Print

ನವೆಂಬರ್ 21: ಆಜ್ ಮಂಗ್ಳುರ್ ವಿಶ್ವವಿದ್ಯಾನಿಲಯಾಕ್ ಸಂಬಂಧ್ ಜಾಲ್ಲ್ಯಾ ತೀನ್ ಕೊಲೆಜಿಚ್ಯಾ 65 ವಿದ್ಯಾರ್ಥಿಂನಿ ಕೊಂಕ್ಣಿ ಪಯ್ಲ್ಯಾ ಸೆಮಿಸ್ಟರಾಚಿ ಪರೀಕ್ಷಾ ಬರಯ್ಲಿ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚ್ಯಾ ವಿಶೇಸ್ ವಾವ್ರಾನ್ ಹ್ಯಾ ಪಾವ್ಟಿಂ ಪಾದುವಾ (45), ರೊಜಾರಿಯೊ (12) ಆನಿ ಪೊಂಪೈ, ಕಿರೆಂ (8) ಹ್ಯಾ ಕೊಲೆಜಿಂನಿ ಕೊಂಕ್ಣಿ ಶಿಕಪ್ ಸುರು ಜಾಲ್ಲೆಂ. ಶಿಕ್ಪಾಕ್ ಸಂಬಂಧ್ ಜಾಲ್ಲೆಂ ಸರ್ವ್ ವಿಧಾನಾಂ ಸಂಪವ್ನ್ ಆಜ್ ಹಿ ಪರೀಕ್ಷಾ ಚಲಯ್ಲಿ.

ಕೊಂಕ್ಣಿ ಶಿಕ್ಪಾ ಶೆತಾಂತ್ ಹೆಂ ಏಕ್ ಮಹತ್ವಾಚೆಂ ಮೇಟ್ ಮ್ಹಣ್ ಅಕಾಡೆಮಿ ಅಧ್ಯಕ್ಷ್ ರೊಯ್ ಕ್ಯಾಸ್ತೆಲಿನೊನ್ ಸಂತೊಸ್ ವ್ಯಕ್ತ್ ಕೆಲಾ. ಹೊ ಆವ್ಕಾಸ್ ದಿಲ್ಲೆ ಖಾತಿರ್ ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ, ರಿಜಿಸ್ಟ್ರಾರ್ ಪ್ರೊ. ಪಿ. ಎಸ್. ಯಡಪಡಿತ್ತಾಯ, ಪ್ರಾಂಶುಪಾಲ್ ಮಾ. ಮೈಕಲ್ ಸಾಂತುಮಾಯೊರ್, ಮಾ. ಆಲ್ವಿನ್ ಸೆರಾವೊ, ಡಾ. ಜೊನ್ ಕ್ಲೆರೆನ್ಸ್ ಮಿರಾಂದಾ ತಶೆಂಚ್ ವಾವುರ್‌ಲ್ಲ್ಯಾ ಸರ್ವಾಂಚೊ ಅಬಾರ್ ಮಾಂದ್ಲಾ.
 
2007 ಥಾವ್ನ್ ಕೊಂಕ್ಣಿ ಶಿಕೊಂವ್ಕ್ ಸರ್ಕಾರಾನ್ ಆವ್ಕಾಸ್ ದಿಲ್ಲೊ. ಪಾಟ್ಲ್ಯಾ ತೀನ್ ವರ್‍ಸಾಂ ಥಾವ್ನ್ ಭುರ್ಗಿಂ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಬರಯ್ತಾತ್. ಆತಾಂ ಉಂಚ್ಲ್ಯಾ ಶಿಕ್ಪಾಂತ್ ಕೊಂಕ್ಣಿಕ್ ಸ್ಥಾನ್ ಮೆಳ್ಳಾಂ. ಆನಿ ಫಕತ್ ಪಿಯುಸಿಂತ್ ಆವ್ಕಾಸ್ ದೀಂವ್ಕ್ ಬಾಕಿ ಆಸಾ. ಸರ್ಕಾರಾನ್ ಹ್ಯಾ ವಿಶ್ಯಾಂತ್ ವೆಗಿಂ ಮೇಟ್ ಕಾಡಿಜೆ ಆನಿ ಕೊಂಕ್ಣಿ ಶಿಕ್ಪಾಕ್ ಸಮಗ್ರ್ ಆವ್ಕಾಸ್ ದೀಜೆ ಮ್ಹಣ್ ಅಕಾಡೆಮಿ ರಿಜಿಸ್ಟ್ರಾರ್ ಡೊ. ದೇವದಾಸ್ ಪೈ ಹಾಣೆ ವಿನತಿ ಕೆಲ್ಯಾ.

