Print

ಅಕಾಡೆಮಿಯಿಂದ ಪ್ರಾಯೋಜಿತ ಕಾರ್ಯಕ್ರಮಗಳು

1. ಘರ್ ಘರ್ ಕೊಂಕಣ - 23 :

12-1-2013 ರಂದು ಸಂಜೀವ ಪಾಟೀಲ್ ರವರ ಮನೆಯಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕೊಂಕಣಿ ಭಾಷೆಯ ಕವಿತಾ ವಾಚನೆ, ಮಿಮಿಕ್ರಿ, ಭಾಷಣ, ಕಥೆ, ಮೊದಲಾದ ಕಾರ್ಯಕ್ರಮವನ್ನು ನಡೆಸಲಾಯಿತು.


2. ಘರ್ ಘರ್ ಕೊಂಕಣಿ - 24 :

12-1-2013 ರಂದು ಶಿವಾನಂದ ಭಟ್ ರವರ ಮನೆಯಲ್ಲಿ  ಘರ್ ಘರ್ ಕೊಂಕಣಿ ಕಾರ್ಯಕ್ರಮವನ್ನು ಆಚರಿಸಲಾಯಿತು.


3. ಘರ್ ಘರ್ ಕೊಂಕಣ - 25 :

13-1-2013 ರಂದು ಕಟಪಾಡಿಯ ನಾಗೇಶ್ ಕಾಮತ್ ರವರ ಮನೆಯಲ್ಲಿ "ಘರ್ ಘರ್ ಕೊಂಕಣಿ" ಕಾರ್ಯಕ್ರಮವನ್ನು ಆಚರಿಸಲಾಯಿತು.


4. ಘರ್ ಘರ್ ಕೊಂಕಣ - 26 :

13-1-2013 ರಂದು ಬಿ.ಸಿ ರೋಡ್‍ನ ಕೆ. ಆರ್. ಪಾಟ್ಕರ್ ಬಂಟಕಲ್ ರವರ ಮನೆಯಲ್ಲಿ "ಘರ್ ಘರ್ ಕೊಂಕಣಿ" ಕಾರ್ಯಕ್ರಮವನ್ನು ಆಚರಿಸಲಾಯಿತು. ರಾಜಾಪುರ್,ಕೆಥೋಲಿಕ್, ಗೌಡಸಾರಸ್ಚತ ಸಮಾಜ ದವರಿಂದ ಅವರವರ ಭಾಷೆಯಲ್ಲಿ ಕೊಂಕಣಿ ಹಾಸ್ಯ, ಗಾದೆ, ಸಣ್ಣಕಥೆ ಗಳನ್ನು  ಮಾಡಲಾಯಿತು.


5. ಘರ್ ಘರ್ ಕೊಂಕಣಿ - 27 :

19-1-2013 ರಂದು ಮೂಡಬಿದ್ರೆಯ ಎವ್ಜಿನ್ ಪಿಂಟೊರವರ ಮನೆಯಲ್ಲಿ "ಘರ್ ಘರ್ ಕೊಂಕಣಿ" ಕಾರ್ಯಕ್ರಮವನ್ನು ಆಚರಿಸಲಾಯಿತು.


6. ಘರ್ ಘರ್ ಕೊಂಕಣ - 28 :

19-1-2013 ರಂದು ಶ್ರೀಮತಿ ಎವ್ಲಿನ್ ಕೊರ್ಡೆರೊ ಮಾಸ್ತಿಕಟ್ಟೆ, ಮೂಡಬಿದ್ರೆ ಇವರ ಮನೆಯಲ್ಲಿ "ಘರ್ ಘರ್ ಕೊಂಕಣಿ" ಕಾರ್ಯಕ್ರಮವನ್ನು ಆಚರಿಸಲಾಯಿತು.


7. ರಂಗ ವೈಭವ :

19-1-2013 ಮಲ್ಲೇಶ್ವರಂನ ಕಾಶೀಮಠದಲ್ಲಿ ರಂಗವೈಭವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಪಿ ದಯಾನಂದ ಪೈ ರವರು ನಡೆಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಯುಕ್ತರಾದ ಶ್ರೀ ಕೆ.ಆರ್ ರಾಮಕೃಷ್ಣ ಮತ್ತು ಜಿ.ಎಸ್.ಬಿ. ಸೇವಕ ಸಮಾಜದ ಅಧ್ಯಕ್ಷರಾದ ಶ್ರೀ ವಸಂತ ಮಾಧವ ಪೈ ಮತ್ತು ಪ್ರಸಿದ್ಧ ಕೊಂಕಣಿ ರಂಗಕಲಾಕಾರರಾದ ಶ್ರೀಮತಿ ಲಲಿತಾ ಮುಲ್ಲರ್ ಪಟ್ಟನ್ ಮತ್ತು ಶ್ರೀ ಜೇಕೊಬ್ ಕ್ರಾಸ್ತಾ ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ಧರು.

