Print

ಕೊಂಕಣಿ ಕಲಾ ಮಂಡಳಿ (ರಿ) ಶಿರಸಿ :
ಕೊಂಕಣಿ ಕಲಾ ಮಂಡಳಿ(ರಿ) ಶಿರಿಸಿ, ಇವರು ದಿನಾಂಕ 6-4-13 ರಿಂದ 17-4-2013ರ ವರೆಗೆ ಶಿರಸಿಯಲ್ಲಿ ಶಾಸಲಾ ವಿದ್ಯಾರ್ಥಿಗಳಿಗೆ ನಾಟಕ ಶಿಬಿರವನ್ನು ಕರ್ನಾಟಕ ಕೊಂಕನಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಡೆಸಲಯಿತು.

 

ಶ್ರೀ ವೀರ ವಿಠಲ ದೇವಸ್ತಾನ - ಉದ್ಯಾವರ :
ಶ್ರೀ ವೀರ ವಿಠಲ ದೇವಸ್ಥಾನ –ಉದ್ಯಾವರ , ಉಡುಪಿ ಇವರು ಕೊಂಕಣಿ ಭಾಷೆ, ಬರವಣಿಗೆ, ವ್ಯಾಕರಣ, ಸಾಹಿತ್ಯ, ಸಂಗೀತ ಇವುಗಳ ಬಗ್ಗೆ ಮಕ್ಕಳಿಗೆ ಎಪ್ರಿಲ್ 15 ರಿಂದ ಒಂದು ವಾರದ ಕಾರ್ಯಾಗಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ನಡೆಯಿತು.

 

ಶುಭೋದಯ ಟ್ರಸ್ಟ್ (ರಿ) :
ಶ್ರೀ ಶುಭೋದಯ ಟ್ರಸ್ಟ್ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ 26-04-2013 ರಂದು “ಕೊಂಕಣಿ ಪೂಂರ್ಬೋಳು’’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ್ರು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ವಹಿಸಿದ್ದರು.

ಮಾಂಡ್ ಸೊಭಾಣ್, ಕಲಾಂಗಣ್ :
ಮಾಂಡ್ ಸೊಭಾಣ್ ನವರು ಎಪ್ರಿಲ್ 27-04-2013 ರಿಂದ ಮೇ5-05-2013 ರವರೆಗೆ ಕಲಾಂಗಣ್ ನಲ್ಲಿ ನಡೆದ ಮಕ್ಕಳ ರಜಾ ಶಿಬಿರಕ್ಕೆ  ಕರ್ನಾಟP ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರಾಯೋಜಕತ್ವವನ್ನು ನೀಡಿತು.

ಸಾಧನಾ ಬಳಗ (ರಿ) :
27-04-2013 ಮತ್ತು 28-04-2013ರ ವರೆಗೆ ಸಾಧನಾ ಬಳಗ (ರಿ), ಮಂಗಳೂರು ಇವರ ವತಿಯಿಂದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಕೊಂಕಣಿ ಯುವ ಜನತೆಗಾಗಿ “ರಂಗ ಶಾಲಾ’’ ರಂಗಭೂಮಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್‍ರಾದ ಶ್ರೀ ದೇವದಾಸ್ ಪೈ ಯವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿದ್ದರು.

