Print

1. ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿ ಗೌರವ್ ಪ್ರಶಸ್ತಿ - 2014:

ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿನ್ 2014 ವ್ಯಾ ವರ್ಸಾಕ್ 1. ಕೊಂಕಣಿ ಸಾಹಿತ್ಯ್ 2. ಕೊಂಕಣಿ ಕಲಾ ಆನಿ 3. ಕೊಂಕಣಿ ಲೋಕ್‌ವೇದ್ ಹ್ಯಾ ತೀನ್ ವಿಭಾಗಾಂಕ್ ಗೌರವ್ ಪ್ರಶಸ್ತೆ ಖಾತಿರ್ ಅರ್ಜ್ಯೊ ಆಪಯ್ಲ್ಯಾತ್. ಸ್ವತಾ ವಾ ಸಂಘ್ ಸಂಸ್ಥ್ಯಾಂನಿ, ಸಾರ್ವಜನಿಕಾಂನಿ ಹ್ಯಾ ತೀನ್ ಶೆತಾಂಚ್ಯಾ ಉಂಚಾಯೆಕ್ ವಾವುರ್‌ಲ್ಲ್ಯಾ ಮ್ಹಾಲ್ಗಡ್ಯಾಂಚಿಂ ನಾಂವಾಂ ಪೂರಕ್ ದಾಕ್ಲ್ಯಾಸವೆಂ ಅಕಾಡೆಮಿಕ್ ದಿವ್ಯೆತಾ.

ಸರ್ವ್ ಮಾಹೆತ್ ಆಟಾಪ್ಲೆಲಿ ಅರ್ಜಿ 15-12-2014 ಭಿತರ್ ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ, ಮಹಾನಗರ್ ಪಾಲಿಕಾ ಬಾಂದಪ್, ಲಾಲ್‌ಭಾಗ್, ಮಂಗ್ಳುರ್ - 3 ಹಾಂಗಾ ಧಾಡುಂಕ್ ಕಳಯ್ಲಾಂ. ಚಡಿತ್ ಮಾಹೆತಿಕ್ 0824-2453167 ಹ್ಯಾ ನಂಬ್ರಾಕ್ ಸಂಪರ್ಕ್ ಕರ್ಯೆತ್.

 
2. ಕೊಂಕಣಿ ಅಕಾಡೆಮಿ 2014 ಪುಸ್ತಕ್ ಬಹುಮಾನ್:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿನ್ 2014 ೦ತ್ ಪರ್ಗಟ್ಲೆಲ್ಯಾ ಹ್ಯಾ ತೀನ್ ಪ್ರಕಾರಾಂಚ್ಯಾ ಪುಸ್ತಕಾಂಕ್ ಪುಸ್ತಕ್ ಬಹುಮಾನ್ ದಿತಲಿ.
1. ಹೆರ್ ಭಾಸಾಂ ಥಾವ್ನ್ ಕೊಂಕ್ಣೆಕ್ ಭಾಷಾಂತರ್, 2. ಕೊಂಕಣಿ ಕವಿತಾ, ವಾ ಲೇಖನಾಂ ವಾ ವಿಮರ್ಸೊ 3. ಕೊಂಕಣಿ ಕತಾಪುಂಜೊ ವಾ ಕಾದಂಬರಿ ವಾ ಅಧ್ಯಯನ್ ಕೃತಿ.

ಹ್ಯಾ ವಿಭಾಗಾಂನಿ 1-1-2014 ಥಾವ್ನ್ 31-12-2014 ಪರ್ಯಾಂತ್ ಪರ್ಗಟ್ಲೆಲ್ಯಾ ಪುಸ್ತಕಾಂಚ್ಯೊ ಚ್ಯಾರ್ ಪ್ರತಿಯೊ 15-12-2014 ಭಿತರ್ ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ, ಮಹಾನಗರ್ ಪಾಲಿಕಾ ಬಾಂದಪ್, ಲಾಲ್‌ಭಾಗ್, ಮಂಗ್ಳುರ್ - 3 ಹಾಂಗಾ ಧಾಡುಂಕ್ ಕಳಯ್ಲಾಂ. ಚಡಿತ್ ಮಾಹೆತಿಕ್ 0824-2453167 ಹ್ಯಾ ನಂಬ್ರಾಕ್ ಸಂಪರ್ಕ್ ಕರ್ಯೆತ್.

 


 ಕೊಂಕಣಿ ಅಕಾಡೆಮಿ 2014 ರ "ಗೌರವ ಪ್ರಶಸ್ತಿ" ಹಾಗೂ "ಪುಸ್ತಕ ಬಹುಮಾನ" ಕ್ಕೆ ಅರ್ಜಿ ಆಹ್ವಾನ:


1. ಕೊಂಕಣಿ ಅಕಾಡೆಮಿಯ 2014 ರ ಗೌರವ ಪ್ರಶಸ್ತಿ:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2014 ನೇ ಸಾಲಿನ 1. ಕೊಂಕಣಿ ಸಾಹಿತ್ಯ 2. ಕೊಂಕಣಿ ಕಲೆ 3. ಕೊಂಕಣಿ ಜಾನಪದ - ಈ ಮೂರು ವಿಭಾಗಗಳಿಗಾಗಿ ಅರ್ಹ ಹಿರಿಯ ಮಹನೀಯರುಗಳಿಂದ ಗೌರವ ಪ್ರಶಸ್ತಿಗಳಿಗಾಗಿ ಅರ್ಜಿ ಕರೆಯಲಾಗಿದೆ. ಅಸಕ್ತ ಮಹನೀಯರು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಕೊಂಕಣಿ ಕ್ಷೇತ್ರದ ಸಾರ್ವಜನಿಕರು, ಸಂಘ-ಸಂಸ್ಥೆಗಳು ತಮಗೆ ತಿಳಿದಿರುವ ಹಿರಿಯ ಮಹನೀಯರುಗಳ ಹೆಸರನ್ನು ಅಕಾಡೆಮಿಗೆ ನೀಡಬಹುದಾಗಿದೆ.

ಅರ್ಜಿ ಸಲ್ಲಿಸಲು ಇಚ್ಚಿಸುವವರೇ ಮೇಲೆ ತಿಳಿಸಿರುವ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಸಿದ್ದಪಡಿಸಿ, ದಿನಾಂಕ 15-12-2014 ರ ಒಳಗೆ, ಭರ್ತಿ ಮಾಡಿದ ಅರ್ಜಿಯೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಭಾಗ್, ಮಂಗಳೂರು - 3 ಇವರಿಗೆ ಕಳುಹಿಸಿ ಕೊಡಬೇಕು. ಹೆಚ್ಚಿನ ಯಾವುದೇ ವಿವರಗಳಿಗೆ ಅಕಾಡೆಮಿ ದೂರವಾಣಿ ಸಂಖ್ಯೆ 0824-2453167 ಯನ್ನು ಸಂಪರ್ಕಿಸಲು ಕೋರಲಾಗಿದೆ.

 
2. ಕೊಂಕಣಿ ಅಕಾಡೆಮಿ 2014 ರ ಪುಸ್ತಕ ಬಹುಮಾನ:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2014 ರಲ್ಲಿ ಪ್ರಕಟಿತವಾದ ಈ ಕೆಳಗೆ ತಿಳಿಸಿರುವ 3 ಪ್ರಕಾರದ ಕೊಂಕಣಿ ಪುಸ್ತಕಗಳಿಗೆ ಬಹುಮಾನ ನೀಡಲು ಅವಕಾಶ ಕಲ್ಪಿಸಲಾಗಿದೆ. ಅದುದರಿಂದ 2014 ರಲ್ಲಿ ಪ್ರಕಟಿಸಿರುವ ಕೊಂಕಣಿ ಪುಸ್ತಕಗಳ ಬಗ್ಗೆ ಲೇಖಕರಿಂದ, ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕಾಗಿ ಅರ್ಜಿಯನ್ನು ಅಹ್ವಾನಿಸಲಾಗಿದೆ. 01-01-2014 ರಿಂದ 31-12-2014 ರ ಒಳಗೆ ಪ್ರಕಟಿಸಲಾದ ಪುಸ್ತಕಗಳನ್ನು ಮಾತ್ರ ಪುಸ್ತಕ ಪುರಸ್ಕಾರಕಾಗಿ ಅಯ್ಕೆ ಮಾಡಲಾಗುವುದು. ಪುಸ್ತಕ ಬಹುಮಾನಕ್ಕೆ ಅಯ್ಕೆ ಮಾಡಿದ ಪ್ರಕಾರಗಳು ಇಂತಿವೆ: 1. ಭಾಷಾಂತರ, 2. ಕೊಂಕಣಿ ಕವನ ಅಥವಾ ಲೇಖನ ಅಥವಾ ವಿಮರ್ಶೆ ಹಾಗೂ 3. ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ ಅಥವಾ ಅಧ್ಯಯನ ಕೃತಿ.

ಈ ಮೂರು ಪ್ರಕಾರಗಳಲ್ಲಿ ಒಂದೊಂದು ಕೃತಿಯನ್ನು ನಿಯಾಮಾನುಸಾರ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಇಚ್ಚಿಸುವವರೇ - ಮೇಲೆ ತಿಳಿಸಿರುವ ವಿಷಯದ ಬಗ್ಗೆಗಿನ ಪುಸ್ತಕದ ಕನಿಷ್ಟ 4 ಪ್ರತಿಯೊಂದಿಗೆ ಅರ್ಜಿಯನ್ನು ಕಳುಹಿಸಲು ವಿನಂತಿಸಿದೆ. ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-12-2014. ಭರ್ತಿ ಮಾಡಿದ ಅರ್ಜಿ ಹಾಗೂ ಪುಸ್ತಕಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಭಾಗ್, ಮಂಗಳೂರು - 3 ಇವರಿಗೆ ಕಳುಹಿಸಿ ಕೊಡಬೇಕು. ಹೆಚ್ಚಿನ ಯಾವುದೇ ವಿವರಗಳಿಗೆ ಅಕಾಡೆಮಿ ದೂರವಾಣಿ ಸಂಖ್ಯೆ 0824-2453167 ಯನ್ನು ಸಂಪರ್ಕಿಸಲು ಕೋರಲಾಗಿದೆ.