ಕಾರ್ಯಕ್ರಮದಲ್ಲಿ ಶ್ರೀ ರಾಮಚಂದ್ರ ಕೋಡಂಗೆ, ಶ್ರೀ ವಾಲ್ಟರ್ ಡಿ’ಸೋಜ, ಶ್ರೀಮತಿ ಗೀತಾ ಆರ್. ನಾಯಕ್ ಮತ್ತು ಶ್ರೀ ಜೋಗಿ ನಾಗರಾಜ್ ಶೇಟ್ ರವರಿಗೆ ಕೊಂಕಣಿ ನಕ್ಷತ್ರ ಎಂದು ಬಿರುದು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ “ಕೆಪ್ಪೊ ಶೀಲಂ” ಮತ್ತು ಕಾೈಳ್ಯಾ ಪೀಲ ಕಾೈಳ್ಯಾಕಚಿ ಚಂದ”ಯೆಂಬ ನಾಟಕ ವನ್ನು ಪ್ರದರ್ಶಿಸಲಾಯಿತು.


8. ಕೊಂಕಣಿ ಬಾಳ್ ಕಲಾಕಾರ್ :

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು ಸಹಯೋಗದಲ್ಲಿ ಸಾಧನಾ ಬಳಗ(ರಿ), ಮಂಗಳೂರು 26-1-2013 ರಂದು ನಲಂದಾ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕೊಂಕಣಿ ಬಾಳ್ ಕಲಾಕಾರ್-2013 ಮಕ್ಕಳ ನಟನಾ ಸ್ಫರ್ಧೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ನಡೆಸಿತು.

26-1-2013 ರಂದು ಮಧ್ಯಾಹ್ನ ನಡೆದ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ನಡೆಸಿಕೊಟ್ಟರು.

 

9. ಕೊಂಕಣೀ ದಿವಸ ಆಚರಣ 2012-2013 :

ದಿನಾಂಕ 27-1-2013 ರಂದು ಗೌಡ ಸಾರಸ್ವತ ಬ್ರಹ್ಮಾಣ ಮಹಿಳಾ ವೃಂದ ಮಂಗಳೂರು ಇವರ ವ್ತಿಯಿಂದ ಕೊಂಕಣಿ ದಿವಸ ಆಚರಣೆ ಗೋಕರ್ಣ ಮಠದ ದ್ವಾರಕಾನಾಥ ಭವನ ಸಭಾಗೃಹದಲ್ಲಿ ನಡೆಯಿತು.ಇದರಲ್ಲಿ ವಿವಿದ ಕೊಂಕಣಿ ಭಾಷಾ ಸಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.

 

10. ಕೊಂಕಣಿ ಭಾರತ್  :

ಮೇಸ್ತಕಲಾ ತಂಡದವರಿಂದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕೊಂಕಣಿ ಭಾರತ್ ಕಾರ್ಯಕ್ರಮವು ದಿನಾಂಕ 2-2-2013 ರಂದು ಶ್ರೀ ದುರ್ಗಾಂಬಿಕಾ ಸಭಾಭವನ ಕರಿಕಟ್ಟೆ ಶಿರೂರಿ ಇಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ವಹಿಸಿದರು. ಕಾರ್ಯಕ್ರಮದಲ್ಲಿ ದಾಲ್ಜಿ ಸಮುದಾಯದವರಿಂದ ದಫ್ ಕುಣಿತ ,ಮೇಸ್ತ ಸಮುದಾಯದವರಿಂದ ಸುಗಮ ಸಂಗೀತ, ಜಿ.ಎಸ್.ಬಿ. ಮತ್ತು ದೈವಜ್ಞ ಬ್ರಾಹ್ಮಣ ಸಮುದಾಯ ದವರಿಂದ ಸುಗಮ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು.

 

11. ಕೊಂಕಣಿ ಭಕ್ತಿ- ಭಾವಗೀತಾ ಗಾಯನ :

ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಾಣ ಸಮಾಜದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ “ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ” ಪ್ರಾಯೋಜಿತ “ಕೊಂಕಣಿ ಭಕ್ತಿ- ಭಾವಗೀತಾ ಸಂಗೀತ  ಕಾರ್ಯಕ್ರಮ ಫೆ 4 ಸೋಮವಾರ ಸಂ. ಗಂ. 6ರಿಂದ 8ರ ತನಕ ವಿಜೃಂಭಣೆಯಿಂದ ಜರುಗಿತು .

