ಆಮ್ಚ್ಯಾ ಗಾಂವ್ಚೆಂ ಸಾಹಿತಿಕ್ ಫೆಸ್ತ್ ಆಳ್ವಾಸ್ ನುಡಿಸಿರಿಂತ್ ಪಯ್ಲೆ ಪಾವ್ಟಿಂ ಕೊಂಕ್ಣಿ ಭಾಶೆಚೊ ಆಸ್‌ಪಾವ್ ಆಸ್‌ಲ್ಲೊ. ಮೂಡ್‌ಬಿದ್ರೆಚ್ಯಾ ನುಡಿಸಿರಿ ಮೈದಾನಾರ್ ಘಾಲ್ಲ್ಯಾ ಬಿ.ವಿ. ಬಾಳಿಗಾ ಮ್ಹಾದಾರಾ ಭಿತರ್, ಟಿಎಮ್‌ಎ ಪೈ ಉಗ್ತ್ಯಾ ಸಭಾಂಗ್ಣಾಂತ್ಲ್ಯಾ ವಿಲ್ಫಿ ರೆಬಿಂಬಸ್ ವೆದಿರ್ ನವೆಂಬ್ರ್ 15 ಸನ್ವಾರಾ ಸಾಂಜೆ ಥಾವ್ನ್ ರಾತಿಂ 10.30 ಪರ್ಯಾಂತ್ ಕೊಂಕ್ಣೆಚೊ ನಾದ್ ಗಾಜ್ಲೊ. ವೆವೆಗ್ಳ್ಯಾ ಕೊಂಕ್ಣಿ ಸಂಸ್ಕೃತಿಂಚೆಂ ಜಬರ್‌ದಸ್ತ್ ಪ್ರದರ್ಶನ್ ಚಲ್ಲೆಂ.

 

 

 

 

 


ಜುಸ್ತ್ 5.30 ವರಾರ್ ಸಯ್ರ್ಯಾಂಕ್, ಮ್ಹಾ ದಾರಾ ಥಾವ್ನ್ ಬೇಂಡ್, ಕೊಂಬಾಚ್ಯಾ ನಾದಾನ್ ವೆದಿಕ್ ಮನಾನ್ ಆಪೊವ್ನ್ ವೆಲೆಂ. ಕಲಾಪಂಗ್ಡಾಂನಿ ಪುರ್ಶಾಂವಾರ್ ಸಾಂಗಾತ್ ದಿಲೊ. ಮೂಡ್‌ಬಿದ್ರಿ ಪರಿಸರಾಂತ್ಲ್ಯಾ 100 ಗಾವ್ಪ್ಯಾಂನಿ ಅಬ್ದುಲ್ ರಹೀಮ್ ಇರ್ಶಾದ್ ಹಾಣೆ ಲಿಖ್‌ಲ್ಲೆಂ ಕೊಂಕಣಿ ಆಮ್ಚಿ ಭರಮ್‌ಚಿ ಭಾಸ್ ಗೀತ್ ಗಾವ್ನ್ ಕಾರ್ಯಾಕ್ ಸುರ್ವಾತ್ ದಿಲಿ.

ಕೊಂಕ್ಣಿಚೆಂ ಸಾಂಪ್ರದಾಯಿಕ್ ವಾದ್ಯ್ ಗುಮಟಾಚೆರ್ ಥಾಪಿ ಮಾರ್ನ್ ಮಂಗ್ಳುರ್‍ಚೊ ಭಿಸ್ಪ್ ಅ.ಮಾ.ದೊ. ಲುವಿಸ್ ಪಾವ್ಲ್ ಸೊಜಾನ್ ಕಾರ್ಯೆಂ ಉಗ್ತಾಯ್ಲೆಂ. ``ರಾಷ್ಟ್ರ್ ಮಾನ್ಯತಾ ಮೆಳ್‌ಲ್ಲಿ, ವಿವಿಧತೆಂತ್ ಏಕತಾ ಸಾಂಬಾಳ್ಚಿ ಕೊಂಕ್ಣಿ ಭಾಸ್ ಉರಯ್ನಾ ತರ್ ತಿ ಚರಿತ್ರೆಂತ್ ಲಿಪ್ಚಿ ಸಾಧ್ಯತಾ ಆಸಾ. ಎಕ್ವಟಾಚಿ ಭಾಸ್ ಜಾವ್ನ್ ಆಸ್ಚಿ ಕೊಂಕ್ಣಿ ಉರ್ತಲಿ ಆನಿ ವಾಡ್ತಲಿ ಮ್ಹಣ್ ತಾಣಿ ಆಪ್ಲೊ ಉಗ್ತಾವ್ಣೆ ಸಂದೇಶ್ ದಿಲೊ. ಆನಿ ನುಡಿಸಿರಿ ಕಾರ್ಯಾಂತ್ ಕೊಂಕ್ಣೆಕ್ ಜಾಗೊ ದಿಲ್ಲ್ಯೆಖಾತಿರ್ ಡೊ. ಮೋಹನ್ ಆಳ್ವಾಕ್ ಅಭಿನಂದನ್ ಪಾಟಯ್ಲೆಂ.

