ಡಿಸೆಂಬರ್ 20, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನ, ಲಾಲ್‌ಭಾಗ್, ಮಂಗಳೂರು - ಇಲ್ಲಿ ನಡೆಯಲಿದೆ.

ಕೊಂಕಣಿ ಸಾಹಿತ್ಯ ಸಮ್ಮೇಳನ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಡಿಸೆಂಬರ್ 20 ರಂದು ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ನಗರದ ಲಾಲ್‌ಭಾಗ್‌ನಲ್ಲಿರುವ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಆಯೋಜಿಸಿದೆ.

ಬೆಳಿಗ್ಗೆ 9.30 ರಿಂದ ಸಂಜೆ 4.00 ಗಂಟೆ ತನಕ ನಡೆಯುವ ಈ ಸಮ್ಮೇಳನದ ಉದ್ಘಾಟನೆಯನ್ನು ಕನ್ನಡದ ಪ್ರಸಿದ್ಧ ಸಾಹಿತಿ, ನೃಪತುಂಗ ಪ್ರಶಸ್ತಿ ವಿಜೇತ ಶ್ರೀ ಕುಂ. ವೀರಭದ್ರಪ್ಪ ಇವರು ನೆರವೇರಿಸಲಿರುವರು. ಹಿರಿಯ ಕೊಂಕಣಿ ಸಾಹಿತಿ ಶ್ರೀ ಎಡ್ವಿನ್ ನೆಟ್ಟೊ ಸಮ್ಮೇಳನಾಧ್ಯಕ್ಷರಾಗಿರುವರು. ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಸಹಪ್ರಾಧ್ಯಾಪಕರಾದ ಡಾ. ಶೋಭಾ ನೀಲಾವರ  ಗೌರವ ಅತಿಥಿಗಳಾಗಿರುವರು.

ಈ ಸಂದರ್ಭದಲ್ಲಿ ಕೊಂಕಣಿಯ ಪ್ರಸಿದ್ಧ ಸಾಹಿತಿ ಶ್ರೀ ಎಡ್ವಿನ್ ಜೆ. ಎಫ್. ಡಿಸೋಜ ಇವರು ಬರೆದ 1008 ಪುಟಗಳ ಬೃಹತ್ ಕಾದಂಬರಿ `ಉಣ್ಯಾ ಭಾವಾಡ್ತಾಚೆ' ಹಾಗೂ ಆಂಡ್ರ್ಯೂ ಎಲ್. ಡಿಕುನ್ಹಾ ಇವರ `ಆಯೆರಾಚೊ ಬೂಕ್' ಕವಿತಾ ಸಂಕಲನ' ಲೋಕಾರ್ಪಣೆಗೊಳ್ಳಲಿದೆ. 

ನಂತರ ಎರಡು ವಿಚಾರಗೋಷ್ಟಿಗಳು ನಡೆಯಲಿವೆ. ಜೊ. ಸಾ. ಆಲ್ವಾರಿಸ್ ವಿಚಾರಗೋಷ್ಟಿಯಲ್ಲಿ '2000 ಇಸವಿಯ ನಂತರದ ಕೊಂಕಣಿ ಸಾಹಿತ್ಯ'ದ ಬಗ್ಗೆ ಶ್ರೀ ಆಲ್ವಿನ್ ದಾಂತಿ, ಪೆರ್ನಾಲ್ ಮತ್ತು 'ಕೊಂಕಣಿ ಸಂಸ್ಕೃತಿಯ ಮೇಲೆ ಜಾಗತೀಕರಣದ ಪ್ರಭಾವ'ದ ಬಗ್ಗೆ ಶ್ರೀಮತಿ ಶಕುಂತಲಾ ಆರ್. ಕಿಣಿ ಮಂಡನೆ ಮಾಡಲಿರುವರು. ಈ ಗೋಷ್ಟಿಯ ಅಧ್ಯಕ್ಷತೆಯನ್ನು ಡಾ. ಶಿವರಾಮ್ ಕಾಮತ್ ವಹಿಸಲಿರುವರು. ಎಂ. ವಿ. ಕಾಮತ್ ವಿಚಾರಗೋಷ್ಟಿಯಲ್ಲಿ 'ಕೊಂಕಣಿ ಶಿಕ್ಷಣ'ದ ಬಗ್ಗೆ ಪ್ರೊ. ಕ್ಷೇವಿಯರ್ ಡಿಸೊಜಾ ಹಾಗೂ 'ಮಾಧ್ಯಮ ಮತ್ತು ಕೊಂಕಣಿ'ಯ ಬಗ್ಗೆ  ವಂ. ಫ್ರಾನ್ಸಿಸ್ ರೊಡ್ರಿಗಸ್ ಮಂಡನೆ ಮಾಡಲಿರುವರು. ಈ ಗೋಷ್ಟಿಯ ಅಧ್ಯಕ್ಷತೆಯನ್ನು ಡಾ. ಮೋಹನ್ ಪೈ ವಹಿಸಲಿರುವರು. ಅಪರಾಹ್ನ ಎರಡು ಗಂಟೆಗೆ ಶ್ರೀ ಜೆರಿ ರಸ್ಕಿನ್ಹಾ ಇವರ ನೇತೃತ್ವದಲ್ಲಿ 10 ಕವಿಗಳ ಕವಿಗೋಷ್ಟಿ ನಡೆಯಲಿದೆ. ಭಾಗವಹಿಸುವ ಕವಿಗಳು: ಸಿಜ್ಯೆಸ್ ತಾಕೊಡೆ, ಡಾ. ನಾಗೇಶಕುಮಾರ್ ಜಿ ರಾವ್, ವಿನ್ಸಿ ಪಿಂಟೊ ಆಂಜೆಲೊರ್, ಮಹೇಶ್ ನಾಯಕ್, ವಾಲ್ಟರ್ ದಾಂತಿಸ್,  ಗೀತಾ ಕಿಣಿ, ಎರಿಕ್ ಸೋನ್ಸ್, ಗುರು ಬಾಳಿಗಾ, ಫೆಲ್ಸಿ ಲೋಬೊ.