ಕೊಂಕಣಿ ಸಾಂಸ್ಕøತಿಕ ಸಂಘ (ರಿ), ಮಂಗಳೂರು:
ಕೊಂಕಣೀ ಸಾಂಸ್ಕøತಿಕ ಸಂಘ ದವರು 26-05-2013 ರಂದು ಟಿ.ವಿ. ರಮಣ ಪೈ ಸಬಾಗೃಹ, ಕೊಡಿಯಾಲಬೈಲ್, ಮಂಗಳೂರು ಇವರಿಂದ “ಕೊಂಕಣಿ ಸಮಾವೇಶ” ಕಾರ್ಯಕ್ರಮ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಶ್ರೀಮತಿ ಮಿನಾಕ್ಷಿ ಪೈ ಮತ್ತು  ಪಂಗಡದವರಿಂದ – ಗಣೇಶಾಂ ಶಿವಂ ಸುಂದರಂ’-ನೃತ್ಯ ರೂಪಕ, ಶ್ರೀಮತಿ ಶೋಭಾ ಆರ್.ಶೇಟ್ ಮತ್ತು ಪಂಗಡದವರಿಂದ -‘ನವದುಗಾ ಪ್ರಸಿದ್ದತು’-ನೃತ್ಯ ರೂಪಕ, ಶ್ರೀಮತಿ ಅಂಜಲಿ ಶೇಟ್ ಮತ್ತು ಪಂಗಡದವರಿಂದ-‘ಘರಣ್ಯೆ’-ನಾಟ್ಕುಳೆಂ(ಸ್ಕಿಟ್), ಶ್ರೀ ಅಶ್ವಿನ್ ರಾವ್ ಮತ್ತು  ಪಂಗಡದವರಿಂದ-‘ರಾಮಾಯಣ ಸೃಷ್ಟಿ’-ನಾಟ್ಕುಳೆಂ(ಸ್ಕಿಟ್), ಶ್ರೀಮತಿ ಪ್ರಫುಲ್ಲಾ ಹೆಗ್ಡೆ ಮತ್ತು ಪಂಗಡದವರಿಂದ À -ನೃತ್ಯ ನಾಟಕ-‘ಶಿವ ಪಂಚಾಕ್ಷರಿ ಮಹಾತ್ಮೆ’ ಮತ್ತು ಶ್ರೀ ಮುರಳಿಧರ್ ಕಾಮತ್ ಮತ್ತು ಪಂಗಡದವರಿಂದ ಕೊಂಕಣಿ ಸುಗಮ ಸಂಗೀತ ಕಾರ್ಯಾಕ್ರಮವನ್ನು ಪ್ರಯೋಜಿಸಿತ್ತು.

ಆಮ್ಗೆಲೆ ವಾಣಿ (ರಿ) ಉಡುಪಿ:
ಆಮ್ಗೆಲೆ ವಾಣಿ(ರಿ) ಉಡುಪಿ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ - ಪುತ್ತೂರು ಇವರ ವತಿಯಿಂದ “ ಕೊಂಕಣಿ ಸಾಂಸ್ಕ್ರತಿಕ ಸಾಹಿತಿಕ ಸಮ್ಮೇಳನ 11-05-2013 ರಂದು ಶ್ರೀ ಶ್ರೀನಿವಾಸ ಕಲ್ಯಾನ ಮಂಟಪ ಶ್ರೀ  ಲಕ್ಷ್ಮೀ ವೆಂಕಟೇಶ ದೇವಸ್ಥಾನ - ಪುತ್ತೂರು ಇಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರಯೋಜಕತ್ವವನ್ನು ನೀಡಿತ್ತು.
 