 

 

 

 

 

 

 

 

 


ಮಾಂಡ್ ಸೊಭಾಣ್ (ನೊ) ಮಂಗ್ಳುರ್, ವಿಶ್ವ ಕೊಂಕ್ಣಿ ಕೇಂದ್ರ್-ಶಕ್ತಿನಗರ, ಮಂಗ್ಳುರ್, ಶ್ರೀ ಮಿಜಾರ್ ಅಣ್ಣಪ್ಪ-ಯಕ್ಷಗಾನ ಕಲಾಕಾರ್, ಆನಿ ಶ್ರೀ ಗೋಪಾಲ್ ಖಾರ್ವಿ-ಉಪ್ಯೆಂವ್ಚ್ಯಾಂತ್ ಗಿನ್ನೆಸ್ ದಾಕ್ಲೊ ರಚ್ಪಿ ಹಾಂಕಾಂ ಹ್ಯಾ ವೆಳಿಂ ಮಾನ್ ಕೆಲೊ.

ಕಾರ್ಯಾಚೊ ಮುಕೇಲ್ ಸಯ್ರೊ ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿ ಅಧ್ಯಕ್ಷ್ ಶ್ರೀ ರೊಯ್ ಕ್ಯಾಸ್ತೆಲಿನೊನ್ ಜಾಗತೀಕರಣಾಚ್ಯಾ ಲೊಟಾಂತ್ ಕೊಂಕ್ಣಿ ಸಾಹಿತ್ಯಾಕ್ ಪ್ರೋತ್ಸಾವ್ ದೀಂವ್ಕ್ ಆಮಿ ಸುರು ಕೆಲ್ಲೆಂ ಮೊಬೈಲ್ ಬಜಾರ್ ಯಶಸ್ವಿ ಜಾವ್ನ್ ಚಲುನ್ ಆಸಾ. ಮಯ್ನ್ಯಾಕ್ ದೋನ್ ಪುಸ್ತಕಾಂ ಪರ್ಗಟುನ್, ತಿಂ ಲೊಕಾ ಪರ್ಯಾಂತ್ ಪಾವಂವ್ಚ್ಯಾಂತ್ ಆಮಿ ಯಶಸ್ವಿ ಜಾಲ್ಯಾಂವ್ ಮ್ಹಣ್ ಸಾಂಗ್ಲೆಂ. ಫುಡಾರಾಂತ್ ಕೊಂಕ್ಣಿ ಉರಾಜೆ ತರ್ ಭುರ್ಗ್ಯಾಂನಿ ಶಾಳೆಂತ್ ಶಿಕ್ಲ್ಯಾರ್ ಮಾತ್ರ್ ಸಾಧ್ಯ್. ಸರ್ಕಾರಾನ್ ಕೊಂಕ್ಣಿ ಶಿಕೊಂವ್ಕ್ ದಿಲ್ಲೊ ಆವ್ಕಾಸ್ ಆಮಿ ಬರ್ಯಾನ್ ವಾಪ್ರಿಜೆ ಮ್ಹಣ್ ತಾಣೆ ಉಲೊ ದಿಲೊ.

