Print

2006-07ನೇ ಸಾಲಿನಲ್ಲಿ ನಡೆದ ಕಾರ್ಯಕ್ರಮಗಳ ವಿವರ :


1. ದಿನಾಂಕ 01.4.2006ರಂದು ಕಾರವಾರದಲ್ಲಿ ಜರಗಿದ  ಕೊಂಕಣಿ ಜಾನಪದ ಕಲಾಮೇಳ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ 01-04-2006ರಂದು ಶನಿವಾರ ಸಂಜೆ 5.30ಕ್ಕೆ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಕೊಂಕಣಿ ಜಾನಪದ ಕಲಾಮೇಳ ಕಾರ್ಯಕ್ರಮ ಜರಗಿತು. ಶ್ರೀ ಚೇತನ್ ಜೋಶಿ ಅವರು ಮುಖ್ಯ ಅತಿಥಿಗಳಾಗಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ವಿವಿಧ  ತಂಡಗಳು  ಈ  ಕಾರ್ಯಕ್ರಮದಲ್ಲಿ  ಭಾಗವಹಿಸಿದವು.  ತಂಡಗಳ ವಿವರಗಳು ಹೀಗಿವೆ : ಶ್ರೀ ಜೊಕಿಂ ಪಿರೇರಾ ಮತ್ತು ತಂಡ, ಮಂಗಳೂರು, ಕುಡುಬಿ ಜಾನಪದ ಕಲಾವೇದಿಕೆ ಎಡಪದವು, ಶ್ರೀ ಆಂಜನೇಯ ವ್ಯಾಯಾಮ ಶಾಲೆ ಕುಂದಾಪುರ, ಕೊಂಕಣಿ ಕಲಾಪಂಗಡ ಮಲ್ಲಾಪುರ, ಸಿದ್ದಿ ಸಾಂಸ್ಕೃತಿಕ ಕಲಾಮೇಳ, ಯಲ್ಲಾಪುರ, ಶ್ರೀ ಬ್ರಹ್ಮದೇವಾ ಗುಮ್ಟೆಂ ಫಾಂಗ್ ಕಲಾ ತಂಡ, ಕಿನ್ನರ ಮತ್ತು ಮಹಾಸತಿ ಕಲಾಮಂಡಳ, ರಾಜೆಕಾನ್‌ಬಾಗ್.

2. ದಿನಾಂಕ 02.04.2006 ರಂದು ಜರಗಿದ ಮಂಥನ(ಆಟವ್) ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ 02-04-2006ರಂದು ರವಿವಾರ  ಪೂರ್ವಾಹ್ನ 10.00ಕ್ಕೆ ಮಂಗಳೂರಿನ ಬಜ್ಜೋಡಿ ಸಂದೇಶ ಪ್ರತಿಷ್ಠಾನದಲ್ಲಿ ಕೊಂಕಣಿ ಕೃತಿ ರಚನಕಾರರ ಹಕ್ಕುಗಳು ಮತ್ತು ಸಮಾಜದ ಕರ್ತವ್ಯಗಳು ಎಂಬ ವಿಷಯದ ಕುರಿತು ಮಂಥನ ಕಾರ್ಯಕ್ರಮ ಜರಗಿತು. ಶ್ರೀ ಲೆಸ್ಲಿ ರೇಗೊ ಮತ್ತು ಶ್ರೀ ಸ್ಟೀವನ್ ಕ್ವಾಡ್ರಸ್ ರವರು ವಿಚಾರ ಮಂಡಿಸಿದರು. ಕು. ಖದೀಜಾ ಸಲೀಮ್ (Intellectual Property Rights Consultant, High Court, Mumbai) ಇವರು ಕಾನೂನು ಮಾಹಿತಿ ನೀಡಿದರು. ‘ಕೊಂಕಣ್ ಕೊಗುಳ್’ ಶ್ರೀ ವಿಲ್ಫಿ ರೆಬಿಂಬಸ್‌ರವರು ಮುಖ್ಯ ಅತಿಥಿಗಳಾಗಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

3.    08.04.2006ರಂದು ಜರಗಿದ ಪಠ್ಯಪುಸ್ತಕ ಸಮಿತಿ ಸಭೆ
ಶಾಲೆಗಳಲ್ಲಿ ಕೊಂಕಣಿ ಪರಿಚಯಿಸಲು ಅನುಕೂಲವಾಗುವಂತೆ ಪಠ್ಯಪುಸ್ತಕ ಶೀಘ್ರದಲ್ಲಿಯೇ ತಯಾರಿಸುವುದೆಂದು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಹಾಗೂ ಕೊಂಕಣಿ ಪ್ರಚಾರ ಸಮಿತಿಯನ್ನು ರಚಿಸುವುದೆಂದು ನಿರ್ಧರಿಸಲಾಯಿತು.

4.    08.04.2006 ರಂದು ಜರಗಿದ ವಿಚಾರ ವಿನಿಮಯ ಸಭೆ
ಮಾರ್ಚ್ 22, 2006ರಂದು ಈಗಿನ ಅಧ್ಯಕ್ಷರು ಅಕಾಡೆಮಿಯ ಕಾರ್ಯಾವಧಿಯ ಒಂದು ವರ್ಷ ಪೂರೈಸಿರುವುದರಿಂದ ವಿಚಾರ ಸಭೆಯನ್ನು ಜರಗಿಸಲಾಯಿತು. ಫಾ. ಡೆನಿಸ್ ಡೆಸಾ ರವರು ಅಧ್ಯಕ್ಷರಾಗಿದ್ದರು. ಈ ಸಭೆಯಲ್ಲಿ ಸಭಿಕರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು.

5.    ಕೊಂಕಣಿ ಅಕಾಡೆಮಿಯ 2005ರ ಅಕಾಡೆಮಿ ಗೌರವ  ಪ್ರಶಸ್ತಿ ಪ್ರದಾನ ಕಾರ್ಯಕ್ರಮ            
ಕರ್ನಾಟಕ  ಕೊಂಕಣಿ ಸಾಹಿತ್ಯ ಅಕಾಡೆಮಿಯ 2005ರ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 16.04.2006 ರಂದು ರವಿವಾರ ಸಂಜೆ 5.30 ಗಂಟೆಗೆ ಉಡುಪಿಯ ಮದರ್ ಆಫ್ ಸಾರೊಸ್ ಚರ್ಚಿನ ಮೈದಾನದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಶ್ರೀ ಎಡ್ವಿನ್ ನೆಟ್ಟೊ (ಸಾಹಿತ್ಯ), ಶ್ರೀ ತೋನ್ಸೆ ವಾಮನ ಪೈ (ಜಾನಪದ) ಮತ್ತು ಶ್ರೀ ಎಂ.ಎಸ್. ಕಾಮತ್ (ಸಂಗೀತ) ಇವರುಗಳಿಗೆ 2005ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವರಾದ ಮಾನ್ಯ ವಿ.ಎಸ್. ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲರು ಮುಖ್ಯ ಅತಿಥಿಗಳಾಗಿದ್ದರು. ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಘುಪತಿ ಭಟ್ ಮತ್ತು ಉಡುಪಿ ಮದರ್ ಆಫ್ ಸಾರೊಸ್ ಚರ್ಚ್‌ನ ಧರ್ಮ ಗುರುಗಳಾದ ವಂ| ಮ್ಯಾಥ್ಯೂ ಪಿ. ವಾಸ್ ಇವರುಗಳು ಗೌರವ ಅತಿಥಿಗಳಾಗಿದ್ದರು.  ಕಾರ್ಯಕ್ರಮದ ಅಂಗವಾಗಿ ಲೊಯ್ಡ್ ರೇಗೊ  ತಾಕೊಡೆ ಮತ್ತು ತಂಡದವರಿಂದ ಕೊಂಕಣಿ ಸಂಗೀತ ರಸ ಸಂಜೆ ಕಾರ್ಯಕ್ರಮ ಜರಗಿತು.

6.ಮಂಗಳೂರಿನಲ್ಲಿ ‘ಮ್ಹಾನ್ ಮನಿಸ್ ಏಕ್ ಮುಲಾಖತ್’ ಕಾರ್ಯಕ್ರಮ ಮತ್ತು ‘ಕವಿತಾ ಸೊಭಾಣ್’
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ 25-06-2006 ರಂದು ರವಿವಾರ ಸಂಜೆ 4.00ಕ್ಕೆ ಮಂಗಳೂರಿನ ಜೆಪ್ಪು, ಸಂತ ಅಂತೋನಿ ಆಶ್ರಮದ ಬಿಷಪ್ ವಿಕ್ಟರ್ ಮೆಮೋರಿಯಲ್ ಹಾಲ್‌ನಲ್ಲಿ ಕೊಂಕಣಿ ‘ಮ್ಹಾನ್ ಮನಿಸ್ ಏಕ್ ಮುಲಾಖತ್’ ಕಾರ್ಯಕ್ರಮ ಜರಗಿತು. ಮ್ಹಾನ್ ಮನಿಸ್‌ರಾಗಿ ಶ್ರೀ ಗುಲ್ವಾಡಿ ದತ್ತಾತೇಯ ಭಟ್ ಮತ್ತು ವಂ| ಡಾ| ಅಲೆಕ್ಸಾಂಡರ್ ಎಫ್. ಡಿಸೋಜ ಇವರುಗಳನ್ನು  ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಅವರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.  ಫಾ| ಕ್ಲಿಫರ್ಡ್ ಡಿ’ಸೋಜ ಮತ್ತು ಶ್ರೀ ಬ್ಲೇಸಿಯಸ್ ಎಂ. ಡಿ’ಸೋಜ ಇವರುಗಳು ಮುಖ್ಯ ಅತಿಥಿಗಳಾಗಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅದೇ ಸಂದರ್ಭದಲ್ಲಿ ‘ಕವಿತಾ ಸೊಭಾಣ್’ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕವಿತಾ ಸೊಭಾಣ್‌ನಲ್ಲಿ ವಿವಿಧ ಪ್ರದೇಶಗಳಿಂದ ಕವಿ/ಕವಯಿತ್ರಿಯರು ಭಾಗವಹಿಸಿದ್ದು ಮಂಗಳೂರಿನ ಶ್ರೀ ವಿಕ್ಟರ್ ಲೋಬೊ, ಇವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

