1. ಅಕಾಡೆಮಿ ನಡೆಸಿರುವ ಕಾರ್ಯಕ್ರಮಗಳು - 16
2. ಪುಸ್ತಕ ಪ್ರಕಟಣೆ - 8
3. ಒಟ್ಟು ಕಾರ್ಯಕ್ರಮಗಳು - 24

1.    ಕೊಂಕಣಿ ನಾಟಕ ಸ್ವರ್ಧೆಗೆ ಸಹಯೋಗ:-ಮಂಗಳೂರು
2001ರ ಎಪ್ರಿಲ್ ತಿಂಗಳಲ್ಲಿ ಡಾ| ಟಿ.ಎಂ.ಎ.ಪೈ. ಫೌಂಡೇಷನ್‌ರವರ ಸಹಯೋಗದಲ್ಲಿ 14 ದಿನಗಳ ಕೊಂಕಣಿ ನಾಟಕ ಸ್ಪರ್ಧೆಯನ್ನು ಮಂಗಳೂರಿನ ನಳಂದ ವಿದ್ಯಾಲಯದಲ್ಲಿ ನಡೆಸಲಾಯಿತು ಈ ಸ್ಪರ್ಧಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೊ.ಅಲೆಕ್ಸಾಂಡರ ಎಫ್.ಡಿ’ಸೋಜ ರವರು ಭಾಗವಹಿಸಿದ್ದರು. ಡಾ. ಓ.ಎಮ್.ಎ. ಪೈ ಪೌಂಡೇಶನ್ ಇದರ ಅಧ್ಯಕ್ಷರಾದ ಶ್ರೀ.ಕೆ.ಕೆ.ಪೈರವರು  ಅಧ್ಯಕ್ಷತೆ ವಹಿಸಿದ್ದರು.

2.    ಕೊಂಕಣಿ ಶಿಕ್ಷಕರ ಕಾರ್ಯಗಾರ: -ಮೈಸೂರು
ಕೊಂಕಣಿ ಪಠ್ಯಪುಸ್ತಕ ತಯಾರಿ ಕುರಿತು ಶಿಕ್ಷಕರ ಕಾರ್ಯಗಾರವನ್ನು  ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಇವರ ಸಹಯೋಗದಲ್ಲಿ ಮೈಸೂರಿನಲ್ಲಿ ನಡೆಸಲಾಯಿತು.  ಶಾಲೆಯಲ್ಲಿ ಕೊಂಕಣಿ ಅಳವಡಿಸುವ ಬಗ್ಗೆ ಪಠ್ಯಪುಸ್ತಕ ತಯಾರಿ ಹಾಗೂ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

3.    2000-01ನೇ ಸಾಲಿನ ಗೌರವ ಪ್ರಶಸ್ತಿ ಸಮಾರಂಭ - ಮಂಗಳೂರು.
ಕೊಂಕಣಿ ಅಕಾಡೆಮಿಯ 2000-01ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಡೋನ್ ಬೋಸ್ಕೊ ಸಭಾಂಗಣದಲ್ಲಿ ಜೂನ ತಿಂಗಳ 24ರಂದು ನಡೆಸಲಾಯಿತು.  ಈ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಶ್ರೀ. ವಿಕ್ಟರ್ ರೊಡ್ರಿಗಸ್, ನಾಟಕ ಕ್ಷೇತ್ರದ ಶ್ರೀ ಕೋಟಾ ನರಸಿಂಹ ಪೈ, ಸಂಗೀತ ಕ್ಷೇತ್ರದ ಶ್ರೀ ಮೆಲ್ವಿನ್ ಪೇರಿಸ್, ಜಾನಪದ ಕ್ಷೇತ್ರದ ಶ್ರೀ ಕೀರ್ತನ ಕೇಸರಿ ಆನಂತ ಯಶವಂತ ಭಟ್, ಪತ್ರಿಕೋದ್ಯಮ ಕ್ಷೇತ್ರದ ಫಾ|ಮಾರ್ಕ್ ವಾಲ್ಡರ್ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ರವರು ಪ್ರಶಸ್ತಿ ಪ್ರಧಾನ ಮಾಡಿದರು, ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯದ ಬಂದರು ಮತ್ತು ಮೀನುಗಾರಿಕಾ ಇಲಾಖೆ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಬಿ. ರಮಾನಾಥ ರೈ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀಮತಿ ರಾಣಿ ಸತೀಶ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕನಾಟಕ ರಾಜ್ಯ ವಿಧಾನಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಎನ್. ಯೋಗೀಶ್ ಭಟ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

