2008-09ನೇ ಸಾಲಿನಲ್ಲಿ ನಡೆದ ಕಾರ್ಯಕ್ರಮಗಳ ವಿವರ :

1.  ಮಂಗಳೂರಿನಲ್ಲಿ ಜರಗಿದ ಶಾಲೆಗಳಲ್ಲಿ ಕೊಂಕಣಿ ವಿಜಯೋತ್ಸವ ಸಮಾರಂಭ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಪ್ರಚಾರ್ ಸಂಚಾಲನ್ ಇದರ ಸಹಯೋಗದಲ್ಲಿ ದಿನಾಂಕ 9-4-2008ರಂದು ಅಪರಾಹ್ನ 1-00 ಗಂಟೆಗೆ  ಮಂಗಳೂರಿನ  ಶಕ್ತಿನಗರದ  ಕಲಾಂಗಣ ನಲ್ಲಿ ಶಾಲೆಯಲ್ಲಿ ಕೊಂಕಣಿ ವಿಜಯೋತ್ಸವ ಸಮಾರಂಭವು ಜರಗಿತು. ಈ ಕಾರ್ಯಕ್ರಮಕ್ಕೆ  ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಗಣೇಶ್ ಹೊಸಬೆಟ್ಟು ಇವರು ಮುಖ್ಯ ಅತಿಥಿಗಳಾಗಿದ್ದರು. ಉರ್ಸುಲಾಯ್ನ್ ಫ್ರಾನ್ಸಿಸ್ಕನ್ ಧರ್ಮ ಪಂಗಡದ ಮುಖಸ್ಥರಾದ ಗೌರವಾನ್ವಿತ ಧರ್ಮಭಗಿಣಿ ಸಿ| ಡೋರಿನ್ ಡಿಸೋಜ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶ್ರೀಮತಿ ಮರಿಯಮ್ಮ ಥೋಮಸ್, ಶ್ರೀ ಫೆಬಿಯನ್ ಕುಲಾಸೊ ಇವರುಗಳು ಗೌರವ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎರಿಕ್ ಒಝೇರಿಯೊರವರು ವಹಿಸಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್.ಎಚ್. ಶಿವರುದ್ರಪ್ಪರವರು ವಂದನಾರ್ಪಣೆಗೈದರು. ಕೊಂಕಣಿ ಪ್ರಚಾರ್ ಸಂಚಲನದ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ಟೆಲಿನೊರವರು ಸ್ವಾಗತಿಸಿದರು. ಶ್ರೀ ಟೈಟಾಸ್ ನೊರೊನ್ಹರವರು  ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ದಿ| ಜೆಸ್ಸಿ ಕ್ಯಾಸ್ಟೆಲಿನೊ ಶ್ರೇಷ್ಠ ಕೊಂಕಣಿ ಶಿಕ್ಷಕಿ ಪ್ರಶಸ್ತಿಯನ್ನು ಬಜಪೆ ಪರೋಕಿಯಲ್ ಪ್ರಾಥಮಿಕ ಶಾಲೆಯ ಕೊಂಕಣಿ ಶಿಕ್ಷಕಿಯಾದ ಶ್ರೀಮv ಕೊಸೆಸ್ ಡಿಸೋಜರವರಿಗೆ  ನೀಡಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಪ್ರತಿಯೊಂದು ಶಾಲೆಯಲ್ಲಿ ಕೊಂಕಣಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರಾಜ್ಯದಲ್ಲಿ  ಮೊದಲ 10 ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಪಠ್ಯಪುಸ್ತಕ ತಯಾರಿಯಲ್ಲಿ ದುಡಿದವರಿಗೆ ಕೂಡ ಸನ್ಮಾನಿಸಲಾಯಿತು. ಕೊಂಕಣಿ ಶಿಕ್ಷಕ/ಶಿಕ್ಷಕಿಯರಿಗೆ ಕೊಂಕಣಿ ಭತ್ತೆ ವಿತರಣೆ ಮಾಡಲಾಯಿತು. ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

೨. ದಿನಾಂಕ 07-06-2008ರಂದು ಜರಗಿದ ಕೊಂಕಣಿ ಶಿಕ್ಷಕರ ಕಾರ್ಯಗಾರ
 ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಪ್ರಚಾರ್ ಸಂಚಾಲನ್ ಇವರ ಸಹಯೋಗದಲ್ಲಿ ದಿನಾಂಕ ೦೭-೦೬-೨೦೦೮ರಂದು ಶನಿವಾರ ಮಂಗಳೂರಿನ ಶಕ್ತಿನಗರದ ಕಲಾಂಗಣ್‌ನಲ್ಲಿ ಪೂರ್ವಾಹ್ನ ೯:೩೦ರಿಂದ ಅಪರಾಹ್ನ ೧:೩೦ರವರೆಗೆ 6ನೇ ಮತ್ತು 7ನೇ ತರಗತಿಗೆ ಕೊಂಕಣಿ ಭಾಷೆಯನ್ನು ಕಲಿಸುವ ಶಿಕ್ಷಕ/ಶಿಕ್ಷಕಿಯರಿಗೆ ಒಂದು ದಿನದ ಕಾರ್ಯಗಾರವು ಜರಗಿತು. ಈ ಕಾರ್ಯಗಾರದ ಉದ್ಘಾಟನೆಯನ್ನು ಕೊಂಕಣಿ ಪ್ರಚಾರ್ ಸಂಚಾಲನ್ ಇದರ ಅಧ್ಯಕ್ಷರಾದ ಶ್ರೀ ರೊನಾಲ್ಡ್ ಕ್ಯಾಸ್ಟೆಲಿನೊರವರು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು. ಕೊಂಕಣಿ ಲೇಖಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಎಡ್ವರ್ಡ್ ನಜರೆತ್, ಕೊಂಕಣಿ ಕವಿಗಳಾದ ಶ್ರೀ ಮೆಲ್ವಿನ್ ರೊಡ್ರಿಗಸ್,ಮಾಂಡ್ ಸೊಭಾಣ್ ಅಧ್ಯಕ್ಷರಾದ ಶ್ರೀ ಲುವಿಸ್ ಜೆ.ಪಿಂಟೊ ಇವರುಗಳು ಅತಿಥಿಗಳಾಗಿ ಭಾಗವಹಿಸಿದರು ಹಾಗೂ ಶ್ರೀ ಮೆಲ್ವಿನ್ ರೊಡ್ರಿಗಸ್‌ರವರು ಶಾಲೆಯಲ್ಲಿ ಕೊಂಕಣಿಯ ಮಹತ್ವವನ್ನು ನೀಡಿದರು. ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಈ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದರು. ಕೊಂಕಣಿ ಪಠ್ಯಪುಸ್ತಕ ತಯಾರಿ ತಜ್ಞರುಗಳಾದ ಶ್ರೀ ಸ್ಟೀವನ್ ಕ್ವಾಡ್ರಸ್ ಹಾಗೂ ಫಾ|ವಲೇರಿಯನ್ ಫೆರ್ನಾಂಡಿಸ್‌ರವರು ಕೊಂಕಣಿ ಶಿಕ್ಷಕ/ಶಿಕ್ಷಕಿಯರಿಗೆ ವ್ಯಾಕರಣ ಹಾಗೂ ಕೊಂಕಣಿ ಪಠ್ಯಪುಸ್ತಕದ ಬಗ್ಗೆ ಮಾಹಿತಿಯನ್ನು ನೀಡಿದರು.ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್.ಎಚ್.ಶಿವರುದ್ರಪ್ಪರವರು ವಂದನಾರ್ಪಣೆಗೈದರು.
2007-08ನೇ ಸಾಲಿನಲ್ಲಿ 93 ಶಾಲೆಗಳಲ್ಲಿ ಕೊಂಕಣಿಯನ್ನು ಕಲಿಸಲಾಗಿತ್ತು. ಪ್ರಸ್ತುತ ಸಾಲಿನಲ್ಲಿ 8 ಶಾಲೆಗಳು ಹೊಸದಾಗಿ ಸೇರ್ಪಡೆಗೊಂಡಿದ್ದು ಒಟ್ಟು 101 ಶಾಲೆಗಳಲ್ಲಿ ಕೊಂಕಣಿಯನ್ನು ಕಲಿಸಲಾಗುವುದು. ಈ ಶಿಕ್ಷಕರ ಕಾರ್ಯಗಾರಕ್ಕೆ 101 ಶಾಲೆಗಳ ಕೊಂಕಣಿ ಶಿಕ್ಷಕ/ಶಿಕ್ಷಕಿಯರು ಕಾರ್ಯಗಾರದಲ್ಲಿ ಭಾಗವಹಿಸಿದರು.  ಹಾಗೂ ಕೊಂಕಣಿ ಕಲಿಯುವ ವಿದ್ಯಾರ್ಥಿಗಳಿಗೆ ಕೊಂಕಣಿ ಪಠ್ಯಪುಸ್ತಕ,1 ಪೆನ್ನು, ಹಾಗೂ 2 ನೋಟು ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು.

