ಶ್ರೀ ನಾರಾಯಣ ಖಾರ್ವಿ ಅಧ್ಯಕ್ಷರು ಹಾಗೂ ಸದಸ್ಯರ ಸಮಿತಿ
೧.   ದಿನಾಂಕ ೬-೪-೨೦೧೧ ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಪ್ರಚಾರ ಸಂಚಲನ iಂಗಳೂರು ಇವರ ಸಹಯೋಗದಲ್ಲಿ ಮಂಗಳೂರು ಶಕ್ತಿನಗರದ ಕಲಾಂಗಣ್‌ನಲ್ಲಿ “ಶಾಳಾಂನಿ ಕೊಂಕ್ಣಿ ವಿಷ್ಲೇಶಣ್ ಆನಿ ಸಂಭ್ರಮ್” ಕಾರ್ಯಕ್ರಮವನ್ನು ನಡೆಸಲಾಯಿತು.

೨.   ದಿನಾಂಕ ೧೦-೪-೨೦೧೧ ಮತ್ತು ೧೧-೪-೨೦೧೧ ರಂದು “ಕೊಂಕಣಿ ಸಾಹಿತ್ಯ ಸಾಂಕೃತಿಕ್ ಸಮ್ಮೇಳನ್” ಕಾರ್ಯಕ್ರಮವು ಮೈಸೂರಿನ  ಕುವೆಂಪು ನಗರದ ವೀಣೆ ಶೇಷಣ್ಣ ಸಭಾಂಗಣದಲ್ಲಿ ನಡೆಯಿತು.

೩.   ದಿನಾಂಕ ೧೨-೪-೨೦೧೧ ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸ್ಸಂಸ್ಕೃತಿ ಇಲಾಖೆ ಚಾಮರಾಜನಗರ ಇವರ ಸಹಕಾರದಲ್ಲಿ “ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ್” ಕಾಂiiಕ್ರಮವು ದಿನಾಂಕ ೧೨-೪-೨೦೧೧ ರಂದು ಚಾಮರಾಜನಗರದ, ಜೆ.ಎಚ್.ಪಾಟೀಲ ಸಭಾಂಗಣದಲ್ಲಿ ನಡೆಯಿತು.

೪.   ದಿನಾಂಕ ೧೭-೪-೨೦೧೧ ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕುಡುಬಿ ಜಾನಪದ ಕಲಾವೇದಿಕೆ ಎಡಪದವು ಇವರ ಸಂಯುಕ್ತಾಶ್ರಯದಲ್ಲಿ ಎದಪದವಿನಲ್ಲಿ “ಕುಡುಬಿ ಜಾನಪದ ಕಲಾ ಉತ್ಸವ”ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಕಾಡೆಮಿಯ ಪ್ರಕಟಣೆಗಳಾದ “ಗುಮಟ್” ಮತ್ತು “ಕುಡುಬಿ ಕೊಂಕ್ಣಿ ಗಾದಿ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.ಹಾಗೂ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಾಯಿತು.

೫.   ದಿನಾಂಕ ೨೨-೪-೨೦೧೧ರಿಂದ ೩೦-೪-೨೦೧೧ರ ವರೆಗೆ ಎಕ್ಕಂಬಿಯಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ಸ್ನೇಹಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ಎಕ್ಕಂಬಿ ಇವರ ಸಹಕಾರದಲ್ಲಿ “ಕೊಂಕಣಿ ಜಾನಪದ ಕಲಾ ತರಬೇತಿ ಶಿಬಿರ”ವನ್ನು  ಎಕ್ಕಂಬಿಯ ಸ್ನೇಹಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ  ೯ ದಿನಗಳ ಕಾಲ ಹಮ್ಮಿಕೊಳ್ಳಲಾಯಿತು.

೬.   ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಪ್ರತಿಮಾ ಕೊಂಕಣಿ ಸಾಂಸ್ಕೃತಿಕ ಕಲಾವೇದಿಕೆ ಹೊನ್ನಾವರ ಇವರ ಸಹಕಾರದಲ್ಲಿ ೨೪-೪-೨೦೧೧ ರಂದು “ಕೊಂಕಣಿ ಸಾಂಸ್ಕೃತಿಕ ಸಾಂಜ್” ಕಾರ್ಯಕ್ರಮವು  ಶರಾವತಿ ಕಲಾಮಂದಿರ್  ಪ್ರತಿಬೋದಯ್, ಹೊನ್ನಾವರ ಇಲ್ಲಿ ನಡೆಯಿತು.

೭.   ದಿನಾಂಕ ೨೪-೪-೨೦೧೧ ರಂದು ಮೂಡಬಿದರೆಯ ಸರ್ವೊದಯ ಸಾಹಿತ್ಯ ವೇದಿಕೆ ಇವರು ನಡೆಸಿರುವ ಕವಿ ಚುಟುಕು ಸಮ್ಮೇಳನದಲ್ಲಿ ಜೇಮ್ಸ್ ಪಿಂಟ್ಪ್, ಗಿರಿಯಪ್ಪ ಗೌಡ, ವೆಂಕಟೇಶ್ ಪ್ರಭು ರವರ ಕೊಂಕಣಿ ಕವಿತಾ ವಚನಾದ ಬಗ್ಗೆ ಪ್ರಾಯೋಜನೆ ನೀಡಲಾಯಿತು.

೮.   ದಿನಾಂಕ ೩೦-೪-೨೦೧೧ ರಂದು ಮಂಗಳೂರಿನಲ್ಲಿ ದಿ ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ ಇವರು ನಡೆಸಿರುವ ಆಹಾರೋತ್ಸವದಲ್ಲಿ ಕುಡುಬಿ ಜಾನಪದ ಕಲಾ ವೇದಿಕೆಯ  ಕೊಂಕಣಿ  ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಾಯೋಜಿಸಲಾಯಿತು.

೯.   ಕ್ಯಾಪ್ ಮ್ಯಾನ್ ಮೀಡಿಯಾ ಮೇಕರ್ಸ್ ಮಂಗಳೂರು ಇವರು ನಡೆಸಿರುವ ಕಾರ್ಯಕ್ರಮದಲ್ಲಿ ಕೊಂಕಣಿ ಅಕಾಡೆಮಿವತಿಯಿಂದ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರವೀಂದ್ರ ಪ್ರಭು ಇವರ ಸಂಗೀತ ಕಾರ್ಯಕ್ರಮವನ್ನು ಪ್ರಾಯೋಜಿಸಲಾಯಿತು.

೧೦.   ದಿನಾಂಕ ೧೫-೫-೨೦೧೧ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಕಲಾ ಆನಿ ಸಾಹಿತ್ಯ ಸಾಂಸ್ಕೃತಿಕ ಸಂಘಟನ್, ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ “ಕೊಂಕಣಿ ಜಾನಪದ ಜಾಗೃತಿ ಕಾgಂಕ್ರಮ ಹಾಗೂ ವೋವಿಯಾ ಸ್ಪರ್ದೆ” ಉಡುಪಿಯ ಡೋನ್ ಬೋಸ್ಕೊ  ಸಭಾಂಗಣದಲ್ಲಿ ನಡೆಯಿತು.

೧೧.   ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಸ್ವರಶ್ರೀ ಸಾಹಿತ್ಯ ವೇದಿಕೆ ಮಂಗಳೂರು ಇವರ ಸಹಕಾರದಲ್ಲಿ ದಿನಾಂಕ ೨೦-೫-೨೦೧೧ ರಿಂದ ೨೨-೫-೨೦೧೧ ರ ವರೆಗೆ ಕೊಂಕಣಿ ಭಾವಗೀತೆ ಶಿಶುಗೀತೆ, ಭಕ್ತಿಗೀತೆ ಕಾರ್ಯಾಗರವನ್ನು ಮಂಗಳೂರಿನ , ವಿಟಿ ರಸ್ತೆಯ ನಳಂದಾಶಾಲೆಯಲ್ಲಿ ಮೂರುದಿನಗಳ ಕಾಲ ನಡೆಯಿತು.

೧೨.   ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಸಂಸ್ಥಾನಂ ಶ್ರೀಕೃಷ್ಣಮಠ ಪರ್ಯಾಯ ಶ್ರೀಶಿರೂರು ಮಠ ಉಡುಪಿ ಇವರ ಸಹಕಾರದಲ್ಲಿ “ ರಾಜ್ಯಮಟ್ಟದ ಕೊಂಕಣಿ ಮಹಿಳಾ ಸಾಹಿತ್ಯ ಸಾಂಸ್ಕೃತಿಕ ಉತ್ಸವ ೨೦೧೦-೧೧” ದಿನಾಂಕ ೨೮-೫-೨೦೧೧ ಮತ್ತು ೨೯-೫-೨೦೧೧ ರಂದು  ಉಡುಪಿ ಶ್ರೀಕೃಷ್ಣಮಠ “ರಾಜಾಂಗಣ” ಇಲ್ಲಿ ನಡೆಯಿತು.

13.   “ಕೊಂಕಣಿ ಜಾನಪದ ಪರಿಕರ ವಿತರಣಾ ಕಾರ್ಯಕ್ರಮ”ವು ದಿನಾಂಕ ೩೧-೫-೨೦೧೧ ರಂದು ಸಂಜೆ ೪-೩೦ ಕ್ಕೆ ಕುಂದಾಪುರದ ಶ್ರೀ ವೆಂಕಟರಮಣ ಆರ್ಕೇಡ್  ಸಭಾಂಗಣದಲ್ಲಿ ಜರುಗಿತು.

೧೪.   ದಿನಾಂಕ ೮-೬-೨೦೧೧ ರಂದು ಕರ್ನಾಟಕ ಸಾಂಸ್ಕೃತಿಕ ಕಲಾವೇದಿಕೆ ಮಂಗಳೂರು ಇವರು ನಡೆಸಿರುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ “ಕೊಂಕಣಿ ಕುಡುಬಿ ಜಾನಪದ ಕಲಾ ಪ್ರದರ್ಶನ” ಕಾರ್ಯಕ್ರಮವನ್ನು ಪ್ರಾಯೋಜಿಸಲಾಗಿದೆ.

೧೫.   ದಿನಾಂಕ ೧೧-೭-೨೦೧೧ ರಂದು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನ ಮಂಗಳೂರು ಇವರು ನಡೆಸಿರುವ ಕಾರ್ಯಕ್ರಮದಲ್ಲಿ “ಸಂಗೀತ ಸೌರಭ- ಭಜನ್ ಸಂಧ್ಯಾ” ಕಾರ್ಯಕ್ರಮದಲ್ಲಿ ಶ್ರೀ ಶ್ರೀನಿವಾಸ್ ಶೆಣೈ ಪುತ್ತೂರು ಮತ್ತು ಬಳಗದವರಿಂದ ಭಜನ ಕಾರ್ಯಕ್ರಮವನ್ನು ಪ್ರಾಯೋಜಿಸಲಾಯಿತು.

೧೬.   ದಿನಾಂಕ ೧೧-೭-೨೦೧೧ ರಂದು ಕಾರವಾರದ ಮಜಾಳಿಯಲ್ಲಿ “ಕೊಂಕಣಿ ಶಿಕ್ಷಣ ಅಭಿಯಾನ” ಕಾರ್ಯಕ್ರiದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು.

೧೭.   ದಿನಾಂಕ ೧೩-೭-೨೦೧೧ ರಂದು ಅಂಕೋಲಾ ತಾಲೂಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.

೧೮.   ದಿನಾಂಕ ೧೫-೭-೨೦೧೧   ಕುಮಟಾ ತಾಲೂಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.

೧೯.   ದಿನಾಂಕ ೧೬-೭-೨೦೧೧ ರಂದು ಶ್ರಿ ವಿಠೋಬ ಭಜನಾ ಮಂಡಳಿ ಮುಂಡ್ಕೂರು ಇವರು ನಡೆಸಿರುವ ಕಾರ್ಯಕ್ರಮ ಕೊಂಕಣೀ ಭಕ್ತಿ ಭಾವ ಗಾಯನ ಕಾರ್ಯಕ್ರಮದಲ್ಲಿ ಶ್ರೀ ಶಂಕರ್ ಶಾನುಭಾಗ್ ಮತ್ತು ಶ್ರೀ ಪುತ್ತೂರು ಪಾಂಡುರಂಗ ನಾಯಕ್ ಇವರ ಕಾರ್ಯಕ್ರಮವನ್ನು ಪ್ರಾಯೋಜಿಸಲಾಯಿತು.

೨೦.   ದಿನಾಂಕ  ೧೯-೭-೨೦೧೧ ರಂದು   ಭಟ್ಕಳ ಮತ್ತು ಹೊನ್ನಾವರ ತಾಲೂಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. 

೨೧.   ದಿನಾಂಕ ೨೦-೭-೨೦೧೧ ರಂದು ಸಿದ್ದಾಪುರದಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. 

೨೨.   ದಿನಾಂಕ ೨೧-೭-೨೦೧೧ ಶಿರಸಿ ತಾಲುಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. 

೨೩.   ದಿನಾಂಕ ೨೨-೭-೨೦೧೧ ಬಿಣಗ, ಜೋಗ ಇತರ ತಾಲುಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. 

೨೪.   ದಿನಾಂಕ ೨೪-೭-೨೦೧೧ ರಂದು ಯಲ್ಲಾಪುರದ ಮೈತಿ  ಕಲಾ ಬಳಗ ಇವರ ಸಹಕಾರದಲ್ಲಿ ಜಿಲ್ಲಾ ಮಟ್ಟದ “ಕೊಂಕಣಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಗಮ” ಕಾರ್ಯಕ್ರಮ ಏರ್ಪಡಿಸಲಾಯಿತು.

೨೫.   ದಿನಾಂಕ ೨೫-೭-೨೦೧೧ ರಂದು ಯಲ್ಲಾಪುರದಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. 

೨೬.   ದಿನಾಂಕ ೨೬-೭-೨೦೧೧ ರಂದು ಹಳಿಯಾಳ ಮತ್ತು ಜೋಯಿಡಾಗಳಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.

೨೭.   ದಿನಾಂಕ ೨೮-೭-೨೦೧೧ ರಂದು ಮುಂಡಗೋಡ ತಾಲುಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. 

೨೮.   ದಿನಾಂಕ ೨೯-೭-೨೦೧೧ ರಂದು ಭಟ್ಕಳದಲ್ಲಿ ಕೊಂಕಣೀ ಶಿಕ್ಷಣ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮ

೨೯.   ದಿನಾಂಕ ೩೧-೭-೨೦೧೧ ಮೈಸೂರಿನಲ್ಲಿ ಕೊಂಕಣಿ ಸಂಘಸಂಸ್ಥೆಗಳ ಸಹಯೋಗದಲ್ಲಿ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ.

 


೩೧.   ದಿನಾಂಕ ೨೦-೮-೨೦೧೧ ಬರೋಡಾದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಗೌಡ ಸಾರಸ್ವತ ಸಮಾಜ ಬರೋಡಾ ಇಅವರ ಸಹಯೋಗದಲ್ಲಿ ಕೊಂಕಣಿ  ಮಾನ್ಯತಾ ದಿನಾಚರಣೆಯ ಆಚರಣೆ.

೩೨.   ದಿನಾಂಕ ೨೧-೮-೨೦೧೧ ಶಿರಸಿ, ಉತ್ತರ ಕನ್ನಡದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್ ಹಾಗೂ ಜಿ.ಎಸ್.ಬಿ ಸೇವಾವಾಹಿನಿ ಇವರ ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಆಚರಿಸಲಾಯಿತು.

೩೩.   ದಿನಾಂಕ ೨೭-೮-೨೦೧೧ ರಂದು ಶ್ರೀ ಕಾಶೀಮಠ ಹೆಮ್ಮಾಡಿಯಲ್ಲಿ ಕೊಂಕಣಿ ಭಾವ ಸಂಗೀತ ಕಾರ್ಯಕ್ರಮವನ್ನು ನಡೆಸಲಾಯಿತು.

೩೪.   ದಿನಾಂಕ ೨೯-೮-೨೦೧೧ ರಂದು ನಾದ ಮಂದಿರ ಮಂಗಳೂರು ಇವರ ಸಹಯೋಗದಲ್ಲಿ ದಿನಾಂಕ ೯-೯-೨೦೧೧ ರ ವರೆಗೆ ಹಮ್ಮಿಕೊಂಡಿರುವ ಕೊಂಕಣಿ ಗಾಯನ ಶಿಬಿರದ ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು.

೩೫.   ದಿನಾಂಕ ೨೫-೮-೨೦೧೧ ರಂದು ಅಧ್ಯಕ್ಷರ ಜರೂರು ಸ್ವರೂಪ ಕಾರ್ಯಕ್ರಮ ಯೋಜನೆಯಡಿ ಶಿರಸಿ, ಮಾರಿಕಾಂಬಾ ನಗರದ ಶ್ರೀ ಸಾಯಿಬಾಬಾ ದೇವಸ್ಥಾನ ದಲ್ಲಿ ಕೊಂಕಣಿ ಹಾಸ್ಯ ಪ್ರದರ್ಶನ ಕಾರ್ಯಕ್ರಮ  ನಡೆಸಲಾಯಿತು.

೩೬.   ದಿನಾಂಕ ೨೬-೮-೨೦೧೧ ರಂದು ಅಧ್ಯಕ್ಷರ ಜರೂರು ಸ್ವರೂಪ ಕಾರ್ಯಕ್ರಮ ಯೋಜನೆಯಡಿ ಕಾರವಾರದ ಶ್ರೀ ರಾಮಕೃಷ್ಣಾಶ್ರಮದಲ್ಲಿ ಕೊಂಕಣಿ ಕಥಾ  ಕೀರ್ತನಾ ಕಾರ್ಯಕ್ರಮ ನಡೆಸಲಾಯಿತು.

೩೭.   ದಿನಾಂಕ ೨೩-೮-೨೦೧೧ ರಂದು ಅಧ್ಯಕ್ಷರ ಜರೂರು ಸ್ವರೂಪ ಕಾರ್ಯಕ್ರಮ ಯೋಜನೆಯಡಿ  ನವನಗರ, ಹುಬ್ಬಳ್ಳಿ ಇಲ್ಲಿಯ ಬೇತಲ್ ಶಾಲಾ ಆವರಣದಲ್ಲಿ  ಮನೋರಂಜನ್(ಜಾದು, ಹಾಸ್ಯ, ಶಾಡೊಪ್ಲೆ) ಕಾರ್ಯಕ್ರಮ  ನಡೆಸಲಾಯಿತು.

೩೮.   ದಿನಾಂಕ ೨೮-೮-೨೦೧೧ ರಂದು ಮಂಗಳೂರಿನಲ್ಲಿ ಆರ್ ಎಕ್ಸ್ ಲೈಫ್ ಸ್ಟೈಲ್ ಇವರ ಸಹಯೋಗಸಲ್ಲಿ ಶ್ರ್ರಾವಣ ಸಂಭ್ರಮ ಕಾರ್ಯಕ್ರಮವನ್ನು ನಡೆಸಲಾಯಿತು.

೩೯.   ದಿನಾಂಕ ೨೯-೮-೨೦೧೧ ರಂದು ಗುಲ್ಬರ್ಗಾದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.

೪೦.   ದಿನಾಂಕ ೨೯-೮-೨೦೧೧ ರಂದು ಕೊಂಕಣಿ ಗಾಯನ ಶಿಬಿರವನ್ನು ಮಂಗಳೂರಿನಲ್ಲಿ ನಡೆಸಲಾಯಿತು.

೪೧.   ದಿನಾಂಕ ೩೦-೮-೨೦೧೧ ರಂದು ಬೀದರ್ ನಲ್ಲಿ ಕೊಂಕಣಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ್ ಸಮ್ಮಿಲನ್ ಕಾಂiiಕ್ರಮವನ್ನು ನಡೆಸಲಾಯಿತು.

೪೨.   ದಿನಾಂಕ ೩೧-೮-೨೦೧೧ ರಂದು ಅಕಾಡೆಮಿ ಹಾಗೂ ಮಾಟೊವ್ ಮಂಗಳೂರು ಕೊಂಕಣಿ ಸಂಸ್ಕೃತಿ ಕಲಾ ಪ್ರತಿಷ್ಟಾನ ಇವತ ಸಹಯೋಗದಲ್ಲಿ ವೋವಿಯಾ ಸ್ಪರ್ದೆ- ವೆರ‍್ಸಾಂ ಗಾಯನ ಕಾರ್ಯಕ್ರಮ ಕಿನ್ನಿಗೋಳಿಯಲ್ಲಿ ನಡೆಯಿತು.

 


ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು
೨೦೧೧-೧೨ರ ಕಾರ್ಯಕ್ರಮಗಳು

೧.   ದಿನಾಂಕ ೧೦-೪-೨೦೧೧ ಮತ್ತು ೧೧-೪-೨೦೧೧ ರಂದು ಮೈಸೂರಿನಲ್ಲಿ ನಡೆದ “ಕೊಂಕಣಿ ಸಾಹಿತ್ಯ ಸಾಂಕೃತಿಕ್ ಸಮ್ಮೇಳನ್”
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಅಭಿಮಾನದಿಂದ ಪ್ರಸ್ತುತಪಡಿಸಿದ “ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ್ ಸಮ್ಮೇಳನ್” ಕಾರ್ಯಕ್ರಮವು ದಿನಾಂಕ ೧೦-೪-೨೦೧೧ ರಂದು ಮೈಸೂರಿನ ಕುವೆಂಪು ನಗರದ ವೀಣೆ ಶೇಷಣ್ಣ ಸಭಾಂಗಣದಲ್ಲಿ ನಡೆಯಿತು. ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸಂದೇಶ್ ಸ್ವಾಮಿ ಕಾರ್ಯಕ್ರiವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಕುಂದಾಪುರ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಎನ್.ಅಣ್ನೇಗೌಡ , ಚಂದ್ರಶೇಕರ ನಾಯಕ್, ಗ್ರೇಶಿಯನ್ ರೋಡ್ರಿಗಸ್ ಮತ್ತಿತರರು ಹಾಗೂ ಅಕಾಡೆಮಿಯ ಸದಸ್ಯರು ಉಪಸ್ತಿತರಿದ್ದರು. ಶ್ರೀ ವಲ್ಲಿವಗ್ಗ ಮೈಸೂರು ರವರ ಅಧ್ಯಕ್ಷತೆಯಲ್ಲಿ ಕವಿಗೋಷ್ಟಿಯನ್ನು ಆಯೋಜಿಸಲಾಗಿದ್ದು, ಶ್ರೀಮತಿ ಪೂರ್ಣಿಮಾ ಮಲ್ಯ , ಶ್ರೀಮತಿ ಕುಸುಮಾ ಕಾಮತ್, ಶ್ರೀಮತಿ ಲೀನಾ ಡಿಸೋಜಾ, ಬ್ರ.ವಿನೋದ್ ಕುಲಾಸೋ ಮೈಸೂರು, ಶ್ರೀ ನಾರಾಯಣ ಕಾಮತ್ ಸುಳ್ಯ ರವರು ಕವಿಗಳಾಗಿ ಭಾಗವಹಿಸಿದ್ದರು. ಕೊಂಕಣಿ ಭಾಷೆ ಅಂದು-ಇಂದು-ಮುಂದು ಶೀರ್ಷಿಕೆಯ ವಿಚಾರಗೋಷ್ಠಿಯು ಡಾ| ಕೆ. ರಾಘವೇಂದ್ರ ಪೈ ಮೈಸೂರು ರವರ ಅಧ್ಯಕ್ಶತೆಯಲ್ಲಿ ಜರುಗಿತು, ಶ್ರೀ ಸದಾನಂದ ಬಾಂದೋಡ್ಕರ್,ಶ್ರೀ ಜೋರ್ಜ್ ವಿಲಿಯಂ ಡಿಸೋಜಾ, ಶ್ರೀ ಚಿದಾನಂದ  ಕಾಸರಗೋಡು ಪ್ರಬಂದ ಮಂಡಕರಾಗಿ ಭಾಗವಹಿಸಿದ್ದರು. ಸಾಂಸ್ಕೃತಿಕ ವೈವಿಧ್ಯದಲ್ಲಿ ಶ್ರೀಮತಿ ಯೋಗಿಶ್ ಕಿಣಿ ಮತ್ತು ಪಂಗಡ ,ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್‌ಮೈಸೂರು,ಶ್ರೀಮತಿ ವಿಭಾ ಶ್ರೀನಿವಾಸ ನಾಯಕ್‌ಮತ್ತು ಪಂಗಡ ಮಂಗಳೂರು, ಮಾನೆಸ್ತ್ ಎಂ.ಎಸ್.ಕಾಮತ್ ಮತ್ತು ಪಂಗಡ ಬೆಂಗಳೂರು ರವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ದಿನಾಂಕ ೧೧-೪-೨೦೧೧ರಂದು ಶ್ರೀಮತಿ ಕುಸುಮಾಪ್ರಭು ಮತ್ತು ಬೆಳಗಾಂ,ಪುತ್ತೂರು ನರಸಿಂಹ ನಾಯಕ ಮತ್ತು ಬಳಗ, ಸುರೇಂದ್ರ ಪಾಲನಕರ್ ಮತ್ತು ಪಂಗಡ, ಪುತ್ತೂರು ಪಾಂಡುರಂಗ ನಾಯಕ್ ಮತ್ತು ಪಂಗಡ, ಮತ್ತು ಶ್ರೀಮತಿ ಮಂಜುಶೆಟ್ಟಿ ಮತ್ತು ಪಂಗಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