4.    ಪುಸ್ತಕ ಪುರಸ್ಕಾರ ಕಾರ್ಯಕ್ರಮ: ಮಂಗಳೂರು
ದಿನಾಂಕ 15-7-2001ರಂದು ಪುಸ್ತಕ ಪುರಸ್ಕಾರ ಸಮಾರಂಭವನ್ನು  ಸಂದೇಶ ಪ್ರತಿಷ್ಠಾನ ಮಂಗಳೂರು   ಇಲ್ಲಿ ನಡೆಸಲಾಯಿತು. ಕೊಂಕಣಿ ಕಾದಂಬರಿಯಾದ ಜಾತಿ ಬಾಯ್ಲೆಂ ಕಾಜಾರ್-ಶ್ರೀ. ವಿಕ್ಟರ್ ರೊಡ್ರಿಗಸ್, ಕವನ-ಪಾಲ್ಗುಣಿಚೊ ವ್ಹಾಳೊ-ಶ್ರೀ, ಎಲ್ಯೆರ್ ತಾಕೊಡೆ, ಸಣ್ಣಕತೆಯಾದ ದುಕಾಂ-ಶ್ರೀ.ಜೆಮ್ಮ್ ಪಡೀಲ್, ನಾಟಕ-ಪರತ್ ಏಕ್ ಪಾವ್ಟಿಂ- ಎಡ್ಡಿ ಸಿಕ್ವೇರಾ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.

5.    ಸಂಸ್ಮರಣೆ ಕುರಿತು ವಿಚಾರ ಸಂಕಿರಣ: ಮಂಗಳೂರು
ದಿ. ವಂ.ಸಿ.ಸಿ.ಎ.ಪೈ  ಹಳಿಯಾಳ ಹಾಗೂ ದಿ. ದಾಮೋದರ ಪ್ರಭು ಸಂಸ್ಮರಣೆ ಕುರಿತು ವಿಚಾರ ಸಂಕಿರಣವನ್ನು ಸಂದೇಶ ಸಭಾಂಗಣದಲ್ಲಿ  ನಡೆಸಲಾಯಿತು.  ದಿ. ವಂ.ಸಿ.ಸಿ.ಎ.ಪೈರವರು ಅಕಾಡೆಮಿ ಪ್ರಶಸ್ತಿ ವಿಜೇತರಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಹೆಸರುಗಳಿಸಿದವರಾಗಿದ್ದು, ಅವರ ಸಾಹಿತ್ಯ ಕ್ಶೇತ್ರದ ಸೇವೆಯ ಬಗ್ಗೆ ವಿಚಾರ ಸಂಕೀರಣ ಮತ್ತು ಸಂಸ್ಮರಣ ಕಾರ್ಯಕ್ರಮ ಹಾಗೂ ಕೊಂಕಣಿ ಭಾಷಿಕರಾಗಿದ್ದು ಕೊಂಕಣಿ ಭಾಷೆಗಾಗಿ ದುಡಿದ ಶ್ರೀ ಬಿ. ದಾಮೋದರ ಪ್ರಭುರವರ ಸಂಸ್ಮರಣ ದಿನಾಚರಣೆಯನ್ನು ನಡೆಸಲಾಯಿತು.

6.ಬಾಕಿ ಬಾಬ ಬೋರಕಾರ ಪುಸ್ತಕ ಬಿಡುಗಡೆ ಸಮಾರಂಭ - ಮಂಗಳೂರು.
ಬಾಕಿಬಾಬ ಬೋರಕಾರ ಕೃತಿಯು ಮೂಲತಃ ದೇವನಾಗರಿ ಲಿಪಿಯಲ್ಲಿದ್ದು ಅದನ್ನು ಕನ್ನಡ ಲಿಪಿಗೆ ಲಿಪ್ಯಂತರ ಮಾಡಿ, ಮುದ್ರಿಸಲಾಗಿದ್ದು, ಆ ಕೃತಿಯ ಉದ್ಗಾಟನ ಸಮಾರಂಭವನ್ನು ಮಂಗಳೂರಿನ ಸಂದೇಶ ಸಭಾಂಗಣದಲ್ಲಿ ನಡೆಸಲಾಯಿತು.

