2007-08ನೇ ಸಾಲಿನಲ್ಲಿ ನಡೆದ ಕಾರ್ಯಕ್ರಮಗಳ ವಿವರ :

೧.    ಮಂಗಳೂರಿನಲ್ಲಿ ಜರಗಿದ ಪ್ರಾಯೋಗಿಕ ಕೊಂಕಣಿ ಶಿಕ್ಷಣ ಯೋಜನೆಯ ಸಂಪೂರ‍್ಣೋತ್ಸವ್ ಸಮಾರಂಭ.
ದಿನಾಂಕ 1-4-2007ರಂದು ಅಪರಾಹ್ನ 2-00 ಗಂಟೆಗೆ  ಮಂಗಳೂರಿನ  ಶಕ್ತಿನಗರದ  ಕಲಾಂಗಣ ನಲ್ಲಿ ಕೊಂಕಣೀಯ ಪ್ರಾಯೋಗಿಕ ಶಿಕ್ಷಣ ಯೋಜನೆಯ ಸಂಪೂರ‍್ಣೋತ್ಸವ ಸಮಾರಂಭವು ಜರಗಿತು. ಈ ಕಾರ್ಯಕ್ರಮಕ್ಕೆ ಲ್ಯಾನ್ಸಿ ಕನ್‌ಸ್ಟ್ರಕ್ಷನ್ಸ್ ಮಾಲಕರಾದ ಲ್ಯಾನ್ಸಿ ಮಸ್ಕರೇನ್ಹಸ್ ಮುಖ್ಯ ಅತಿಥಿಗಳಾಗಿದ್ದರು. ಫಾ| ವಿಲ್ಸನ್ ವೈಟಸ್ ಡಿಸೋಜರವರು ಗೌರವ ಅತಿಥಿಗಳಾಗಿದ್ದರು. ದಾಯ್ಜಿ ವರ್ಲ್ಡ್‌ನ ಕಾರ್ಯದರ್ಶಿಗಳಾದ ಶ್ರೀ ವೊಲ್ಟರ್ ನಂದಳಿಕೆಯವರು ಕಾರ್ಯಕ್ರಮದ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ್ ಅಧ್ಯಕ್ಷರಾದ ಎರಿಕ್ ಒಝೇರಿಯೊರವರು ವಹಿಸಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್.ಎಚ್. ಶಿವರುದ್ರಪ್ಪರವರು ವಂದನಾರ್ಪಣೆಗೈದರು. ಅಕಾಡೆಮಿಯ ಸದಸ್ಯರಾದ ವಿತೊರಿ ಕಾರ್ಕಳರವರು  ಕಾರ್ಯಕ್ರಮ ನಿರೂಪಿಸಿದರು. ಈ ಸಮಾರಂಭದಲ್ಲಿ ಪ್ರತಿಯೊಂದು ಶಾಲೆಯಲ್ಲಿ ಕೊಂಕಣಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ೫೫ ಶಾಲೆಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್-ಕೊಂಕಣಿ ಶಬ್ದಕೋಶವನ್ನು ಉಚಿತವಾಗಿ ನೀಡಲಾಯಿತು. ೫೫ ಶಾಲೆಯ ಶಿಕ್ಷಕ/ ಶಿಕ್ಷಕಿಯರನ್ನು ಸಮ್ಮಾನಿಸಲಾಯಿತು. ಅತುತ್ತಮ ಕೊಂಕಣಿ ಶಿಕ್ಷಕಿ ಪ್ರಶಸ್ತಿಯನ್ನು ಮೇರಮಜಲ್ ಸೈಂಟ್ ಜೋಸೆಫ್ ಶಾಲೆಯ ಕೊಂಕಣಿ ಶಿಕ್ಷಕಿಯಾದ ಶೀಲಾ ಬ್ಯಾಪ್ಟಿಸ್ಟ್‌ರವರಿಗೆ  ನೀಡಿ ಗೌ ರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ೫೫ ಶಾಲೆಗಳ ಅತುತ್ತಮ ಅಂಕ ಪಡೆದ ಮಕ್ಕಳ ಹೆತ್ತವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕೊಂಕಣಿ ಭಾಷಾಭಿಮಾನಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

೨.    ಎಪ್ರಿಲ್ ೯,೨೦೦೭ರಂದು ಜರಗಿದ ಜನಸಂಪರ್ಕ ಸಭೆ
 ದಿನಾಂಕ 9-4-2007ರಂದು ಸಂಜೆ 4:30 ಗಂಟೆಗೆ ಅಕಾಡೆಮಿ ಸಭಾಂಗಣದಲ್ಲಿ ಈಗಿನ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ತಮ್ಮ ೨ ವರ್ಷಗಳ ಅಧ್ಯಕ್ಷತೆಯನ್ನು ಪೂರೈಸಿದಕ್ಕಾಗಿ ಸಾರ್ವಜನಿPರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಚೇರ್ ಇನ್ ಕ್ರಿಶ್ಚಿಯಾನಿಟಿಯ ಕಾರ್ಯದರ್ಶಿಗಳಾದ ಫಾ|ಜೊನ್ ಫೆರ್ನಾಂಡಿಸ್‌ರವರು ಅಧ್ಯಕ್ಷರಾಗಿ ಭಾಗವಹಿಸಿದ್ದರು, ೨ ವರ್ಷಗಳ ಕಾರ್ಯ ಸಾಧನೆಗಳನ್ನು ಸಭೆಯಲ್ಲಿ ತಿಳಿಸಲಾಯಿತು. ಹಾಗೂ ಮುಂದಿನ ಒಂದು ವರ್ಷವನ್ನು ಯಾವ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಬಹುದು ಎಂದು ತಿಳಿಸಲಾಯಿತು. ಶ್ರೀ ಎಡಿ ನೆಟ್ಟೊ, ವಿಕ್ಟರ್ ರೊಡ್ರಿಗಸ್, ವಿಟ್ಲ ಮಂಗೇಶ್ ಭಟ್ ಹಾಗೂ ಸ್ಟೀವನ್ ಕ್ವಾಡ್ರಸ್‌ರವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

೩.    ಮಂಗಳೂರಿನಲ್ಲಿ ಮಹಾನ್ ಸಾಹಿತಿಯಾದ ದಿ| ಲುವಿಸ್ ಮಸ್ಕರೇನ್ಹಸ್‌ರವರ ಜನ್ಮ ಶತಮಾನೋತ್ಸವ ಆಚರಣೆ
ಕರ್ನಾಟಕ ಸರ್ಕಾರವು ಸುವರ್ಣ ಕರ್ನಾಟಕ ವರ್ಷಾಚರಣೆಯ  ಸಂಬಂಧವಾಗಿ ೨೦೦೬-೦೭ನೇ ಸಾಲಿನಲ್ಲಿ ಜನ್ಮಶತಮಾನೋತ್ಸವ ಸಂಪೂರ್ಣಗೊಳಿಸಿದ ಸಾಹಿತಿ-ಕಲಾವಿದರುಗಳ ಜನ್ಮಶತಮಾನೋತ್ಸವ ಆಚರಿಸಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ 22-04-200೭ರಂದು ರವಿವಾರ ಸಂಜೆ ೪:೩೦ ಗಂಟೆಗೆ ಮಲ್ಲಿಕಟ್ಟೆ ಕಮಾಂಡರ್ ಜೊರ್ಜ್ ಮಾರ್ಟಿಸ್ ರಸ್ತೆಯಲ್ಲಿರುವ ಫ್ಲವರೆಟ್ (ಜೂಡಿತ್ ಮಸ್ಕರೇನ್ಹಸ್‌ರವರ ಮನೆ) ಪಕ್ಕದಲ್ಲಿರುವ ಶಾಲೊಮ್ ಮನೆಯ ಅಂಗಳದಲ್ಲಿ ಕೊಂಕಣಿಯ ಮಹಾನ್ ಸಾಹಿತಿಗಳಾದ ದಿ| ಲುವಿಸ್ ಮಸ್ಕರೇನ್ಹಸ್ ರವರ ನೆನಪಿಗಾಗಿ ಅವರ ಜನ್ಮಶತಮಾನೋತ್ಸವವು ಜರಗಿತು. ದಿ|ಲುವಿಸ್ ಮಸ್ಕರೇನ್ಹಸ್ ರವರು ಕೊಂಕಣಿ ಭಾಷೆ-ಸಾಹಿತ್ಯಕ್ಕೆ ಧಾರಾಳ ಯೋಗದಾನವನ್ನು ನೀಡಿದ ಮತ್ತು ಜನ್ಮ ಶತಮಾನೋತ್ಸವವನ್ನು ಸಂಪೂರ್ಣಗೊಳಿಸಿದ ಹಿರಿಯರಲ್ಲಿ ಪ್ರಮುಖರು. ಈ ಕಾರ್ಯಕ್ರಮದಲ್ಲಿ ದಿ| ಲುವಿಸ್ ಮಸ್ಕರೇನ್ಹಸ್ ರವರ ಪರಿಚಿತ ಅಭಿಮಾನಿಗಳಾದ ಪ್ರೊ|ಆಲ್ಬನ್ ಕ್ಯಾಸ್ತೆಲಿನೊರವರು ಕೊಂಕಣಿ ಸಾಹಿತ್ಯಕ್ಕೆ ದಿ| ಲುವಿಸ್ ಮಸ್ಕರೇನ್ಹಸ್ ರವರ ದೇಣಿಗೆ ಈ ವಿಷಯವಾಗಿ ಮಾತನಾಡಿದರು.ದಿ|ಲುವಿಸ್ ಮಸ್ಕರೇನ್ಹಸ್‌ರವರ ಮಕ್ಕಳಾದ ವಂ|ಭ|ನೊಯೊಲಿನ್ ಎ.ಸಿ. ಮತ್ತು ಕು. ಜುಡಿತ್ ಮಸ್ಕರೇನ್ಹಸ್ ಇವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಲುವಿಸ್ ಮಸ್ಕರೇನ್ಹಸ್‌ರವರು ಬರೆದ ಕೊಂಕಣಿಯ ಪ್ರಥಮ ಕಾವ್ಯ-ನಾಟಕ ಆಬ್ರಾಂವ್ಚೆಂ ಯಜ್ಞ್‌ದಾನ್ ಮಾಂಡ್ ಪಂಗಡದ ಕಲಾಕಾರರು ವಾಚಿಸಿದರು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೆ ಲುವಿಸ್ ಮಸ್ಕರೇನ್ಹಸ್ ರವರ ಜೀವನಚರಿತ್ರೆಯ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು.

೪.    ಶಿವಮೊಗ್ಗದಲ್ಲಿ ಜರಗಿದ ಗೌರವ ಪ್ರಶಸ್ತಿ-೨೦೦೬ರ ಪ್ರಶಸ್ತಿ ಪ್ರದಾನ ಸಮಾರಂಭ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ  ಕೊಂಕಣಿ ಸಮನ್ವಯ ಸಮಿತಿ, ಶಿವಮೊಗ್ಗ ಇದರ ಸಹಯೋಗದಲ್ಲಿ 2006ರ ಗೌರವ ಪ್ರಶಸ್ತಿ ಪ್ರದಾನ  ಸಮಾರಂಭವು ದಿನಾಂಕ 29-04-2007ರಂದು ಸಂಜೆ 5:00 ಗಂಟೆಗೆ ಶಿವಮೊಗ್ಗದ ಐ.ಎಮ್.ಎ. ಹಾಲ್ ನಲ್ಲಿ ಜರಗಿತು. ಕಾರ್ಯಕ್ರಮುಲ್ಲಿ  ಶ್ರೀ ಮೆಲ್ವಿನ್ ರೊಡ್ರಿಗಸ್(ಸಾಹಿತ್ಯ), ಶ್ರೀ ಬಿ. ಚಂದ್ರಶೇಖರ ಖಾರ್ವಿ(ಜಾನಪದ) ಮತ್ತು ಶ್ರೀ ಅವಿತಾಸ್ ಎಡೊಲ್ಪಸ್ ಕುಟಿನ್ಹೊ(ಕಲೆ) ಇವರುಗಳಿಗೆ 2006ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಶಿವಮೊಗ್ಗದ ಮಾನಸ ಎಜ್ಯುಕೆಶನಲ್ ಫೌಂಡೇಶನ್ ಫೊರ್ ಮೆಂಟಲ್ ಹೆಲ್ತ್ ಇದರ ನಿರ್ದೇಶಕರಾದ ಡಾ|ಕೆ.ಎ.ಅಶೋಕ್ ಪೈಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶಿವಮೊಗ್ಗ ಕಥೊಲಿಕ್ ಧiಪ್ರಾಂತ್ಯದ ಬಿಷಪರಾದ ಅತಿ ವಂ|ಡಾ|ಜೆರಾಲ್ಲ್ಡ್ ಐಸಕ್ ಲೋಬೊರವರು ಮುಖ್ಯ ಅತಿಥಿಗಳಾಗಿದ್ದರು. ಸಾಗರದ ಹಿರಿಯ ಸಾಹಿತಿಗಳಾದ ಶ್ರೀ ನಾ.ಡಿಸೋಜರವರು ಗೌರವ ಅತಿಥಿಗಳಾಗಿದ್ದರು. ಮೊದಲಿಗೆ ಶ್ರೀಮತಿ ಗೀತಾ ಪೈರವರ ಶಿಷ್ಯರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಸ್ವಾಗತ ಭಾಷಣವನ್ನು ಮಾಡಿದರು. ಖಾರ್ವಿ ಜನಾಂಗದವರ ಬಗ್ಗೆ ಸಂಶೋಧನೆ ನಡೆಸಿದ ಪುಸ್ತಕವನ್ನು ಡಾ| ಕೆ.ಎ.ಅಶೋಕ್ ಪೈರವರು ಖಾರ್ವಿ ಲೋಕ್-ಗೀತ್ ಸಂಗ್ರಹ್ ಬಿಡುಗಡೆ ಮಾzದರು. ಸನ್ಮಾನಿತರ ಪರಿಚಯವನ್ನು ಶ್ರೀ ಡೆನಿಸ್ ಡಿಸಿಲ್ವರವರು ಓದಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್.ಎಚ್.ಶಿವರುದ್ರಪ್ಪರವರು ವಂದನಾರ್ಪಣೆಗೈದರು. ಕಾರ್ಯಕ್ರಮದ ಅಂಗವಾಗಿ ಸಿದ್ದಿ ಕಲಾ ಪಂಗಡ,  ಯಲ್ಲಾಪುರ ಇಲ್ಲಿಯ ಕಲಾಕಾರರು ಸಿದ್ದಿ ಜನಾಂಗದ ಜಾನಪದ ಹಾಡು ಹಾಗೂ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು. ಶಿವಮೊಗ್ಗದ ಸ್ಥಳೀಯ ಕಲಾತಂಡದ ಕಲಾಕಾರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