೨.   ದಿನಾಂಕ ೧೨-೪-೨೦೧೧ ರಂದು ಚಾಮರಾಜನಗರದಲ್ಲಿ  ನಡೆದ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ್ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸ್ಸಂಸ್ಕೃತಿ ಇಲಾಖೆ ಚಾಮರಾಜನಗರ ಇವರ ಸಹಕಾರದಲ್ಲಿ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ್ ಕಾಂiiಕ್ರಮವನ್ನು ದಿನಾಂಕ ೧೨-೪-೨೦೧೧ ರಂದು ಚಾಮರಾಜನಗರದ, ಜೆ.ಎಚ್.ಪಾಟೀಲ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿಯವರು ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಕುಂದಾಪುರ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆಂiiನ್ನು ವಹಿಸಿದ್ದರು. ಜಿಲ್ಲಾ ಪಂಚಾಯತ್ ಸಿಇಓ ಕೆ.ಸುಂದರ ನಾಯ್ಕ ರವರು ವ್ಯಂಗ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಕ್ಯಾಥೊಲಿಕ ಸಮಾಜದ ಮುಖಂಡ ಅಂತೋನಿ ಡಿ ಸಿಲ್ವಾ, ಜಿಎಸ್ಬಿ ಮ್ಖಂದ ಹರಿದಾಸ್ ಕಾಮತ್, ಪುತ್ತೂರು ಪಾಂಡುರಂಗ ನಾಯಕ್, ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಹಾಗೂ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.  ಅಕಾಡೆಮಿಯ ಸದಸ್ಯರಾದ ಶ್ರೀ ವಾಸುದೇವ ಶಾನ್‌ಭಾಗರವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಟಿಯನ್ನು ಆಯೋಜಿಸಿದ್ದು , ಶ್ರೀಮತಿ ಲೀನಾ ಡಿಸೋಜಾ, ಕುಸುಮಾಕಾಮತ್, ಶ್ರೀ ಸದಾನಂದ ಬಾಂದೋಡ್ಕರ್, ಶ್ರ್ರೀ ಸೋಮಶೇಕರ ಬಿಸಲ್ವಾಡಿ, ಶ್ರಿ ಪ್ರೊ,ಸಿ.ನಾಗಣ್ಣ ಮೈಸೂರ್, ಶ್ರೀ ಗವರ್ ತರೀಕೆರವಿ, ಶ್ರೀ ಬಿ.ಎಸ್.ವಿನಯ, ಶ್ರೀಮತಿ ಎಸ್.ವಿನಯ ಮೈಸೂರು ಕವಿಗಳಾಗಿ ಭಾಗವಹಿಸಿದ್ದರು. ಶ್ರಿ ಸುರೇಂದ್ರ ಪಾಲ್ನಕರ್ ಮತ್ತು ಬಳಗ  ಹುಬ್ಬಳ್ಳಿ, ಶ್ರೀ ಮಂಜು ಶೆಟ್ಟಿ ಮತ್ತು ಪಂಗಡ ಶಿರಸಿ, ಕುಮಾರಿ ಎಸ್.ಎಸ್.ಪೆಡ್ನೇಕರ್ ಮತ್ತು ಪಂಗಡ, ಶ್ರಿ ಮುರಳಿಧರ ಪ್ರಭು ಮತ್ತು ಕುಸುಮಾ ಕಾಮತ್ ಬೆಳಗಾಂ, ಶ್ರೀಮತಿ ಸವಿತಾ ಕಾಮತ್ ಮತ್ತು ವಿಶ್ವನಾಥ ಶಣೈ ಮಂಗಳೂರುರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

೩    ದಿನಾಂಕ ೧೭-೪-೨೦೧೧ ರಂದು ನಡೆದ ಕುಡುಬಿ ಜನಾಪದ ಕಲಾ ಉತ್ಸವ
ದಿನಾಂಕ ೧೭-೪-೨೦೧೧ ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕುಡುಬಿ ಜಾನಪದ ಕಲಾವೇ ದಿಕೆ ಎಡಪದವು ಇವರ ಸಂಯುಕ್ತಾಶ್ರಯದಲ್ಲಿ ಎದಪದವಿನಲ್ಲಿ ಕುಡುಬಿ ಜಾನಪದ ಕಲಾವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ “ಕುಡು ಜಾನಪದ ಕಲಾ ಉತ್ಸವವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಕಾಡೆಮಿಯ ಪ್ರಕಟಣೆಗಳಾದ “ಗುಮಟ್ ಮತ್ತು ಕುದುಬಿ ಕೊಂಕ್ಣಿ ಗಾದಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಾ ಜೆ ಪಾಲೆಮಾರ್, ಶಾಸಕರಾದ ಶ್ರೀ ಅಭಯಚಂದ್ರ ಜೈನ್, ಕರಾವಳಿ ಅಭಿವ್ರ್ದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಜನಾರ್ಧನ ಗೌಡ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಕಾಡೆಮಿಯಿಂದ ರಾಜ್ಯದ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

೪   ದಿನಾಂಕ ೨೨-೪-೨೦೧೧ರಿಂದ ೩೦-೪-೨೦೧೧ರ ವರೆಗೆ ಎಕ್ಕಂಬಿಯಲ್ಲಿ ಜರುಗಿದ ‘ಕೊಂಕಣಿ ಜಾನಪದ ಕಲಾ ತರಬೇತಿ ಶಿಬಿರ”
ದಿನಾಂಕ ೨೨-೪-೨೦೧೧ ರಿಂದ ೩೦-೪-೨೦೧೧ ರ ವ್ರೆಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ಸ್ನೇಹಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ಎಕ್ಕಂಬಿ ಇವರ ಸಹಕಾರದಲ್ಲಿ ಕೊಂಕಣಿ ಜಾನಪದ ಕಲಾ ತರಬೇತಿ ಶಿಬಿರವನ್ನು  ಎಕ್ಕಂಬಿಯ ಸ್ನೇಹಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ  ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ದಿನಾಂಕ ೨೨-೪-೨೦೧೧ ರಂದು ಈ ಕಾರ್ಯಕ್ರಮದ ಉದ್ಘಾಟನಾ ಕಾರ್ಯುಕ್ರಮವನ್ನು ಹಮ್ಮಿಕೊಂಡಿದ್ದುತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮಂಗಲಾ ಆರ್ ಭಟ್ ರವರು ಉದ್ಘಾಟಿಸಿದರು.

೫    ದಿನಾಂಕ ೨೪-೪-೨೦೧೧ ರಂದು ಹೊನ್ನಾವರದಲ್ಲಿ ನಡೆದ “ಸಾಂಸ್ಕೃತಿಕ ಸಾಂಜೆ” ಕಾರ್ಯಕ್ರಮ
ದಿನಾಂಕ ೨೪-೪-೨೦೧೧ ರಂದು ಕೊಂಕಣಿ  ಸಾಹಿತ್ಯ ಅಕಾಡೆಮಿ ಮತ್ತು ಪ್ರತಿಮಾ ಕೊಂಕಣಿ ಸಾಂಸ್ಕೃತಿಕ ಕಲಾವೇದಿಕೆ ಹೊನ್ನಾವರ ಇವರ ಸಹಕಾರದಲ್ಲಿ “ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರiವನ್ನು  ಶರಾವತಿ ಕಲಾಮಂದಿರ್ ಪ್ರತಿಬೋದಯ್, ಹೊನ್ನಾವರ ಇಲ್ಲಿ ನಡೆಯಿತು. ಅದೇ ದಿನ ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದ್ ಅಕಾಡೆಮಿಯಾಧ್ಯಕ್ಷರಾದ ಕುಂದಾಪುರ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದರ್ಶನ್ ಮಹಿನ್ಯಾಲೆ ಕೊಂಕಣಿ ಪತ್ರ್ ಇದರ ಸಂಪಾದಕರಾದ ರೆ|ಫಾ|ನಿರ್ಮಲ್ ಕುಮಾರ್ ಮಿರಾವಿಂದಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು ರೆ|ಫಾ|ಆನೆಕ್ಲೆಟೀಸ್ ದಿ’ಮೆಲ್ಲೊ, ರೆ|ಫಾ|ಇಗ್ನೇಶಿಯಸ್ ಡಿ’ಸೋಜಾ,  ರೆ|ಫಾ| ರಿಚರ್ಡ್ ರೋಡ್ರಿಗಸ್, ಶ್ರೀ ಸಮ್ಸನ್ ಜೋನ್ ಡಿಸೋಜಾ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. sಉದ್ಘಾಟನಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

೬    ದಿನಾಂಕ ೨೪-೪-೨೦೧೧ ರಂದು ಮೂಡಬಿದಿರೆಯ ಸರ್ವೋದಯ ಸಾಹಿತ್ಯ ಕಾಲಾ ವೆದಿಕೆ ಇವರು ನಡೆಸಿರುವ ಕವಿ ಚುಟುಕು ಸಮ್ಮೇಳನದಲ್ಲಿ ಕೊಂಕಣಿ ಕವಿತಾ ವಾಚನದ ಬಗ್ಗೆ ಪ್ರಾಯೋಜನೆ ನೀಡಲಾಯಿತು.

೭   ದಿನಾಂಕ ೩೦-೪-೨೦೧೧ರಂದು ಮಂಗಳೂರಿನಲ್ಲಿ ದಿ ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ ಇವರು ನಡೆಸಿರುವ ಆಹಾರೋತ್ಸವದಲ್ಲಿ ಕೊಂಕಕಣಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಾಯೋಜಿಸಲಾಯಿತು.

೮    ಕ್ಯಾಪ್ ಮೆನ್ ಮೀಡಿಯಾ ಮೇಕರ್ಸ್ ಮಂಗಳೂರು ಇವರು ನಡೆಸಿರುವ ಕಾರ್ಯಕ್ರಮದಲ್ಲಿ ಕೊಂಕಣಿ ಅಕಾಡೆಮಿ ವತಿಯಿಂದ ರವೀಂದ್ರ ಪ್ರಭು ಅವರ ಸಂಗೀತ ಕಾರ್ಯಕ್ರಮವನ್ನು ಪ್ರಾಯೋಜಿಸಲಾಯಿತು.

೯   ದಿನಾಂಕ ೧೫-೫-೨೦೧೧ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಕಲಾ ಆನಿ ಸಾಹಿತ್ಯ ಸಾಂಸ್ಕೃತಿಕ ಸಂಘಟನ್, ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ “ಕೊಂಕಣಿ ಜಾನಪದ ಜಾಗೃತಿ ಕಾgಂಕ್ರಮ ಹಾಗೂ ವೋವಿಯಾ ಸ್ಪರ್ದೆ” ಉಡುಪಿಯ ಡೋನ್ ಬೋಸ್ಕೊ ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಶರಾದ ಕುಂದಾಪುರ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮ್ದ ಅಂಗವಾಗಿ ಜಾನಪದ ವೋವಿಯ ಹಾಡುಗಳ ಸ್ಪರ್ದೆಂiiನ್ನು ಆಯೋಜಿಸಲಾಗಿತ್ತು.

೧೦    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಸ್ವರಶ್ರೀ ಸಾಹಿತ್ಯ ವೇದಿಕೆ ಮಂಗಳೂರು ಇವರ ಸಹಕಾರದಲ್ಲಿ ದಿನಾಂಕ ೨೦-೫-೨೦೧೧ ರಿಂದ ೨೨-೫-೨೦೧೧ ರ ವರೆಗೆ ಕೊಂಕಣಿ ಭಾವಗೀತೆ ಶಿಶುUಗಿತೆ, ಭಕ್ತಿಗೀತೆ ಕಾರ್ಯಾಗರವನ್ನು ಮಂಗಳೂರಿನ , ವಿಟಿ ರಸ್ತೆಯ ನಳಂದಾಶಾಲೆಯಲ್ಲಿ ಮೂದಿನಗಳ ಕಾಲ ನಡೆಯಿತು.

೧೧   ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಸಂಸ್ಥಾನಂ ಶ್ರೀಕೃಷ್ಣಮಠ ಪರ್ಯಾಯ ಶ್ರೀಶಿರೂರು ಮಠ ಉಡುಪಿ ಇಅವರ ಸಹಕಾರದಲ್ಲಿ “ ರಾಜ್ಯಮಟ್ಟದ ಕೊಂಕಣಿ ಮಹಿಳಾ ಸಾಹಿತ್ಯ ಸಾಂಸ್ಕೃತಿಕ ಉತ್ಸವ ೨೦೧೦-೧೧” ದಿನಾಂಕ ೨೮-೫-೨೦೧೧ ಮತ್ತು ೨೯-೫-೨೦೧೧ ರಂದು ಉಡುಪಿ ಶ್ರೀಕೃಷ್ಣಮಠ “ರಾಜಾಂಗಣ” ಇಲ್ಲಿ ನಡೆಯಿತು. ದಿನಾಂಕ ೨೮-೫-೨೦೧೧ ರಂದುಕರ್ನಾಟಕ  ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ. ವಿ.ಎಸ್.ಆಚಾರ್ಯ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿದರು.

೧೨   “ಕೊಂಕಣಿ ಜಾನಪದ ಪರಿಕರ ವಿತರಣಾ ಕಾರ್ಯಕ್ರಮ”ವು ದಿನಾಂಕ ೩೧-೫-೨೦೧೧ ರಂದು ಸಂಜೆ ೪-೩೦ ಕ್ಕೆ ಕುಂದಾಪುರದ ಶ್ರೀ ವೆಂಕಟರಮಣ ಆರ್ಕೇಡ್ ಸಭಾಂಗಣದಲ್ಲಿ ಜರುಗಿತು. ಅಕಾಡೆಮಿಂii ಅಧ್ಯಕ್ಷರಾದ ಕುಂದಾಪುರ ನಾರಯಣ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ತು ಸದಸ್ಯರು, ಶ್ರೀ ಸದಾಶಿವ ಪ್ರಭು, ಸಹಾಯಕ ಕಮಿಷನರ್ ಕುಂದಾಪುರ, ಶ್ರೀ ಕೆ ಮೋಹನ್ ದಾಸ್ ಪೈ,ಅಧ್ಯಕ್ಷರು ಪುರಸಭೆ ಕುಂದಾಪುರ, ಶ್ರೀ ಮಾಣಿ ಗೋಪಾಲ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ, ಶ್ರೀ ರವಿರಾಜ ಖಾರ್ವಿ, ಅಧ್ಯಕ್ಷರು ಸ್ಥಾಯಿ ಸಮಿತಿ ಪುರಸಭೆ, ಶ್ರೀ ಯು ಎಸ್ ಶಣೈ ಪತ್ರಕರ್ತರು ಕುಂದಾಪುರ, ಹಾಗೂ ಶ್ರೀ ಜೋನ್ ಡಿಸೋಜಾ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹದಿನಾಲ್ಕು ಕಲಾ ತಂಡಗಳಿಗೆ ಜಾನಪದ ಕಲಾ ಪರಿಕರಗಳನ್ನು ವಿತರಿಸಲಾಯಿತು.

೧೩    ದಿನಾಂಕ ೮-೬-೨೦೧೧ ರಂದು ಕರ್ನಾಟಕ ಸಾಂಸ್ಕೃತಿಕ ಕಲಾವೇದಿಕೆ ಮಂಗಳೂರು ಇವರು ನಡೆಸಿರುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ “ಕೊಂಕಣಿ ಕುಡುಬಿ ಜಾನಪದ ಕಲಾ ಪ್ರದರ್ಶನ” ಕಾರ್ಯಕ್ರಮವನ್ನು ಪ್ರಾಯೋಜಿಸಲಾಗಿದೆ.

೧೪   ದಿನಾಂಕ ೧೧-೭-೨೦೧೧ ರಂದು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನ ಮಂಗಳೂರು ಇವರು ನಡೆಸಿರುವ ಕಾರ್ಯಕ್ರಮದಲ್ಲಿ “ಸಂಗೀತ ಸೌರಭ- ಭಜನ್ ಸಂಧ್ಯಾ” ಕಾರ್ಯಕ್ರಮದಲ್ಲಿ ಶ್ರೀ ಶ್ರೀನಿವಾಸ್ ಶೆಣೈ ಪುತ್ತೂರು ಮತ್ತು ಬಳಗದವರಿಂದ ಭಜನ ಕಾರ್ಯಕ್ರಮವನ್ನು ಪ್ರಾಯೋಜಿಸಲಾಯಿತು.

೧೫    “ಕೊಂಕಣಿ ಶಿಕ್ಷಣ ಜಾಗೃತಿ ಅಭಿಯಾನ್”
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಅಭಿಮಾನದಿಂದ ಪ್ರಸ್ತುತ ಪಡಿಸಿದ ಕೊಂಕಣಿ ಸಿಕ್ಷಣ ಜಾಗೃತಿ ಅಭಿಯಾನವು  ದಿನಾಂಕ ೧೧-೭-೨೦೧೧ ರಿಂದ ೨೯-೭-೨೦೧೧ರ ವರೆಗೆ ಡsಯಿತು. ದಿನಾಂಕ ೧೧-೭-೨೦೧೧ ರಂದು ಯುನಿಯನ್ ಸ್ಕೂಲ್ ಮಾಜಾಳಿ ಇಲ್ಲಿ ಈ ಅಭಿಯನದ ಉದ್ಘಾಟನಾ ಸಮಾರಂಭದೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಶ್ರೀಮತಿ ಪ್ರಮೀಳ.ಎನ್ ನಾಯ್ಕ, ಅಧ್ಯಕ್ಷರು, ಗ್ರಾಮ ಪಂಚಾಯತ್ ಮಾಜಾಳಿ ಅಭಿಯಾನದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅದ್ಯಕ್ಷರಾದ ಕುಂದಾಪುರ ನಾರಾಯಣ ಖಾರ್ವಿ ಕಾರರ್ಯಕ್ರಮದ ಅಧ್ಯPತೆಯನ್ನು ವಹಿಸಿದ್ದರು. ಯುನಿಯನ್ ಹೈಸ್ಕೂಲ್ ಅಧ್ಯಕ್ಷರಾದ ಡಿ.ಜಿ.ಜೋಶಿ, ಮುಖ್ಯೋಪಧ್ಯಾಯರಾದ ಸಿ.ಡಿಪಾರಗಾಮವಕರ್ ಅತಿಥಿಗಳಾಗಿ ಭಾಗವಹಿಸಿದ್ದರು.

೧೬. ದಿನಾಂಕ  ೧೩-೭-೨೦೧೧ ರಂದು ಅಂಕೋಲಾ ತಾಲೂಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.

೧೭  ದಿನಾಂಕ ೧೫-೭-೨೦೧೧ ಕುಮಟಾ ತಾಲೂಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.

೧೮. “ಕೊಂಕಣಿ ಭಕ್ತಿ-ಭಾವ ಗಾಯನ ಕಾರ್ಯಕ್ರಮ”
ಕಾರ್ಕಳ ತಾಲೂಕಿನ ಮುಂಡ್ಕೂರು ಶ್ರೀ ವೆಂಕಟರಮಣ ಸಭಾಭವನದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ, ಮುಂಡ್ಕೂರು ವಿಠೋಬಾ ಭಜನಾ ಮಂಡಳಿ ಹಾಗೂ ಪ್ರೇರಣಾ ಯುವ ಜನ ಸಭಾ ಆಶ್ರಯದಲ್ಲಿ ದಿನಾಂಕ ೧೬-೭-೧೧ ರಂದು ಸಂಜೆ ೫-೩೦ರಿಂದ ಶ್ರೀ ವೆಂಕಟಟರಮಣ ಆಯೋಜಿಸಲಾಗಿತ್ತು. ಅಕಾಡೆಮಿಯ ಅಧ್ಯಕ್ಷರಾದ ಕುಂದಾಪುರ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ವಲಯದ ಲೆಕ್ಕ ಪರಿಶೋದಕರಾದ ಶ್ರೀ.ಕೆ.ಸುರೇಂದ್ರ ನಾಯಕ್, ಶ್ರೀ ಕೆ.ಗಣಪತಿ ಕಾಮತ್, ಶ್ರೀ ವಿಠೋಬ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀ ಎಂ ವೆಂಕಟೇಶ ಕಾಮತ್, ಹಾಗೂ ಸಾಹಿತಿ ಆರ್ಥಿಕ ತಜ್ಞರಾದ ಶ್ರೀ ಕೆ.ಜಿ.ಮಲ್ಯ, ಹಾಗೂ  ರವರು ಮುಖ್ಜ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಅಕಾಡೆಮಿಯ ರಿಜಿಸ್ಟ್ರಾರ್ ಡ್|.ಬಿ.ದೇವದಾಸ ಪೈ ಹಾಗೂ ಅಕಾಡೆಮಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಶಂಕರ್ ಶಾನ್ ಭಾಗ್, ಖ್ಯಾತ ಸುಗಮ ಸಂಗೀತ ಗಾಯಕರು, ಹಾಗೂ ಖ್ಯಾತ ಕೊಂಕಣಿ ಸಂಗೀತ ಗಾರರಾದ ಪುತ್ತೂರು ಪಾಂಡುರಂಗ ನಾಯಕ್ ರವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

   ೧೯. ದಿನಾಂಕ ೧೯-೭-೨೦೧೧ ರಂದು ಭಟ್ಕಳ ಮತ್ತು ಹೊನ್ನಾವರ ತಾಲೂಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.

   ೨೦. ದಿನಾಂಕ ೨೦-೭-೨೦೧೧ ರಂದು ಸಿದ್ದಾಪುರದಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.

   ೨೨. ದಿನಾಂಕ ೨೧-೭-೨೦೧೧ ಶಿರಸಿ ತಾಲುಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.

   ೨೩. “ಕೊಂಕಣಿ ಕನ್ನಡ ಭಾವೈಕ್ಯ ಸಂಗಮ”
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು, ಮೈತ್ರಿ ಕಲಾ ಬಳಗ(ರಿ) ತೆಲಂಗಾರ ಹಾಗು ಮೈತ್ರಿ ಯುವಬಳಗ ತೆಲಂಗಾರ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೨೪-೭-೨೦೧೧ ರಂದು ವೇದ ವುಯಾಸ ಸಭಾ ಭವನ ವೆಂಕಟರಮಣ ಮಠ ಯಲ್ಲ ಪುರ ಇಲ್ಲಿ ಕೊಂಕಣಿ ಕನ್ನಡ ಭಾವೈಕ್ಯ ಸಂಗಮ ಕಾಯಕ್ರಮವನ್ನು ನಡೆಸಲಾಯಿತು. ಅದೇ ದಿನ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಆಯೀಜಿಸಲಾಗಿದ್ದು ಕರ್ನಾಟಕ ಸರ್ಕಾರ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷತ್ರಾದ, ಶ್ರೀ ಸಚ್ಚಿದಾನಂದ ಹೆಗಡೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಶ್ರೀಮತಿ Uರಿಜಾ ಕೊಂಬೆ ಅಧ್ಯಕ್ಷರು ತಾಲೂಕು ಪಂಚಾಯತ್ ಯಲ್ಲಾಪುರ, ಶ್ರೀ ಅನಂತ ನಾಗರಜಡ್ಡಿ ಸದಸ್ಯರು ಜಿಲ್ಲಾಪಂಚಾಯತ್ ಉತ್ತರ ಕನ್ನಡ, ದಿ.ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾz ಶ್ರೀ ಎಸ್.ಎಂ.ಹೆಬ್ಬಾರ, ಎ.ಪಿ.ಎಂ.ಸಿ. ಇದರ ಅಧ್ಯಕ್ಷರಾದ ಶ್ರೀ ರಾಮಚಂದ್ರ ಮುದ್ದೇಪಾಲ, ಯಲ್ಲಾಪುರ ತಾಲೂಕು ದಂಡಾಧಿಕಾರಿಗಳಾದ ಶ್ರೀ ಮಂಜುನಾಥ ಬಳ್ಳಾರಿ,  ಯಲ್ಲಾಪುರ ವೆಂಕಟರಮಣ ಮಠದ ಅಧ್ಯಕ್ಷರಾದ ಶ್ರೀ ವಿನಾಯಕ ಪೈ, ಯಲ್ಲಾಪುರ ದೈವಜ್ಞ ಸಮಾಜದ ಅಧ್ಯಕ್ಷರಾದ ಶ್ರೀ ಪ್ರಕಾಶ ಎಂ ಶೇಟ್, ಯಲ್ಲಾಪುರ ವಿಶ್ವ ಕರ್ಮ ಸಮಾಜದ  ಅಧ್ಯಕ್ಷರಾದ ಶ್ರ್ರೀ ನೇತ್ರಾನಂದ ಆಚಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಂಕಣಿ-ಕನ್ನಡ ಭಾಷಾ ಅನುಸಂದಾನ, ಶೀರ್ಷಿಕೆಯ ಚಿಚಾರ ಗೋಷ್ಠಿಯನ್ನು ಶ್ರೀ ನಾ. ಸು. ಭರತನ ಹಳ್ಳಿಯವರ ಅಧ್ಯಕ್ಷತೆಯಲ್ಲಿ  ಆಯೋಜಿಸಲಾಗಿದ್ದು ಡಾ| ಶ್ರೀದರ ಳಗಾರ, ಶ್ರೀ ಎಂ ಆರ್ ಶೇಟ್, ಶ್ರೀ ವನರಾಗ ಶರ್ಮ ವಜ್ರಲ್ಲಿ, ಶ್ರೀ ರವಿ ಶಾನಭಾಗ ಯಲ್ಲಾಪುರ ರವರು ಪ್ರಬಂಧ ಮಂಡಕರಾಗಿ ಭಾಗವಹಿಸಿದ್ದರು. ಶ್ರೀ ವಾಸುದೇವ ಶಾನ್ ಭಾಗ್ ರವರ ಅಧ್ಯಕ್ಶತೆಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು  ಶ್ರೀಮತಿ ಮುಕ್ತಾ ಶಂಕರ, ಶ್ರೀ ಸುಬ್ರಾಯ ಬಿದ್ರೆ ಮನೆ,  ಶ್ರೀ ದತ್ತಾತ್ರಯ ಕಣ್ಣ್ನಿಪಾಲ, ಶ್ರೀ ಉದಯಕಾಂತ ಅಣ್ವೇಕರ, ಶ್ರೀ ಎಂ.ಬಿ.ಶೇಟ್, ವಿಧ್ವಾನ್ ವಿಘ್ನೇಶ್ವರ ಭಟ್, ಶ್ರೀ ದಿಲೀಪ ದೊಡ್ಮನಿ, ಶ್ರೀ ಎ.ಎ. ಬಾಲೂರು, ಹಾಗೂ ಶ್ರೀ ಶ್ಯಾಮ ಹೆಗಡೆಯವರು ಕವಿಗಳಾಗಿ ಭಾಗವಹಿಸಿದ್ದರು.

   ೨೪. ದಿನಾಂಕ ೨೫-೭-೨೦೧೧ ರಂದು ಯಲ್ಲಾಪುರದಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.

   ೨೫. ದಿನಾಂಕ ೨೬-೭-೨೦೧೧ ರಂದು ಹಳಿಯಾಳ ಮತ್ತು ಜೋಯಿಡಾಗಳಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ  ಕಾರ್ಯಕ್ರಮ ನಡೆಸಲಾಯಿತು.

   ೨೬. ದಿನಾಂಕ ೨೮-೭-೨೦೧೧ ರಂದು ಮುಂಡಗೋಡ ತಾಲುಕಿನಲ್ಲಿ ಕೊಂಕಣಿ ಶಿಕ್ಷಣ ಅಭಿಯಾನ ಕಾರ್ಯಕ್ರಮ         ನಡೆಸಲಾಯಿತು.

   ೨೭. ದಿನಾಂಕ ೨೯-೭-೨೦೧೧ ರಂದು ಭಟ್ಕಳದಲ್ಲಿ ಕೊಂಕಣಿ ಶಿಕ್ಷಣ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮ.
 