7.ಕೊಂಕಣಿ ಮಕ್ಕಳ  ಪ್ರತಿಭಾ ಸ್ಪರ್ಧೆ: ಸಿದ್ದಕಟ್ಟೆ
 ದಿನಾಂಕ 5-8-2001ರಂದು ಕೊಂಕಣಿ ಮಕ್ಕಳ  ಪ್ರತಿಭಾ ಸ್ಪರ್ಧೆಯು ಬಂಟ್ವಾಳದ ಸಿದ್ದಕಟ್ಟೆಯ ಕೊಂಕ್ಣಿ ಈಶ್ಟ್ ಇವರ ಸಹಯೋಗದಲ್ಲಿ  ಸಿದ್ದಕಟ್ಟೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕೊಂಕಣಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಅಕಾಡೆಮಿ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

8. ವಿಚಾರಗೋಷ್ಠಿ :-ಕುಮಟಾ
ದಿನಾಂಕ 6-8-2001ರಂದು ಕೊಂಕಣಿ ಸಮಾಂತರ ಶಬ್ದಕೋಶದಲ್ಲಿ ಅಳವಡಿಸಲಾದ ಶಬ್ದಗಳ ಕುರಿತು ಒಂದು ವಿಚಾರಗೋಷ್ಟಿಯನ್ನು ಕುಮಟದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮಾಂತರ ಶಬ್ದಕೋಶ  ಹಸ್ತ ಪ್ರತಿಯನ್ನು ಅಕಾಡೆಮಿಗೆ  ಹಸ್ತಾಂತರ ಮಾಡುವ ಕಾರ್ಯಕ್ರಮವನ್ನು ನಡೆಸಲಾಯಿತು.

9.ಅಕಾಡೆಮಿ ಪ್ರಕಟಣೆಗಳ ಬಿಡುಗಡೆ ಸಮಾರಂಭ: ಮಂಗಳೂರು
 ದಿನಾಂಕ 30-9-2001ರಂದು ಮಂಗಳೂರಿನ ನಳಂದ ವಿದ್ಯಾಲಯದ ಸಭಾಂಗಣದಲ್ಲಿ, ಕೊಂಕಣಿ ಮಹಾ ಮಾನೆಸ್ತ್ ಲೇಖನಮಾಳಾದ 4 ಪುಸ್ತಕಗಳು, ಫಾ. ಸಿ.ಸಿ.ಎ. ಪೈ, ಕೊಂಕಣಿ  ಶಿಕ್ಷಕರ ಕೈಪಿಡಿ ಕೊಂಕಣಿ ಕಳೊ, ಸಮಾಂತರ ಶಬ್ದಕೋಶ  ಬಿಡುಗಡೆ ಸಮಾರಂಭವನ್ನು ಅಚರಿಸಲಾಯಿತು. ಈ ಕಾರ್ಯಕ್ರಮದ ಅಧಕ್ಶತೆಯನ್ನು ಅಕಾಡೆಮಿಯ ಅಧ್ಯಕ್ಷರು ವಹಿಸಿದ್ದರು.

10. ಅಕಾಡೆಮಿ ಅಧ್ಯಕ್ಷತೆ ಹಸ್ತಾಂತರ - ಮಂಗಳೂರು
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಸಮಿತಿಯು 24-10-2001 ರಂದು ಪುನರರಚಿಸಿದ್ದು, ಸರಕಾರದ ಅದೇಶದಂತೆ ನೂತನ ಸಮಿತಿಯು ಅಧಿಕಾರವನ್ನು ಹಸ್ತಾಂತರಿಸುವ ಕಾರ್ಯಕ್ರಮವನ್ನು ಮಂಗಳೂರಿನ ಅಕಾಡೆಮಿ ಕಛೇರಿಯಲ್ಲಿ ಹಮ್ಮಿಕೊಳ್ಳಲಾಯಿತು.

11.ವಿಚಾರಗೋಷ್ಠಿ - ಕುಮಟಾ
ದಿನಾಂಕ 7-11-01 ಮತ್ತು 8-11-01ರಂದು ಕೊಂಕಣಿ ಸಾಹಿತ್ಯದಲ್ಲಿ  ಪ್ರವಾಸ ಕಥನ ಮತ್ತು ಲೇಖನಗಳು ಕುರಿತು ವಿಚಾರಗೋಷ್ಠಿಯನ್ನು ಕುಮಟಾದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಊದ್ಗಾಟಣೆಯನ್ನು ಶಿರಸಿ೦ii ಕೊಂಕಣಿ ಭಾಷಿಕರಾದ ಶ್ರೀ ವಿ.ಎಸ್.ಸೋಂದೆಯವರು ನಡೆಸಿದರು. ಈ ಸಂದರ್ಭದಲ್ಲಿ ಕೊಂಕಣಿ ಸಣ್ಣಕತೆಗಳು, ಕೊಂಕಣಿ ಕವನ,  ಪ್ರವಾಸಕಥನ ಮತ್ತು ಪ್ರಬಂದಗಳ ಕುರಿತು ವಿಚಾರಗೋಷ್ಟಿ ನಡೆಸಲಾಯಿತು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರು ವಹಿಸಿದ್ದರು.