5. ಮೂಡುಬೆಳ್ಳೆಯಲ್ಲಿ ಜರಗಿದ ವೊವ್ಯೊ-ವೇರ್ಸ್ ಕಾರ್ಯಗಾರ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಸ್ತ್ರೀ ಸಂಘಟನೆ ಇವರ ಸಹಯೋಗದಲ್ಲಿ ದಿನಾಂಕ ೧೩-೦೫-೨೦೦೭ರಂದು ರವಿವಾರ ಮೂಡುಬೆಳ್ಳೆ ಇಗರ್ಜಿ ಸಭಾಭವನದಲ್ಲಿ ಪೂರ್ವಾಹ್ನ ೧೦:೦೦ರಿಂದ ಸಂಜೆ ೪:೩೦ರವರೆಗೆ ವೊವ್ಯೊ-ವೇರ್ಸ್ ಕಾರ್ಯಗಾರ ಜರಗಿತು. ಈ ಕಾರ್ಯಗಾರವನ್ನು ಉಡುಪಿ ಪ್ರಾಂತ್ರ್ಯದ್ ಎಪಿಸ್ಕೋಪಲ್ ವಿಕಾರ್ ಆಗಿರುವ ಅ|ವಂ| ವಲೇರಿಯನ್ ಡಿಸೋಜರವರು ಉದ್ಘಾಟಿಸಿದರು. ಈ ಕಾರ್ಯಗಾರದಲ್ಲಿ ಶ್ರೀಮತಿ ಹಿಲ್ಡಾ ಡಿಸೋಜ, ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಶ್ರೀ ರವಿ ಸ್ಟೀವನ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಗಾರದ ಅಧ್ಯಕ್ಷತೆ ವಹಿಸಿದರು.ಸಂಜೆ 4:30 ಗಂಟೆಗೆ ವೊವ್ಯೊ-ವೇರ್ಸ್ ಕಾರ್ಯಗಾರದಲ್ಲಿ ಭಾಗವಹಿಸಿದ ಸರ್ವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.  ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

೬. ಮಂಗಳೂರಿನಲ್ಲಿ ಜರಗಿದ ಏಕ್ ಸಾಂಜ್ ಕಾವ್ಯಾಳ್ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ  ದಿನಾಂಕ ೨೭-೦೫-೨೦೦೭ರಂದು ಆದಿತ್ಯವಾರ  ಬಜ್ಜೋಡಿ, ಸಂದೇಶ ಸಭಾಂಗಣದಲ್ಲಿ ಸಂಜೆ ೫:೦೦ ಗಂಟೆಗೆ ಏಕ್ ಸಾಂಜ್ ಕಾವ್ಯಾಳ್ ಕಾರ್ಯಕ್ರಮ ಜರಗಿತು.ಈ ಕಾರ್ಯಕ್ರಮದಲ್ಲಿ ಶ್ರೀ ಮೆಲ್ವಿನ್ ರೊಡ್ರಿಗಸ್‌ರವರ ಸಂಪಾದಕತ್ವದಲ್ಲಿ ಅಕಾಡೆಮಿಯ ಗ್ರಂಥ ಪ್ರಕಟಣೆ ಯೋಜನೆಯಡಿ ತಯಾರಾದ  ೨೦ನೇ ಶತಮಾನದ ಕೊಂಕಣಿ ಕವಿತೆಗಳು ಗ್ರಂಥವನ್ನು ದೆಹಲಿಯ ಜೆ.ಎನ್.ಯು. ಇದರ ರಾಜ್ಯಶಾಸ್ತ್ರ ವಿಭಾಗದ ಪ್ರೊಫೆಸರ್‌ರಾದ ಪ್ರೊ|ಡಾ| ವಲೇರಿಯನ್ ರೊಡ್ರಿಗಸ್‌ರವರು ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಶ್ರೀ ಅರ್ಥರ್ ಪಿರೇರಾ ಒಮ್ಜೂರ್‌ರವರ ತಿಂ ದುಖಾಂ ಉಲಯ್ತಾನಾ ಕವಿತಾ ಪುಸ್ತಕವನ್ನು ಸಾಗರದ ಹಿರಿಯ ಕನ್ನಡ ಸಾಹಿತಿಗಳಾದ ಡಾ|ನಾ.ಡಿಸೋಜರವರು ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಕವಿತಾ ಸೊಭಾಣ್ (ಕವಿಗೋಷ್ಠಿ) ಕಾರ್ಯಕ್ರಮ ನೆರವೇರಿತು.ಈ ಕವಿಗೋಷ್ಟಿಯನ್ನು ಕವಿ ಮೆಲ್ವಿನ್ ರೊಡ್ರಿಗಸ್‌ರವರು ನಡೆಸಿಕೊಟ್ಟರು.ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

7. ಚಿಕ್ಕಮಗಳೂರಿನಲ್ಲಿ ಜರಗಿದ ವೊವ್ಯೊ-ವೇರ್ಸ್ ಕಾರ್ಯಗಾರ ಮತ್ತು ಮ್ಹಾನ್ ಮನಿಸ್  ಏಕ್ ಮುಲಾಖತ್ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕಥೊಲಿಕ್ ಕೊಂಕಣಿ ರಾಕಣ್ ಸಂಚಲನ್, ಚಿಕ್ಕಮಗಳೂರು ಇವರ ಸಹಯೋಗದಲ್ಲಿ ದಿನಾಂಕ ೦೩-೦೬-೨೦೦೭ರಂದು ರವಿವಾರ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಪೂರ್ವಾಹ್ನ ೯:೩೦ರಿಂದ ಸಂಜೆ ೪:೦೦ರವರೆಗೆ ವೊವ್ಯೊ-ವೇರ್ಸ್ ಕಾರ್ಯಗಾರ ಜರಗಿತು. ಈ ಕಾರ್ಯಗಾರದಲ್ಲಿ ಶ್ರೀಮತಿ ಹಿಲ್ಡಾ ಡಿಸೋಜ, ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಶ್ರೀ ರವಿ ಸ್ಟೀವನ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಗಾರದ ನಿರ್ದೇಶಕರಾಗಿದ್ದರು.ಅದೇ ದಿನ, ಅದೇ ಸಭಾಭವನದಲ್ಲಿ ಸಂಜೆ ೪:೩೦ ಗಂಟೆಗೆ ಕೊಂಕ್ಣಿ ಮ್ಹಾನ್ ಮನಿಸ್ ಏಕ್ ಮುಲಾಖತ್ ಕಾರ್ಯಕ್ರಮವು ಜರುಗಿತು.ಮ್ಹಾನ್ ಮನಿಸ್‌ರಾಗಿ  ಚಿಕ್ಕಮಗಳೂರಿನ ಹಿರಿಯ ಕೊಂಕಣಿ ಸಾಹಿತಿ ಹಾಗೂ ನಾಟಕಕಾರರಾದ  ಶ್ರೀ ಗ್ರೆಗರಿ ಎಡ್ವರ್ಡ್ ಡಿಸೋಜ ಹಾಗೂ ಹಿರಿಯ ಸಮಾಜ ಸೇವಕರಾದ ಶ್ರೀಮತಿ ಡಾ|ಮೀರಾ ಎನ್. ಮಹಾಲೆ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ನಂತರ ಅವರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು.ವಿಜಯಪುರ ಹೋಲಿ ಫ್ಯಾಮಿಲಿ ಚರ್ಚ್‌ನ ಧರ್ಮಗುರುಗಳಾದ ವಂ| ಜೊರ್ಜ್ ಡಿಸೋಜರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
 ಅದೇ ಸಂದರ್ಭದಲ್ಲಿ ವೊವ್ಯೊ-ವೇರ್ಸ್ ಕಾರ್ಯಗಾರದಲ್ಲಿ ಭಾಗವಹಿಸಿದ ಸರ್ವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಜಿಯೊ ಆಗ್ರಾರ್‌ರವರ ನಿರ್ದೇಶನದಲ್ಲಿ ಲೇಖಕರಾದ ಜೆ.ಬಿ.ಡಿಸೋಜರವರು ಬರೆದ ಆಪುಟ್ ಆಂಕ್ವಾರ್ ನಾಟಕ ಪ್ರದರ್ಶಿಸಿದರು. ಈ ನಾಟಕವನ್ನು ಲೊರೆಟ್ಟೊದ ಐ.ಸಿ.ವೈ.ಎಮ್. ಸದಸ್ಯರು ಪ್ರದರ್ಶಿಸಿದರು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಮೆಚ್ಚುಗೆ ಪಡೆಯಿತು.

೮. ದಿನಾಂಕ ೧೬-೬-೨೦೦೭ರಂದು ಜರಗಿದ ಕೊಂಕಣಿ ಶಿಕ್ಷಕರ ಕಾರ್ಯಗಾರ
ಶಾಲೆಯಲ್ಲಿ ಕೊಂಕಣಿ ಅಳವಡಿಸುವ ಅಕಾಡೆಮಿಯ ಯೋಜನೆಗೆ ಸರಕಾರದ ಮಾನ್ಯತೆ ಸಿಕ್ಕಿರುವುದು ಸಮಸ್ತ ಕೊಂಕಣಿ ಜನರಿಗೆ ಸಂತೋಷದ ವಿಷಯವಾಗಿದೆ. ಈ ಯೋಜನೆಯ ಅನುಷ್ಟಾನಕ್ಕಾಗಿ ಅಕಾಡೆಮಿಯು 6ನೇ ತರಗತಿಯಿಂದ ಶಾಲೆಯಲ್ಲಿ ಕೊಂಕಣಿ ಅಳವಡಿಸುವ ಯೋಜನೆಗೆ ಪೂರಕವಾಗಿ ಕೊಂಕಣಿ ಪಾಠ ಕಲಿಸುವ ಶಿPಕರಿಗೆ ಒಂದು ದಿನದ ತರಬೇತಿ ಶಿಬಿರವನ್ನು ಪಾಠ ಪುಸ್ತಕ ತಯಾರಿಸಿದ ಸಮಿತಿ ಸದಸ್ಯರ ನೇತೃತ್ವದಲ್ಲಿ ದಿನಾಂಕ 16-6-2007ರಂದು ಪೂರ್ವಾಹ್ನ 9:30ರಿಂದ ಮಧ್ಯಾಹ್ನ 1:00ರವರೆಗೆ ಮಂಗಳೂರಿನ ಬಜ್ಜೋಡಿಯಲ್ಲಿರುವ ಸಂದೇಶದ  ಸಭಾಂಗಣದಲ್ಲಿ ಜರಗಿತು.
  ಈ ಕಾರ್ಯಗಾರದಲ್ಲಿ 90 ಶಾಲೆಗಳ ಶಿಕ್ಷಕರು/ಶಿಕ್ಷಕಿಯರು ಭಾಗವಹಿಸಿದರು. ಕೊಂಕಣಿ ಪ್ರಚಾರ ಸಂಚಲನದ ಅಧ್ಯಕ್ಷರಾದ ಶ್ರೀ ರೊನಾಲ್ಡ್ ಕ್ಯಾಸ್ಟೆಲಿನೊರವರು ಮುಖ್ಯ ಅತಿಥಿಗಳಾಗಿದ್ದರು. ಶ್ರೀ ಎಡ್ವರ್ಡ್ ನಜ್ರೆತ್, ಶ್ರೀ ಗೇಬ್ರಿಯೆಲ್  ವಾಜ್, ಸ್ಟೀವನ್ ಕ್ವಾಡ್ರಸ್, ಅತಿಥಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರರಾದ ಎಸ್.ಎಚ್.ಶಿವರುದ್ರಪ್ಪರವರು ವೇದಿಕೆಯಲ್ಲಿದ್ದ ಅತಿಥಿಗಳನ್ನು ಸ್ವಾಗತಿದರು. ಪಠ್ಯಪುಸ್ತಕ ಸಮಿತಿ ಸದಸ್ಯರನ್ನು ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.