 

 

 

 

 

 

 

 

 

 

 

 

 

 

 


ಕಾರ್ಯಾಚೊ ಅಧ್ಯಕ್ಷ್ ಕೊಂಕ್ಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಟಾನಾಚೊ ಅಧ್ಯಕ್ಷ್ ಶ್ರೀ ಬಸ್ತಿ ವಾಮನ್ ಶೆಣೈ ಹಾಣೆ ಆಪ್ಲ್ಯಾ ಅಧ್ಯಕ್ಷೀಯ್ ಉತ್ರಾಂನಿ ``ಭಾಶೆ ಸಂಸ್ಕೃತಿಚೆರ್ ಆನ್ವಾರಾಂ ಯೆತಾನಾ, ತಿ ಉರೊಂವ್ಕ್ ಗೊಂಯಾ ಥಾವ್ನ್ ತೆನ್ಕಾಕ್ ಪಳುನ್ ಆಯಿಲ್ಲ್ಯಾ ಕೊಂಕ್ಣಿ ಲೊಕಾಕ್ ಆಸ್ರೊ ದಿಲ್ಲೊ ಹ್ಯಾ ತುಳು ಗಾಂವ್ಚ್ಯಾ ಲೊಕಾನ್. ಆಮಿ ಕನ್ನಡ ಗಾಂವಾಂತ್ ಲೊಕಾಸವೆಂ ಮಾಯಾಮೊಗಾನ್ ಜಿಯೆಲ್ಯಾಂವ್. ಫುಡೆಂಯ್ ಹೊ ಬಾಂದ್ ಅಸೊಚ್ ಆಸುಂ ಮ್ಹಣ್ ಬರೆಂ ಮಾಗ್ಲೆಂ.

 

 

 

 

 

 

 

 

 

 

 

 

 

 

 

 

 

 

 

ಮಾನಾಚೆ ಸಯ್ರೆ ಮಂಗ್ಳುರ್ ದಕ್ಷಿಣ್ ಶಾಸಕ್ ಶ್ರೀ ಜೆ ಆರ್ ಲೋಬೊ ಆನಿ ವಿಧಾನ್ ಪರಿಷತ್ ಸಾಂದೊ ಶ್ರೀ ಐವನ್ ಡಿಸೊಜಾನ್ ಕಾರ್ಯಾಕ್ ಬರೆಂ ಮಾಗ್ಲೆಂ. ವೆದಿರ್ ನುಡಿಸಿರಿ ಉಗ್ತಾವ್ಪಿ ಶ್ರೀ ನಾ ಡಿಸೊಜಾ, ಸಂಘಟಕ್ ಡೊ ಮೋಹನ್ ಆಳ್ವಾ, ಅಕಾಡೆಮಿಚೆ ಆದ್ಲೆ ಅಧ್ಯಕ್ಷ್ ಶ್ರೀ ಎರಿಕ್ ಒಝೇರಿಯೊ ಆನಿ ಶ್ರೀ ಕಾಸರಗೋಡ್ ಚಿನ್ನಾ, ಕುಡುಮಿ ಸಮಾಜ್ ಸಂಘಾಚೊ ರಾಜ್ಯಾಧ್ಯಕ್ಷ್ ಶ್ರೀ ರಾಮಗೌಡ, ಮೂಡಬಿದ್ರೆ ಹನುಮಂತ ದಿವ್ಳಾಚೊ ಮೊಕ್ತೇಸರ್ ಶ್ರೀ ಉಮೇಶ್ ಪೈ ಆನಿ ಮೂಡಬಿದ್ರೆ ವಾರಾಡ್ಯಾಚೆ ಸಬಾರ್ ವಿಗಾರ್ ಹಾಜರ್ ಆಸ್‌ಲ್ಲೆ. ಎಲ್ ಜೆ. ಫೆರ್ನಾಂಡಿಸಾನ್ ಯೆವ್ಕಾರ್ ಮಾಗುನ್ ಡೊ ದೇವದಾಸ್ ಪೈ ಹಾಣೆಂ ವಂದಿಲೆಂ. ವೆದಿ ಕಾರ್ಯೆಂ ವೆಂಕಟೇಶ ಬಾಳಿಗಾ ಆನಿ ಲೋಯ್ಡ್ ರೇಗೊ ಹಾಣಿ ಸಾಂಬಾಳ್ಳೆಂ.

