ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿನ್ ಮಾಂಡುನ್ ಹಾಡ್‌ಲ್ಲೆಂ ಕೊಂಕ್ಣಿ ನಾಟಕ್ ಶಿಬಿರಾಚೆಂ ಸಂಪ್ಣೆ ಕಾರ್ಯೆಂ ಅಕ್ಟೋಬರ್ 04 ವೆರ್ ಕಲಾಂಗಣಾಂತ್ ಚಲ್ಲೆಂ. ಶಿಬಿರಾರ್ಥಿಂಕ್ ಪ್ರಮಾಣ್ ಪತ್ರಾಂ ವಿತ್ರಾವ್ನ್ ಉಲಯಿಲ್ಲೊ ಮುಕೇಲ್ ಸಯ್ರೊ ಬಳ್ಳಾರಿಚೊ ಭಿಸ್ಪ್ ಅ. ಮಾ. ಹೆನ್ರಿ ಡಿಸೊಜಾ “ನಾಟಕ್ ಮ್ಹಳ್ಯಾರ್ ಫಕತ್ ಮನೋರಂಜನ್ ನ್ಹಯ್. ಲೊಕಾಚಿಂ ಮನಾ ಉಜ್ವಾಡಾಯ್ಜೆ. ಲೊಕಾಭಿಪ್ರಾಯ್ ರುತಾ ಕರಿಜೆ ಆನಿ ಸಮಾಜೆಚ್ಯಾ ಬದ್ಲಾಪಾಕ್ ಕಾರಣ್ ಜಾಯ್ಜೆ ಮ್ಹಣ್ ಸಾಂಗ್ಲೆಂ. ತುಮಿ ಹಾಂಗಾ ಘೆತ್‌ಲ್ಲಿ ತರ್ಬೆತಿ ಫುಡೆಂ ವ್ಹರಿಜೆ ಆನಿ ಕೊಂಕ್ಣೆಚೆ ಉತ್ತಿಮ್ ಕಲಾಕಾರ್ ಜಾಯ್ಜೆ ಮ್ಹಣ್ ಬರೆಂ ಮಾಗ್ಲೆಂ.

ಮಾನಾಚೊ ಸಯ್ರೊ ಮಂಗ್ಳುರ್ ವಿಶ್ವವಿದ್ಯಾನಿಲಯಾಚೊ ರಿಜಿಸ್ಟ್ರಾರ್ ಡಾ. ಪಿ.ಎಸ್. ಯಡಪಡಿತ್ತಾಯ ಹಾಣೆ ಆಪ್ಲ್ಯಾ ಸಂದೇಶಾಂತ್  “ಸಿನೆಮಾಕ್ ಆಸ್‌ಲ್ಲೆಪರಿಂ ನಾಟಕಾಕ್ ಟೇಕ್-ರಿಟೇಕ್ ನಾ. ಫಕತ್ ತರ್ಬೆತಿ ಮಾತ್ರ್. ಹೊಚ್ ನಾಟಕಾಚೊ ಜೀವ್. ನೀಜ್ ಪ್ರತಿಭಾ ಮಾತ್ರ್ ಹಾಂಗಾ ಉರ್‍ತಾ. ಯುವಜಣಾ ಥಂಯ್ ಆಸ್ಚಿ ಸಕತ್ ಭಾಯ್ರ್ ಘಾಲ್ಚೆಂ ಏಕ್ ಪ್ರಬಲ್ ಮಾಧ್ಯಮ್ ನಾಟಕ್ ಶೆತ್. ಹೆಂ ಶಿಬಿರ್ ತುಮ್ಕಾಂ ಏಕ್ ಆರಂಭ್ ಮಾತ್ರ್. ನೀಜ್ ನಾಟಕ್ ಸುರು ಜಾಂವ್ಚೊ ಶಿಬಿರ್ ಸಂಪ್ಲ್ಯಾ ಉಪ್ರಾಂತ್. ತುಮ್ಚೆಂ ಬರೆಂ ಜಾಂವ್ ಮ್ಹಣ್ ಸಾಂಗ್ಲೆಂ.