7. ದಿನಾಂಕ 28.6.2006ರಂದು ಮಂಗಳೂರಿನಲ್ಲಿ ಜರಗಿದ ಪಠ್ಯಪುಸ್ತಕ ಬಿಡುಗಡೆ ಹಾಗೂ ಶಿಕ್ಷಕರ ತರಬೇತಿ ಕಾರ್ಯಕ್ರಮ
ದಿನಾಂಕ 28.6.2006 ರಂದು ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ಸಚಿಜೆ 4.00 ಗಂಟೆಗೆ  ಪಠ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರಗಿತು. ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು,  ರೊನಾಲ್ಡ್ ಕುಲಾಸೊ ಹಾಗೂ ರಮೇಶ್ ಕೆ. ಕಾಮತ್ ಇವರು ಈ ಸಮಾರಂಭದ ಗೌರವ ಅತಿಥಿಗಳಾಗಿದ್ದರು. ಶ್ರೀ ಎರಿಕ್ ಒಝೇರಿಯೊ ಅವರು ಕಾರ್ಯಕ್ರಮದ ಅಧ್ಯಕ್ಷರಾಗಿ ಭಾಗವಹಿಸಿದ್ದರು. ಅದೇ ದಿನ, ಅದೇ ಸಭಾಂಗಣದಲ್ಲಿ ಪೂರ್ವಾಹ್ನ 9.30 ಗಂಟೆಗೆ ‘ಶಿಕ್ಷಕರ ತರಬೇತಿ’ ಕಾರ್ಯಕ್ರಮ ಜರಗಿತು. ಕಥೊಲಿಕ್ ಬೋರ್ಡ್ ಅಫ್. ಎಜುಕೇಶನ್‌ನ ಕಾರ್ಯದರ್ಶಿಗಳಾದ ವಂ|ವಿಲ್ಸನ್ ವೈಟಸ್ ಡಿ’ಸೋಜ ಕಾರ್ಯಕ್ರಮದ ಉದ್ಘಾಟಕರಾಗಿದ್ದರು. ಈ ಶಿಕ್ಷಕರ ತರಬೇತಿ ಕಾರ್ಯಕ್ರಮಕ್ಕೆ 55 ಶಾಲೆಗಳ ಶಿಕ್ಷಕಿ/ಶಿಕ್ಷಕರು ಭಾಗವಹಿಸಿದ್ದರು.

8.    ದಿನಾಂಕ 23.7.2006 ರಂದು ಕಲ್ಯಾಣಪುರ ದಲ್ಲಿ ಜರಗಿದ ಕವಿತಾ ಕಾರ್ಯಗಾರ
ದಿನಾಂಕ 23.7.2006ರಂದು ಕಲ್ಯಾಣಪುರದಲ್ಲಿ ಒಂದು ದಿನದ ಕವಿತಾ ಕಾರ್ಯಗಾರ ಜರಗಿತು.  ಈ ಕಾರ್ಯಕ್ರಮವನ್ನು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ  ಫಾ| ಫ್ರೆಡ್ ಮಸ್ಕರೇನ್ಹಸ್‌ರವರು ಉದ್ಘಾಟಿಸಿದರು. ಕಾಲೇಜಿನ  45 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕವಿತಾ ಶಿಬಿರದ ಉಪಯೋಗವನ್ನು ಪಡೆದುಕೊಂಡರು. ಈ ಕಾರ್ಯಕ್ರಮವು ಕೊಂಕಣಿ ಸಾಹಿತ್ಯ, ಕಲಾ ಆನಿ ಸಾಂಸ್ಕೃತಿಕ ಸಂಘಟನ್ ಇವರ ಸಹಯೋಗದಲ್ಲಿ ನಡೆಯಿತು.

9. ತಾಕೊಡೆಯಲ್ಲಿ ‘ಮ್ಹಾನ್ ಮನಿಸ್ ಏಕ್ ಮುಲಾಖತ್’ ಕಾರ್ಯಕ್ರಮ ಮತ್ತು ‘ಕವಿತಾ ಸೊಭಾಣ್’
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಸಾಂಗಾತಿ ಮೀಡಿಯಾ ಸಹಯೋಗದಲ್ಲಿ  ದಿನಾಂಕ 13-08-2006ರಂದು ರವಿವಾರ ಸಂಜೆ 4.30ಕ್ಕೆ ತಾಕೊಡೆ ಚರ್ಚ್ ಸಭಾಂಗಣದಲ್ಲಿ ಕೊಂಕಣಿ ‘ಮ್ಹಾನ್ ಮನಿಸ್ ಏಕ್ ಮುಲಾಖತ್’’ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮಕ್ಕೆ ಶ್ರೀ ರಿಚರ್ಡ್ ಮೊರಾಸ್ ಇವರುಗಳು ಮುಖ್ಯ ಅತಿಥಿಗಳಾಗಿದ್ದರು ಮತ್ತು ತಾಕೊಡೆ ಚರ್ಚ್‌ನ ಧರ್ಮಗುರುಗಳಾದ  ಫಾ| ಹಿಲರಿ ಲೋಬೊ  ಇವರು  ಗೌರವ ಅತಿಥಿಗಳಾಗಿದ್ದರು.  ಮ್ಹಾನ್ ಮನಿಸ್‌ರಾಗಿ ಹಿರಿಯ ಕುಡ್ಮಿ ಜಾನಪದ ತಜ್ಞರಾದ ಶ್ರೀ ಗೋಪಾಲ ಗೌಡ ಮತ್ತು ಹಿರಿಯ ಸಾಹಿತಿ ಹಾಗೂ ಧರ್ಮಗುರುಗಳಾದ ಫಾ| ಮಾರ್ಕ್‌ವಾಲ್ಡರ್ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಕುಡ್ಮಿ ಜಾನಪದ ಬಗ್ಗೆ  ಶ್ರೀ ಗೋಪಾಲಗೌಡರೊಂದಿಗೆ  ಸಾಹಿತ್ಯದ ಬಗ್ಗೆ ಫಾ| ಮಾರ್ಕ್‌ವಾಲ್ಡರ್‌ರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.  ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅದೇ ಸಂದರ್ಭದಲ್ಲಿ ‘ಕವಿಗೋಷ್ಠಿ ಕಾರ್ಯಕ್ರಮ ಜರಗಿತು. ಈ ಕವಿಗೋಷ್ಠಿಯಲ್ಲಿ ಎಲ್ಯೆರ್ ತಾಕೊಡೆ, ವಿಲ್ಸನ್ ಕಟೀಲ್, ಗ್ಲೇಡಿಸ್ ರೇಗೊ, ನವೀನ್ ಪಿರೇರಾ, ವಿಕ್ಟರ್ ಲೋಬೊ, ಸಿಜ್ಯೆಸ್, ಜಿಯೋ ಡಿ’ಸಿಲ್ವ, ಕ್ಲೆಮೆಂಟ್ ಫೆರ್ನಾಂಡಿಸ್ ಇವರುಗಳು ಭಾಗವಹಿಸಿದ್ದರು. ಶ್ರೀ ಟೈಟಸ್ ನೊರೊನ್ಹಾ, ತಾಕೊಡೆ, ಇವರ ಅಧ್ಯಕ್ಷತೆಯೊಂದಿಗೆ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

10. ಮಂಗಳೂರಿನಲ್ಲಿ ಜರಗಿದ ‘ಕೊಂಕಣಿ ಫುಡಾರಾ ದಿವಸ್’ ಕಾರ್ಯಕ್ರಮ
ದಿನಾಂಕ  20-8-2006ರಂದು ಅಕಾಡೆಮಿಯ ನೇತೃತ್ವದಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ಸೇರಿ ಕೊಂಕಣಿ  ಕಲಿಸಲು ಮುಂದೆ ಬಂದಿರುವ ಶಿಕ್ಷಕರು, ಹಾಗೂ ಕಲಿಯುತ್ತಿರುವ ವಿದ್ಯಾರ್ಥಿಗಳು, ಕೊಂಕಣಿ ಸಾಹಿತಿ, ಕಲಾವಿದರು, ಭಾಷಾಭಿಮಾನಿಗಳೊಂದಿಗೆ ಬೆಳಿಗ್ಗೆ 9.30 ಗಂಟೆಯಿಂದ, ಮಂಗಳೂರಿನ ಪುರಭವನದಲ್ಲಿ  ಕೊಂಕಣಿ ಮಾನ್ಯತೆ ದಿನಾಚರಣೆಯ ಅಂಗವಾಗಿ, ‘ಕೊಂಕಣಿ ಫುಡಾರಾ ದಿವಸ್’ ಆಚರಣೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಮಂಗಳೂರಿನ ವಿಧಾನಸಭಾ ಸದಸ್ಯರಾದ ಶ್ರೀ ಯೋಗಿಶ್ ಭಟ್ ಇವರು ನೆರವೇರಿಸಿದರು. ಅಂತರಾಷ್ಟೀಯ ಖ್ಯಾತಿಯ ಮನೋಶಾಸ್ತ್ರಜ್ಞರಾದ ಡಾ| ಕೆ.ಎ. ಅಶೋಕ್ ಪೈ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಹಾಗೂ ಶ್ರೀ ಜೇಮ್ಸ್ ಮೆಂಡೊನ್ಸ ಅಧ್ಯಕ್ಷರು, ಮಂಗಳೂರು ಕೊಂಕಣ್ಸ್, ದುಬಾಯ್ ಇವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಪುತ್ತೂರು ನರಸಿಂಹ ನಾಯಕ್ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

