Print

ಕರ್ನಾಟಕಾಚ್ಯಾ ವಿಧಾನ್ ಪರಿಷದೆಕ್ ಆಯ್ಲೆವಾರ್ ನೇಮಕ್ ಜಾಲ್ಲೊ ಸಾಂದೊ ಶ್ರೀ ಐವನ್ ಡಿಸೊಜಾನ್ ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿಕ್ ಹ್ಯಾಚ್ ಆಗಸ್ಟ್ 8 ವೆರ್ ಭೆಟ್ ದಿಲಿ. ಫುಲಾಂ ತುರೊ ದೀವ್ನ್ ಯೆವ್ಕಾರ್ ಮಾಗ್‌ಲ್ಲ್ಯಾ ಅಧ್ಯಕ್ಷ್ ರೊಯ್ ಕ್ಯಾಸ್ತೆಲಿನೊನ್ ಅಕಾಡೆಮಿಚ್ಯಾ ಎದೊಳ್ಚ್ಯಾ ಆನಿ ಫುಡ್ಲ್ಯಾ ವಾವ್ರಾಚಿ ಝಳಕ್ ದಿಲಿ. ಥೊಡ್ಯಾ ವಾವ್ರಾಂನಿ ಸರ್ಕಾರಿ ಹಂತಾರ್ ಸಹಕಾರ್ ವಿಚಾರ್ಲೊ.

ಮನವಿ ಸ್ವೀಕಾರ್ ಕರ್ನ್ ಉಲಯಿಲ್ಲ್ಯಾ ಐವನಾನ್ ರೊಯ್  ಕ್ಯಾಸ್ತೆಲಿನೊಚ್ಯಾ ಮುಖೆಲ್ಪಣಾರ್ ಕೊಂಕ್ಣಿ ಅಕಾಡೆಮಿ ಅಪುರ್ಬಾಯೆಚಿಂ ಕಾರ್ಯಿಂ ಕರ್ನ್ ಆಸಾ. ಫುಡಾರಾಂತ್ ಕೊಂಕ್ಣಿ ಉರಂವ್ಚೊ ವಾವ್ರ್ ಅಕಾಡೆಮಿ ಥಾವ್ನ್ ಜಾವ್ನ್ ಆಸಾ. ಶಾಳಾಂನಿ,  ಕೊಲೆಜಿಂನಿ ಕೊಂಕ್ಣಿ, ಕೊಂಕ್ಣಿ ಶಿಕವ್ಪಿ, ಕೊಂಕ್ಣಿ ಪೀಠ, ಕೊಂಕ್ಣಿ ಭವನ ಇತ್ಯಾದಿ ಖಾತಿರ್ ಆಪ್ಲೊ ಪುರ್ತೊ ಸಹಕಾರ್ ದಿತಲೊಂ ತಶೆಂಚ್ ಮುಖ್ಲ್ಯಾ ಅಧಿವೇಶನಾಂತ್ ಆಫುಣ್ ಕೊಂಕ್ಣೆಂತ್ ಉಲಯ್ತಲೊಂ ಮ್ಹಣ್  ಕಳಯ್ಲೆಂ.

ಕಾರ್ಪೊರೇಟರ್ ಪ್ರವೀಣ್ ಆಳ್ವಾ ಆನಿ ಸುಪ್ರೀತ್ ರೈ, ನವೀನ್ ಲೋಬೊ, ಅಕಾಡೆಮಿ ಸಾಂದೆ ಲುಲ್ಲುಸ್ ಕುಟಿನ್ಹಾ, ಶೇಖರ್ ಗೌಡ, ಕೆ. ದೇವದಾಸ ಪೈ, ಲೊರೆನ್ಸ್ ಡಿಸೊಜಾ, ವಾರೀಜಾ ನಿರ್ಬೈಲ್, ರಿಜಿಸ್ಟ್ರಾರ್ ಡೊ ದೇವದಾಸ್ ಪೈ ಹಾಜರ್ ಆಸ್‌ಲ್ಲೆ. 

 

 


ಕೊಂಕಣಿ ಅಕಾಡೆಮಿಗೆ ಐವನ್ ಡಿಸೋಜ ಭೇಟಿ

ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಇವರು ಕರ್ನಾಟಕ ಕೊಂಕ್ಣಿ ಸಾಹಿತ್ಯ ಅಕಾಡೆಮಿಗೆ ಆಗಸ್ಟ್ 8 ರಂದು ಭೇಟಿ ನೀಡಿದರು. ಸ್ವಾಗತಿಸಿದ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಅಕಾಡೆಮಿಯ ಇದುವರೆಗಿನ ಕಾರ್ಯಕ್ರಮಗಳ ಪ್ರಗತಿ ಹಾಗೂ ಮುಂದಿನ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಸರಕಾರಿ ಮಟ್ಟದಲ್ಲಿ ಕೊಂಕಣಿಯ ಕೆಲಸ ಕಾರ್ಯಗಳಿಗೆ ಸಹಕಾರ ಆಶಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಐವನ್ ಕೊಂಕಣಿ ಅಕಾಡೆಮಿ ಕೊಂಕಣಿಯ ಬೆಳವಣಿಗೆಗೆ ಪೂರಕವಾದ ಕೆಲಸಗಳನ್ನು ಮಾಡುತ್ತಿದೆ. ಶಾಲಾ ಕಾಲೇಜುಗಳಲ್ಲಿ ಕೊಂಕಣಿ, ಕೊಂಕಣಿ ಶಿಕ್ಷಕರು, ಕೊಂಕಣಿ ಪೀಠ, ಕೊಂಕಣಿ ಭವನ ಇತ್ಯಾದಿ ಕೆಲಸಗಳಿಗೆ ತನ್ನ ಸಂಪೂರ್ಣ ಬೆಂಬಲವಿದೆ. ತಾನು ಕೂಡಾ ಕೊಂಕಣಿ ಮಾತೃಭಾಷಿಕ ನಾದುದರಿಂದ ಮುಂದಿನ ಅಧಿವೇಶನದಲ್ಲಿ ಕೊಂಕಣಿಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.

ಕಾರ್ಪೊರೇಟರ್ ಪ್ರವೀಣ್ ಆಳ್ವಾ ಮತ್ತು ಸುಪ್ರೀತ್ ರೈ, ನವೀನ್ ಲೋಬೊ, ಅಕಾಡೆಮಿ ಸದಸ್ಯರಾದ ಲುಲ್ಲುಸ್ ಕುಟಿನ್ಹಾ, ಶೇಖರ ಗೌಡ, ಕೆ. ದೇವದಾಸ ಪೈ, ಲಾರೆನ್ಸ್ ಡಿಸೊಜಾ, ವಾರಿಜಾ ನಿರ್ಬೈಲ್, ರಿಜಿಸ್ಟ್ರಾರ್ ಡಾ ದೇವದಾಸ್ ಪೈ ಹಾಜರಿದ್ದರು.