ಸಭೆಚೊ ಅಧ್ಯಕ್ಷ್  ರೊಯ್ ಕ್ಯಾಸ್ತೆಲಿನೊನ್ “ ಫಕತ್ ತೀನ್ ದಿಸಾಂನಿ ಸ ದಿಸಾಂಚಿ ತರ್ಬೆತಿ ಶಿಬಿರಾರ್ಥಿಂನಿ ಘೆತ್ಲ್ಯಾ. ಮೇಕಪ್, ಮುಖ್ಡೆಂ ತಯಾರಿ, ನಾಚ್, ನಟನ್, ಉಜ್ವಾಡ್ ಸಂಯೋಜನ್, ವೆದಿ ವಿನ್ಯಾಸ್ ಅಶೆಂ ನಾಟಕಾಚ್ಯಾ ಹರ್ಯೆಕಾ ಗಜಾಲಿಂ ವಿಶ್ಯಾಂತ್ ಮಾಹೆತ್ ಆನಿ ಮುಳಾವಿ ತರ್ಬೆತಿ ದಿಲ್ಯಾ. ಹಿ ತರ್ಬೆತಿ ತುಮಿ ವಾಡಯ್ಜೆ ಆನಿ ಅಕಾಡೆಮಿಚ್ಯಾ ಕಾರ್ಯಾಂನಿ ವಾಂಟೊ ಘೆಜೆ ಅಶೆಂ ಸಾಂಗ್ಲೆಂ. ತಶೆಂಚ್ ಸರ್ಕಾರಾ ಥಾವ್ನ್ ಮ್ಹಾಲ್ಗಡ್ಯಾ ಕಲಾಕಾರಾಂಕ್ ಮಾಸಾಶನ್ (ಗೌರವ್‌ಧನ್) ಮೆಳ್ತಾ. ಪೂಣ್ ಕೊಣ್‌ಯಿ ಕೊಂಕ್ಣಿ ಕಲಾಕಾರ್ ತೆಂ ಘೆನಾಂತ್. ದೆಕುನ್ ಕೊಂಕ್ಣಿ ಕಲಾಕಾರಾಂಕ್ ಹ್ಯಾ ಬಾಬ್ತಿನ್ ಅಕಾಡೆಮಿ ಥಾವ್ನ್ ಸಹಕಾರ್ ದಿತಲ್ಯಾಂವ್ ಮ್ಹಣ್‌ಯಿ ತಾಣೆ ಕಳಯ್ಲೆಂ. ಹಿ ಜವಾಬ್ದಾರಿ ಸಾಂಕೇತಿಕ್ ರಿತಿನ್ ಡೊಲ್ಲಾ ಮಂಗ್ಳುರ್ ಹಾಕಾ ಕೊವ್ಳೊ ದಿಂವ್ಚೆ ದ್ವಾರಿಂ ಹಾತಾಂತರ್ ಕೆಲಿ.
 
ಹ್ಯಾ ವೆದಿ ಥಾವ್ನ್ ಜೊನ್ ಎಂ. ಪೆರ್ಮನ್ನೂರ್ ಹಾಚೊ ‘ರತ್ನಗಿರಿಚೊ ಸರ್ದಾರ್ ಆನಿ ದಿ. ಗಣೇಶ ಶರ್ಮಾ ಹಾಚೊ ‘ಬಾಯ್ಲ ಮಿಗೆಲಿ ಕುಳಾರ್ ಗೆಲಿ ನಾಟಕಾಂಚಿಂ ಪುಸ್ತಕಾಂ ಲೊಕಾರ್ಪಣ್ ಕೆಲಿಂ. ಗಣೇಶ್ ಶರ್ಮಾಚೊ ಪೂತ್ ಸಮರ್ಥ ಶರ್ಮ ವೆದಿರ್ ಹಾಸ್‌ಲ್ಲೊ.

ಶಿಬಿರಾರ್ಥಿಂಚ್ಯಾ ತರ್ಪೆನ್ ಭಾವನಾ ಶೆಣೈ ಆನಿ ಪ್ರಶಾಂತ್ ಡಿಕೊಸ್ತಾ ತಶೆಂಚ್ ಸಂಪನ್ಮೂಳ್ ವ್ಯಕ್ತಿಂಚ್ಯಾ ತರ್ಪೆನ್  ಅರುಣ್‌ರಾಜ್ ರೊಡ್ರಿಗಸ್ ಹಾಣೆಂ ಅಭಿಪ್ರಾಯ್ ದಿಲಿ. ಅಕಾಡೆಮಿ ರಿಜಿಸ್ಟ್ರಾರ್ ಡಾ. ದೇವದಾಸ್ ಪೈ ಹಾಣೆ ಯೆವ್ಕಾರ್ ಮಾಗುನ್ ಅರವಿಂದ ಶಾನುಭಾಗಾನ್ ವಂದಿಲೆಂ. ವಿತೊರಿ ಕಾರ್ಕಳಾನ್ ಕಾರ್ಯೆಂ ಚಲಯ್ಲೆಂ. ಉಪ್ರಾಂತ್ ಶಿಬಿರಾರ್ಥಿಂ ಥಾವ್ನ್ ಪ್ರದರ್ಶನ್ ಚಲ್ಲೆಂ.