11. ದಿನಾಂಕ 27-8-06ರಂದು ಜರಗಿದ ಕುಡ್ಮಿ ಚಿಂತನ ಸಮಾವೇಶ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ  ಅಕಾಡೆಮಿ ಹಾಗೂ ಕುಡ್ಮಿ ಜಾನಪದ ಕಲಾವೇದಿಕೆ, ಎಡಪದವು ಇವರ ಸಹಯೋಗದಲ್ಲಿ ದಿನಾಂಕ  27-8-2006ರಂದು ರವಿವಾರ  ಬೆಳಿಗ್ಗೆ 9.00 ಗಂಟೆಗೆ, ತೆಂಕ ಎಡಪದವು ಗ್ರಾಮದ ಶ್ರೀ ರಾಮ ಭಜನಾ ಮಂದಿರ ಸಭಾಂಗಣದಲ್ಲಿ ಕುಡ್ಮಿ ಚಿಂತನ ಸಮಾವೇಶ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಯಕ್ಷಗಾನ ಕಲಾವಿದರಾದ ಶ್ರೀ ಕುಮಾರ ಗೌಡ ಪುತ್ತಿಗೆ  ಇವರು ನೆರವೇರಿಸಿದರು. ಕುಡ್ಮಿ ಜಾನಪದ ತಜ್ಞರಾದ ಶ್ರೀ ಎಂ. ಗೋಪಾಲ್ ಗೌಡ ಇವರು ಕುಡ್ಮಿ ಜಾನಪದದ ಕುರಿತು ವಿಚಾರ ಮಂಡನೆ ನಡೆಸಿದರು. ಈ ವಿಚಾರ ಮಂಡನೆಯಲ್ಲಿ ಕೊಂಕಣಿ ಸಾಹಿತಿ, ವಿಮರ್ಶಕ, ಕಾರ್ಯಕರ್ತ ಹಾಗೂ ಪ್ರಾಧ್ಯಾಪಕರಾದ ಶ್ರೀ ಸ್ಟೀವನ್ ಕ್ವಾಡ್ರಸ್‌ರವರು ಕುಡ್ಮಿ ಜನ ಮತ್ತು ಕೊಂಕಣಿ ಜಗತ್ತು ಈ ವಿಷಯದ ಕುರಿತು ತಮ್ಮ ವಿಚಾರವನ್ನು ಮಂಡಿಸಿದರು. ಕುಡ್ಮಿ ಜನರ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿ ಈ ವಿಷಯದ ಕುರಿತು ಸಂವಾದ ಕಾರ್ಯಕ್ರಮ ಜರಗಿತು. ಈ ಸಂವಾದ ಕಾರ್ಯಕ್ರಮವನ್ನು  ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ನಡೆಸಿಕೊಟ್ಟರು. ಧನ್ಯವಾದ ಸಮರ್ಪಣೆಯನ್ನು ಅಕಾಡೆಮಿಯ ಸದಸ್ಯರಾದ ಶ್ರೀ ವಿತೊರಿ ಕಾರ್ಕಳರವರು ನೆರವೇರಿಸಿದರು. ಸ್ಥಳೀಯ ಸಂಚಾಲಕರಾದ ಶ್ರೀ ವಿಜಯಗೌಡ, ಶಿಬ್ರಿಕೆರೆ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಕುಡ್ಮಿ ಜಾನಪದ ಕಲಾವೇದಿಕೆಯ ಸದಸ್ಯರಿಂದ ಗುಮ್ಟಾ ನೃತ್ಯ ಹಾಗೂ ತೊಣಿಯೊ ಖೇಳ್ ನೃತ್ಯವನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು.

12. ಬಾಳೆಹೊನ್ನೂರಿನಲ್ಲಿ ಜರಗಿದ ‘ಕೊಂಕಣಿ ಮಹೋತ್ಸವ್’ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಅಕಾಡೆಮಿಯ ಆಶ್ರಯದಲ್ಲಿ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಮಟ್ಟದ ಪ್ರಥಮ ಕೊಂಕಣಿ ಮಹೋತ್ಸವವು 2006, ಸಪ್ಟೆಂಬರ್ 17ರಂದು ಬಾಳೆಹೊನ್ನೂರು ಸಮುದಾಯ ಭವನದಲ್ಲಿ ಜರಗಿತು. ಮಹೋತ್ಸವದ ಉದ್ಘಾಟನೆಯನ್ನು ಉದ್ಯಮಿ, ರೊನಾಲ್ಡ್ ಕುಲಾಸೊರವರು ‘ಗುಮಟ್’ (ಸಾಂಪ್ರದಾಯಿಕ ಕೊಂಕಣಿ ವಾದ್ಯ) ಬಾರಿಸಿ ನಡೆಸಿದರು. ಕಾರ್ಯದ ಅಧ್ಯಕ್ಷತೆಯನ್ನು ವಹಿಸಿದ ಎರಿಕ್ ಒಝೇರಿಯೊರವರು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕೊಂಕಣಿ ಭಾಷೆಯನ್ನು ಉಳಿಸಿ ಬೆಳೆಸಲು ಕರೆಯಿತ್ತರು. ಇದೇ ವೇಳೆ ಕೊಂಕಣಿ ಭಾಷೆಯ ಅಭಿವೃದ್ಧಿಗೆ ದುಡಿಯಲು ‘ಕೊಂಕಣಿ ರಾಕೊಣ್ ಸಂಚಾಲನ್’ ಎಂಬ ಸಂಘಟನೆಯನ್ನು ಹುಟ್ಟು ಹಾಕಲಾಯಿತು.  ವೇದಿಕೆಯ ಮೇಲೆ ಜನತಾದಳದ ಮಹಿಳಾ ಮೋರ್ಚಾದ ಕಾರ್ಯದರ್ಶಿ ಫಿಲೊಮಿನಾ ಪೆರಿಸ್, ರೊನಾಲ್ಡ್ ಕ್ಯಾಸ್ತೆಲಿನೊ, ವಂ| ಎಲೊಶಿಯಸ್ ಡಿಸೋಜ, ಡೆನಿಸ್ ಡಿಸಿಲ್ವ, ವಿಜಯ್ ರೋಚ್ ಉಪಸ್ಥಿತರಿದ್ದರು. ಮಹೋತ್ಸವ ಸಮಿತಿಯ ಸಂಘಟಕ ಜೊಸ್ಸಿ ಲೋಬೊ ಸ್ವಾಗತಿಸಿ, ಸಹ ಸಂಚಾಲಕ  ಜೊಸ್ಸಿ ಲೋಬೊ ಧನ್ಯವಾದವನ್ನಿತ್ತರು. ಸ್ಟ್ಯಾನಿ ಅಲ್ವಾರಿಸ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು.   ಮಧ್ಯಾಹ್ನ ವಿಚಾರಗೋಷ್ಠಿ ನಡೆಯಿತು. ಈ ವಿಚಾರಗೋಷ್ಠಿಯಲ್ಲಿ ವಿತೊರಿ ಕಾರ್ಕಳ್(ಕೊಂಕಣಿ ಚರಿತ್ರೆ), ವಿ.ಜೆ. ಮಿನೇಜಸ್(ಚಿಕ್ಕಮಗಳೂರಿನಲ್ಲಿ ಕೊಂಕಣಿ), ಡಾ| ಎಡ್ವರ್ಡ್ ನಜರೆತ್ (ಭಾಷೆ ಮತ್ತು ಅಸ್ತಿತ್ವ) ಹಾಗೂ ಡಾ| ಪ್ರತಾಪ್ ನಾಯ್ಕ್ (ಭಾಷೆ ಮತ್ತು ಆಧ್ಯಾತ್ಮಿಕತೆ)ಯ ಬಗ್ಗೆ ಮಾತನಾಡಿದರು. ನಂತರ ‘ಮಾಂಡ್ ಸೊಭಾಣ್’ ಪಂಗಡದಿಂದ ‘ಕೊಂಕಣಿ ದರ್ಶನ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

13. ಮೈಸೂರಿನಲ್ಲಿ ಜರಗಿದ ‘ವೊವ್ಯೊ-ವೇರ‍್ಸ್’ ಕಾರ್ಯಗಾರ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಕ್ರಿಶ್ಚಿಯನ್ ಎಸೋಸಿಯೇಶನ್, ಮೈಸೂರು ಇವರ ಸಹಯೋಗದಲ್ಲಿ ದಿನಾಂಕ 22-10-2006ರಂದು ರವಿವಾರ ಪೂರ್ವಾಹ್ನ 9.30ರಿಂದ ಸಂಜೆ  4.30ರವರೆಗೆ  ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂತ ಜೋಸೆಫ್ ಶಾಲಾ ಸಭಾಂಗಣದಲ್ಲಿ   ‘ವೊವ್ಯೊ-ವೇರ‍್ಸ್’  ಕಾರ್ಯಗಾರ  ಜರುಗಿತು.  ಮೈಸೂರಿನ ಪ್ರೊ. ಮೈಕಲ್ ಡಿಸೋಜರವರು ಮುಖ್ಯ ಅತಿಥಿಗಳಾಗಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.  ಈ ಕಾರ್ಯಗಾರಕ್ಕೆ   ಶ್ರೀಮತಿ ಹಿಲ್ಡ ಡಿಸೋಜ, ಶ್ರೀಮತಿ ಗ್ಲ್ಯಾಡಿಸ್ ರೇಗೊ ಮತ್ತು ಶ್ರೀ ಸ್ಟೀವನ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಮೈಸೂರಿನ ಕೊಂಕಣಿ ಕ್ರಿಶ್ಚಿಯನ್ ಎಸೋಸಿಯೇಶನ್‌ನ ಅಧ್ಯಕ್ಷರಾದ ಶ್ರೀ ಗ್ರೇಶಿಯನ್ ರೊಡ್ರಿಗಸ್ ಇವರು ಸ್ಥಳೀಯ ಸಂಚಾಲಕರಾಗಿದ್ದರು.
ಅದೇ ದಿನ ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮ ಜರಗಿತು. ಈ ಸಮಾರೋಪ ಸಮಾರಂಭದಲ್ಲಿ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

