Print

14-04-2013 ಘರ್ ಘರ್ ಕೊಂಕಣಿ ಕಾರ್ಯಕ್ರಮ- 1

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಉಡುಪಿ ಪುತ್ತೂರಿನ ಶ್ರೀ ಮಾಧವ ಎನ್ ಗಂವಸ್ಕರ್ gಯವರ ರವರ ನಿವಾಸದಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


14-04-2013 ಘರ್ ಘರ್ ಕೊಂಕಣಿ ಕಾರ್ಯಕ್ರಮ- 2

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಉಡುಪಿ ಪುತ್ತೂರಿನ ಶ್ರೀನರಸಿಂಹ ಜಿ.ನಾಯಕ್ ಯವರ ರವರ ನಿವಾಸದಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

14-04-2013 ಘರ್ ಘರ್ ಕೊಂಕಣಿ ಕಾರ್ಯಕ್ರಮ- 3

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಪೆರ್ಡೂರಿನ ಶ್ರೀ ಲಕ್ಷ್ಮಣ್ ಗಾಂವುಸ್ ಯವರ ನಿವಾಸದಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

14-04-2013 ಘರ್ ಘರ್ ಕೊಂಕಣಿ ಕಾರ್ಯಕ್ರಮ- 4

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಸಂತೆಕಟ್ಟೆಯ ದೀಪಕ್ ಶೇಟ್  ರವರ ನಿವಾಸದಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮ ನಡೆಯಿತು.

12-05-2013 ಘರ್ ಘರ್ ಕೊಂಕಣಿ ಕಾರ್ಯಕ್ರಮ- 5

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ  ಪರ್ಕಳದ ಜನಾರ್ಧನ ಕಾಮತ್ ರವರ ನಿವಾಸದಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರೈಲ್ವೆ ಪ್ರಯಾಣೀಕರ ಸಂಘದ ಅಧ್ಯಕ್ಷರಾದ  ಶ್ರೀ ಆರ್.ಎಲ್. ಡಯಾಸ್‍ಮತ್ತು ವಕೀಲರಾದ ಶ್ರೀ ಲಕ್ಷ್ಣಣ್ ಶೆಣೈ ಇವರು ಮುಖ್ಯ ಅತಿಥಿಗಳಾಗಿದ್ದರು.  ಸೀಮಾ ಜೆ. ರಾಯ್ಕರ್ ಇವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.. ಅಕಾಡೆಮಿಯ ರಿಜಿಸ್ಟ್ರಾರರಾದ ಬಿ. ದೇವದಾಸ್ ಪೈ ಇವರು ಕಾರ್ಯಕ್ರಮದ ಪ್ರಸ್ತಾವನೆಗೈದರು.  ಕಾರ್ಯಕ್ರಮಕ್ಕೆ.  ಕು|ಶಿವಾಣಿ ಮತ್ತು ಮಾ. ವಾಸುದೇವ ಇವರು ರಸಪ್ರಶ್ನೆ ಮತ್ತು ಜಾನಪದ ಒಗಟು ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಶೈಲಾ ಜೆ.ಕಾಮತ್ ಇವರು ತಾಯಿ ದಿನಾಚರಣೆ ಬಗ್ಗೆ ಕವನ ಬರೆದರು. ಕು| ಶಿವಾಣಿ ಇವರು ಧನ್ಯವಾದ ಸಮರ್ಪಿಸಿದರು.

 

 

12-05-2013 ಘರ್ ಘರ್ ಕೊಂಕಣಿ ಕಾರ್ಯಕ್ರಮ- 6

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ   ಮಣಿಪಾಲದ ಶ್ರೀ ರಂಗ ಪೈ ರವರ ನಿವಾಸದಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಶ್ರೀ ಕಾಸರಗೋಡು ಚಿನ್ನಾ ರವರು ಇತ್ತೀಚೆಗೆ ಜರುಗಿದ ಘರಘರ ಕೊಂಕಣಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್‍ರಾದ ಡಾ| ಬಿ. ದೇವದಾಸ ಪೈ ಇವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಶ್ರೀ ಶಾಂತಾರಾಮ್ ಬಾಳಿಗಾ ಇವರು ಪ್ರಾರ್ಥನೆ ಮತ್ತು ಗೀತಾನಾಟಕ ಹಾಡಿದರು, ಶ್ರೀಮತಿ ಪ್ರಮೀಳಾ ಕುಂದಾಪುರ ಇವರು ಹೆ ಅಮಚೆ ನಮನ , ಪಾಕ್ಕಾ ಬಾಂದೊನು ಮತ್ತು ಮೊಗಾಯೇಗಾ ನಾತ್ತು ಪದ್ಯವನ್ನು ಹಾಡಿದರು. ಶ್ರೀಮತಿ ಸಂಪದಾ ಭಟ್ ಮರಬಳ್ಳಿ ಇವರು ಕೊಂಕಣಿ ಬಹುಭಾಷಿಣಿ ಶಾಸ್ತೀಯ ಗಾಯನ ಹಾಡಿದರು.