9. ಮಂಗಳೂರಿನಲ್ಲಿ ಜರಗಿದ ವೊವಿಯೊ-ವೆರ‍್ಸಾಂ ಕಾರ್ಯಗಾರ ಹಾಗೂ ‘ವೊವಿಯೊ  ಆನಿ ವೇರ‍್ಸ್ ’ಪುಸ್ತಕ ಬಿಡುಗಡೆ ಸಮಾರಂಭ
   ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ, ದೇರೆಬೈಲ್ ಚರ್ಚ್ ಇದರ ಸಹಯೋಗದಲ್ಲಿ ದಿನಾಂಕ 01-07-2007ರಂದು ರವಿವಾರ ದೇರೆಬೈಲ್ ಇಗರ್ಜಿಯ ಚಿಕ್ಕ ಸಭಾಂಗಣದಲ್ಲಿ ಪೂರ್ವಾಹ್ನ 9:30ರಿಂದ ಸಂಜೆ 4:00ರವರೆಗೆ ವೊವಿಯೊ-ವೆರ‍್ಸಾಂ ಕಾರ್ಯಗಾರ ಜರಗಿತು. ಪೂರ್ವಾಹ್ನ 10:00 ಗಂಟೆಗೆ  ಕಾರ್ಯಗಾರದ ಉದ್ಘಾಟನೆ ಹಾಗೂ ಭಾಯ್ಲ್ಯಾನ್ ಆಯ್ಲೊ ವೊರ್(ವೊವಿಯೊ ಆನಿ ವೇರ‍್ಸ್)  ಪುಸ್ತಕ ಬಿಡುಗಡೆಗೊಳಿಸಲಾಯಿತು. ದೆರೆಬೈಲ್ ಇಗರ್ಜಿಯ ಧಮುಗುರುಗಳಾದ ಅತಿ ವಂ| ಗೊಡ್‌ಫ್ರಿ ಸಲ್ಡಾನ್ಹಾರವರು ಪುಸ್ತಕ ವಿಮೋಚನೆ ಮಾಡಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್.ಎಚ್.ಶಿವರುದ್ರಪ್ಪರವರು ವಂದನಾರ್ಪಣೆಗೈದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದರು. ಈ ಕಾರ್ಯಗಾರದಲ್ಲಿ ಶ್ರೀಮತಿ ಹಿಲ್ಡ ಡಿಸೋಜ, ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಶ್ರೀ ಮ್ಯಾಕ್ವಿನ್ ಫೆರ್ನಾಂಡಿಸ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಸಂಜೆ 4:00 ಗಂಟೆಗೆ ವೊವಿಯೊ-ವೆರ್ಸಾಂ ಕಾರ್ಯಗಾರದಲ್ಲಿ ಭಾಗವಹಿಸಿದ ಸರ್ವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಅಕಾಡೆಮಿಯ ಸದಸ್ಯರಾದ ಶ್ರೀ ವಿತೊರಿ ಕಾರ್ಕಳರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

10. ದಿನಾಂಕ  30-7-2007ರಂದು ಸಂದೇಶದಲ್ಲಿ ಜರಗಿದ ಕೊಂಕಣಿ ಶಿಕ್ಷಕರ ಕಾರ್ಯಗಾರ
    ಶಾಲೆಯಲ್ಲಿ ಕೊಂಕಣಿ ಅಳವಡಿಸುವ ಅಕಾಡೆಮಿಯ ಯೋಜನೆಗೆ ಸರಕಾರದ ಮಾನ್ಯತೆ ಸಿಕ್ಕಿರುವುದು ಸಮಸ್ತ ಕೊಂಕಣಿ ಜನರಿಗೆ ಸಂತೋಷದ ವಿಷಯವಾಗಿದೆ. ಈ ಯೋಜನೆಗೆ ಪೂರಕವಾಗಿ 6ನೇ ತರಗತಿಗೆ ಶಾಲೆಯಲ್ಲಿ ಕೊಂಕಣಿ ಪಾಠ ಕಲಿಸುವ ಶಿಕ್ಷಕ/ಶಿಕ್ಷಕಿಯರಿಗೆ ಒಂದು ದಿನದ ತರಬೇತಿ ಶಿಬಿರವು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ದಿನಾಂಕ 30-7-2007ರಂದು ಪೂರ್ವಾಹ್ನ 9:30ರಿಂದ ಸಂಜೆ 3:30ರವರೆಗೆ  ಮಂಗಳೂರಿನ ಬಜ್ಜೋಡಿಯಲ್ಲಿರುವ ಸಂದೇಶದ ಸಭಾಂಗಣದಲ್ಲಿ ಜರಗಿತು.
    ಈ ಕಾರ್ಯಗಾರದಲ್ಲಿ ೭೦ ಶಾಲೆಗಳ ಶಿಕ್ಷಕರು/ಶಿಕ್ಷಕಿಯರು ಭಾಗವಹಿಸಿದರು. ಶ್ರೀ ಸ್ಟೀವನ್ ಕ್ವಾಡ್ರಸ್ ಹಾಗೂ ಫಾ| ವಲೇರಿಯನ್ ಫೆರ್ನಾಂಡಿಸ್‌ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿ೦ii ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ್ದರು.

11. ಕಲ್ಯಾಣಪುರದಲ್ಲಿ ಜರಗಿದ ಬಸ್ಣಿ ಕಾರ್ಯಕ್ರಮ
     ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ ಇವರ ಜಂಟಿ ನೇತೃತ್ವದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ದಿನಾಂಕ ೦೬-೦೮-೨೦೦೭ರಂದು ಸಂಜೆ ೩:೩೦ಕ್ಕೆ ಬಸ್ಣಿ ಕೊಂಕಣಿ ಸಂಗೀತ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮಕ್ಕೆ ಶಾಲಾ-ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವರ್ಗದವರು ಮತ್ತು ಮಕ್ಕಳ ಹೆತ್ತವರು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಜನಮೆಚ್ಚುಗೆ ಪಡೆಯಿತು.

12. ಮೈಸೂರಿನಲ್ಲಿ ಜರಗಿದ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ
    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ತುಳು, ಉರ್ದು, ಕೊಡವ ಅಕಾಡೆಮಿಗಳ ಸಂಯುಕ್ತ ಆಶ್ರಯದಲ್ಲಿ ಕೊಂಕಣಿ ಕ್ರಿಶ್ಚಿಯನ್ ಎಸೋಸಿಯೇಶನ್ ಮತ್ತು ಮೈಸೂರಿನ ಇತರ ಕೊಂಕಣಿ, ತುಳು, ಕೊಡವ ಮತ್ತು ಉರ್ದು ಸಂಘ-ಸಂಸ್ಥೆಗಳ ಸಹಕಾರದಲ್ಲಿ ಸಾಅಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ದಿನಾಂಕ ೧೨-೦೮-೨೦೦೭, ಭಾನುವಾರ, ಸಂಜೆ ೪:೩೦ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ಜರಗಿತು. ಈ ಕಾರ್ಯಕ್ರ್ಮಕ್ಕೆ ಮುಖ್ಯ ಅತಿಥಿಯೊಂದಿಗೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರಿನ ರಂಗಾಯಣದ ನಿರ್ದೇಶಕರಾದ ಸನ್ಮಾನ್ಯ ಶ್ರೀ ಚಿದಂಬರರಾವ್ ಜಂಬೆಯವರು ನೆರವೇರಿಸಿದರು. ಗೌರವ ಅತಿಥಿಗಳಾಗಿ ಶ್ರೀಮಾನ್ ಎಮ್.ಕೆ.ಸೀತರಾಮ್ ಕುಲಾಲ್(ಅಧ್ಯಕ್ಷರು-ತುಳು ಅಕಾಡೆಮಿ), ಶ್ರೀಮತಿ ಉಳ್ಳಿಯಡ ಡಾಟಿ ಪೂವಯ್ಯ(ಅಧ್ಯಕ್ಷರು-ಕೊಡವ ಅಕಾಡೆಮಿ), ಹಾಗೂ ಜನಾಬ್ ಪ್ರೊ| ಮೀಮ್ ನೂನ್ ಸಯೀದ್(ಅಧ್ಯಕ್ಷರು-ಉರ್ದು ಅಕಾಡೆಮಿ) ಇವರುಗಳು ಭಾಗವಹಿಸಿದರು.  ವಿಶೇಷ ಆಕರ್ಷಣೆಯಾಗಿ ಕೊಂಕಣಿ, ತುಳು, ಕೊಡವ ಹಾಗೂ ಉರ್ದು ಭಾಷೆಗಳ ಬಹುಭಾಷಾ ಕವಿಗೋಷ್ಟಿ ಜರಗಿತು. ನಾಲ್ಕು ಅಕಾಡೆಮಿಗಳ ವತಿಯಿಂದ ಪ್ರತಿ ಅಕಾಡೆಮಿಗೆ ಅರ್ಧ ಗಂಟೆ ಅವಧಿಯಲ್ಲಿ ಜಾನಪದ ಹಾಡುಗಳು, ನೃತ್ಯ, ಕಿರುನಾಟಕ ಮನೋರಂಜನಾ ಕಾರ್ಯಕ್ರಮವು ಜನಮೆಚ್ಚುಗೆ ಗಳಿಸಿತು. ಈ ವೈವಿಧ್ಯ ಕಾರ್ಯಕ್ರಮಕ್ಕೆ ನಾಲ್ಕು ಭಾಷೆಗಳ ಆಸಕ್ತರು, ಸಾಹಿತಿ-ಕಲಾವಿದರು, ಭಾಷಾಭಿಮಾನಿಗಳು ಭಾಗವಹಿಸಿದರು.

೧೩.    ಮಂಗಳೂರಿನಲ್ಲಿ ಜರಗಿದ  ಕೊಂಕಣಿ ಮಾನ್ಯತಾ ದಿವಸ್ ೨೦೦೭ ಸಂಭ್ರಮ
     ಕೊಂಕಣಿ ಸಾಹಿತ್ಯ ಅಕಾಡೆಮಿಯು ಕರ್ನಾಟಕದ ಎಲ್ಲ ಕೊಂಕಣಿ ಸಂಘ-ಸಂಸ್ಥೆಗಳ ಸಹಯೋಗದಿಂದ ಆಗಸ್ಟ್ ೧೯, ೨೦೦೭ರಂದು ಇಡೀ ದಿನ ಕೊಂಕಣಿ ಮಾನ್ಯತಾ ದಿವಸ್-೨೦೦೭ರ ಆಚರಣೆಯನ್ನು ಆಚರಿಸಿತು. ಬೆಳಿಗ್ಗೆ ೭:೩೦ ಗಂಟೆಗೆ  ಪದುವಾ ಹೈಸ್ಕೂಲ್‌ನಿಂದ ಗಣಪತಿ ಹೈಸ್ಕೂಲ್‌ವರೆಗೆ  ಕ್ರೊಸ್-ಕಂಟ್ರಿ ರೇಸ್ ಜರಗಿತು. ಕ್ರೊಸ್-ಕಂಟ್ರಿ ರೇಸ್‌ನಲ್ಲಿ ಕೊಂಕಣಿ ಹಾಗೂ ಕೊಂಕಣಿಗರಲ್ಲದವರು ಭಾಗವಹಿಸಿದರು. ಕ್ರೊಸ್-ಕಂಟ್ರಿ ರೇಸ್ ೬ ವಿಭಾಗಗಳಲ್ಲಿ ಜರಗಿತು. ಮಂಗಳೂರಿನ ಗಣಪತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಡೀ ದಿನ - ಶಾಲಾ ಮಕ್ಕಳಿಗೆ,ಯುವಜನರಿಗೆ ಹಾಗೂ ಸ್ತ್ರೀ ಪುರುಷರಿಗೆ ವಿವಿಧ ಸ್ಪರ್ಧೆ, ಪಂದ್ಯಾಟಗಳನ್ನು ಜರಗಿತು. ಈ ಸ್ಪರ್ಧೆಗಳಲ್ಲಿ ೧ನೇ ತರಗಿತಿಯಿಂದ ೩ನೇ ತರಗತಿಯವರೆಗಿನ ಮಕ್ಕಳಿಗೆ ಕೊಂಕಣಿ ಕತೆ ಹೇಳುವ ಸ್ಪರ್ಧೆ, ೪ ಮತ್ತು ೫ನೇ ತರಗತಿಯ ಮಕ್ಕಳಿಗೆ ಕೊಂಕಣಿ ಕತೆ ಹೇಳುವ ಸ್ಪರ್ಧೆ, ೬,೭ನೇ ತರಗತಿಯ ಮಕ್ಕಳಿಗೆ ಕೊಂಕಣಿ ಗಾಯನ ಸ್ಪರ್ಧೆ, ೮,೯,೧೦ನೇ ಮಕ್ಕಳಿಗೆ ಕೊಂಕಣಿ ನೃತ್ಯ ಸ್ಪರ್ಧೆ, ೧೫ರಿಂದ ೪೦ ವರ್ಷದ ಸ್ತ್ರೀಯರಿಗೆ  ಚೆಂಡು ಹಸ್ತಾಂತರಿಸುವ ಸ್ಪರ್ಧೆ, ೧೫ರಿಂದ ೪೦ರ ವಯೋಮಿತಿಯ ಪುರುಷರಿಗೆ ಹಗ್ಗ-ಜಗ್ಗಾಟ ಮುಂತಾದ ಸ್ಪರ್ಧೆಗಳು ನಡೆದವು.
     ಸಂಜೆ ೫:೦೦ ಗಂಟೆಗೆ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಗೃಹ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರ ಸಚಿವರಾದ ಸನ್ಮಾನ್ಯ ಶ್ರೀ ಎಂ.ಪಿ. ಪ್ರಕಾಶ್ ರವರು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಬಸವರಾಜ ಎಸ್. ಹೊರಟ್ಟಿ ಇವರುಗಳು ಭಾಗವಹಿಸಿದರು. ಗೌರವ ಅತಿಥಿಗಳಾಗಿ ಮಂಗಳೂರು ಧರ್ಮ ಪ್ರಾಂತ್ಯದ ವಿಕಾರ್ ಜೆರಾಲ್ ಆಗಿರುವ ವಂ| ಮೊ| ಡೆನಿಸ್ ಮೊರಾಸ್ ಮತ್ತು ಕಾರ್ಯಾಧ್ಯಕ್ಷರಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎನ್. ಯೋಗಿಶ್ ಭಟ್ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ನಾಗರಾಜ ಶೆಟ್ಟಿ ಇವರು ಭಾಗವಹಿಸಿದರು.  ವಿವಿಧ ಕೊಂಕಣಿ ಜಾನಪದ ತಂಡಗಳಿಂದ ಹಾಡು, ಕುಣಿತಗಳ ಪ್ರದರ್ಶನ ಕಾರ್ಯಕ್ರಮ ಜರಗಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಸನ್ಮಾನಿಸಲಾಯಿತು. ಮಾಸ್ಟರ್ ಹರ್ಷಿತ್ ಖಾರ್ವಿಯವರನ್ನು ವಿಶೇಷವಾಗಿ ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಶ್ರೀ ಆಂಜನೇಯ ವ್ಯಾಯಾಮ ಶಾಲೆ ಕಲಾವಿದರು ಉಜ್ಯಾಖೆಳ್‌ನ್ನು ಪ್ರದರ್ಶಿಸಿದರು. ಈ ವೈವಿಧ್ಯ ಕಾರ್ಯಕ್ರಮಕ್ಕೆ ನಾಲ್ಕು ಭಾಷೆಗಳ ಆಸಕ್ತರು, ಸಾಹಿತಿ-ಕಲಾವಿದರು, ಭಾಷಾಭಿಮಾನಿಗಳು ಭಾಗವಹಿಸಿದರು.