ಕ್ರಿಸ್ಟೋಫರ್ ಡಿಸೊಜಾ ನೀನಾಸಂ ಆನಿ ಸತೀಶ್ ನೀನಾಸಂ ಸಂಪನ್ಮೂಳ್ ವ್ಯಕ್ತಿ ಜಾವ್ನ್ ತಶೆಂಚ್ ಮೆಲ್ವಿನ್ ಪಾಯ್ಸ್, ರೋಹನ್ ಲೋಬೊ, ಮ್ಯಾಲ್ಕನ್ ರೇಗೊ ಆನಿ ರಿವಿನ್ ಕ್ರಾಸ್ತಾ ಹೆ ಸಹಾಯಕ್ ಜಾವ್ನ್ ಶಿಬಿರ್ ಚಲವ್ನ್ ದಿಲೆಂ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಆನಿ ಧಾರವಾಡ ಥಾವ್ನ್ 18 ಚಲಿಯಾಂಸವೆಂ 45 ಶಿಬಿರಾರ್ಥಿಂನಿ ಭಾಗ್ ಘೆತ್‌ಲ್ಲೊ.

 

 

 

 


ಶಿಬಿರಾರ್ಥಿ:
ಅನಿಶಾ ಅಸುಂತಾ ಮೊಂತೇರೊ, ಗ್ಲೆವಿಟಾ ಡಿಸೊಜಾ, ರೀಮಾ ಪ್ರಿಯಾ ಡಿಸೊಜಾ, ಟೀನಾ ಎಲ್ವಿಶಾ ಫೆರಾವೊ, ಕ್ಲೆವಿಟಾ ಡಿಸೊಜಾ, ಕ್ಯಾರಲ್ ಹೆನ್ಜಿಲ್ ಡಿಸೊಜಾ, ಲೆಸ್ಟರ್ ಮೆಲ್ವಿನ್ ಮಿನೇಜಸ್, ವೀಣಾ ಪ್ರೆಸಿಲ್ಲಾ ಪಾಯ್ಸ್, ಕ್ಲ್ಯಾನ್‌ವಿನ್ ಬ್ರಾಯನ್ ಫೆರ್ನಾಂಡಿಸ್, ಐವನ್ ಅವಿನಾಶ್ ಡಿಸೊಜಾ, ಸ್ವರ್ಣ ರೀಟಾ ವೇಗಸ್, ಅರುಣ್ ಜೊಯ್ಸನ್ ತಾವ್ರೊ, ರೆನೊಲ್ಡ್ ಲೋಬೊ, ಭಾವನಾ ಪಿ. ಶೆಣೈ, ಎಂ. ರಕ್ಷಿತ್ ಕಾಮತ್, ನಿಶ್ಮಿತಾ ಮರಿಯಾ ಡಿಸೊಜಾ, ಶೆರಿನ್ ಡಿಸೊಜಾ, ಡೆಲ್ಸನ್ ಡಿಸೊಜಾ, ಜೊಯ್ ವಿ. ಫೆರ್ನಾಂಡಿಸ್, ಆವಿನ್ ಪಿರೇರಾ, ಅಜಯ್ ಫೆರ್ನಾಂಡಿಸ್, ವಿನೀತ್ ಲುವಿಸ್, ಹ್ಯಾನ್ಲಿ ವಿಶಾಲ್ ಕುವೆಲ್ಲೊ, ಜೀತನ್ ಬ್ಲ್ಯಾನಿ ರೇಗೊ, ಪ್ರೀತಮ್ ಕ್ರಿಸ್ಟೋಫರ್ ರೊಡ್ರಿಗಸ್, ನಿಶ್ಮಾ ಮ್ಯೂರಲ್ ಡಿಸೊಜಾ, ಸಂದೀಪ್ ಟೆಲ್ಲಿಸ್, ರೋಹನ್ ಡಿಸೊಜಾ, ಡೊನಾಲ್ಡ್ ಜೊಯ್ ಡಿಸೊಜಾ, ಫ್ರಿವಿಟಾ ಡಿಸೊಜಾ, ಅಪೂರ್ವ ಕಿಣಿ, ಗ್ಲಾಯ್ಡನ್ ಕುವೆಲ್ಲೊ, ಆರ್ವಿನ್ ಐವನ್ ಮೊರಾಸ್, ಪ್ರೀತಿ ಮಾರ್ಥಾ ಡಿಸೊಜಾ, ರೋಶನ್ ಫೆರ್ನಾಂಡಿಸ್, ವಿನಿಶಾ ಪ್ರೀಮಾ ಡಿಸೊಜಾ, ಅಚ್ಯುತ್ ಶ್ಯಾನುಭಾಗ, ವಿಘ್ನೇಶ್ ಎನ್ ಪ್ರಭು, ಅರವಿಂದ್ ಶ್ಯಾನುಭಾಗ, ಸೂರಜ್ ಪಿಂಟೊ, ರೊನ್ಸನ್ ಡಿಸೊಜಾ, ಫ್ಲಾವಿಯಾ ರೊಡ್ರಿಗಸ್, ಪ್ರಶಾಂತ್ ಡಿಕೋಸ್ತಾ, ರವೀಶ್ ಎಸ್., ಪಾಯಲ್ ರಾಥೊಡ್