೩. ೭ನೇ ತರಗತಿಯ ಕೊಂಕಣಿ ಶಿಕ್ಷಕ/ಶಿಕ್ಷಕಿಯರಿಗೆ ಏರ್ಪಡಿಸಿದ ಶಿಕ್ಷಕರ ಕಾರ್ಯಾಗಾರ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಡಯಟ್(ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಇಲಾಖೆ,ಮಂಗಳೂರು) ಇವರ ಸಹಯೋಗದಲ್ಲಿ ೨೦೦೮-೦೯ನೇ ಸಾಲಿನಲ್ಲಿ 7ನೇ ತರಗತಿಗೆ ಕೊಂಕಣಿಯನ್ನು ಕಲಿಸುವ ಕೊಂಕಣಿ ಶಿಕ್ಷಕ/ಶಿಕ್ಷಕಿಯರಿಗೆ 7ನೇ ತರಗತಿಯ ಕೊಂಕಣಿ ಪಠ್ಯಪುಸ್ತಕದಲ್ಲಿ ತೊಡಕೆಂದೆನಿಸುವ ವಿಷಯದ ಬಗ್ಗೆ ಹಮ್ಮಿಕೊಂಡ ಒಂದು ದಿನದ ಕಾರ್ಯಗಾರವು ದಿನಾಂಕ 13-11-2008ರಂದು ಪೂರ್ವಾಹ್ನ 9:30ರಿಂದ ಸಂಜೆ 4:30ರವರೆಗೆ ಮಂಗಳೂರಿನ ಬಜ್ಜೋಡಿಯ ಶಾಂತಿಕಿರಣ್  ಸಭಾಂಗಣದಲ್ಲಿ ಜರಗಿತು. ಪೂರ್ವಾಹ್ನ 9:30 ಗಂಟೆಗೆ ಶಿಕ್ಷಕರ ಕಾರ್ಯಗಾರದ ಉದ್ಘಾಟನೆಯನ್ನು ಡಯಟ್(ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಇಲಾಖೆ,ಮಂಗಳೂರು) ಪ್ರಾಂಶುಪಾಲರಾದ ಶ್ರೀಮತಿ ಫಿಲೊಮಿನ ಲೋಬೊರವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಕೊಂಕಣಿ ಪ್ರಚಾರ್ ಸಂಚಾಲನ್‌ನ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ಟೆಲಿನೊರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
 ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್.ಎಚ್.ಶಿವರುದ್ರಪ್ಪರವರು ಅತಿಥಿಗಳನ್ನು ಸ್ವಾಗತಿಸಿದರು. ಅಕಾಡೆಮಿಯ  ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಸ್ಟೀವನ್ ಕ್ವಾಡ್ರಸ್, ಶ್ರೀ ಎರಿಕ್ ಒಝೇರಿಯೊ, ವಂ|ಫಾ|ವಲೇರಿಯನ್ ಫೆರ್ನಾಂಡಿಸ್‌ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀ ವಿಕ್ಟರ್ ಮಥಾಯಸ್‌ರವರು ವಂದನಾರ್ಪಣೆ ಹಾಗೂ ಕಾರ್ಯಕ್ರಮ ನಿರೂಪಣೆಗೈದರು. 7ನೇ ತರಗತಿಗೆ ಕೊಂಕಣಿ ಕಲಿಸುವ ಶಿಕ್ಷಕ/ಶಿಕ್ಷಕಿಯರು ಈ ಶಿಕ್ಷಕರ ಕಾರ್ಯಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

೪. ಶಾಲೆಯಲ್ಲಿ ಕೊಂಕಣಿಯನ್ನು ೩ನೇ ಭಾಷೆಯಾಗಿ ಅಳವಡಿಸಿದ ಹಿನ್ನೆಲೆಯಲ್ಲಿ ಈ ಹಿಂದೆ ೬ ಮತ್ತು ೭ನೇ ತರಗತಿಯ ಕೊಂಕಣಿ ಪಠ್ಯಪುಸ್ತಕಗಳನ್ನು ರಚಿಸಿದಂತೆ ೨೦೦೮-೦೯ನೇ ಸಾಲಿಗೆ ೮ನೇ ತರಗತಿಯ ಕೊಂಕಣಿ ಪಠ್ಯಪುಸ್ತಕವನ್ನು ತಯಾರಿಸಲು ಅನುಕೂಲವಾಗುವಂತೆ ಪಠ್ಯಪುಸ್ತಕ ಸಮಿತಿಯ ನೆರವಿನೊಂದಿಗೆ ೮ನೇ ತರಗತಿಯ ಕೊಂಕಣಿ ಪಠ್ಯಪುಸ್ತಕವನ್ನು  ತಯಾರಿಸಿ ಪಠ್ಯಪುಸ್ತಕ ನಿರ್ದೇಶನಾಲಯಕ್ಕೆ ನೀಡಲಾಗಿದೆ.

೫. ಕರ್ನಾಟಕ ರಾಜ್ಯ ಕೊಂಕಣಿ ಲೋಕ್‌ವೇದ್ ನಾಚ್ ಕಾರ್ಯಕ್ರಮವು ಜರಗಿದ ಬಗ್ಗೆ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ವಿದ್ಯಾರಂಗ ಮಿತ್ರ ಮಂಡಳಿ(ರಿ), ಕುಂದಾಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯ ಕೊಂಕಣಿ ಲೋಕ್‌ವೇದ್ ನಾಚ್ ಕಾರ್ಯಕ್ರಮವು ದಿನಾಂಕ 2009, ಮಾರ್ಚ್ ೧ ಮತ್ತು ೨ರಂದು ವಿದ್ಯಾರಂಗ ವೇದಿಕೆ, ಖಾರ್ವಿಕೇರಿ, ಕುಂದಾಪುರದಲ್ಲಿ ಜರಗಿತು.  ದಿನಾಂಕ ೦೧-೦೩-೨೦೦೯ರಂದು ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಸಂಜೆ ೫:೩೦ ಗಂಟೆಗೆ ಜರಗಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುಂದಾಪುರ ಕ್ಷೇತ್ರದ ಶಾಸಕರಾದ ಮಾನ್ಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಇವರುಗುಮಟೆಯನ್ನು ಬಾರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಗಿ ಅಖಿಲ ಕರ್ನಾಟಕ ಕೊಂಕಣಿ ಖಾರ್ವಿ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ದೇವಪ್ಪ ಖಾರ್ವಿ ಇವರು ಭಾಗವಹಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.  ಮಾರ್ಚ್ ೨ರಂದು  ಸಂಜೆ ೫:೩೦ ಗಂಟೆಗೆ ಕುಂದಾಪುರದ ವಿದ್ಯಾರಂಗ ವೇದಿಕೆಯಲ್ಲಿ ಕೊಂಕಣಿ ಲೋಕ್‌ವೇದ್ ನಾಚ್ ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಜರಗಿತು. ಈ ಸಮಾರೋಪ ಸಮಾರಂಭಕ್ಕೆ ಕರ್ನಾಟಕ ತಿಯೊಲೊಜಿಕಲ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪ್ರೊ. ಎ.ವಿ.ನಾವಡ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿ ಇವರು ವಹಿಸಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್.ಎಚ್.ಶಿವರುದ್ರಪ್ಪ ಇವರು ಧನ್ಯವಾದ ಸಮರ್ಪಣೆಯನ್ನು ನೆರವೇರಿಸಿದರು. ಕೊಂಕಣಿಯ ೩೯ ತಂಡಗಳು ಜಾನಪದ ಪ್ರದರ್ಶನ ನೀಡಿದವು. ಕೊಂಕಣಿ ಭಾಷಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನಮೆಚ್ಚುಗೆ ಪಡೆದವು.