12. ಕೊಂಕಣಿ ಸಂಸ್ಕೃತಿ ದಿನ ಆಚರಣೆ – ಕುಂದಾಪುರ
ದಿನಾಂಕ  27-12-2001ರಂದು ಕುಂದಾಪುರದಲ್ಲಿ ಕುಂದ ಕರಾವಳಿ ಉತ್ಸವದಲ್ಲಿ ಕೊಂಕಣಿ ಸಂಸ್ಕೃತಿ ದಿನ ಆಚರಣೆಯನ್ನು ಅಚರಿಸಲಾಯಿತು.  ಈ ಕಾರ್ಯಕ್ರಮಕ್ಕೆ ಕುಂದಾ ಕರಾವಳಿ ಸಂಸ್ಥೆಯೊಂದಿಗೆ ಸಹಯೋಗದಲ್ಲಿ ನಡೆಸಲಾಯಿತು. 

13. ಶಾಲಾ ಮುಖ್ಯಸ್ಥರೊಂದಿಗೆ ವಿಚಾರ ವಿನಿಮಯ ಕಾರ್ಯಕ್ರಮ: ಮಂಗಳೂರು,ಉಡುಪಿ, ಪುತ್ತೂರು
 ಶಾಲೆಗಳಲ್ಲಿ ಕೊಂಕಣಿ ಭಾಷೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸುವ ಕುರಿತು ಶಾಲಾ ಮುಖ್ಯೋಪಾಧ್ಯಾಯರುಗಳ ಮತ್ತು ಸಂಚಾಲಕರುಗಳ ಜೋತೆ ವಿಚಾರ ವಿನಿಮಯ ಕಾರ್ಯಕ್ರಮವನ್ನು ಕ್ರಮವಾಗಿ ದಿನಾಂಕ 8-1-02ರಂದು ಮಂಗಳೂರು, 17-1-02ರಂದು ಉಡುಪಿ ಹಾಗೂ 24-1-02ರಂದು ಪುತ್ತೂರು.ಅಕಾಡೆಮಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮತ್ತು ಶಾಲಾ ಮುಖ್ಯಸ್ಥ ಸಹಕಾರದಲ್ಲಿ ನಡೆಸಲಾಯಿತು.

14. ಶಿಕ್ಷಕರ ತರಬೇತಿ ಶಿಬಿರ:
 ಕೊಂಕಣಿ  ಶಿಕ್ಷಕರ ಕೈಪಿಡಿ ಕೊಂಕಣಿ ಕಳೊ ಶಾಲೆಯಲ್ಲಿ ಅಳವಡಿಸುವ ಕುರಿತು ಶಿಕ್ಷಕರ ತರಬೇತಿ ಶಿಬಿರಗಳನ್ನು ದಿನಾಂಕ 12-1-02ರಂದು ಮಂಗಳೂರು, ದಿನಾಂಕ 21-1-02ರಂದು ಉಡುಪಿ, ದಿನಾಂಕ 30-1-2002ರಂದು ಪುತ್ತೂರು.ಸ್ಥಳೀಯ ಶಾಲಾ ಮುಖ್ಯಸ್ಥರ ಸಹಕಾರದಲ್ಲಿ ಅಕಾಡೆಮಿ ನೇತೃತ್ವದಲ್ಲಿ ನಡೆಸಲಾಯಿತು.