ಕಲಾವಿÀದ ಶಾಂತಾರಾಮ ಶೆಣೈ ಮತ್ತು ತಂಡದವರಿಂದ ಜರುಗಿದ ಈ ಕಾರ್ಯಕ್ರಮದಲ್ಲಿ ಈ ಕೆಳಗಿನ ಸಹಕಲಾವಿದರು ಪಾಲ್ಗೊಂಡಿದ್ದರು. ಅಕಾಡೆಮಿಯ ಸದಸ್ಯರಾದ ಮಹೇಶ್ ಆರ್ ನಾಯಕ್ ಮತ್ತು ರಾಜರಾಂ ನಾಯಕ್ , ದೇವಸ್ಥಾನದ ಅನುವಂಶಿಕ ಮೂಕ್ತೇಸರ ಕಂಟೀಕ ಗೋಪಾಲಕೃಷ್ಣ ಶೆಣೈ ಮತ್ತು ದೇವಳ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.

 

12. ಆಮ್ಮಿ ಕೊಂಕಣಿ :

9-2-2013 ರಂದು ನಚಿಕೇತ ಮನೋವಿಕಾಸ ಕೇಂದ್ರದ ಬಳಿ ಮೈದಾನ ವಿಜಯ ನಗರ ಇಲ್ಲಿ ಕೊಂಕಣೀ ಉತ್ಸವ್ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜೋಗುಳ ಹಾಡುಗಳು ,ಕೊಂಕಣಿ ಭರತನಾಟ್ಯ ,ಸಿದ್ಧಿ ಗುಂಮ್ಟೆ ಪದಗಳು, ಕೊಂಕಣಿ ನಾಟಕ,ಕೊಂಕಣಿ ಯಕ್ಷಗಾನ ಕಾರ್ಯಕ್ರಮ ನಡೆಯಿತು. “ಕೊಂಕಣಿ ಭಾಷೆಯ ಬೆಳವಾಣಿಗೆಗÉ ನಮ್ಮ ಕೊಡುಗೆ” ಯೆಂಬ ಸಂವಾದ ಕಾರ್ಯಕ್ರಮ ನಡೆಯಿತು.

 

13. ರಂಗ ವೈಭವ (19-1-2013 ಮತ್ತು 20-1-2013) ಬೆಂಗಳೂರು.

19-1-2013 ಮತ್ತು 20-1-2013 ರಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಶ್ರೀ ಕಾಶೀಮಠದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಗೌಡ ಸಾರಸ್ವತ ಸೇವಕ ಸಮಾಜ(ರಿ) ಮಲ್ಲೇಶ್ವರಂ ಬೆಂಗಳೂರು ಇವರವತಿಯಿಂದ ಎರಡು ದಿನದ ಕೊಂಕಣಿ ನಾಟಕ ಮಹೋತ್ಸವ ನಡೆಯಿತು. 19-1-2013 ರಂದು ಸಂಜೆ 5.30 ಕ್ಕೆ ಉದ್ಯಮಿ ಮತ್ತು ಸಾಮಾಜಿಕ ಧುರೀಣರಾದ ಡಾ.ಪಿ. ದಯಾನಂದ ಪೈ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಯುಕ್ತರಾದ ಶ್ರೀ ಕೆ.ಆರ್ ರಾಮಕೃಷ್ಣ, ಗೌಡಸಾರಸ್ವತ ಸೇವಕ ಸಮಾಜ(ರಿ) ಮಲ್ಲೇಶ್ವರಂ ಇದರ ಅಧ್ಯಕ್ಷರಾರ ಶ್ರೀ ವಸಂತ ಮಾಧವ ಪೈ ,ಪ್ರಸಿದ್ಧ ಕೊಂPಣಿ ರಂಗಕಲಾಕಾರರಾದ ಶ್ರೀಮತಿ ಲಲಿತಾ ಮಲ್ಲರ್ ಪಟ್ಟನ್ ಮತ್ತು ಸಿ.ಎಮ್. ಎನ್ವರ್ ಸಿಸ್ಟಂ ಪ್ರೈ ಲಿ. ಇದರ ಫೌಂಡರ್ ಮತ್ತು ಸಿ.ಇ.ಒ ಆದ ಶ್ರೀ ಜೇಕೊಬ್ ಕ್ರಾಸ್ತಾ. ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ಧರು. ಕಾರ್ಯಕ್ರಮದಲ್ಲಿ ಶ್ರೀ ರಾಮಚಂದ್ರ ಕೋಡಂಗೆ, ಶ್ರೀಮತಿ ಗೀತಾ ಆರ್. ನಾಯಕ್, ಶ್ರೀ ವಾಲ್ಟರ್ ಡಿ’ಸೋಜ ಮತ್ತು ಶ್ರೀ ಜೀಗಿ ನಾಗರಾಜ್ ಶೇಟ್ ಇವರಿಗೆ ಕೊಂಕಣಿ ನಕ್ಷತ್ರ ನೀಡಿ ಗೌರವಿಸಲಾಯಿತು. ನಂತರ ಕೊಂಕಣಿ ಕಥೋಲಿಕ್ ವೆಲ್ಫೇರ್ ಸಂಘ ರಾಜಾಜಿನಗರ ಬೆಂಗಳೂರು ಇವರ ವತಿಯಿಂದ ಶ್ರೀ ಅಲ್ವಿನ್ ಡಿ’ಸೋಜ ಇವರ ರಚನೆಯಲ್ಲಿ ಶ್ರೀ ಹ್ಯಾರಿ ಡಿ’ಸೋಜಾರವರ ನಿರ್ದೇಶನದಲ್ಲಿ “ ಕೆಪ್ಪೊ ಶೀಲಂ’’ ಇವರ ನಾಟಕ ಪ್ರದರ್ಶನಗೊಂಡಿತು.