೬.ವಿಶ್ವ ಕೊಂಕಣಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರಗಿದ ಬಗ್ಗೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ವಿವಿಧ ಕೊಂಕಣಿ ಮಹಿಳಾ ಸಂಸ್ಥೆಗಳ ಸಹಕಾರದೊಂದಿಗೆ ವಿಶ್ವ ಕೊಂಕಣಿ ಮಹಿಳಾ ದಿನಾಚರಣೆ ಕಾರ್ಯಕ್ರಮವು ದಿನಾಂಕ ೧೬-೦೩-೨೦೦೯ ರಂದು ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ಡೊನ್ ಬೊಸ್ಕೊ ಸಭಾಂಗಣದಲ್ಲಿ ಪೂರ್ವಾಹ್ನ ೧೨:೦೦ ಗಂಟೆಗೆ ಜರಗಿತು. ಈ ಕಾರ್ಯಕ್ರಮದಲ್ಲಿ ಕೊಂಕಣಿ ಮಾತೃಭಾಷೆಯನ್ನಾಡುವ ಮಹಿಳೆಯರಿಗಾಗಿ(೧೮ ವರ್ಷ ಮೇಲ್ಪಟ್ಟ ಮಹಿಳೆಯರಿಗೆ) ಕೊಂಕಣಿಯ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೊಂಕಣಿಯ ಈ ಕೆಳಗಿನ ವಿವಿಧ ಸ್ಪರ್ಧೆಗಳು ಜರಗಿವೆ.
೧) ತಾಜಾ ಹೂಗಳ ಜೋಡಣೆ
೨) ಅಡುಗೆ ಸ್ಪರ್ಧೆ-೩ ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅ)ಅಕ್ಕಿಯಿಂದ ತಯಾರಿಸಿದ
ಆ)ಮೊಟ್ಟೆ ಇ)ಸಿಹಿತಿಂಡಿ (ಅಕ್ಕಿಯಿಂದ ತಯಾರಿಸಿದ)

ತಾಜಾ ಹೂಗಳ ಜೋಡಣೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕು. ರೊಹಿತಾ ಲೋಬೊ, ದ್ವಿತೀ೦ii ಬಹುಮಾನವನ್ನು ಶ್ರೀಮತಿ ಸುಲತಾ ಕಾಮತ್, ಕಟಪಾಡಿ ಇವರು ಪಡೆದರು.
 ಅಡುಗೆ ಸ್ಪರ್ಧೆಯಲ್ಲಿ ಅ)ಗಿeg.(ಅಕ್ಕಿಯಿಂದ ತಯಾರಿಸಿದ)- ಈ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಶ್ರೀಮತಿ ಸುಲತ ಕಾಮತ್,ಕಟಪಾಡಿ, ದ್ವಿತೀಯ ಬಹುಮಾನವನ್ನು ಶ್ರೀಮತಿ ಅನುರಾಧ ಶೆಣೈ, ತೃತೀಯ ಬಹುಮಾನವನ್ನು ಶ್ರೀಮತಿ ವೀಣಾ ಕಾಮತ್ ಇವರು ಪಡೆದರು.
 ಆ)ಓoಟಿ.ಗಿeg.(ಮೊಟ್ಟೆ/ಅhiಛಿಞeಟಿ)- ಈ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪ್ರೇಮ ಡಿಸೋಜ, ದ್ವೀತೀಯ ಬಹುಮಾನವನ್ನು ಶ್ರೀಮತಿ ಶಾಲಿನಿ ರಾವ್, ತೃತೀಯ ಬಹುಮಾನವನ್ನು ಶ್ರೀಮತಿ ಸುಲತಾ ಕಾಮತ್, ಕಟಪಾಡಿ ಇವರುಗಳು ಪಡೆದರು.
ಇ)ಸಿಹಿತಿಂಡಿ(ಸ್ವೀಟ್) (ಅಕ್ಕಿಯಿಂದ ತಯಾರಿಸಿದ)- ಈ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಶ್ರೀಮv ಲೀಲಾ ಎಸ್. ಕಾಮತ್,ಮಂಗಳೂರು, ದ್ವಿತೀಯ ಬಹುಮಾನವನ್ನು ಶ್ರೀಮತಿ ಪ್ರೇಮ ಡಿಸೋಜ,ಮಂಗಳೂರು, ತೃತೀಯ ಬಹುಮಾನವನ್ನು ಶ್ರೀಮತಿ ಮೀನಾಕ್ಷಿ ಪೈ ಇವರುಗಳು ಪಡೆದರು.     
        
 ಅಪರಾಹ್ನ ೩:೦೦ ಗಂಟೆಗೆ ಉದ್ಘಾಟನಾ ಸಮಾರಂಭವು ಜರಗಿತು. ಈ ಸಮಾರಂಭದ ಉದ್ಘಾಟನೆಯನ್ನು ಸ್ವರಶ್ರೀ ಕಲಾವೇದಿಕೆಯ ಅಧ್ಯಕ್ಷರಾದ ಶ್ರೀಮತಿ ವಸಂತಿ ಆರ್. ನಾಯಕ್‌ರವರು ನೆರವೇರಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಶ್ರೀಮತಿ ಪದ್ಮಾ ಶೆಣೈರವರು ಭಾಗವಹಿಸಿದರು.
ವಿವಿಧ ಕ್ಷೇತ್ರದಲ್ಲಿ ಮಹಿಳೆಯರ ಪ್ರಗತಿ ಈ ಕುರಿತ ವಿಶೇಷ ಉಪನ್ಯಾಸವನ್ನು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್‌ರಾದ ಕು. ಜುಡಿತ್ ಮಸ್ಕರೇನ್ಹಸ್ ಹಾಗೂ ಮಂಗಳೂರು ಆಕಾಶವಾಣಿ ಕೇಂದ್ರದ ಉದ್ಘೋಷಕರಾದ ಶ್ರೀಮತಿ ಶಕುಂತಳ ಆರ್.ಕಿಣಿ ಇವರು ಉಪನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಇದೇ ಸಮಾರಂಭದಲ್ಲಿ ಕೊಂಕಣಿಯ ವಿವಿಧ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಕೊಂಕಣಿ ಮಹಿಳೆಯರಿಗೆ ಸನ್ಮಾನ  ಕಾರ್ಯಕ್ರಮವು ಜರಗಿತು.ಈ ಸನ್ಮಾನ ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಶ್ರೀಮತಿ ವಂದನಾ ಶಾನ್‌ಭಾಗ್, ಸಂಗೀತ ಕ್ಷೇತ್ರದಲ್ಲಿ ಕಸ್ತೂರಿ ಕಾಮತ್, ರಂಗಭೂಮಿ/ಚಲನಚಿತ್ರ ಕ್ಷೇತ್ರದಲ್ಲಿ ಶ್ರೀಮತಿ ದೀಪಾಲಿ ಕಂಬದಕೋಣೆ, ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮತಿ ಕ್ಯಾಥರಿನ್ ರೊಡ್ರಿಗಸ್ ಇವರುಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮೇಲೆ ತಿಳಿಸಿದ ತಾಜಾ ಹೂ ಜೋಡಣಾ ಹಾಗೂ ಅಡುಗೆ ಸ್ಪರ್ಥೆಗಳಲ್ಲಿ  ಬಹುಮಾನ ಪಡೆದವರನ್ನು ಅಕಾಡೆಮಿಯ ಅಧ್ಯಕ್ಷರು ಪ್ರಮಾಣಪತ್ರ ನೀಡಿ ಸಮ್ಮಾನಿಸಿದರು.

ಸಂಜೆ ೪-೦೦ ರಿಂದ ೪-೩೦ ವರೆಗೆ ಕೊಂಕಣಿ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮವು ಜರಗಿತು. ಈ ಸಂವಾದ ಕಾರ್ಯಕ್ರಮದಲ್ಲಿ ೧.ಶ್ರೀಮತಿ ಅನಿತಾ ಕಿಣಿ- ವಕೀಲೆ, ೨.ಶ್ರೀಮತಿ ವಂದನಾ ಶಾನ್‌ಭಾಗ್-ಕ್ರೀಡಾಪಟು, ೩.ಶ್ರೀಮತಿ ನಿರ್ಮಲ ಕಾಮತ್-ಉದ್ಯಮಿ,೪. ಶ್ರೀಮತಿ ಜೂಡಿ ಪಿಂಟೊ-ಉಪನ್ಯಾಸಕಿ ಇವರುಗಳು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಮಹಿಳೆಯರ ಸಮಸ್ಯೆಗಳನ್ನು ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಿದರು.