೨೮. ಕೊಂಕಣಿ ಸಾಹಿತ್ಯ ಸಾಂಸ್ಕೃತಿಜ್ಕ ಸಂಗಮ್
       ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು  ಮೈಸೂರು ನಗರದ ಕೊಂಕ್ಣಿ ಸಂಘ ಸಸ್ಥೆಗಳ ಸಹಯೋಗದಲ್ಲಿ ದಿನಾಂಕ ೩೧-೭-೨೦೧೧ ರಂದು ಬನ್ನಿ ಮಂಟಪ ಸಂತ ಮಥಾಯಸ್ ಶಾಲೆಯ ಸಭಾಂಗಣದಲ್ಲಿ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಗಮ್ ಕಾರ್ಯಕ್ರಮವನ್ನು ನಡೆಸಲಾಯಿತು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಶ್ರೀ ಸತ್ಯನಾರಾಯಣರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು, ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಮತಿ ಪುಷ್ಪಲತಾ ಟಿ.ಬಿ ಚಿಕ್ಕಣ್ಣ, ಶ್ರೀ ಗ್ರೇಶಿಯನ್ ರೋಡ್ರಿಗಸ್ ಅಧ್ಯಕ್ಷರು, ಕೊಂಕ್ಣಿ ಕ್ರಿಶ್ಚಿಯನ್ ಆಸೋಸಿಯೇಶನ್(ರಿ) ಮೈಸೂರು, ಶ್ರೀ ಎಂ ಜಗನ್ನಾಥ್ ಶೆಣೈ ಅಧ್ಯಕ್ಷರು, ಗೌಡ ಸಾರಸ್ವತ ಬ್ರಾಹ್ಮಣ ಸಭಾ(ರಿ) ಮೈಸೂರು, ಶ್ರೀ ಚಂದ್ರಶೇಕರ್ ನಾಯಕ್ ನಿಕಟಪೂರ್ವ ಅಧ್ಯಕ್ಷರು, ರಾಜಾಪುರ ಸಾರಸ್ವತ ಸಮಾಜ, ಮೈಸೂರು, ಶ್ರೀ ಕಮಲೇಶ್ ಶೇಟ್ ಅಧ್ಯಕ್ಷರು, ದೈವಜ್ಞ ಬ್ರಾಹ್ಮಣ ಸಮಾಜ(ರಿ) ಮೈಸೂರು  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರಾದ ಡಾ|ಬಿ.ದೇವದಾಸ ಪೈ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುದಾಪುರ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಅಂಗವಾವಿ ಶ್ರಿ ವಲ್ಲಿ ವಗ್ಗ ಮೈಸೂರು ರವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯನ್ನು ನಡೆಸಲಾಯಿತು. ಬ್ರ. ಸಂತೋಷ್ ಕ್ಯಾಸ್ಟಲಿನೊ, ಮೈಸೂರು, ಶ್ರೀ ಮ್ಯಾಕ್ಸಿಮ್ ಡಿ’ಆಲ್ಮೇಡಾ, ಮೈಸೂರು, ಶ್ರೀ ವಿಜಯನಾಥ ಭಟ್, ಮೈಸೂರು, ಶ್ರೀಮತಿ ಲೀನಾ ಡಿಸೋಜಾ, ಮೈಸೂರು, ಶ್ರೀಮತಿ ಎಮಿಲಿಯಾ ಸಲ್ಡನ್ಹಾ, ಮೈಸೂರು, ಶ್ರೀಮತಿ ಜೋಸ್ಪಿನ್ ಡಿ’ಸಿಲ್ವಾ, ಮೈಸೂರು, ಕುಮಾರಿ ಅಖಿಲಾ ಆರ್ ನಾಯಕ್, ಮೈಸೂರು ರವರು ಕವಿಗಳಾಗಿ ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ಮಮತಾ ಕಿಣಿ ಮತ್ತು ತಂಡ, ಶ್ರೀಮತಿ ವಿಕ್ಟೋರಿಯಾ ಡಿಕೋಸ್ಟಾ,  ಶ್ರೀಮತಿ ಅಪೋಲಿನ್ ಡಿಸೊಜಾ ಮತ್ತು ತಂಡ, ಶ್ರೀಮತಿ ಸುನೀತಾ ಡಿಸೋಜಾ ಮತ್ತು ತಂಡ, ಕುಮಾರಿ ಜಾಸ್ಮಿನ್ ಡಿ’ಸೋಜಾ ಮತ್ತು ತಂಡ, ಶ್ರೀಮತಿ ಶೀಲಾ ಭಂಡಾರ್ಕರ್ ಮತ್ತು ತಂಡ, ಕರಾವಳಿ ಬಳಗದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

29.    “ಕೊಂಕಣಿ ಮಾನ್ಯತಾ ದಿವಸ್”
         ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಗೌಡ ಸಾರಸ್ವತ ಸಮಾಜ ಬರೋಡ ಇವರ   ಸಹಯೋಗದಲ್ಲಿ ದಿನಾಂಕ ೨೦-೮-೨೦೧೧ ರಂದು ಬರೋಡಾದಲ್ಲಿ ಕೊಂPಣಿ ಮಾನ್ಯತಾ ದಿನಾಚರಣೆಯನ್ನು ಆಚರಿಸಲಾಯಿತು. ಅಕಾಡೆಮಿಯ ಅಧ್ಯಕ್ಷರಾದ ಕುಂದಪುರ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ವಿನೋದ್ ರಾವ್ ಡಿಸ್ಟ್ರಿಕ್ಟ್ ಕಲೆಕ್ಟರ್  ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.ಪ್ರೊ| ಡಾ| ಗಣೇಶ್ ದೇವಿ, ಪ್ರೊ| ಕೆ ಬಾವಾ ಪೈ , ಡಾ| ಬಿ ದೇವದಾಸ ಪೈ ರಿಜಿಸ್ಟ್ರಾರ್ ಕೊಂಕಣಿ ಅಕಾಡೆಮಿ, ಹಾಗೂ ಸಮಾಜ ಸೇವಕರಾದ ಶ್ರೀ ಎಹ್.ವಿ.ಬಿ. ಗದಿಯರ್ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

೩೦ ಕೊಂಕಣಿ ಮಾನ್ಯತಾ ದಿವಸ್
       ದಿನಾಂಕ ೨೧-೮-೨೦೧೧ ಶಿರಸಿ, ಉತ್ತರ ಕನ್ನಡದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್ ಹಾಗೂ ಜಿ.ಎಸ್.ಬಿ ಸೇವಾವಾಹಿನಿ ಇವರ ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಆಚರಿಸಲಾಯಿತು. ಉತ್ತರಕನ್ನಡ ಜಿಲ್ಲಾ ಕೊಂಕಣಿ ಪರಿಷತ್ ನ ಅಧ್ಯಕ್ಷರಾದ ಡಾ| ಎಸ್.ವಿ ಸೋಂದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಶ್ರೀ ಜಯವೀರ ಇಸಳೂರ ರವರು ಮಾನ್ಯತಾ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು. ಶ್ರೀ ಎನ್ ಡಿ ಬಿರ್ಜಿ ಆರಾಕ್ಷಕ ಉಪಾಧೀಕ್ಷಕ, ಶ್ರೀ ಎಂ ಶೇಟ. ಖ್ಯಾತ ಕೊಂಕಣಿ ಲೇಖಕರು, ಫಾ| ಡೇನಿಸ್ ಮಸ್ಕರಿನ್ಹಸ್, ಸಂತ ಅಂತೋನಿ ಚರ್ಚ್ ಹಾಗೂ ಶೀ ಸೂರ್ಯಕಾಂತ ಗುಡಿಗಾರ್ ರಾಜ್ಯಪ್ರಶಸ್ತಿ ವಿಜೇತ ಮೂರ್ತಿ ಕಲಾಕಾರರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ೩೧. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಹೆಮ್ಮಾಡಿ ಚಾತುರ್ಮಾಸ ಕಮಿಟಿ-೨೦೧೧ ಇವರ ಸಹಯೋಗದಲ್ಲಿ ದಿನಾಂಕ ೨೭-೮-೨೦೧೧ ರಂದು ಕುಂದಾಪುರದ ಹೆಮ್ಮಾಡಿಯಲ್ಲಿ ಕೊಂಕಣಿ ಭಾವ ಸಂಗೀತ ಕಾರ್ಯಕ್ರಮವನ್ನು ಶ್ರೀ ಕಾಶೀಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಕಾಡೆಮಿಯ ಅಧ್ಯಕ್ಷರಾದ ಕುಂದಾಪುರ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ರಾಧಾಕೃಷ್ಣ ಶಣೈ. ಅಧ್ಯಕ್ಷರು ಚಾತುರ್ಮಾಸ ಸಮಿತಿ, ಶ್ರೀ ಕೋಟೇಶ್ವರ ಶ್ರೀಧರ ಕಾಮತ್ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಂಡಿತ್ ಉಪೇಂದ್ರ ಭಟ್ ಆನಿ ಪಂಗಡ್ ಪೂನಾ ಹಾಗೂ ಶ್ರೀ ರಘುನಾಥ ಆನಿ ಪಂಗಡ್ ಕುಮಟಾ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

    ೩೨. ದಿನಾಂಕ ೨೯-೮-೨೦೧೧ ರಂದು ನಾದ ಮಂದಿರ ಮಂಗಳೂರು ಇವರ ಸಹಯೋಗದಲ್ಲಿ ದಿನಾಂಕ ೯-೯- ೨೦೧೧ರ ವರೆಗೆ ಹಮ್ಮಿಕೊಂಡಿರುವ ಕೊಂಕಣಿ ಗಾಯನ ಶಿಬಿರದ ಉದ್ಘಾಟನಾ ಸಮಾರಂಭವನ್ನು  ನಡೆಸಲಾಯಿತು.

    ೩೩. ದಿನಾಂಕ ೨೫-೮-೨೦೧೧ ರಂದು ಅಧ್ಯಕ್ಷರ ಜರೂರು ಸ್ವರೂಪ ಕಾರ್ಯಕ್ರಮ ಯೋಜನೆಯಡಿ ಶಿರಸಿ,       ಮಾರಿಕಾಂಬಾ ನಗರದ ಶ್ರೀ ಸಾಯಿಬಾಬಾ ದೇವಸ್ಥಾನ ದಲ್ಲಿ ಕೊಂಕಣಿ ಹಾಸ್ಯ ಪ್ರದರ್ಶನ ಕಾರ್ಯಕ್ರಮ ನಡೆಸಲಾಯಿತು.

   ೩೪. ದಿನಾಂಕ ೨೬-೮-೨೦೧೧ ರಂದು ಅಧ್ಯಕ್ಷರ ಜರೂರು ಸ್ವರೂಪ ಕಾರ್ಯಕ್ರಮ ಯೋಜನೆಯಡಿ ಕಾರವಾರದ ಶ್ರೀ ರಾಮಕೃಷ್ಣಾಶ್ರಮದಲ್ಲಿ ಕೊಂಕಣಿ ಕಥಾ  ಕೀರ್ತನಾ ಕಾರ್ಯಕ್ರಮ ನಡೆಸಲಾಯಿತು.

   ೩೫. ದಿನಾಂಕ ೨೩-೮-೨೦೧೧ ರಂದು ಅಧ್ಯಕ್ಷರ ಜರೂರು ಸ್ವರೂಪ ಕಾರ್ಯಕ್ರಮ ಯೋಜನೆಯಡಿ ನವನಗರ,ಹುಬ್ಬಳ್ಳಿ ಇಲ್ಲಿಯ ಬೇತಲ್ ಶಾಲಾ ಆವರಣದಲ್ಲಿ  ಮನೋರಂಜನ್(ಜಾದು, ಹಾಸ್ಯ, ಶಾಡೊಪ್ಲೆ) ಕಾರ್ಯಕ್ರಮ ನಡೆಸಲಾಯಿತು.

   ೩೬. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಆರ್. ಎಕ್ಸ್ ಲೈಫ್ ಸ್ಟೈಲ್ ಮಂಗಳೂರು ಇವರ ಸಹಯೋಗದಲ್ಲಿ ದಿನಾಂಕ ೨೮-೮-೨೦೧೧ ರಂದು ಮಂಗಳೂರಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ನಡೆಸಲಾಯಿತು. ಅಕಾಡೆಮಿಯ ಸದಸ್ಯರದ ಮಂಗಲ್ಪಾಡಿ ನಾಮದೇವ ಶಣಿಯವರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರಾದ ಡಾ| ಬಿ ದೇವದಾಸ ಪೈ. ಹಾಗೂ ಸಮಾಜ ಸೇವಕಿ ಚಂದ್ರಮತಿ ಎಸ್ ರಾವ್ ರವರು ಮುಖ್ಯ ಅತಿxಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಶ್ರೀ ವಂದನಾ ನಾಯಕ್ ಮತ್ತು ಬಳಗದವರಿಂದ ಕೊಂಕಣಿ ಜಾನಪದ ಸಂಗೀತ ಕಾರ್ಯಕ್ರಮ. ಶೋಭಾ ಪೈ ಮತ್ತು ಬಳಗದವರಿಂದ ಹೂಮಾಲೆ ಪ್ರಾತ್ಯಕ್ಷಿಕೆ, ಸ್ಮಿತಾ ಶಣೈ ಮತ್ತು ಬಳಗದವರಿಂದ ಚೂಡಿ ರಚನೆ ಪ್ರಾತ್ಯಕ್ಷಿಕೆ ಹಾಗೂ ಶಾಂತಿ ಆರ್ ಕಾಮತ್ ಮತ್ತು ಬಳಗದವರಿಂದ ಪಂಚಕಜ್ಜಾಯ ತಯಾರಿಕೆ ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

   ೩೭. ದಿನಾಂಕ ೨೯-೮-೨೦೧೧ ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ| ಎಸ್ ಎಂ ಪಂಡಿತ ರಂಗಮಂದಿರ ಗುಲ್ಬರ್ಗಾ ಇಲ್ಲಿ ಕೊಂಕಣಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ್ ಸಮ್ಮಿಲನ್ ಕಾರ್ಯಕ್ರ್ಮವನ್ನು ನಡೆಸಲಾಯಿತು. ಶ್ರೀ ನರಸಿಂಹ ಮೆಂಡನ್ , ಕಾರ್ಯದರ್ಶಿ ಹೋಟೆಲ್ ಮಾಲಿಕರ ಸಂಘ ಗುಲ್ಬರ್ಗಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಕುಂದಾಪುರ ನಾರಾಯಣಖಾರ್ವಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಬಾಬುರಾವ್ ಅಣ್ವೇಕರ್, ಶ್ರೀ ಆತ್ಮಾರಾಮ ರಾಯ್ಕರ್, ಪ್ರೊ| ಎ ವಾಯ್ ನಾಂii. ಶ್ರೀಮತಿ ವಿದ್ಯಾರಾಣಿ ಭಟ್, ಶ್ರೀ ವೀರಭದ್ರ ಸಿಂಪಿ ಹಾಗೂ ಫಾ| ವಿಕ್ಟರ್ ಮಥಾಯಸ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಹುಭಾಷಾ ಕವಿ ಗೋಷ್ಠಿಯನ್ನು ಹಮ್ಮಿಕೊಂಡಿದ್ದು ಡಾ| ಬಸವರಾಜ ಸಬರದ, ಕಾವ್ಯಶ್ರೀ ಮಾಹಾಗಾಂವಾಕರ, ಡಾ| ಕಾಶೀನಾಥ ಅಂ ಲಗೆ. ಪ್ರೊ| ವಿಜಯ ಕುಮಾರ ಚೌದರಿ. ಡಾ| ಸುರೇಶ್ ಹೆರೂರ. ಪ್ರೊ| ವೆಂಕಟೇಶ ವಳಸಂಗಕರ ಹಾಗೂ ಶ್ರೀ ನಸೀರ ಅಹೇಮದ ರವರು ಕವಿಗಳಾಗಿ ಭಾಗವಹಿಸಿದ್ದರು. ಶ್ರೀ ವೆಂಕಟೇಶ್ ರಾಯ್ಕರ್ ಮತ್ತು ತಂಡ ಶಿರಸಿ, ಎಸ್ ಟಿ ಗಡಕರ ಮತ್ತು ತಂಡ ಧಾರಾವಾಡ, ಎಂ ಬಿ ಶೇಟ್ ಮತ್ತು ತಂಡ ಯಲಾಪುರ, ಭಾರತಿ ಪೊ ಆಸ್ಮೋಟಕರ ಮತ್ತು ತಂಡ ಕಾರಾವಾರ ಹಾಗೂ ಎಸ್.ಎಸ್ ನಾಯ್ಕ iತ್ತು ತಂಡ ಕುಮಟಾ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

   ೩೮. ದಿನಾಂಕ ೨೯-೮-೨೦೧೧ ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಾದ ಮಂದಿರ ಸಂಗೀತ ವಿದ್ಯಾಲಯ ಮಂಗಳೂರು ಇಲ್ಲಿ ಕೊಂಕಣಿ ಗಾಯನ ಶಿಬಿರವನ್ನು ನಡೆಸಲಾಯಿತು. ಅಕಾಡೆಮಿಯ ರಿಜಿಸ್ಟ್ರಾರಾದ ಡಾ| ದೇವದಾಸ ಪೈ ಯವರು ಕಾರ್ಯಕ್ರಮದ ಉದ್ಘಾಟಾನೆಯನ್ನು ನೆರವೇರಿಸಿದರು.ಸಿಂಚನಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ಡಾ| ಯಂ ಆರ್ ಕಾಮತ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

   ೩೯. ದಿನಾಂಕ ೩೦-೮-೨೦೧೧ ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕನ್ನಡ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಮ್ಮಿಲನ್ ಕಾರ್ಯಕ್ರಮವನ್ನು ಬೀದರ್ ಜಿಲ್ಲಾ ರಂಗಮಂದಿರದಲ್ಲಿ ನಡೆಸಲಾಯಿತು. ದಕ್ಷಿಣ ಕರಾವಳಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಸುಭ್ರಹ್ಮಣ್ಯ ಪ್ರಭು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾgವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾಜ ಸೇವಕರಾದ ಶ್ರೀ ಉದಯ ಶೆಟ್ಟಿ, ಆರ್.ಎಸ್ ಬಿ ಸಮಾಜದ ದುರೀಣರಾದ ಶ್ರೀ ಉಮೇಶ್ ನಾಯಕ್, ಹೋಟೆಲ್ ಉದ್ದಿಮೆದಾರರಾದ ಶ್ರೀ ದಯಾನಂದ ಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ  ಅಧ್ಯಕ್ಷರಾದ ಶ್ರೀ ಸಿದ್ದರಾಮಪ್ಪ ಮಾಸಿವಾಡೆ ಹಾಗೂ ಸೆಕ್ರೆಟ್ ಹಾರ್ಟ್ ಚರ್ಚ್ ನ ಧರ್ಮಗುರುಗಳಾದ ರೆ ಫಾ| ಫಾದರ್ ಫೆಡ್ರಿಕ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾರ್ಯಕ್ರಮದ ಅಂಗವಾಗಿ ಬಹುಭಾಷಾ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಎಸ್.ಎಂ.ಮಾಂಜ್ರೇಕರ್ ಮತ್ತು ತಂಡ, ಮುಕ್ತಾ ವರ್ಣೇಕರ್ ಮತ್ತು ತಂಡ, ಸಂತೋಷ ನೇತ್ರೆಕರ ಮತ್ತು ತಂಡ, ಎಸ್.ಎಸ್. ಪೆಡ್ನೇಕರ್ iತ್ತು ತಂಡ, ಹಾಗೂ ಡಿ ಎ.ದೈವಜ್ಞ ತಂಡ ಹುಬ್ಬಳ್ಳಿ ಇವರಿಂದ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

   ೪೦. ದಿನಾಂಕ ೩೧-೮-೨೦೧೧ ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಮಾಟೊವ್    
ಮಂಗಳೂರು ಕೊಂಕಣಿ ಸಂಸ್ಕೃತಿ ಕಲಾ ಪ್ರತಿಷ್ಟಾನ ಇವತ ಸಹಯೋಗದಲ್ಲಿ ವೋವಿಯಾ ಸ್ಪರ್ದೆ- ವೆರ‍್ಸಾಂ ಗಾಯನ ಕಾರ್ಯಕ್ರಮ ಕಿನ್ನಿಗೋಳಿಯಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷರಾದ ಕುಂದಾಪುರ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಿನ್ನಿಗೋಳಿ ವಲಯದ ಪ್ರಧಾನ ಧರ್ಮಗುರುಗಳಾದ ಅತಿ ವಂದನೀಯ ಫಾ| ಆಲ್ಫೆಡ್ ಪಿಂಟೊ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್, ಉದ್ಯಮಿ ಶ್ರೀ ಲಿಗೋರಿ ಡಿಸಿಲ್ವಾ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಜಾರ್ಜ್ ಡಿಸೋಜಾ ಬಜ್ಪೆ ಇವರಿಂದ ಉಪನ್ಯಾಸ ಕಾರ್ಯಕ್ರಮ ಹಾಗೂ ಶ್ರೀಮತಿ ಸ್ಟೆಲ್ಲಾ ಸಿಕ್ವೇರಾ ಮತ್ತು ತಂಡದವರಿಂದ ಕೊಂಕಣಿ ಗಾಯನ ಕಾರ್ಯಕ್ರಮ ನಡೆಯಿತು.

2011-2012 ನೇ ಸಾಲಿನ ಕಾರ್ಯಕ್ರಮಗಳು:

ಶ್ರೀ ಕಸರಗೋಡು ಚಿನ್ನಾ ಅಧ್ಯಕ್ಷರು ಹಾಗೂ ಸದಸ್ಯರು

1. ಶ್ರೀ ಕಾಸರಗೋಡು ಚಿನ್ನಾ ರವರು 5-8-2011 ರಂದು ಅಕಾಡೆಮಿಯ ಅಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಿದರು

 

2. ಗಡಿನಾಡು ಕೊಂಕಣಿ ಸಂಸ್ಕೃತಿ ಸಂಭ್ರಮ
ದಿನಾಂಕ ೧೭-೯-೨೦೧೧ಹಾಗೂ ೧೮-೯-೨೦೧೧ ರಂದು ಕಾಸರಗೋಡಿನ ಲಲಿತಾಕಲಾ ಸದನದಲ್ಲಿ “ಗಡಿನಾಡು ಸಾಂಸ್ಕೃತಿ ಸಂಬ್ರಮ” ಕಾಂiiಕ್ರಮವನ್ನು ನಡೆಸಲಾಯಿತು. ದಿನಾಂಕ ೧೭-೯-೨೦೧೧ ರಂದು ಸಂಜೆ ೪-೩೦ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಲಾಯಿತು. ಕಾಸರಗೋಡು ವಿಧಾನಸಭಾ ಶಾಸಕರಾದ ಶೀ ಎನ್ ನೆಲ್ಲಿಕುನ್ನು ರವರು ಕಾಂiiಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಕ್ಷತೆಯನ್ನು ವಹಿಸಿದ್ದರು.  ಅಕಾಡೆಮಿಯ ರಿಜಿಸ್ಟ್ರಾರದ ಡಾ| ಬಿ ದೇವದಾಸ ಪೈ, , ವರದರಾಜ ದೇವಸ್ಥಾನದ ಮನೆಜಿಂಗ್ ಟ್ರಸ್ಟಿ ಶ್ರೀ ಕೆ ಗಿರಿದರ ವಿಶ್ವನಾಥ ಕಾಮತ್, ಧರ್ಮಗುರುಗಳಾದ ಫಾ| ನವೀನ್ ಡಿಸೋಜ, ದುರ್ಗಪರವಶ್ವರಿ ದೇವಸ್ಥಾನದ ಟ್ರಸ್ಟಿ ಶ್ರೀ ಕುಂಡೇರಿ ಜಯಂತ್ ನಾಯಕ್, ಅಕಾಡೆಮಿಯ ಮಾಜಿ ಸದಸ್ಯರಾದ ಮಂಗಲ್ಪಾಡಿ ನಾಮದೇವ ಶಣೈ, ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಎಸ್.ವಿ ಭಟ್ ಹಾಗೂ ವಿದ್ವಾನ್ ಶ್ರೀ ಉಪ್ಪಂಗಳ ನಾರಾಯಣ ಶರ್ಮರವರು ಅತಿಥಿಗಳಾಗಿ ಭಾಗವಹಿಸಿದ್ದರು.  ಕೊಂಕಣಿ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಭಾಷಾ ಕವಿಗೋಷ್ಠಿಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದಿನಾಂಕ ೧೮-೯-೨೦೧೧ರಂದು ಸಂಜೆ ೪-೩೦ ಕ್ಕೆ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ನಡೆಸಲಾಯಿತು.

 


3. ಸಂಗೀತ ಕಾರ್ಯಾಗಾರ
ದಿನಾಂಕ ೧-೧೦-೨೦೧೧ರಂದು ಮಂಗಳೂರಿನ ರೋಟರಿ ಬಾಲಭವನದಲ್ಲಿ ದಿನಾಂಕ ೨೯-೮-೨೦೧೧ ರಂದು ಆರಂಭಗೊಂಡ ಸಂಗೀತ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ಡಾ| ಟಿ.ಎಂ ಪೈ ಪಾಲಿಟೆಕ್ನಿಕ್ ನ ಪ್ರಾಂದುಪಾಲರಾದ ಶ್ರೀ ಟಿ ರಂಗ ಪೈ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಕೀಲರಾದ ಶ್ರೀ ಎಂ ರಾಜೇಶ್ ಕುಡ್ವಾ, ಚಲನ ಚಿತ್ರ ನಿರ್ದೇಶಕರಾದ ಶ್ರೀ ಚರಣ್ ಕುಮಾರ್ ಮಲ್ಯ, ಡಾ| ಎಂ ಆರ್ ಕಾಮತ್ ಹಾಗೂ ಅಕಾಡೆಮಿಯ ರಿಜಿಸ್ಟ್ರಾರಾದ ಡಾ| ಬಿ ದೇವದಾಸ ಪೈ ಯವರು ಕಾgಂಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯ ಹಂತದಲ್ಲಿ ತರಬೇತಿಯ ಶಿಬಿರಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.