ದುಸ್ರ್ಯಾ ವಾಂಟ್ಯಾರ್ ``ಕೊಂಕ್ಣಿ: ಕಾಲ್ ಆಜ್ ಫಾಲ್ಯಾಂ ಮ್ಹಳ್ಳ್ಯಾ ವಿಷಯಾಚೆರ್ ಉಲೊವ್ಪಾಂ ಸಾದರ್ ಜಾಲಿಂ. ಕೊಂಕ್ಣಿ ಭಾಸ್ ಆನಿ ಸಾಹಿತ್ಯಾ ವಿಶ್ಯಾಂತ್ ಪ್ರೊ ವಿನ್ಸೆಂಟ್ ಆಳ್ವಾ, ಪಾಂಬೂರ್ ಆನಿ ಕೊಂಕ್ಣಿ ಕಲಾ ಆನಿ ಸಂಸ್ಕೃತಿ ವಿಶ್ಯಾಂತ್ ಪ್ರೊ. ಜಯವಂತ ನಾಯಕ್, ಮಂಗ್ಳುರ್ ಹೆ ಉಲಯ್ಲೆ.

ಉಪ್ರಾಂತ್ ಸಾಂಸ್ಕೃತಿಕ್ ಕಾರ್ಯಿಂ ಸಾದರ್ ಜಾಲಿಂ. ಕುಡ್ಮಿ ಗುಮ್ಟಾಂ ಆನಿ ತೊಣಿಯೊ (ಕುಡ್ಮಿ ಜಾನಪದ ಕಲಾವೇದಿಕೆ, ಎಡಪದವು), ಖಾರ್ವಿ ಕಲಾ ಪ್ರದರ್ಶನ್ (ಖಾರ್ವಿ ಕಲಾಮಾಂಡ್, ಭಟ್ಕಳ್) ಸಿದ್ದಿ ಕಲಾ ಪ್ರದರ್ಶನ್ (ಸಿದ್ದಿ ಕಲಾತಂಡ್, ಮುಂಡಗೋಡ್) ಜಿಎಸ್‌ಬಿ  ಪ್ರದರ್ಶನ್ (ಕೊಂಕ್ಣಿ ಸಾಂಸ್ಕೃತಿಕ್ ಸಂಘ್) ಕೊಂಕ್ಣಿ ಮ್ಹಜೊ ಫುಡಾರ್ (ಕಲಾಕುಲ್) ಹಿಂ ಕಾರ್ಯಿಂ ಸಾದರ್ ಜಾಲಿಂ. ಉಪ್ರಾಂತ್  ಶ್ರೀ ಎರಿಕ್ ಒಝೇರಿಯೊಚ್ಯಾ ನಿರ್ದೇಶನಾಖಾಲ್ ವೆವೆಗ್ಳ್ಯಾ ಯುವ ಗಾವ್ಪ್ಯಾಂನಿ ಕೊಂಕ್ಣಿ ಪದಾಂ ಗಾಯ್ಲಿಂ. ನಾಚ್ ಸೊಭಾಣಾನ್ ನಾಚ್ ಪ್ರದರ್ಶಿಲೆ. ಸಾಂಸ್ಕೃತಿಕ್ ಕಾರ್ಯಾಚೆಂ ನಿರ್ವಹಣ್ ಶೆಲ್ಡನ್ ಕ್ರಾಸ್ತಾ ಆನಿ ಸ್ಮಿತಾ ಪ್ರಭುನ್ ಸಾಂಬಾಳ್ಳೆಂ.

 

 

 

 

 

 

 

 

 

 

 

 

 

 

 

 

 