 


20-1-2013ರಂದು ಬೆಳಗ್ಗೆ 10.30 ರಿಂದ 12.30 ರವರೆಗೆ “ ರಂಗ ಮಂಥನ’’ ಕೊಂಕಣಿ ಭಾಷೆ , ನಾಟಕ ಕಲಾ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು. ಸಂಜೆ 5.30 ಕ್ಕೆ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರ ಅಧ್ಯಕ್ಷತೆಯಲ್ಲಿ “ಸಮಾರೋಪ ಸಮಾರಂಭ ’’ ನಡೆಯಿತು. ಬೆಂಗಳೂರಿನ ಮಲ್ಲೇಶ್ವರಂನ ವಿಧಾನ ಸಭಾ ಶಾಸಕರಾದ ಡಾ. ಸಿ. ಎನ್.ಅಶ್ವಥ್ ನಾರಾಯಣ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಇದರ ವಿಶ್ರಾಂತ ಉಪಕುಲಪತಿಯವರಾದ ಡಾ. ಕೆ. ಸುಧಾ ರಾವ್ , ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ರಾದ ಡಾ.ಬಿ. ದೇವದಾಸ ಪೈ, ಗೌಡ ಸಾರಸ್ವತ ಸಮಾಜ(ರಿ) ಬಸವನಗುಡಿ ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ. ಉಪೇಂದ್ರ ನಾಯಕ್,ಪ್ರಸಿದ್ಧಕೊಂಕಣಿ ಸಂಗೀತ ಕಲಾಕಾರರಾದ ಶ್ರೀ ಪುತ್ತೂರು ನರಸಿಂಹ ನಾಯಕ್, ಪೆಡರೇಶನ್ ಆಫ್ ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ಇದರ ಉಪಾಧ್ಯಕ್ಷರಾದ ಶ್ರೀಮತಿ ಐಡಾ ಮಾರ್ಗರೆಟ್ ಡಿಕುನ್ಹಾ , ಕೆನರಾ ಯುನಿಯನ್ ಆಡಳಿತ ಸಮಿತಿಯ ಸದಸ್ಯರಾದ ಶ್ರೀಮತಿ ಜ್ಯೋತಿ ಹಳದಿಪುರ್‍ಕರ್ ಗೌಡ ಸಾರಸ್ವತ ಮಹಿಳಾ ವೃಂದ ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀಮತಿ ಸಬಿತಾ ಸತೀಶ್ ಪೈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಗಿ ಭಾಗವಹಿಸಿದ್ಧರರು ನಂತರ ರಸಿಕ ಅಟ್ರ್ಸ್ ಸಹಕಾರ ನಗರ ಬೆಂಗಳೂರು ಇವರ ವತಿಯಿಂದ ಶ್ರೀಮತಿ ಗೀತಾ ಆರ್. ನಾಯಕ್ ಇವರ ರಚನೆಯಲ್ಲಿ ಶ್ರೀ ರೋಹಿದಾಸ್ ನಾಯಕ್ ಇವರ ನಿರ್ದೇಶನದಲ್ಲಿ “ ಕಾೈಳ್ಯಾ ಪೀಲ ಕಾೈಳ್ಯಾಕಚಿ ಚಂದ” ಎನ್ನುವ ಕಾರ್ಯಕ್ರಮ ನಡೆಯಿತು.