12-05-2013 ಘರ್ ಘರ್ ಕೊಂಕಣಿ ಕಾರ್ಯಕ್ರಮ- 7

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಣಿಪಾಲದ ರಾಜಪುರ ಸಾರಸ್ವತ ಮಹಿಳಾ ವೃಂದದ ಆಶ್ರಯದಲ್ಲಿ ಶ್ರೀಮತಿ ಸುಮಾನಾಯಕ್  ರವರ ನಿವಾಸದಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಶ್ರೀ ಕಾಸರಗೋಡು ಚಿನ್ನಾ ರವರು ಘರಘರ ಕೊಂಕಣಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಪೌರಾಯುಕ್ತ, ಸಾರಸ್ವತ ಸಮಾಜದ ನೇತಾರ ಗೋಕುಲದಾಸ್ ನಾಯಕ್ ಮಾತನಾಡಿ ಮುಂದಿನ ದಿನಗಳಲ್ಲಿ ಅಕಾಡೆಮಿಯ ಜೊತೆಗೂಡಿ ರಾಜಪುರ ಸಾರಸ್ವತ ಕೊಂಕಣಿಗರ ಬಹುದೊಡ್ಡ ಸಮಾವೇಶವನ್ನು ಏರ್ಪಡಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮಣಿಪಾಲದ ರಾಜಪುರ ಸಾರಸ್ವತ ಮಹಿಳಾ ವೃಂದದ ಗೌರವಾಧ್ಯಕ್ಷೆಯಾದ ಶ್ರೀಮತಿ ಸುನಿತಾ ನಾರಾಯಣ ನಾಯಕ್ ಮುಖ್ಯ ಅತಿಥಿಯಾಗಿದ್ದರು. ಕಾರ್ರ್ಯಕ್ರಮದ ಸ್ವಾಗತವನ್ನು ಶ್ರೀಮತಿ ಸುಮಾ ನಾಯಕ್‍ರವರು ಮಾಡಿದರು. ಶ್ರೀಮತಿ ಸುಮಿತ್ರಾ ನಾಯಕ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಕುಸುಮಾ ಕಾಮತ್ ಮತ್ತು ಶ್ರೀಮತಿ ಭಾರತಿ ನಾಯಕ್ ಕವಿತಾ ವಾಚನಮಾಡಿದರು. ಶ್ರೀಮತಿ ಸುಮತಿ ಕಾಮತ್ ನೃತ್ಯ ಮಾಡಿದರು.

 

12-05-2013 ಘರ್ ಘರ್ ಕೊಂಕಣಿ ಕಾರ್ಯಕ್ರಮ- 8

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಣಿಪಾಲದ ಶ್ರೀ ಜಗದೀಶ್ ಪೈ ಯವರ ಮನೆಯಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಶ್ರೀ ಕಾಸರಗೋಡು ಚಿನ್ನಾ ರವರು ಘರಘರ ಕೊಂಕಣಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು.

 ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಣಿಪಾಲ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರರಾದ ಡಾ| ಜಿ.ಕೆ. ಪ್ರಭು ಮಾತನಾಡಿ ಮಣಿಪಾಲ ವಿಶ್ವವಿದ್ಯಾನಿಲಯದ ಎಲ್ಲಾ ನೌಕರರನ್ನು ಸೇರಿಸಿಕೊಂಡು ಸಧ್ಯದಲ್ಲೇ ಕಾರ್ಯಕ್ರಮವನ್ನು ಏರ್ಪಡಿಸುವ ಭರವಸೆಯನ್ನಿತ್ತರು. ಅಕಾಡೆಮಿಯ ರಿಜಿಸ್ಟ್ರಾರರಾದ ಡಾ|.ಬಿ. ದೇವದಾಸ ಪೈಯವರು ಕಾರ್ಯಕ್ರಮದ ಪ್ರಸ್ತಾವನೆಗೈದರು. ಪ್ರೇಮಾನಂದ ಶೆಣೈ ಯವರು ಕಾರ್ಯಕ್ರಮ ನಿರೂಪಿಸಿದರು.  ಸುಮಾರು 100ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸೇರಿದ ಕೊಂಕಣಿಗರು ಗಾದೆಗಳು, ಹಾಡುಗಳು, ಕೊಂಕಣಿ ಹಾಸ್ಯ ಜೊತೆಗೆ ಸ್ಫರ್ಧೆಗಳನ್ನು  ಏರ್ಪಡಿಸಲಾಯಿತು. ವಿಜೇತರಿಗೆ ಮನೆಯ ಮಾಲೀಕ ಜಗದೀಶ್ ಪೈ, ಅಕಾಡೆಮಿಯ ಅಧ್ಯಕ್ಷರಾದ  ಶ್ರೀ ಕಾಸರಗೋಡು ಚಿನ್ನಾ , ಡಾ|. ಜಿ. ಕೆ ಪ್ರಭು ಬಹುಮಾನವನ್ನು ನೀಡಿದರು.