ಸಂಜೆ ೪-೩೦ ರಿಂದ  ೮-೦೦ರವರೆಗೆ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು. ಮೊದಲಿಗೆ ಕೊಂಕಣಿ ಭರತನಾಟ್ಯ ನೃತ್ಯವನ್ನು ಮಂಗಳೂರಿನ ಸಂದೇಶ ಪ್ರತಿಷ್ಠಾನದ ವಿದ್ಯಾರ್ಥಿಯರು ಪ್ರದರ್ಶಿಸಿದರು. ಸಂಗೀತ ಕಾರ್ಯಕ್ರಮವನ್ನು ಕು.ಸ್ವಾತಿ ಶೇಟ್‌ಇವರು ನಡೆಸಿಕೊಟ್ಟರು. ಕೊಂಕಣಿ ಸಾಂಸ್ಕೃತಿಕ ವೈವಿಧ್ಯವನ್ನು ಕು.ನೀತಾ ಕಾಮತ್ ಮತ್ತು ಬಳಗ, ಪುತ್ತೂರು, ಇವರಿಂದ ಪ್ರದರ್ಶಿತವಾಯಿತು..ಕೊಂಕಣಿ ನಾಟಕದಲ್ಲಿ ಜಾನಪದ ರಾಮಾಯಣವನ್ನು ಮಂಜೇಶ್ವರದ ಶ್ರೀಮತಿ ಪ್ರಭಾ ನಾಯಕ್ ಮತ್ತು ಬಳಗ, ಇವರು ಪ್ರದರ್ಶಿಸಿದರು.ಕೊಂಕಣಿ ಜಾನಪದ ಕಾರ್ಯಕ್ರಮವನ್ನು ಶ್ರೀಮತಿ ಸುಲತಾ ಕಾಮತ್‌ರವರು ಪ್ರದರ್ಶಿದರು. ಕೊಂಕಣಿ ಏಕಪಾತ್ರಾಭಿನಯವನ್ನು ಶ್ರೀಮತಿ ವಿನ್ನಿ ಫೆರ್ನಾಂಡಿಸ್‌ರವರು ಪ್ರದರ್ಶಿಸಿದರು. ಯಕ್ಷಗಾನವನ್ನು ಶ್ರೀಮತಿ ದೀಪಾಲಿ ಕಂಬದಕೋಣೆ ಇವರು ಪ್ರದರ್ಶಿಸಿದರು.

ಮಾರೂರು ಮೈಥಿಲಿ ಪೈ ಮತ್ತು ತಂಡದಿಂದ ಕೊಂಕಣಿ ಸಂಗೀತ ಸೌರಭ(ಕೊಂಕಣಿ ಪದಾಂ ಮೊಗ್ರೆ) ಸಂಗೀತ ಕಾರ್ಯಕ್ರಮವು ಪ್ರದರ್ಶನಗೊಂಡಿತು. ಈ ಎಲ್ಲಾ ಕಾರ್ಯಕ್ರಮಕ್ಕೆ ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಶ್ವ ಕೊಂಕಣಿ ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳು ಜನಮೆಚ್ಚುಗೆ ಪಡೆದವು.

7. ದಿನಾಂಕ 04-04-2009ರಂದು ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ಜರಗಿದ ಕೊಂಕಣಿ  ಶಿಕ್ಷಣ ಸಂಭ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಪ್ರಚಾರ್ ಸಂಚಾಲನ ಇವರ ಜಂಟಿ ನೇತೃತ್ವದಲ್ಲಿ ದಿನಾಂಕ ೦೪-೦೪-೨೦೦೯ರಂದು ಪೂರ್ವಾಹ್ನ ೧೦:೩೦ ಗಂಟೆಗೆ ಮಂಗಳೂರಿನ ಶಕ್ತಿನಗರ ಕಲಾಂಗಣದಲ್ಲಿ ಶಾಲೆಯಲ್ಲಿ ೬ ಮತ್ತು ೭ನೇ ತರಗತಿಗೆ ಕೊಂಕಣಿ ಕಲಿಸುವ ಶಿಕ್ಷಕ/ಶಿಕ್ಷಕಿಯರಿಗೆ ಮತ್ತು ಕೊಂಕಣಿ ಕಲಿಯುವ ಮಕ್ಕಳಿಗೆ ವಾರ್ಷಿಕ ದಿನವಾಗಿ ಕೊಂಕಣಿ ಶಿಕ್ಷಣ ಸಂಭ್ರಮವನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ೨೦೦೮-೦೯ನೇ ಸಾಲಿನಲ್ಲಿ ೬ ಮತ್ತು ೭ನೇ ತರಗತಿಯಲ್ಲಿ ಕೊಂಕಣಿಯಲ್ಲಿ ೧೦೦ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಅದೇ ರೀತಿ ೯೯ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕೊಂಕಣಿ ಪುಸ್ತಕಗಳನ್ನು  ನೀಡಿ ಪುರಸ್ಕರಿಸಿದರು.  ಈ ಕಾರ್ಯಕ್ರಮದಲ್ಲಿ ೨೦೦೮-೦೯ನೇ ಸಾಲಿನ ಅತ್ಯುತ್ತಮ ಕೊಂಕಣಿ ಶಿಕ್ಷಕಿ ಪ್ರಶಸ್ತಿಯನ್ನು ಕಾರ್ಕಳದ ಶಿಕ್ಷಕರಾದ ಶ್ರೀ ರೊಬರ್ಟ್ ಮಿನೇಜಸ್ ರವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ಫಿಲೊಮಿನಾ ಲೋಬೊರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಕಾರ್ಯ ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅತಿಥಿಗಳಾಗಿ ಮಾಂಡ್ ಸೊಭಾಣ್ ಗುರ್ಕಾರರಾದ ಶ್ರೀ ಎರಿಕ್ ಒಝೇರಿಯೊ, ಕಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿಗಳಾದ ಫಾ| ವಿಲ್ಸನ್ ವೈಟಸ್ ಡಿಸೋಜ, ರೊಯ್ ಕ್ಯಾಸ್ಟೆಲಿನೊ, ಎಡ್ವರ್ಡ್ ನಜರೆತ್ ಇವರುಗಳು ಉಪಸ್ಥಿತರಿದ್ದರು.

೮. ಪಿಲಿಕುಳ ನಿಸರ್ಗಧಾಮ ಬಯಲು ರಂಗಮಂದಿರದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ  ಜರಗಿದ ಕೊಂಕಣಿ ಸಂಗೀತ ರಸಮಂಜರಿ ಮತ್ತು ಮಿಮಿಕ್ರಿ ಕಾರ್ಯಕ್ರಮ.
       ಕರ್ನಾಟಕ  ಕೊಂಕಣಿ  ಸಾಹಿತ್ಯ  ಅಕಾಡೆಮಿ ಹಾಗೂ ಪಿಲಿಕುಳ ನಿಸರ್ಗಧಾಮ ಸೊಸೈಟಿ(ರಿ.)  ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಬಯಲು ರಂಗಮಂದಿರದಲ್ಲಿ ವಾರಾಂತ್ಯ ಸಂಸ್ಕೃತಿ ಸಂಜೆ ಕಾರ್ಯಕ್ರಮವು ದಿನಾಂಕ ೦೫-೦೪-೨೦೦೯ರಂದು ಸಂಜೆ ೫-೦೦ರಿಂದ ೭-೦೦ರವರೆಗೆ ಜರಗಿತು. ಈ ಸಂಸ್ಕೃತಿ ಸಂಜೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿಯವರು ಅಕಾಡೆಮಿಗಳು ಹೊಸ ಹೊಸ ಪ್ರಾಕೃತಿಕ ರಮ್ಯತಾಣಗಳಲ್ಲಿ ಕಾರ್ಯಕ್ರಮ ನಡೆಸುತ್ತಾ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಮ್ಮ ಅಭಿಪ್ರಾಯವನ್ನು ಸಭಿಕರ ಮುಂದೆ ತಿಳಿಸಿದರು. ಪಿಲಿಕುಳ ನಿಸರ್ಗಧಾಮದ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ. ವಾಮನ ನಂದಾವರ ಅತಿಥಿಗಳನ್ನು ಮತ್ತು ಕಲಾವಿದರನ್ನು ಸ್ವಾಗತಿಸಿ ವಾರಾಂತ್ಯ ಸಂಸ್ಕೃತಿ ಸಂಜೆ ಕಾರ್ಯಕ್ರಮಗಳ ಉದ್ದೇಶವನ್ನು ವಿವರಿಸುತ್ತಾ ಅಕಾಡೆಮಿಗಳು ಮತ್ತು ಸ್ಥಳೀಯ ಸಂಘಟಣೆಗಳು ಪಿಲಿಕುಳ ಬಯಲು ರಂಗಮಂದಿರದ ವಾರಾಂತ್ಯ ಸಂಸ್ಕೃತಿ ಸಂಜೆ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಲು ಮುಂದೆ ಬರಬೇಕೆಂದು ಕರೆನೀಡಿದರು. ಕೊನೆಯಲ್ಲಿ ಕಲಾವಿದ ಶ್ರೀ ಮುರಳೀಧರ ಕಾಮತ್ ಉಪಕಾರ ಸ್ಮರಣೆ ಸಲ್ಲಿಸಿದರು.