 


4. ಸ್ವರ ಸೇವಾಂಜಲಿ
ದಿನಾಂಕ ೫-೧೦-೨೦೧೧ ರಂದು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಶ್ರೀ ಭುವನೇಂದ್ರ ಹಾಲ್ ಕೆನರಾ ಪ್ರೌಢಶಾಲೆ, ಡೊಂಗರಕೇರಿ ಇಲ್ಲಿ ಸ್ವರ ಸೇವಾಂಜಲಿ ಕಾರ್ಯಕ್ರಮವನ್ನು ನಡೆಸಲಾಯಿತು. ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನರೇಂದ್ರ ನಾಯಕ್ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿದರು. ಶ್ರೀಮತಿ ಹುಂಡಿ ಪ್ರಭಾಕಾಮತ್, ಪ್ರಾಂಶುಪಾಲರು ಕೆನರಾ ಪದವಿಪೂರ್ವ ಕಾಲೇಜು ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಕ್ತಿಗೀತೆಗಳ ಸಂಗೀತ ಕಚೇರಿಯನ್ನು ಮ್ಮಿಕೊಂqದ್ದು ಮಾನ್ಯ ಉಪ ಸಭಾಪತಿಗಳಾ ಶ್ರೀ ಎನ್ ಯೋಗಿಶ್ ಭಟ್ ರವರು ಈ ಸಂಗೀತ ಕಚೇರಿಯನ್ನು ಉದ್ಘಾಟಿಸಿದರು. ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸದರಾದ ಶ್ರೀ ನನ್ ಕುಮಾರ್ ಕಟೀಲು, ಅಕಾಡೆಮಿಯ ರಿಜಿಸ್ಟ್ರಾರ್ ಡಾ| ಬಿ ದೇವದಾಸ ಪೈ, ವೆಂಕಟರಮಣ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀ ಸಿ.ಎಲ್ ಶೆಣೈ, ಮಾಜಿ ಸದಸ್ಯರಾದ ಮಂಗಲ್ಪಾಡಿ ನಾಮದೇವ ಶಣೈಹಾಗೂ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ವೇದ ಕಾಮತ್‌ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

5. ದಿನಾಂಕ ೨೩-೧೦-೨೦೧೧ ರಂದು ಜಿ.ಎಸ್.ಬಿ ಸಮಾಜ್, ಜೆ.ಎಲ್.ಬಿ ರೋಡ್ ಕ್ರಾಸ್, ಮೈಸೂರು ಇಲ್ಲಿ ಅಧ್ಯಕ್ಷರ ಜರೂರು ಸ್ವರೂಪದ ಕಾರ್ಯಕ್ರಮ ಯೋಜನೆಯಡಿ ‘ಕೊಂಕಣಿ ಭಾಷೆಂತು ಕಾಣಿ ಸಂಗ್ಚೆ’ ಕಾರ್ಯಕ್ರಮವನ್ನು ನಡೆಸಲಾಯಿತು.

6. ಕೊಂಕಣಿ ಸಂಪದ
ದಿನಾಂಕ ೨೯-೧೦-೨೦೧೧, ೩೧-೧೦-೨೦೧೧ ಹಾಗೂ ೨-೧೧-೨೦೧೧ ಡಿ,ಎಡ್, ಬಿ.ಎಡ್ ಕೋರ್ಸ್ ನಲ್ಲಿ ಕೊಂಕಣಿ ಭಾಷಾ ಬೋಧನಾ ಪದ್ದತಿ ಅಳವಡಿಸುವ ಕುರಿತು ಮೂರು ದಿನಗಳ ಕಾಲ ಕೊಂಕಣಿ ಸಂಪದವೊಂದನ್ನು ರಚಿಸುವ ಕುರಿತು ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು. ದಿನಾಂಕ ೨೯-೧೦-೨೦೧೧ ರಂದು ಕೆನರಾ ಹಿ.ಪ್ರಾ ಶಾಲೆಯಲ್ಲಿ ಈ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಮಾನ್ಯ  ಶಾಸಕರಾದ ಶ್ರೀ ಯೋಗಿಶ್ ಭಟ್ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅದ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕೊಂಕಣಿ ಭಾಷಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಕಾಲ ವಿವಿಧ ವಿಚಾರ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

 


7. ಕೊಂಕಣಿ ಸಂಪದ
ದಿನಾಂಕ ೧೬-೧-೨೦೧೨,೧೭-೧-೨೦೧೨ ಹಾಗೂ ೧೮-೧-೨೦೧೨ ರಂದು ಡಿ,ಎಡ್, ಬಿ.ಎಡ್ ಕೋರ್ಸ್ ನಲ್ಲಿ ಕೊಂಕಣಿ ಭಾಷಾ ಬೋಧನಾ ಪದ್ದತಿ ಅಳವಡಿಸುವ ಕುರಿತು ಮೂರು ದಿನಗಳ ಕಾಲ ಕೊಂಕಣಿ ಸಂಪದವೊಂದನ್ನು ರಚಿಸುವ ಕುರಿತು ಎರಡನೇ ವಿಚಾರಗೋಷ್ಠಿಯನ್ನು ಕುಮಟಾದ ಕಮಾಲಾ ಬಾಳಿಗ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ದಿನಾಂಕ ೧೬-೧-೨೦೧೨ ರಂದು ಈ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕುಮಟಾ ವಿಧಾಸ ಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅದ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೊಂಕಣಿ ಭಾಷಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಕಾಲ ವಿವಿಧ ವಿಚಾರ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

 


8. “ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೊಂಕಣಿ ಸೇರ್ಪಡೆ ಸಂಭ್ರಮ”
     ಕರ್ನಾಟಕ ರಾಜ್ಯದಲ್ಲಿ ೬ನೇ ತರಗತಿಯಿಂದ ಪ್ರಾಂರಂಭವಾದ ಕೊಂಕಣಿ ಶಿಕ್ಷಣವು ೨೦೧೧-೧೨ ನೇ ಸಾಲಿನಲ್ಲಿ ೧೦ನೇ ತರಗತಿ ತಲುಪಿರುವ ಹಿನ್ನೆಲೆಯಲ್ಲಿ “ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೊಂಕಣಿ ಸೇರ್ಪಡೆ ಸಂಭ್ರಮ” ಕಾರ್ಯಕ್ರಮವನ್ನು ಸಂತ ಸೆಬೆಸ್ಟಿಯನ್ ಸಂಯುಕ್ತ ಪದವಿಪೂರ್ವ ಕಾಲೇಜು ಪೆರ್ಮನ್ನೂರು ಇಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಂಗವಾಗಿ ಪರೀಕ್ಷ ಬರೆಯುವ ವಿದ್ಯಾರ್ಥಿಗಳಿಗ ಹಾಗೂ ಶಿಕ್ಷಕರಿಗೆ ಕಲಿಕೋಪಕರಣಗಳ ವಿತರಣೆಯನ್ನು ಮಾಡಲಾಯಿತು. ಉಳ್ಳಾಲ ವಿಧಾನಸಭಾ ಕ್ಷೇತ್ರ ಶಾಸಕರಾಗ  ಮಾನ್ಯ ಶ್ರೀ ಯು,ಟಿ ಖಾದರ್‌ರವರು ಈ ಕಲಿಕೋಪಕರಣಗಳನ್ನು ವಿತರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರ್ರೀ ಸ್ಟ್ಯಾನಿ ಅಲ್ವಾರಿಸ್, ಅಧ್ಯಕ್ಷರು ಮಾಂಡ್‌ಸೊಭಾಣ್, ಶ್ರೀ ವಿಠೋಭ ಭಂಡಾರ್ಕರ್,ರಂಗ ಚಿತ್ರ ನಟ, ಸಂತ ಸಬೆಸ್ಟಿಯನ್ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಕ್ಲೆಮೆಂಟ್ ಮಸ್ಕರೇನ್ಹಸ್‌ರವರು ಅತಿಥಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರಾದ ಡಾ} ಬಿ ದೇವದಾಸ ಪೈ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

 


9. ದಿನಾಂಕ ೧೦-೩-೨೦೧೨ ರಂದು ಪದವಿಪೂರ್ವ ತರಗತಿಗಳಿಗೆ ಕೊಂಕಣಿ ಭಾಷಾ ಬೋದನೆಯ ಸಿಲೆಸ್ ತಯಾರಿಗಾಗಿ ತಜ್ಞನ ಸಿಲೆಬಸ್ ತಯಾರಿ ಸಭೆಯನ್ನು ನಡೆಸಲಾಯಿತು.

10. ಕವಿತಾ ಮೊಗರೆ
    ದಿನಾಂಕ ೧೭-೩-೨೦೧೨ ರಂದು ಅಕಾಡೆಮಿ ಸಭಾಂಗಣದಲ್ಲಿ “ಕವಿತಾ ಮೊಗರೆ’ ಕೊಂಕಣಿ ಕವಿಗೋಷ್ಠಿ ಕಾರ್ಯಕ್ರಮವನ್ನು ನಡೆಸಲಾಯಿತು. ಖ್ಯಾತ ವ್ಯದ್ಯರು ಹಾಗೂ ಸಾಮಾಜಿಕ ದುರೀಣರಾದ ಡಾ| ಮಾಧವ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಂಚ್ಕಾದಾಂ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಶಾಂತರಾಮ ಬಾಳಿಗಾರವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ  ಶ್ರೀ ಮಂಗಲ್ಪಾಡಿ ನಾಮದೇವ ಶೆಣೈ, ಪತ್ರಕರ್ತರಾದ ಶ್ರೀ ರಾಜೇಶ್ ಕಿಣಿ ಅತಿಥಿಗಳಾಗಿ ಭಾಗವಹಿಸಿದ್ದರು.

 

 

11. ಕವನಾಮೃತ
ದಿನಾಂಕ ೨೪-೩-೨೦೧೨ ರಂದು ಕುಂದಾಪುರದಲ್ಲಿ ಕವನಾಮೃತ ಕೊಂಕಣಿ ಕವಿಗೋಷ್ಠಿ ಕಾರ್ಯಕ್ರiವನ್ನು ನಡೆಸಲಾಯಿತು. ಕೆನರಾ ಬ್ಯಾಂಕ್‌ನ ಚೀಫ್ ಮ್ಯಾನೇಜರಾದ ಶ್ರೀ ಕೆ ಉಮೇಶ ಪೈ, ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಮೆಲ್ವಿನ್ ರೋಡ್ರಿಗಸ್‌ರವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶ್ರೀ ಓಂ ಗಣೇಶ್, ಕುಂದಾಪುರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ವಿನಯ ಪಾಯಸ್, ಉದ್ಯಮಿಗಳಾದ ಶ್ರೀ ಅಶೋಕ್ ಶೇಟ್ ಅತಿಥಿಗಳಾಗಿ ಭಾಗವಹಿಸಿದ್ದರು.

 

 

12. “ಕೊಂಕಣಿ ಶಿಕ್ಷಣ ಮತ್ತು ವಿಶ್ಲೇಷಣೆ ಕಾರ್ಯಾಗಾರ”
ದಿನಾಂಕ ೩-೪-೨೦೧೨ ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಮಾಂಡ್ ಸೊಭಾಣ್ ಶಕ್ತಿನಗರ ಮಂಗಳೂರು ಇವರ ಸಹಯೋಗದಲ್ಲಿ ಕೊಂಕಣಿ ಶಿಕ್ಷಣ ಮತ್ತು ವಿಶ್ಲೇಷಣೆ ಕಾರ್ಯಾಗಾರವನ್ನು ರಂದು ಶಕ್ತಿನಗರ, ಮಾಂಡ್‌ಸೊಭಾಣ್ ಮಂಗಳೂರು ಇಲ್ಲಿ ನಡೆಸಲಾಯಿತು. ದ.ಕ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಾದ ಶ್ರೀ ಅರುಣ್ ಪುರ್ಟಾದೊ ರವರು ಕಾರ್ಯಕ್ರಮದ ಉದ್ಘಾmನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಕಾರ್ಯಕ್ರiದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಎರಿಕ್ ಒಝಾರಿಯೊ, ಗುರ್ಕಾರ್ ಮಾಂಡ್‌ಸೊಭಾಣ್, ಶ್ರೀರೋಯ್ ಕ್ಯಾಸ್ಟಲಿನೊ, ಅಧ್ಯಕ್ಷರು ಕೊಂಕಣಿ ಪ್ರಚಾರ ಸಂಚಲನ ಹಾಗೂ ಅಕಾಡೆಮಿಯ ರಿಜಿಸ್ಟ್ರಾರಾದ ಡಾ| ಬಿ ದೇವದಾಸ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಂಕಣಿ ಭಾಷಾ ಕಲಿಕೆಯನ್ನು ಅಳವಡಿಸಿರುವ ೧೧೧ ಶಾಲೆಗಳಿಂದ ೧೧೧ ಶಿಕ್ಷಕರು ಭಾಗವಹಿಸಿದ್ದರು.

 

 

13. ಕೊಂಕಣಿ ನಾಟಕೋತ್ಸವ್ ಆನಿ ಕೊಂಕಣಿ ರಂಗ ಮಂಥನ್
   ದಿನಾಂಕ ೨೮-೪-೨೦೧೨ ಹಾಗೂ ೨೯-೪-೨೦೧೨ ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಎರಡು ದಿನಗಳ ಕೊಂಕಣಿ ನಾಟಕೋತ್ಸವ ಹಾಗೂ ಕೊಂಕಣಿ ರಂಗಮಂಠನ ಕಾರ್ಯಕ್ರಮವನ್ನು ಉಡುಯ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಯಿತು.  ದಿನಾಂಕ ೨೮-೪-೨೦೧೨ ರಂದು ಉಡುಪಿ ಜಿಲ್ಲಾ ಶಾಸಕರಾದ ಶ್ರೀ ಎನ್ ಯೋಗಿಶ್ ಭಟ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾ ಶ್ರೀ ಕಾಸರಗೋಡು ಚಿನ್ನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಜಿ ಪುರಸಭಾಧ್ಯಕ್ಷರಾದ ಶ್ರೀ ಸೋಮಶೇಖರ ಭಟ್, ಮಣಿಪಾಲ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ| ಶಾಂತಾರಾಮ್, ನಗರಸಭಾ ಸದಸ್ಯರಾದ ಶ್ಯಾಮ ಪ್ರಸಾದ್ ಕುಡ್ವ, ಲಕ್ಷ್ಮೀವೆಂಕಟೇಶ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀ ಪಿ.ವಿ ಶೆಣೈ ಹಾಗೂ ಮಿಲಾಗ್ರೀಸ್ ಕಾಲೇಜಿನ ಪ್ರಾಧ್ಯಾಪಕರಾದ ಜೆರಾಲ್ಡ್‌ಪಿಂಟೊ ರವರು ಅಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಎರಡಿ ದಿನ ಶ್ರೀ ದಿನೇಶ್ ಪ್ರಭು, ಪಲ್ಲವಿ ನಾಟಕ ತಂಡ ಕಾರ್ಕಳ ಇವರಿಂದ “ವಕ್ಕಲ್” ಹಾಗೂ ಶ್ರೀ ಸತೀಶ್, ಶ್ರೀ ಲಕ್ಷ್ಮೀ ವೆಂಕಟೇಶ ಕೊಂಕಣಿ ನಾಟಕ ಸಭಾ ಇವರಿಂದ “ಮಾಸ್ಟರ್ ಪ್ಲಾನ್” ಎಂಬ ಎರಡು ನಾಟಕಗಳನ್ನು ಆಯೋಜಿಸಲಾಗಿತ್ತು. ದಿನಾಂಕ ೨೯-೪-೨೦೧೨ ರಂದು ಶ್ರೀ ಓಂ ಗಣೇಶ್ ಉಪ್ಪುಂದ ಇವರ ಅಧ್ಯಕ್ಷತೆಯಲ್ಲಿ ವಿವಿಧ ರಂಗಕರ್ಮಿಗಳ ಪಾಲ್ಗೊಳ್ಳುವಿಕೆಯಲ್ಲಿ ಕೊಂಕಣಿ ರಂಗಮಂಥನ ವಿಚಾರಗೋಷ್ಟಿಕಾರ್ಯಕ್ರಮ ನಡೆಯಿತು. ಈ ಗೋಷ್ಟಿಯಲ್ಲಿ ಮಂಗಳೂರು ವಿ.ವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ| ಜಯವಂತ್ ನಾಯಕ್, ಖ್ಯಾತ ಕವತ್ರಿಗಳಾದ ಶ್ರೀಮತಿ ಕ್ಯಾಥರಿನ್ ರೋಡ್ರಿಗಸ್ ರವರು ಕೊಂಕಣಿ ರಂಗಭೂಮಿ ವಿಚಾರವಾಗಿ ಪ್ರಬಂಧ ಮಂಡನೆ ಮಾಡಿದರು. ಅದೇ ದಿನ ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ಅಕಾಡೆಮಿಯ. ಕೊಂಕಣಿ ರಂಗಭೂಮಿಗೆ ಸೇವೆ ಸಲ್ಲಿಸಿದ ಶ್ರೀ ಮೋಹನ್‌ದಾಸ್ ಪ್ರಭು, ಶ್ರೀಮತಿ ಗೀತಾ ಸಾಮಂತೆ, ಶ್ರೀ ರಾಜ್ ಗೋಪಾಲ್ ಶೇಟ್ ಹಾಗೂ ಶ್ರೀ ವಾಲ್ಟರ್ ಮೊಂತೆರೊ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 

 

14. ಕೊಂಕಣಿ ಲೋಕವೇದ ಕಲಾಮೇಳ
    ದಿನಾಂಕ ೩-೬-೨೦೧೨ರಂದು ಅಕಾಡೆಮಿ ವತಿಯಿಂದ  ಕೊಂಕಣಿ ಲೋಕವೇದ ಕಲಾಮೇಳವನ್ನು ಸಮಾಜ ಮಂದಿರ, ಮಂದಿರ ಮಂಚಿಕೇರಿ, ಯಲ್ಲಾಪುರ ಇಲ್ಲಿ ನಡೆಸಲಾಯಿತು. ಮಂಚಿಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರಿ ಪವನ ಕುಮಾರ್ ಬಿ ಕೇಸರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾ ಶ್ರೀ ಕಾಸರಗೋಡು ಚಿನ್ನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಫಾ| ಲಝರಸ್ ಮಿರಾಂಡಾ, ಜಿಲ್ಲಾಪಂಚಾಯತ ಸದಸ್ಯರಾದ ಶ್ರೀ ರಾಘವೇಂದ್ರ ಭಟ್, ರಂಗ ಕರ್ಮಿಗಳಾದ ಶ್ರೀ ರಾಮಕೃಷ್ಣ ಭಟ್ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಡಾ| ಬಿ ದೇವದಾಸ ಪೈ ಮತ್ತು ಅಕಾಡೆಮಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೊಂಕಣಿ ಜಾನಪದೀಯ ಕ್ಷೇತ್ರಕ್ಕೆ ಕೊಡುಗೆ ನೀಡದ ಮಹನೀಯರನ್ನು ಗೌರವಿಸಲಾಯಿತು. ಕೊಂಕಣಿ ಜಾನಪದ ಲೋಕವನ್ನು ಜೀವಂತವಾ ಗಿರಿಸುವ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ವಿವಿಧ ಕೊಂಕಣಿ ಜಾವಪದೀಯ ಕಲಾ ತಂಡಗಳಾದ ಶ್ರೀ ಗಿರೀಶ್ ಪರಶುರಾಮ ಸಿದ್ಧಿ ಮತ್ತು ಪಂಗಡ, ಶ್ರೀ ನಾಗೇಶ್ ಅಣ್ವೇಕರ್ ಮತ್ತು ಪಂಗಡ, ಶ್ರೀಮತಿ ಸುಶೀಲಾ ಸಿದ್ಧಿ ಮತ್ತು ಪಂಗಡ, ಶ್ರೀ ಜಾಣು ನವಲು ಪಾಟೀಲ ಮತ್ತು ಪಂಗಡ, ಶ್ರೀಮತಿ ವಸುಧಾ ಶೇಟ ಮತ್ತು ಪಂಗಡ, ಶ್ರೀಮತಿ ಲಕ್ಷ್ಮೀ ಸಿದ್ದಿ ಮತ್ತು ಪಂಗಡ, ಶ್ರೀ ಎಂ ಬಿ ಶೇಟ್ ಮತ್ತು ಪಂಗಡ, ಶ್ರೀ ಸಾವೆರ್ ಸಿದ್ದಿ ಮತ್ತು ಪಂಗಡ, ಶ್ರೀ ಗಿರೀಶ ಶಿರೋವಡಕರ ಮತ್ತು ಪಂಗಡ ಹಾಗೂ ಶ್ರೀ ವಿಶ್ವನಾಥ ಶೇಟ ಮತ್ತು ಪಂಗಡದವರಿಂದ ಕೊಂಕಣಿ ಜಾನಪದ ಕಲಾ ಪ್ರದರ್ಶನ ನೀಡಿದರು.

 

 

15. ಕೊಂಕಣಿ ಸಾಹಿತ್ಯ ರಥ
  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ನಡೆದ ‘ಕೊಂಕಣಿ ಸಾಹಿತ್ಯ ರಥ’ ಕಾರ್ಯಕ್ರಮದಲ್ಲಿ ರೂ ೧೦ ಲಕ್ಷಕ್ಕೂ ಹೆಚ್ಚು ಮೌಲ್ಯದ ೧೮ ಸಾವಿರಕ್ಕೂ ಮಿಕ್ಕಿದ ಕೊಂಕಣಿ ಸಾಹಿತ್ಯ ಪುಸ್ತಕಗಳನ್ನು ೧೨೦ ವಿದ್ಯಾಲಯಗಳಿಗೆ ಉಚಿತವಾಗಿ ನೀಡುವ ಯೋಜನೆಯನ್ನು ಹಮ್ಮಿಕೊಡಿದ್ದು. ಪ್ರಥಮ ಹಂತದ ಕೊಂಕಣಿ ಸಾಹಿತ್ಯ ರಥದ ಉದ್ಘಾಟನಾ ಸಮಾರಂಭವನ್ನು ದಿ: ೨೧-೦೬-೨೦೧೨ ರ ಗುರುವಾರ ಬೆ: ೧೦.೦೦ ಗಂಟೆಗೆ ಲೂರ್ಡ್ಸ್ ಕೇಂದ್ರೀಯ ವಿದ್ಯಾಲಯ, ಬಿಜೈ, ಮಂಗಳೂರು ಇಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನರೇಂದ್ರ ನಾಯಕ್ ಇವರು ನಡೆಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶ್ರೀ ಎರಿಕ್ ಒಝಾರಿಯೊ ಗುರ್ಕಾರ್ , ಮಾಂಡ್ ಸೊಭಾಣ್, ಮಂಗಳೂರು, ಮತ್ತು ಶ್ರೀ ಮೋಸೆಸ್ ಜಯಶೇಖರ್ ಇವರು ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿದ್ದರು. ಲೂಡ್ ಕೇಂದ್ರೀಯ ವಿದ್ಯಾಲಯ , ಬಿಜೈನ ಮ್ಯಾನೇಜರ್ ರಾದ ವಂ| ಡಾ| ವಿಕ್ಟರ್ ಮಾಜಾದೊ ಮತ್ತು ಲೂರ್ಡ್ಸ್ ಕೇಂದ್ರೀಯ ವಿದ್ಯಾಲಯ, ಬಿಜೈ ನ ಪ್ರಾಂಶುಪಾಲರಾದ ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರು ಉಪಸ್ಥಿತ ರಿದ್ದರು. ದಿನಾಂಕ ೨೨-೬-೨೦೧೨ ರಂದು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಕೆನತಾ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಸಾಮಾಜಿಕ ಮುಖಂಡರಾದ ಶ್ರೀ ಶ್ರೀಕರ ಪ್ರಭು, ಶ್ರೀ ಕೃಷ್ಣಾ ಡೈರಿ ಪ್ರೈಲಿಮಿಟೆನ ಆಡಳಿತ ನಿರ್ದೇಶಕ ಶ್ರೀ ಪ್ರದೀಪ್ ಪೈ, ಕೆನರಾ ಬಾಲಕಿಯರ ಹಿ.ಪ್ರಾ ಶಾಲೆಯ ಕರೆಸ್ಪಾಂಡೆಂಟ್ ಶ್ರೀ ವಾಮನ್ ಕಾಮತ್ ರವರು ಅತಿಥಿಗಳಾಗಿ ಭಾಗವಹಿಸಿದ್ದರು.

 

 

16. ಅಭಿನಂದನಾ ಸಮಾರಂಭ
     ಶಾಲೆಗಳಲ್ಲಿ ಕೊಂಕಣಿ ಭಾಷಾ ಬೋಧನಾ ಪದ್ದತಿಯನ್ನು ಅಳವಡಿಸಿಕೊಂಡಿದ್ದು ೨೦೧೨ ನೇ ಸಾಲಿಗೆ ಎಸ್.ಎಸ್.ಎಲ್.ಸಿ ಹಂತಕ್ಕೆ ತಲುಪಿದ್ದು ೬೦ ವಿದ್ಯಾರ್ಥಿಗಳು ಕೊಂಕಣಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರೆ. ಆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ ೨೩-೬-೨೦೧೨ ರಂದು ಹಮ್ಮಿಕೊಳ್ಳಲಾಯಿತು. ಮಾನ್ಯ ಉಪಸಭಾಪತಿಗಳಾದ ಶೀ ಯೋಗಿಶ್ ಭಟ್‌ರವರು ವಿದ್ಯಾರ್ಥಿಗಳನ್ನು ಅಭಿನಂಧಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿದ್ದರು. ರಾಕ್ಣೊ ವಾರಪತ್ರಿಕೆಯ ಸಂಪಾದಕರಾದ ಪಾ| ಪ್ರಾನ್ಸಿಸ್ ರೋಡ್ರಿಗಸ್, ಉದಯವಾಣಿಯ ಬ್ಯೂರೊ ಚೀಪ್ ಶ್ರೀ ಮನೋಹರ ಪ್ರಸಾದ್ ಹಾಗೂ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರಕಾಂಟ ಶೇಟ್ ರವರು ಅತಿಥಿಗಳಾಗಿ ಭಾಗವಹಿಸಿದ್ದರು.

 

 

17. ಕೊಂಕಣಿ ಸುಗಂಧ್
ದಿನಾಂಕ ೩೦-೬-೨೦೧೨ ರಂದು ಅಕಾಡೆಮಿ ವತಿಯಿಂದ ಅಕಾಡೆಮಿ ಸಭಾಂಗಣದಲ್ಲಿ “ಕೊಂಕಣಿ ಸುಗಂಧ್” ತಿಂಗಳ ಸಾಂಕ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ನಳೀನ್ ಕುಮಾರ್ ಕಟೀಲ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಳು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಉಮಾನಾಥ ಕೋಟ್ಯಾನ್‌ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಹೃದಯ ತಜ್ಞರಾದ ಡಾ| ಮೋಹನ ಪೈ ರವರು “ಕರ್ನಾಟಕದಲ್ಲಿ ಕೊಂಕಣಿ ಶಿಕ್ಷಣದ ಸ್ಥಿತಿ-ಗತಿ” ಹಾಗೂ ಕವಿಗಳಾದ ಶ್ರೀ ಮೆಲ್ವಿನ್ ರೋಡ್ರಿಗಸ್ ರವರು “ಕೊಂಕಣಿ ಕಾವ್ಯ ಪರಂಪರೆ” ಕುರಿತಂತೆ ವಿಚಾರ ಮಂಡನೆ ಮಾಡಿದರು. ಕೊಂಕಣಿ ಕಲಾಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಶ್ರೀ ಬೆನೆಡಿಕ್ಟಾ ಮಿರಾಂದ ಹಾಗೂ ಶ್ರೀಮತಿ ಆಶಾ ದಿನೇಶ ನಾಯಕ್ ರವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಸುಧಾ ಪ್ರಭು ಕುಲಶೇಕರ ಇವರ ಭಕ್ತಿ ಭಾವ ಗಾಯನ ಕಾರ್ಯಕ್ರಮ ನಡೆಸಲಾಯಿತು.