“ಕೊಂಕಣೀ ಕವಿತಾಮೃತ” 12-4-2013 ಸಂಜೆ 4.30 ಕೊಂಕಣಿ ಮಾಂಟೋವು :
ಮಾಂಟೋವಿನಲ್ಲಿ “ಕೊಂಕಣೀ ಕವಿತಾಮೃತ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ವಹಿಸಿದ್ದರು. ಕಾರ್ಯಕ್ರಮವನ್ನು ಖ್ಯಾತ ಕೊಂಕಣಿ ಸಾಹಿತಿಯಾದ ಶ್ರೀ ಎಡ್ವಿನ್ ಜೆ.ಎಫ್ ಡಿ’ಸೋಜಾ ರವರು ಉದ್ಘಾಟಿಸಿದರು.  ಖ್ಯಾತ ವಿದ್ವÁ್ವಂಸರಾದ ಡಾ. ಎಂ. ಪ್ರಭಾಕರ್ ಜೋಶಿ ಇವರು “ಕೊಂಕಣಿ ಉಜ್ವಾಡು” ತ್ರೈಮಾಸಿಕ ವಾರ್ತಾ ಸಂಚಿಕೆ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಡೆಚ್ಚಾರು ಗಣಪತಿ ಶೆಣೈ ಮತ್ತು ಶ್ರೀ ನಾರಾಯಣ ಗವಳ್‍ಕರ್ ರವರಿಗೆ ಕೊಂಕಣಿ ನಕ್ಷತ್ರ ನೀಡಿ ಗೌರವಿಸಲಾಯಿತು. ನಂತರ ಶ್ರೀ ಜಯವಂತ ನಾಯಕ್, ಶ್ರೀಮತಿ ವಾಯ್‍ಲೆಟ್ ಪಿರೇರಾ, ಶ್ರೀಮತಿ ಕವಿತಾ ಬಿ. ಗಾಂವ್‍ಸ್ಕರ್, ಶ್ರೀ ಪ್ರಶಾಂತ್ ಪ್ರಭು, , ಶ್ರೀ ದಿನಕರ್ ಶೇಟ್, ಶ್ರೀ ಪುಂಡಲೀಕ ಮರಾಠೆ, ಶ್ರೀ ನಾನ್ನು ಇರ್ಪಾನ್, ಶ್ರೀ ಮಹೇಶ್ ಚಿತ್ರಾಪುರ, ಶ್ರೀ ಕಮಲಾಕ್ಷ ಖಾರ್ವಿ ಇವರಿಂದ ಕವಿತಾ ವಾಚನ ನಡೆಯಿತು.

 

 

 

 


ಮಹಾರಾಷ್ಟ್ರ ಕೊಂಕಣಿ ರಂಗೋತ್ಸವ ದಿನಾಂಕ : 21-4-2013 , ಮುಂಬಯಿ :-
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಮುಂಬಯಿ ಇವರ ಜಂಟಿ ಆಶ್ರಮದಲ್ಲಿ 21-04-2013 ರಂದು ಮುಂಬಯಿಯ  ಕನಾಟಕ ಸಂಘದ ಜವಾರಿ ಬಾಯಿ ಪಟೇಲ್ ಸಭಾಗ್ರಹ ದಲ್ಲಿ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಂಕಣಿ ತ್ರೀವೇಣಿ ಕಲಾ ಸಂಗಮ(ರಿ) ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಉಲ್ಲಾಸ್ ಡಿ. ಕಾಮತ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೊಂಕಣಿ ಲೇಖಕರಾದ ಶ್ರೀ ನಾಗೇಶ್ ಡಿ.ಸೋಂದೆ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ನಂತರ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕಮಾರಿ ಪೂಜಾ ಮತ್ತು ದಿವ್ಯ ಪಂಡಿತ್ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ನಂತರ ಋಣಾನುಬಂಧ ಎನ್ನುವ ಕೊಂಕಣಿ ನಾಟಕ ನಡೆಯಿತು. ಕೊಂಕಣಿ ರಂಗ ಮಂಥನ ಈ ವಿಷಯದ ಬಗ್ಗೆ  ಸಂವಾದ ಕಾರ್ಯಕ್ರಮ ನಡೆಯಿತು. ನಂತರ “ಕಾಝಾರ್ ಜಾಲ್ಲೇಮ್ ಆನಿ ಮಿರಾಗ್ ಜಾಲ್ಲಿ ನಾಟಕ ಪ್ರದರ್ಶನ  ನಡೆಯಿತು.