೯. ಡಾ| ದಿನಕರ ದೇಸಾಯಿ ಜನ್ಮ ಶತಮಾನೋತ್ಸವ ಆಚರಣೆ ಕಾರ್ಯಕ್ರಮದ ಬಗ್ಗೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಅಂಕೋಲಾದ ಡಾ. ದಿನಕರ ದೇಸಾಯಿ ಜಂಟಿ ಆಶ್ರಯದಲ್ಲಿ ಕಾರವಾರದ ಕಡವಾಡದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಡಾ| ದಿನಕರದೇ ಸಾಯಿ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ದಿನಾಂಕ ೨೧-೦೪-೨೦೦೯ರಂದು ಸಂಜೆ ೩-೩೦ ಗಂಟೆಗೆ ಆಚರಿಸಲಾಯಿತು. ಕೆ.ಡಿ.ಡಿ.ಸಿ. ಸಂಸ್ಥೆಯ ಅಧ್ಯಕ್ಷರಾದ ಫಾ| ಲಾರೆನ್ಸ್ ಫೆರ್ನಾಂಡಿಸ್ ಉದ್ಘಾಟಿಸಿ ದಿನಕರ ದೇಸಾಯಿ ಅವರ ನೇರ ನಡೆ-ನುಡಿ-ಶಿಸ್ತು ಹಾಗೂ ಆದರ್ಶ ಜೀವನ  ನಮಗೆಲ್ಲರಿಗೆ ಮಾದರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಜನತಾ ವಿದ್ಯಾಲಯದ ನಿವೃತ್ತ ಶಿಕ್ಷಕ ಬಿ. ಭಟ್ ಹಾಗೂ ಉಲ್ಲಾಸ್ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೊಂಕಣಿ ನಾಟಕ, ಲೇಖಕ ಹಾಗೂ ಕಲಾವಿದ ಉದಯಕಾಂತ ಅಣ್ವೇಕರ್ ಹಾಗೂ ಮೂರ್ತಿ ಕಲಾವಿದ ನಂದಾ ಆಚಾರಿಯವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಕಲಾವಿದರಾದ ನಾಗೇಶ ಅಣ್ವೆಕರ್, ಜಿ.ಡಿ. ಪಾಲೇಕರ, ವಸಂತ ಬಾಂದೇಕರ್, ಉದಯಕಾಂತ್ ಆಣ್ವೇಕರ್ ಅವರು ತಮ್ಮ ಸ್ವರಚಿತ ಚುಟುಕುಗಳನ್ನು ವಾಚಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ನಾರಾಯಣ ಖಾರ್ವಿಯವರು ಅಕಾಡೆಮಿಯ ವಿವಿಧ ಯೋಜನೆಯ ಬಗ್ಗೆ ವಿವರಿಸಿದರು. ಅಕಾಡೆಮಿಯ  ಸದಸ್ಯರಾದ ವಸಂತ ಬಾಂದೇಕರ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್. ಎಸ್. ಶಿವರುದ್ರಪ್ಪ ವಂದನಾರ್ಪಣೆಗೈದರು. ಈ ಕಾರ್ಯಕ್ರಮಕ್ಕೆ ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

೧೦. ಕಾರವಾರದಲ್ಲಿ ಜರಗಿದ ಅಕಾಡೆಮಿಯ ೨೦೦೮ರ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ೨೦೦೮ರ ಕೊಂಕಣಿ ಪುಸ್ತಕ ಪುರಸ್ಕಾರ ಸಮಾರಂಭ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿಯ ವಿವಿಧ ಕ್ಷೇತ್ರಗಳಿಗೆ ನೀಡಿದ ಅನನ್ಯ ಸೇವೆಗಳನ್ನು ಪರಿಗಣಿಸಿ, ನೀಡುವ ೨೦೦೮ನೇ ಸಾಲಿನ ಗೌರವ ಪ್ರಶಸ್ತಿ ಸಮಾರಂಭವು ದಿನಾಂಕ ೨೩-೦೫-೨೦೦೯ ರಂದು ಶನಿವಾರ ಸಂಜೆ ೪-೦೦ ಗಂಟೆಗೆ ಕಾರವಾರದ ಜಿಲ್ಲಾರಂಗಮಂದಿರದಲ್ಲಿ ಜರುಗಿತು. ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಕೊಂಕಣಿ ಸಾಹಿತ್ಯ ಗೌರವ ಪ್ರಶಸ್ತಿಯನ್ನು ಶ್ರೀ ಜೆ.ಬಿ. ಮೊರಾಯಸ್‌ರವರಿಗೆ, ಕೊಂಕಣಿ ಜಾನಪದ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಕೊಂಕಣಿ ಜಾನಪದ ಗೌರವ ಪ್ರಶಸ್ತಿಯನ್ನು ಶ್ರೀ ಕೆ. ವಾಸುದೇವ ನಾಯ್ಕ್‌ರವರಿಗೆ, ಕೊಂಕಣಿ ಸಂಘಟಕ  ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಗಿ ಕೊಂಕಣಿ ಸಂಘಟಕ ಗೌರವ ಪ್ರಶಸ್ತಿಯನ್ನು  ಶ್ರೀ ಬಸ್ತಿ ವಾಮನ ಶೆಣೈರವರಿಗೆ ರೂ.೧೦೦೦೦/- ನಗದು, ಪ್ರಮಾಣ ಪತ್ರ, ಸ್ಮರಣಿಕೆ, ಫಲ-ತಾಂಬೂಲವನ್ನು ನೀಡಿ  ನೆರೆದ ಗಣ್ಯರ ಸಮ್ಮುಖದಲ್ಲಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಾಗೂ ಪರಮಪೂಜ್ಯ ಶ್ರೀಶ್ರೀಶ್ರೀ ಬಾವೇಶಾನಂದ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕಾರವಾರದ ರಾಮಕೃಷ್ಣಾಶ್ರಮದ ಪರಮಪೂಜ್ಯ ಶ್ರೀಶ್ರೀಶ್ರೀ ಬಾವೇಶಾನಂದ ಸ್ವಾಮೀಜಿ ಇವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಇವರು ಭಾಗವಹಿಸಿದರು. ಅತಿಥಿಗಳಾಗಿ ಬೆಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕರಾದ ಡಾ| ಚೇತನ್‌ಕುಮಾರ್ ನಾಯ್ಕ್, ಗೋವಾದ ಕೊಂಕಣಿ ಜಾನಪದ ಕಲೆಯ ಸಂಶೋಧಕಿಯಾಗಿರುವ ಡಾ| ಜಯಂತಿ ನಾಯ್ಕ್ ಇವರುಗಳು ಈ ಸಮಾರಂಭದಲ್ಲಿ ಭಾಗವಹಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿಯವರು ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎನ್. ಹರಿಕುಮಾರ್‌ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳಾ ನಾಯಕ್‌ರವರು ವಂದನಾರ್ಪಣೆಗೈದರು.

