Print

ದಿನಾಂಕ ೨೨-೧೧-೨೦೧೨ ರಂದು ೩.೧೫ ಗಂಟೆಗೆ ಜನಪದ ಕಲಾ ತಂಡಗಳ ಭವ್ಯ ಮೆರವಣಿಗೆ ಕಾರ್ಯಕ್ರಮವನ್ನು  ಸಂತ ಅಲೋಶಿಯಸ್ ಕಾಲೇಜು ಮೈದಾನದಿಂದ ಪುರಭವನದವರೆಗೆ ನೆರವೇರಿಸಲಾಯಿತು. ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ ಸಂಚಾಲಕರಾದ ಡಾ.ಪ್ರಭಾಕರ್ ಭಟ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ರಹಿಂ ಉಚ್ಚಿಲ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಉಮಾನಾಥ ಕೊಟ್ಯಾನ್, ಮಾಂಡ್ ಸೊಭಾಣ್ ಸಂಸ್ಥೆಯ ಅಧ್ಯಕ್ಷರಾದ ಶ್ರಿ ಸ್ಟ್ಯಾನಿ ಅಲ್ವಾರಿಸ್, ಜಿ.ಎಸ್.ಅಬಿ. ಸರ್ವ ದೇವಲ ಸಮಿತಿ ಅಧ್ಯಕ್ಷರಾದ ಶ್ರೀ ಸಿ.ಎಲ್.ಶೆಣೈ  ಕೊಂಕಣಿಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಬಾಳಿಗಾ ಇವರು ಉಪಸ್ಥಿತರಿದ್ದರು.

ದಿನಾಂಕ ೨೨-೧೧-೨೦೧೨ ರಂದು ಸಂಜೆ ೫.೩೦ ಗಂಟೆಗೆ ಅಮ್ಮಿ ಕೊಂಕಣಿ ಉದ್ಘಾಟನಾ ಕಾರ್ಯಕ್ರಮ:
 ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯ ಮಂತ್ರಿ ಶ್ರೀ ಡಿ.ವಿ ಸದಾನಂದ ಗೌಡ ಇವರು ನೇರವೇರಿಸಿದರು. ಮಾನ್ಯ್ ಉಪಸಭಪತಿ ಕರ್ನಾಟಕ ವಿಧಾನ ಸಭೆಯ ಶ್ರೀ ಯೋಗಿಶ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಯಾಗಿ ಅಭಯಚಂದ್ರ ಜೈನ್, ಗಣೇಶ್ ಕಾರ್ಣಿಕ್, ಮೊನಪ್ಪ ಭಂಡಾರಿ, ಯುಟಿ.ಖಾದರ್ ಬಿ.ರಮಾನಾಥ ರೈ ಭಾಗವಹಿಸಿದ್ದರು.  ಮಂಗಳೂರು ಪ್ರಾಂತ್ಯದ ಕಥೋಲಿಕ್ ಬಿಶಪ್ ರವರಾದ ಅತಿ ವಂ.ಡಾ. ಅಲೋಷಿಯಸ್ ಪೌಲ್ ಡಿಸೋಜಾ ಇವರು ಗೌರವ ಉಪಸ್ಥಿತರಿದ್ದರು ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಬಸ್ತಿ ವಾಮನ ಶೆಣೈ ಮತ್ತು ಕುಂದಾಪುರ ನಾರಾಯನ ಖಾರ್ವಿ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಬಹು ವೈವಿದ್ಯಮಯ ಕೊಂಕಣಿ ಜಾನಪದ ಹಾಡು ನೃತ್ಯ ಪ್ರದರ್ಶನಗಳನ್ನು ಪ್ರಸ್ತುತ ಪಡಿಸಲಾಯಿತು.

 


ದಿನಾಂಕ ೨೩-೧೧-೨೦೧೨  ಖಾಣ್ ಜೆವಣ್ ಅಹೋರೋತ್ಸವ ಬೆಳಿಗ್ಗೆ ೧೧.೦೦
 ೧. ವಿವಿಧ ಕೊಂಕಣಿ ಸಮುದಾಯದ ಮಹಿಳೆಯರಿಂದ ೨೦೦ಕ್ಕೂ ಮಿಕ್ಕಿ ವೈವಿಧ್ಯಮಯ ತಿಂಡಿತಿನಿಸುಗಳ ಪ್ರದರ್ಶನ ಕಾರ್ಯಕ್ರಮ ಎರ್ಪಡಿಸಲಾಗಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶಾಲಿನಿ ಪಂಡಿತ್ ನೆರವೇರಿಸಿದರು. ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀಮತಿ ಸುಭದ್ರ ಅರುಣ್ ಶೇಟ್, ಶ್ರೀಮತಿ ಜಯಂತಿ ನಾಯಕ್ ಮುಖ್ಯ ಅತಿಥಿಯಾಗಿದ್ದು, ಶ್ರೀ ಕಾಸರಗೋಡು ಚಿನ್ನಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.  ಶ್ರೀಮತಿ ಗೀತಾ ಸಿ. ಕಿಣಿ ಮತ್ತು ಶ್ರೀ ನವೀನ್ ಡಿಸೋಜ ಕಾರ್ಯಕ್ರಮದ ಸಂಯೋಜಕರಾಗಿದ್ದರು.