14. ಬೆಂಗಳೂರಿನಲ್ಲಿ ಜರಗಿದ ಕೊಂಕಣಿ ಸಂಗೀತೋತ್ಸವ್ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಕೊಂಕಣಿ ಕೆಥೊಲಿಕ್ ಸಂಘಗಳ ಒಕ್ಕೂm,, ಬೆಂಗಳೂರು ಇವರ ಸಹಯೋಗದಲ್ಲಿ ಕೊಂಕಣಿ ಸಂಗೀತೋತ್ಸವ್ ಕಾರ್ಯಕ್ರಮವನ್ನು ಆಯೋಜಿಸಿದೆ. ಕೊಂಕಣಿ ಸಂಗೀತೋತ್ಸವ್ ಕಾರ್ಯಕ್ರಮವು ದಿನಾಂಕ ೨೬-೮-೨೦೦೭ರಂದು ಆದಿತ್ಯವಾರ, ಸಂಜೆ ೫:೦೦ ಗಂಟೆಗೆ ಬೆಂಗಳೂರಿನ ಗುರುನಾನಕ್ ಭವನದಲ್ಲಿ ಜರಗಿತು. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಮಂತ್ರಿಗಳಾದ ಶ್ರೀ ಎಚ್.ಎಸ್.ಮಹದೇವ ಪ್ರಸಾದ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಹಾಗೂ ಸುವರ್ಣ ಕರ್ನಾಟಕದ ಯೋಜನೆಯದಿ ಸಂಶೋಧನೆಯಲ್ಲಿ ಡಾ| ಜೆರಾಲ್ಡ್ ಪಿಂಟೊ, ಪ್ರೊ| ಜಯವಂತ ನಾಯಕ್, ಶ್ರೀ ಸಿದ್ಧಾಪುರ ವಾಸುದೇವ ಭಟ್ ಸಂಗ್ರಹಣೆಯಲ್ಲಿ ಡಾ| ಜೆರಾಲ್ಡ್ ಪಿಂಟೊ ಸಂಪಾದನೆಯಲ್ಲಿ ೨೦ನೆ ಶತಮಾನದ ಮಹಾನ್ ಕೊಂಕಣಿ ಜನರು  ಎಂಬ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಸ್ವಾಗತ ಭಾಷಣ ಮಾಡಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್.ಎಚ್. ಶಿವರುದ್ರಪ್ಪರವರು ಧನ್ಯವಾದ ಸಮರ್ಪಣೆ ನೆರವೇರಿಸಿದರು. ಶ್ರೀಮತಿ ಅಲ್ಬೀನಾ ವಾಜ಼್‌ರವರು ವೇದಿಕೆ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಖ್ಯಾತ ಸಂಗೀತ ನಿರ್ದೇಶಕರಾದ ರಾಗ್ ದೇವ್ ಶ್ರೀ ಚರಣ್ ಮಲ್ಲ್ಯರವರು ಸಂಗೀತ ನಿರ್ದೇಶಕರಾಗಿದ್ದರು. ಕನ್ನಡ ಚಿತ್ರಗಳ ಸಂಗೀತ ನಿರ್ದೇಶಕರುಗಳಾದ ಗುರು ಕಿರಣ್ ಮತ್ತು ಆಲ್ವಿನ್ ಫೆರ್ನಾಂಡಿಸ್ ಇವರುಗಳು ಅvಥಿ ಕಲಾವಿದರಾಗಿ ಭಾಗವಹಿಸಿದರು. ೨೧ ಹಿರಿಯ ಹಾಗೂ ಯುವ ಸಂಗೀತ ರಚನಕಾರರ ಹಾಡುಗಳ ಮನೋರಂಜನಾ ಕಾರ್ಯಕ್ರಮ ಜರಗಿತು. ಕೊಂಕಣಿಯ ೨೩ ಗಾಯಕರು ಹಾಗೂ ೧೦ ಮಂದಿ ವಾದ್ಯಗಾರರು ಸಂಗೀತೋತ್ಸವದಲ್ಲಿ ಭಾಗವಹಿಸಿದರು. ಶ್ರೀ ಸ್ಟ್ಯಾನಿ ಅಲ್ವಾರಿಸ್‌ರವರು ಸಂಗೀತ ಕಾರ್ಯಕ್ರಮದ ನಿರೂಪಣೆಗೈದರು. ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪ್ರಕಾಶ್ ಡಿಸೋಜ, ಡಾ| ರಶ್ಮಿ ಫೆರ್ನಾಂಡಿಸ್, ಸ್ವಾv ಶೇಟ್, ಅನುರಾಧಾ ಧಾರೇಶ್ವರ್, ಮೆಲ್ವಿನ್ ಪೆರಿಸ್, ವಿಲ್ಫ್ರೆಡ್ ಡಿಸೋಜ, ರೊನಿ ಕ್ರಾಸ್ತಾ, ಶೆರಿನ್ ವಾಲ್ಡರ್, ಜೋಶಲ್ ಡಿಸೋಜ, ಐರಿನ್ ರೆಬೆಲ್ಲೊ, ಅನಿಲ್ ಡಿಕುನ್ಹ, ಕ್ರಿಸ್ಮಿತಾ ಡಿಕೋಸ್ತ ಹಾಗೂ ಇನ್ನೂ ಮುಂತಾದ ಸಂಗೀತ ಕಲಾವಿದರು ತಮ್ಮ ಹಾಡುಗಳಿಂದ ಜನರ ಮನರಂಜಿಸಿದರು. ಈ ಕಾರ್ಯಕ್ರಮವು ಜನರ ಮನಸ್ಸನ್ನು ರಂಜಿಸಿ ಮೆಚ್ಚುಗೆಗೆ ಪಾತ್ರವಾಯಿತು.  ಕೊಂಕಣಿ ಭಾಷಾಭಿಮಾನಿಗಳು, ಆಸಕ್ತರು ಹಾಗೂ ಕಲಾಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು.

15. ಮಂಗಳೂರಿನಲ್ಲಿ ವೊವಿಯೊ-ವೆರ‍್ಸಾಂ ಕಾರ್ಯಗಾರ
     ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಸಾಂಸ್ಕೃತಿಕ ಸಮಿತಿ ವಾಲೆನ್ಸಿಯಾ ಇವರ ಸಹಯೋಗದಲ್ಲಿ ದಿನಾಂಕ ೧೬-೯-೨೦೦೬ರಂದು ಆದಿತ್ಯವಾರ ವಾಲೆನ್ಶಿಯಾ ಇಗರ್ಜಿ ಸಭಾಂಗಣದಲ್ಲಿ ಸಂಜೆ ೪:೦೦ ರಿಂದ ರಾತ್ರಿ ೯:೦೦ರವರೆಗೆ ವೊವಿಯೊ-ವೆರ‍್ಸಾಂ ಕಾರ್ಯಗಾರ ಜರಗಿತು. ಈ ಕಾರ್ಯಗಾರದಲ್ಲಿ ಶ್ರೀಮತಿ ಹಿಲ್ಡಾ ಡಿಸೋಜ, ಹಾಗೂ ಶ್ರೀಮತಿ ಐರಿನ್ ರೆಬೆಲ್ಲೊ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.  ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಗಾರದ ನಿರ್ದೇಶಕರಾಗಿದ್ದರು. ಅದೇ ಸಂದರ್ಭದಲ್ಲಿ ವೊವಿಯೊ-ವೆರ‍್ಸಾಂ ಕಾರ್ಯಗಾರದಲ್ಲಿ ಭಾಗವಹಿಸಿದ ಸರ್ವರಿಗೆ ವಂ|ಫಾ| ಬೊನವೆಂಚರ್ ನಜ್ರೆತ್‌ರವರು ಪ್ರಮಾಣ ಪತ್ರವನ್ನು ವಿತರಿಸಿದರು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಜನಮೆಚ್ಚುಗೆ ಪಡೆಯಿತು.

16. ಮುಂಬಯಿಯಲ್ಲಿ ಜರಗಿದ ಕೊಂಕಣಿ ಮಹೋತ್ಸವ ಕಾರ್ಯಕ್ರಮ
     ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಭಾಷಾ ಮಂಡಳಿ ಮಹಾರಾಷ್ಟ್ರ(ರಿ), ಹಾಗೂ ಕೊಂಕಣಿ ವೆಲ್ಫೆರ್ ಎಸೋಸಿಯೇಶನ್ ಮೀರಾ ರೋಡ್  ಇವರ ಸಹಯೋಗದಲ್ಲಿ ದಿನಾಂಕ ೩೦-೦೯-೨೦೦೭ ರಂದು ಮುಂಬಯಿಯ ಮೀರಾ ರೋಡಿನಲ್ಲಿರುವ ಸೈಂಟ್ ಜೋಸೆಫ್ ಕಮ್ಯೂನಿಟಿ ಹಾಲ್‌ನಲ್ಲಿ ಜರಗಿತು. ಪೂರ್ವಾಹ್ನ ೧೧:೦೦ ಗಂಟೆಗೆ ಕೊಂಕಣಿ ಮಹೋತ್ಸವ ಉದ್ಘಾಟನೆಯು ಜರಗಿತು. ಮೊದಲಿಗೆ ವೊವ್ಯೊ-ವೇರ್ಸ್ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಗಾರದಲ್ಲಿ ಶ್ರೀಮತಿ ಹಿಲ್ಡಾ ಡಿಸೋಜ, ಹಾಗೂ ಶ್ರೀಮತಿ ಐರಿನ್ ರೆಬೆಲ್ಲೊ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಗಾರದ ನಿರ್ದೇಶಕರಾಗಿದ್ದರು.ಶ್ರೀ ಆನ್ಸಿ ಪಾಲಡ್ಕರವರ ನೇತೃತ್ವದಲ್ಲಿ ಮುಂಬಯಿಯ ಪ್ರಖ್ಯಾತ ಕೊಂಕಣಿ ಕವಿಗಳಿಂದ ಕವಿಗೋಷ್ಟಿಯು ಜರಗಿತು.
ಕೊಂಕ್ಣಿ ಮ್ಹಾನ್ ಮನಿಸ್  ಏಕ್ ಮುಲಾಖತ್ ಕಾರ್ಯಕ್ರಮ ಜರಗಿತು. ಮ್ಹಾನ್ ಮನಿಸ್‌ರಾಗಿ ಪ್ರಖ್ಯಾತ ಸಾಹಿತಿಗಳಾದ ವಂ| ಫಾ| ರುಡೊಲ್ಫ್ ವಿ. ಡಿಸೋಜ  ಹಾಗೂ ಪ್ರಖ್ಯಾತ  ನಾಟಕಕಾರರಾದ ಡಾ| ಚಂದ್ರಶೇಖರ ಶೆಣೈ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಅವರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು. ಲಿಟ್ಲ್ ಕಿಂಗ್ ಗ್ರೂಪ್‌ನ ಶ್ರೀ ಮೆಕ್ಸಿಂ ಮಥಾಯಸ್‌ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಲಾಯ್ಕಾ ಗ್ರೂಪ್‌ನ ಶ್ರೀ ಗಿಲ್ಬರ್ಟ್ ಬ್ಯಾಪ್ಟಿಸ್ಟ್‌ರವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕೊಂಕಣಿ ಇತಿಹಾಸ, ಶ್ರೀಮಂತಿಕೆ ಮತ್ತು ಈಗಿನ ಪರಿಸ್ಥಿತಿ ಬಿಂಬಿಸುವ ಬಸ್ಣಿ ಕೊಂಕಣಿ ಸಂಗೀತ ಕಾರ್ಯಕ್ರಮವು ವಿಶ್ವ ಕೊಂಕಣಿ ಕಲಾರತ್ನ  ಶ್ರೀ ಎರಿಕ್ ಒಝೇರಿಯೊ ಮತ್ತು ತಂಡದವರು ನಡೆಸಿಕೊಟ್ಟರು.

೧೭. ಹುಬ್ಬಳ್ಳಿಯಲ್ಲಿ ಜರಗಿದ ಪುಸ್ತಕ ಪುರಸ್ಕಾರ ೨೦೦೬ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಜಿ.ಎಸ್.ಬಿ. ಸಮಾಜ, ಹುಬ್ಬಳ್ಳಿ ಇವರ ಸಹಯೋಗದಲ್ಲಿ 2006ರ ಪುಸ್ತಕ ಪುರಸ್ಕಾರ ಕಾರ್ಯಕ್ರಮವು ದಿನಾಂಕ ೦೭.೧೦.೨೦೦೭ರಂದು ಭಾನುವಾರ ಸಂಜೆ 5:00 ಗಂಟೆಗೆ ಹುಬ್ಬಳ್ಳಿ, ಜೆ.ಸಿ.ನಗರದಲ್ಲಿರುವ ಸರಸ್ವತಿ ಸದನದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಕೊಂಕಣೀ ಸಂಗೀತ ಕಲಾವಿದರಾದ ಶ್ರೀಮತಿ ಅನುರಾಧ ಧಾರೇಶ್ವರ್ ಇವರು ಭಾಗವಹಿಸಿದರು. ಹಾಗೂ ಗೌರವ ಅತಿಥಿಗಳಾಗಿ ಆಕಾಶವಾಣಿಯ ನಿವೃತ್ತ ಅಧಿಕಾರಿಗಳಾದ ಶ್ರಿ ನಾಗೇಶ ಶಾನ್‌ಭಾಗ್ ಇವರು ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರಿ ಎರಿಕ್ ಒಝೇರಿಯೊರವರು ವಹಿಸಿದರು.