ಇದೇ ಸಮಾರಂಭದಲ್ಲಿ ೨೦೦೮ನೇ ಸಾಲಿನ ಕೊಂಕಣಿ ಪುಸ್ತಕ ಪುರಸ್ಕಾರವನ್ನು ೧)ಶ್ರೀ ಪಾವ್ಲ್ ಮೊರಾಸ್‌ರವರ ಅಧ್ಯಯನ ಕೃತಿ-ಮೊಗ್ರೆಂ ಕಾರಣ್, ೨)ಶ್ರಿ ಎಡ್ವರ್ಡ್ ಸೆರಾವೊ ಮೂಡಬಿದ್ರಿರವರ ಸಣ್ಣ ಕಥೆ ಮೊಗಾಚೊ ಘಾತ್ ಈ ಎರಡು ಕೃತಿಗಳು ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಈ ಇಬ್ಬರು ಪುಸ್ತಕ ಪುರಸ್ಕೃತರಿಗೆ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಪರಮಪೂಜ್ಯ ಶ್ರೀಶ್ರೀಶ್ರೀ ಬಾವೇಶಾನಂದ ಸ್ವಾಮೀಜಿಯವರು ಪುಸ್ತಕ ಪುರಸ್ಕಾರ ಪ್ರದಾನ ಮಾಡಿದರು. ಪುಸ್ತಕ ಪುರಸ್ಕಾರವು ರೂ.೫೦೦೦/- ನಗದು, ಪ್ರಮಾಣಪತ್ರ, ಗಂಧದ ಹಾರ, ಹಣ್ಣು ಹಂಪಲು, ಶಾಲು ಇವುಗಳನ್ನು ಒಳಗೊಂಡಿತ್ತು. ಸಮಾಜ ಸೇವೆ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಗಾಗಿ ಕೊಂಕಣಿ ವಿಶೇಷ ಪುರಸ್ಕಾರವನ್ನು ಶ್ರೀಮತಿ ಮಾಲತಿ ಕಾಮತ್ ಇವರಿಗೆ ಡಾ| ಜಯಂತಿ ನಾಯ್ಕ್‌ರವರು ಶಾಲು ಹೊದಿಸಿ ಫಲ-ತಾಂಬೂಲ, ಸ್ಮರಣಿಕೆ, ಪ್ರಮಾಣಪತ್ರ ನೀಡಿ ಗೌರವಿಸಿದರು.

ಈ ಸಮಾರಂಭವು ಕಾರವಾರದ ನಿಕಿತಾ ಶಿರ್ಷಿಕರ್‌ರವರ ಪ್ರಾರ್ಥನಾ ನೃತ್ಯದ ಮೂಲಕ ಪ್ರಾರಂಭವಾಯಿತು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಾಲ್ದಿ ಜಾನಪದ ನೃತ್ಯ ಪ್ರದರ್ಶನವನ್ನು ಶ್ರೀ ಯಾಕೂಬ್ ಅಹ್ಮದ್ ಮತ್ತು ಪಂಗಡ, ಶಿರೂರು, ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಕಡವಾಡ ಶ್ರೀ ವಿಲಾಸ ರೇವಣಕರ್ ಮತ್ತು ಪಂಗಡದವರಿಂದ ಪ್ರದರ್ಶಿತವಾಯಿತು. ಕಾರವಾರ ಜಿಲ್ಲಾರಂಗಮಂದಿರದ ವಠಾರದಲ್ಲಿ ರಾಷ್ಟ್ರೀಯ-ಅಂತರಾಷ್ಟ್ರೀಯ ಖ್ಯಾತಿ ಪಡೆದ ಕಲಾವಿದರಾದ ಕಾರವಾರದ ಶ್ರೀ ಬಿ.ವಿಲ್ಸನ್‌ರವರ ವ್ಯಂಗ್ಯ ಚಿತ್ರಕಲಾ ಪ್ರದರ್ಶನ ಪ್ರದರ್ಶಿತವಾಯಿತು. ಅಂತರಾಷ್ಟ್ರೀಯ ಖ್ಯಾತಿ ಪಡೆದ ಕಲಾವಿದರಾದ ಶ್ರೀ ರಾಮಾ ಬಾಂದೇಕರ್‌ರವರ ಮೂರ್ತಿಕಲಾ, ಚಿತ್ರಕಲಾ, ಪೋರ್ಟ್‌ರೇಟ್ ಕಲಾಪ್ರದರ್ಶನಗೊಂಡಿತು. ರಂಗೋಲಿ ಕಲೆಯಲ್ಲಿ ಖ್ಯಾತಿ ಪಡೆದ ಹಾಗೂ ಹಲವಾರು ಪ್ರಶಸ್ತಿ ವಿಜೇತ ಕಲಾವಿದರಾದ ಶ್ರೀ ಮನೋಜ ಸಾಳಿಸ್ಕಾರ್‌ರವರ ರಂಗೋಲಿ ಪ್ರದರ್ಶನ ಪ್ರದರ್ಶಿತವಾಯಿತು. ಅಕಾಡೆಮಿ ಸದಸ್ಯರಾದ ಶ್ರೀ ವಸಂತ ಬಾಂದೆಕರ್‌ರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಶಸ್ತಿ ವಿಜೇತರ ಮತ್ತು ಪುಸ್ತಕ ಪುರಸ್ಕೃತ ವಿಜೇತರ ಪರಿಚಯವನ್ನು ಅಕಾಡೆಮಿ ಸದಸ್ಯರಾದ ಶ್ರೀ ಬಸವ ಖಾರ್ವಿಯವರು ಸಮಾರಂಭದಲ್ಲಿ ಹಾಜರಾದ ಜನತೆಗೆ ತಿಳಿಸಿದರು. ಕೊಂಕಣಿ ಭಾಷಾಭಿಮಾನಿಗಳು, ಆಸಕ್ತರು ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನಮೆಚ್ಚುಗೆ ಪಡೆಯಿತು.

ಶಿರೂರಿನಲ್ಲಿ ಕೊಂಕಣಿ ಮ್ಹಾನ್ ಮನಿಸ್ ಏಕ್ ಮುಲಾಖತ್ ಕಾರ್ಯಕ್ರಮ ಜರಗಿದ ಬಗ್ಗೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ ೨೮-೦೬-೨೦೦೯ರಂದು ಉಡುಪಿ ಜಿಲ್ಲೆಯ ಶಿರೂರಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸಂಜೆ ೫-೦೦ ಗಂಟೆಗೆ ಕೊಂಕಣಿ ಮ್ಹಾನ್ ಮನಿಸ್ ಏಕ್ ಮುಲಾಖತ್ ಕಾರ್ಯಕ್ರಮವು ಜರಗಿತು. ಮೊದಲಿಗೆ ಪ್ರಾರ್ಥನಾ ಗೀತೆಯನ್ನು ಶ್ರೀ ಉಮೇಶ್ ಮೇಸ್ತಾರವರು ಹಾಡಿದರು.  ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿಯವರು ವೇದಿಕೆಗೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಶ್ರೀ ವಾಸು ಮೇಸ್ತ ಹಾಗೂ ಗೌರವ ಅತಿಥಿಗಳಾಗಿ ದಫ್ ಕಮಿಟಿಯ ಅಧ್ಯಕ್ಷರು ಮತ್ತು ಯುವ ಸಂಘಟಕರಾದ ಶ್ರೀ ಯಾಕೂಬ್ ಅಹ್ಮದ್‌ಜೀ ಇವರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಮ್ಹಾನ್ ಮನಿಸ್‌ರಾದ ಶ್ರೀ ಎಸ್. ನಾಗಪ್ಪ ಶೇಟ್, ಶ್ರೀ ಬಾಬುರಾಯ ಗೋಪಾಲ ಕಾಮತ್, ಶ್ರೀ ಜನಾಬ್ ಕೋಕಾ ಇಬ್ರಾಹಿಂ, ಶ್ರೀ ರಾಮು ಎ. ಮೇಸ್ತ  ಇವರುಗಳನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿಯವರು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಹಾಗೂ ಅವರೊಂದಿಗೆ ಸಂವಾದ ಕಾರ್ಯಕ್ರಮವು ಜರಗಿತು. ಅಕಾಡೆಮಿಯ ಸದಸ್ಯರಾದ ಶ್ರೀ ವಸಂತ್ ಬಾಂದೇಕರ್‌ರವರು ವಂದನಾರ್ಪಣೆಗೈದರು. ಹಾಗೂ ಅಕಾಡೆಮಿಯ ಸದಸ್ಯರಾದ ಶ್ರೀ ಕೆ.ಬಸವ ಖಾರ್ವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
 
