ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಥಾವ್ನ್ ಮಯ್ನ್ಯಾಕ್ ದೋನ್ ಪುಸ್ತಕಾಂ ಪರ್ಗಟ್ಚೊ ವಾವ್ರ್ ಚಲುನ್ ಆಸಾ. ಹ್ಯಾ ಬಾಬ್ತಿನ್ ಕೊಂಕ್ಣಿ ಬರೊವ್ಪ್ಯಾಂ ಥಾವ್ನ್ ಉತ್ತಿಮ್ ಕೃತಿಯಾಂಕ್ ಆರ್ಜಿ ಆಪಯ್ಲ್ಯಾತ್. ಛಾಪುಂಕ್ ವಿಂಚುನ್ ಕಾಡ್ಲ್ಲ್ಯಾ ಪುಸ್ತಕಾಚ್ಯಾ ಬರೊವ್ಪ್ಯಾಕ್ ಅಕಾಡೆಮಿ ನಿಯಮಾಂ ಪರ್ಮಾಣೆ ಪುಸ್ತಕಾಚ್ಯಾ ಮೊಲಾಚೆರ್ 15% ಗೌರವ್ಧನ್ ಆನಿ 25 ಗೌರವ್ ಪ್ರತಿಯೊ ದಿತಲ್ಯಾಂವ್. ಬರೊವ್ಪ್ಯಾನ್ 100 ಪ್ರತಿಯೊ ವಿಕುನ್ ದಿಂವ್ಚಿ ಜವಾಬ್ದಾರಿ ಘೆಂವ್ಕ್ ಆಸ್ತಲಿ.
ಹಾತ್ಪ್ರತಿ ವಾ ಡಿಟಿಪಿ ಪ್ರತಿಯೆ ಸವೆಂ ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ, ಮಹಾನಗರ್ ಪಾಲಿಕಾ ಬಾಂದಪ್, ಲಾಲ್ಭಾಗ್, ಮಂಗ್ಳುರ್ - 3 ಹಾಂಗಾ ಸಂಪರ್ಕ್ ಕರುಂಕ್ ಕಳಯ್ಲಾಂ. ಚಡಿತ್ ಮಾಹೆತಿಕ್ 0824-2453167 ಹ್ಯಾ ನಂಬ್ರಾಕ್ ಸಂಪರ್ಕ್ ಕರ್ಯೆತ್.
ಅಕಾಡೆಮಿ ವತಿಯಿಂದ ಕೊಂಕಣಿ ಪುಸ್ತಕಗಳ ಪ್ರಕಟಣೆಗಾಗಿ ಪುಸ್ತಕಗಳ ಅಹ್ವಾನ:
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿವತಿಯಿಂದ ಪ್ರತಿ ತಿಂಗಳು 2 ಹೊಸ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು ಇದರ ಬಗ್ಗೆ ಲೇಖಕರು ಸಾಹಿತಿಗಳು ಕವಿಗಳಿಂದ ಕೊಂಕಣಿ ಭಾಷೆಯ ಹಸ್ತಪ್ರತಿರೂಪದ ಅಥವಾ ಡಿ.ಟಿ.ಪಿ. ರೂಪದ ಉತ್ತಮ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಮುದ್ರಣಕ್ಕಾಗಿ ಆಯ್ಕೆಗೊಂಡ ಕೃತಿಗಳ ಲೇಖಕರಿಗೆ ಅಕಾಡೆಮಿ ನಿಯಾಮಾನುಸಾರ ಪುಸ್ತಕದ ಮುಖಬೆಲೆಯ ಶೇಕಡ 15 ರಷ್ಟು ಗೌರವಧನ ಹಾಗೂ ಪುಸ್ತಕದ 25 ಪ್ರತಿಗಳನ್ನು ಉಚಿತವಾಗಿ ನೀಡಲಾಗುವುದು. ಮುದ್ರಣಕ್ಕೆ ಆಯ್ಕೆಯಾದ ಪುಸ್ತಕದ ಲೇಖಕರು 100 ಪ್ರತಿಗಳನ್ನು ಮಾರಾಟ ಮಾಡಿ ನೀಡುವ ಬದ್ದತೆಯ ಮೇರೆಗೆ ಪುಸ್ತಕಗಳನ್ನು ಮುದ್ರಿಸಲಾಗುವುದು.
ಆದ್ದರಿಂದ ಆಸಕ್ತ ಸಾಹಿತಿ, ಲೇಖಕರು ತಮ್ಮ ಪುಸ್ತಕದ ಹಸ್ತಪ್ರತಿಯೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಹಾನಗರಪಾಲಿಕೆ ಕಟ್ಟಡ, ಮಂಗಳೂರು - 3 ಇಲ್ಲಿಗೆ ಕಳುಹಿಸುವುದು ಹೆಚ್ಚಿನ ವಿಷಯಕ್ಕೆ ದೂರವಾಣಿ ಸಂಖ್ಯೆ 0824-2453167 ಸಂಪರ್ಕಿಸಬಹುದು.
Comments powered by CComment