15. ಖಾರ್ವಿ ಜಾನಪದ ವಿಚಾರಗೋಷ್ಠಿ - ಹೊನ್ನಾವರ.
ದಿನಾಂಕ 27-1-2002ಕೊಂಕಣ ಖಾರ್ವಿ ಜಾನಪದ ವಿಚಾರಗೋಷ್ಟಿ ಕಾರ್ಯಕ್ರಮವು ಹೊನ್ನಾವರದಲ್ಲಿ ನಡೆಸಲಾಯಿತು. ಅಕಾಡೆಮಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಸಲಾದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಶ್ರೀ.ಜೆ.ಡಿ. ನಾಯ್ಕರವರು ಉದ್ಘಟಿಸಿದರು.  ಖಾರ್ವಿ ಜನಾಂಗದವರ ಜಾನಪದ ವೈವಿದ್ಯಗಳ ಬಗ್ಗೆ ವಿಚಾರಗೋಷ್ಟಿ ನಡೆಸಲಾಯಿತು.
 ಈ ಕಾರ್ಯಕ್ರಮಕ್ಕೆ ಉ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಆರ್. ಎಸ್. ರಾಯ್ಕರ್, ಕ.ಕ. ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾದ ಶ್ರೀ ಪ್ರಮೋದ್ ಮಧ್ವರಾಜ್, ಡಾ| ಜಮೀರುಲ್ಲಾ ಷರೀಫ್, ಶ್ರೀ ರಾಮಚಂದ್ರ ಖಾರ್ವಿ(ಕಾರ್ಯದರ್ಶಿ, ಅ.ಕ.ಕೊಂ. ಮಹಾಜನ ಸಂಘ, ಕುಂದಾಪುರ, ಶ್ರೀ ವಸಂತ್ ಕರ್ಕಿಕರ್(ಉಪಾಧ್ಯಕ್ಷ, ಅ.ಕೋ.ಆ. ಬ್ಯಾಂ. ಹೊನ್ನಾವರ) ಶ್ರೀ ಘನಶ್ಯಾಮ ಮೇಸ್ತ(ಮುಂಬೈ ಹೈಕೋರ್ಟ್ ಕಮೀಷನರ್), ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರರಾದ ಶ್ರೀ ಸಿ. ರಂಗಪ್ಪ, ಶ್ರೀ ವೆಂಕಟೇಶ ಕೆ. ಮೇಸ್ತ (ಪತ್ರಕರ್ತ್ ಆನಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚೆ ಸಹ ಸದಸ್ಯ, ಮಂಕಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

16.ಕೊಂಕಣಿ ದಿವಸಾಚರಣೆ: ಮಂಗಳೂರು
 ಜಿ.ಎಸ್.ಬಿ. ಮಹಿಳಾ ರಂಗದವರ ನಡೆಸುವ ಕೊಂಕಣೀ ದಿನಾಚರಣೆ ಕಾರ್ಯಕ್ರಮಕ್ಕೆ ಅಕಾಡೆಮಿಯು  ಸಹಯೋಗ ನೀಡಿ ಸಹಕರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಕೊಂಕಣಿ ಪ್ರಹಸನ ಮತ್ತು ಇಂದ್ರಜಾಲ ಹಾಗೂ ಮಹಿಳಾ ವೃಂದದವರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವು ದಿನಾಂಕ 10-02-2002ರಂದು ಸಂಜೆ 3-30 ಗಂಟೆಗೆ ಶ್ರೀ ದ್ವಾರಕಾನಾಥ ಸಭಾಗೃಹ, ಗೋಕರ್ಣ ಮಠ, ರಥಬೀದಿ, ಮಂಗಳೂರು ಇಲ್ಲಿ ಜರಗಿತು. ಮೆನೇಜಿಂಗ ಡೈರೆಕ್ಟರ್-ಕೆನರಾ ಸೇಲ್ಸ್,  ಶ್ರೀ ಎಲ್ ವಿ. ಕುಡ್ವರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

17.ಶಿಕ್ಷಕರ ತರಬೇತಿ ಶಿಬಿರ: ಕಾರವಾರ
ಕೊಂಕಣಿ  ಶಿಕ್ಷಕರ  ಕೈಪಿಡಿ ಕೊಂಕಣಿ ಕಳೊ ಶಾಲೆಯಲ್ಲಿ ಅಳವಡಿಸುವ ಕುರಿತು ಶಿಕ್ಷಕರ ತರಬೇತಿ ಶಿಬಿರವನ್ನು ದಿನಾಂಕ 16-3-02ರಂದು ಕಾರವಾರದ ಕೆ.ಡಿ.ಡಿ.ಸಿ. ಟ್ರೈನಿಂಗ್ ಸೆಂಟರ್‌ಇಲ್ಲಿ ಅಕಾಡೆಮಿಯ ನೇತೃತ್ವದಲ್ಲಿ ನಡೆಸಲಾಯಿತು.

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]