ಅದೇ ವೇದಿಕೆಯಲ್ಲಿ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲಿಗೆ ಕೊಂಕಣಿ ಜಾನಪದ ನೃತ್ಯವಾದ ಧಫ್ ನೃತ್ಯವನ್ನು ನಾಕುದಾ ದಫ್ ಕಮಿಟಿಯ ಸದಸ್ಯರು ಪ್ರದರ್ಶಿಸಿದರು. ಬಳಿಕ ಶ್ರೀ ರಾಮನಾಥ ಮತ್ತು ಪಂಗಡದ ಸದಸ್ಯರು ಮೇಸ್ತ ಎಂಬ ಕೊಂಕಣಿ ಜಾನಪದ ನಾಟಕವನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮವು ಕೊಂಕಣಿ ಭಾಷಿಗರು ಕಿಕ್ಕಿರಿದು ನೆರೆದು ಜನಮೆಚ್ಚುಗೆ ಪಡೆಯಿತು.

೧.    ದಿನಾಂಕ ೧೭-೦೭-೨೦೦೯ರಂದು ಜರಗಿದ ಕೊಂಕಣಿ ಲೋಕಗೀತ ಗಾಯನ ಕಲಾಪ್ರದರ್ಶನ ಕಾರ್ಯಕ್ರಮ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ ೧೭-೦೭-೨೦೦೯ರಂದುಕಾರವಾರ  ತಾಲೂಕಿನ ಮಾಜಾಳಿ ಗ್ರಾಮದ ವಿಶ್ವಕರ್ಮ ಸಭಾಗ್ರಹದಲ್ಲಿ ಸಂಜೆ ೩:೩೦ ಗಂಟೆಗೆ  ವಿವಿಧ ಕೊಂಕಣಿ ಲೋಕಗೀತ ಗಾಯನ ಕಲಾಪ್ರದರ್ಶನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವಕರ್ಮಾ ಲೋಹಮಠ ಮಾಜಾಳಿಯ ಅಧ್ಯಕ್ಷರಾದ ಮಾನ್ಯ ಶ್ರೀ ಗಣಪತಿ ಬಾಳಕೃಷ್ಣ ಚಾರಿ ಇವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಾಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಸುಖಾರಾಮ ಭೂತೆ, ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಶ್ರೀ ಸುರೇಶ ಶಿವಾನಂದ ಮಾಂಜ್ರೇಕರ್ ಇವರುಗಳು ಹಾಜರಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕುಂದಾಪುರ ನಾರಾಯಣ ಖಾರ್ವಿ ಇವರು ಹಾಜರಾಗಿದ್ದರು. ಅಂತಿಮವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕೊಂಕಣಿ ಜಾನಪದ ಗೀತಗಾಯನ (ವಿವಾಹ ಸಮಾರಂಭದ ಹಂದರ ಹಕುವಾಗಿನ, ಬೀಸುಕಲ್ಲಿನ, ಕ್ಕುಟ್ಟುವ ಮದುವೆ ಸಮಾರಂಭದ ನಂತರದ ಹಾಗೂ ತೊಟ್ಟಿಲು ಸಮಾರಂಭದ ಮುಂತಾದವುಗಳನ್ನು) ಹಾಡು ಹಾಗೂ ರೂಪಕ ಮಾಡಿ ಆಕರ್ಷಣೀಯವಾಗಿ ಪ್ರದರ್ಶಿಸಿದರು.

೨.    ೨೪-೭-೨೦೦೯ ಕೊಂಕಣಿ ಅಕಾಡೆಮಿ ಹಾಗೂ ಕೆನರಾ ಪ್ರೌಡಶಾಲೆ ಇವರ ಸಹಯೋಗದಲ್ಲಿ  ಅಂತರ್ ಶಾಲಾ ಕೊಂಕಣಿ ದರ್ಶನ್  ಸ್ಪರ್ಧೆ ಹಾಗೂ ಕೊಂಕಣಿ ಮಾನ್ಯತ್ ದೀಸ್  ಕಾರ್ಯಕ್ರಮ.
ದಿನಾಂಕ ೨೪-೭-೨೦೦೯ ಕೊಂಕಣಿ ಅಕಾಡೆಮಿ ಹಾಗೂ ಕೆನರಾ ಪ್ರೌಡಶಾಲೆ ಇವರ ಸಹಯೋಗದಲ್ಲಿ ಅಂತರ್ ಶಾಲಾ ಕೊಂಕಣಿ ದರ್ಶನ್  ಸ್ಪರ್ಧೆ ಹಾಗೂ ಕೊಂಕಣಿ ಮಾನ್ಯತ್ ದೀಸ್  ಕಾರ್ಯಕ್ರಮವು ಅಧ್ಯಕ್ಷರ ಜರೂರು ಸ್ವರೂಪದ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಜರಗಿತು.  ಕೊಂಕಣಿ ಭಾಷೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳ ಪ್ರತಿಭೆ ಗುರುತಿಸುವ ಈ ಕಾರ್ಯಕ್ರಮದಲ್ಲಿ ಹಲವು ಮಕ್ಕಳು ಭಾಗವಹಿಸಿ, ಕೊಂಕಣಿಯ ಮೇಲಿನ ಅಭಿಮಾನವನ್ನು ಪ್ರದರ್ಶಿಸಿದರು.