 

 

 


 ಶ್ರೀ ವೆಂಕಟರಮಣ ಸೇವಾ ಸಮಿತಿ(ರಿ) ,ನಾಯ್ಕನಕಟ್ಟೆ , ಕೆರ್ಗಾಲ್

ಶ್ರೀ ವೆಂಕಟರಮಣ ಸೇವಾ ಸಮಿತಿ(ರಿ) ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ,ಮಂಗಳೂರು ಸಹಯೋಗದಲ್ಲಿ  10-02-2013 ರಂದು  ಕುಂದಾಪುರ ತಾಲೂಕಿನ ನಾಯ್ಕನಕಟ್ಟೆ ಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೇವಾ ಸಮಿತಿಯ ಸದಸ್ಯರಿಂದ “ಗೊಂದ್ಲಾ ಸಂಸಾರು” ಎನ್ನುವ ಕೊಂಕಣಿ ಸಾಮಾಜಿಕ ನಾಟಕ ನಡೆಯಿತು. ಈ ಕಾರ್ಯಕ್ರಮದ ಪ್ರಯಾಜಕತ್ವವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು, ವಹಿಸಿಕೊಂಡಿತ್ತು.

 ಕೊಂಕ್ಣಿ ಪ್ರಚಾರ್ ಸಂಚಲನ್ (ರಿ), ಶಕ್ತಿನಗರ, ಮಂಗಳೂರು.

ಕೊಂಕ್ಣಿ ಪ್ರಚಾರ ಸಂಚಲನ್ (ರಿ) ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಜಂಟಿಯಾಗಿ ಕೊಂಕಣಿ ಜಾಗ್ರತಿ ಸಭಿಯಾನವನ್ನು ಆಯೋಜಿಸಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾರ್ವಜನಿಕ ಸ್ಥಳಗಳು ಮತ್ತು ಜನಸೇರುವ 40 ಸ್ಥಳಗಳಲ್ಲಿ ‘ಕೊಂಕ್ಣಿ ಆಮ್ಚೊ ಫುಡಾರ್ (ಕೊಂಕಣಿ ನಮ್ಮ ಭವಿಷ್ಯ) ಎಂಬ ಅರ್ಧ ಗಂಟೆಯ ಬೀದಿನಾಟಕವನ್ನು ಪ್ರಸ್ತುತ ಪಡಿಸಿ, ಕರಪತ್ರ ಹಂಚಲಾಯಿತು. ಬೀದಿ ನಾಟಕ ಪ್ರದರ್ಶನದ ಉದ್ಘಟನೆಯು 15-02-2013 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ‘ಮಾಂಟೋವಿನಲ್ಲಿ ನಡೆಯಿತು. ನಾಟಕ ಪ್ರದರ್ಶದ ಉದ್ಘಾಟನೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ನಡೆಸಿದರು. ನಾಟಕ ಪ್ರದರ್ಶನವು 17-03-2013ರ ವರೆಗೆ ನಡೆಯಿತು.

 ಕರ್ನಾಟಕ ಕ್ರಿಶ್ಚನ್ ಎಜ್ಯುಕೇಷನ್ ಸೊಸೈಟಿ, ಬಲ್ಮಠ, ಮಂಗಳೂರು.

ಕರ್ನಾಟಕ ಕ್ರಿಶ್ಚನ್ ಎಜ್ಯುಕೇಷನ್ ಸೊಸೈಟಿ,ಮಂಗಳೂರು ಇವರು ನಡೆಸಿದ ಶಾಂತಿಗಾಗಿ ಕಲೋತ್ಸವ ಹಾಗೂ ಆಹಾರೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 17-02-2013 ರಂದು ಸಂಜೆ 5.30 ಗಂಟೆಗೆ 20 ನಿಮಿಷಗಳ ಶ್ರೀಮತಿ ಶ್ರೀಲತ ಪ್ರಬು ಮತ್ತು ಬಳಗ ಇವರಿಂದ ಕೊಂಕಣಿ ಭಾವಗೀತೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

 ಸುಮನಸಾ ಕೊಡವೂರು-ಉಡುಪಿ(ರಿ)

ಸುಮನಸಾ ಸೇವಾ ಸಂಸ್ಥೆ ಕೊಡವೂರು-ಉಡುಪಿ ಇವರು 3 ದಿನಗಳಕಾಲ ನಡೆಸಿದ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 27-02-2013 ರಂದು ನಡೆದ ‘ತುಳ್ಯಿ’ ಕಾರ್ಯಕ್ರಮಕ್ಕೆ  ಪ್ರಯೋಜಕತ್ವವನ್ನು ನೀಡಿದೆ.

 ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘ(ರಿ) ಕುಮಟಾ.

ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘ(ರಿ) ಕುಮಟಾ ಇವರು ನಡೆಸಿದ ಕಾರ್ಯಕ್ರಮಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವವನ್ನು ನೀಡಿತು ಕಾರ್ಯಕ್ರಮವು 3-3-2013 ರಂದು ನಡೆಯಿತು.

 ಜಿ.ಎಸ್.ಬಿ. ಪರಿವಾರ ಉತ್ತರ ಹಳ್ಳಿ, ಬೆಂಗಳೂರು.

10-3-2013 ರಂದು ಜಿ.ಎಸ್.ಬಿ. ಪರಿವಾರು ಉತ್ತರಹಳ್ಳಿ ಇವರು ನಡೆಸಿದ ಮಧುರ ಕೊಂಕಣಿ ಕಾರ್ಯಕ್ರಮಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವವನ್ನು ನೀಡಿತು.

 ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ

ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇವರು ದಿನಾಂಕ 24-3-2013 ರಂದು ರಾಷ್ಟ್ರೀಯ ರಂಗ ಹಬ್ಬ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ತುಳು ರಂಗಭೂಮಿಗೆ ಕೊಂಕಣಿಗರ ಕೊಡುಗೆ ಎಂಬ ವಿಷಯದ ಮೇಲೆ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರಯೋಜಕತ್ವವನ್ನು ನೀಡಿದೆ.


1.    “ಕೊಂಕಣಿ ಅಭಿಮಾನ್”  22-2-2013 ಕೊಂಕಣಿ ಮಾಂಟೋವು, ಮಂಗಳೂರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಂಟೋವಿನಲ್ಲಿ 22-2-2013 ರಂದು ಸಂಜೆ 4.15ಕ್ಕೆ “ಕೊಂಕಣಿ ಅಭಿಮಾನ್” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ| ಬಿ.ಎಮ್. ಹೆಗ್ಡೆ ಯವರು ವಹಿಸಿದ್ಧರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧರು. ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್  ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿ ಶ್ರೀ ಪಾದಂಗಳ ಶ್ರೀ ಎಡನೀರು ಮಠ ಇವರಿಂದ ಕೊಂಕಣಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

 

 

 

2.   ಕೊಂಕಣಿ ಜ್ಞಾನ- ವಿಜ್ಞಾನ 1-3-2013 ಕೆನರಾ ಪ್ರೌಢಶಾಲೆ ಡೊಂಗರಕೇರಿ ಮಂಗಳೂರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೆನರಾ ಪ್ರೌಢಶಾಲೆ, ಡೊಂಗರಕೇರಿ, ಮಂಗಳೂರು ಇಲ್ಲಿ ಮಧ್ಯಾಹ್ನ 3.30 ಕ್ಕೆ “ಕೊಂಕಣಿ ಜ್ಞಾನ –ವಿಜ್ಞಾನ ಕಾರ್ಯಕ್ರಮವು ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ಕಾರ್ಯಕ್ರಮದ ಉದ್ಘಾಟಕರಾಗಿದ್ಧರು. ಲೆಕ್ಕ ಪರಿಶೋಧಕರು ಮತ್ತು ಕೆನರಾ ಹೆಣ್ಣುಮಕ್ಕಳ ಪ್ರೌಢಶಾಲೆಯ ವ್ಯವಸ್ಥಾಪಕರಾದ ಶ್ರೀ ಎಮ್. ವಾಮನ ಕಾಮತ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧರು. ಎಸ್.ಡಿ.ಎಮ್. ಸ್ನಾತಕೋತ್ತರ ಕೇಂದ್ರದ ಪ್ರೋಫೆಸರರಾದ ಡಾ. ಸೀಮಾ ಶೆಣೈ  ಮತ್ತು ಹಿರಿಯ ಕೊಂಕಣಿ ಸಾಹಿತಿಗಳಾದ ಶ್ರೀ ಪಾವ್ಲ್ ಮೊರಾಸ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ಧರು.  ಕಾರ್ಯಕ್ರಮದಲ್ಲಿ “ವಿಜ್ಞಾನ ಮತ್ತು ನಾವು’’ ಎನ್ನುವ ವಿಷಯದ ಬಗ್ಗೆ ಮಂಗಳೂರಿನ ಹೆಸರಾಂತ ಯರೋಲಾಜಿಸ್ಟ್‍ರಾದ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಇವರು ವಿಶೇಷ ಉಪನ್ಯಾಸ ನೀಡಿದರು.