ಕೊಂಕಣಿ ಭಾವಗೀತೆ ಶಿಬಿರ: 17, 18-04-2013 ಕಾಸರಗೋಡು
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಜಿ.ಎಸ್.ಬಿ. ಸಂಘ ಕಾಸರಗೋಡು ಇವರ ಸಹಯೋಗದಲ್ಲಿ ದಿ. 17, 18-4-2013 ರಂದು ಶ್ರೀ ಸುಕೃತೀಂದ್ರ ಕಲ್ಯಾಣ ಮಂದಿರ , ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಕಾಸರಗೋಡು ಇಲ್ಲಿ ಎರಡು ದಿನದ ಕೊಂಕಣಿ ಭÁವಗೀತೆ ಶಿಬಿರ ಡಾ. ಸಂಪದಾ ಭಟ್, ಮರಬಳ್ಳಿ ಇವರ ನಿರ್ದೇಶನದಲ್ಲಿ ನಡೆಯಿತು. ಕಾರ್ಯಕ್ರಮವು ಬೆಳಿಗ್ಗೆ 10 ರಿಂದ ಸಂಜೆ 5 ವರೆಗೆ ನಡೆಯಿತು.  ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ವಹಿಸಿದ್ದರು. ಶ್ರೀ ಕೆ. ಗಿರಿಧರ ವಿಶ್ವನಾಥ ಕಾಮತ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕೆ.ಮೋಹನದಾಸ್ ಕಾಮತ್ ,ಶ್ರೀಮತಿ ಕೆ. ರಾಧಾ ಮುರಳೀಧರ್ ಕಾಮತ್ , ಶ್ರೀ ಕೆ. ವಿದ್ಯಾಕರ ಮಲ್ಯ , ಶ್ರೀ ಕೆ. ಜಗದೀಶ್ ಕಾಮತ್, ಶ್ರೀ ಎ. ರವೀಂದ್ರ ರಾವ್ ,  ಶ್ರೀ ಎಂ. ಆರ್ . ಮಲ್ಯ ಇವರು ಉಪಸ್ಥಿತರಿದ್ದರು. 18-4-2013 ರಂದು ಸಂಜೆ 4.30 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಿತು ನಂತರ 6 ರಿಂದ 8 ಗಂಟೆಯ ವರೆಗೆ ಡಾ. ಸಂಪದಾ ಭಟ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಕೊಂಕಣಿ ಸಂಭ್ರಮ್ ಮತ್ತು ಪುಸ್ತಕ ಬಿಡುಗಡೆ :
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಡೆಮಿಯಿಂದ ಬೆಂಗಳೂರಿನ ನಯನ ರಂಗಮಂದಿರದಲ್ಲಿ 16-05-2013 ರಂದು ಸಂಜೆ 4.00 ಗಂಟೆಗೆ ಕೊಂಕಣಿ ಸಂಭ್ರಮ್ ಮತ್ತು ಶ್ರೀ ಕೃಷ್ಣ ಭವಾನಿ ಶಂಕರ್ ಭಟ್ ಇವರು ಬರೆದ “ ಬಾಲ್ಯಾ ತೂ ಒಚೂನಕಾ” ಎನ್ನುವ ಕವನ ಸಂಕಲನವನ್ನು ಅಕಾಡೆಮಿಯಿಂದ ಪ್ರಕಟಿಸಿ  ಪುಸ್ತಕವನ್ನು  ಬಿಡುಗಡೆ ಮಾಡಲಾಯಿತು.  ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿಜೇತರಾದ ಶ್ರೀ ಗೋಪಾಲಕೃಷ್ಣ ಪೈ ಯವರು ನಡೆಸಿದರು. ಪ್ರಕಟಿತ ಪುಸ್ತಕವನ್ನು ಖ್ಯಾತ ನಟರಾದ ಶ್ರೀ ಅನಂತನಾಗ್ ರವರು  ಬಿಡುಗಡೆಗೊಳಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಬಿಡುಗಡೆಯಾದ ಪುಸ್ತಕದ ಬಗ್ಗೆ ಖ್ಯಾತ ಕವಿಗಳಾದ ಶ್ರೀ ಜಯಂತ್ ಕಾಯ್ಕಿಣಿ ಯವರು ವಿವರಿಸಿದರು. ಖ್ಯಾತ ಉದ್ಯಮಿ ಮತ್ತು ಸಮಾಜ ಸೇವಕರಾದ ಶ್ರೀ ದಯಾನಂದ ಪೈ ಯವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಡಾ| ಸಂಪದಾ ಭಟ್ ಮರಬಳ್ಳಿಯವರಿಂದ ಕೊಂಕಣಿ ಗಾಯನ, ಮನ್ದೀಪ್ ರಾಯ್ ಮತ್ತು ಬಳಗದವರಿಂದ ಕೊಂಕಣಿ ಕಿರುನಾಟಕ , ರಜನಿ ಪೈ ಮತ್ತು ಬಳಗದವರಿಂದ ಕೊಂಕಣಿ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು.