ದೆಗೆಚ್ಯಾ ವೆದಿಂತ್ ಕೊಂಕ್ಣಿ ಸಂಸ್ಕೃತಿಕ್ ಸಂಬಂಧ್ ಜಾಲ್ಲೆಂ ವಿವಿಂಗಡ್ ಪ್ರದರ್ಶನ್ ಆಸ್‌ಲ್ಲೆಂ. ಪಾನ್ ಪೊಡ್, ಉದಕ್ ದೀವ್ನ್ ಸ್ವಾಗತ್ ಕರ್ತಲಿಂ,  ಕಿರ್ಗಿಬಾಜು ನ್ಹೆಸ್ಲಲಿ, ಸಾಡೊ ನ್ಹೆಸ್ಲಲಿ ಹೊಕಾಲ್ ಆನಿ ಸಾಂಪ್ರಾದಾಯಿಕ್ ನ್ಹೆಸ್ಣಾರ್ ನೊವ್ರೆ,  ಪಾಳ್ಣ್ಯಾಂತ್ ದವರ್ಚೆಂ, ಕುಮ್ಗಾರಾಚಿಂ ಭುರ್ಗಿಂ,  ರಾಂದ್ವಯ್‌ವಿಕ್ತಲಿ, ಪಾನಾಂ ವಿಕ್ತಲಿ, ಫುಲಾಂ ಬಾಂದ್ಚಿಂ, ಮುಡೊ ಬಾಂದ್ಚೊ, ರೈತ್, ಭಾತ್ ಬಡಂವ್ಚೆಂ ಅಶೆಂ ಆದ್ಲೆಂ ಜೀವನ್ ಪಿಂತ್ರಾಂವ್ಚೆಂ ಪ್ರದರ್ಶನ್ ಆಸ್‌ಲ್ಲೆಂ. ತಶೆಂಚ್ ಜಿಎಸ್‌ಬಿ ಸಮುದಾಯಾ ಥಾವ್ನ್ ಉಪನಯನ್ ಆನಿ ಸೋನ್ ಪುಲ್ ಹಾಂಚೆಂ ಪ್ರದರ್ಶನ್ ಆಸ್‌ಲ್ಲೆಂ. ಕಾರ್ಕಳ್ಚ್ಯಾ ಮಾಸ್ಟರ್ ಕೆಟರರ್‍ಸ್ ಹಾಣಿಂ ಮಾಸಾಚಿಂ ಪಕ್ವನಾಂ, ಪೊಳಿ ವಿಕ್ರ್ಯಾಕ್ ದವರ್‌ಲ್ಲಿ ತರ್, ವಿಶ್ವ ಕೊಂಕ್ಣಿ ಆಹಾರೋತ್ಸವ ತರ್ಫೆನ್ ಜಿಎಸ್‌ಬಿ ಸಮುದಾಯಾಚಿಂ ವಿವಿಂಗಡ್ ಖಾಣಾಂ ವಿಕ್ರ್ಯಾಕ್ ಆಸ್‌ಲ್ಲಿಂ. ಹ್ಯಾ ಸುವಾತೆರ್ ಅಕಾಡೆಮಿ ತರ್ಪೆನ್ ತೀನ್ ದೀಸ್‌ಯಿ ಮೊಬೈಲ್ ಬಜಾರ್ ಆಸುನ್ ಕೊಂಕ್ಣಿ ಪುಸ್ತಕಾಂ, ಸಿಡಿ ಆನಿ ಕ್ರಿಸ್ಮಸ್ ವಸ್ತುಂಚೊ ವಿಕ್ರೊ ಕೆಲೊ.

 

 

 

 


ಆಳ್ವಾಸ್ ನುಡಿಸಿರಿಯಲ್ಲಿ ಕೊಂಕಣಿಯ ವೈಭವ ಮೆರೆದ
ಕೊಂಕಣಿ ಸಿರಿ``ವೈವಿಧ್ಯತೆಯಲ್ಲಿ ಏಕತೆ ಇರುವ ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಹೀಗೆ ಮೂರು ಪ್ರಧಾನ ಧರ್ಮೀಯರು ಮಾತನಾಡುವ ಸಾಮರಸ್ಯದ ಏಕೈಕ ಭಾಷೆಯಿದ್ದರೆ ಅದು ಕೊಂಕಣಿ. ಇಂದು ಜಾಗತೀಕರಣದ ಬೆಳವಣಿಗೆಯಿಂದಾಗಿ ಸಹಸ್ರಾರು ಸಂಖ್ಯೆಯಲ್ಲಿದ್ದ ಭಾಷೆಗಳು ಇನ್ನಿಲ್ಲವಾಗಿವೆ. ರಾಷ್ಟ್ರೀಯ ಮಾನ್ಯತೆ ಪಡೆದಿರುವ ಕೊಂಕಣಿ ಭಾಷೆಯನ್ನು ನಾವು ಬಳಸಿ, ಉಳಿಸಿ ಬೆಳೆಸದಿದ್ದರೆ ಅದು ಚರಿತ್ರೆಯಲ್ಲಿ ವಿಲೀನವಾಗುವ ಅಪಾಯವಿದೆ. ಆದರೆ ಸಾಮರಸ್ಯದ ಭಾಷೆಯಾಗಿರುವ ಕೊಂಕಣಿ ಅಳಿಯಲಾರದು, ಅಳಿಯಬಾರದು ಎಂದು ಮಂಗಳೂರಿನ ಬಿಷಪ್ ಅತೀ ವಂದನೀಯ ಎಲೋಶಿಯಸ್ ಪಾವ್ಲ್  ಡಿಸೋಜ ಹೇಳಿದರು.