 


ದಿನಾಂಕ ೨೩-೧೧-೨೦೧೨  ಸ್ತ್ರೀ ವೈಭವ- ಮಹಿಳಾ ಸಾಂಸ್ಕೃತಿಕ ಉತ್ಸವ  ಸಂಜೆ ೫.೩೦
ಕಾರ್ಯಕ್ರಮದ ಉದ್ಘಾಟನೆಯನ್ನು  ಶ್ರೀಮತಿ ಮಲ್ಲಿಕಾ ಪ್ರಸಾದ ಪುತ್ತೂರು ವಿಧಾನಸಭೆ ಶಾಸಕರು ಇವರು ನೆರವೇರಿಸಿದರು. ಶ್ರೀಮತಿ ಪದ್ಮ ಶೆಣೈ, ಶ್ರೀಮತಿ ಜುಡಿತ್ ಮಸ್ಕರೇನ್ಹಸ್  ಇವರು ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಕೊಂಕಣಿ ಸ್ತ್ರೀಯರಿಂದ ವಿವಿಧ ಮನರಂಜನ ಕಾರ್ಯಕ್ರಮಗಳು ನಡೆದವು.

 


೨೪-೧೧-೨೦೧೨ ಭಾಷಾ ಭಾವೈಕ್ಯ - ಬಹುಭಾಷಾ ಕವಿಗೋಷ್ಠಿ ಬೆಳಿಗ್ಗೆ -೧೧.೦೦ ಗಂಟೆಗೆ
ಕವಿಗೋಷ್ಠಿ: ಕಾರ್ಯಕ್ರಮದ ಪ್ರಸ್ತಾವನೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ಇವರು ಮಾಡಿದರು.  ಖ್ಯಾತ ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ ಕಲ್ಕೂರ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ್ದರು, ಈ ಸಂದರ್ಭದಲ್ಲಿ ಕೊಂಕಣಿ ತುಳು ಬ್ಯಾರಿ ಮಲಯಾಳಂ ಕನ್ನಡ ದ ಒಟ್ಟು ೧೨ ಕವಿಗಳು ತಮ್ಮ ಸ್ವರಚಿತ ಕವನ ಪ್ರಸ್ತುತಪಡಿಸಿದರು.  ಕಾರ್ಯಕ್ರಮದ ನಿರ್ವಹಣೆಯನ್ನು ಅಕಾಡೆಮಿ ಸದಸ್ಯರಾದ ಶ್ರೀ ಮಹೇಶ್ ನಾಯಕ್ ಇವರು ನಡೆಸಿಕೊಟ್ಟರು.

 


ಯುವ ಸಂಭ್ರಮ್-ವಿದ್ಯಾರ್ಥಿ ಸಾಂಸ್ಕೃತಿಕೋತ್ಸವ ಸಂಜೆ ೫.೩೦
ದಿನಾಂಕ ೨೪-೧೧-೨೦೧೨ ರಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ವಿನೋದ್ ಪ್ರಭು ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿಕೊಟ್ಟರು.  ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ  ವ್ಯವಸ್ಥಾಪಕರಾದ ಶ್ರೀ ಎಸ್.ಐ.ಬಾವಿಕಟ್ಟೆ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.  ಶ್ರೀ ಅನಂತ್ ಪೈ, ಪ್ರದೀಪ್ ಪೈ ಶ್ರೀಕರ ಪ್ರಭು ಶ್ರೀ ಗ್ರೇಶಿಯನ್ ರೊಡ್ರಿಗಸ್ ಇವರು ಮುಖ್ಯ ಅತಿಥಿಗಳಾಗಿದ್ದರು, ಶ್ರೀ ವಿಕ್ಟರ ಮಥಾಯಸ್ ಇವರು ಕಾರ್ಯಕ್ರಮ ನಿರೂಪಿಸಿದರು.

 


೨೫-೧೧-೨೦೧೨ ಅಮ್ಮಿ ಕೊಂಕಣಿ ಸಮಾರೋಪ ಸಮಾರಂಭ ಸಂಜೆ ೫.೩೦
ಮಾಜಿ ಸಚಿವರು ವಿಧಾನಸಭಾ ಶಾಸಕರಾದ ಶ್ರೀ ಕೃಷ್ನ ಜೆ ಪಾಲೆಮಾರ್ ಇವರು ಸಮಾರೋಪ ಸಮಾರಂಭ ಕಾರ್ಯಕ್ರಮ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾಸರಗೋಡು ಚಿನ್ನಾ ವಹಿಸಿದ್ದರು. ಯಂ.ರಘುನಾಥ ಶೇಟ್, ಜೆ.ಅರ್ ಲೋಬೊ, ಪ್ರತಾಪ್ ಸಿಂಹ ನಾಯಕ್, ಎಮ್.ಎಮ್.ಪ್ರಭು. ರಾಮಕಿಶೋರ್ ಎಲ್ಲೂರ್ ಶ್ರಿ ಶಶಿಕಾಂತ್ ನಾಗ್ವೇಕರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.

ಕೊಂಕಣಿ ಸಂಗೀತ್ ಸಾಂಜ್ - ಸಂಜೆ ೬.೦೦ ಗಂಟೆಗೆ
ದಿನಾಂಕ ೨೫-೧೧-೨೦೧೨ ರಂದು ಶ್ರೀ ಚರಣ್ ಕುಮಾರ್ ಮತ್ತು ಮುರಳಿಧರ ಕಾಮತ್ ಇವರ ನಿರ್ದೆಶನದಲ್ಲಿ ಸುಮಾರು ೧೫ ಸಂಗೀತ ಕಲಾವಿದರಿಂದ ಕೊಂಕಣಿ ಸಂಗೀತ್ ಸಾಂಜ್ ಕಾರ್ಯಕ್ರಮವನ್ನು ನಡೆಸಲಾಯಿತು.