 

 

 

 

 


ಗೌರವ ಪ್ರಶಸ್ತಿ-ಪುಸ್ತಕ ಬಹುಮಾನ ಪ್ರದಾನ ಸಮಾರಂಭ -2012-13: 25-5-2013: ಡಾ| ರಾಜೇಂದ್ರ ಪ್ರಸಾದ್ ಸಭಾಭವನ: ಗಿಬ್ಸ್ ಪ್ರೌಢಶಾಲೆ, ಕುಮಟಾ :ಸಂಜೆ 5.00 ಕ್ಕೆ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕುಮಟಾದ ಗಿಬ್ಸ್ ಪ್ರೌಢಶಾಲೆಯ, ಡಾ| ರಾಜೇಂದ್ರ ಪ್ರಸಾದ್ ಸಭಾಭವನದಲ್ಲಿ 2012-13ನೇ ಸಾಲಿನ ಗೌರವ ಪ್ರಶಸ್ತಿ-ಪುಸ್ತಕ ಬಹುಮಾನ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಕುಮಟಾದ ಶಾಸಕರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ ಇವರು ನಡೆಸಿದರು. ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಶ್ರೀ ಪೌಲ್ ಮೊರಾಸ್ , ಕಲೆಯಲ್ಲಿ ಸಾಧನೆಯನ್ನು ಮಾಡಿದ ಶ್ರೀ ಭವಾನಿ ಶಂಕರ ಭಟ್ ಮತ್ತು ಕೊಂಕಣಿ ಜಾನಪದ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಶ್ರೀ ಆರ್ಗೋಡು ಗೋವಿಂದರಾಯ ಶೆಣೈ ಅವರಿಗೆ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ಪುಸ್ತಕ ಬಹುಮಾನವಾಗಿ ಅರುಣರಾವ್, ತಾರಾ ಲವೀನ ಫೆನಾಂಡಿಸ್, ಹಾಗೂ ಫಾ.ಡಾ|. ಪಿಯುಸ್ ಪಿಡೆಲಿಸ್ ಪಿಂಟೊ ಅವರಿಗೆ ಹಾಗೂ ಯುವ ಪುರಸ್ಕøತ ಪ್ರಶಸ್ತಿಯನ್ನು ಶ್ರೀ ಆಂಟೋನಿ ವಿಯಾನ್ನಿ ಡಿಕುನ್ಹ, ಶ್ರೀ ಅಂಕುಶ್ ನಾಯಕ್, ರಾಮಕೃಷ್ಣ ನಾಯಕ್ ಹಾಗೂ ನಾರಾಯಣ.ಬಿ. ರಾಯ್‍ಕರ್ ಅವರಿಗೆ ಪ್ರಶಸ್ತಿನೀಡಿ ಗೌರವಿಸಲಾಯಿತು. ಅಕಾಡೆಮಿಯ ಸದಸ್ಯರಾದ ಶ್ರೀ ರೋಯ್ ಕ್ಯಾಸ್ಟೆಲಿನೊ ಮತ್ತು ಶ್ರೀ ಓಂ ಗಣೇಶ್ ರವರು. ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ವಹಿಸಿದ್ದರು.  ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.

