Print

ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ ಥಾವ್ನ್ ಯೆವ್ಜಿಲ್ಲೆಂ ತೀನ್ ದಿಸಾಂಚೆಂ ನಾಟಕಾಚೆಂ ವಸ್ತೆ ಶಿಬಿರ್ ಆಕ್ಟೋಬರ್ ೦೨ ವೆರ್ ಕಲಾಂಗಣಾಂತ್ ಚಲ್ಲೆಂ. ಕಲಾಕಾರಾಂಕ್ ಮೇಕಪ್ ಕರ್‍ಚೆದ್ವಾರಿಂ ಫಾಮಾದ್ ತುಳು ಕಲಾಕಾರ್ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಹಾಣೆಂ ಶಿಬಿರ್ ಉಗ್ತಾಯ್ಲೆಂ. ಅಸಲಿಂ ಶಿಬಿರಾಂ ನಾಟಕ್ ಶೆತಾಕ್ ಚಡಿತ್ ಬಳ್ ಭರ್‍ತಾತ್. ಯುವಜಣಾಂ ಥಂಯ್ ನಾಟಕಾವಿಶಿಂ ಆಸಕ್ತ್ ಉಬ್ಜಲ್ಯಾರ್ ನವೆಂಸಾಂವ್ ಯೆಂವ್ಚ್ಯಾಂತ್ ದುಬಾವ್ ನಾ ಮ್ಹಣ್ ಸಾಂಗುನ್ ಸರ್ವಾಂಕ್ ಬರೆಂ ಮಾಗ್ಲೆಂ.

ಅಧ್ಯಕ್ಷ್‌ಪಣ್ ಘೆತ್‌ಲ್ಲ್ಯಾ ರೊಯ್ ಕ್ಯಾಸ್ತೆಲಿನೊನ್ ಆಜ್ ದೇಶ್‌ಭರ್ ಸ್ವಚ್ಛ್ ಭಾರತ್ ಅಭಿಯಾನ್ ಚಲುನ್ ಆಸಾ. ಸ್ವಚ್ಛ್ ಭಾರತ್ ಮ್ಹಳ್ಯಾರ್ ಸಾರೊಣ್ ಘೆವ್ನ್ ಝಾಡ್ಚೆಂ ನ್ಹಯ್. ದೇಶಾಚ್ಯಾ ಶಿರಾಂಶಿರಾಂನಿ ಆಕಾಂತ್ ಉಬ್ಜಾಯಿಲ್ಲ್ಯಾ ಕೋಮುವಾದ್, ಭ್ರಷ್ಟಾಚಾರ್ ಆನಿ ಆಕಾಂತ್‌ವಾದಾಕ್ ಝಾಡ್ನ್ ಕಾಡ್ಚಿ ಗರ್ಜ್ ಆಸಾ. ನಾಟಕಾ ಮುಕಾಂತ್ರ್ ಕಲಾಕಾರಾಂನಿ ಲೊಕಾ ಥಂಯ್ ಜಾಗೃತಿ ಹಾಡ್ಯೆತ್ ಮ್ಹಣ್ ಸಾಂಗ್ಲೆಂ. 
ಕಾರ್ಯಾಚೊ ಮುಕೇಲ್ ಸಯ್ರೊ ಮಾಂಡ್ ಸೊಭಾಣ್ ಗುರ್ಕಾರ್ ಎರಿಕ್ ಒಝೇರಿಯೊನ್  ಅಕಾಡೆಮಿಚೆಂ ತೀನ್ ಮಯ್ನ್ಯಾಳೆಂ ‘ಕೊಂಕಣಿ ಸಿರಿಸಂಪದ ಮೆಕ್ಳಿಕ್ ಕೆಲೆಂ.

