ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಂಕಣಿ ಕಲಾವಿದರ ಗಣತಿ ಮಾಡಿ ದಾಖಲೀಕರಣ (ಡೈರೆಕ್ಟರಿ) ಮಾಡುವ ಯೋಜನೆ ಇದೆ. ಇದರ ಪ್ರಮುಖ ಉದ್ದೇಶ ಕೊಂಕಣಿ ಕಲಾವಿದರನ್ನು ಪ್ರೋತ್ಸಾಹಿಸುವುದು. ಅಕಾಡಮಿಯ ಎಲ್ಲಾ ಕಾರ್ಯಕ್ರಮಗಳ ಪ್ರಮುಖ ಭಾಗವಾಗಿ ಸಾಂಸ್ಕೃತಿಕ ಚಟುವಟಿಕೆಗಳು ಇರುತ್ತವೆ. ಆದರೆ ರಾಜ್ಯದಲ್ಲೆಡೆ ಹರಡಿಕೊಂಡಿರುವ ಕಲಾವಿದರನ್ನು ಅರ್ಹತೆಯ ಆಧಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಹ್ವಾನಿಸುವುದು ಒಂದು ಸವಾಲಾಗಿರುತ್ತದೆ. ಅಕಾಡೆಮಿಯಲ್ಲಿ ಈ ಹಿಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕಲಾವಿದರ ವಿವರಗಳನ್ನು ದಾಖಲಿಸಿಡಲಾಗಿದೆ. ಆದರೆ ಇದರ ವ್ಯಾಪ್ತಿ ಸೀಮಿತವಾಗಿರುತ್ತದೆ. ಕೆಲವು ವೇಳೆ ಭಾಗವಹಿಸಿರುವ ಕಲಾತಂಡಗಳನ್ನು ಪುನ: ಪುನ: ಕರೆಯಬೇಕಾಗುವುದು. ಇದರಿಂದಾಗಿ ಕಲಾವಿದರಿಗೆ ಅಕಾಡೆಮಿ ವೇದಿಕೆಗಳಲ್ಲಿ ಸಮಾನ ಪ್ರಾತಿನಿಧ್ಯ ದೊರಯದೇ ಹೋಗಬಹುದು. ಈ ಸಮಸ್ಯೆಗೆ ಕಲಾವಿದರ ಸಮಗ್ರ ಗಣತಿ ಪರಿಹಾರವಾಗಲಿದೆ. ಕೊಂಕಣಿ ಮಾತೃಭಾಷಿಕ ಕಲಾವಿದರು-ವ್ಯಕ್ತಿ ಅಥವಾ ತಂಡಗಳು ಈ ಗಣತಿಯ ವ್ಯಾಪ್ತಿಯಲ್ಲಿ ಬರುತ್ತಾರೆ.

ಸಂಗೀತ, ಹಾಡುಗಾರಿಕೆ, ಮೃದಂಗ, ತಬಲಾ, ವೀಣೆ, ಗಿಟಾರ್, ಪಿಯಾನೊ, ವಯಲಿನ್, ಡ್ರಮ್ಸ್, ಆಕೊರ್ಡಿಯನ್, ನಾಗಸ್ವರ, ಸ್ಯಾಕ್ಸೊ ಪೋನ್, ಮೌತ್ ಆರ್ಗನ್, ಮ್ಯಾಂಡೊಲಿನ್, ಆರ್ಗನ್, ಹಾರ್ಮೊನಿಯಂ, ಗುಮಟೆ, ಧೊಲಕ್, ಟ್ರಂಪೆಟ್, ಕೊಳಲು, ಇತ್ಯಾದಿ ವಾದನಗಳು, ವಿವಿಧ ಪ್ರಕಾರಗಳ ನೃತ್ಯ ಕಲಾವಿದರು, ನಾಟಕದ ಎಲ್ಲಾ ರಂಗಗಳು, ಯಕ್ಷಗಾನ, ಬಯಲಾಟ, ಗೊಂಬೆಯಾಟ, ಸಿನೆಮಾ, ಚಿತ್ರಕಲೆ, ಮರಳು ಶಿಲ್ಪ, ಗಾಜುಚಿತ್ರ, ವರ್ಣಗಾರಿಕೆ, ಕಾವಿಕಲೆ ಮತ್ತಿತರ ಕಲಾಪ್ರಕಾರಗಳು.

ಹೆಸರು, ವಿಳಾಸ, ಫೊನ್, ಈಮೈಲ್, ಕಲಾಪ್ರಕಾರ, ಸಾಧನೆ, ದೊರೆತ ಪ್ರಶಸ್ತಿ ಮತ್ತಿತರ ವಿವರಗಳೊಡನೆ ತಮ್ಮ ಹೆಸರುಗಳನ್ನು ಅಕಾಡೆಮಿ ಕಛೇರಿಯಲ್ಲಿ 0824-2453167 ಅಥವಾ This email address is being protected from spambots. You need JavaScript enabled to view it. ಮುಖಾಂತರ ನೊಂದಾಯಿಸಲು ಕೋರಲಾಗಿದೆ.

 

 

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]