14. ಕುಂಬ್ಳೆಯಲ್ಲಿ ಜರಗಿದ  ‘ತ್ರಿವಿಧ ಸಂಭ್ರಮ’ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ 29-10-2006ರಂದು ರವಿವಾರ ಸಂಜೆ 5.30ಕ್ಕೆ ಕುಂಬ್ಳೆ ಚರ್ಚ್ ವಠಾರದಲ್ಲಿ ಕೊಂಕಣಿ ‘ಮ್ಹಾನ್ ಮನಿಸ್ ಏಕ್ ಮುಲಾಖತ್’ ಕಾರ್ಯಕ್ರಮ ಜರಗಿತು. ಮ್ಹಾನ್ ಮನಿಸ್‌ರಾಗಿ ಬೇಳಾದ ಕೊಂಕಣಿ ಹಿರಿಯರು ಹಾಗೂ ಸಾಹಿತಿಗಳಾದ ಶ್ರೀ ಸ್ಟ್ಯಾನಿ ಕ್ರಾಸ್ತಾ ಮತ್ತು ಕಾಸರಗೋಡಿನ ದಾಸ ಸಂಕೀರ್ತನ ಕಲಾಕಾರರಾದ ಶ್ರೀ ಬಾಬುಜಿ ಭಟ್ ಇವರುಗಳನ್ನು  ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಅವರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು.  ಬೇಳಾ ಚರ್ಚ್‌ನ ಧರ್ಮಗುರುಗಳಾದ ಅತಿ ವಂ| ಬಾಜಿಲ್ ವಾಜ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು  ಮತ್ತು ಕೊಂಕಣಿಯ ಹಿರಿಯ ಮುಖಂಡರಾದ ಶ್ರೀ ಎಮ್. ಜಯಂತ್ ಕಿಣಿ ಇವರು ಗೌರವ  ಅತಿಥಿಗಳಾಗಿ ಭಾಗವಹಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಅದೇ ಸಂದರ್ಭದಲ್ಲಿ ‘ಕವಿತಾ ಸೊಭಾಣ್’ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕವಿತಾ ಸೊಭಾಣ್‌ನಲ್ಲಿ ವಿವಿಧ ಪ್ರದೇಶಗಳಿಂದ ಕವಿ/ಕವಯಿತ್ರಿಯರು ಭಾಗವಹಿಸಿದ್ದು ಮಂಗಳೂರಿನ ಶ್ರೀ ವಿಕ್ಟರ್ ಲೋಬೊ ಇವರು ಕವಿಗೋಷ್ಠಿಯನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ವಿಶ್ವಪ್ರಖ್ಯಾತ ಮಾಂಡ್ ಸೊಭಾಣ್ ತಂಡದಿಂದ ಸಂಗೀತ ಕಾರ್ಯಕ್ರಮ ಜರಗಿತು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

15. ಮಂಗಳೂರಿನಲ್ಲಿ ಜರಗಿದ ಶಿಕ್ಷಕರ ಕಾರ್ಯಗಾರ ಹಾಗೂ ‘ಹಾಸುನ್ ನಾಚುನ್ ಗಾವುಂಯಾ’
ಕೊಂಕಣಿ ಬಾಲಗೀತೆಗಳ ಧ್ವನಿ ಸುರುಳಿ/ಸಿ.ಡಿ. ಬಿಡುಗಡೆ ಸಮಾರಂಭ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ 27-10-2006ರಂದು ಶುಕ್ರವಾರ ಪೂರ್ವಾಹ್ನ 9.30ಕ್ಕೆ ಮಂಗಳೂರಿನ ಶಕ್ತಿನಗರದ ಕಲಾಂಗಣ್‌ನಲ್ಲಿ ಕೊಂಕಣಿ ಕಲಿಸುವ ಶಿಕ್ಷಕ/ಶಿಕ್ಷಕಿಯರಿಗೆ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಿದ್ದರು. ಅದೇ ದಿನ ಸಂಜೆ 4.00ಗಂಟೆಗೆ ಸಮಾರೋಪ ಸಮಾರಂಭವು ಜರಗಿತು. ಈ ಸಮಾರೋಪ ಸಮಾರಂಭದಲ್ಲಿ ಕೊಂಕಣಿ ಬಾಲಗೀತೆಗಳ ‘ಹಾಸುನ್ ನಾಚುನ್ ಗಾವುಂಯಾ’ ಧ್ವನಿಸುರುಳಿ ಮತ್ತು ಸಿ.ಡಿ.ಯ ಉದ್ಘಾಟನಾ ಸಮಾರಂಭವು ಜರಗಿತು. ಈ ಧ್ವನಿಸುರುಳಿ/ಸಿ.ಡಿ.ಯನ್ನು ಮಂಗಳೂರು ವಲಯದ ಬಿ.ಇ.ಒ. ಶ್ರೀ ವಾಲ್ಟರ್ ಡಿಮೆಲ್ಲೊರವರು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಶಿಕ್ಷಕರ ಕಾರ್ಯಗಾರದಲ್ಲಿ 52 ಶಾಲೆಗಳ ಶಿಕ್ಷಕ/ಶಿಕ್ಷಕಿಯರು ಭಾಗವಹಿಸಿದ್ದರು.
                                                                   
16. ಕೊಳಲಗಿರಿಯಲ್ಲಿ ಜರಗಿದ ವೊವ್ಯೊ-ವೇರ್ಸ್ ಕಾರ್ಯಗಾರ ಮತ್ತು ‘ಮ್ಹಾನ್ ಮನಿಸ್ – ಏಕ್ ಮುಲಾಖತ್’ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ 12-11-2006ರಂದು ರವಿವಾರ ಕೊಳಲಗಿರಿ ಸೌಹಾರ್ದ ಸಭಾಭವನದಲ್ಲಿ ಪೂರ್ವಾಹ್ನ 9:30ರಿಂದ ಸಂಜೆ 4:30ರವರೆಗೆ ‘ವೊವ್ಯೊ-ವೇರ್ಸ್’ ಕಾರ್ಯಗಾರ ಜರಗಿತು. ಈ ಕಾರ್ಯಗಾರದಲ್ಲಿ ಶ್ರೀಮತಿ ಹಿಲ್ಡಾ ಡಿಸೋಜ, ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಶ್ರೀ ರವಿ ಸ್ಟೀವನ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಗಾರದ ನಿರ್ದೇಶಕರಾಗಿದ್ದರು. ಅದೇ ದಿನ, ಅದೇ ಸಭಾಭವನದಲ್ಲಿ ಸಂಜೆ 4:30 ಗಂಟೆಗೆ ‘ಕೊಂಕ್ಣಿ ಮ್ಹಾನ್ ಮನಿಸ್ – ಏಕ್ ಮುಲಾಖತ್’ ಕಾರ್ಯಕ್ರಮವು ಜರುಗಿತು.  ಮ್ಹಾನ್ ಮನಿಸ್‌ರಾಗಿ ‘ಪಂಚ್ಕಾದಾಯಿ’ ಪತ್ರಿಕೆಯ ಸಂಪಾದಕರಾದ ಶ್ರೀ ಶಾಂತರಾಮ ಬಾಳಿಗಾ ಮತ್ತು ಕೊಳಲಗಿರಿಯ ಹಿರಿಯ ಕೊಂಕಣಿ ಲೇಖಕರು ಹಾಗೂ ಕಾರ್ಯಕರ್ತರಾದ ಶ್ರೀ ಲುಯಿಸ್ ಅಲ್ಮೇಡಾ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಅವರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು. ಕೊಂಕಣಿ ಉದ್ಯಮಿಯಾಗಿರುವ ಶ್ರೀ ಅಮ್ಮುಂಜೆ ಯಶವಂತ್ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು  ಮತ್ತು ಕೊಳಲಗಿರಿ ಚರ್ಚ್‌ನ ಧರ್ಮಗುರುಗಳಾದ ಅತಿ ವಂ| ಜೆರೊಮ್ ಮೊಂತೆರೊ ಇವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಅದೇ ಸಂದರ್ಭದಲ್ಲಿ ವೊವ್ಯೊ-ವೇರ್ಸ್ ಕಾರ್ಯಗಾರದಲ್ಲಿ ಭಾಗವಹಿಸಿದ ಸರ್ವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.  ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

17. 2006, ಡಿಸೆಂಬರ್ 1,2 ಮತ್ತು 3ರಂದು  ‘ಕೊಂಕಣಿ ಯುವಮಹೋತ್ಸವ’ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಯುವ ಆವಾಜ್ ಹಾಗೂ ಮಾಂಡ್ ಸೊಭಾಣ್ ಸಹಯೋಗದಲ್ಲಿ ನಗರದ ಶಕ್ತಿನಗರದ ಕಲಾಂಗಣ್‌ನಲ್ಲಿ ಡಿಸೆಂಬರ್ ೧, ೨ ಮತ್ತು ೩ರಂದು ಮೂರು ದಿನಗಳ ಕಾಲ ನಡೆದ ಕೊಂಕ್ಣಿ ಯುವಮಹೋತ್ಸವದಲ್ಲಿ ನಗರದ ಮಂಗ್ಳೂರ‍್ಚಿಂ ಮೊತಿಯಾಂ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಪದವಿಪೂರ್ವ, ಪದವಿ ಹಾಗೂ ಮುಕ್ತ ವಿಭಾಗದಲ್ಲಿ ನಡೆದ ಕೊಂಕಣಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅತ್ಯಧಿಕ ಅಂಕಗಳಿಸಿದ ಈ ತಂಡ ಸಮಗ್ರ ಪ್ರಶಸ್ತಿಗೆ ಪಾತ್ರವಾಯಿತು. ಪದವಿಪೂರ್ವ ವಿಭಾಗದಲ್ಲಿ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು  ಕಾಲೇಜು ವಿಭಾಗದಲ್ಲಿ ಸಂತ ಅಲೋಶಿಯಸ್ ಪದವಿ ಕಾಲೇಜು ಹಾಗೂ ಮುಕ್ತ ವಿಭಾಗದಲ್ಲಿ ನಗರದ ‘ಮಂಗ್ಳುರ‍್ಚಿಂ ಮೊತಿಯಾಂ’ ತಂಡಗಳು  ಪ್ರಶಸ್ತಿ ಗಳಿಸಿದ್ದವು. ಸ್ಪರ್ಧೆಯಲ್ಲಿ ಸುಮಾರು 500ಕ್ಕೂ ಮಿಕ್ಕಿ ಯುವಜನರು ಭಾಗವಹಿಸಿದ್ದರು. ತೀರ್ಪುದಾರರಾಗಿ ಮಂಗಳೂರಿನ
ಜೋಯೆಲ್ ಪಿರೇರಾ, ಐರಿನ್ ರೆಬೆಲ್ಲೊ ಮತ್ತು ಚರಣ್ ಕುಮಾರ್ ಹಾಗೂ ಡಾ| ರಶ್ಮಿ ಫೆರ್ನಾಂಡಿಸ್ ಕಾರ್ಯನಿರ್ವಹಿಸಿದ್ದರು. ಭಾನುವಾರ ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಯಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ನಾಗರಾಜ ಶೆಟ್ಟಿ ಮತ್ತು ಉರ್ಸುಲಾಯ್ನ್ ಸಭೆಯ ಧರ್ಮ ಭಗಿನಿಯಾದ ಸಿಸ್ಟರ್ ಡೊರಿನ್ ಇವರು ಗೌರವ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಅಕಾಡೆಮಿ ಅಧ್ಯಕ್ಷ ಎರಿಕ್ ಒಝೇರಿಯೊ, ಕೊಂಕ್ಣಿ ಆವಾಜ್‌ನ ಕಾರ್ಯದರ್ಶಿ ಡೇನಿಸ್ ಡಿಸಿಲ್ವ, ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ, ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿಸ್ ಜೆ. ಪಿಂಟೊ ಉಪಸ್ಥಿತರಿದ್ದರು.  