 

 

 

 

 

 

 

 

 

 

 - ತಸ್ವೀರ್ ಕುರ್ಪಾ: ಸ್ಟ್ಯಾನಿ, ಬಂಟ್ವಾಳ್.

 ಡಿಗ್ರಿಯಲ್ಲಿ ಕೊಂಕಣಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು:

ನವೆಂಬರ್ 21, 2014: ಇಂದು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಮೂರು ಕಾಲೇಜುಗಳಲ್ಲಿ 65 ವಿದ್ಯಾರ್ಥಿಗಳು ಕೊಂಕಣಿ ಪ್ರಥಮ ಷಣ್ಮಾಸಿಕದ ಪರೀಕ್ಷೆ ಬರೆದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮುತುವರ್ಜಿಯಿಂದ ಈ ಸಲ ಪಾದುವಾ (45), ರೊಜಾರಿಯೊ (12) ಹಾಗೂ ಪೊಂಪೈ, ಕಿರೆಂ (8) ಈ ಕಾಲೇಜುಗಳಲ್ಲಿ ಕೊಂಕಣಿ ಶಿಕ್ಷಣ ಆರಂಭವಾಗಿತ್ತು. ಶಿಕ್ಷಣಕ್ಕೆ ಸಂಬಂಧ ಪಟ್ಟ ಎಲ್ಲಾ ವಿಧಾನಗಳನ್ನು ಪೂರೈಸಿ ಇಂದು ಈ ಪರೀಕ್ಷೆಯನ್ನು ನಡೆಸಲಾಗಿದೆ.

ಕೊಂಕಣಿ ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಮಹತ್ತರ ಹೆಜ್ಜೆ ಎಂದು ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಸಂತಸ ವ್ಯಕ್ತಪಡಿಸಿದ್ದಾರೆ. ಅವಕಾಶವನ್ನಿತ್ತ ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ, ಕುಲಸಚಿವ, ಪ್ರೊ. ಪಿ. ಎಸ್. ಯಡಪಡಿತ್ತಾಯ, ಪ್ರಾಂಶುಪಾಲರಾದ ವಂ. ಮೈಕಲ್ ಸಾಂತುಮಾಯೊರ್, ವಂ. ಆಲ್ವಿನ್ ಸೆರಾವೊ, ಡಾ. ಜೊನ್ ಕ್ಲೆರೆನ್ಸ್ ಮಿರಾಂದಾ ಹಾಗೂ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದ್ದಾರೆ.

2007ರಲ್ಲಿ ಕೊಂಕಣಿ ಕಲಿಕೆಗೆ ಸರಕಾರ ಅವಕಾಶ ನೀಡಿದ ಬಳಿಕ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳು ಕೊಂಕಣಿಯನ್ನು ಎಸ್‌ಎಸ್‌ಎಲ್‌ಸಿಗೆ ಬರೆಯುತ್ತಿದ್ದಾರೆ. ಈಗ ಉನ್ನತ ಶಿಕ್ಷಣದಲ್ಲಿ ಕೊಂಕಣಿಗೆ ಸ್ಥಾನ ದೊರೆತು, ಕೊಂಕಣಿ ಶಿಕ್ಷಣವನ್ನು ಮುಂದುವರಿಸಲು ಅವಕಾಶ ಇದೆ. ಸರಕಾರವು ಪಿಯುಸಿಯಲ್ಲಿ ಕೂಡಾ ಕೊಂಕಣಿಗೆ ಅವಕಾಶ ಕಲ್ಪಿಸಬೇಕು. ಇದರಿಂದ ಕೊಂಕಣಿ ಕಲಿಕೆಗೆ ಸಮಗ್ರ ಅವಕಾಶ ನೀಡಿದಂತಾಗುತ್ತದೆ ಎಂದು ಅಕಾಡೆಮಿ ರಿಜಿಸ್ಟಾರ್ ಡಾ. ಬಿ ದೇವದಾಸ್ ಪೈ ಹೇಳಿದ್ದಾರೆ.