ಪುಸ್ತಕ ಪುರಸ್ಕಾರದ ಅಧ್ಯಯನ ಕೃತಿ ವಿಭಾಗದಲ್ಲಿ ಶ್ರೀ ಶಿರ್ತಾಡಿ ವಿಲಿಯಂ ಪಿಂಟೊರವರನ್ನು ಮುಖ್ಯ ಅತಿಥಿಗಳಾದ ಶ್ರೀಮತಿ ಅನುರಾಧ ಧಾರೇಶ್ವರ್ ಹಾಗು ಗೌರವ ಅತಿಥಿಗಳಾದ ಶ್ರೀ ನಾಗೇಶ್ ಶಾನ್ ಭಾಗ್‌ರವರು  ಪುರಸ್ಕರಿಸಿದರು. ಕವನ ವಿಭಾಗದಲ್ಲಿ ಶ್ರೀ ವಲ್ಲಿ ಕ್ವಾಡ್ರಸ್, ಅಜೆಕಾರ್, ಸಣ್ಣ ಕತೆ ವಿಭಾಗದಲ್ಲಿ ಶ್ರೀ ಸ್ಟ್ಯಾನ್ ಅಗೇರಾ, ಮುಲ್ಕಿ ಇವರುಗಳು ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಭಾಗವಹಿಸಿರಲಿಲ್ಲ. ಹಾಗೂ ವಿಶೇಷ ಪುರಸ್ಕಾರ ವಿಭಾಗದಲ್ಲಿ ಮಕ್ಕಳ ಕತೆಗಾಗಿ ಶ್ರೀಮತಿ ಅರುಣಾ ಶಾನ್‌ಭಾಗ್‌ರವರನ್ನು ಮುಖ್ಯ ಅತಿಥಿಗಳಾದ  ಹಾಗೂ ಗೌರವ ಅತಿಥಿಗಳಾದ ಶ್ರೀ ನಾಗೇಶ್ ಶಾನ್‌ಭಾಗ್‌ರವರು ಪುರಸ್ಕರಿಸಿದರು. ಶ್ರೀಮತಿ ಒಲಿವೆರಾ ಫ್ಲಾವಿಯಾರವರ ಪರವಾಗಿ ಅವರ ಸಂಬಂಧಿಕರಾದ ಶ್ರೀಮತಿ ಜೆಸಿಂತಾರವರು ಪುಸ್ತಕ ಪುರಸ್ಕಾರವನ್ನು ಸ್ವೀಕರಿಸಿದರು. ವಿಶೇಷ ಪುರಸ್ಕಾರದಲ್ಲಿ ಶ್ರೀಮತಿ ಜೂಡಿ ಪಿಂಟೊವರು ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಭಾಗವಹಿಸಿರಲಿಲ್ಲ.
ಕಾರ್ಯಕ್ರಮದ ಅಂಗವಾಗಿ ಶ್ರೀ ಚರಣ್  ಮಲ್ಲ್ಯ(ರಾಗ್ ದೇವ್) ರವರ ನಿರ್ದೇಶನದಲ್ಲಿ ಕೊಂಕಣಿ ಸಂಗೀತ್-ನಾಚ್ ವೈಭವ್ ಕಾರ್ಯಕ್ರಮ ಜರಗಿತು. ನಾಚ್ ಸೊಭಾಣ್ ಪಂಗಡದ ಸದಸ್ಯರಿಂದ ಕೊಂಕಣಿ ನೃತ್ಯವನ್ನು ಪ್ರಸ್ತುತಪಡಿಸಿದರು. ಅಕಾಡೆಮಿಯ ಸದಸ್ಯರಾದ ಶ್ರೀ ಕೂಡ್ಲ ಆನಂದ ಶಾನ್‌ಭಾಗ್‌ರವರು ಕಾರ್ಯಕ್ರಮ ನಿರೂಪಣೆಗೈದರು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಜನಮೆಚ್ಚುಗೆ ಪಡೆಯಿತು.

18.ಸುರತ್ಕಲ್‌ನಲ್ಲಿ ಜರಗಿದ ವೊವ್ಯೊ ವೇರ್ಸ್ ಕಾರ್ಯಗಾರ ಮತ್ತು ಮ್ಹಾನ್ ಮನಿಸ್  ಏಕ್ ಮುಲಾಖತ್ ಕಾರ್ಯಕ್ರಮ
 ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕಥೊಲಿಕ್ ಸಭಾ, ಸುರತ್ಕಲ್ ಘಟಕ ಇವರ ಸಹಯೋಗದಲ್ಲಿ ದಿನಾಂಕ ೨೮-೧೦-೨೦೦೭ರಂದು ರವಿವಾರ ಸುರತ್ಕಲ್ ಹೋಲಿ ಫ್ಯಾಮಿಲಿ  ಶಾಲಾ ಸಭಾಂಗಣದಲ್ಲಿ ಪೂರ್ವಾಹ್ನ ೮:೪೫ರಿಂದ ಸಂಜೆ ೪:೦೦ರವರೆಗೆ ವೊವ್ಯೊ-ವೇರ್ಸ್ ಕಾರ್ಯಗಾರ ಜರಗಿತು. ಈ ಕಾರ್ಯಗಾರದ ಉದ್ಘಾಟಣೆಯನ್ನು ಸುರತ್ಕಲ್ ಚರ್ಚ್‌ನ ಧರ್ಮಗುರುಗಳಾದ ವಂ| ಫಾ| ಜೆ.ಬಿ.ಡಿಸೋಜರವರು ನೆರವೇರಿಸಿದರು. ಈ ಕಾರ್ಯಗಾರದಲ್ಲಿ ಶ್ರೀಮತಿ ಹಿಲ್ಡಾ ಡಿಸೋಜ, ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಶ್ರೀ ಮ್ಯಕ್ವಿನ್ ಫೆರ್ನಾಂಡಿಸ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಕಾರ್ಯಗಾರದ ನಿರ್ದೇಶಕರಾಗಿದ್ದರು.ಅದೇ ದಿನ, ಅದೇ ಸಭಾಭವನದಲ್ಲಿ ಸಂಜೆ ೪:೦೦ ಗಂಟೆಗೆ ಕೊಂಕ್ಣಿ ಮ್ಹಾನ್ ಮನಿಸ್ ಏಕ್ ಮುಲಾಖತ್ ಕಾರ್ಯಕ್ರಮವು ಜರುಗಿತು.ಮ್ಹಾನ್ ಮನಿಸ್‌ರಾಗಿ  ಕಿನ್ನಿಗೋಳಿಯ ಹಿರಿಯ ಕೊಂಕಣಿ ಸಾಹಿತಿ, ಪತ್ರಕರ್ತ, ಸಂಪಾದಕ ಹಾಗೂ ಸಮಾಜ ಸೇವಕರಾದ  ಶ್ರೀ ಕಿನ್ನಿಗೋಳಿ ಗಣೇಶ ಮಲ್ಯ ಹಾಗೂ ಹಾಗೂ ಮುಂಬಯಿಯ ಕೊಂಕಣಿ ನಾಟಕಕಾರ, ಸಂಘಟಕ ಮತ್ತು ಕೊಂಕಣಿ ಮುಖ್ಯಸ್ಥರಾದ ಶ್ರೀ ಹೆನ್ರಿ ಡಿಸಿಲ್ವಾ, ಸುರತ್ಕಲ್  ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ನಂತರ ಅವರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು. ಮಂಗಳೂರು ವಿಶ್ವವಿದ್ಯಾಲಯದ, ಚೇರ್ ಇನ್ ಕ್ರಿಶ್ಚಿಯಾನಿಟಿಯ  ಮುಖ್ಯಸ್ಥರಾದ ವಂ|ಡಾ| ಜೊನ್ ಫೆರ್ನಾಂಡಿಸ್ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಅದೇ ಸಂದರ್ಭದಲ್ಲಿ ವೊವ್ಯೊ-ವೇರ್ಸ್ ಕಾರ್ಯಗಾರದಲ್ಲಿ ಭಾಗವಹಿಸಿದ ಸರ್ವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಮೆಚ್ಚುಗೆ ಪಡೆಯಿತು.

19. ಮಂಗಳೂರಿನಲ್ಲಿ ಜರಗಿದ ಶಿಕ್ಷಕರ ಕಾರ್ಯಗಾರದಲ್ಲಿ 2 ಸಂಗ್ರಹ-ಕೃತಿಗಳ ವಿಮೋಚನಾ ಸಮಾರಂಭ
ಕರ್ನಾಟಕ  ಕೊಂಕಣಿ  ಸಾಹಿತ್ಯ ಅಕಾಡೆಮಿಯು ಸುವರ್ಣ ಕರ್ನಾಟಕ ಯೋಜನೆಯಲ್ಲಿ ದಿನಾಂಕ೨೯-೧೦-೨೦೦೭ರಂದು ಪೂರ್ವಾಹ್ನ ೯:೩೦ ಗಂಟೆಗೆ ಶಕ್ತಿನಗರದ ಕಲಾಂಗಣ್‌ನಲ್ಲಿ ಕೊಂಕಣಿ ಶಿಕ್ಷಕರ ಕಾರ್ಯಗಾರದಲ್ಲಿ ೨ ಸಂಗ್ರಹ-ಕೃತಿಗಳನ್ನು ವಿಮೋಚನೆಗೊಳಿಸಿತು. ೧) ಸುವರ್ಣ ಕರ್ನಾಟಕದಲ್ಲಿ ಕೊಂಕಣಿ ಜನರು (ಸುವರ್ಣ ಕರ್ನಾಟಕಾಂತ್ ಕೊಂಕ್ಣಿ ಲೋಕ್) ಈ ಕೃತಿಯನ್ನು ವಂ| ರಿಚರ್ಡ್ ರೇಗೊ ಜೆ.ಸ.ರವರು ಸಂಗ್ರಹಿಸಿದ ಪುಸ್ತಕವನ್ನು ಡಾ| ಜೆರಾಲ್ಡ್ ಪಿಂಟೊರವರು ಪರಿಶೀಲಿಸಿದ್ದು ದಾಯ್ಜಿ ವರ್ಲ್ಡ್ ನಿರ್ದೇಶಕ ಮತ್ತು ಸಂಪಾದಕರಾದ ಶ್ರೀ ವೊಲ್ಟರ್ ನಂದಳಿಕೆಯವರು ವಿಮೋಚಿಸಿದರು. ೨) ೨೦ನೇ ಶತಮಾನದ ಕೊಂಕಣಿ ಸಣ್ಣ ಕತೆಗಳು (೨೦ವ್ಯಾ ಶೆಕ್ಡ್ಯಾಚ್ಯೊ ಕೊಂಕ್ಣಿ ಕಾಣ್ಯೊ) ಈ ಕೃತಿಯನ್ನು ಶ್ರೀ ವಲ್ಲಿ ಕ್ವಾಡ್ರಸ್ ಹಾಗೂ ಕುಮಾರಿ ಸುವರ್ಣ ಗಾಡರವರು ಸಂಗ್ರಹಿಸಿದ್ದಾರೆ.
 ಈ ಕೃತಿಯನ್ನು ಪ್ರಖ್ಯಾತ ಕೊಂಕಣಿ ಕವಿ ಮತ್ತು ಸಾಹಿತಿಗಳಾದ ಶ್ರೀ ಮೆಲ್ವಿನ್ ರೊಡ್ರಿಗಸ್ ರವರು ವಿಮೋಚಿಸಿದರು. ಪೂರ್ವಾಹ್ನ ೧೦:೦೦ ರಿಂದ ಸಂಜೆ ೪:೦೦ರವರೆಗೆ ಶಿಕ್ಷಕರ ಕಾರ್ಯಗಾರ ಜರಗಿತು. ಕೊಂಕಣಿ ಶಿಕ್ಷಕರು ಉತ್ಸಾಹದಿಂದ ಈ ಕಾರ್ಯಗಾರದಲ್ಲಿ ಭಾಗವಹಿಸಿದರು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಜನಮೆಚ್ಚುಗೆ ಪಡೆಯಿತು.

20. ಕೊಂಕಣಿ ಬಜಾರ್‌ನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ವಿದ್ಯಾರ್ಥಿಗಳಿಗೆ ನಡೆದ ಕೊಂಕಣಿ ಜೋಡಿ ನೃತ್ಯ
      ಸ್ಪರ್ಧೆಗಳಲ್ಲಿ ವಿಜೇತರುಗಳ ವಿವರ.
ಕರ್ನಾಟಕ ಕೊಂಕಣಿ  ಸಾಹಿತ್ಯ ಅಕಾಡೆಮಿಯಿಂದ ಮಂಗಳೂರಿನ ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರದ ಸಭಾಂಗಣದಲ್ಲಿ ಕೊಂಕಣಿ ಬಜಾರ್ ಉದ್ಘಾಟನಾ ಸಮಾರಂಭವು ದಿನಾಂಕ 20-12-2007ರಂದು ಪೂರ್ವಾಹ್ನ 10-00 ಗಂಟೆಗೆ ಜರಗಿತು. ಕಾರ್ಯಕ್ರಮವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ವಂ|ಫಾ|ಅಲೆಕ್ಸಾಂಡರ್ ಎಫ್.ಡಿಸೋಜರವರು ಉದ್ಘಾಟಿಸಿದರು. ಗೌ ರವ ಅತಿಥಿಗಳಾಗಿ ಕಾರ್ಮೆಲ್ ಮೇಳದ ಸುಪಿರಿಯರ್‌ರಾದ ವಂ|ಫಾ| ಜ್ಯೊ ತಾವ್ರೊರವರು ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ರಿಜಿಸ್ಟ್ರರಾದ ಎಸ್.ಎಚ್.ಶಿವರುದ್ರಪ್ಪ ವಂದಿಸಿದರು. ಅಕಾಡೆಮಿ ಸದಸ್ಯರಾದ ವಿತೊರಿ ಕಾರ್ಕಳರವರು ಕಾರ್ಯಕ್ರಮ ನಿರೂಪಿಸಿದರು. ಕೊಂಕಣಿ ಬಜಾರ್ ದಿನಾಂಕ 20-12-2007ರಿಂದ 24-12-2007ರವರೆಗೆ ನಡೆಯಿತು. ಕೊಂಕಣಿ ಭಾಷೆಯು ಮಕ್ಕಳಲ್ಲಿ ಸಾಂಸ್ಕೃತಿಕವಾಗಿ ಬೆಳೆಯುವ ದೃಷ್ಟಿಯಿಂದ ಹಾಗೂ ಕೊಂಕಣಿ ಬಜಾರ್‌ನ ವಿಶೇಷ ಆಕರ್ಷಣೆಯಾಗಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ಮೂರು ದಿನ ಜೋಡು ನೃತ್ಯ ಸ್ಪರ್ಧೆಯನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯರವರು ಆಯ್ಕೆಯಾಗಿರುತ್ತಾರೆ.