 

 

18. ಘರ್‌ಘರ ಕೊಂಕಣಿ-೧
   ಕೊಂಕಣಿಯ ಕಂಪನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ಮನೆಮನೆಯಲ್ಲಿ ಕೊಂಕಣಿ ಕಾರ್ಯುಕ್ರಮ ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದು. ಈ ಸರಣಿಯ ಮೊದಲ ಕಾರ್ಯಕ್ರಮ “ಘರ್‌ಘರ ಕೊಂಕಣಿ”ಯನ್ನು ದಿನಾಂಕ ೧-೭-೨೦೧೨ ರಂದು ಖ್ಯಾತ ಹೃದಯ ತಜ್ಞರಾದ ಡಾ| ಮೋಹನ್ ಪೈಯವರ ಮನೆಯಲ್ಲಿ ನಡೆಸಲಾಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರ್ರಾರಾದ ಶ್ರೀ ಬಿ ದೇವದಾಸ ಪೈ, ಹಾಗೂ ಅಕಾಡೆಮಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊಂಕಣಿ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 


19. ಘರ್‌ಘರ ಕೊಂಕಣಿ-೨
     ಮನೆಮನೆಯಲ್ಲಿ ಕೊಂಕಣಿ ಕಾರ್ಯಕ್ರಮ ಸರಣಿಯ ಎರಡನೆ ಕಾರ್ಯಕ್ರಮವನ್ನು ದಿನಾಂಕ ೭-೭-೨೦೧೨ ರಂದು ಅಕಾಡೆಮಿಯ ಸದಸ್ಯರಾದ ಶ್ರೀಮತಿ ಶೀಲಾನಾಯಕ್‌ರವರ ಮನೆಯಲ್ಲಿ ನಡೆಸಲಾಯಿತು.

20. ಕೊಂಕಣಿ ಸಾಹಿತ್ಯ ರಥ -೨
    ಅಕಾಡೆಮಿಯಿಂದ ಹಮ್ಮಿಕೊಂಡ ಕೊಂಕಣಿ ಭಾಷಾ ಬೋಧನೆಯನ್ನು ಅಳವಡಿಸಿರುವ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದ ಎರಡನೇ ಹಂತವನ್ನು ಬಂಟ್ವಾಳ ನಗರ ವ್ಯಾಪ್ತಿಯಲ್ಲಿ ದಿನಾಂಕ ೧೩-೭-೨೦೧೨ ಹಾಗೂ ೧೪-೭-೨೦೧೨ ರಂದು ಹಮ್ಮಿಕೊಳ್ಳಲಾಯಿತು. ೧೩-೭-೨೦೧೨ ರಂದು ಇನ್‌ಫೆಂಟ್ ಜೀಸಸ್ ಆಂಗ್ಲಮಾಧ್ಯಮ ಹಿ.ಪ್ರಾ ಶಾಲೆ ಮೊಡಂಕಾಪು ಇಲ್ಲಿ ಈ ಕಾರ್ಯಕ್ರಮದ ಉದ್ಘಾಟನ ಸಮಾರಂಭವನ್ನು ಏರ್ಪಡಿಸಲಾಯಿತು. ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ ರಮಾನಾಥ ರೈಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಶತೆಯನ್ನು ವಹಿಸಿದ್ದರು. ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಕೆ ಸುಧಾಕರ, ಎಸ್.ವಿ.ಎಸ್ ಶಿಕ್ಷಣ ಸಂಸ್ಥೆಯ ಸದಸ್ಯರಾದ ಶ್ರಿ ಮಣೂರು ಲಕ್ಶ್ಮಣ ಕಾಮತ್, ಇನ್‌ಫೆಂಟ್ ಜೀಸಸ್ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕರಾದ ರೆ| ಫಾ ರೊಖಿ ಡಿಸೋಜಾರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

21. ಕೊಂಕಣಿ ಸಂವೇದನಾ
ಅಕಾಡೆಮಿ ವತಿಯಿಂದ ದಿನಾಂಕ ೧೪-೭-೨೦೧೨ ರಂದು “ಕೊಂಕಣಿ ಸಂವೇದನಾ” ಕಾರ್ಯಕ್ರಮವನ್ನು ಅಕಾಡೆಮಿ ಸಭಾಂಗಣದಲ್ಲಿ ನಡೆಸಲಾಯಿತು. ಖ್ಯಾತ ತಬಲಾ ಕಲಾವಿದರಾದ ಶ್ರಿ ಮಂಗಲ್‌ದಾಸ್ ಗುಲ್ವಾಡಿ ಕೆ ಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಸಂಗೀತ ಕಲಾವಿದರಾದ ಶ್ರೀಮತಿ ವಸಂತಿ ಆರ್ ನಾಯಕ್, ಖ್ಯಾತ ಪತ್ರಕರ್ತರಾದ ಅಗ್ನೆಲ್ ರೋಡ್ರಿಗಸ್ ರವರು ಅತಿಥಿಗಳಾಗಿ ಭಾಗವಹಿಸಿದ್ದರು. ವಿಶಿಷ್ಟ ಸಾಮರ್ಥ್ಯದ ತಬಲಾ ವಾದಕರಾದ ಶ್ರೀ ಎಸ್ ಶಿವಾನಂದ ಶೇಟ್ ರವರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರಿ ಎಸ್ ಶಿವಾನಂದ ಶೇಟ್ ರವರ ತಬಲಾ ವಾದನ ಕಾರ್ಯಕ್ರಮವನ್ನು ಹಿಮ್ಮಿಕೊಳ್ಳಲಾಗಿತ್ತು.

 

 

22. ಘರ್‌ಘರ ಕೊಂಕಣಿ-೩
   ಕೊಂಕಣಿಯ ಕಂಪನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ಮನೆಮನೆಯಲ್ಲಿ ಕೊಂಕಣಿ ಕಾರ್ಯುಕ್ರಮ ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದು. ಈ ಸರಣಿಯ ಮೂರನೆ ಕಾರ್ಯಕ್ರಮ “ಘರ್‌ಘರ ಕೊಂಕಣಿ”ಯನ್ನು ದಿನಾಂಕ ೨೯-೭-೨೦೧೨ ರಂದು ಉಡುಪಿಯ ಚೇಂಪಿ ರಾಮಚಂದ್ರ ಭಟ್ ರವರ ಮನೆಯಲ್ಲಿ ನಡೆಸಲಾಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರ್ರಾರಾದ ಶ್ರೀ ಬಿ ದೇವದಾಸ ಪೈ, ಹಾಗೂ ಅಕಾಡೆಮಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊಂಕಣಿ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 


23. ಘರ್‌ಘರ ಕೊಂಕಣಿ-೪
ಕೊಂಕಣಿಯ ಕಂಪನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ಮನೆಮನೆಯಲ್ಲಿ ಕೊಂಕಣಿ ಕಾರ್ಯುಕ್ರಮ ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದು. ಈ ಸರಣಿಯ ನಾಲ್ಕನೇ ಕಾರ್ಯಕ್ರಮ “ಘರ್‌ಘರ ಕೊಂಕಣಿ”ಯನ್ನು ದಿನಾಂಕ ೨೯-೭-೨೦೧೨ ರಂದು ಸಂಜೆ ೫-೦೦ ಗಂಟೆಗೆ ಶ್ರೀ ರಾಜೇಶ್ ಪಾಟಿಲ್‌ಯವರ ಮನೆಯಲ್ಲಿ ನಡೆಸಲಾಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರ್ರಾರಾದ ಶ್ರೀ ಬಿ ದೇವದಾಸ ಪೈ, ಹಾಗೂ ಅಕಾಡೆಮಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊಂಕಣಿ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

24.  ಕೊಂಕಣಿ ಖಿಲ್‌ಖಿಲೊ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಶಾಲಾ ವಿಧ್ಯಾರ್ಥಿಗಳಲ್ಲಿ ಕೊಂಕಣಿ ಭಾಷಾಭಿಮಾನ ಮೂಡಿಸಿ ಬೆಳೆಸಲು ಅಕಾಡೆಮಿ ಸಾಂಸ್ಕೃತಿಕ ಕಾರ್ಯಕ್ರಮ ಸರಣಿ “ಕೊಂಕಣಿ ಖಿಲ್‌ಖಿಲೊ”ವನ್ನು ವಿಶೇಷ ಮನೋಸಾಮರ್ಥ್ಯದ ಶ್ರೀ ಸುರೇಶ್ ನಾಯಕ್‌ರವರು ದಿನಾಂಕ ೪-೮-೨೦೧೨ರಂದು ಅಕಾಡೆಮಿ ಸಂಭಾಂಗಣದಲ್ಲಿ ಉದ್ಘಾಟಿಸಿದರು. ನೆನಪು ಶಕ್ತಿಯಲ್ಲಿ ಲಿಮ್ಕಾ ದಾಖಲೆ ನಿರ್ಮಿಸಿರುವ, ದೈಹಿಕವಾಗಿ ೪೨ ವರ್ಷ ವಯಸ್ಸಾದರೂ ಮಾನಸಿಕವಾಗಿ ಕೇವಲ ೩೧/೨ ವರ್ಷದ ಬಾಲಕನಂತಿರುವ ಸುರೇಶ್ ನಾಯಕ್ ನೆರೆದ ಮಕ್ಕಳ ನಡುವೆ ದೀಪಬೆಳಗಿಸುತ್ತಿದ್ದಂತೆ ಕೈಯಲ್ಲಿ ಖಿಲ್‌ಖಿಲೊ ಆಟಿಕೆ ಅಲ್ಲಾಡಿಸುತ್ತಾ ಕಿಣಿಕಿಣಿ ಶಬ್ದದೊಂದಿಗೆ ಚಿಣ್ಣರ ಕಾರ್ಯಕ್ರಮ ಪ್ರಾರಂಭಗೊಂಡಿತು. ಪ್ರತಿಭಾನ್ವಿತ ಬಹುಮುಖ ಪ್ರತಿಭೆಯ ಮೆರುಲ್ಲಾ ಪಿಂಟೊ, ಕುಡುಬಿ ಜಾನಪದ ಬಾಲಕಲಾವಿದ ಜಯರಾಮ್ ಈ ಇಬ್ಬರು ಮಕ್ಕಳೇ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಸರಗೋಡು ಚಿನ್ನಾರವರು ಕೊಂಕಣಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಮುಂದಿನ ಜನಾಂಗವಾಗಿರುವ ಇಂದಿನ ಮಕ್ಕಳ ಕೈಯಲ್ಲಿದೆ. ಆದ್ದರಿಂದ ಮಕ್ಕಳನ್ನು, ಶಾಲಾ ವಿದ್ಯಾರ್ಥಿಗಳನ್ನೇ ಕೇಂದ್ರೀಕರಿಸಿ ಸತತವಾಗಿ ಅಕಾಡೆಮಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಾಮಾನ್ಯ ಜನರಲ್ಲಿರುವ ಸಂಸ್ಕೃತಿ ಸಂಪತ್ತು ಉಳ್ಳವರ ಧನಸಂಪತ್ತಿಗಿಂತ ಹೆಚ್ಚು ಹಿರಿದಾಗಿದೆ. ಕೊಂಕಣಿ ಸಂಸ್ಕೃತಿ ಪ್ರಸರಣದಿಂದ ಕೊಂಕಣಿ ಭಾಷೆ ಬೆಳೆಸಬೇಕಾಗಿದೆ ಯೆಂದರು. ಶಿಕ್ಷಕ ರಾಘವೇಂದ್ರರಾವ್ ಇವರ ಮಾರ್ಗದರ್ಶನದಲ್ಲಿ ಕೆನರಾ ಪ್ರೌಢಶಾಲೆ(ಮೈನ್) ಇಲ್ಲಿನ ವಿದ್ಯಾರ್ಥಿಗಳು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದರು.

 


25. ಘರ್‌ಘರ ಕೊಂಕಣಿ-೫
ದಿನಾಂಕ ೫-೮-೨೦೧೨ ರಂದು ಕೊಂಕಣಿ ಸಾಹಿತಿ ಮಾರ್ಸೆಲ್ ಡಿಸೋಜಾರವರ ಮನೆಯಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ಘರ್‌ಘರ ಕೊಂಕಣಿ ಸರಣಿ ಕಾರ್ಯಕ್ರಮದ ೫ ನೇ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ಮಾರ್ಸೆಲ್‌ರವರ ಕುಟುಂಬಿಕರು ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಸದಸ್ಯರು ಕಾರ್ಯಕ್ರಮದಲಿ ಉಪಸ್ಥಿತರಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

26. ಘರ್‌ಘರ ಕೊಂಕಣಿ-೬
ದಿನಾಂಕ ೫-೮-೨೦೧೨ ರಂದು ಶ್ರೀ ಸುರೇಶ್ ಮಿನಿಸ್ ಲೋಪೆಸ್‌ರವರ ಮನೆಯಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ಘರ್‌ಘರ ಕೊಂಕಣಿ ಸರಣಿ ಕಾರ್ಯಕ್ರಮದ ೬ ನೇ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ಸುರೇಶ್ ಮಿನಿನ್ ಲೋಪೇಸ್ ಕುಟುಂಬಿಕರು ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

27. ಶಿಕ್ಷಕರ ಕಾರ್ಯಾಗಾರ
ಕೊಂಕಣಿ ಭಾಶಾಬೋಧನೆಯನ್ನು ಅಳವಡಿಸಿರುವ ಶಾಲೆಗಳ ಕೊಂಕಣಿ ಭಾಷಾ ಬೋಧನೆ ಮಾಡುವ ಶಿಕ್ಷಕರಿಗಾಗಿ  ದಿನಾಂಕ ೬-೮-೨೦೧೨ ಹಾಗೂ ೭-೮-೨೦೧೨ ರಂದು ಎರಡುದಿನಗಳ ಅವಧಿಯ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ೫೩ ಮೂರು ಮಂದಿ ಶಿಕ್ಷಕರು ಪಾಲ್ಗೊಂಡಿದ್ದರು. ಫಾ| ವಲೇರಿಯನ್ ಫೆರ್ನಾಂಡಿಸ್, ಶ್ರೀ ಮೆಲ್ವಿನ್ ರೋಡ್ರಿಗಸ್, ಶ್ರೀ ಆಲ್ವಿನ್ ಡೇಸಾ, ಶ್ರೀ ರಾಘವೇಂದ್ರ ರಾವ್ ಹಾಗೂ ಶ್ರೀ ವಿತೋರಿ ಕಾರ್ಕಾಳ್‌ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿ ಸಿದ್ದರು.

 


28. ರಂಗವೈಭವ -೨೦೧೨
 ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ರಂಗ ತರಂಗ (ರಿ) ಉಪ್ಪುಂದ ಇವರ ಸಹಭಾಗಿತ್ವದಲ್ಲಿ ದಿನಾಂಕ ೧೧-೮-೨೦೧೨ ಹಾಗೂ ೧೨-೮-೨೦೧೨ ರಂದು ನಿರ್ಮಲಾ ಸಭಾಭವನ, ಖಂಬದಕೋಣೆ ,ಕುಂದಾಪುರ ಇಲ್ಲಿ “ರಂಗ ವೈಭವ” ಪ್ರಾದೇಶಿಕ ಕೊಂಕಣಿ ನಾಟಕೋತ್ಸವವನ್ನು ನಡೆಸಲಾಯಿತು. ೧೧-೮-೨೦೧೨ ರಂದು ಸಂಜೆ ೬-೩೦ ಕ್ಕೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ನಡೆಸಿದರು, ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ ಲಕ್ಷ್ಮೀನಾರಾಯಣ ಇವರು ಪ್ರಧಾನ ಅತಿಥಿಗಳಾಗಿದ್ದು, ಉಡುಪಿ ಎ.ಪಿ.ಎಂಸಿ ಅಧ್ಯಕ್ಷರಾದ ಶ್ರೀ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರ ಪುರಸಭಾ ಅಧ್ಯಕ್ಷರಾದ ಶ್ರೀ ಮೋಹನ ದಾಸ್ ಶೆಣೈ, ಜಿ.ಎಸ್.ಬಿ ಸರ್ವದೇವಳದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಶೆಣೈ, ಖ್ಯಾತ ಆಡಿಟರ್ ಶ್ರೀ ರಾಮಚಂದ್ರ ಪ್ರಭು ಉಪ್ಪುಂದ, ರೆ.ಫಾ ಪ್ರಾನ್ಸಿಸ್ ಕಾರ್ನೆಲಿಯೊ, ಶ್ರೀ ರಿಯಾಜ್ ಅಹಮ್ಮದ್ ರವರು ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಸಂಗೀತ ಕಲಾವಿದರಾದ ಶ್ರೀಮತಿ ಪ್ರಮೀಳಾ ಕುಂದಾಪುರ, ಸಾಹಿತಿ ಮತ್ತು ನಾಟಕಕಾರರಾದ ಶ್ರೀ ಬರ್ನಾಡ್ ಜೆ ಕೋಸ್ಟ, ನಾಟಕಕಾರರಾದ ಶ್ರೀ ಕೆ.ಜಿ.ಶ್ಯಾನುಭೋಗ್, ಹಿರಿಯ ನಾಟಕ ಕರ್ತ ಶ್ರೀ ಶಾಂತಾರಾಂ ಹೆಗ್ಡೆ ಕುಂದಾಪುರ, ಹಾಗೂ ಬಹುಮುಖ ರಂಗಕಲಾವಿದರಾದ ಶ್ರೀ ಮಂಜುನಾಥ ರಾವ್ ಮತ್ತು ತ್ರಿವಿಕ್ರಮ ರಾವ್ರವರನ್ನು ರವರನ್ನು ಸನ್ಮಾನಿಸಲಾಯಿತು.         

ಬೈಂದೂರು ಹೋಲಿಕ್ರಾಸ್ ಚರ್ಚ್ ಕಲಾವಿದರಿಂದ ಮಾರ್ಟಿನ್ ನಿರ್ದೇಶನದ “ಸ್ವಾರ್ಥಿ ಸಂಸಾರು”, ನಾಯ್ಕನ ಕಟ್ಟೆ ಶ್ರೀ ವೆಂಕಟರಮಣ ಸೇವಾ ಸಮಿತಿ ಸದಸ್ಯರಿಂದ  ಶ್ರೀ ಪ್ರಭು ಉಪ್ಪುಂದ  ನಿರ್ದೇಶನದ “ಘಡೇ ಏಕ್ ಫಟ್ಟಿಕ್”, ರಾಮನಾಥಮೇಸ್ತ ನಿರ್ದೇಶನದ “ತೇ ಕೋಣ್..?” ಹಾಗೂ ಮಾರುತಿ ನಾಟಕ ಸಂಘ ಶಿರಾಲಿ ಇವರಿಂದ ಶಾಂತಾರಾಮ ಹೆಗ್ಡೆ ರಚಿಸಿರುವ ಶ್ರೀ ರವೀಂದ್ರ ಪ್ರಭು ಶಿರಾಲಿ ನಿರ್ದೇಶನದ “ಬ್ರಹ್ಮಾಲೆ ಗಾಂಟಿ” ನಾಟಕ ಪ್ರದರ್ಶನ ನಡೆಯಿತು.

ದಿನಾಂಕ ೧೨-೮-೨೦೧೨ರಂದು ಬೆಳಿಗ್ಗೆ ೧೦-೩೦ಕ್ಕೆ “ಕೊಂಕಣಿ ರಂಗ ಸಂವಾದ” ಸಂವಾದ ಕಾರ್ಯಕ್ರಮ ನಡೆಯಸಿದ್ದು ಸುಮಾರು ಸುಮಾರು ೨೫ ಮಂದಿ ರಂಗಕರ್ಮಿಗಳು ಭಾಗವಹಿಸಿದ್ದರು.ಅದೇ ದಿನ ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ನಡೆಸಲಾಯಿತು.   

 


29. ಕೊಂಕಣಿ ಸಂವೇದನಾ-೨
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿವತಿಯಿಂದ ದಿನಾಂಕ ೧೩-೮-೨೦೧೨ ರಂದು ಅಕಾಡೆಮಿಯ ಮಾಂಟೋವಿನಲ್ಲಿ ಕೊಂಕಣಿ ಸಂವೇದನಾ ಕಾರ್ಯರ್ಕಮವನ್ನು ನಡೆಸಲಾಯಿತು. ಖ್ಯಾತ ಕೊಂಕಣಿ ಸಂಗೀತ ಕಲಾವಿದರಾದ ಶ್ರೀ ಕ್ಲೊಡ್ ಡಿಸೋಜಾರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಶ್ರೀ ಜನಾರ್ಧನ ಗೌಡ, ಕೊಡಿಯಾಲ್ ಖಬರ್ ಪತ್ರಿಕೆಯ ಸಂಪಾದಕರಾದ ಶ್ರೀ ವೆಂಕಟೇಶ ಬಾಳಿಗಾ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಶಿಷ್ಟ ಸಾಮರ್ಥ್ಯದ ಸಂಗೀತ ಕಲಾವಿದರಾದ ಶ್ರೀ ವಿಜಯ ಕುಮಾರ್ ಭಟ್‌ರವರನ್ನು ಗೌರವಿಸಲಾಯಿತು. ಹಾಗೂ ವಿಜಯ್ ಕುಮಾರ್ ಭಟ್ ಮತ್ತು ಬಳಗದವರು ಕೊಂಕಣಿ ಸಂಗೀತ ಕಾರ್ಯಕ್ರಮ ನೀಡಿದರು.

 

 

ಕೊಂಕಣಿ ಮಾನ್ಯತಾ ದಿನಾಚರಣೆ: 
20-8-2012 ಶಾಲೆಗಳಲ್ಲಿ ಕೊಂಕಣಿ ಕಲಿಯುವ ಮಕ್ಕಳಲ್ಲಿ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಮೇಲಿನ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ  ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಶಾಲಾ ಮಟ್ಟದಲ್ಲಿ ನಡೆಸಲಾಯಿತು. ಒಟ್ಟು ೨೪ ಶಾಲೆಗಳಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ನಡೆಸಲಾಗಿದೆ.

30. ಯುವಜನಪದ ಉತ್ಸವ್
     ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕ್ಣಿ ಸಂಘ್, ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಇವರ ಸಹಕಾರದಲ್ಲಿ ಯುವ ಜನಪದ್ ಉತ್ಸವ್ ಕಾರ್ಯಕ್ರಮವನ್ನು ದಿನಾಂಕ ೨೪-೮-೨೦೧೨ ರಂದು ಸೈಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು. ಸೈಂಟ್ ಅಲೋಶಿಯಸ್ ಕಾಲೇಜಿನ ಆರ್ಥಿಕ ಸಮಿತಿಯ ಅಧ್ಯಕ್ಷರಾದ ವಂ| ವಾಲ್ಟರ್ ಆಂದ್ರಾಜೆಯವರು ಕಾಂiiಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು. ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತೀಶ್ ಭಟ್, ಖ್ಯಾತ ವಕೀಲರಾದ ಶ್ರೀಮತಿ ಅನಿತಾ ಕಿಣಿ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲು ನಾಲ್ಕು ಮಂದಿ ಯುವ ಸಾಧಕರನ್ನು ಗೌರವಿಸಲಾಯಿತು. ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಂಗಳೂರು ನಗರ ವ್ಯಾಪ್ತಿಯ ವಿವಿಧ ಕಾಲೇಜುಗಳ ವಿಧ್ಯಾರ್ಥಿಗಳು ಕೊಂಕಣಿ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

 


31. ಚಂದ್ರು ಭೇಟಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿಚಂದ್ರುರವರು ದಿನಾಂಕ ೨೫-೮-೨೦೧೨ರಂದು ಕೊಂಂಕಣಿ ಅಕಾಡೆಮಿಗೆ ಭೇಟಿ ನೀಡಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ, ರಿಜಿಸ್ಟ್ರಾರ್ ಡಾ| ಬಿ ದೇವದಾಸ ಪೈ, ಹಾಗೂ ಸದಸ್ಯರಾದ ಶ್ರೀ ಅಶೋಕ್ ಶೇಟ್, ರೋಯ್ ಕ್ಯಾಸ್ಟಲಿನೊ, ಮಹೇಶ್ ಆರ್ ನಾಯಕ್ ಸಂವಾದ ಕಾರ್ಯುಮದಲ್ಲಿ ಉಪಸ್ಥಿತರಿದ್ದರು. ಮುಖ್ಯ ಮಂತ್ರಿ ಚಂದ್ರುರವರು ಸಂವಾದದಲ್ಲಿ ಮಾತನಾಡುತ್ತಾ. ಪ್ರಸ್ತುತ ಚಲನಚಿತ್ರರಂಗ, ನಾಟಕರಂಗ, ರಾಜಕೀಯ ಒಟ್ಟು ಕನ್ನಡ ಅಭಿವೃದ್ಧಿ, ಜನಪದ ಸಂಸ್ಕೃತಿ ಕುರಿತು ವಿವರವಾಗಿ ಮಾತನಾಡಿದರು. ಸಂವಾದದಲ್ಲಿ ತುಳು ಚಲನಚಿತ್ರ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ರಂಗನಟ ವಿಠೋಭ ಭಂಡಾರ್‌ಕರ್, ಶ್ರೀಮತಿ ಸ್ಮಿತಾ ಪ್ರಭು, ಶ್ರೀ ಎಂ.ಆರ್.ಕಾಮತ್. ಶ್ರೀ ಲಾರೆನ್ಸ್, ಶ್ರೀಮತಿ ಅನಿತಾ ಕಿಣಿ ಸೇರಿದಂತೆ ಹಲವಾರು ಪ್ರತಿಷ್ಟಿತರು ಸೇರಿದ್ದರು. ಅಕಾಡೆಮಿಯ ಸದಸ್ಯರಾದ ಶ್ರೀ ರಾಯ್‌ಕ್ಯಾಸ್ಟಲಿನೊ, ಶ್ರೀ ಮಹೇಶ್ ಆರ್ ನಾಯಕ್. ಶ್ರೀ ಅಶೋಕ್ ಶೇಟ್ ಮುಖ್ಯಮಂತ್ರಿ ಚಂದ್ರುರವರನ್ನು ಬರಮಾಡಿಕೊಂಡರು. ಅಕಾಡೆಮಿಯ ರಿಜಿಸ್ಟ್ರಾರಾದ ಡಾ| ಬಿ ದೇವದಾಸ ಪೈಯವರು ಸ್ವಾಗತಿಸಿದರು.

 


32. ಕೊಂಕಣಿ ಗಾಯನ ಶಿಬಿರ
ದಿನಾಂಕ ೨೬-೮-೨೦೧೨ ರಂದು ಶಿವಮೊಗ್ಗದಲ್ಲಿ ಕೊಂಕಣಿ ಗಾಯನ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಸುಮಾರು ೫೦ ಶಿಬಿರಾರ್ಥಿಗಳಿಗೆ ಸಂಗೀತ ತರಬೇತಿಯನ್ನು ನೀಡಲಾಯಿತು. ಖ್ಯಾತ ಸಂಗೀತಗಾರರಾದ ಶ್ರೀ ಎಂ.ಎಸ್ ಕಾಮತ್‌ರವರು ತರಬೇತುದಾರರಾಗಿ ಭಾಗವಹಿಸಿದ್ದರು.