೩. ಕೊಂಕ್ಣಿ ಮಾನ್ಯತಾ ದಿವಸ್-೨೦೦೯ ಕಾರ್ಯಕ್ರಮ ಜರಗಿದ ಬಗ್ಗೆ.
 ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ಭಾಷೆಯು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರ್ಪಡೆಗೊಂಡ ಸವಿನೆನಪಿಗಾಗಿ ದಿನಾಂಕ ೨೦-೦೮-೨೦೦೯ರಂದು ಪೂರ್ವಾಹ್ನ ೧೦-೦೦ ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಆಡಿಟೊರಿಯಂನಲ್ಲಿ ಕೊಂಕ್ಣಿ ಮಾನ್ಯತಾ ದಿವಸಾಚರಣೆ ಕಾರ್ಯಕ್ರಮವು ಜರಗಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ| ಮಾಧವ ಭಂಡಾರಿಯವರು ಉದ್ಘಾಟಿಸಿದರು. ಈ ಕಾರ್ಯಕ್ರಮದ  ಮುಖ್ಯ  ಅತಿಥಿಗಳಾಗಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ವಂ|ಫಾ| ಸ್ವೀಬರ್ಟ್ ಡಿಸಿಲ್ವ ಇವರು ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿ ಇವರು ವಹಿಸಿದರು. ಅಕಾಡೆಮಿಯ ಸದಸ್ಯರಾದ ಶ್ರೀಮತಿ ಐರಿನ್ ರೆಬೆಲ್ಲೊ ಇವರು ಸ್ವಾಗತಿಸಿದರು. ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಎಸ್. ಎಚ್. ಶಿವರುದ್ರಪ್ಪರವರು ವಂದನಾರ್ಪಣೆಗೈದರು. ಅಕಾಡೆಮಿಯ ಸದಸ್ಯರಾದ ಶ್ರೀ ಪುತ್ತೂರು ಪಾಂಡರಂಗ ನಾಯಕ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊಂಕಣಿ ಕಲಿಸುವ ಶಾಲೆಗಳಲ್ಲಿ ಕೊಂಕಣಿ ಕಲಿಯುವ ೬ ಮತ್ತು ೭ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾಮಟ್ಟದಲ್ಲಿ ಜರಗಿದ  ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನ ವಿಜೇತರಾದವರಿಗೆ ಈ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ, ನಗದು, ಹಾಗೂ ಪುಸ್ತಕಗಳನ್ನು ನೀಡಿ ಪುರಸ್ಕರಿಸಿದರು. ಅದೇ ಸಭಾಂಗಣದಲ್ಲಿ ಜಿಲ್ಲಾಮಟ್ಟದಲ್ಲಿ ಕೊಂಕಣಿ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಈ ಜಿಲ್ಲಾಮಟ್ಟದ ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ನಿತ್ಯಾದರ್ ಹಿ.ಪ್ರಾ.ಶಾಲೆ, ಪೆರ್ಮನ್ನೂರಿನ ಕು.ಆಂಜೆಲಿನಾ ಗ್ಲೆನಿಟಾ ಡಿಸೋಜ ಇವರಿಗೆ ಪ್ರಮಾಣಪತ್ರ, ಸ್ಮರಣಿಕೆ, ರೂ.೧೦೦೦/-ನಗದು ಬಹುಮಾನವಾಗಿ ನೀಡಲಾಯಿತು, ದ್ವಿತೀಯ ಬಹುಮಾನವನ್ನು ಪಡೆದ ಸಂತ ಅಲೋಶಿಯಸ್ ಹಿ.ಪ್ರಾ.ಶಾಲೆ, ಉರ್ವದ ಕು.ನಿಶೆಲ್ ನಿವ್ಯ ರೊಡ್ರಿಗಸ್ ರೂ.೭೫೦/- ನಗದು, ಪ್ರಮಾಣ ಪತ್ರ, ಸ್ಮರಣಿಕೆ, ಇವುಗಳನ್ನು ನೀಡಿ ಸಮ್ಮಾನಿಸಲಾಯಿತು. ಹಾಗೂ ತೃತೀಯ ಬಹುಮಾನವನ್ನು ಪಡೆದ ಬಜ್ಪೆಯ ಮೊರ್ನಿಂಗ್ ಸ್ಟಾರ್ ಹಿ.ಪ್ರಾ.ಶಾಲೆಯ ಅಡೈಲ್ ಎಲ್. ಡಿಸೋಜ ಇವರಿಗೆ ರೂ.೫೦೦/- ನಗದು, ಪ್ರಮಾಣಪತ್ರ, ಸ್ಮರಣಿಕೆ  ನೀಡಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯರಾದ ಶ್ರೀ ವಸಂತ ಬಾಂದೇಕರ್‌ರವರು ಕೊಂಕಣಿ ಮಿಮಿಕ್ರಿ ಕಾರ್ಯಕ್ರಮವನ್ನು ಹಾಗೂ ಶ್ರೀ ಮುರಳೀಧರ ಕಾಮತ್ ಮತ್ತು ಬಳಗದಿಂದ ಕೊಂಕಣಿ ಸಂಗೀತ ಕಾರ್ಯಕ್ರಮವನ್ನು ಪ್ರದರ್ಶಿಸಿದರು.

 ಕೊಂಕಣಿ ಕವಿಗೋಷ್ಠಿ ಕಾರ್ಯಕ್ರಮದ ಬಗ್ಗೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ಕವಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಲ್ಲಿ  ಕೊಂಕಣಿ ಕವಿಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ ೨೯-೦೮-೨೦೦೯ರಂದು ಸಂಜೆ ೫-೦೦ ಗಂಟೆಯಿಂದ ರಾತ್ರಿ ೮-೦೦ ರವರೆಗೆ ಮಂಗಳೂರಿನ ಬಜ್ಜೋಡಿಯಲ್ಲಿರುವ ಸಂದೇಶ ಕಲಾಭವನದಲ್ಲಿ ಜರಗಿತು.  ಈ ಸಮಾರಂಭದ ಉದ್ಘಾಟನೆಯನ್ನು ಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್‌ರವರು ಹೂಗಳಿದ್ದ ರಿಬ್ಬನನ್ನು ಎಳೆಯುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಂಬಯಿಯ ಖ್ಯಾತ ಸಿನಿಮಾ ಸಂಗೀತ ನಿರ್ದೇಶಕರು ಮತ್ತು ಲೇಖಕರಾದ ಶ್ರೀ ಅನಂತ ಅಮ್ಮೆಂಬಳ ಹಾಗೂ ಮಂಗಳೂರಿನ ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ವಂ|ಫಾ| ವಲೇರಿಯನ್ ಮೆಂಡೊನ್ಸರವರು ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿಯವರು ವಹಿಸಿದರು.  ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಟೈಟಸ್ ನೊರೊನ್ಹರವರು ನಿರೂಪಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ರಾದ ಶ್ರೀ ಎಸ್. ಎಚ್. ಶಿವರುದ್ರಪ್ಪರವರು ವಂದನಾರ್ಪಣೆಗೈದರು. ಫಾ| ಡೆನಿಸ್ ಡೆಸಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು ಸ್ವಾಗತಿಸಿದರು.

ಈ ಕವಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯದ ಹಾಗೂ ಹೊರರಾಜ್ಯಗಳ ಪ್ರಸಿದ್ಧ ಕೊಂಕಣಿ ಕವಿಗಳು ಭಾಗವಹಿಸಿದರು. ಈ ಕವಿಗೋಷ್ಠಿಯ ಸೂತ್ರದಾರರಾಗಿ ಗೋವಾದ ಶ್ರೀ ರಾಜಯ್ ಪವಾರ್ ಇವರು ಕವಿಗೋಷ್ಠಿಯನ್ನು ನಡೆಸಿಕೊಟ್ಟರು. ಈ ಕವಿಗೋಷ್ಠಿಯಲ್ಲಿ ಶ್ರೀ ಮೆಲ್ವಿನ್ ರೊಡ್ರಿಗಸ್, ಶ್ರೀ ಟೈಟಸ್ ನೊರೊನ್ಹ, ಶೀಲ ಕಂಬದಕೋಣೆ, ಕ್ಯಾಥರಿನ್ ರೊಡ್ರಿಗಸ್, ಕು. ಡಿಂಪಲ್ ಫೆರ್ನಾಂಡಿಸ್, ಶ್ರೀ ವಿಲ್ಸನ್ ಕಟೀಲ್, ಶ್ರೀ ಎಚ್ಚೆಮ್ ಪೆರ್ನಾಲ್, ಶ್ರೀಮತಿ ಶಕುಂತಳಾ ಆರ್. ಕಿಣಿ, ಶ್ರೀ ವಲ್ಲಿ ವಗ್ಗ, ಶ್ರೀ ಲೊಯ್ಡ್ ರೇಗೊ, ಶ್ರೀ ಮಹೇಶ್ ನಾಯಕ್ ಇವರುಗಳು ಭಾಗವಹಿಸಿ ತಾವು ರಚಿಸಿದ ಕವಿತೆಯನ್ನು ವಾಚಿಸಿದರು. ಈ ಕವಿಗೋಷ್ಟಿ ಕಾರ್ಯಕ್ರಮಕ್ಕೆ ಕೊಂಕಣಿ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನಮೆಚ್ಚುಗೆ ಪಡೆಯಿತು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
2008-09ನೇ ಸಾಲಿನಲ್ಲಿ ಬಿಡುಗಡೆ ಮಾಡಿದ ಅನುದಾನದ ವಿವರ

೧. ಅಧಿಕಾರಿ/ಸಿಬ್ಬಂದಿ ವೇತನ ಹಾಗೂ ಇತರ ಭತ್ಯೆ ಬಾಬ್ತು            ರೂ.೧,೭೪,೧೫೦-೦೦
   (ಚೆಕ್ಕ್ ಸಂಖ್ಯೆ:೧೪೦೦೭೧ ದಿ. ೧೮.೯.೦೮)

೨.  ೨೦೦೮-೦೯ನೇ ಸಾಲಿನ ಅಕಾಡೆಮಿಯ  ಕಾರ್ಯಚಟುವಟಿಕೆಗಳಿಗೆ
      ಯೋಜನೇತರ ಬಾಬ್ತು                                   ರೂ.೨,೭೫,೦೦೦-೦೦
    (ಚೆಕ್ಕ್ ಸಂಖ್ಯೆ ೧೬೮೭೬೯ ದಿ. ೨೩-೧೦-೦೮)                 ==============
           ಒಟ್ಟು ಮೊತ್ತ                                     ರೂ.೪,೪೯,೧೫೦-೦೦
                                                 ============

 

 

 

Subcategories

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]