 


ಮಧುರ ಕೊಂಕಣಿ ಕಾರ್ಯಕ್ರಮ 26-05-2013 - 1
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಚಪ್ಟೆಕಾರ್ ಸಾರಸ್ವತ ಬ್ರಾಹ್ಮಣ ಸಮಾಜ ಸಂಘ (ರಿ), ಮಂಗಳೂರು ಇವೆ ಸಹಯೋಗದಲ್ಲಿ  26-05-2013 ರಂದು “ಮಧುರ ಕೊಂಕಣಿ”  ಬಾಳಂಭಟ್ ಸಭಾಂಗಣ  , ರಥಬೀದಿ , ಮಂಗಳೂರು,  ಇಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾರವರು ನಡೆಸಿಕೊಟ್ಟರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀ ಅಶೋಕ್ ಶೇಟ್ ರವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿದ್ದರು. ನಂತರ ಚಪ್ಟೆಕಾರ್ ಸಾರಸ್ವತ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.


ವ್ಹಾರ್ಡಿಗ್ ಪುಸ್ತಕ ಬಿಡುಗಡೆ :
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ತೆಂಕ ಎಡಪದವಿನಲ್ಲಿ ಶಿಬ್ರಿಕೆರೆ ಜುವಾಂಕಾರ್ ಚಾರಿಟೇಬಲ್ ಟ್ರಸ್ಟ್‍ನವತಿಯಿಂದ ಕೊಂಕಣಿ ಲೇಖಕರಾದ ಶ್ರೀ ಯಂ. ಗೋಪಾಲಗೌಡ ಪಟ್ಲಚಿಲ್ ರವರು ಬರೆದ ಅಕಾಡೆಮಿಯ ಪ್ರಕಟಣೆಯ ವ್ಹಾರ್ಡಿಗ್ ಪುಸ್ತಕ  ಬಿಡುಗಡೆಯು 1-11-2013 ರಂದು ನಡೆಯಿತು. ಪುಸ್ತಕದ ಬಿಡುಗಡೆಯನ್ನು ಇತಿಹಾಸ ಸಂಶೋಧಕ ಡಾ.ಪಿಯುಸ್ ಫಿಡೆಲಿಸ್ ಪಿಂಟೋ ಬಿಡುಗಡೆಗೊಳಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಡಾ| ಬಿ. ದೇವದಾಸ ಪೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಕ್ತಿನಗರ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ್ ಶೆಣೈ ಯವರು ಉಪಸ್ಥಿತರಿದ್ದರು. ಬಡಗೆಡಪದವು ಶಾಸ್ತವು ಶ್ರೀ ಭೂತನಾಥೇಶ್ವರ  ದೇವಸ್ಥಾನದ ಟ್ರಸ್ಟಿ ಪ್ರೇಮಲತಾ ವಿ.ಶೆಟ್ಟಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ತೆಂಕ ಎಡಪದವು  ಕುಡುಬಿ ಜಾನಪದ ಕಲಾವೇದಿಕೆ  ಸದಸ್ಯರಿಂದ ಜಾನಪದ ನೃತ್ಯ ಮತ್ತು ಸ್ಥಳೀಯ ಬಾಲಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಕೊಂಕಣಿ ಮಾನ್ಯತಾ ದಿನಾಚರಣೆ :
ಕರ್ನಾಟಕ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಭಾಂಗಣದಲ್ಲಿ ಕೊಂಕಣಿಗೆ ಮಾನ್ಯತೆ ದೊರೆತ ದಿನವಾದ ಅಗಸ್ಟ್ 20 ರಂದು ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಚಂದ್ರಹಾಸ ರೈ ಯವರು ಮುಖ್ಯ ಅತಿಥಿ ಯಾಗಿದ್ದರು. ಪ್ರಸ್ತಾವಿಕ ಭಾಷಣವನ್ನು ಅಕಾಡೆಮಿಯ ರಿಜಿಸ್ಟ್ರಾರರಾದ ಡಾ| ಬಿ. ದೇವದಾಸ ಪೈ ಯವರು ಮಾಡಿದರು .ತುಳುಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಚಂದ್ರಹಾಸ ರೈ ಯವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೆಳಕಂಡ  17 ಶಾಲೆಗಳಿಗೆ ಮಾನ್ಯತಾ ದಿನಾಚರಣೆ ನಡೆಸಲು ಪ್ರಾಯೋಜಕತ್ವವನ್ನು ನೀಡಿತು.