 


33. ಘರ್‌ಘರ ಕೊಂಕಣಿ
ದಿನಾಂಕ ೨೬-೮-೨೦೧೨ ರಂದು ಶ್ರೀಮತಿ ದೀಪಾಲಿ ಕಂಬದಕೋಣೆ ಯವರ ಮನೆಯಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ಘರ್‌ಘರ ಕೊಂಕಣಿ ಸರಣಿ ಕಾರ್ಯಕ್ರಮದ ೭ ನೇ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀಮತಿ ದೀಪಾಲಿ ಕಂಬದಕೋಣೆ ಕುಟುಂಬಿಕರು ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 


34. ಘರ್‌ಘರ ಕೊಂಕಣಿ
ದಿನಾಂಕ ೨೬-೮-೨೦೧೨ ರಂದು ಶ್ರೀ  ರಮೇಶ್ ಕೄಷ್ಣ ರವರ ಮನೆಯಲ್ಲಿ ಬೆಳಿಗ್ಗೆ ಘರ್‌ಘರ ಕೊಂಕಣಿ ಸರಣಿ ಕಾರ್ಯಕ್ರಮದ ೮ ನೇ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ರಮೇಶ್ ಕೃಷ್ಣ ಕುಟುಂಬಿಕರು ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

35.   ಕೊಂಕಣಿ ಝೇಂಕಾರ್
     ದಿನಾಂಕ ೧-೯-೨೦೧೨ ರಂದು ಅಕಾಡೆಮಿ ಸಭಾಂಗಣದಲ್ಲಿ ಕೊಂಕಣಿ ಝೇಂಕಾರ್ ಕಾರ್ಯಕ್ರಮವನ್ ಆಯೋಜಿಸಲಾಗಿತ್ತು. ಶ್ರೀ ಅರುಣ್‌ರಾಜ್(ಖ್ಯಾತ ನಾಟಕಕಾರರು) ಕಾರ್ಯಕ್ರiವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.ಶ್ರೀ ಎಂ ಆರ್ ಕಾಮತ್(ಮಾಜಿ ಅಧ್ಯಕ್ಷರು ಕೊಂಕಣಿ ಸಾಂಸ್ಕೃತಿಕ ಸಂಘ ಮಂಗಳೂರು) ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರರಾದ ಶ್ರೀ ಮುರಳೀಧರ ಕಾಮತ್, ಸಂಗೀತ ಕಲಾವಿದರಾದ ಶ್ರೀಮತಿ ಬಬಿತಾಡೇಸಾ ರವರನ್ನು ಗೌರವಿಸಲಾಯಿತು. ಯುವ ಕಲಾವಿದರಾದ ಡೀಲನ್, ಲವಿಟಾ ಮತ್ತು ಬಳಗದವರಿಂದ ಕೊಂಕಣಿ ಸಂಗೀತಕಾರ್ಯಕ್ರಮ ನಡೆಯಿತು.

 


36. ಘರ್‌ಘರ ಕೊಂಕಣಿ
ದಿನಾಂಕ ೨-೯-೨೦೧೨ ರಂದು ಶ್ರೀ ಜಗದೀಶ್ ಶೆಣೈರವರ ಮನೆಯಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ಘರ್‌ಘರ ಕೊಂಕಣಿ ಸರಣಿ ಕಾರ್ಯಕ್ರಮದ ೯ ನೇ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ಶ್ರೀ ಜಗದೀಶ್ ಶೆಣೈ ಕುಟುಂಬಿಕರು ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 


37. ಕೊಂಕಣಿ ಶಿಕ್ಷಕ ದೀಸ್
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿವತಿಯಿಂದ ದಿನಾಂಕ ೬-೯-೨೦೧೨ ರಂದು ಬೆಳಿಗ್ಗೆ ೧೦-೦೦ ಗಂಟೆಗೆ ಮಿಜಾರ ಗೋವಿಂದ ಪೈ ಸಭಾಗೃಹ, ಕೆನರಾ ಪ್ರೌಢಶಾಲೆ, ಊರ್ವಾ, ಮಣ್ಣಗುಡ್ಡ, ಮಂಗಳೂರು ಇಲ್ಲಿ “ಕೊಂಕಣಿ ಶಿಕ್ಷಕ ದಿನಾಚರಣೆ”ಯನ್ನು ಆಚರಿಸಲಾಯಿತು. ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಕ್ಯಾ| ಗಣೇಶ್ ಕಾರ್ಣಿಕ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ಕಲಾತಿಲಕ, ಭರತನಾಟ್ಯ ಗುರುಗಳಾದ ಶ್ರೀ ಉಳ್ಳಾಲ ಮೋಹನ್ ಕುಮಾರ್‌ರವರು ಕೊಂಕಣಿ ಜಾನಪದ ವಾದ್ಯಪರಿಕರ ಗುಮಟೆಯನ್ನು ಭಾರಿಸುವುದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಂಡ್ ಸೊಭಾಣ್‌ನ್ ಗುರ್ಕಾರರಾದ ಶ್ರೀ ಎರಿಕ್ ಒಝಾರಿಯೊ, ಹಾಗೂ ಕೆನರಾ ಹೈಸ್ಕೂಲ್ ಅಸೋಶಿಯೇಶನ್‌ನ ಅಧ್ಯಕ್ಷರಾದ ಶ್ರೀ ಎಸ್.ಎಸ್ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ೧೧೬ ಕೊಂಕಣಿ ಮಾತೃಭಾಷಾ ಶಿಕ್ಷಕಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅಕಾಡೆಮಿಯ ರಿಜಿಸ್ಟ್ರಾರ್ ಡಾ| ಬಿ ದೇವದಾಸ ಪೈ, ಸದಸ್ಯರಾದ ಶ್ರೀ ರೋಯ್‌ಕ್ಯಾಸ್ಟಲಿನೊ, ಶ್ರೀ ಮಹೇಶ ಆರ್ ನಾಯಕ್, ಶ್ರೀ ಅಶೋಕ್ ಶೇಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 


38. ಕೊಂಕಣಿ ಗಾಯನ ಶಿಬಿರ ಬೆಂಗಳೂರು:
ದಿನಾಂಕ : ೮-೯-೨೦೧೨ ಹಾಗೂ ೯-೯-೨೦೧೨ ರಂದು ಬೆಂಗಳೂರಿನ ಕಾಶಿಮಠದಲ್ಲಿ ಕೊಂಕಣಿ ಸಂಗೀತ ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು. ಖ್ಯಾತ ಸಂಗೀತಗಾರರಾದ ಶ್ರೀ ಪುತ್ತೂರು ನರಸಿಂಹ ನಾಯಕ್‌ರವರು ತರಬೇತುದಾರರಾಗಿ ಭಾಗವಹಿಸಿದ್ದರು.

39. ಘರ್‌ಘರ ಕೊಂಕಣಿ
ದಿನಾಂಕ ೧೫-೯-೨೦೧೨ ರಂದು ಶ್ರೀ ಎಂ ಮೀರನ್ ರವರ ಮನೆಯಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ಘರ್‌ಘರ ಕೊಂಕಣಿ ಸರಣಿ ಕಾರ್ಯಕ್ರಮದ ೧೦ ನೇ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ಎಂ.ಎಂ ಮೀರನ್ ಕುಟುಂಬಿಕರು ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷರಾಸ ಶ್ರೀ ವಿನೋದ್ ಪ್ರಭು ಕಾರ್ಯಕ್ಮವನ್ನು ಉದ್ಘಾಟಿಸಿದರು.

 


40. ಘರ್‌ಘರ ಕೊಂಕಣಿ
    ದಿನಾಂಕ ೧೫-೯-೨೦೧೨ ರಂದು ಶ್ರೀ ರಾಮನಾಥ ಮೇಸ್ತ ರವರ ಮನೆಯಲ್ಲಿ ಘರ್‌ಘರ ಕೊಂಕಣಿ ಸರಣಿ ಕಾರ್ಯಕ್ರಮದ ೧೧ ನೇ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ರಾಮನಾಥ ಮೇಸ್ತ ಕುಟುಂಬಿಕರು ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 


41. ಕೊಂಕಣಿ ಸಂಗೀತ ಕಾರ್ಯಾಗಾರ, ಮಂಗಳೂರು
ದಿನಾಂಕ ೧೬-೯-೨೦೧೨ ರಂದು ಭಾನುವಾರ ಶಕ್ತಿನಗರದ ಕಲಾಂಗಣನಲ್ಲಿ ಅಕಾಡೆಮಿ ವತಿಯಿಂದ ಯುವಜನರಿಗಾಗಿ ಒಂದು ಸುಗಮ ಸಂಗೀತ ಕಾರ್ಯಾಗಾರ ಏರ್ಪಡಿಸಿದ್ದು, ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖ್ಯಾತ ಸಂಗೀತಗಾರರಾದ ಶ್ರೀ ಎರಿಕ್ ಒಝೇರಿಯೊ ರವರು ಸಂಗೀತ ತರಬೇತಿ ನೀಡಿದರು.

 


42. ಘರ್‌ಘರ ಕೊಂಕಣಿ
ದಿನಾಂಕ ೧೬-೯-೨೦೧೨ ರಂದು ಶ್ರೀ ನಾಗರಾಜ ಶೇಟ್ ರವರ ಮನೆಯಲ್ಲಿ ಘರ್‌ಘರ ಕೊಂಕಣಿ ಸರಣಿ ಕಾರ್ಯಕ್ರಮದ ೧೨ ನೇ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ನಾಗರಾಜ್ ಶೇಟ್ ಕುಟುಂಬಿಕರು ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 


43. ಕೊಂಕಣಿ ಹ್ಹಾಸೋ
   ದಿನಾಂಕ ೨೨-೯-೨೦೧೨ ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ ಕೊಂಕಣಿ ಹ್ಹಾಸೋ ಕಾgಂiಕ್ರಮವನ್ನು ನಡೆಸಲಾಯಿತು. ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಬ ಸ್ತಿ ವಾಮನ ಶಣೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ಸಾಹಿತಿಗಳಾದ ಡಾ| ಎಡ್ವರ್ಡ್ ನಜರೆತ್‌ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೊಂಕಣಿ ರಂಗಭೂಮಿಯಲ್ಲಿ ಕೆಲಸ ಮಾಡಿದ ವೈಶ್ಯವಾಣಿ ಸಮಾಜದ ಹಿರಿಯ ರಂಗಕರ್ಮಿ ಕೆ. ಶೇಷಗಿರಿ ನಾಯಕ್, ಎರಡೂ ಕೈಗಳನ್ನು ಕಳಕೊಂಡ ಪ್ರತಿಭಾನ್ವಿತ ಮಹಿಳೆ ಮೂಡಬಿದ್ರೆಯ ಸ್ಟೂಡೆಂಟ್ಸ್ ವೆಲ್‌ಪೇರ್ ಆಫಿಸರ್ ಕು| ಸಬಿತಾ ಮೋನಿಸ್ ಅವರನ್ನು ಸನ್ಮಾನಿಸಲಾಯಿತು.  ಖ್ಯಾತ ಹಾಸ್ಯದ ಮಾತುಗಾರ್ತಿ ಶ್ರೀಮತಿ ಸಂಧ್ಯಾ ಶೆಣೈ, ಉಡುಪಿ, ಶ್ರೀ ಕೆ ರಮಾನಂದ ಕಾಮತ್, ಕುಂದಾಪುರ ಮತ್ತು ಶ್ರೀ ಫೆಲಿಕ್ಸ್ ಸಲ್ಡಾನ ಮತ್ತು ಬಳಗ ಇವರಿಂದ ನಕ್ಕುನಗಿಸುವ ಹಾಸ್ಯ ಕಾರ್ಯಕ್ರಮ ಜನಮೆಚ್ಚುಗೆಯನ್ನು ಪಡೆಯಿತು.

 


44. ಗಡಿನಾಡು ಕೊಂಕಣಿ ಜಾನಪದ ಉತ್ಸವ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಐಸಿವೈಎಮ್ ನಾರಂಪಾಡಿ ಇವರ ಸಹಯೋಗದಲ್ಲಿ ದಿನಾಂಕ ೨೩-೯-೨೦೧೨ ರಂದು ನಾರಂಪಾಡಿ ಶಾಲಾ ವಠಾರದಲ್ಲಿ “ಗಡಿನಾಡ ಕೊಂಕಣಿ ಜಾನಪದ ಉತ್ಸವ”ವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾರಂಪಾಡಿ ಚರ್ಚ್‌ನ ಧರ್ಮಗುರುಗಳಾದ ವಂ. ಆಂಟನಿ ಲಸ್ರಾದೊ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಂಡ್‌ಸೊಭಾಣ್‌ನ ಗುರ್ಕಾರರಾದ ಶ್ರೀ ಎರಿಕ್ ಒಝಾರಿಯೊ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸುಂದರ ಪ್ರಭು ರವರು ಅತಿಥಿಗಳಾಗಿ ಭಾಗವಹಿಸಿದ್ದರು. ಕೊಂಕಣಿ ಮನೆಮಾತಾಗಿರುವ ಸಾಹಿತಿ ಕಲಾವಿದರಾದ ಶ್ರೀ ವಿಲ್ಸನ್ ಕಯ್ಯಾರ್, ಶ್ರೀ ರಾಜು ಉಕ್ಕಿನಡ್ಕ, ಶ್ರೀ ಹರೀಶ್ ಪೆರ್ಲ್‌ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಡುಬಿ, ಕ್ಯಾಥೊಲಿಕ್, ಖಾರ್ವಿ, ಜಿ.ಎಸ್.ಬಿ ತಂಡಗಳಿಂದ ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಸದಸ್ಯರಾದ ಶ್ರೀ ರೋಯ್ ಕ್ಯಾಸ್ಟಲಿನೊ ರವರು ಸ್ವಾಗತಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಡಾ| ದೇವದಾಸ ಪೈ, ಸದಸ್ಯರಾದ ಅಶೋಕ್ ಶೇಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

45. ಕೊಂಕಣಿ ಸ್ತ್ರೀ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿವತಿಯಿಂದ ದಿನಾಂಕ ೨೯-೯-೨೦೧೨ ರಂದು ಅಕಾಡೆಮಿ ಸಭಾಂಗಣದಲ್ಲಿ ಕೊಂಕಣಿ ಸ್ತ್ರೀ ಕಾರ್ಯಕ್ರಮವನ್ನು ಮಧ್ಯಾಹ್ನ ೨-೩೦ ಕ್ಕೆ ಆಯೋಜಿಸಲಾಂತು. ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕ್ರಮ ನಿರ್ವಹಕರಾದ ಶ್ರೀಮತಿ ಉಷಾ ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿಯ ಮಾಜಿ ನಿಲಯನಿರ್ದೇಶಕರಾದ ಶ್ರೀಮತಿ ಜಯಶ್ರೀ ಶಾನ್‌ಭಾಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಶ್ರೀಮತಿ ಜ್ಯೂಡಿತ್ ಮಸ್ಕರೇನಸ್ ಶುಭಾಶಂಸನೆ ಗೈದರು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶಕುಂತಲಾ ಆರ್ ಕಿಣಿ, ಶ್ರೀಮತಿ ಕ್ಯಾಥರಿನ್ ರೋಡ್ರಿಗಸ್, ಶ್ರೀಮತಿ ಪ್ಲೋರಿನ್ ರೋಚ್ ಹಾಗೂ ಡಾ| ಗೀತಾ ಶೆಣೈ ವಿವಿಧ ರಂಗಗಳಿಗೆ ಕೊಂಕಣಿ ಮಹಿಳೆಯರ ಕೊಡುಗೆಂii ಕುರಿತು ವಿಚಾರ ಮಂಡನೆ ಮಾಡಿದರು. ಐವತ್ತು ಮಂದಿ ಮಹಿಳೆಯರು ವಿಶೇಷ ಸಾಧಕರಾಗಿ ಭಾಗವಹಿಸಿದ್ದರು. ಸಾಧಕರಾದ ಶ್ರೀಮತಿ ಜಯಶ್ರೀ ಶಾನ್‌ಭಾಗ್, ಶ್ರೀಮತಿ ಗ್ಲಾಡಿಸ್ ರೇಗೊರವರನ್ನು ಗೌರವಿಸಲಾಯಿತು. ಸಾಂಸ್ಕ್ರೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ಎರಿಕ್ ಒಝಾರಿಯೊರವರ ಕೊಂಕಣಿ ಸುಗಮ ಸಂಗೀತ ಹಾಗೂ ಶ್ರೀಮತಿ ವಿದ್ಯಾ ಗುಲ್ವಾಡಿಯವರ ಕೊಂಕಣಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.

 


46. ರಂಗ ವೈಭವ-೨೦೧೨ ಪ್ರಾದೇಶಿಕ ಕೊಂಕಣಿ ನಾಟಕೋತ್ಸವ ಹಾಗೂ ರಂಗ ಸಂವಾದ ಕಾರ್ಯಕ್ರಮ 
ಈ ಕಾರ್ಯಕ್ರಮವನ್ನು ದಿನಾಂಕ ೬-೧೦-೨೦೧೨ ಮತ್ತು ೭-೧೦-೨೦೧೨ ರಂದು ಕುಮಟಾದ ಶ್ರೀ ಶಾಂತಿಕಾ ಪರಮೇಶ್ವರೀ ಸಭಾಭವನದಲ್ಲಿ ನಡೆಸಲಾಯಿತು. ದಿನಾಂಕ ೬-೧೦-೨೦೧೨ ರಂದು ಜರಗಿದ ಉದ್ಘಾಟನ ಕಾರ್ಯಕ್ರಮವನ್ನು ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಕಾಸರಗೋಡು ಚಿನ್ನಾ ಇವರು ವಹಿಸಿದ್ದರು. ಕುಮಟದ ಶಾಸಕರಾದ ಶ್ರಿ ದಿನಕರ ಕೆ ಶೆಟ್ಟಿ , ಕರ್ನಾಟಕ ಗೇರುಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರಿ ವಿನೋದ ಎಮ್.ಪ್ರಭು ಹೊನ್ನಾವರದ ಚರ್ಚನ ಧರ್ಮಗುರುಗಳಾದ ಫಾ.ಅಂತೋನಿ ಬಲಗಂಡ್‌ಕರ್, ಇತರ ಪ್ರಮುಖರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ವಿ.ಅರ್ ಶಿಬಾಡ, ಶ್ರಿ ಎನ್.ಬಿ. ಅಂಗಡಿಕೇರಿ,  ಶ್ರೀ ಗೌರೀಶ್ ನಾಯಕ ಇವರನ್ನು ಸನ್ಮಾನಿಸಲಾಯಿತು. ದಿನಾಂಕ ೭-೧೦-೨೦೧೨ರ ಕೊಂಕಣಿ ರಂಗ ಸಂವಾದ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ನಾಟಕಕಾರರಾದ ಶ್ರೀ ಮಾರುತಿ ಭಟ್ಟ ಹೊನ್ನಾವರವರು ನಡೆಸಿಕೊಟ್ಟರು, ಕಾರ್ಯಕಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಇವರು ವಹಿಸಿದ್ದರು, ಸಮಾಜ ಸೇವಕರಾದ  ಶ್ರೀ ತ್ರಿವಿಕ್ರಮ ಬಾಬಾ ಪೈ  ಕಾರ್ಯಕ್ರಮಕ್ಕೆ ಶುಭಕೊರಿದರು ಈ ಸಂದರ್ಭದಲ್ಲಿ ಕೊಂಕಣಿ ರಂಗ ಸಂವಾದ ವಿಚಾರಗೋಷ್ಠಿ ಕಾರ್ಯಕ್ರಮವನ್ನು  ಏರ್ಪಡಿಸಿದ್ದು ಕರ್ನಾಟಕದಲ್ಲಿ ಕೊಂಕಣಿ ರಂಗಭೂಮಿ ಈ ಬಗ್ಗೆ ಶ್ರೀ ವಾಸುದೇವ ಶಾನುಭಾಗ ಪ್ರಬಂಧ ಮಂಡನೆ ಮಾಡಿದರು ಹಾಗೂ ಕೊಂಕಣಿ ರಂಗಭೂಮಿಗೆ ಉತ್ತರ ಕನ್ನಡದ ಕೊಡುಗೆ ಈ ಬಗ್ಗೆ ಶ್ರೀ ನಾಗೇಶ್ ಅಣವೇಕರ್ ಪ್ರಬಂದ ಮಂಡನೆ ಮಾಡಿದರು. ಈ ಸಂದರ್ಭದಲ್ಲಿ ಅಜ್ಜಾಲ್ ಮಜಾ, ಜನ್ನಾಲೊ ಸಂಸಾರ, ಪ್ರಾರಬ್ದ, ಸಿಂಹ ನೃತ್ಯ ಹಾಂವ್ ಚುಕ್ಲೊ, ಸತ್ಯಮೇವ ಜಯತೇ, ಅವಯ್‌ಚೊ ತ್ಯಾಗ್ ಈ ನಾಟಕಗಳ ಪ್ರದರ್ಶನ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಡಾ.ಟಿ.ಎಮ್.ಪೈ ಚಾರಿಟೇಬಲ್ ಫೌಂಡೇಶನ್ ಕುಮಟಾ ಮತ್ತು ಕೊಂಕಣಿ ಪರಿಷತ್ತು ಕುಮಟ ಇವರ ಸಹಕಾರದಲ್ಲಿ ನಡೆಸಲಾಯಿತು.

 


47. ಘರ್ ಘರ್ ಕೊಂಕಣಿ-೧೩
ದಿನಾಂಕ ೭-೧೦-೨೦೧೨ ರಂದು ಅದಿತ್ಯವಾರ ೩.೦೦ ಗಂಟೆಗೆ ಶ್ರೀಮತಿ ಭವಾನಿ ಕೋಂ ಶಂಕರ ಭಂಡಾರಿ ಮಣಕಿ ಇವರ ಮನೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕಾಸರಗೋಡು ಚಿನ್ನಾ ಇವರು ನಡೆಸಿಕೊಟ್ಟರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ವಿನೋದ ಎಂ. ಪ್ರಭು ಇವರು ವಹಿಸಿದ್ದರು, ಮುಖ್ಯ ಅತಿಥಿಯಾಗಿ ಅಕಾಡೆಮಿಯ ರಿಜಿಸ್ಟ್ರಾರ್, ಬಿ.ದೇವದಾಸ ಪೈ,  ಸದಸ್ಯರಾದ ಶ್ರಿ ಓಂ ಗಣೇಶ್, ಶ್ರೀ ಅಶೋಕ ಶೇಟ್, ಶ್ರೀ ಚಿದಾನಂದ ಭಂಡಾರಿ, ಮತ್ತು ಭಂಡಾರಿ ಸಮಾಜೋನ್ನತಿ ಸಂಘ ಕುಮಟಾ ಇದರ ಅಧ್ಯಕ್ಷ ಶ್ರೀ ಶ್ರೀಧರ ಆರ್ ಬೀರಕೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೊಂಕಣಿಯ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.

48. ಕೊಂಕಣಿ ಸಂವೇದನಾ-೩
ದಿನಾಂಕ ೧೩-೧೦-೨೦೧೨ ರಂದು ಅಕಾಡೆಮಿಯ ಮಾಂಟೋವುನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.  ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ.ಎಮ್.ರಘುನಾಥ ಶೇಟ್ ಇವರು ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾಸರಗೋಡು ಚಿನ್ನಾ ಇವರು ವಹಿಸಿದ್ದರು, ಮಡಿಕೇರಿ ಆಕಾಶವಾಣಿಯ ಕಾರ್ಯಕ್ರಮ ನಿರ್ದೇಶಕರಾದ ಶ್ರೀಮತಿ ಕನ್ಸೆಪ್ಟಾ ಆಳ್ವ ಇವರು ಮುಖ್ಯ ಅತಿಥಿಯಾಗಿದ್ದರು, ಈ ಸಂದರ್ಭದಲ್ಲಿ ಕೊಂಕಣಿ ನವಾಯತ  ಮುಖಂಡರಾದ ಶ್ರೀ ಎಂ.ಎಂ.ಮೀರನ್ ಮತ್ತು ಕೊಂಕಣಿ ಖಾರ್ವಿ ಮುಖಂಡರಾದ ಶ್ರೀ ಗಣಪತಿ ಶಿಪಾಯಿ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಹಾಗೂ ವಿಶಿಷ್ಟ ಸಾಮರ್ಥದ ಸಂಗೀತ ಕಲಾವಿದರಾದ ಶ್ರೀ ಮಂಗೇಶ್ ಶೆಣೈ ಯೆಳಚಿತ್ ಮತ್ತು ಬಳಗದವರಿಂದ ಕೊಂಕಣಿ ಸಂಗೀತ ಕಾರ್ಯಕ್ರಮ ನಡೆಸಲಾಯಿತು.

 


49. ಮಧುರ ಕೊಂಕಣಿ-೧
ದಿನಾಂಕ ೧೪-೧೦-೨೦೧೨ ರಂದು ಬಾನುವಾರ ಬೆಳಿಗ್ಗೆ ೧೦-೦೦ ಗಂಟೆಗೆ ದೈವಜ್ಞ ಬ್ರಾಹ್ಮಣ ಸಭಾಭವನ ಅಶೋಕನಗರ ಮಂಗಳೂರು ಇಲ್ಲಿ ದೈವಜ್ಞ ಬ್ರಾಹ್ಮಣ ಸಂಘ(ರಿ) ಅಶೋಕನಗರ ಇವರ ಸಹಕಾರದಲ್ಲಿ ನಡೆಸಲಾಯಿತು. ಉದ್ಯಮಿ ಶ್ರಿ ಕೆ. ಅಶೋಕ ಕುಮಾರ್ ಬೆಂಗಳೂರು ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿಕೊಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಇವರು ವಹಿಸಿದ್ದರು, ಉದ್ಯಮಿ, ಸಮಾಜಸೇವಕರಾದ ಶ್ರೀ ಶಶಿಕಾಂತ ನಾಗ್ವೇಕಾರ್, ದೈವಜ್ಞ ಬ್ರಾಹ್ಮಣ ಸಂಘ ಇದರ ಅಧಕ್ಷರಾದ ಶ್ರಿ ಎಸ್. ರಾಜೇಂದ್ರ ಶೇಟ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಈ ಬಗ್ಗೆ ಅಕಾಡೆಮಿಸದಸ್ಯರಾದ ಶ್ರೀ ರೊಯ್ ಕಾಸ್ಟೇಲಿನೊ ಇವರು ವಿಚಾರ ಮಂಡನೆ ಮಾಡಿದರು. ಈ ಸಂದರ್ಭದಲ್ಲಿ ಕೊಂಕಣಿ ಭಾವ ಗೀತಾ ಗಾಯನ ಕಾರ್ಯಕ್ರಮವನ್ನು ಕುಮಾರಿ ಸ್ವಾತಿ ಸುಧೀರ್ ಶೇಟ್, ಕು.ದೀಕ್ಷ ಡಿ ಶೇಟ್ ಮತ್ತು ಬಳಗದವರು ಕೊಂಕಣಿ ನಾಟಕ ತುಣುಕು ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.