ವಿದ್ಯಾಗಿರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಗೆ ಪೂರಕವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಬಿ.ವಿ.ಬಾಳಿಗಾ ದ್ವಾರದ, ಟಿ.ಎಂ.ಎ.ಪೈ ಸಭಾಂಗಣದ ವಿಲ್ಫಿ ರೆಬಿಂಬಸ್ ವೇದಿಕೆಯಲ್ಲಿ ಶನಿವಾರ ಸಂಜೆ ನಡೆದ ಆಳ್ವಾಸ್ ಕೊಂಕಣಿ ಸಿರಿಯನ್ನು ಗುಮಟೆ ವಾದನದ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕೊಂಕಣಿ ಭಾಷೆ ಮುಖ್ಯವಾಗಿ ಮನೆ, ಶಿಕ್ಷಣ, ಸಮುದಾಯ ಹೀಗೆ ಎಲ್ಲರಿಂದ ಪೋಷಿಸಲ್ಪಡಬೇಕು. ನುಡಿಸಿರಿಯ ಕನ್ನಡ ಮಾತೆಯ ಮಡಿಲಲ್ಲಿ ಕೊಂಕಣಿ ಮಾತೆಗೂ ಸ್ಥಾನ ಸಿಕ್ಕಿರುವುದು ಒಂದು ಐತಿಹಾಸಿಕ ಬೆಳವಣಿಗೆ ಎಂದು ಶ್ಲಾಘಿಸಿದ ಅವರು ಕೊಂಕಣಿಗೆ ಈ ಸ್ಥಾನ ಕಲ್ಪಿಸಿದ ಡಾ. ಮೋಹನ್ ಆಳ್ವಾ ಅವರನ್ನು ಅಭಿನಂದಿಸಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರೋಯ್ ಕ್ಯಾಸ್ತೆಲಿನೊ ಮುಖ್ಯ ಅತಿಥಿಯಾಗಿ ಮಾತನಾಡಿ `ಜಾಗತೀಕರಣದ ಹಾವಳಿಯಿಂದಾಗಿ ಕೊಂಕಣಿ ಬರಹಗಾರರಿದ್ದರೂ ಸಾಹಿತ್ಯ ಓದುವವರ ಕೊರತೆ ಇದೆ. ಅಕಾಡೆಮಿ ಈ ನಿಟ್ಟಿನಲ್ಲಿ ಆರಂಭಿಸಿರುವ ಸಂಚಾರಿ ಪುಸ್ತಕ ಮಾರಾಟ ವ್ಯವಸ್ಥೆ ಆಶಾದಾಯಕ ಬೆಳವಣಿಗೆ ದಾಖಲಿಸಿದೆ ಎಂದರು. ಭವಿಷ್ಯದಲ್ಲಿ ಕೊಂಕಣಿ ಉಳಿಯಬೇಕಾದರೆ ಮಕ್ಕಳು ಶಾಲೆಯಲ್ಲಿ ಕೊಂಕಣಿ ಕಲಿಯುವುದರ ಮೂಲಕ ಮಾತ್ರ. ಆದುದರಿಂದ ಸರಕಾರ ನಮಗೆ ನೀಡಿದ ಅವಕಾಶವನ್ನು ನಾವು ಬಳಸಿಕೊಳ್ಳಬೇಕು ಎಂದು ಕರೆಯಿತ್ತರು.

ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೋ ಮಾತನಾಡಿ ಜನಸಂಖ್ಯೆ ಹೆಚ್ಚಿದರೂ ಭಾಷೆಯನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಕೊಂಕಣಿ ನಾಟಕ ಅಕಾಡೆಮಿ ಹಾಗೂ ಮಂಗಳೂರು ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪನೆಗೆ ರಾಜ್ಯದ ಮುಖ್ಯಮಂತ್ರಿಯವರ ಗಮನ ಸೆಳೆದಿದ್ದು ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಿಸುವ ಭರವಸೆ ಸಿಕ್ಕಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರು, ಗೋವಾದಿಂದ ವಲಸೆ ಬಂದ ಕೊಂಕಣಿ ಭಾಷಿಗರು ಕರಾವಳಿಯಲ್ಲಿ ನೆಲೆಸಿ ಬೆಳೆಯಲು ತುಳುನಾಡಿನ ಜನತೆಯ ಪ್ರೋತ್ಸಾಹ ಸ್ಮರಣೀಯವಾದದ್ದು .ಕೊಂಕಣಿ ಸಾಹಿತ್ಯ, ಸಂಸ್ಕೃತಿ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕು ಎಂದರು.