ಪ್ರಾಥಮಿಕ ವಿಭಾಗ

  •     ಪ್ರಥಮ :  ಜ್ಞಾನ ಐತಾಳ್-ರಕ್ಷಾ ಪೈ  (ಕೆನರಾ ಪ್ರಥಮಿಕ ಶಾಲೆ, ಉರ್ವ)
  •     ದ್ವಿತೀಯ : ಆಶೆಲ್ ಸಿಕ್ವೇರಾ-ಆಂಡ್ರಿಯಾ ಡಿಸೋಜ (ಸೈಂಟ್ ಆಗ್ನೆಸ್ ಆಂಗ್ಲ ಮಾಧ್ಯಮ ಶಾಲೆ, ಬೆಂದುರ್)      
  •     ತೃತೀಯ : ಆಂಜೆಲಿನ್ ಗ್ಲೆನಿಟಾ ಡಿಸೋಜ-ವೈಷ್ಣವ್ ರಾಜ್ (ನಿತ್ಯಾದರ್ ಪ್ರಾ.ಶಾಲೆ, ತೊಕ್ಕೊಟ್ಟು.)   


ಮಾಧ್ಯಮಿಕ ವಿಭಾಗ

  •     ಪ್ರಥಮ: ಪಲ್ಲವಿ ಪ್ರಭು-ಮೇಧ ಬಿಡೆ (ಕೆನರಾ ಪ್ರಥಮಿಕ ಶಾಲೆ, ಉರ್ವ)
  •     ದ್ವಿತೀಯ: ಶರಲ್ ಎಮ್.ವೇಗಸ್-ಮೆಲ್ಬಾ ಪಿಂಟೊ (ಲೇಡಿಹಿಲ್ ಆಂಗ್ಲ ಹಿ.ಪ್ರಾ.ಶಾಲೆ, ಅಶೋಕನಗರ)
  •     ತೃತೀಯ: ಅಶ್ವಿತ್ ಜೊಯೆಲ್ ಡಿಸೋಜ-ಮನೀಷಾ ಆಂಡ್ರಿಯಾ ಡಿಸೋಜ (ನಿತ್ಯಾದರ್ ಪ್ರಾ.ಶಾಲೆ, ತೊಕ್ಕೊಟ್ಟು)   


ಪ್ರೌಢಶಾಲಾ ವಿಭಾಗ

  •     ಪ್ರಥಮ: ಆಶ್ನಿ-ರಶ್ಮಿ ಪೆರಿಸ್ (ಸೈಂಟ್ ಆಗ್ನೆಸ್ ಆಂಗ್ಲ ಮಾಧ್ಯಮ ಶಾಲೆ, ಬೆಂದುರ್)
  •     ದ್ವಿತೀಯ: ಜೊಸ್ಲಿನ್ ಮಸ್ಕರೇನ್ಹಸ್- ಐಲಿನ್ ಗೋವಿಯಸ್ (ಸೈಂಟ್ ಆಗ್ನೆಸ್ ಆಂಗ್ಲ ಮಾಧ್ಯಮ ಶಾಲೆ, ಬೆ ಂದುರ್ ಮತ್ತು ಶಾರದ ವಿದ್ಯಾಲಯ, ಮಂಗಳೂರು)
  •     ತೃತೀಯ: ಸೊನಾಲ್ ವೇಗಸ್-ದೆಬೊರಾ ಕ್ರಾಸ್ತಾ  (ಲೇಡಿಹಿಲ್ ಹೆಮ್ಮಕ್ಕಳ ಪ್ರೌಢಶಾಲೆ,ಮಂಗಳೂರು)


ಪ್ರಥಮ ಬಹುಮಾನ ರೂ. ೧೦೦೧/-,ದ್ವಿತೀಯ ಬಹುಮಾನ ರೂ.೭೫೧/- ಹಾಗೂ ತೃತೀಯ ಬಹುಮಾನ ರೂ.೫೦೧/-ನಗದು ಮತ್ತು ಅಷ್ಟೆ ಮೊತ್ತದ ಅಕಾಡೆಮಿ ಪ್ರಕಟಿಸಿದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.ಕುಮಾರಿ ಸ್ವೀಟಿ ಮತ್ತು ಅನಿಲ್ ತೀರ್ಪ್ಯಗಾರರಾಗಿ,ನಿರೂಪಣೆಯನ್ನು ವಿತೊರಿ ಕಾರ್ಕಳ ಹಾಗೂ ಸ್ಟ್ಯಾನಿ ಅಲ್ವಾರಿಸ್ ನಿರೂಪಿಸಿದರು.ಅಕಾಡೆಮಿ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ ಹಾಗೂ ರಿಜಿಸ್ಟ್ರಾರರಾದ ಎಸ್.ಎಚ್.ಶಿವರುದ್ರಪ್ಪರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನವನ್ನು ವಿತರಿಸಿದರು.

೨೧. ಫೆಬ್ರವರಿ ೨ ಮತ್ತು ೩ರಂದು ಕಲಾಂಗಣ್‌ನಲ್ಲಿ ಜರಗಿದ ಕೊಂಕಣಿ ಯುವಮಹೋತ್ಸವ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಾಂಡ್ ಸೊಭಾಣ್ ಹಾಗೂ ಕೊಂಕಣಿ ಯುವ ಆವಾಜ್ ಇವರ ಸಹಯೋಗದಲ್ಲಿ ದಿನಾಂಕ 02-02-08 ಮತ್ತು 03-02-08ರಂದು ಶಕ್ತಿನಗರದ ಕಲಾಂಗಣ್‌ನಲ್ಲಿ  ಕೊಂಕಣಿ ಯುವಮಹೋತ್ಸವ ಜರಗಿತು. ದಿನಾಂಕ 02-02-2008ರಂದು ಅಪರಾಹ್ನ 12-00 ಗಂಟೆಯಿಂದ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊಂಕಣಿ ಯುವ ಮಹೋತ್ಸವ ಸ್ಪರ್ಧಾ ಕಾರ್ಯಕ್ರಮ ಜರಗಿತು. ಈ ವಿಭಾಗದಲ್ಲಿ ಒಟ್ಟು ೮ ತಂಡಗಳು ಈ ಸ್ಪರ್ಧೆಗಳಲ್ಲಿ ಭಗವಹಿಸಿದ್ದು ಕೆನರ ಪದವಿ ಕಾಲೇಜು, ಮಂಗಳೂರು ಪ್ರಥಮ, ಮಿಫ್ಟ್ ಕಾಲೇಜು, ಕಂಕನಾಡಿ ದ್ವಿತೀಯ ಹಾಗೂ ಎಸ್.ಡಿ.ಎಂ. ಬಿಸ್‌ನೆಸ್ ಮ್ಯಾನೇಜ್‌ಮೆಂಟ್ ಕಾಲೇಜು, ಮಂಗಳೂರು ತೃತೀಯ ಬಹುಮಾನವನ್ನು ಪಡೆದವು.

ದಿನಾಂಕ ೦೩-೦೨-೨೦೦೮ರಂದು ಅಪರಾಹ್ನ ೧೨:೦೦ ರಿಂದ ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆಗಳು ಜರಗಿತು. ಈ ವಿಭಾಗದಲ್ಲಿ ಮಂಗ್ಳುರ‍್ಚಿಂ ಮೊತಿಯಾಂ ಪ್ರಥಮ, ಮನೋರಂಜನ್ ಮಂಗಳೂರು ತಂಡ ದ್ವಿತೀಯ ಹಾಗೂ ಯುವ ದಿವೊ,ಕುಲಶೇಖರ, ತೃತೀಯ ಬಹುಮಾನವನು ಪಡೆದವು.

 ಅದೇ ದಿನ ಸಂಜೆ ೫:೦೦ ಗಂಟೆಗೆ ಜರಗಿದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಉದ್ಯಮಿಗಳಾದ ಶ್ರೀ ರೊನಾಲ್ಡ್ ಕುಲಾಸೊ ಹಾಗೂ ಬೆಂಗಳೂರಿನ, ಭಾರತ ಸರ್ಕಾರದ ಐ.ಸಿ.ಸಿ.ಆರ್ ನ ನಿರ್ದೇಶಕರಾದ ಶ್ರೀ ಜೆ.ಡಬ್ಲ್ಯು ಲೋಬೊ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಹಾಗೂ ಎಕ್ಸ್‌ಪರ್ಟ್ ಎಜ್ಯುಕೇಶನ್  ಚಾರಿಟೇಬಲ್ ಫೌಂಡೇಶನ್‌ನ ಚೇರ್‌ಮೆನ್‌ರಾದ ಶ್ರೀ ನರೇಂದ್ರ ಎಲ್. ನಾಯಕ್‌ರವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಕೊನೆಗೆ ದಿನಾಂಕ ಫೆಬ್ರವರಿ ೨ ಮತ್ತು ೩ರಂದು ಜರಗಿದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರನ್ನು ಪ್ರಥಮ ಬಹುಮಾನ ರೂ.೫೦೦೦/-, ದ್ವಿತೀಯ ಬಹುಮಾನವಾಗಿ ರೂ.೩೦೦೦/- ಹಾಗೂ ತೃತೀಯ ಬಹುಮಾನವಾಗಿ ರೂ.೨೦೦೦/-ನಗದು, ಹಾಗೂ ಪ್ರಮಾಣ ಪತ್ರ, ಸ್ಮರಣಿಕೆಗಳನ್ನು ನೀಡಿ ಪುರಸ್ಕರಿಸಿದರು. ಅಕಾಡೆಮಿ ಅಧ್ಯಕ್ಷರಾದ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೊಂಕಣಿ ಯುವ ಆವಾಜ್‌ನ ಅಧ್ಯಕ್ಷರಾದ ರೋಶನ್ ಕ್ಯಾಸ್ತೆಲಿನೊರವರು ಸ್ವಾಗತಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್‌ರಾದ ಶ್ರೀ ಎಸ್.ಎಚ್.ಶಿವರುದ್ರಪ್ಪ ವಂದಿಸಿದರು. ಕೊಂಕಣಿ ಯುವ ಆವಾಜ್‌ನ ಕಾರ್ಯದರ್ಶಿಗಳಾದ ಅರುಣ್ ಅಜೆಕಾರ್‌ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಸಂಜೆ ೬:೩೦ ಗಂಟೆಗೆ ಜರಗಿದ ಅಂತಿಮ ಸುತ್ತಿನ ಸ್ಪರ್ಧೆಯು ಕೆನರಾ ಪದವಿ ಕಾಲೇಜು, ಮಂಗಳೂರು,ಮಿಫ್ಟ್ ಕಾಲೇಜು, ಕಂಕನಾಡಿ, ಮನೋರಂಜನ್ ಮಂಗಳೂರು ಹಾಗೂ ಮಂಗ್ಳುರ‍್ಚಿಂ ಮೊತಿಯಾಂ ಈ ನಾಲ್ಕು ತಂಡಗಳ ನಡುವೆ ಜರಗಿತು. ಮನೋರಂಜನ್ ಮಂಗಳೂರು ತಂಡವು ಅತಿ ಶ್ರೇಷ್ಠಿ ಕೊಂಕಣಿ ಯುವ ಪಂಗಡ ಪುರಸ್ಕಾರವನ್ನು ಪಡೆದುಕೊಂಡಿತು. ಈ ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮಕ್ಕೆ ಕಾಲೇಜು ಯುವಜನರು ಹಾಗೂ ಕೊಂಕಣಿ ಭಾಷಾಭಿಮಾನಿಗಳು ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರು.