 


3.   ಕೊಂಕಣಿ ಆಹಾರಾರೋಗ್ಯ 20-3-2013 ಕೊಂಕಣಿ ಮಾಂಟೋವು

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ 20-3-2013 ರಂದು ಅಕಾಡೆಮಿಯ ಮಾಂಟೋವಿನಲ್ಲಿ ಮಧ್ಯಾಹ್ನ 3.30 ಕ್ಕೆ ಕೊಂಕಣಿಆಹಾರಾರೋಗ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಫಿಲೋಮಿನಾ ಲೋಬೊ ಇವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ವಹಿಸಿದ್ದರು.  ನಂತರ ವಿಚಾರ ಮಂಡನ ಕಾರ್ಯಕ್ರಮ ನಡೆಯಿತು. ಕೊಂಕಣಿ ಆಹಾರದಲ್ಲಿ ಪೌಷ್ಟಿಕಾಂಶ ಮತ್ತು ಆರೋಗ್ಯ ಪ್ರಜ್ಞೆ ಎನ್ನುವ ವಿಷಯದ ಬಗ್ಗೆ ಡಾ. ರೂಪಾ ಪೈ ವಿಚಾರ ಮಂಡಿಸಿದರು. ಶ್ರೀಮತಿ ಐರಿನ್ ರೆಬೆಲ್ಲೊ ಇವರು ಕೊಂಕಣಿ ಆಹಾರ ಮತ್ತು ಆರೋಗ್ಯವಂತ ಕುಟುಂಬ ಎನ್ನುವ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ಶ್ರೀಮತಿ ಗೀತಾ ಸಿ. ಕಿಣಿ ಯವರು ಕೊಂಕಣಿ ಅಡುಗೆ ದಾಖಲೀಕರಣ ಮತ್ತು ಸಾಹಿತ್ಯದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಡಾ. ಎಂ. ಖ. ಕಾಮತ್  ಮತ್ತು ಕು. ರೀನಾ ಡಿ’ಸೋಜಾ ಇವರನ್ನು ಸನ್ಮಾನಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಕು. ಸುಜೀರ್ ಕೀರ್ತನಾ ನಾಯಕ್ ಇವರಿಂದ ಕೊಂಕಣಿ ಭಾವಗೀತೆ ಕಾರ್ಯಕ್ರಮ ನಡೆಯಿತು.

 

 

 

 

 


ಮಧುರ ಕೊಂಕಣಿ ಕಾರ್ಯಕ್ರಮ 02-03-2013 - 4

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಸಾಕಾರ ನಾಟಕ ಸಂಸ್ಥೆ, ಕಾರವಾರ, ಇವರಿಂದ 2-03-2013 ರಂದು “ಮಧುರ ಕೊಂಕಣಿ” ಕಾರ್ಯಕ್ರಮ ನಡೆಯಿತು. ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ವಹಿಸಿದ್ಧರು.

“ಕೊಂಕಣಿ ಶಿಕ್ಷಕ ’’ ( ಕೊಂಕಣಿಶಿಕ್ಷಕ ತರಬೇತಿ )ಕಾರ್ಯಕ್ರಮ 16-3-2013 ಶಿರಸಿ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ 16-03-2013 ರಂದು ಶಿರಸಿಯ ಸೇಂಟ್ ಜೊಸೆಫ್ ಸಭಾಭವನ, ಶಿರಸಿಯಲ್ಲಿ ಬೆಳಿಗ್ಗೆ 10.00 ಕ್ಕೆ ಕೊಂಕಣಿ ಶಿಬಿರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಕರ್ನಾಟಕದ ಸನ್ಮಾನ್ಯ ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ವಹಿಸಿದ್ದರು. ಶ್ರೀ ಎಮ್.ಎಸ್.ಹೆಗಡೆ, ಶ್ರೀ ಕೂಡ್ಲ ಆನಂದು ಶ್ಯಾನಭಾಗ,ಶ್ರೀ ಮಹಾದೇವ ರೇವಣಕರ, ಶ್ರೀ ಆರ್.ಎನ್.ಶೇಟ್, ಶ್ರೀ ಡೋನಿ ಡಿ’ಸೋಜಾ ಮತ್ತು ಶ್ರೀ ಮಂಜುನಾಥ ರಾಯ ಸಿದ್ಧಿ ಯವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ನಂತರ ವಿಚಾರ ಗೋಷ್ಠಿ ನಡೆಯಿತು.