 

ಕೊಂಕಣಿ ಸಾಂಸ್ಕೃತಿಕ ಮೇಳ

ಸಾಯಂಕಾಲ 4.00 ರಿಂದ 5.30 ಗಂಟೆ ತನಕ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಿಂದ ಹೊರಟು, ಲೇಡಿಹಿಲ್ ವೃತ್ತವಾಗಿ, ಮನಪಾ ಮುಂಭಾಗದಿಂದ ಕೊಂಕಣಿ ಅಕಾಡೆಮಿಯ ಬಳಿಯಿಂದ ಪುನ: ಸಭಾಂಗಣಕ್ಕೆ ಬರಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಧರ್ಮಾಧ್ಯಕ್ಷರಾದ ಅ. ವಂ. ಎಲೋಶೀಯಸ್ ಪಾವ್ಲ್ ಡಿಸೋಜ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮಾನಾಥ ರೈ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀ ಮೋಹನ್ ಆಳ್ವಾ ಮತ್ತು ಗೌರವ ಅತಿಥಿಗಳಾಗಿ ಶ್ರೀ ಪ್ರದೀಪ್ ಜಿ ಪೈ, ಶಾಸಕರಾದ ಶ್ರೀ ಜೆ. ಆರ್. ಲೋಬೊ ಮತ್ತು ಶ್ರೀ ಐವನ್ ಡಿಸೋಜ ಮತ್ತು ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ದೇಶಕ ಶ್ರೀ ಲಾರೆನ್ಸ್ ಡಿಸೋಜ ಆಗಮಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೊಸಾರಿಯೊ ಮತ್ತು ಪಾದುವಾ ಕಾಲೇಜುಗಳ ಕೊಂಕಣಿ ಕ್ಲಬ್ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಗಾಯನ, ನೃತ್ಯ ವಿದ್ಯಾನಿಲಯ ಕದ್ರಿ ಇಲ್ಲಿಯ ವಿದ್ಯಾರ್ಥಿಗಳು ಮತ್ತು ಖಾರ್ವಿ, ಸಿದ್ದಿ, ಕುಡ್ಮಿ, ಗಾವಳಿ, ದಾಲ್ದಿ, ನವಾಯತಿ, ಬ್ರಾಸ್ ಬ್ಯಾಂಡ್ ತಂಡಗಳ ಜಂಟಿ ಆಯೋಜನೆಯಲ್ಲಿ `ಕೊಂಕಣಿ ನೃತ್ಯ-ಸಂಗೀತ ರೂಪಕ-ಸಮಗ್ರ ಕೊಂಕಣಿ ದರ್ಶನ' ಪ್ರಸ್ತುತಪಡಿಸಲಿದ್ದಾರೆ. ಮುರಳಿಧರ್ ಕಾಮತ್ ಮತ್ತು ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ.

ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಮತ್ತು ವಿವಿಧ ಕೊಂಕಣಿ ಸಾಧಕರನ್ನು ಸನ್ಮಾನಿಸಲಾಗುವುದು.

ಇದೇ ಸಂದರ್ಭದಲ್ಲಿ ಕೊಂಕಣಿ ಅಕಾಡೆಮಿ ಹೊರತರುವ ಕೊಂಕಣಿ ಕ್ಯಾಲೆಂಡರ್ ಮತ್ತು ಅಕಾಡೆಮಿಯ ನವೀಕೃತ ವೆಬ್‌ಸೈಟಿನ ಲೊಕಾರ್ಪಣೆ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೊಂಕಣಿ ಮಾತೃಭಾಷಿಕ ಶಿಕ್ಷಕರಿಗೆ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಒಒಡಿ ಸೌಲಭ್ಯವನ್ನು ಡಿಡಿಪಿಐಯವರು ನೀಡಿರುತ್ತಾರೆ. ಇತರ ಜಿಲ್ಲೆಯವರಿಗೂ ಈ ಸೌಲಭ್ಯ ದೊರೆಯಲಿದೆ. ಪ್ರತಿನಿಧಿಯಾಗಿ ಭಾಗವಹಿಸುವವರಿಗೆ ನಿಯಮಿತ ಪ್ರಯಾಣ ಭತ್ಯೆ, ಊಟೋಪಚಾರ ಸೌಲಭ್ಯ ದೊರೆಯುತ್ತದೆ.

ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದವರು:
೧. ರೊಯ್ ಕ್ಯಾಸ್ತೆಲಿನೊ ಅಧ್ಯಕ್ಷರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
೨. ಡಾ. ಬಿ. ದೇವದಾಸ ಪೈ, ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
೩. ಸಿರಿಲ್ ಸಿಕ್ವೇರಾ, ಸಂಚಾಲಕರು, ಕೊಂಕಣಿ ಸಾಹಿತ್ಯ ಸಮ್ಮೇಳನ
೪. ಶ್ರೀಮತಿ ಗೀತಾ ಸಿ. ಕಿಣಿ, ಅಧ್ಯಕ್ಷರು, ಕೊಂಕಣಿ ಭಾಷಾ ಮಂಡಳ
೫. ವೆಂಕಟೇಶ ಬಾಳಿಗಾ, ಸಂಪಾದಕರು, ಕೊಡಿಯಾಲ ಖಬರ

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]