೨೨.    ಫೆಬ್ರವರಿ ೧೦,೨೦೦೮ರಂದು ಕಾರ್ಕಳದಲ್ಲಿ ಜರಗಿದ ರಾಜಾಪುರ ಸಾರಸ್ವತ ಕೊಂಕಣಿ ಭಾಷಾ ಮಹೋತ್ಸವ ಮತ್ತು ಕೊಂಕ್ಣಿ ಮ್ಹಾನ್ ಮನಿಸ್-ಏಕ್ ಮುಲಾಖತ್
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ 10-02-2008ರಂದು ಕಾರ್ಕಳ ಹಿರ್ಗಾನ ಶ್ರೀ ಕ್ಷೇತ್ರ ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪೂರ್ವಾಹ್ನ 9:00 ಗಂಟೆಯಿಂದ ಸಂಜೆ  4:00ರವರೆಗೆ ರಾಜಾಪುರ ಸಾರಸ್ವತ ಕೊಂಕಣಿ ಭಾಷಾ ಮಹೋತ್ಸವ ಮತ್ತು ಕೊಂಕ್ಣಿ ಮ್ಹಾನ್ ಮನಿಸ್  ಏಕ್ ಮುಲಾಖತ್ ಕಾರ್ಯಕ್ರಮ ಜರುಗಿತು. ಪೂರ್ವಾಹ್ನ 10:00 ಗಂಟೆಗೆ ಜರಗಿದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಲಕ್ಷ್ಮೀಪುರದ ಆಡಳಿತ ಮೊಕ್ತೇಸರರಾದ ಶ್ರೀ ಬಾಬಣ್ಣ ಕೆ.ವಾಗ್ಳೆ ಉದ್ಘಾಟಿಸಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಗೋಕುಲದಾಸ್ ನಾ೦iiಕ್‌ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶ್ರೀ ಕವಳೀ ಮಠ, ಗೋವಾದ ವಿಶ್ವಸ್ಥರಾದ ಶ್ರೀ ಕಚೇರಿ ಸದಾನಂದ ನಾಯಕ್‌ರವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಅಕಾಡೆಮಿ ಅಧ್ಯಕ್ಷರಾದ ಎರಿಕ್ ಒಝೇರಿಯೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
     ಪೂರ್ವಾಹ್ನ 11:00ರಿಂದ ಅಪರಾಹ್ನ 1:00 ಗಂಟೆಯವರೆಗೆ ರಾಜಾಪುರ ಸಾರಸ್ವತ ಕೊಂಕಣಿ ಪರಂಪರಾ ಪದ್ಧತಿಯ ಪ್ರಾತ್ಯಕ್ಷತೆ ಜರಗಿತು.ಈ ಪ್ರಾತ್ಯಕ್ಷತೆಯಲ್ಲಿ ವಿವಾಹ ಪದ್ಧತಿ, ಶೋಭಾನೆ ಹಾಡು, ಜೋಗುಳ ಹಾಡು, ಭಜನೆ, ಗಾದೆಗಳು, ಕವಿಗೋಷ್ಟಿ, ಜಾನಪದ ನೃತ್ಯಗಳು ಇವುಗಳ ಪ್ರದರ್ಶನವನ್ನು ಪ್ರದರ್ಶಿಸಿದರು. ಅಪರಾಹ್ನ 2:00 ಗಂಟೆಗೆ ಯಕ್ಷಗಾನ, ಪ್ರಹಸನ, ಕಿರುನಾಟಕ, ಹರಿಕಥೆ ಈ ಕಾರ್ಯಕ್ರಮಗಳು ಜರಗಿತು. ಅಪರಾಹ್ನ ೩:೦೦ ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಕೊಂಕ್ಣಿ ಮ್ಹಾನ್ ಮನಿಸ್-ಏಕ್ ಮುಲಾಖತ್ ಕಾರ್ಯಕ್ರಮ ಜರಗಿತು. ಮ್ಹಾನ್ ಮನಿಸ್‌ರಾಗಿ ಸಾರಸ್ವತ ಸಚಿದೇಶ ಪತ್ರಿಕೆಯ  ಗೌರವ ಸಂಪಾದಕರಾದ ಶ್ರೀ ಸರಳೇಬೆಟ್ಟು ಗೋಪಾಲಕೃಷ್ಣ ನಾಯಕ್, ಹಾಗೂ ಹಿUನದ ಪ್ರಥಮ  ರಾಜಾಪುರ ಕೊಂಕಣಿ ಭಾಷಾ ನಾಟಕಕಾರರಾದ ಶ್ರೀ ಸದಾನಂದ ಬಾಂದೋಡ್ಕರ್ ಇವರುಗಳನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕರ್ನಾಟಕ ಬ್ಯಾಂಕ್ ಕೇಂದ್ರ ಕಚೇರಿಯ ಡಿ.ಜಿ.ಎಂ.  ಶ್ರೀ ಎನ್.ಉಪೇಂದ್ರ ಪ್ರಭು, ಶ್ರೀ ಭುವನೇಂದ್ರ ಪ್ರೌಢಶಾಲೆ, ಕಾರ್ಕಳದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ರವೀದ್ರ ಭಟ್, ಉಡುಪಿಯ ಸೈಂಟ್ ಮೇರಿಸ್ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರದ ಶ್ರೀ ಸಾಲ್ವೆಡೋರ್ ಫೆರ್ನಾಂಡಿಸ್ ಹಾಗೂ ಖಾರ್ವಿ ಮುಖ್ಯಸ್ಥರಾದ ಶ್ರೀ ನಾರಾಯಣ ಖಾರ್ವಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಅಕಾಡೆಮಿ ಅಧ್ಯಕ್ಷರಾದ ಎರಿಕ್ ಒಝೇರಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

23. ಕಾನಡಿ ಲಿಪಿಯಲ್ಲಿ ಕೊಂಕಣಿ ಬರೆಯುವ ಪ್ರಮಾಣ ರೀತಿ ವಿಚಾರ ವಿನಿಮಯ ಸಭೆ
  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕಾನಡಿ ಲಿಪಿಯಲ್ಲಿ ಕೊಂಕಣಿ ಬರೆಯುವ
ಪ್ರಮಾಣ ರೀತಿ-ವಿಚಾರ ವಿನಿಮಯ ಸಭೆಯು ದಿನಾಂಕ 17-02-2008ರಂದು ಪೂರ್ವಾಹ್ನ 9:30ರಿಂದ ಸಂಜೆ 4:30ರವರೆಗೆ ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ಜರಗಿತು.ಈ ಸಭೆಗೆ ಗೋವಾದ ತೊಮಾಸ್ ಸ್ಟೀವನ್ಸ್ ಕೊಂಕ್ಣಿ ಕೇಂದ್ರದ ನಿರ್ದೇಶಕರಾದ ವಂ|ಡಾ| ಪ್ರತಾಪ್ ನಾಯ್ಕ್ ಹಾಗೂ ಫಾ|ವಲೇರಿಯನ್ ಫೆರ್ನಾಂಡಿಸ್‌ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ,ಕೊಂಕ್ಣಿ ವ್ಯಾಕರಣದ ಬಗ್ಗೆ ಮಾರ್ಗದರ್ಶನ ನೀಡಿದರು.ಈ ಕಾರ್ಯಕ್ರಮಕ್ಕೆ ಕೊಂಕಣಿ ಲೇಖಕರು,ಸಾಹಿತಿ-ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
 
24. ದಿನಾಂಕ 09-03-2008ರಂದು ಹೊನ್ನಾವರದಲ್ಲಿ ಜರಗಿದ ಕೊಂಕಣಿ ಲೋಕೋತ್ಸವ
     ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಸಮನ್ವಯ ಸಮಿತಿ, ಹೊನ್ನಾವರ ಇವರಸಹಯೋಗದಲ್ಲಿ ದಿನಾಂಕ 09-03-2008ರಂದು ಆದಿತ್ಯವಾರ ಪೂರ್ವಾಹ್ನ 10:30ರಿಂದ ಸಂಜೆ 4:30ರವರೆಗೆ ಪ್ರತಿಭೋದಯ ಕಲಾಮಂದಿರ, ಹೊನ್ನಾವರದಲ್ಲಿ ಕೊಂಕಣಿ ಲೋಕೋತ್ಸವ ಕಾರ್ಯಕ್ರಮ ಜರಗಿತು. ಪೂರ್ವಾಹ್ನ 10:30 ಗಂಟೆಗೆ ಕಾಸರಕೋಡ, ಹೊನ್ನಾವರದ ಜಾನಪದ ತಜ್ಞರಾದ ಗಣ್ಯ ಶ್ರೀ ಪುರುಷೋತ್ತಮ್ ಬಿಕ್ಕು ಮೇಸ್ತರವರು ಗುಮಾಟ್ ಅನ್ನು ಬಾರಿಸಿ ಕೊಂಕಣಿ ಲೋಕೋತ್ಸವದ ಉದ್ಘಾಟನೆಯನ್ನು ಉದ್ಘಾಟಿಸಿದರು. ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಆರ್.ಎಸ್. ರಾಯ್‌ಕರ್, ಉಪ್ಪೋಣಿ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ವಹಿಸಿದರು. ಕೊಂಕಣಿ ಸಮನ್ವ೦ii ಸಮಿತಿಯ ಅಧ್ಯಕ್ಷರಾದ ಶ್ರೀ ಉಮೇಶ ಮೇಸ್ತ, ಹಾಗೂ ಕಾರ್ಯದರ್ಶಿಗಳಾದ ಶ್ರೀ ಸುರೇಶ ತಾಂಡೇಲ ಹಾಗೂ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಸುರೇಶ ತಾಂಡೇಲ ಇವರು ವೇದಿಕೆಯಲ್ಲಿರುವವರನ್ನು ಸ್ವಾಗತಿದರು. ಅಕಾಡೆಮಿ ರಿಜಿಸ್ಟ್ರಾರ್‌ರಾದ ಶ್ರೀ ಎಸ್.ಎಚ್.ಶಿವರುದ್ರಪ್ಪ ವಂದನಾರ್ಪಣೆಗೈದರು. ಸುವರ್ಣ ಗಾಡರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಕೊಂಕಣಿ ಲೋಕೋತ್ಸವದಲ್ಲಿ ಹೊನ್ನಾವರ ವಠಾರದ 9 ವಿವಿಧ ಸಮುದಾಯದ ಕೊಂಕಣಿ ಪಂಗಡದವರಿಂದ ಜಾನಪದ ಕಲಾದರ್ಶನ ಪ್ರಸ್ತುತ ಪಡಿಸಿದರು.

25.ಹೊನ್ನಾವರದಲ್ಲಿ ಜರಗಿದ ಅಕಾಡೆಮಿ ಗೌರವ ಪ್ರಶಸಿ 2007 ಪ್ರಶಸ್ತಿ ಪ್ರದಾನ ಸಮಾರಂಭ.
     ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ  ದಿನಾಂಕ 09-03-2008ರಂದು ರವಿವಾರ ಸಂಜೆ ೪:೩೦ ಗಂಟೆಗೆ ಹೊನ್ನಾವರದ ಪ್ರತಿಭೋದಯ ಕಲಾಮಂದಿರದಲ್ಲಿ ಅಕಾಡೆಮಿ ಗೌರವ ಪ್ರಶಸ್ತಿ 2007 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಿತು.   ಮೊದಲಿಗೆ ಹೊನ್ನಾವರದ ಪ್ರಮುಖ ಬೀದಿಗಳಲ್ಲಿ ಗೌರವ ಪ್ರಶಸ್ತಿ ವಿಜೇತರು ಹಾಗೂ ಕೊಂಕಣಿ ಜಾನಪದ  ಕಲಾತಂಡದವರಿಂದ ಭವ್ಯ ಮೆರವಣಿಗೆ ನಡೆಯಿತು. ಕೊಂಕಣಿ ಲೇಖಕರ ಒಕ್ಕೂಟಾ ಕರ್ನಾಟಕ(ರಿ) ಇದರ ಅಧ್ಯಕ್ಷರಾದ ಡಾ|ಎಡ್ವರ್ಡ್ ನಜರೆತ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಹೊನ್ನಾವರದ ಸ್ತ್ರೀ-ರೋಗ ತಜ್ಞರಾದ ಡಾ| ಸಂದೀಪ್ ರಾವ್ ಇವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ವಹಿಸಿದರು. ಈ ಕಾರ್ಯಕ್ರಮದಲ್ಲಿ ಕೊಂಕಣಿಯ ವಿವಿಧ Pತ್ರಗಳಿಗೆ ನೀಡಿದ ಸೇವೆಗಾಗಿ ಈ ಕೆಳಗಿನ ಮೂವರನ್ನು ಸನ್ಮಾನಿಸಿ ಗೌರವಿಸಲಾಯಿತು.
೧.    ಶ್ರೀ ಮಂಜಯ್ಯ ಶಿವು ಕುಂಬ್ರಿ, ಹೊನ್ನಾವರ           -  ಕೊಂಕಣಿ ಜಾನಪದ ಕ್ಷೇತ್ರ
೨.    ಶ್ರೀ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಮಂಗಳೂರು   -  ಕೊಂಕಣಿ ನಾಟಕ ಕ್ಷೇತ್ರ
೩.    ಡಾ| ಜೆರಾಲ್ಡ್ ಪಿಂಟೊ, ಕಲ್ಯಾಣಪುರ                -  ಕೊಂಕಣಿ ಸಾಹಿತ್ಯ ಕ್ಷೇತ್ರ

 ಪ್ರಶಸ್ತಿಯು ರೂ.10,000/-  ನಗದು, ಶಾಲು, ಹಣ್ಣು-ಹಂಪಲು, ಪ್ರಶಸ್ತಿ ಫಲಕ, ಗಂಧದ ಹಾರ ಇವುಗಳನ್ನು ನೀಡಿ ಸನ್ಮಾನಿಸಲಾಯಿತು.
ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು ಹಾಗೂ ಪ್ರಶಸ್ತಿ ವಿಜೇತರನ್ನು ಶುಭ ಹಾರೈಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್‌ರಾದ ಎಸ್.ಎಚ್. ಶಿವರುದ್ರಪ್ಪರವರು ವಂದನಾರ್ಪಣೆ ಮಾಡಿದರು. ಅಕಾಡೆಮಿಯ ಸದಸ್ಯರಾದ ಶ್ರೀ ವಿತೊರಿ ಕಾರ್ಕಳರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಹೊನ್ನಾವರದ ಕೊಂಕಣಿ ಜಾನಪದ ಪಂಗಡವರಿಂದ ಕೊಂಕಣಿ ಜಾನಪದ ಕಲಾದರ್ಶನ ಪ್ರದರ್ಶಿಸಿದರು. ಕೊಂಕಣಿ ಭಾಷಾಭಿಮಾನಿಗಳು ಹಾಗೂ ಸಾಹಿತಿ-ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

೨೬. ಬೆಂಗಳೂರಿನಲ್ಲಿ ಜರಗಿದ ಭಾಷಾ ಭಾವೈಕ್ಯದ ಸಾಂಸ್ಕೃತಿಕ ಸಂಗಮ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್(ರಿ) ಮಂಗಳೂರು ಇವರ ಸಹಯೋಗದಲ್ಲಿ ಭಾಷಾ ಭಾವೈಕ್ಯದ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವು ದಿನಾಂಕ ೧೬-೩-೨೦೦೮ರಂದು ಸಂಜೆ ೫:೦೦ ಗಂಟೆಗೆ ಬೆಂಗಳೂರಿನ ಜಯನಗರದ ಆರ್.ವಿ.ಶಿಕ್ಷಕರ ತರಬೇತಿ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಕೇಂದ್ರ ಆಡಳಿತ ಸ್ಮಧಾರಣಾ ಆಯೋಗದ ಅಧ್ಯಕ್ಷರಾದ ಡಾ| ಎಂ.ವೀರಪ್ಪ ಮೊಯಿಲಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಐ.ಎಂ. ವಿಠಲಮೂರ್ತಿಇವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್(ರಿ)ನ ಅಧ್ಯಕ್ಷರಾದ ಶ್ರೀ ಎಂ. ಬಿ. ಅಬ್ದುಲ್ ರೆಹಮಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಎಮ್.ಕೆ.ಸೀತಾರಾಮ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ಕೊನೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