 

 


ಕೊಂಕಣಿ ವಿದ್ಯಾರ್ಥಿ ಸಂಭ್ರಮ್ 9-3-2013 “ಮಾಂಟೋವು” ಮಂಗಳೂರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಅಕಾಡೆಮಿಯ ಮಾಂಟೋವಿನಲ್ಲಿ “ಕೊಂಕಣಿ ವಿದ್ಯಾರ್ಥಿ ಸಂಭ್ರಮ್’’ ಎನ್ನುವ ಕಾರ್ಯಕ್ರಮ 9-3-2013ರಂದು ಸಂಜೆ 3.30 ಕ್ಕೆ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯವಾಣಿಯ ಸ್ಥಾನೀಯ ಸಂಪಾದಕರಾದ ಶ್ರೀ ಸುರೇಶ್ ವಾಗ್ಲೆ ಇವರು ವಹಿಸಿದ್ಧರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ವಹಿಸಿದ್ಧರು. ಟೈಮ್ಸ್ ಆಫ್ ಇಂಡಿಯಾದ ಪ್ರಧಾನ ವರದಿಗಾರರಾದ ಶ್ರೀ ಜೈದೀಪ್ ಶೆಣೈ ಮತ್ತು ವಿಜಯ ಕರ್ನಾಟಕದ ಪತ್ರಕರ್ತರಾದ ಶ್ರೀ ಸ್ಟೀವನ್ ರೇಗೊ ಕಾರ್ಯಕ್ರಮದ ಮುಖ್ಯ ಅತಿಥಿಗಳಗಿದ್ದರು. ನಂತರ ಸಂತ ಅಲೋಷಿಯಸ್ ಕಾಲೇಜಿನ ಕೊಂಕಣಿ ಸಂಘದ ಕೊಂಕಣಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

 

 

 


ಕೊಂಕಣಿ ರಂಗ ದಿನಾಚರಣೆ 27-3-2013 ಕೊಂಕಣಿ ಮಾಂಟೋವು

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಂಟೋವಿನಲ್ಲಿ 27-3-2013 ರಂದು ಬೆಳಿಗ್ಗೆ 11.30 ಕ್ಕೆ ಕೊಂಕಣಿ ರಂಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ವಹಿಸಿದ್ದರು. ರಾಷ್ಟ್ರೀಯ ನಾಟಕ ಶಾಲಾ ಪದವೀಧರೆಯಾದ  ಶ್ರೀಮತಿ ಎಸ್ ಮಾಲತಿ ಇವರು ಕಾರ್ಯಕ್ರಮದ ಉದ್ಘಾಟಕರಾಗಿದ್ದರು. ಶ್ರೀ ಎಸ್. ಪುರುಷೋತ್ತಮ ತಾಲವಾಟ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದರು. ಶ್ರೀ ಮ್ಯಾಕ್ಸಿಮ್ ರೋಡ್ರಿಗಸ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಜೋನ್ ಪೆರ್ಮಾನ್ನೂರ್, ಶ್ರೀಮತಿ ದೀಪಾಲಿ ಕಂಬದಕೋಣೆ, ಶ್ರೀ ವಿಠೋಭ ಭಂಡಾರ್ಕರ್ ಮತ್ತು ಶ್ರೀ ಚರಣ್ ಕುಮಾರ್ ಇವರಿಗೆ ಕೊಂಕಣಿ ರಂಗ ನಕ್ಷತ್ರ ಗೌರವಾರ್ಪಣೆ ನೀಡಲಾಯಿತು. ಶ್ರೀಮತಿ ಎಸ್. ಮಾಲತಿಯವರು ಪ್ರಸ್ತುತ ರಂಗಭೂಮಿಯ ಬಗ್ಗೆ ಉಪನ್ಯಾಸ ನೀಡಿದರು. ನಂತರ ಶ್ರೀಮತಿ ಪ್ರಫುಲ್ಲ ಹೆಗ್ಡೆ, ಶ್ರೀಮತಿ ವಂದನಾ ನಾಯಕ್, ಶ್ರೀ ಅವಿತಾಸ್ ಎಡೊಲ್ಪಸ್ ಕುಟಿನ್ಹೊ(ಡೊಲ್ಲಾ) ಇವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.