 

ಕೊಂಕಣಿ ನಾಟಕ ಶಿಬಿರದ ಸಮಾರೋಪ:

ಅಕ್ಟೋಬರ್ 2 ರಂದು ತುಳು ರಂಗಭೂಮಿಯ ಖ್ಯಾತ ಕಲಾವಿದ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಅವರು ಉದ್ಘಾಟಿಸಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ ಕೊಂಕಣಿ ನಾಟಕ ಶಿಬಿರದ ಸಮಾರೋಪ ಕಾರ್ಯಕ್ರಮವು ಅಕ್ಟೋಬರ್ ೦4 ರಂದು ನಗರದ ಕಲಾಂಗಣ್‌ನಲ್ಲಿ ನಡೆಯಿತು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಮುಖ್ಯ ಅತಿಥಿ ಬಳ್ಳಾರಿ ಧರ್ಮಾಧ್ಯಕ್ಷರಾದ ಅ. ವಂ. ಹೆನ್ರಿ ಡಿಸೊಜಾ “ನಾಟಕ ಎಂದರೆ ಕೇವಲ ಮನೋರಂಜನೆ ಮಾತ್ರ ಅಲ್ಲ. ಜನರ ಮನ ಬೆಳಗಿಸಬೇಕು. ಜನಾಭಿಪ್ರಾಯ ರೂಪಿಸಬೇಕು ಹಾಗೂ ಸಮಾಜದ ಬದಲಾವಣೆಗೆ ಕಾರಣವಾಗಬೇಕು ಎಂದು ಹೇಳಿದರು. ನೀವು ಇಲ್ಲಿ ಪಡೆದ ತರಬೇತಿಯನ್ನು ಮುಂದುವರಿಸಬೇಕು. ಕೊಂಕಣಿಯ ಉತ್ತಮ ಕಲಾವಿದರಾಗಬೇಕು ಎಂದು ಶುಭ ಹಾರೈಸಿದರು.