೨೭. ಮಂಗಳೂರಿನಲ್ಲಿ ಜರಗಿದ ಕೊಂಕಣಿ ವೈಭವ್ ಕಾರ್ಯಕ್ರಮ
ಕರ್ನಾಟಕ  ಕೊಂಕಣಿ  ಸಾಹಿತ್ಯ  ಅಕಾಡೆಮಿಯ ವತಿಯಿಂದ ’ಕೊಂಕಣಿ  ವೈಭವ್'  ಕಾರ್ಯಕ್ರಮ  ದಿನಾಂಕ 29-3-2008ರಂದು ಸಂಜೆ 5-00 ಗಂಟೆಗೆ ಸೈಂಟ್ ಎಲೋಶಿಯಸ್ ಕಾಲೇಜಿನ ಐ.ಟಿ. ಬ್ಲೊಕ್ ಸಭಾಂಗಣದಲ್ಲಿ ಜರಗಿತು.ಪ್ರಥಮವಾಗಿ ಪುಸ್ತಕ ಪುರಸ್ಕಾರವನ್ನು 1)ಡಾ|ಜೆರಾಲ್ಡ್ ಪಿಂಟೊರವರ ಕಾದಂಬರಿ ’ತಿಸ್ರಿ ತಕ್ಲಿ’,2)ಶ್ರೀ ಎಚ್.ಜೆ.ಗೋವಿಯಸ್‌ರವರ ಸಣ್ಣಕಥೆ ’ಹಾಂವ್ ತುಕಾ ಭಗ್ಸುಂಚಿಂ ನಾ|’ 3)ಶ್ರೀಮತಿ ನಂದಿನಿಯವರ ಕವನ ’ತುಜೆ ಮ್ಹಜೆಮದೆಂ’ ಈ ಪುರಸ್ಕೃvರಿಗೆ  ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಹಾಗೂ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಐ.ಎಂ.ವಿಠ್ಠಲಮೂರ್ತಿಯವರು ಪುಸ್ತಕ ಪುರಸ್ಕಾರ ಪ್ರದಾನ ಮಾಡಿದರು. ಸುವರ್ಣ ಕರ್ನಾಟಕ ಯೋಜನೆಯಡಿ ಅಕಾಡೆಮಿಯ ಪ್ರಕಟಣೆಗಳಾದ 1)ಸಾಶ್ವಿಲೊ ಉಗ್ಡಾಸ್, 2) ತಿಚ್ಯಾ ಮೊರ್ನಾ ಉಪ್ರಾಂತ್, 3)ಮಹಾಕವಿ ಗೋವಿಂದ ಪೈ,  4)ಸಂಸ್ಕಾರ್, 5) ಸುವರ್ಣ ಕರ್ನಾಟಕಾಂತ್ ಕೊಂಕ್ಣಿ ಲೋಕ್ (ವಿ.ಸಿ.ಡಿ.) ಹಾಗೂ ಗ್ರಂಥ ಪ್ರಕಟಣೆ ಯೋಜನೆಯಡಿ 1) ಮಾಧ್ಯಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, 2)ವೆಲ್‌ಕಮ್ ಟು ಕೊಂಕಣಿ (WELCOME  TO  KONKANI), 3)’ಶಾಳಾಂನಿ ಕೊಂಕ್ಣಿ’ ಜಯ್ತೆವಂತ್ ಸಾಹಸ್ 4) ಕುಡ್ಮಿ ಜಾನಪದ್ ಸಂಗ್ರಹ್, 5) ಕನ್ನಡ ಲಿಪಿಯೆಂತ್ ಕೊಂಕ್ಣಿ ಬರೊಂವ್ಚಿ ಪ್ರಮಾಣ್ ರೀತ್ 6)ಆರ್.ಎಸ್.ಬಿ.ಸಾಹಿತ್ಯ ಸಂಗ್ರಹ್ಗಳನ್ನು ಮುಖ್ಯ ಅತಿಥಿಗಳಾದ ಕರ್ನಾಟಕ ವಿಧಾನ ಪರಿಷತ್ತು ಸಭಾಪತಿಗಳಾದ ಪ್ರೊ| ಬಿ.ಕೆ. ಚಂದ್ರಶೇಖರ್‌ರವರು ಪುಸ್ತಕ/ವಿ.ಸಿ.ಡಿ.ಗಳನ್ನು ಅನಾವರಣಗೊಳಿಸಿದರು.  ಕರ್ನಾಟಕ ಕೊಂಕಣಿ ಲೇಖಕರ ಒಕ್ಕೂಟ ಇದರ ಅಧ್ಯಕ್ಷರು ಹಾಗೂ ಕೊಂಕ್ಣಿ ಪ್ರಚಾರ್ ಸಂಚಾಲನ್, ಮಂಗಳೂರು ಇದರ ಕಾರ್ಯದರ್ಶಿಗಳಾದ ಡಾ| ಎಡ್ವರ್ಡ್ ನಜ್ರೆತ್‌ರವರು ಶುಭ ಹಾರೈಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಎಸ್.ಎಚ್.ಶಿವರುದ್ರಪ್ಪರವರು ವಂದನಾರ್ಪಣೆ ನೆರವೇರಿಸಿದರು. ಅಕಾಡೆಮಿ೦ii ಸದಸ್ಯರಾದ ಶ್ರೀ ವಿತೊರಿ ಕಾರ್ಕಳ್ ಹಾಗೂ ವಿನ್ಸೆಂಟ್ ಆಳ್ವರವರು ಕಾರ್ಯಕ್ರಮ ನಿರೂಪಿಸಿದರು.
      ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮದಲ್ಲಿ ನೆಲ್ಲು ಪೆರ್ಮನ್ನೂರ್ ಇವರ ತಂಡದವರಿಂದ ಹಾಸ್ಯ ತುಣುಕುಗಳು ಹಾಗೂ ನಾಚ್ ಸೊಭಾಣ್ ಪಂಗಡದವರಿಂದ ನೃತ್ಯ ಪ್ರದರ್ಶನ ಜರಗಿತು.ಹಾಗೂ ಕುಂದಾಪುರ,ಭಟ್ಕಳದ ಕೊಂಕಣಿ ತಂಡಗಳಿಂದ ಜಾನಪದ ಕಾರ್ಯಕ್ರಮ ಜರಗಿತು.ಕೊಂಕಣಿ ಭಾಷಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಜನಮೆಚ್ಚುಗೆ ಪಡೆಯಿತು.


೨೮.  ಮಂಗಳೂರಿನಲ್ಲಿ ಜರಗಿದ ಶಾಲೆಗಳಲ್ಲಿ ಕೊಂಕಣಿ ವಿಜಯೋತ್ಸವ ಸಮಾರಂಭ.
        ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಪ್ರಚಾರ್ ಸಂಚಾಲನ್ ಇದರ ಸಹಯೋಗದಲ್ಲಿ ದಿನಾಂಕ 9-4-2008ರಂದು ಅಪರಾಹ್ನ 1-00 ಗಂಟೆಗೆ  ಮಂಗಳೂರಿನ  ಶಕ್ತಿನಗರದ  ಕಲಾಂಗಣ ನಲ್ಲಿ ಶಾಲೆಯಲ್ಲಿ ಕೊಂಕಣಿ ವಿಜಯೋತ್ಸವ ಸಮಾರಂಭವು ಜರಗಿತು. ಈ ಕಾರ್ಯಕ್ರಮಕ್ಕೆ  ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಗಣೇಶ್ ಹೊಸಬೆಟ್ಟು ಇವರು ಮುಖ್ಯ ಅತಿಥಿಗಳಾಗಿದ್ದರು. ಉರ್ಸುಲಾಯ್ನ್ ಫ್ರಾನ್ಸಿಸ್ಕನ್ ಧರ್ಮ ಪಂಗಡದ ಮುಖಸ್ಥರಾದ ಗೌರವಾನ್ವಿತ ಧರ್ಮಭಗಿಣಿ ಸಿ| ಡೋರಿನ್ ಡಿಸೋಜ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶ್ರೀಮತಿ ಮರಿಯಮ್ಮ ಥೋಮಸ್, ಶ್ರೀ ಫೆಬಿಯನ್ ಕುಲಾಸೊ ಇವರುಗಳು ಗೌರವ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎರಿಕ್ ಒಝೇರಿಯೊರವರು ವಹಿಸಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್.ಎಚ್. ಶಿವರುದ್ರಪ್ಪರವರು ವಂದನಾರ್ಪಣೆಗೈದರು. ಕೊಂಕಣಿ ಪ್ರಚಾರ್ ಸಂಚಲನದ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ಟೆಲಿನೊರವರು ಸ್ವಾಗತಿಸಿದರು. ಶ್ರೀ ಟೈಟಾಸ್ ನೊರೊನ್ಹರವರು  ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭ ದಿ| ಜೆಸ್ಸಿ ಕ್ಯಾಸ್ಟೆಲಿನೊ ಶ್ರೇಷ್ಠ ಕೊಂಕಣಿ ಶಿಕ್ಷಕಿ ಪ್ರಶಸ್ತಿಯನ್ನು ಬಜಪೆ ಪರೋಕಿಯಲ್ ಪ್ರಾಥಮಿಕ ಶಾಲೆಯ ಕೊಂಕಣಿ ಶಿಕ್ಷಕಿಯಾದ ಶ್ರೀಮv ಕೊಸೆಸ್ ಡಿಸೋಜರವರಿಗೆ  ನೀಡಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಪ್ರತಿಯೊಂದು ಶಾಲೆಯಲ್ಲಿ ಕೊಂಕಣಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರಾಜ್ಯದಲ್ಲಿ  ಮೊದಲ 10 ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಪಠ್ಯಪುಸ್ತಕ ತಯಾರಿಯಲ್ಲಿ ದುಡಿದವರಿಗೆ ಕೂಡ ಸನ್ಮಾನಿಸಲಾಯಿತು. ಕೊಂಕಣಿ ಶಿಕ್ಷಕ/ಶಿಕ್ಷಕಿಯರಿಗೆ ಕೊಂಕಣಿ ಭತ್ತೆ ವಿತರಣೆ ಮಾಡಲಾಯಿತು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

2007-08ನೇ ಸಾಲಿನ ಪ್ರಕಟಣೆಗಳು :
೧) ಖಾರ್ವಿ ಲೋಕ್-ಗೀತ್ ಸಂಗ್ರಹ್                  ಸುರೇಶ್ ತಾಂಡೇಲ (ಅ.ಪ್ರ)
೨) ೨೦ವ್ಯಾ ಶೆಕ್ಡ್ಯಾಚ್ಯೊ ಕೊಂಕ್ಣಿ ಕವಿತಾ                ಮೆಲ್ವಿನ್ ರೊಡ್ರಿಗಸ್(ಅಪ್ರ.)
೩) ಭಾಯ್ಲ್ಯಾನ್ ಆಯ್ಲೊ ವೊರ್                     ಐರಿನ್ ರೆಬೆಲ್ಲೊ (ಅ.ಪ್ರ)
೪) ೨೦ವ್ಯಾ ಶೆಕ್ಡ್ಯಾಚೆ ಕೊಂಕ್ಣಿ
     ಮ್ಹಾನ್ ಮನಿಸ್(ಭಾಗ್-೧)                     ಅಕಾಡೆಮಿ ಪ್ರಕಾಶನ
೫) ಸುವರ್ಣ ಕರ್ನಾಟಕಾಂತ್ ಕೊಂಕ್ಣಿ ಲೋಕ್           ಫಾ| ರಿಚರ್ಡ್ ರೇಗೊ ಜೆ.ಸ.(ಅ.ಪ್ರ.)
೬) ೨೦ವ್ಯಾ ಶೆಕ್ಡ್ಯಾಚ್ಯೊ ಕೊಂಕ್ಣಿ ಕಾಣಿಯೊ              ವಲ್ಲಿ ಕ್ವಾಡ್ರಸ್ (ಅ.ಪ್ರ.)
೭) ಸಾಶ್ವಿಲೊ ಉಗ್ಡಾಸ್                             ವಿಕ್ಟರ್ ಡಿಸಿಲ್ವ(ಅ.ಪ್ರ)
೮) ತಿಚ್ಯಾ ಮೊರ್ನಾ ಉಪ್ರಾಂತ್                      ಫಾ| ಪ್ರತಾಪ್ ನಾಯ್ಕ್(ಅ.ಪ್ರ)           
೯) ಮಹಾಕವಿ ಗೋವಿಂದ ಪೈ                       ಸುವರ್ಣ ಗಾಡ(ಅ.ಪ್ರ.)                
೧೦)ಮಾಧ್ಯಮದಲ್ಲಿ ಕರ್ನಾಟಕ ಕೊಂಕಣಿ
    ಸಾಹಿತ್ಯ ಅಕಾಡೆಮಿ                        ವಿನ್ಸೆಂಟ್ ಆಳ್ವ(ಅ.ಪ್ರ.)                 
೧೧)ಸಂಸ್ಕಾರ್                                  ವಿನ್ಸೆಂಟ್ ಆಳ್ವ (ಅ.ಪ್ರ.)                
೧೨)WELCOME TO KONKANI              ಸ್ಟೀವನ್ ಕ್ವಾಡ್ರಸ್ (ಅ.ಪ್ರ)             
೧೩) ಶಾಳೆಂತ್ ಕೊಂಕಣಿ ಜಯ್ತೆವಂತ್ ಸಾಹಸ್      ಸ್ಟೀವನ್ ಕ್ವಾಡ್ರಸ್/ವಿತೊರಿ ಕಾರ್ಕಳ್     
೧೪) ಕುಡ್ಮಿ ಜಾನಪದ್ ಸಂಗ್ರಹ್                    ಡಿ.ವಿ. ಪ್ರಕಾಶ್(ಅ.ಪ್ರ.)           
೧೫) ಕಾನಡಿ ಲಿಪಿಂತ್ ಕೊಂಕ್ಣಿ ಬರೊಂವ್ಚಿ ಪ್ರಮಾಣ್ ರೀತ್ ಫಾ| ಪ್ರತಾಪ್ ನಾಯ್ಕ್(ಅ.ಪ್ರ.)   
೧೬) ಆರ್.ಎಸ್.ಬಿ.ಸಾಹಿತ್ಯ ಸಂಗ್ರಹ್             ಪುಂಡಲೀಕ್ ಮರಾಠೆ

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]