Print

ಗೌರವ ಪ್ರಶಸ್ತಿ ಪುಸ್ತಕ ಬಹುಮಾನ ಪ್ರದಾನ ಸಮಾರಂಭ:

೨೦೧೧ನೇ ಸಾಲಿನ ಕೊಂಕಣಿ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ದಿನಾಂಕ ೧೧-೧೧-೨೦೧೨ ರಂದು ರವಿವಾರ  ಸಂಜೆ ೫.೦೦ ಗಂಟೆಗೆ ಕಾರ್ಕಳದ ಶ್ರೀ ಮಂಜುನಾಥ ಪೈ ಸಾಂಸ್ಕೃತಿಕ ಭವನದಲ್ಲಿ ನಡೆಸಲಾಯಿತು.  ಮಾನ್ಯ  ಉಪಸಭಾಪತಿಯವರಾದ ಶ್ರೀ ಎನ್.ಯೋಗಿಶ್ ಭಟ್ ಇವರು ಈ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು. ಹಾಗೂ ಅಕಾಡೆಮಿ ಗೌರವಪ್ರಶಸ್ತಿ ವಿಜೇತರಾದ ಶ್ರೀ ಶಾ.ಮಂ ಕೃಷ್ಣರಾಯ(ಸಾಹಿತ್ಯ ಮತ್ತು ಭಾಷೆ),ಶ್ರೀ ಹೆರಿ ಡಿಸೋಜ ಕೊಂಕಣಿ ಕಲೆ(ನಾಟಕ) ಮತ್ತು ಶ್ರೀ ಬಾಬಿ ನಾಯ್ಕ್ ಕೊಂಕಣಿ ಜನಪದ ಇವರನ್ನು ಶಾಲು, ಹಾರ, ಸ್ಮರಣಿಕೆ, ಪ್ರಮಾಣ ಪತ್ರ, ಫಲತಾಂಬೂಲ ಹಾಗೂ ನಗದುಧನ ನೀಡಿ ಗೌರವಿಸಿದರು. ಪುಸ್ತಕ ಪುರಸ್ಕಾರಕ್ಕೆ ಅರ್ಹರಾದ ಶ್ರೀ ಮ್ಯಾಕ್ಸಿ ಜಿ ಪಿಂಟೊ, ಕೊಂಕಣಿ ಲೇಖನಾ ಸಂಕಲನ  - “ಸತಾಂ ಖತಾಂ ಪುಸ್ತಕಕ್ಕಾಗಿ,  ಶ್ರೀ ರೊನಾಲ್ಡ್ ವಾಜ್ ” ಕೊಂಕಣಿ ಕಥನಾ ಕವನ  ಸಂಗ್ರಹ –  “ಆವಾಜ್” ಪುಸ್ತಕಕ್ಕಾಗಿ ಹಾಗೂ  ಶ್ರೀ ರೋನ್ ಮಾಯ್ಕಲ್ ಆಂಜೆಲೊರ್,   ಕೊಂಕಣಿ ಸಣ್ಣ ಕತೆ – “ ವೊಡ್ತಾಂತ್ಲೆಂ ಗುಲೊಬ್ ಪುಸ್ತಕ್ಕಾಗಿ   ವಿಧಾನ ಪರಿಷತ್ತಿನ  ಶಾಸಕರಾದ ಮಾನ್ಯ ಶ್ರೀ ಕ್ಯಾ.ಗಣೇಶ್ ಕಾರ್ಣಿಕ್‌ರವರು ಕೊಂಕಣಿ ಪುಸ್ತಕ ಪುರಸ್ಕಾರ ಪ್ರದಾನವನ್ನು ಮಾಡಿದರು. ಶಾಸಕರಾದ(ವಿಧಾನಸಭೆ)  ಮಾನ್ಯ ಶ್ರೀ ಗೋಪಾಲ ಭಂಡಾರಿ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳದ ಮಾಜಿ ಶಾಸಕರಾದ ಶ್ರೀ ಸುನಿಲ್ ಕುಮಾರ್ ಇವರು ಫೆಲೋಶಿಫ್ ವಿತರಣೆ ಮಾಡಿದರು,  ಪ್ರಸಿದ್ದ  ಕವಿ ಮತ್ತು ಸಾಹಿತಿ ಶ್ರೀ ವಲೇರಿಯನ್ ಡಿಸೋಜ(ವಲ್ಲಿ ವಗ್ಗ) ಇವರು ಯುವ ಪುರಸ್ಕಾರ  ಪ್ರಧಾನ ಮಾಡಿದರು.

ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ   ಶ್ರೀಮತಿ ಶೀಲಾ ನಾಯಕ ಮತ್ತು ತಂಡದವರಿಂದ ಕೊಂಕಣಿ ವೈವಿದ್ಯ ಕಾರ್ಯಕ್ರಮ, ಶ್ರಿ ಓಂ ಗಣೇಶ್ ಇವರಿಂದ ಕೊಂಕಣಿ ಮ್ಯಾಜಿಕ್ ಪ್ರದರ್ಶನ, ಕಾರ್ಕಳ ಕಥೋಲಿಕ್ ಸಮುದಾಯದವರಿಂದ ಕೊಂಕಣಿ ವೈವಿದ್ಯ , ಶ್ರೀಮತಿ ವಿಭಾ ನಾಯಕ್ ಇವರಿಂದ ಕೊಂಕಣಿ ಗೀತೆಗಳು, ಕುಡಾಲ ದೇಶಸ್ತ ಅದ್ಯ ಗೌಡ ಸಾರಸ್ವತ ಸಮುದಾಯದವರಿಂದ ಕೊಂಕಣಿ ವೈವಿದ್ಯ, ರಾಜಾಪುರ ಸಾರಸ್ವತ ಬ್ರಾಹ್ಮಣ ಸಮುದಾಯದವರಿಂದ ಕೊಂಕಣಿ ವೈವಿದ್ಯ, ಕುಡುಬಿ ಸಮುದಾಯದವರಿಂದ ಜಾನಪದ ನೃತ್ಯ ಕಾರ್ಯಕ್ರಮಗಳು ಜರಗಿದವು.