18. ಬೆಂಗಳೂರಿನಲ್ಲಿ ಜರಗಿದ ವೊವ್ಯೊ-ವೇರ‍್ಸ್ ಕಾರ್ಯಗಾರ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ 10-12-2006ರಂದು ಬೆಂಗಳೂರಿನಲ್ಲಿರುವ  ಮತ್ತಿಕೆರೆ  ಕೊಂಕಣ್  ಭವನ ಸಭಾಂಗಣದಲ್ಲಿ ಪೂರ್ವಾಹ್ನ 9.30 ಗಂಟೆಗೆ ವೊವ್ಯೊ-ವೇರ‍್ಸ್ ಕಾರ್ಯಗಾರ ಜರಗಿತು. ಈ ಕಾರ್ಯಗಾರಕ್ಕೆ  ಬೆಂಗಳೂರಿನ ಕರ್ನಾಟಕ ಕೊಂಕಣಿ ಕಥೊಲಿಕ್ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಲೇರಿಯನ್ ಫೆರ್ನಾಂಡಿಸ್‌ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರವಿ ಸ್ಟೀವನ್, ಶ್ರೀಮತಿ ಪೂಜಾ ಧಾರೇಶ್ವರ್, ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀಮತಿ ಹಿಲ್ಡಾ ಮೊರಾಸ್ ಇವರುಗಳು ಭಾಗವಹಿಸಿದ್ದರು. ಕಾರ್ಯಗಾರದಲ್ಲಿ ಭಾಗವಹಿಸಿದ ಸರ್ವರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

19. ಮಡಿಕೇರಿಯಲ್ಲಿ ಜರಗಿದ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ  ಕರ್ನಾಟಕ ತುಳು, ಕೊಂಕಣಿ ಮತ್ತು ಉರ್ದು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಮೊದಲ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವು ದಿನಾಂಕ 12-12-2006ರಂದು ಮಡಿಕೇರಿಯ ಕೊಡವ ಸಮಾಜದಲ್ಲಿ ನಾಲ್ಕು ಅಕಾಡೆಮಿಗಳ ‘ಸಾಂಸ್ಕೃತಿಕ ಸಂಗಮ’ ಕಾರ್ಯಕ್ರಮ ಜರಗಿತು.

20. ‘ಕೊಂಕಣಿ ಬಜಾರ್’ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ದಿನಾಂಕ 16-12-2006ರಿಂದ 24-12-2006 ರವರೆಗೆ ಮಂಗಳೂರಿನ ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರದ ಸಭಾಂಗಣದಲ್ಲಿ ಕೊಂಕಣಿ ಬಜಾರ್  ಕಾರ್ಯಕ್ರಮ   ನಡೆಸಲಾಯಿತು.  ಅದರ  ಉದ್ಘಾಟನಾ  ಸಮಾರಂಭವು  ದಿನಾಂಕ 16-12-2006ರಂದು ಪೂರ್ವಾಹ್ನ 9.30 ಗಂಟೆಗೆ ಜರಗಿತು. ಕಾರ್ಯಕ್ರಮವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯರು ಮತ್ತು ಉಡುಪಿಯ ಮಾಜಿ ಸಂಸದರಾದ ಶ್ರೀ ವಿನಯಕುಮಾರ್ ಸೊರಕೆರವರು ಉದ್ಘಾಟಿಸಿದರು.  ಈ ಕಾರ್ಯಕ್ರಮದಲ್ಲಿ ಕಾರ್ಮೆಲ್ ಸಭೆಯ ಧರ್ಮಗುರುಗಳಾದ ಫಾ| ನೆಲ್ಸನ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿ ಶ್ರೀ ಜೆರಿ ರೊಡ್ರಿಗಸ್(ಕ್ಯಾಸೆಟ್ ಜೆರಿ)ರವರು ಹೊರ ತಂದಿರುವ  ‘ನಾಚ್ ಬೈಲಾ ನಾಚ್’  ಎಂಬ  ಕೊಂಕಣಿ ಗೀತೆಗಳ ಕ್ಯಾಸೆಟ್ ಮತ್ತು ಸಿಡಿಯನ್ನು ಬಿಡುಗಡೆ  ಮಾಡಿದರು. ಕೊಂಕಣಿ ಪುಸ್ತಕಗಳು, ಕ್ಯಾಸೆಟ್ ಮತ್ತು ಸಿಡಿಗಳು, ಕ್ರಿಸ್ಮಸ್ ಆಚರಣೆಗೆ ಸಂಬಂಧಿಸಿದ ವಿವಿಧ ವಸ್ತುಗಳು, ವೇಷ ಭೂಷಣಗಳು, ವಿಗ್ರಹಗಳು  ಮತ್ತು  ‘ಕುಸ್ವಾರ್’  ಕೂಡಾ  ಈ ಕೊಂಕಣಿ ಬಜಾರ್‌ನಲ್ಲಿ ಪ್ರದರ್ಶಿಸಲಾಯಿತು.

21. ಮೂಡಬಿದಿರೆಯಲ್ಲಿ ಜರಗಿದ ಬಸ್ಣಿ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತುಮಹಾವೀರ ಕಾಲೇಜು, ಮೂಡಬಿದ್ರಿ ಜಂಟಿ ನೇತೃತ್ವದಲ್ಲಿ ಮಹಾವೀರ ಕಾಲೇಜು ಸಭಾಂಗಣದಲ್ಲಿ ದಿನಾಂಕ ೧೮-೧೨-೨೦೦೬ರಂದು ‘ಬಸ್ಣಿ’ ಕೊಂಕಣಿ ಸಂಗೀತ ಕಾರ್ಯಕ್ರಮ ಜರಗಿತು.

22. ಮಂಗಳೂರಿನಲ್ಲಿ ಜರಗಿದ ಕವಿತಾ ಫೆಸ್ತ್ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಾಂಡ್ ಸೊಭಾಣ್ ಹಾಗೂ ಕವಿತಾ ಇವರ ಸಹಯೋಗದಲ್ಲಿ ದಿನಾಂಕ 06-01-2007 ರಂದು ಕವಿತಾ ಕಾರ್ಯಗಾರ ಜರಗಿತು. ದಿನಾಂಕ 07-01-2007ರಂದು ಶಕ್ತಿನಗರದ ಕಲಾಂಗಣ್‌ನಲ್ಲಿ ಕವಿತಾ ಪರಿಸಂವಾದ, ಕವಿತಾ ಸೊಭಾಣ್ ಹಾಗೂ ಅದೇ ದಿನ ಸಂಜೆ ೬-೦೦ ಗಂಟೆಗೆ ಶೆವ್ಯೊ-ರೋಸ್ ಕವಿತಾ ಜುಗಲ್ಬಂದಿ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮಕ್ಕೆ ಶ್ರೀ ಆಸ್ಟಿನ್ ಡಿಸೋಜ ಪ್ರಭು ಇವರು  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕವಿತಾ ಸೊಭಾಣ್‌ನಲ್ಲಿ ಕವಿಗಳು ತಾವು ರಚಿಸಿದ ಕವಿತೆಯನ್ನು ವಾಚಿಸಿದರು. ಈ ಕವಿತಾ ಫೆಸ್ತ್ ಕಾರ್ಯಕ್ರಮಕ್ಕೆ ಕೊಂಕಣಿ ಭಾಷಾಭಿಮಾನಿಗಳು, ವಿವಿಧ ಪ್ರದೇಶಗಳ ಕವಿ-ಕವಯಿತ್ರಿಯರು ಭಾಗವಹಿಸಿದ್ದರು.