1.     ಸೈಂಟ್ ಫಿಲೋಮಿನಾ ಹಿ.ಪ್ರಾ. ಶಾಲೆ, ಕೆಮ್ಮಣ್ಣು, ಉಡುಪಿ.

2.      ಸ.ಕಾ . ಮಾದರಿಯ ಹಿ.ಪ್ರಾ. ಶಾಲೆ, ಅಜೆಕಾರು, ಕಾರ್ಕಳ.

3.     ಸ.ಹಿ.ಪ್ರಾ. ಶಾಲೆ,ದಾದಬೆಟ್ಟು ,ಕಾರ್ಕಳ.

4.     ಲೇಡಿಹಿಲ್ ಹಿ.ಪ್ರಾ.ಶಾಲೆ, ಅಶೋಕನಗರ ಅಂಚೆ ,ಮಂಗಳೂರು.

5.     ಸೈಂಟ್ ರೀಟಾ, ಕನ್ನಡ ಹಿ.ಪ್ರಾ.ಶಾಲೆ ,ಜೆಪ್ಪು, ಮಂಗಳೂರು.

6.     ಮಾದೈ ದೇವುಸ್ ಹಿ.ಪ್ರಾ.ಶಾಲೆ,  ಪುತ್ತೂರು-. ದ.ಕ.

7.     ಎಸ್.ವಿ.ಟಿ.ಹಿ.ಪ್ರಾ. ಶಾಲೆ, ಕಾರ್ಕಳ-574101, ಉಡುಪಿ.

8.     ನಿತ್ಯಾದರ್ ಹಿ.ಪ್ರಾ ಶಾಲೆ, ನಿತ್ಯಾದರ್ ನಗರ, ಪೆರ್ಮನ್ನೂರು, ತೊಕ್ಕೊಟ್ಟು, ಮಂಗಳೂರು.

9.     ಮೊಡರ್ನ್ ಎಜ್ಯುಕೇಶನ್ ಸೊಸ್ಯಟಿ (ನೊಂ.)ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶಿರಸಿ.

10.   ಸರಸ್ವತಿ ವಿದ್ಯಾ ಕೇಂದ್ರ ವಿದ್ಯಾಗಿರಿ, ಕಲಭಾಗ, ಕುಮಟಾ.

11.   ನಳಂದಾ ಇಂಗ್ಲೀಷ್ ಮೀಡಿಯಂ ಸ್ಕೂಲ್, ವಿ.ಟಿ.ರೋಡ್, ಮಂಗಳೂರು-1.

12.   ಶ್ರೀ ಆನಂದ ಶೆಟ್ಟಿ ಸರಕಾರಿ ಪ್ರೌಢಶಾಲೆ, ಕಾರ್ಕಳ.

13.   ಲೂಡ್ಸ್ ಕೇಂದ್ರೀಯ ವಿದ್ಯಾಲಯ(ಹಿ.ಪ್ರಾ), ಬಿಜೈ, ಮಂಗಳೂರು.

14.   ಮುಖ್ಯೋಪಾಧ್ಯಾಯರು ,ಸಂತ ಜೋಸೆಫರ ಹಿ.ಪ್ರಾ. ಶಾಲೆ. ಕುಂದಾಪುರ.

15.   ಸೈಂಟ್ ಆಗ್ನೆಸ್ ಹಿ ಪ್ರಾ ಶಾಲೆ,(ಕ.ಮಾ) ಬೆಂದೂರು ಮಂಗಳೂರು.

16.   ಕೆನರಾ ಪ್ರೌಢಶಾಲೆ ಮೈನ್, ಡೊಂಗರಕೇರಿ .ಮಂಗಳೂರು.

17.   ಸೈಂಟ್ ಜೋಸೆಫ್ ಹಿ ಪ್ರಾ ಶಾಲೆ, ಕುಲಶೇಕರ, ಮಂಗಳೂರು.