Print

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಭಾಷಾಧ್ಯಯನ ಪೀಠ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಹಾಗೂ ಕಾಲೇಜುಗಳಲ್ಲಿ ಕೊಂಕಣಿ ಕಲಿಸಲು ಕೊಂಕಣಿಯಲ್ಲಿ ಎಂ.ಎ. ಪದವಿ ಪಡೆದಿರುವ ಅಭ್ಯರ್ಥಿಗಳ ಅಗತ್ಯವಿದೆ. ಸದ್ಯ ಗೋವಾ ವಿಶ್ವವಿದ್ಯಾನಿಲಯದಲ್ಲಿ ಮಾತ್ರ ಎಂ.ಎ. (ಕೊಂಕಣಿ) ಪದವಿ ಅಧ್ಯಯನ ಲಭ್ಯವಿದೆ. ಕರ್ನಾಟಕದಲ್ಲಿ ಮುಂದೆ ಈ ಸೌಲಭ್ಯವನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ನಿವಾಸಿಯಾಗಿದ್ದು ಅರ್ಹ ಬಿ.ಎ. ಪದವೀಧರರು ಗೋವಾ ವಿಶ್ವವಿದ್ಯಾಲಯದಿಂದ ಎಂ.ಎ. (ಕೊಂಕಣಿ) ಅಧ್ಯಯನ ನಡೆಸಲು ಇಚ್ಛೆಪಟ್ಟಲ್ಲಿ ಅಂತಹ ಇಬ್ಬರು ಅಭ್ಯರ್ಥಿಗಳಿಗೆ ಎಂ.ಎ. ಪದವಿ ಅಧ್ಯಯನದ ವೆಚ್ಚವನ್ನು ಅಕಾಡೆಮಿ ವತಿಯಿಂದ ನೀಡುವ ಯೋಜನೆಯಿದೆ. ಆಸಕ್ತ ಕೊಂಕಣಿ ಮಾತೃಭಾಷಿಕ ಅಭ್ಯರ್ಥಿಗಳು ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ಅಕಾಡೆಮಿ ಕಛೇರಿಯಲ್ಲಿ 0824-2453167 ಅಥವಾ This email address is being protected from spambots. You need JavaScript enabled to view it. ಮುಖಾಂತರ ನೊಂದಾಯಿಸಲು ಕೋರಲಾಗಿದೆ.