23. ತಾಕೊಡೆಯಲ್ಲಿ ಜರಗಿದ ಕೊಂಕಣಿ ನಾಟಕೋತ್ಸವ ಉದ್ಘಾಟನಾ ಸಮಾರಂಭ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಅಳಿದು ಹೋಗುವ ನಾಟಕ ಕಲೆಯನ್ನು ಜೀವಂತವಿರಿಸುವ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ‘ಕೊಂಕಣಿ ನಾಟಕೋತ್ಸವ ೨೦೦೭’ ಇದರ ಉದ್ಘಾಟನಾ ಸಮಾರಂಭವು ಜನವರಿ 27, 2007ರಂದು ಸಂಜೆ 7:00 ಗಂಟೆಗೆ ತಾಕೊಡೆ ಚರ್ಚ್ ವಠಾರದಲ್ಲಿ ಸಂಭ್ರಮದಿಂದ ನೆರವೇರಿತು. ಕಥೊಲಿಕ ಸಭಾ ಮಂಗಳೂರು ಪ್ರದೇಶ(ರಿ) ಇದರ ಕೇಂದ್ರೀಯ ಅಧ್ಯಕ್ಷರಾದ ಆಂಡ್ರು ನೊರೊನ್ಹರವರು ‘ಬೊಂಗೊ’ ನಾಟಕದ ಒಬ್ಬ ಕಲಾವಿದರನ್ನು ಮುಖಕ್ಕೆ ವೇಷ ತೊಡಿಸುವ ಮೂಲಕ ಈ ನಾಟಕೋತ್ಸವಕ್ಕೆ ಚಾಲನೆ ನೀಡಿದರು.
ತಾಕೊಡೆ ಚರ್ಚ್‌ನ  ಧರ್ಮಗುರುಗಳಾದ ಫಾ| ಹಿಲರಿ ಲೋಬೋ ಹಾಗೂ ಚರ್ಚನ ಉಪಾಧ್ಯಕ್ಷರಾದ ಗ್ರೆಗರಿ ಮೆಂಡಿಸ್‌ರವರು ಅತಿಥಿಗಳಾಗಿ ವೇದಿಕೆಯಲ್ಲಿ ಹಾಜರಿದ್ದರು.  ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಅಕಾಡೆಮಿಯ ಕಾರ್ಯಚಟುವಟಿಕೆಗಳಲ್ಲಿ ಕೊಂಕಣಿಗರ, ಕೊಂಕಣಿ ಜನರ ಸಹಕಾರವನ್ನು  ನೀಡಬೇಕು ಎಂದು ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಮಿತ್ರ ಸಂಪಾದಕರಾದ ಶ್ರೀ ಲೋಯ್ಡ್ ರೇಗೊರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ತಾಕೊಡೆ ಚರ್ಚ್‌ನ ಕಾರ್ಯದರ್ಶಿಗಳಾದ ಪಾವ್ಲ್ ಡಿಸೋಜರವರು ವಂದನಾರ್ಪಣೆ ಸಲ್ಲಿಸಿದರು. ‘ಮಿತ್ರ್’ ಕೊಂಕಣಿ ವಾರಪತ್ರಿಕೆಯ ಸಹಯೋಗದಲ್ಲಿ ನೆಲ್ಲು ಪೆರ್ಮನ್ನೂರುರವರು ನಿರ್ದೇಶಿಸಿದ ‘ಬೊಂಗೊ’ ನಾಟಕವು ಅಸಲ್ ಕಲಾಕಾರ್, ಮಂಗಳೂರು ಇವರು ಪ್ರದರ್ಶಿಸಿದರು.

24. ಅಲಂಗಾರ್‌ನಲ್ಲಿ ಜರಗಿದ ಕೊಂಕಣಿ ನಾಟಕ ಪ್ರದರ್ಶನ
ಜನವರಿ 28, 2007ರಂದು ಅಲಂಗಾರ್ ಚರ್ಚ್ ಆವರಣದಲ್ಲಿ ಜೆ.ಬಿ.ಡಿಸೋಜರವರ  ‘ಆಪುಟ್ ಆಂಕ್ವಾರ್’ ನಾಟಕವನ್ನು ಜಿಯೋ ಅಗ್ರಾರ್‌ರವರ ನಿರ್ದೇಶನದಲ್ಲಿ ಲೊರೆಟ್ಟೊ ಐಸಿವೈಎಮ್ ಸದಸ್ಯರು ಪ್ರದರ್ಶಿಸಿದರು.

25. ಪುತ್ತೂರಿನಲ್ಲಿ ಜರಗಿದ ಕೊಂಕಣಿ ನಾಟಕ ಪ್ರದರ್ಶನ
ಫೆಬ್ರವರಿ 3, 2007ರಂದು ಸಂಜೆ 6:00 ಗಂಟೆಗೆ ಪುತ್ತೂರು ಚರ್ಚ್ ಆವರಣದಲ್ಲಿ ಮಾಂಡ್ ಪಂಗಡದ ಮಕ್ಕಳು ‘ಪಿಂಜ್ರ್ಯಾ ಇಸ್ಕೊಲ್’ ನಾಟಕವನ್ನು ಪ್ರದರ್ಶಿಸಿದರು. ಶ್ರೀ ಐವನ್ ಡಿಸಿಲ್ವರವರು ಈ ನಾಟಕದ ನಿರ್ದೇಶಕರಾಗಿದ್ದರು.

26. ಪಾಂಬೂರಿನಲ್ಲಿ ಜರಗಿದ ಕೊಂಕಣಿ ನಾಟಕ ಪ್ರದರ್ಶನ
ದಿನಾಂಕ ಫೆಬ್ರವರಿ 4, 2007 ಸಂಜೆ 6:30 ಗಂಟೆಗೆ ಪಾಂಬೂರ್ ಚರ್ಚ್ ಮೈದಾನದಲ್ಲಿ ಮಾಂಡ್ ಪಂಗಡದ ಮಕ್ಕಳಿಂದ ಪಿಂಜ್ರ್ಯಾ ಇಸ್ಕೊಲ್ ನಾಟಕವು ಪ್ರದರ್ಶಿಸಲ್ಪಟ್ಟಿತು. ಈ ನಾಟಕವು ಬಿ.ವಿ.ಕಾರಂತರವರು  ಕನ್ನಡದಲ್ಲಿ ಬರೆದಿರುವ ಪಂಜರದ ಶಾಲೆ ನಾಟಕವನ್ನು ಕೊಂಕಣಿ ಭಾಷಾಂತರ ಮಾಡಲಾಗಿದೆ.

27. ದಿನಾಂಕ 10-02-2007ರಂದು ಜರಗಿದ ‘ಕೊಂಕಣಿ-ಇಂಗ್ಲಿಷ್ ಶಬ್ದಕೋಶ’ ಉದ್ಘಾಟನೆ ಸಮಾರಂಭ
ದಿನಾಂಕ 10-02-2007ರಂದು ಸಂಜೆ 4:00 ಗಂಟೆಗೆ ‘ಕೊಂಕಣಿ-ಇಂಗ್ಲಿಷ್ ಶಬ್ದಕೋಶ’ದ ಉದ್ಘಾಟನಾ ಸಮಾರಂಭ ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜಿನ ಐ. ಟಿ. ಬ್ಲಾಕ್ ಸಭಾಂಗಣದಲ್ಲಿ  ಜರಗಿತು. ವಿಧಾನಸಭಾ ಸದಸ್ಯರಾದ ಶ್ರೀ ಆರ್.ವಿ.ದೇಶ ಪಾಂಡೆಯವರು ಈ ಉದ್ಘಾಟನಾ ಸಮಾರಂಭದ ಉದ್ಘಾಟಕರಾಗಿ ಹಾಜರಿದ್ದರು. ಗೌರವ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ| ಎಲೋಶಿಯಸ್ ಪಾವ್ಲ್ ಡಿಸೋಜರವರು ಹಾಜರಿದ್ದರು. ಈ ಸಮಾರಂಭದಲ್ಲಿ ಶ್ರೀ ಸ್ಟೀವನ್ ಕ್ವಾಡ್ರಸ್, ವಂ| ಎಲೋಶಿಯಸ್ ಡಿಸೋಜರವರು ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಎರಿಕ್ ಒಝೇರಿಯೊರವರು ವಹಿಸಿದ್ದರು. ಶ್ರೀ ಆರ್.ವಿ.ದೇಶಪಾಂಡೆ ಮತ್ತು ಅತಿ ವಂ| ಎಲೋಶಿಯಸ್ ಪಾವ್ಲ್ ಡಿಸೋಜರವರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

೨೮. ಮೊಡಂಕಾಪುವಿನಲ್ಲಿ ಜರಗಿದ ಕೊಂಕಣಿ ನಾಟಕ ಪ್ರದರ್ಶನ
ದಿನಾಂಕ 10-02-2006ರಂದು ಸಂಜೆ 6:30 ಗಂಟೆಗೆ ಮೊಡಂಕಾಪು ಅನುಗ್ರಹ ಸಭಾಂಗಣದಲ್ಲಿ ಅಸಲ್ ಕಲಾಕಾರ್ ಮಂಗಳೂರು ಇವರು ಬೊಂಗೊ ನಾಟಕವನ್ನು ಪ್ರದರ್ಶಿಸಿದರು.

೨೯. ಬಂಟ್ವಾಳದಲ್ಲಿ ಜರಗಿದ ಕೊಂಕಣಿ ನಾಟಕೋತ್ಸವ ಸಮಾರೋಪ ಸಮಾರಂಭ
ದಿನಾಂಕ 11-02-2007ರಂದು ಬಂಟ್ವಾಳ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಕೊಂಕಣಿ ನಾಟಕೋತ್ಸವ ಸಮಾರೋಪ ಸಮಾರಂಭ ಜರಗಿತು. ಈ ಸಮಾರೋಪ ಸಮಾರಂಭಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸೀತಾರಾಮ್ ಕುಲಾಲ್‌ರವರು
ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಈ ಸಮಾರಂಭದಲ್ಲಿ ದೈರೆಬೈಲ್‌ಚೆ  ಕಲಾಕಾರರಿಂದ ಕಲಾಕಾರ್ ನಾಟಾಕವನ್ನು ಪ್ರದರ್ಶಿಸಿದರು. ಈ ನಾಟಕವು ಜನಮೆಚ್ಚುಗೆ ಪಡೆಯಿತು.

೩೦. ಉಡುಪಿಯಲ್ಲಿ ಜರಗಿದ ಸಾಂಸ್ಕೃತಿಕ ಸಂಗಮ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ  ಕರ್ನಾಟಕ ಕೊಡವ, ಕೊಂಕಣಿ ಮತ್ತು ಉರ್ದು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ದ್ವಿತೀಯ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವು ದಿನಾಂಕ 13-02-2007ರಂದು ಉಡುಪಿ, ಅಜ್ಜರಕಾಡಿನ ಪುರಭವನದಲ್ಲಿ ನಾಲ್ಕು ಅಕಾಡೆಮಿಗಳ ‘ಸಾಂಸ್ಕೃತಿಕ ಸಂಗಮ’ ಕಾರ್ಯಕ್ರಮ ಜರಗಿತು.