 


50. ಮಧುರ ಕೊಂಕಣಿ-೨
ಈ ಕಾರ್ಯಕ್ರಮವು ದಿನಾಂಕ ೨೧-೧೦-೨೦೧೨ ರಂದು  ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನ ಉಡುಪಿ ಪುತ್ತೂರು ಇಲ್ಲಿ ಅಮ್ಗೆಲೆ ವಾಣಿ (ರಿ) ಉಡುಪಿ ಇವರ ಸಹಕಾರದಲ್ಲಿ ನಡೆಸಲಾಯಿತು. ಉಡುಪಿಯ ಉದ್ಯಮಿ ಶ್ರೀ ಸೋಮಶೇಖರ ಭಟ್ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಇವರು ವಹಿಸಿದರು. ಶ್ರಿ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ಆಡಳಿತ ಮುಕ್ತೇಸರಾದ ಶ್ರೀ ವಸಂತ ಪಿ.ನಾಯಕ್ ಹಿರಿಯ ರಂಗಕರ್ಮಿ ಶ್ರೀ ಕೋಣಿ ಶೇಷಗಿರಿ ನಾಯಕ್, ಉದ್ಯಮಿ ಶ್ರೀ ಕುಯಿಲಾಡಿ ಸುರೇಶ್ ನಾಯಕ್, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಈ ಬಗ್ಗೆ ಡಾ.ಬಿ.ದಾಮೋದರ ಭಟ್ ಇವರು ವಿಚಾರ ಮಂಡನಾ ಮಾಡಿದರು. ಈ ಸಂದರ್ಭದಲ್ಲಿ ವಿವಿಧ  ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ವಿಠಲ ನಾಯಕ, ಶ್ರೀ ಲಕ್ಷ್ಮಿನಾರಾಯಣ ಶೇಟ್, ಈಸಾಧಕರಿಗೆ ಸನ್ಮಾನಿಸಲಾಯಿತು.  ಹಾಗೂ ವಿವಿಧ ಕೊಂಕಣಿ ಮನೋರಂಚನ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಯಿತು.

51. ಕೊಂಕಣಿ ಸಂಗೀತ ಧಾರಾ.
ದಿನಾಂಕ ೨೭-೧೦-೨೦೧೨ ರಂದು ಅಕಾಡೆಮಿ ಸಭಾಂಗಣ ಕೊಂಕಣಿ ಮಾಂಟೋವಿನಲ್ಲಿ ಸಂಜೆ ೪.೩೦ ಗಂಟೆಗೆ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಖ್ಯಾತ ಉದ್ಯಮಿ ಶ್ರೀ ಗಣಪತಿ ಪೈ ತೋನ್ಸೆ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾಸರಗೋಡು ಚಿನ್ನಾ ಇವರು ನೆರೆವೇರಿಸಿದರು. ಮ್ಯಗ್ನಮ್ ಇಂಟರ್ ಗ್ರಾಫಿಕ್ಸ್ ಮಂಗಳೂರು ಇದರ ನಿರ್ದೇಶಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಚಿತ್ರಕಲಾವಿದರಾದ ಶ್ರೀ ಪಿ.ವಿ.ಸುಜೀರ್ ಮತ್ತು ಕೊಂಕಣಿಸಾಹಿತಿ ಪ್ರೊ.ಅಲ್ಬನ್ ಕೆಸ್ಟೆಲಿನೊ ಇವರನ್ನು ಕೊಂಕಣಿ ನಕ್ಷತ್ರ ರೆಂದು ಗೌರವಿಸಲಾಯಿತು.

ಖ್ಯಾತ ಹಿಂದುಸ್ಥಾನಿ ಸಂಗೀತ ಕಲಾವಿದರಾದ ಶ್ರೀ ಶೇಟ್ ಕಮಲಾಕರ್ ಗಂಗೊಳ್ಳಿ  ಇವರು ಕೊಂಕಣಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

 


52. ಘರ-ಘರ ಕೊಂಕಣಿ – ೧೪
ದಿನಾಂಕ ೩-೧೧-೨೦೧೨ ರಂದು ಸಂಜೆ ೪.೦೦ ಗಂಟೆಗೆ ವಿಶ್ವ ಕೊಂಕಣಿ ಕಲಾರತ್ನ ಶ್ರಿ ಎರಿಕ್ ಒಝೇರಿಯೊ ಇವರ ಮನೆ ಪ್ರೊಸ್ಪೆರೊ ಜೆಪ್ಪು ಮಂಗ್ಳುರ್ ಇಲ್ಲಿ ನಡೆಸಲಾಯಿತು. ಮನೆಯ ಯಜಮಾನರಾದ ಶ್ರೀ ಎರಿಕ್ ಒಝೇರ್ ಇವರು ಸ್ವಾಗತಿಸಿದರು ಅಕಾಡೆಮಿಯ ಸದಸ್ಯರಾದ ಶ್ರೀ ರಾಯ್ ಕಾಸ್ಟೆಲಿನೊ ಇವರು ಕಾರ್ಯಕ್ರಮದ ಪ್ರಸ್ತಾವನೆ ನೀಡಿದರು ಅಕಾಡೆಮಿ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ರೆಂ.ಫಾ.ಜೊನ್ ಫೆರ್ನಾಂಡಿಸ್ ಇವರು ಮುಖ್ಯ ಅತಿಥಿಯಾಗಿದ್ದರು. ಕೊಂಕಣಿ ಸಂಗೀತ ಕಾರ್ಯಕ್ರಮನ್ನುಪ್ರಸ್ತುತ ಪಡಿಸಲಾಯಿತು. ಶ್ರೀಮತಿ ಜೊಯ್ಸ್ ಒಝೇರಿಯೊ ಇವರು ವಂದನಾರ್ಪಣೆ ಗೈದರು.

 


53. ಘರ-ಘರ ಕೊಂಕಣಿ – 15
ದಿನಾಂಕ ೪-೧೧-೨೦೧೨ ರಂದು ಶ್ರೀ ಅಲ್ವಿನ್ ಸ್ಟೀಫನ್ ಕ್ಯಾಸ್ತೆಲಿನೊ ಶಕ್ತಿನಗರ ಮಂಗಳೂರು ಇವರ ಮನೆಯಲ್ಲಿ  ಬೆಳಿಗ್ಗೆ ೧೦.೦೦ ಗಂಟೆಗೆ ನಡೆಸಲಾಯಿತು. ಮನೆಯ ಯಜಮಾನ ಶ್ರೀಅಲ್ವಿನ್ ಸ್ಟೀಫನ್ ಕ್ಯಾಸ್ತೆಲಿನೊ ಇವರು ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ಶ್ರಿ ರಾಯ್ ಕ್ಯಾಸ್ತೆಲಿನೊ ಪ್ರಸ್ತಾವನೆ  ಮತ್ತು ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಯಾಗಿ ಅಕಾಡೆಮಿಯ ಸದಸ್ಯರಾದ ಶ್ರೀ ಮಹೇಶ್ ನಾಯಕ್ ಭಾಗವಹಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು. ಒಲಿಂಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು ಈ ಸಂದರ್ಭದಲ್ಲಿ ಮಕ್ಕಳಿಂದ ಹಾಡು, ನೃತ್ಯ ಕಥೆಗಳನ್ನು ಪ್ರಸ್ತುತಪಡಿಸಲಾಯಿತು.

 


54. ಘರ-ಘರ ಕೊಂಕಣಿ – ೧೬
ದಿನಾಂಕ ೪-೧೧-೨೦೧೨ ರಂದು ಮಂಗಳೂರಿನ ವಾಮಂಜೂರು  ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮೆಲ್ವಿನ್ ಡಿಸೊಜಾ ಇವರ ಮನೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಅಕಾಡೆಮಿಯ ಸದಸ್ಯರಾದ ಶ್ರೀ ರಾಯ್ ಕ್ಯಾಸ್ತೆಲಿನೊ ಇವರು ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಾಮಂಜೂರು ಚರ್ಚಿನ ಸಹಾಯಾಕ ಧರ್ಮಗುರುಗಳಾದ ಫಾ. ರೋಶನ್ ಕ್ರಾಸ್ತಾ ಇವರು ಭಾಗವಹಿಸಿದ್ದರು.  ಕಾರ್ಯಕ್ರಮ ಮಹತ್ವದ ಬಗ್ಗೆ ಶ್ರೀ ವಿದ್ಯಾಶಂಕರ್, ಮತ್ತು ನಾಗೇಂದ್ರ ರಾವ ಇವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಡೇವಿಡ್ ಡಿಸೊಜಾ ಇವರನ್ನು ಸನ್ಮಾಸಲಾಯಿತು. ಮಕ್ಕಳಿಂದ ಹಾಡು ನೃತ್ಯ ನಾಟಕ ಪ್ರದರ್ಶನ ಪ್ರಸ್ತುತ ಪಡಿಸಲಾಯಿತು.

 


55. ಕೊಂಕಣಿ ಜಾನಪದ ಸಂಭ್ರಮ, ಕಾರ್ಕಳ -೨೦೧೨
ದಿನಾಂಕ ೧೦-೧೧-೨೦೧೨ ರಂದು ಕಾರ್ಕಳ ಶ್ರೀ ಬಿ.ಮಂಜುನಾಥ ಪೈ ಸಾಂಸ್ಕೃತಿಕ ಸಭಭವನದಲ್ಲಿ ನಡೆಸಲಾಯಿತು. ಕಾರ್ಕಳದ ನಿಕಟಪೂರ್ವ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ಇವರು ಕಾರ್ಯಕ್ರiವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಎಚ್ ಗೋಪಾಲ ಭಂಡಾರಿ, ಶಾಸಕರು ಕಾರ್ಕಳ  ವಂದನೀಯ ಫಾದರ್ ಜಾನ್ ಎ ಬಾರ್ಬೊಜಾ ಇನ್ನೀತರರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಾನಪದ ಕಲಾ ಮೆರವಣಿಗೆಯ ಉದ್ಘಾಟನೆಯನ್ನು ಕುಂದಾಪುರದ ಅಸಿಸ್ಟೆಂಟ್ ಕಮಿಷನರ್, ಶ್ರೀ ಸದಾಶಿವ ಪ್ರಭು ನೆರವೆರಿಸಿದರು. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದರಾದ ಶ್ರೀ ಮಿಜಾರು ಅಣ್ಣಪ್ಪ ಉಪಸ್ಥಿತರಿದ್ದರು,   ವಸ್ತುಪ್ರದರ್ಶನದ  ಉದ್ಘಾಟಣೆಯನ್ನು ಶ್ರೀ ಕೆ ರವೀಂದ್ರ ಭಟ್ ಇವರು ನೆರವೇರಿಸಿಕೊಟ್ಟರು, ಸಾಂಸ್ಕೃತಿಕ ಕಾರ್ಯಕ್ರಮವನ್ನು  ಶ್ರೀ ಗಣೇಶ ಕಾಮತ್ ಶ್ರೀ ರಘುಪತಿ ಪೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಒಟ್ಟು ೧೫ ತಂಡಗಳ ಬಹು ಭಾಷಾ ಜಾನಪದ ಪ್ರದರ್ಶನ ನಡೆಸಲಾಯಿತು.

 


56. ಗೌರವ ಪ್ರಶಸ್ತಿ ಪುಸ್ತಕ ಬಹುಮಾನ ಪ್ರದಾನ ಸಮಾರಂಭ:
೨೦೧೧ನೇ ಸಾಲಿನ ಕೊಂಕಣಿ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ದಿನಾಂಕ ೧೧-೧೧-೨೦೧೨ ರಂದು ರವಿವಾರ  ಸಂಜೆ ೫.೦೦ ಗಂಟೆಗೆ ಕಾರ್ಕಳದ ಶ್ರೀ ಮಂಜುನಾಥ ಪೈ ಸಾಂಸ್ಕೃತಿಕ ಭವನದಲ್ಲಿ ನಡೆಸಲಾಯಿತು. ಮಾನ್ಯ ಉಪಸಭಾಪತಿಯವರಾದ ಶ್ರೀ ಎನ್.ಯೋಗಿಶ್ ಭಟ್ ಇವರು ಈ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು. ಹಾಗೂ ಅಕಾಡೆಮಿ ಗೌರವಪ್ರಶಸ್ತಿ ವಿಜೇತರಾದ ಶ್ರೀ ಶಾ.ಮಂ ಕೃಷ್ಣರಾಯ(ಸಾಹಿತ್ಯ ಮತ್ತು ಭಾಷೆ),ಶ್ರೀ ಹೆರಿ ಡಿಸೋಜ ಕೊಂಕಣಿ ಕಲೆ(ನಾಟಕ) ಮತ್ತು ಶ್ರೀ ಬಾಬಿ ನಾಯ್ಕ್ ಕೊಂಕಣಿ ಜನಪದ ಇವರನ್ನು ಶಾಲು, ಹಾರ, ಸ್ಮರಣಿಕೆ, ಪ್ರಮಾಣ ಪತ್ರ, ಫಲತಾಂಬೂಲ ಹಾಗೂ ನಗದುಧನ ನೀಡಿ ಗೌರವಿಸಿದರು. ಪುಸ್ತಕ ಪುರಸ್ಕಾರಕ್ಕೆ ಅರ್ಹರಾದ ಶ್ರೀ ಮ್ಯಾಕ್ಸಿ ಜಿ ಪಿಂಟೊ, ಕೊಂಕಣಿ ಲೇಖನಾ ಸಂಕಲನ  - “ಸತಾಂ ಖತಾಂ ಪುಸ್ತಕಕ್ಕಾಗಿ, ಶ್ರೀ ರೊನಾಲ್ಡ್ ವಾಜ್ ” ಕೊಂಕಣಿ ಕಥನಾ ಕವನ  ಸಂಗ್ರಹ –  “ಆವಾಜ್” ಪುಸ್ತಕಕ್ಕಾಗಿ ಹಾಗೂ ಶ್ರೀ ರೋನ್ ಮಾಯ್ಕಲ್ ಆಂಜೆಲೊರ್, ಕೊಂಕಣಿ ಸಣ್ಣ ಕತೆ – “ ವೊಡ್ತಾಂತ್ಲೆಂ ಗುಲೊಬ್ ಪುಸ್ತಕ್ಕಾಗಿ ವಿಧಾನ ಪರಿಷತ್ತಿನ ಶಾಸಕರಾದ ಮಾನ್ಯ ಶ್ರೀ ಕ್ಯಾ.ಗಣೇಶ್ ಕಾರ್ಣಿಕ್‌ರವರು ಕೊಂಕಣಿ ಪುಸ್ತಕ ಪುರಸ್ಕಾರ ಪ್ರದಾನವನ್ನು ಮಾಡಿದರು. ಶಾಸಕರಾದ(ವಿಧಾನಸಭೆ)  ಮಾನ್ಯ ಶ್ರೀ ಗೋಪಾಲ ಭಂಡಾರಿ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳದ ಮಾಜಿ ಶಾಸಕರಾದ ಶ್ರೀ ಸುನಿಲ್ ಕುಮಾರ್ ಇವರು ಫೆಲೋಶಿಫ್ ವಿತರಣೆ ಮಾಡಿದರು,  ಪ್ರಸಿದ್ದ  ಕವಿ ಮತ್ತು ಸಾಹಿತಿ ಶ್ರೀ ವಲೇರಿಯನ್ ಡಿಸೋಜ(ವಲ್ಲಿ ವಗ್ಗ) ಇವರು ಯುವ ಪುರಸ್ಕಾರ  ಪ್ರಧಾನ ಮಾಡಿದರು.
 
ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಶ್ರೀಮತಿ ಶೀಲಾ ನಾಯಕ ಮತ್ತು ತಂಡದವರಿಂದ ಕೊಂಕಣಿ ವೈವಿದ್ಯ ಕಾರ್ಯಕ್ರಮ, ಶ್ರಿ ಓಂ ಗಣೇಶ್ ಇವರಿಂದ ಕೊಂಕಣಿ ಮ್ಯಾಜಿಕ್ ಪ್ರದರ್ಶನ, ಕಾರ್ಕಳ ಕಥೋಲಿಕ್ ಸಮುದಾಯದವರಿಂದ ಕೊಂಕಣಿ ವೈವಿದ್ಯ, ಶ್ರೀಮತಿ ವಿಭಾ ನಾಯಕ್ ಇವರಿಂದ ಕೊಂಕಣಿ ಗೀತೆಗಳು, ಕುಡಾಲ ದೇಶಸ್ತ ಅದ್ಯ ಗೌಡ ಸಾರಸ್ವತ ಸಮುದಾಯದವರಿಂದ ಕೊಂಕಣಿ ವೈವಿದ್ಯ, ರಾಜಾಪುರ ಸಾರಸ್ವತ ಬ್ರಾಹ್ಮಣ ಸಮುದಾಯದವರಿಂದ ಕೊಂಕಣಿ ವೈವಿದ್ಯ, ಕುಡುಬಿ ಸಮುದಾಯದವರಿಂದ ಜಾನಪದ ನೃತ್ಯ ಕಾರ್ಯಕ್ರಮಗಳು ಜರಗಿದವು.

 


57. ಅಮ್ಮಿ ಕೊಂಕಣಿ ಕೊಂಕಣಿ ಸಾಂಸ್ಕೃತಿಕ ಮಹೋತ್ಸವ                                                          
  ೧. ದಿನಾಂಕ ೨೨-೧೧-೨೦೧೨ ರಂದು ೩.೧೫ ಗಂಟೆಗೆ ಜನಪದ ಕಲಾ ತಂಡಗಳ ಭವ್ಯ ಮೆರವಣಿಗೆ ಕಾರ್ಯಕ್ರಮವನ್ನು  ಸಂತ ಅಲೋಶಿಯಸ್ ಕಾಲೇಜು ಮೈದಾನದಿಂದ ಪುರಭವನದವರೆಗೆ ನೆರವೇರಿಸಲಾಯಿತು. ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ ಸಂಚಾಲಕರಾದ ಡಾ.ಪ್ರಭಾಕರ್ ಭಟ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ರಹಿಂ ಉಚ್ಚಿಲ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಉಮಾನಾಥ ಕೊಟ್ಯಾನ್, ಮಾಂಡ್ ಸೊಭಾಣ್ ಸಂಸ್ಥೆಯ ಅಧ್ಯಕ್ಷರಾದ ಶ್ರಿ ಸ್ಟ್ಯಾನಿ ಅಲ್ವಾರಿಸ್, ಜಿ.ಎಸ್.ಅಬಿ. ಸರ್ವ ದೇವಲ ಸಮಿತಿ ಅಧ್ಯಕ್ಷರಾದ ಶ್ರೀ ಸಿ.ಎಲ್.ಶೆಣೈ  ಕೊಂಕಣಿಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಬಾಳಿಗಾ ಇವರು ಉಪಸ್ಥಿತರಿದ್ದರು.

 ೨. ದಿನಾಂಕ ೨೨-೧೧-೨೦೧೨ ರಂದು ಸಂಜೆ ೫.೩೦ ಗಂಟೆಗೆ ಅಮ್ಮಿ ಕೊಂಕಣಿ ಉದ್ಘಾಟನಾ ಕಾರ್ಯಕ್ರಮ;
 ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯ ಮಂತ್ರಿ ಶ್ರೀ ಡಿ.ವಿ ಸದಾನಂದ ಗೌಡ ಇವರು ನೇರವೇರಿಸಿದರು. ಮಾನ್ಯ್ ಉಪಸಭಪತಿ ಕರ್ನಾಟಕ ವಿಧಾನ ಸಭೆಯ ಶ್ರೀ ಯೋಗಿಶ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಭಯಚಂದ್ರ ಜೈನ್, ಗಣೇಶ್ ಕಾರ್ಣಿಕ್, ಮೊನಪ್ಪ ಭಂಡಾರಿ, ಯುಟಿ.ಖಾದರ್ ಬಿ.ರಮಾನಾಥ ರೈ ಭಾಗವಹಿಸಿದ್ದರು.  ಮಂಗಳೂರು ಪ್ರಾಂತ್ಯದ ಕಥೋಲಿಕ್ ಬಿಶಪ್ ರವರಾದ ಅತಿ ವಂ.ಡಾ. ಅಲೋಷಿಯಸ್ ಪೌಲ್ ಡಿಸೋಜಾ ಇವರು ಗೌರವ ಉಪಸ್ಥಿತರಿದ್ದರು ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಬಸ್ತಿ ವಾಮನ ಶೆಣೈ ಮತ್ತು ಕುಂದಾಪುರ ನಾರಾಯನ ಖಾರ್ವಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಹು ವೈವಿದ್ಯಮಯ ಕೊಂಕಣಿ ಜಾನಪದ ಹಾಡು ನೃತ್ಯ ಪ್ರದರ್ಶನಗಳನ್ನು ಪ್ರಸ್ತುತ ಪಡಿಸಲಾಯಿತು.

 


೨.ದಿನಾಂಕ ೨೩-೧೧-೨೦೧೨  ಖಾಣ್ ಜೆವಣ್ ಅಹೋರೋತ್ಸವ ಬೆಳಿಗ್ಗೆ ೧೧.೦೦
 ೧. ವಿವಿಧ ಕೊಂಕಣಿ ಸಮುದಾಯದ ಮಹಿಳೆಯರಿಂದ ೨೦೦ಕ್ಕೂ ಮಿಕ್ಕಿ ವೈವಿಧ್ಯಮಯ ತಿಂಡಿತಿನಿಸುಗಳ ಪ್ರದರ್ಶನ ಕಾರ್ಯಕ್ರಮ ಎರ್ಪಡಿಸಲಾಗಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶಾಲಿನಿ ಪಂಡಿತ್ ನೆರವೇರಿಸಿದರು. ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀಮತಿ ಸುಭದ್ರ ಅರುಣ್ ಶೇಟ್, ಶ್ರೀಮತಿ ಜಯಂತಿ ನಾಯಕ್ ಮುಖ್ಯ ಅತಿಥಿಯಾಗಿದ್ದು, ಶ್ರೀ ಕಾಸರಗೋಡು ಚಿನ್ನಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಗೀತಾ ಸಿ. ಕಿಣಿ ಮತ್ತು ಶ್ರೀ ನವೀನ್ ಡಿಸೋಜ ಕಾರ್ಯಕ್ರಮದ ಸಂಯೋಜಕರಾಗಿದ್ದರು.

 


೨. ದಿನಾಂಕ ೨೩-೧೧-೨೦೧೨  ಸ್ತ್ರೀ ವೈಭವ- ಮಹಿಳಾ ಸಾಂಸ್ಕೃತಿಕ ಉತ್ಸವ  ಸಂಜೆ ೫.೩೦
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಮಲ್ಲಿಕಾ ಪ್ರಸಾದ ಪುತ್ತೂರು ವಿಧಾನಸಭೆ ಶಾಸಕರು ಇವರು ನೆರವೇರಿಸಿದರು. ಶ್ರೀಮತಿ ಪದ್ಮ ಶೆಣೈ, ಶ್ರೀಮತಿ ಜುಡಿತ್ ಮಸ್ಕರೇನ್ಹಸ್ ಇವರು ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಕೊಂಕಣಿ ಸ್ತ್ರೀಯರಿಂದ ವಿವಿಧ ಮನರಂಜನ ಕಾರ್ಯಕ್ರಮಗಳು ನಡೆದವು.

 


೩. ೨೪-೧೧-೨೦೧೨ ಭಾಷಾ ಭಾವೈಕ್ಯ - ಬಹುಭಾಷಾ ಕವಿಗೋಷ್ಠಿ ಬೆಳಿಗ್ಗೆ -೧೧.೦೦ ಗಂಟೆಗೆ
 ೧. ಕವಿಗೋಷ್ಠಿ: ಕಾರ್ಯಕ್ರಮದ ಪ್ರಸ್ತಾವನೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಇವರು ಮಾಡಿದರು.  ಖ್ಯಾತ ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ ಕಲ್ಕೂರ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ್ದರು, ಈ ಸಂದರ್ಭದಲ್ಲಿ ಕೊಂಕಣಿ ತುಳು ಬ್ಯಾರಿ ಮಲಯಾಳಂ ಕನ್ನಡ ದ ಒಟ್ಟು ೧೨ ಕವಿಗಳು ತಮ್ಮ ಸ್ವರಚಿತ ಕವನ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಅಕಾಡೆಮಿ ಸದಸ್ಯರಾದ ಶ್ರೀ ಮಹೇಶ್ ನಾಯಕ್ ಇವರು ನಡೆಸಿಕೊಟ್ಟರು.

 


೨. ಯುವ ಸಂಭ್ರಮ್-ವಿದ್ಯಾರ್ಥಿ ಸಾಂಸ್ಕೃತಿಕೋತ್ಸವ ಸಂಜೆ ೫.೩೦
ದಿನಾಂಕ ೨೪-೧೧-೨೦೧೨ ರಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ವಿನೋದ್ ಪ್ರಭು ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ವ್ಯವಸ್ಥಾಪಕರಾದ ಶ್ರೀ ಎಸ್.ಐ.ಬಾವಿಕಟ್ಟೆ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಅನಂತ್ ಪೈ, ಪ್ರದೀಪ್ ಪೈ ಶ್ರೀಕರ ಪ್ರಭು ಶ್ರೀ ಗ್ರೇಶಿಯನ್ ರೊಡ್ರಿಗಸ್ ಇವರು ಮುಖ್ಯ ಅತಿಥಿಗಳಾಗಿದ್ದರು, ಶ್ರೀ ವಿಕ್ಟರ ಮಥಾಯಸ್ ಇವರು ಕಾರ್ಯಕ್ರಮ ನಿರೂಪಿಸಿದರು.

 


೪. ೨೫-೧೧-೨೦೧೨ ಅಮ್ಮಿ ಕೊಂಕಣಿ ಸಮಾರೋಪ ಸಮಾರಂಭ ಸಂಜೆ ೫.೩೦
೧. ಮಾಜಿ ಸಚಿವರು ವಿಧಾನಸಭಾ ಶಾಸಕರಾದ ಶ್ರೀ ಕೃಷ್ನ ಜೆ ಪಾಲೆಮಾರ್ ಇವರು ಸಮಾರೋಪ ಸಮಾರಂಭ ಕಾರ್ಯಕ್ರಮ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾಸರಗೋಡು ಚಿನ್ನಾ ವಹಿಸಿದ್ದರು. ಯಂ.ರಘುನಾಥ ಶೇಟ್, ಜೆ.ಅರ್ ಲೋಬೊ, ಪ್ರತಾಪ್ ಸಿಂಹ ನಾಯಕ್, ಎಮ್.ಎಮ್.ಪ್ರಭು. ರಾಮಕಿಶೋರ್ ಎಲ್ಲೂರ್ ಶ್ರಿ ಶಶಿಕಾಂತ್ ನಾಗ್ವೇಕರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.