ರಿಜಿಸ್ಟ್ರಾರ್ ಡೊ ದೇವದಾಸ್ ಪೈ ಹಾಣೆ ಧನ್ಯವಾದ್ ದೀವ್ನ್ ವಿತೊರಿ ಕಾರ್ಕಳಾನ್ ಕಾರ್ಯೆಂ ಚಲಯ್ಲೆಂ.

 

 

 


ಕೊಂಕಣಿ ನಾಟಕ ಶಿಬಿರದ ಉದ್ಘಾಟನೆ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ ಕೊಂಕಣಿ ನಾಟಕ ಶಿಬಿರದ ಉದ್ಘಾಟನೆಯು ಆಕ್ಟೋಬರ್ 02 ರಂದು ನಗರದ ಕಲಾಂಗಣ್‌ನಲ್ಲಿ ನಡೆಯಿತು. ಕಲಾವಿದರಿಗೆ ಮೇಕಪ್ ಮಾಡುವ ಮೂಲಕ ಪ್ರಖ್ಯಾತ ನಾಟಕಕಾರ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಶಿಬಿರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಅಕಾಡೆಮಿಯ ಈ ಶಿಬಿರ ನಾಟಕ ಕ್ಷೇತ್ರಕ್ಕೆ ಹೆಚ್ಚಿನ ಬಲ ತುಂಬುತ್ತದೆ. ಯುವಜನರಲ್ಲಿ ನಾಟಕ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸಿದರೆ ಹೊಸತನ ಬರುವುದರಲ್ಲಿ ಸಂಶಯವಿಲ್ಲ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಇಂದು ದೇಶಾದ್ಯಾಂತ ಸ್ವಚ್ಛ ಭಾರತ ಅಭಿಯಾನ ನಡೆಯುತ್ತಿದೆ. ಸ್ವಚ್ಛ ಭಾರತ ಎಂದರೆ ಪೊರಕೆ ಹಿಡಿದು ಕಸ ಗುಡಿಸುವುದಲ್ಲ. ದೇಶದ ನರನಾಡಿಗಳಲ್ಲಿ ಆತಂಕ ಹುಟ್ಟಿಸಿರುವ ಕೋಮುವಾದ, ಭೃಷ್ಟಾಚಾರ ಮತ್ತು ಆತಂಕವಾದವನ್ನು ಗುಡಿಸಿ ಹಾಕಬೇಕಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾಟಕದ ಮುಖಾಂತರ ಕಲಾವಿದರು ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿ ಮಾಂಡ್ ಸೊಭಾಣ್ ಗುರಿಕಾರ ಶ್ರೀ ಎರಿಕ್ ಒಝೇರಿಯೊ ಅಕಾಡೆಮಿ ತ್ರೈಮಾಸಿಕ ‘ಕೊಂಕಣಿ ಸಿರಿಸಂಪದವನ್ನು ಬಿಡುಗಡೆಗೊಳಿಸಿದರು.
ರಿಜಿಸ್ಟ್ರಾರ್ ಡಾ ದೇವದಾಸ್ ಪೈ ವಂದಿಸಿ ವಿಕ್ಟರ್ ಮತಾಯಸ್ ನಿರೂಪಿಸಿದರು.

ಮೂರು ದಿವಸ ನಡೆಯುವ ಈ ಶಿಬಿರದಲ್ಲಿ ಕೊಂಕಣಿಯ ಏಕ ಮಾತ್ರ ರೆಪರ್ಟರಿ ಕಲಾಕುಲ್ ವತಿಯಿಂದ ನಾಟಕದ ಬಗ್ಗೆ ವಿವಿಧ ಮಾಹಿತಿ, ಪ್ರಾತ್ಯಕ್ಷಿತೆ ನೀಡಲಾಗುವುದು. ಸಮಾರೋಪದಲ್ಲಿ ಶಿಬಿರಾರ್ಥಿಗಳಿಂದ ಪ್ರದರ್ಶನ ನಡೆಯಲಿರುವುದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಧಾರವಾಡದಿಂದ 45 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.