31. ಗೇರಸೊಪ್ಪದಲ್ಲಿ ಜರಗಿದ ‘ಕೊಂಕಣಿ ಲೋಕೋತ್ಸವ’ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಸ್ವಾಗತ ಸಮಿತಿ, ಗೇರಸೊಪ್ಪಾ ಇದರ ಸಹಯೋಗದಲ್ಲಿ ದಿನಾಂಕ 18-02-2007ರಂದು ಆದಿತ್ಯವಾರ ಪೂರ್ವಾಹ್ನ 10ರಿಂದ ಸಂಜೆ 4:30 ರವರೆಗೆ ಕೆ.ಪಿ.ಸಿ. ಕ್ಲಬ್ ಸಭಾಂಗಣ, ಕೆ.ಪಿ.ಸಿ. ಕೊಲನಿ, ಗೇರಸೊಪ್ಪಾದಲ್ಲಿ ಕೊಂಕ್ಣಿ ಲೋಕೋತ್ಸವ್  ಕಾರ್ಯಕ್ರಮ ಜರಗಿತು. ಪೂರ್ವಾಹ್ನ 10 ಗಂಟೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮಾನ್ಯ ಶ್ರೀ ಎರಿಕ್ ಒಝೇರಿಯೊರವರು ಕೊಂಕಣಿ ಲೋಕೋತ್ಸವದ ಉದ್ಘಾಟನೆಯನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ನಗರ ಬತ್ತಿಕೇರಿಯ ಅಧ್ಯಕ್ಷರಾದ ಮಾನ್ಯ ಶ್ರೀ ಉದಯ ಬಾಬು ನಾಯ್ಕ ಹಾಗೂ ಹೊನ್ನಾವರ ಧರ್ಮಪ್ರಾಂತ್ರ್ಯದ ಧರ್ಮಗುರುಗಳಾದ ಅತಿ ವಂ| ಜಾನ್ ರೊಡ್ರಿಗಸ್ ಇವರುಗಳು  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಗೌರವ ಅತಿಥಿಗಳಾಗಿ ಶ್ರೀ ಉಲ್ಲಾಸ್ ನಾಯ್ಕ, ಶ್ರೀ ಮಂಜಯ್ಯ ಶಿವು ಮರಾಠಿ, ಶ್ರೀ ಉಮೇಶ್ ತಾಂಡೇಲ ಮತ್ತು ಶ್ರೀ ಚಂದ್ರ ಕಾಂತ ಕೊಚರೇಕರ ಇವರುಗಳು ಭಾಗವಹಿಸಿದರು.   ಶ್ರೀ ವೆಂಕಟೇಶ ಮೇಸ್ತ ಇವರು ವಿಷಯ ಮಂಡನೆಯನ್ನು ನಡೆಸಿಕೊಟ್ಟರು.
ಈ ಕೊಂಕಣಿ ಲೋಕೋತ್ಸವದಲ್ಲಿ ಗೇರಸೊಪ್ಪಾ ವಠಾರದ ಕೊಂಕಣಿ – ಖಾರ್ವಿ, ಮರಾಠಿ, ಗಾಬಿತ್, ದೇಶಭಂಡಾರಿ, ಕುಂಬಾರ್, ಕೆಲ್ಸಿ, ನವಾಯತ್, ಕ್ರಿಸ್ತಾಂವ್, ಜಿ.ಎಸ್.ಬಿ., ವೈಶ್ಯ ಶೇಟ್, ಶೆರುಗಾರ್, ದೈವಜ್ಞ ಬ್ರಾಹ್ಮಣ, ಆಚಾರಿ ಹಾಗೂ ಇತರ ಎಲ್ಲಾ ಕೊಂಕಣಿ ಜನರು ಭಾಗವಹಿಸಿದರು. ಕೊಂಕಣಿ ಲೋಕೋತ್ಸವದಲ್ಲಿ ಜಾನಪದ ಕಲಾದರ್ಶನದಲ್ಲಿ ಕೊಂಕ್ಣಿ ಮರಾಠಿಗರಿಂದ ಗುಮ್ಟೆ ಫಾಂಗ್, ಮೃದಂಗ ನೃತ್ಯ, ಕೋಲಾಟ, ನವಾಯತ್ ಜನಾಂಗದವರಿಂದ ಕವ್ವಾಲಿ, ಡೈರೆ ವಾಜಕ್ರಿ, ಗಾಬಿತ್ ಜನಾಂಗದವರು ಫುಗ್ಡಿ ನೃತ್ಯ, ಕ್ರೈಸ್ತರ ತೊಣಿಯೊ, ಜಾನಪದ ನೃತ್ಯ, ಖಾರ್ವಿ – ಗುಮ್ಟೆ ಫಾಂಗ್, ಕೋಲಾಟ  ಹಾಗೂ ಮಕ್ಕಳಿಂದ ನೃತ್ಯ ಹಾಗೂ ಹಾಸ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.  ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಜಾನಪದ ಕಾರ್ಯಕ್ರಮ ನೃತ್ಯಗಳು ಜನರ ಮನಸ್ಸಿಗೆ ಉಲ್ಲಾಸ ತಂದು ಜನಮೆಚ್ಚುಗೆ ಪಡೆದವು.

32. ಹಾಸನದಲ್ಲಿ ಜರಗಿದ ವೊವ್ಯೊ-ವೇರ್ಸ್ ಕಾರ್ಯಗಾರ ಮತ್ತು ‘ಮ್ಹಾನ್ ಮನಿಸ್’ ಏಕ್ ಮುಲಾಖತ್ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಹಾಸನ ಕೊಂಕಣಿ ಸಂಚಾಲನ್ ಇವರ ಸಹಯೋಗದಲ್ಲಿ ದಿನಾಂಕ 04-03-2007ರಂದು ರವಿವಾರ ಲೊಯೊಲಾ ಸಭಾಂಗಣ, ಸೈಂಟ್ ಜೋಸೆಫ್ಸ್ ಶಾಲೆ, ಹಾಸನದಲ್ಲಿ ಪೂರ್ವಾಹ್ನ 9:30ರಿಂದ ಸಂಜೆ 4:30ರವರೆಗೆ ‘ವೊವ್ಯೊ-ವೇರ್ಸ್’ ಕಾರ್ಯಗಾರ ಜರಗಿತು. ಈ ಕಾರ್ಯಗಾರದಲ್ಲಿ ಶ್ರೀಮತಿ ಹಿಲ್ಡಾ ಡಿಸೋಜ, ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಶ್ರೀ ರವಿ ಸ್ಟೀವನ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದರು. ಅದೇ ದಿನ, ಅದೇ ಸಭಾಭವನದಲ್ಲಿ ಸಂಜೆ 4:30 ಗಂಟೆಗೆ ‘ಕೊಂಕ್ಣಿ ಮ್ಹಾನ್ ಮನಿಸ್’ – ಏಕ್ ಮುಲಾಖತ್ ಕಾರ್ಯಕ್ರಮ ಜರಗಿತು.  ಮ್ಹಾನ್ ಮನಿಸ್‌ರಾಗಿ ಹಿರಿಯ ಕೊಂಕಣಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರಾದ ಶ್ರೀಮತಿ ಬಿ. ರೇಣುಕಾ ಪ್ರಭು  ಮತ್ತು ಹಿರಿಯ ಕೊಂಕಣಿ ಸಾಹಿತಿ ಹಾಗೂ ನಾಟಕಕಾರರಾದ ಶ್ರೀ ಪಿಯುಸ್ ಡಿಸಿಲ್ವ ಇವರುಗಳನ್ನು  ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಅವರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು. ಹಾಸನದ ಸೈಂಟ್ ಜೋಸೆಫ್ಸ್ ಪ್ರೌಢ ಶಾಲೆಯ ಪ್ರಾಂಶುಪಾಲರಾದ  ವಂ| ಫಾ| ಎಡ್ವರ್ಡ್ ರೊಡ್ರಿಗಸ್ ಇವರು ಮುಖ್ಯ  ಅತಿಥಿಗಳಾಗಿ ಭಾಗವಹಿಸಿದರು. ಹಾಸನ ಕೊಂಕಣಿ ಸಂಚಾಲನದ ಅಧ್ಯಕ್ಷರಾದ ಶ್ರೀ ಪ್ರವೀಣ್ ವೇಗಸ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಅದೇ ಸಂದರ್ಭದಲ್ಲಿ ವೊವ್ಯೊ-ವೇರ್ಸ್ ಕಾರ್ಯಗಾರದಲ್ಲಿ ಭಾಗವಹಿಸಿದ ಸರ್ವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಚ್.ಎಚ್.ಶಿವರುದ್ರಪ್ಪರವರು ಸ್ವಾಗತಿಸಿದರು. ಶ್ರೀಮತಿ ಐರಿನ್ ರೆಬೆಲ್ಲೊರವರು ಕಾರ್ಯಕ್ರಮವನ್ನು ನಿರೂಪಿಸಿದರು. ಹಾಸನ ಕೊಂಕಣಿ ಸಂಚಾಲನದ ಅಧ್ಯಕ್ಷರಾದ ಶ್ರೀ ಪ್ರವೀಣ್ ವೇಗಸ್‌ರವರು ಧನ್ಯವಾದ ಸಮರ್ಪಣೆ ಮಾಡಿದರು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಯಿತು. ಅಕಾಡೆಮಿಯ ಪುಸ್ತಕ ಹಾಗೂ ಸಿ.ಡಿ./ಧ್ವನಿಸುರುಳಿಗಳು ಪ್ರದರ್ಶನವಾಯಿತು.