 


೨. ಕೊಂಕಣಿ ಸಂಗೀತ್ ಸಾಂಜ್ - ಸಂಜೆ ೬.೦೦ ಗಂಟೆಗೆ
ದಿನಾಂಕ ೨೫-೧೧-೨೦೧೨ ರಂದು ಶ್ರೀ ಚರಣ್ ಕುಮಾರ್ ಮತ್ತು ಮುರಳಿಧರ ಕಾಮತ್ ಇವರ ನಿರ್ದೆಶನದಲ್ಲಿ ಸುಮಾರು ೧೫ ಸಂಗೀತ ಕಲಾವಿದರಿಂದ ಕೊಂಕಣಿ ಸಂಗೀತ್ ಸಾಂಜ್ ಕಾರ್ಯಕ್ರಮವನ್ನು ನಡೆಸಲಾಯಿತು.

 


58. ಘರ್ ಘರ್ ಕೊಂಕಣಿ -೧೭
ದಿನಾಂಕ ೨-೧೨-೨೦೧೨ ರಂದು ಕುಂದಾಪುರದ ತೇಜಸ್ವಿನಿ ಮನೆಯ ವಠಾರದಲ್ಲಿ  ಶ್ರೀಮತಿ ಉಷಾ ಮತ್ತು ಶ್ರೀ ಎಮ್.ದಯಾನಂದ ರಾವ್ ಇವರು ಈ ಕಾರ್ಯಕ್ರಮವನ್ನು ಅಯೋಜಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಇವರು ವಹಿಸಿದ್ದರು, ವೈಶ್ಯವಾಣಿ ಸಮಾಜ ಸೇವಾ ಸಮಿತಿ ಕುಂದಾಪುರದ ಅಧ್ಯಕ್ಷರಾದ ಶ್ರೀ ಕೆ. ಚಂದ್ರಶೇಖರ ಶೇಟ್ ಸುರತ್ಕಲ್ ಇವರು, ಶ್ರೀ ಓಂ ಗಣೇಶ ಅಕಾಡೆಮಿಯ ಸದಸ್ಯರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ಶ್ರೀ ಅಚ್ಚುತ ಶೇಟ, ಮತ್ತು ಶ್ರೀ ತ್ರಿವಿಕ್ರಮ ರಾವ ಇವರನ್ನು ಗೌರವಿಸಲಾಯಿತು.  ನಂತರ ವಿವಿಧ ಮನರಂಜನ ಕಾರ್ಯಕ್ರಮಗಳು ನೆರೆವೇರಿದವು.

59. ಮಧುರ ಕೊಂಕಣಿ-೩ - ಹೊರರಾಜ್ಯ ಕಾರ್ಯಕ್ರಮ
ದಿನಾಂಕ ೯-೧೨-೨೦೧೨ ರಂದು ಗೋವದ  ಧವರ್ಲಿ ಶ್ರೀ ಮಾರುತಿ ಮಂದಿರದಲ್ಲಿ ಜಿ.ಎಸ್.ಬಿ.ಸಮಾಜ ಗೋವ ಇವರ ಸಹಕಾರದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಇವರು ನೆರವೇರಿಸಿದರು. ಮಡಗಾಂವಿನ ಸೆಂಟರ್ ಮನೆಜರ್ ಫಾರ್ ನೊ ಇಟ್ ಅಕಾಡೆಮಿಯ ಶ್ರೀ ಪಿ.ಜಿ. ಶಿರ್ವೈಕರ್ ಮುಖ್ಯ ಅತಿಥಿಗಳಾಗಿದ್ದರು, ಗೋವಾ ಜಿ.ಎಸ್.ಬಿ.ಸಮಾಜದ ಅಧ್ಯಕ್ಷರಾದ ಶ್ರೀ ಗಿರಿರಾಜ್ ಭಂಡಾರ್ ಕಾರ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಖ್ಯಾತ ಸಂಗೀತ ವಿದ್ವಾನ್ ಪಂಡಿತ ಶ್ರೀ ರಾಮರಾವ ವಾಸುದೇವ ನಾಯಕ ಇವರಿಗೆ ಕೊಂಕಣಿ ನಕ್ಷತ್ರ ಸನ್ಮಾನ ನೀಡಲಾಯಿತು.  ನಂತರ ಮಡಗಾಂವಿನ ಜಿ.ಎಸ್.ಬಿ.ಸಮಾಜ ಭಾಂವರಿಂದ ವಿವಿಧ ಮನೋರಂಜನ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು.

60. ಕೊಂಕಣಿ ಕ್ರೀಡಾ
ದಿನಾಂಕ ೧೪-೧೨-೨೦೧೨ ರಂದು ಕೊಂಕಣಿ ಮಾಂಟೋವಿನಲ್ಲಿ ಈ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.  ಕಾರ್ಯಕ್ರಮವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಾಹಿತಿ ಶ್ರೀ ಕೆ.ಗೋಪಾಲಕೃಷ್ಣ ಪೈ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಇವರು ವಹಿಸಿದ್ದರು. ಸೆಂಟ್ರಲ್ ಎಕ್ಸೈಸ್ ಮತ್ತು ಕಸ್ಟಮ್ಸ್ ಇದರ ಅಧಿಕಾರಿಯಾಗಿರುವ ಶ್ರೀ ಸ್ಟೀವನ್ ಎಂ.ಪಿ.ಡಯಾಸ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡಾಪಟುಗಳಾದ ಶ್ರೀಸದಾನಂದ ಪ್ರಭು, ಶ್ರೀ ರೇಮಂಡ್ ಡಿಸೊಜ, ಶ್ರೀ ಕೃಷ್ಣಮೂರ್ತಿರಾವ, ಶ್ರೀಮತಿ ವಂದನ ಶಾನುಭಾಗ, ಶ್ರೀಮತಿ ಗೀತಾ ಬಾಯಿ ಇವರನ್ನು ಗೌರವಿಸಲಾಯಿತು. ಹಾಗೂ ಶ್ರೀ ಆಲ್ವಿನ್ ಪೌಲ್ ಇವರಿಂದ ಅಂಗ ಸೌಷ್ಟವ ಪ್ರದರ್ಶನವನ್ನು ಏರ್ಪಡಿಸಲಾಯಿತು.

61. ರಂಗ ಸಂಭ್ರಮ ಕೊಂಕಣಿ ನಾಟಕೋತ್ಸವ ಮತ್ತು ರಂಗ ಮಂಥನ
ದಿನಾಂಕ ೧೫-೧೨-೨೦೧೨ ಮತ್ತು ೧೬-೧೨-೨೦೧೨ ರಂದು ಪುತ್ತೂರಿನ ಪುರಭವನದಲ್ಲಿ ಎರಡು ದಿನದ ಕಾರ್ಯಕ್ರಮವನ್ನು  ಸಾಂಸ್ಕೃತಿಕ ಕಲಾ ಕೇಂದ್ರ ಪುತ್ತೂರು ಇವರ ಸಹಯೋಗದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಮಾನ್ಯ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ ಇವರು ಉದ್ಟಾಟಿಸಿದರು.  ಅಕಾಡೆಮಿ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿವಿಜೇತ ಸಾಹಿತಿ ಶ್ರೀ ಕೆ. ಗೋಪಾಲಕೃಷ್ಣ ಪೈ ಇವರು ಮುಖ್ಯ ಅತಿಥಿಗಳಾಗಿದ್ದರು.

ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನದ ಆಡಳಿತ ಮುಕ್ತೇಸರಾದ ಶ್ರೀ ಎಮ್. ಅನಂತ್ ಶೆಣೈ, ತಾಲುಕು ಪಂಚಾಯತಿನ ಮಾಜಿ ಉಪ ಅಧ್ಯಕ್ಷರಾದ ಶ್ರೀ ರಾಧಕೃಷ್ಣ ಬೋರ್ಕರ್, ಪುತ್ತೂರು ರೋಟರಿ ಸಿಟಿಯ ಮಾಜಿ ಅಧ್ಯಕ್ಷರಾದ ಶ್ರೀ ಜೋನ್ ಕುಟಿನ್ಹಾ,  ಕೆಇಬಿಯ ನಿವೃತ್ತ ಇಂಜಿನೀಯರ್ ಶ್ರೀ ಶಿವಾನಂದ ಶೇಟ್ ಇವರು ಮುಖ್ಯ ಅತಿಥಿಗಳಾಗಿದ್ದರು, ಈ ಸಂದರ್ಭದಲ್ಲಿ ಶ್ರೀ ರತ್ನಾಕರ ರಾವ, ಶ್ರೀ ಲಾರೆನ್ಸ್ ಮಸ್ಕರೇನಸ್, ಶ್ರೀ ಮಂಗೇಶ್ ಭಟ್ ಇವರನ್ನು ಸನ್ಮಾನಿಸಲಾಯಿತು. ದೆನೇಶ್ ಪ್ರಭು ರಚಿಸಿದ ಶಿವಾನಂದ ಪ್ರಭು ನಿರ್ದೇಶನದಲ್ಲಿ ಆಮ್ಮಿ ಸೋಣಾಂತಿ ಕೊಂಕಣಿ ನಾಟಕ ಪ್ರದರ್ಶನ ಪ್ರಸುತ ಪಡಿಸಲಾಯಿತು. ದಿನಾಂಕ ೧೬-೧೨-೨೦೧೨ ರ ರಂಗ ಮಂಥನ ಕಾರ್ಯಕ್ರಮವನ್ನು  ಶ್ರೀ ಕಾಸರಗೋಡು ಚಿನ್ನಾ ಇವರು ಉದ್ಘಾಟಿಸಿದರು. ಕೃಷ್ಣ ಪ್ರಸಾದ ಸಡ್ಸಾಅರ್ ಪವಿತ್ರ ರೂಪೇಶ್ ಶೇಟ್ ಕುಂಟಿಕಾ ಶಾಂತಾರಾಮ ಶೆಣೈ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೊಂಕಣಿ ರಂಗ ಭೂಮಿ ಅಂದು ಇಂದು ಮುಂದು ಈ ವಿಷಯವಾಗಿ ಡಾ.ಜಯವಂತ ನಾಯಕ್  ಪ್ರಬಂದ ಮಂಡನೆ ಮಾಡಿದರು. ಈ ರಂಗಮಂಥನದಲ್ಲಿ ಸುಮಾರು ೩೦ ಜನರು ಭಾಗವಹಿಸಿದ್ದರು.  ದಿನಾಂಕ ೧೬-೧೨-೨೦೧೨ ರಂದು ಜರಗಿದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಶಶಿಪ್ರಭಾ ಸಂಪ್ಕ, ಅಧ್ಯಕ್ಷರು ತಾಲುಕು ಪಂಚಾಯತ್ ಇವರು ವಹಿಸಿದ್ದರು ಅತೀ ವಂದನೀಯ ಫಾ. ಜೆರಾಲ್ಡ್ ಡಿ’ಸೋಜಾ ಶ್ರೀ ದಯಾನಂದ ನಾಯಕ್, ಶ್ರೀ ರಾಮಚಂದ್ರ ಪ್ರಭು ಇವರು ಮುಖ್ಯ ಅತಿಥಿಗಳಾಗಿದ್ದರು, ಕಾರ್ಯಕ್ರಮದ ನಂತರ ಮಂಗಳೂರಿನ ದೇರೆಬೈಲ್ ಚೆ ಕಲಾಕಾರ್ ಇವರ ಫೆಲಿಕ್ಶ್ ಸಲ್ಡನ್ಹಾ ಇವರ ನಿರ್ದೇಶನದ “ಕಲಾಕಾರ್” ಮತ್ತು  ಶ್ರೀಮತಿ ಪೂರ್ಣಿಮ ಮಲ್ಯ ರಚಿಸಿದ ಶ್ರೀಮತಿ ವತ್ಸಲ ನಾಯಕ್ ನಿರ್ದೇಶನದ “ಆವ್ಸೂಲೆ ಮೋಗು” ಕೊಂಕಣಿ ನಾಟಕಗಳು ಪ್ರದರ್ಶಿಸಲ್ಪಟ್ಟವು.

62. ಕಾರ್ಯಕ್ರಮ ಪ್ರಾಯೋಜನೆ:
ಸಂಘ ಸಂಸ್ಥೆಗಳ ಸಹಕಾರದಲ್ಲಿ ಮತ್ತು ಅವರಿಗೆ ನೀಡುವ ಪ್ರಾಯೋಜಕತೆ ಕಾರ್ಯಕ್ರಮದಲ್ಲಿ ಒಟ್ಟು ೮ ಸಂಸ್ಥೆಗಳಿಗೆ  ಪ್ರಾಯೋಕತೆ ನೀಡಿ ಸಹಕರಿಸಲಾಗಿದೆ.
೧.    ಕುಡ್ತೆರಿ ಶ್ರೀ ಮಹಾಮಯಾ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
೨.    ಕೊಂಕಣಿ ಮಾನ್ಯತಾ ದಿನಾಚರಣೆ ಪ್ರಯುಕ್ತ ೧. ಕೊಂಕಣಿ ಸಾಂಸ್ಕೃತಿಕ ಸಂಘ ಮಂಗಳೂರು
                                   ೨.ಕೊಂಕಣಿ ಭಾಷಾ ಮಂಡಳ ಮಂಗಳೂರು
                                   ೩.ಕೊಂಕಣಿ ಪರಿಷತ್ತು ಕುಮಟಾ
                                   ೪. ಕೊಂಕಣಿ ಜಾಗೃತಿಕ ಸಂಘಟನಾ ಮಂಗಳೂರು
   ೩. ಶ್ರೀಶ್ರೀಶ್ರೀ ಕೇಶವನಂದ ಭಾರತೀ ಸ್ವಾಮೀಜಿ ಚಾತುರ್ಮಾಸ ವೃತಾಚರಣೆ ಕುಮಟಾ
   ೪. ವೀರ ವಿಠಲ ದೇವಸ್ಥಾನ - ನಾಟಕ ಪ್ರಾಯೋಜಕತೆ – ಉದ್ಯಾವರ
   ೫. ಮಿಲನ ಚಾರಿಟೇಬಲ್ ಟ್ರಸ್ಟ್ ಮಂಗಳೂರು ವೊವಿಯೊ ವೆರ್ಸ್ ಕಾರ್ಯಕ್ರಮ
   ೬. ಜ್ಯೂನಿಯರ್ ಛೆಂಬಾರ್ ಅಫ್ ಇಂಟರ್ ನ್ಯಾಶನಲ್ ಕಾರ್ಕಳ ಸಾಂಸ್ಕೃತಿಕ ಕಾರ್ಯಕ್ರಮ

63. ಮಧುರ ಕೊಂಕಣಿ -4
ದಿನಾಂಕ ೨೨-೧೨-೨೦೧೨ ಸಂಜೆ ೫.೦೦ ಗಂಟೆಗೆ ಜನಪ್ರಿಯಾ ಮಂಡಳಿ ತೆಕ್ಕಟ್ಟೆ ಸಂತೋಷ ನಾಯಕ್ ಇವರ ನೇತೃತ್ವದಲ್ಲಿ ನಡೆಸಲಾಯಿತು.

64. ಘರ್ ಘರ್ ಕೊಂಕಣಿ -19
ದಿನಾಂಕ ೨೩-೧೨-೨೦೧೨ ರಂದು  ಬೆಳಿಗ್ಗೆ ೧೦.೩೦ ಗಂಟೆಗೆ ಪಾಂಡುರಂಗ ಮಡಿವಾಳ ಇವರ ಮನೆಯಲ್ಲಿ ನಡೆಸಲಾಯಿತು.

65. ಘರ ಘರ್ ಕೊಂಕಣಿ -20
ದಿನಾಂಕ ೨೩-೧೨-೨೦೧೨ ರಂದು ಮಧ್ಯಾಹ್ನ ೩.೦೦ ಗಂಟೆಗೆ ರಘುರಾಮ ಕುಲಾಲ್ ಆಲೂರು ಇವರ ಮನೆಯಲ್ಲಿ ನಡೆಸಲಾಯಿತು.

66.ಕೊಂಕಣಿ ಐಕ್ಯತಾ ಮತ್ತು ವೆಬಸೈಟ್ ಲೋಕಾರ್ಪಣೆ, ಮಣ:

ದಿನಾಂಕ 19-12-2012 ರಂದು ಆರ್.ಎಸ್.ಬಿ ಸಭಾಬವನ ಮಣಿಪಾಲ ಇಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ಐಕ್ಯತಾ ಮತ್ತು ವೆಬಸೈಟ್ ಲೋಕಾರ್ಪಣೆ ಕಾರ್ಯಕ್ರಮವನ್ನು ಸಂಜೆ 5.00 ಗಂಟೆಗೆ ನಡೆಸಲಾಯಿತು. ಖ್ಯಾತ ಹಿರಿಯ ಪತ್ರಕರ್ತರಾದ ಶ್ರೀ ಎಮ್.ವಿ.ಕಾಮತ್ ಇವರು ವೆಬಸೈಟ್ ಉದ್ಗಾಟನೆಯನ್ನು ನಡೆಸಿದರು.ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಸರಗೋಡು ಚಿನ್ನಾ ರವರು ಕರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು ತರಂಗದ ಸಂಪಾದಕರಾದ ಶ್ರೀಮತಿ ಸಂಧ್ಯಾ ಪೈ ರವರು ಕೊಂಕಣಿ ಐಕ್ಯತಾ ನುಡಿಗಳನ್ನಾಡಿದರು. ಕರ್ಯಕ್ರಮಕ್ಕೆ ಉಡುಪಿಯ ಶಾಸಕರಾದ (ವಿದಾನ ಸಭೆ)ಶ್ರೀ ರಘುಪತಿ ಭಟ ರವರು ಹಾಗೂ ಶೋಕ ಮಾತಾ ಚರ್ಚನ ಉಡುಪಿಯ ಧರ್ಮಗುರುಗಳಾದ ರೆ| ಫಾ| ಫ್ರೆಡ್ ಮಸ್ಕರೇನ್ಹಸ್ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಉಪೆಂದ್ರ ನಾಯಕ್ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸದರು. ಕರ್ಯಕ್ರಮದಲ್ಲಿ ಶ್ರೀ ಎಮ್.ಬಿ.ಕಾಮತ್ ಹಾಗೂ ಶ್ರೀಮತಿ ಸಂಧ್ಯಾ ಪೈ ಮತ್ತು ಶ್ರಿವಾಲ್ಟರ್ ಸಿರಿಲ್ ಪಿಂಟೊ ಅವರಿಗೆ ಕೊಂಕಣಿ ನಕ್ಷತ್ರ ಬಿರುದು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ 23 ಕೊಂಕಣಿ ಜನಾಂಗದ ಮುಖಂಡರು ಕ್Éಂಕಣಿ ಐಕ್ಯತಾ ಭಾಗವಹಿಸಿದರು. ನಂತರ ಶ್ರೀಮತಿ ಆಶಾ ನಯಕ್ ಇವರಿಂದ ಕೊಂಕಣಿ ಗೀತ ಗಾಯನ ಮತ್ತು ವಿವಿಧ ಕೊಂಕಣಿ ಸಮುದಾಯದವರಿಂದ ಕೊಂಕಣಿ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.       

 


67.ಗಂಗೊಳ್ಳಿಯಲ್ಲಿ “ಘರ್ ಘರ್ ಕೊಂಕಣಿ” ಕಾರ್ಯಕ್ರಮ -21:

22-12-2012 ಕೊಂಕಣಿ ಮಾತೃ ಭಾಷಿಗರಲ್ಲಿ ತಾಯಿನುಡಿ ಹಾಗೂ ಕೊಂಕಣಿ ಸಂಸ್ಕøತಿಯ ಬಗ್ಗೆ ಜಾಗೃತಿ ಮೂಡಿಸಿ ಅಭಿಮಾನ ಉಕ್ಕಿಸುವ ಉದ್ದೇಶದಿಂದ ಅಯೋಜಿಸಲ್ಪಟ್ಟ ಸರಳ ಸುಂದರ ಕಾರ್ಯಕ್ರಮ “ಘರ್ ಘರ್ ಕೊಂಕಣಿ”, ಕೊಂಕಣಿ ಸಾಹಿತಿ,

ರಂಗಕರ್ಮಿ,ಕಿರುಚಿತ್ರ ನಿರ್ಮಾಪಕ ನಿರ್ದೇಶಕ ವಿನೋದ್ ಗಂಗೊಳ್ಳಿ ಇವರ ಮನೆಯಲ್ಲಿ ಸರಳ ಸಡಗರದೊಂದಿಗೆ ಜರುಗಿತು.

ಈ ಕಾರ್ಯಕ್ರಮವು ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಂಗಳೂರು ಇವರಿಂದ ಪ್ರಾಯೋಜಿಸಲ್ಪಟ್ಟಿದ್ದು ಈ ಸಮಾರಂಭದ

ಅಧ್ಯಕ್ಷತೆಯನ್ನು ಸ್ಥಳೀಯ ಇಗರ್ಜಿಯ ಧರ್ಮಗುರು ವಂ. ಎ. ಡಿ’ಲೀಮಾರವರು ವಹಿಸಿದ್ದರು. ಕರ್ನಾಟಕ ಸಾಹಿತ್ಯ

ಅಕಾಡೆಮಿಯ ಅಧ್ಯಕ್ಷರಾದ ಖ್ಯಾತ ಕಲಾವಿದ ಕಾಸರಗೋಡು ಚಿನ್ನಾ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದಾಟಿಸಿದರು.

ಸಾಹಿತ್ಯ ಅಕಾಡೆಮಿಯ ಇನ್ನೋರ್ವ ಸದಸ್ಯ ಖ್ಯಾತ ಜಾದೂಗಾರ ಓಂ ಗಣೇಶ್, ಕೊಂಕಣಿ ಕಲಾವಿದೆ ಶ್ರೀಮತಿ ಆಶಾ

ನಾಯಕ್ ಹಾಗೂ ಸ್ಥಳೀಯ ಕೊಂಕಣಿ ಕಾರ್ಯಕರ್ತ ಜಿ. ಗಣಪತಿ ಶಿಪಾಯ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಚಿನ್ನಾರವರು “ಕೊಂಕಣಿ ¨sಂμಇಂiಂಂ ಹೊಂಬೆಳಕು ಮನ-ಮನೆಗಳಲ್ಲಿ ಬೆಳಗಲಿ

ಹಾಗೂ ಜಾತಿ, ಧರ್ಮ, ಸಂಸ್ಕøತಿ, ಭೌಗೋಳಿಕ ಮೇರೆಗಳನ್ನು ದಾಟಿ ಕೊಂಕಣಿ ಸುವಾಸನೆ ಎಲ್ಲೆಲ್ಲೂ ಹರಡಿ ನಾವೆಲ್ಲಾ ಒಂದೇ

ತಾಯಿಯ ಮಕ್ಕಳು ಎಂಬ ಐಕ್ಯತಾ ಭಾವ ಮೂಡಲಿ” ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಓಂ ಗಣೇಶ್, “ಆಧುನಿಕ ಯುಗದಲ್ಲಿ ಪಾಶ್ಚ್ಯಾತೀಕರಣದ ಧಾವಂತದಲ್ಲಿ ನಾವು ನಮ್ಮ

ಸಂಸ್ಕøತಿ, ಮಾತೃ¨sಂμಇ ಹಾಗೂ ನಮ್ಮತನವನ್ನು ಕಳೆದು ಕೊಳ್ಳುವ ದುರಂತದ ಅಂಚಿನಲ್ಲಿದ್ದೇವೆ. ಇನ್ನು ಮುಂದಾದರೂ

ಜಾಗೃತರಾಗಿ ನಮ್ಮ ಮನೆಗಳಲ್ಲಿ ಕೊಂಕಣಿಯನ್ನು ಜೀವಂತವಾಗಿಸುವ ಮೂಲಕ ನಮ್ಮ ಅಮೂಲ್ಯ ಪರಂಪರೆ ಹಾಗೂ

ಕೊಂಕಣಿ ನಿಧಿಯನ್ನು ಮುಂದಿನ ಜನಾಂಗಕ್ಕೆ ಕಾಯ್ದಿಡಬೇಕಾಗಿರುವುದು ಇಂದಿನ ಆದ್ಯ ಕರ್ತವ್ಯ” ಎಂದು ಸಂದೇಶ

ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಂ. ಎ. ಡಿ’ಲೀಮಾರವರು ಕಲಾವಿದ ಹಾಗೂ ಕೊಂಕಣಿ ಕಾರ್ಯಕರ್ತರ ಮನೆಗಳಲ್ಲಿ

ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿರುವ ಕೊಂಕಣಿ ಆಕಾಡೆಮಿಯ ಯೋಜನೆಯನ್ನು ಶ್ಲಾಘಿಸಿದರು. ಈ ಪ್ರಕಾರದ ಅನನ್ಯ

ಕಾರ್ಯಕ್ರಮವು ಎಲೆಮರೆಯ ಕಾಯಿಯಂತೆ ¨sಂμಂ ಸೇವೆ ಮಾಡುತ್ತಿರುವ ನಿಸ್ವಾರ್ಥಿ ಕಲಾವಿದ, ಲೇಖಕ ಹಾಗೂ

ಕಾರ್ಯಕರ್ತರನ್ನು ಗುರುತಿಸಿ ಅವರ ಸೇವೆಯನ್ನು ಗುರುತಿಸುವಲ್ಲಿ ಹಾಗೂ ಅವರಿಗೆ ಮಾನ್ಯತೆ ನೀಡುವಲ್ಲಿ ಪ್ರಮುಖ

ಸಾಧನವಾಗಿದ್ದು. ಇನ್ನೂ ಇಂತಹ ಕಾರ್ಯಕ್ರಮಗಳು ಮೂಡಿಬಂದು ಕೊಂಕಣಿ ಸಾಹಿತ್ಯ ಕಲಾ ಪ್ರಕಾರವು ವಿಶ್ವದಲ್ಲಿ ಪ್ರಕಾಶಿಸಲಿ

ಎಂದು ಆಶೀರ್ವಚಿಸಿದರು.

ಕೊಂಕಣಿ ಕಾರ್ಯಕರ್ತ ಜಿ. ಗಣಪತಿ ಶಿಪಾಯ್ ಇವರು ವಂದನಾರ್ಪಣೆ ಗೈದರು. ವಿನೋದ್ ಗಂಗೊಳ್ಳಿ ಎಲ್ಲರನ್ನೂ ಸ್ವಾಗಸಿ

ಕಾರ್ಯಕ್ರಮವನ್ನು ನಿರೂಪಿಸಿದರು.

 

 

68.ಘರ್ ಘರ್ ಕೊಂಕಣ-22 :

23-12-2012 ಗಂಗೋಳ್ಳಿಯ ಶ್ರೀ.ಜಿ. ಪಾಂಡುರಂಗ ಮಡಿವಾಳ್ ರವರ ಮನೆಯಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮವನ್ನು ಆಚರಿಸಲಾಯಿತು.

 

 

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]