಂದು ನಿಧನರಾದ ಪ್ರಯುಕ್ತ ಅವರ ಸಂಸ್ಮರಣೆಗಾಗಿ ದಿನಾಂಕ ೦೭.೦೩.೨೦೦೬ರಂದು ಅಕಾಡೆಮಿ ಸಭಾಂಗಣದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ  ನಡೆಸಲಾಯಿತು.

೨೨. ದಿನಾಂಕ ೧೨.೦೩.೨೦೦೬ ರಂದು ಮುಂಬಯಿಯಲ್ಲಿ ನಡೆದ ಮ್ಹಾನ್-ಮನಿಸ್ ಎಕ್ ಮುಲಾಕಾತ್ ಹಾಗೂ ವೊವ್ಯೊ-ವೆರ‍್ಸಾಂ ಕಾರ್ಯಕ್ರಮ ನಡೆಸಲಾಯಿತು.

೨೩. ಕರ್ನಾಟಕ ತುಳು ಸಾಹಿತ್ಯ  ಅಕಾಡೆಮಿಯ ನೇತೃತ್ವದಲ್ಲಿ ಮಂಗಳೂರಿನ  ಪುರಭವನದಲ್ಲಿ ದಿನಾಂಕ   ೨೫-೦೩-೨೦೦೬ ರಂದು ಕರ್ನಾಟಕ ಕೊಂಕಣಿ, ಕೊಡವ   ಮತ್ತು ಉರ್ದು ಅಕಾಡೆಮಿಗಳ  ಸಹಯೋಗದಲ್ಲಿ  ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವು ಜರಗಿತು. ಕೊಂಕಣಿ ,ತುಳು, ಕೊಡವ, ಉರ್ದು ಭಾಷೆಗಳ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

೨೪. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ ೨೬-೦೩-೨೦೦೬ರಂದು ರವಿವಾರ ಶಿರಸಿಯ ಸಂತ ಅಂತೋನಿ ಕಮ್ಯೂನಿಟಿ ಹಾಲ್‌ನಲ್ಲಿ ಕೊಂಕಣಿ ‘ಮ್ಹಾನ್ ಮನಿಸ್ ಏಕ್ ಮುಲಾಖತ್’ ಕಾರ್ಯಕ್ರಮ ಮತ್ತು ‘ಕೊಂಕಣಿ ಕವಿಗೋಷ್ಠಿ’ ಜರುಗಿತು.