೩೩.ಕಾರ್ಕಳದಲ್ಲಿ ಜರಗಿದ ಪುಸ್ತಕ ಪುರಸ್ಕಾರ ಹಾಗೂ ಅಕಾಡೆಮಿ ಪ್ರಕಟಣೆಯ ಎರಡು ಕೃತಿಗಳ ಬಿಡುಗಡೆ ಸಮಾರಂಭ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುಸ್ತಕ ಪುರಸ್ಕಾರ ಸಮಾರಂಭ ಹಾಗೂ ಅಕಾಡೆಮಿ ಪ್ರಕಟಣೆಯ ಎರಡು ಕೃತಿಗಳ ಬಿಡುಗಡೆ ವನ್ನು ಕೊಂಕಣಿ ಸಮನ್ವಯ ಸಮಿತಿ, ಕಾರ್ಕಳ ಇವರ ಸಹಕಾರದೊಂದಿಗೆ ದಿನಾಂಕ 24-3-2007ರಂದು ಸಂಜೆ 5:00 ಗಂಟೆಗೆ ಕಾರ್ಕಳದ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಜರಗಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಾಡಿನ ಹಿರಿಯ ಕಾದಂಬರಿಕಾರರಾದ ಶ್ರೀ ನಾ.ಡಿಸೋಜರವರು ಭಾಗವಹಿಸಿ  ಭಾಷೆಯನ್ನು ಮಾತನಾಡಿ ಅಭಿವೃದ್ಧಿಗೊಳಿಸುವ ಕೆಲಸವನ್ನು ಮನುಷ್ಯರಿಂದ ಮಾತ್ರ ನೆರವೇರಿಸಲು ಸಾಧ್ಯ. ಭಾಷೆಯನ್ನು ಅಭಿವೃದ್ಧಿಗೊಳಿಸುವ ಕೆಲಸವನ್ನು ಬೇರೆ ಭಾಷಿಕರಿಂದ ನಾವು ಕಲಿಯಬೇಕು. ಕೊಂಕಣಿ ಈ ಮಟ್ಟದಲ್ಲಿ ಸ್ವಲ್ಪ ಹಿಂದಿನ ಸ್ಥಾನದಲ್ಲಿದೆ. ಅಕಾಡೆಮಿಯ ಇಂಥ ಕೆಲಸ ಕಾರ್ಯಗಳಿಂದ ಕೊಂಕಣಿಯನ್ನು ಅಭಿವೃದ್ಧಿಗೊಳಿಸಬೇಕು ಎಂಬ ಸಂದೇಶವನ್ನು ನೀಡಿದರು. ಕಣಜಾರು ಲೂರ್ದ್ ಶಾಲೆಯ ಮಕ್ಕಳು ಪ್ರಾರ್ಥನಾ ಗೀತೆಯನ್ನು ಹಾಡಿ ಸಮಾರಂಭಕ್ಕೆ ಚಾಲನೆ ನೀಡಿದರು. ಕೊಂಕಣಿ ಸಮನ್ವಯ ಸಮಿತಿ ಕಾರ್ಕಳ ಇದರ ಅಧ್ಯಕ್ಷರಾದ ಎಸ್.ನಿತ್ಯಾನಂದ ಪೈಯವರು ಸ್ವಾಗತ ಭಾಷಣ ಮಾಡಿದರು. ಅಕಾಡೆಮಿ ಸದಸ್ಯರಾದ ಶ್ರೀ ವಿನ್ಸೆಂಟ್ ಆಳ್ವರವರು ಪ್ರಸ್ತಾವನೆ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳು ಆನ್ಸಿ ಪಾಲಡ್ಕ, ಸ್ಟೀವನ್ ಕ್ವಾಡ್ರಸ್, (2003)  ಫಾ| ಆಲ್ವಿ ಕಾರ್ಮೆಲಿತ್, ಜೆ.ಎಫ್. ಡಿಸೋಜ(2004), ಸಂಧ್ಯಾ ಶೆವಗೂರ್, ಸುವರ್ಣ ಗಾಡ,(2005)ಇವರುಗಳನ್ನು ಪುರಸ್ಕರಿಸಿದರು. ಮನು ಬಾಹ್ರೇಯ್ನ್ (2005) ಪರವಾಗಿ  ಅವರ ಪತ್ನಿ ಶ್ರೀಮತಿ ರೊಜಿ ಲೋಬೊರವರು ಹಾಗೂ ವಲ್ಲಿ ಕ್ವಾಡ್ರಸ್(ವಿಶೇಷ ಪುರಸ್ಕಾರ) ಪರವಾಗಿ ಶ್ರೀ ಮೆಲ್ವಿನ್ ವಾಸ್‌ರವರು ಪುಸ್ತಕ ಪುರಸ್ಕಾರವನ್ನು ಸ್ವೀಕರಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ವಿತೊರಿ ಕಾರ್ಕಳ್‌ರವರು ಪುಸ್ತಕ ಪುರಸ್ಕಾರ ವಿಜೇತರ ಪರಿಚಯವನ್ನು ಸಭೆಗೆ ತಿಳಿಸಿದರು. ಪುರಸ್ಕೃತರ ಪರವಾಗಿ ಶ್ರೀ ಸ್ಟೀವನ್ ಕ್ವಾಡ್ರಸ್‌ರವರು ಮಾತನಾಡಿದರು.  ಫ್ರಾನ್ಸಿಸ್ ಜೆ. ಹರ್ನೊಡ್‌ಕಾರ್ ಸಿದ್ದಿ ಇವರು ಸಂಗ್ರಹಿಸಿದ ‘ಸಿದ್ದಿ ಲೋಕ್-ಗೀತ್ ಸಂಗ್ರಹ್’ ಈ ಸಂಶೋಧನಾ ಕೃತಿಯನ್ನು  ಗೌರವ ಅತಿಥಿಗಳಾದ ಅಷ್ಠಾವಧಾನಿ ಉಮೇಶ್ ಗೌತಮರವರು ಉದ್ಘಾಟಿಸಿದರು. ಹಾಗೂ ಕೂಡ್ಲ ಆನಂದ ಶಾನ್‌ಭಾಗರವರು ಕನ್ನಡದಿಂದ ಕೊಂಕಣಿಗೆ  ಲಿಪ್ಯಾಂತರಿಸಿದ ‘ದಿನಕರಾಲಿ ಕವನಾಂ’ವನ್ನು ಗೌರವ ಅತಿಥಿಗಳಾಗಿ ಭಾಗವಹಿಸಿದ ನಕ್ರೆಯ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ಜೊರ್ಜ್ ಕ್ಯಾಸ್ತೆಲಿನೊ ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮುಂದಿನ ವರ್ಷದಿಂದ ತಿಂಗಳಿಗೊಂದು ಕೊಂಕಣಿ ಪುಸ್ತಕವನ್ನು ಪ್ರಕಟಿಸುವ ಯೋಜನೆಯನ್ನು ತಿಳಿಸಿದರು.ಶ್ರೀ ಟೈಟಸ್ ನೊರೊನ್ಹರವರು ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿ ರಿಜಿಸ್ಟ್ರಾರರಾದ ಎಸ್.ಎಚ್.ಶಿವರುದ್ರಪ್ಪರವರು ವಂದನಾರ್ಪನೆಗೈದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಡುಬಿ ಜಾನಪದ ಕಲಾವೇದಿಕೆ, ಎಡಪದವು ಹಾಗೂ ಕೊಂಕಣಿ ಖಾರ್ವಿ ಕಲಾಮಾಂಡ್, ಭಟ್ಕಳದವರಿಂದ ಕೊಂಕಣಿ ಜಾನಪದ ದರ್ಶನ ನೆರವೇರಿತು. ಈ ಕಾರ್ಯಕ್ರಮಕ್ಕೆ ಕಾರ್ಕಳದ ಕೊಂಕಣಿ ಅಭಿಮಾನಿಗಳು, ಪುರಸ್ಕೃತರ ಅಭಿಮಾನಿಗಳು, ಸಾಹಿತಿ, ಕಲಾವಿದರು ಭಾಗವಹಿಸಿ ಕಾರ್ಯಕ್ರಮವು ಜನಮೆಚ್ಚುಗೆ ಪಡೆಯಿತು.

೩೪. ಕೆಮ್ಮಾಣ್‌ನಲ್ಲಿ ಜರಗಿದ ವೊವ್ಯೊ-ವೇರ್ಸ್ ಕಾರ್ಯಗಾರ ಮತ್ತು ‘ಕೊಂಕ್ಣಿ ಮ್ಹಾನ್ ಮನಿಸ್’– ಏಕ್ ಮುಲಾಖತ್ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ 25-03-2007ರಂದು ರವಿವಾರ  ಕೆಮ್ಮಾಣ್  ಇಗರ್ಜಿ  ಸಭಾಂಗಣದಲ್ಲಿ ಪೂರ್ವಾಹ್ನ 9:30ರಿಂದ ಸಂಜೆ 3:30ರವರೆಗೆ ‘ವೊವ್ಯೊ-ವೇರ್ಸ್’ ಕಾರ್ಯಗಾರ ಜರಗಿತು. ಈ ಕಾರ್ಯಗಾರದಲ್ಲಿ ಶ್ರೀಮತಿ ಹಿಲ್ಡಾ ಡಿಸೋಜ, ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಶ್ರೀ ರವಿ ಸ್ಟೀವನ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದರು. ಅದೇ ದಿನ, ಅದೇ ಸಭಾಭವನದಲ್ಲಿ ಅಪರಾಹ್ನ 3:30 ಗಂಟೆಗೆ ‘ಕೊಂಕ್ಣಿ ಮ್ಹಾನ್ ಮನಿಸ್’ – ಏಕ್ ಮುಲಾಖತ್ ಕಾರ್ಯಕ್ರಮ ಜರಗಿತು.  ಮ್ಹಾನ್ ಮನಿಸ್‌ರಾಗಿ ತೊಟ್ಟಮ್‌ನ ಹಿರಿಯ ಕೊಂಕಣಿ ಲೇಖಕರಾದ ಶ್ರೀ ದೊನಾತ್ ಡಿ ಅಲ್ಮೇಡಾ ಹಾಗೂ ಹಿರಿಯ ಜಾನಪದ ಕಲಾವಿದರಾದ ಶ್ರೀಮತಿ ಲೆನ್ನಿ ಸಲ್ಡಾನ್ಹಾ ಇವರುಗಳನ್ನು  ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಅವರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು. ಕಲ್ಯಾಣಪುರದ ಕಥೊಲಿಕ್ ಸಭಾ ವಾರ್ಡ್‌ನ ಅಧ್ಯಕ್ಷರಾದ ಶ್ರೀ ತೋಮಸ್ ಕರ‍್ನೇಲಿಯೊ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಮತ್ತು ಪಿ.ಎ. ಕೊಲೆಜ್ ಆಫ್ ಇಂಜಿನಿಯರಿಂಗ್‌ನ ಸಹಾಯಕ ಪ್ರೊಫೆಸರರಾದ ಡಾ| ಇಕ್ಬಾಲ್ ಇವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
 ಅದೇ ಸಂದರ್ಭದಲ್ಲಿ ವೊವ್ಯೊ-ವೇರ್ಸ್ ಕಾರ್ಯಗಾರದಲ್ಲಿ ಭಾಗವಹಿಸಿದ ಸರ್ವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.  ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಜನಮೆಚ್ಚುಗೆ ಪಡೆಯಿತು.