ಇದೇ ವೇಳೆ ಮಂಗಳೂರಿನ ಮಾಂಡ್ ಸೊಭಾಣ್(ರಿ) ವಿಶ್ವ ಕೊಂಕಣಿ ಕೇಂದ್ರ, ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ, ಗಿನ್ನೆಸ್ ದಾಖಲೆಯ ಈಜುಗಾರ ಗೋಪಾಲ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅತಿಥಿಗಳಾಗಿ ನುಡಿಸಿಯ ಉದ್ಘಾಟಕರಾದ ಶ್ರೀ ನಾ. ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಎರಿಕ್ ಒಜೇರಿಯೊ, ಕಾಸರಗೋಡು ಚಿನ್ನಾ, ಕುಡುಬಿ ಸಮಾಜ ಸಂಘದ ರಾಜ್ಯಾಧ್ಯಕ್ಷ ಎಂ.ರಾಮ ಗೌಡ, ಮೂಡುಬಿದಿರೆಯ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಸಂಘಟಕ ಡಾ.ಎಂ.ಮೊಹನ ಆಳ್ವ ಹಾಗೂ ಮೂಡುಬಿದಿರೆ ವಲಯದ ವಿವಿಧ ಚರ್ಚ್‌ಗಳ ಧರ್ಮಗುರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭಕ್ಕೆ ಮುನ್ನ ಕೊಂಕಣಿ ಸಂಸ್ಕೃತಿಯ ಕಲಾವಿದರ ಮೆರವಣಿಗೆಯಲ್ಲಿ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ನೂರು ಕೊಂಕಣಿ ಗಾಯಕರಿಂದ ಸ್ವಾಗತ ಗೀತೆಯೊಂದಿಗೆ ಕೊಂಕಣಿ ಸಿರಿಗೆ ಸಂಭ್ರಮದ ಆರಂಭ ದೊರೆಯಿತು.
ಎಲ್.ಜೆ.ಫೆರ್ನಾಂಡಿಸ್ ಸ್ವಾಗತಿಸಿ ಕೊಂಕಣಿ ಅಕಾಡೆಮಿಯ ರಿಜಿಸ್ಟ್ರಾರ್ ಡಾ.ದೇವದಾಸ ಪೈ ವಂದಿಸಿದರು. ವೆಂಕಟೇಶ ಬಾಳಿಗಾ ಹಾಗೂ ಲಾಯ್ಡ್ ರೇಗೊ ಕಾರ್ಯಕ್ರಮ ನಿರ್ವಹಿಸಿದರು. `ಕೊಂಕಣಿ ನಿನ್ನೆ ಇಂದು ಮತ್ತು ನಾಳೆ ಪರಿಕಲ್ಪನೆಯಲ್ಲಿ  ಕೊಂಕಣಿ ಕಲೆ ಮತ್ತು ಸಂಸ್ಕೃತಿ ಕುರಿತು ಪ್ರೊ. ಜಯವಂತ ನಾಯಕ್ ಹಾಗೂ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಕುರಿತು ಪ್ರೊ. ವಿನ್ಸೆಂಟ್ ಆಳ್ವ ಪಾಂಬೂರು ಅವರಿಂದ ಉಪನ್ಯಾಸ ನಡೆಯಿತು.
 
ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಡಪದವಿನ ಕುಡ್ಮಿ ಜಾನಪದ ಕಲಾವೇದಿಕೆಯಿಂದ ಕುಡ್ಮಿ ಗುಮ್ಟಾಂ ಮತ್ತು ಕೋಲಾಟ, ಭಟ್ಕಳದ ಖಾರ್ವಿ ಕಲಾಮಾಂಡ್ ವತಿಯಿಂದ ಖಾರ್ವಿ ಕಲಾ ಪ್ರದರ್ಶನ, ಮುಂಡಗೋಡದ ಸಿದ್ಧಿ ಕಲಾತಂಡದಿಂದ ಸಿದ್ಧಿ ಕಲಾ ಪ್ರದರ್ಶನ,  ಕೊಂಕಣಿ ಸಾಂಸ್ಕೃತಿಕ ಸಂಘದಿಂದ ಜಿ.ಎಸ್.ಬಿ. ಸಾಂಸ್ಕೃತಿಕ ಪ್ರದರ್ಶನ, ಕಲಾಕುಲ್ ತಂಡದಿಂದ ಬೀದಿ ನಾಟಕ - ಕೊಂಕ್ಣಿ ಮ್ಹಜೊ ಫುಡಾರ್ ಪ್ರದರ್ಶನಗೊಂಡಿತು. ನಂತರ ಎರಿಕ್ ಒಝೇರಿಯೊ ನಿರ್ದೇಶನದಲ್ಲಿ ವಿವಿಧ ಯುವ ಗಾಯಕರಿಂದ ಕೊಂಕಣಿ ಸೊಭಾಣ್ ಸಂಗೀತ ಕಾರ್ಯಕ್ರಮ ನಡೆಯಿತು. ಇದಕ್ಕೆ  ಮಂಗಳೂರಿನ ನಾಚ್ ಸೊಭಾಣ್ ನೃತ್ಯ ಪ್ರದರ್ಶಿಸಿದರು. ಶೆಲ್ಡನ್ ಕ್ರಾಸ್ತಾ ಮತ್ತು ಕೆ.ಸ್ಮಿತಾ ಪ್ರಭು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.

ಉಪ ವೇದಿಕೆಯಲ್ಲಿ ಕೊಂಕಣಿ ಸಾಂಸ್ಕೃತಿಕ ಜಗತ್ತಿಗೆ ಸಂಬಂಧ ಪಟ್ಟ ಪ್ರದರ್ಶನ ಆಯೋಜಿಸಲಾಗಿತ್ತು. ವೀಳ್ಯ ನೀಡಿ ಸ್ವಾಗತಿಸುವವರು, ಕೊಂಕಣಿಯ ಸಾಂಪ್ರದಾಯಿಕ `ಕಿರ್ಗಿಬಾಜು ಮತ್ತು `ಸಾಡೊದಲ್ಲಿ ಶೋಭಿಸುವ ಮದುಮಗಳು, ತೊಟ್ಟಿಲಲ್ಲಿ ಇರಿಸುವ ಸಂಭ್ರಮ, ಪರಮ ತೀರ್ಥ ಪ್ರಸಾದದ ಮಕ್ಕಳು, ಇದಲ್ಲದೇ ತರಕಾರಿ ಮಾರುವವರು, ವೀಳ್ಯದೆಲೆ ಮಾರುವವರು, ಹೂವು ಕಟ್ಟುವವರು, ಭತ್ತದ ಮುಡಿ ಕಟ್ಟುವವರು, ರೈತರು ಇತ್ಯಾದಿ ಹಿಂದಿನ ಜನಾಂಗದ ಚಿತ್ರಣವನ್ನು ಮರು ರೂಪಿಸಲಾಗಿತ್ತು. ಅದೇ ರೀತಿ ಜಿಎಸ್‌ಬಿ ಸಮುದಾಯದಿಂದ ಉಪನಯನ ಮತ್ತು ಸೋನ್‌ಫುಲ್ ಇವುಗಳ ಪ್ರದರ್ಶನವಿತ್ತು.

ಕಾರ್ಕಳದ ಮಾಸ್ಟರ್ ಕೆಟರರ್ಸ್ ಇವರ ಕೊಂಕಣಿ ಮಾಂಸಾಹಾರಿ ಅಡುಗೆಗಳು ಮತ್ತು ವಿಶ್ವ ಕೊಂಕ್ಣಿ ಆಹಾರೋತ್ಸವದ ಮುಖಾಂತರ ವಿವಿಧ ಜಿಎಸ್‌ಬಿ ಸಮುದಾಯದ ತಿಂಡಿಗಳು ಮಾರಾಟಕಿದ್ದವು. ಅಕಾಡೆಮಿ ವತಿಯಿಂದ ಮೊಬೈಲ್ ಬಜಾರ್ ಮೂಲಕ ಕೊಂಕಣಿ ಪುಸ್ತಕ, ಸಿಡಿ ಮತ್ತು ಕ್ರಿಸ್ಮಸ್ ವಸ್ತುಗಳ ಮಾರಾಟವಿತ್ತು.

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]