ಇನ್ನೊರ್ವ ಅತಿಥಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಪಿ.ಎಸ್. ಯಡಪಡಿತ್ತಾಯ ಇವರು “ಸಿನೆಮಾಕ್ಕಿದ್ದಂತೆ ನಾಟಕಕ್ಕೆ ಟೇಕ್-ರಿಟೇಕ್ ಇಲ್ಲ. ಇದೇ ನಾಟಕದ ಜೀವಾಳ. ನಿಜವಾದ ಪ್ರತಿಭೆ ಮಾತ್ರ ಇಲ್ಲಿ ಉಳಿಯುತ್ತದೆ. ಯುವಜನರಲ್ಲಿರುವ ಶಕ್ತಿಯ ಸೆಲೆ ಹೊರ ಹಾಕುವ ಒಂದು ಪ್ರಬಲ ಮಾಧ್ಯಮ ನಾಟಕ. ಈ ಶಿಬಿರ ಒಂದು ಆರಂಭ ಮಾತ್ರ. ನಿಜವಾದ ಆಟ ಶಿಬಿರ ಮುಗಿದ ನಂತರ ಆರಂಭವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ “ಕೇವಲ ಮೂರು ದಿನದಲ್ಲಿ ಆರು ದಿನದ ತರಬೇತಿಯನ್ನು ಶಿಬಿರಾರ್ಥಿಗಳು ಪಡೆದಿದ್ದಾರೆ. ಮೇಕಪ್, ಮುಖವಾಡ ರಚನೆ, ನೃತ್ಯ, ಅಭಿನಯ, ಬೆಳಕು ಸಂಯೋಜನೆ, ರಂಗ ವಿನ್ಯಾಸ ಹೀಗೆ ನಾಟಕದ ಪ್ರತಿಯೊಂದು ಪ್ರಕಾರದ ಬಗ್ಗೆಯು ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ನೀಡಲಾಗಿದೆ. ಇದನ್ನು ನೀವು ಇನ್ನೂ ಬೆಳೆಸಬೇಕು. ಹಾಗೂ ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಬೇಕು ಎಂದು ಕಿವಿ ಮಾತು ಹೇಳಿದರು. ಸರ್ಕಾರದಿಂದ ಹಿರಿಯ ಕಲಾವಿದರಿಗೆ ಮಾಸಾಶನ ದೊರೆಯುತ್ತದೆ. ಆದರೆ ಕೊಂಕಣಿಯ ಕಲಾವಿದರು ಇದನ್ನು ಪಡೆಯುವುದಿಲ್ಲ. ಅಕಾಡೆಮಿ ವತಿಯಿಂದ ಕಲಾವಿದರಿಗೆ ಈ ಬಗ್ಗೆ ಸಹಕರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು. ಈ ಜವಾಬ್ದಾರಿಯನ್ನು ಕೊಂಕಣಿಯ ಹಿರಿಯ ಕಲಾವಿದ ಶ್ರೀ ಡೊಲ್ಲಾ ಮಂಗ್ಳುರ್ ಇವರಿಗೆ ಇವರಿಗೆ ಸಾಂಕೇತಿಕವಾಗಿ ನೀಡಲಾಯಿತು.

ಇದೇ ವೇಳೆ ಅಕಾಡೆಮಿಯ ತಿಂಗಳಿಗೆರಡು ಪುಸ್ತಕ ಮಾಲಿಕೆಯಲ್ಲಿ ಜೊನ್ ಎಂ. ಪೆರ್ಮನ್ನೂರ್ ಇವರ ‘ರತ್ನಗಿರಿಚೊ ಸರ್ದಾರ್ ಹಾಗೂ ದಿ. ಗಣೇಶ ಶರ್ಮಾ ಇವರ ‘ಬಾಯ್ಲ ಮಿಗೆಲಿ ಕುಳಾರ್ ಗೆಲಿ ನಾಟಕದ ಪುಸ್ತಕಗಳನ್ನು ಲೊಕಾರ್ಪಣೆಗೊಳಿಸಲಾಯಿತು. ಅವರ ಪುತ್ರ ಸಮರ್ಥ ಶರ್ಮ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳ ಪರವಾಗಿ ಭಾವನಾ ಶೆಣೈ ಮತ್ತು ಪ್ರಶಾಂತ್ ಡಿಕೋಸ್ತಾ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಅರುಣ್ ರಾಜ್ ತಮ್ಮ ಅಭಿಪ್ರಾಯ ಮಂಡಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಡಾ. ದೇವದಾಸ್ ಪೈ ಸ್ವಾಗತಿಸಿ, ಸದಸ್ಯ ಅರವಿಂದ ಶಾನುಭಾಗ ವಂದಿಸಿದರು. ವಿಕ್ಟರ್ ಮತಾಯಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ಶಿಬಿರಾರ್ಥಿಗಳಿಂದ ಪ್ರದರ್ಶನ ನಡೆಯಿತು.

ಕ್ರಿಸ್ಟೋಫರ್ ಡಿಸೊಜಾ ನೀನಾಸಂ ಮತ್ತು ಸತೀಶ್ ನೀನಾಸಂ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಮೆಲ್ವಿನ್ ಪಾಯ್ಸ್, ರೋಹನ್ ಲೋಬೊ, ಮ್ಯಾಲ್ಕನ್ ರೇಗೊ ಮತ್ತು ರಿವಿನ್ ಕ್ರಾಸ್ತಾ ಇವರು ಸಹಾಯಕರಾಗಿ ಶಿಬಿರ ನಡೆಸಿ ಕೊಟ್ಟರು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಿಂದ 18 ಹೆಣ್ಮಕ್ಕಳೊಡಗೂಡಿ ಒಟ್ಟು 45 ಶಿಬಿರಾರ್ಥಿಗಳು ಭಾಗವಹಿಸಿದ್ದರು.

 

 

 

 

 

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]