Print

 

ಬೆಳ್ಗಾವಾಂತ್ ಚಲುನ್ ಆಸ್ಚ್ಯಾ ಅಧಿವೇಶನಾಂತ್ ಶಾಸಕ್ ಐವನ್ ಡಿಸೊಜಾನ್ ಪಯ್ಲೆ ಪಾವ್ಟಿಂ ಕೊಂಕ್ಣೆಂತ್ ಉಲೊವ್ನ್ ದಾಕ್ಲೊ ಕೆಲೊ. ಶೂನ್ಯ್ ವೆಳಾರ್ ಕೊಂಕ್ಣಿ ಶಿಕ್ಪಾವಿಶಿಂ, ಪಿಯುಸಿಂತ್ ಕೊಂಕ್ಣಿ ಶಿಕೊಂವ್ಕ್ ಆವ್ಕಾಸ್ ನಾತ್‌ಲ್ಲೆವಿಶಿಂ ಉಲೊಂವ್ಕ್ ತಾಣೆ ಸುರು ಕೆಲೆಂ ತರೀ, ಅನುವಾದಕ್ ನಾಂತ್ ಮ್ಹಳ್ಳೆಂ ನೀಬ್ ದೀವ್ನ್ ಮುಕಾರುಂಕ್ ಆವ್ಕಾಸ್ ನೆಗಾರ್‍ಲೊ. ಐವನಾನ್ ಕೊಂಕ್ಣಿ ಆಪ್ಲಿ ಮಾಂಯ್‌ಭಾಸ್ ದೆಕುನ್ ಕೊಂಕ್ಣೆಂತ್ ಉಲೊಂವ್ಕ್ ಆವ್ಕಾಸ್ ದೀಜೆ, ಆಪ್ಲ್ಯಾ ಉಲೊವ್ಪಾಚೆಂ ಕನ್ನಡ ಅನುವಾದ್ ದಿಲಾ ಮ್ಹಣ್ ಜಾಯ್ತಿ ಮನವಿ ಕೆಲಿ ತರೀ ಸಭಾಧ್ಯಕ್ಷಾನ್ ಕನ್ನಡಾಂತುಚ್ ಉಲಯ್ಜೆ ಮ್ಹಣ್ ಒತ್ತಾಯ್ ಕೆಲ್ಲ್ಯಾನ್ ತೊ ಉಪ್ರಾಂತ್ ಕನ್ನಡಾಂತ್ ಉಲಯ್ಲೊ.

 

ಶೂನ್ಯ್ ವೆಳಾರ್ ಸರ್ಕಾರಾಚೆಂ ಗುಮಾನ್ ವೊಡ್ಚೆಂ ಸವಾಲ್

ರಾಜ್ಯ್ ಸರ್ಕಾರಾನ್ 22 ವರ್ಸಾಂ ಆದಿಂಚ್ ಕೊಂಕ್ಣಿ ಭಾಷೆಚ್ಯಾ ಸಮಗ್ರ್ ವಾಡಾವಳಿ ಖಾತಿರ್ ಕರ್ನಾಟಕ ಕೊಂಕ್ಣಿ ಅಕಾಡೆಮಿ ಸ್ಥಾಪನ್ ಕೆಲ್ಯಾ. 2007 ಇಸ್ವೆ ಥಾವ್ನ್ ಶಾಳಾಂನಿ ಸವೆ ಥಾವ್ನ್ ತಿಸ್ರಿ ಐಚ್ಛಿಕ್ ಭಾಸ್ ಜಾವ್ನ್ ಕೊಂಕ್ಣಿ ಶಿಕೊಂಕ್ ಆವ್ಕಾಸ್ ಕರುನ್ ದಿಲಾ. ದಕ್ಷಿಣ್ ಕನ್ನಡ, ಉಡುಪಿ ಆನಿ ಉತ್ತರ್ ಕನ್ನಡಾಚ್ಯಾ ಶಾಳಾಂನಿ ತಶೆಂ ಪ್ರೌಢ್ ಶಾಳಾಂನಿ ಲಗ್ಬಗ್ 1500 ಭುರ್ಗಿಂ ಕೊಂಕ್ಣಿ ಶಿಕ್ತಾತ್. 2012 ಥಾವ್ನ್ ವಿದ್ಯಾರ್ಥಿಂ ಎಸ್‌ಎಸ್‌ಎಲ್‌ಸಿಂತ್ ಕೊಂಕ್ಣಿ ಪರೀಕ್ಷಾ ಬರಯ್ತಾತ್ ಆನಿ ಎದೊಳ್ 206 ಜಣಾಂ ಉಂಚ್ಲೆ ಅಂಕೆ ಜೊಡುನ್ ಉತ್ತೀರ್ಣ್ ಜಾಲ್ಯಾಂತ್.

ಪಾಟ್ಲ್ಯಾ 20 ವರ್ಸಾಂ ಥಾವ್ನ್ ಸಾಂ ಲುವಿಸ್ ಕೊಲೆಜಿಚ್ಯಾ ಡಿಗ್ರಿ ಪಯ್ಲ್ಯಾ ಆನಿ ದುಸ್ರ್ಯಾ ವರ್ಸಾಕ್ ಕೊಂಕ್ಣಿ ಶಿಕಯ್ತಾಲಿಂ ತರ್ 2014-15 ವ್ಯಾ ಆವ್ದೆ ಥಾವ್ನ್ ಮಂಗ್ಳುರ್ ವಿಶ್ವವಿದ್ಯಾನಿಲಯಾ ಖಾಲ್ ಆಸ್ಚ್ಯಾ ರೊಜಾರಿಯೊ ಪದ್ವಿ ಕೊಲೆಜ್ ಮಂಗ್ಳುರ್, ಪಾದುವಾ ಪದ್ವಿ ಕೊಲೆಜ್, ಮಂಗ್ಳುರ್ ಆನಿ ಪೊಂಪೈ ಪದ್ವಿ ಕೊಲೆಜ್ ಕಿರೆಂ ಹಾಂಗಾಸರ್ ಕೊಂಕ್ಣಿ ಶಿಕೊಂವ್ಕ್ ಸುರು ಕೆಲ್ಯಾ ಆನಿ ಲಗ್‌ಬಗ್ 150 ವಿದ್ಯಾರ್ಥಿಂ ಹ್ಯಾ 4 ಕೊಲೆಜಿಂನಿ ಕೊಂಕ್ಣಿ ಶಿಕ್ತಾತ್.

ತರೀ ಪ್ರಮುಖ್ ಆನಿ ಗರ್ಜೆಚೆಂ ಜಾವ್ನ್ ಆಸ್ಚ್ಯಾ ಪದ್ವೆಪೂರ್ವ್ (ಪಿಯುಸಿ) ಹಂತಾರ್ ಎದೊಳ್ ಕೊಂಕ್ಣಿ ಶಿಕೊಂಕ್ ಆವ್ಕಾಸ್ ನಾ. ದೆಕುನ್ ನಿರಂತರ್ ಶಿಕ್ಪಾ ಪ್ರಕ್ರಿಯೆಕ್ ಆಡ್ಕಳ್ ಜಾಲ್ಯಾ. ಹ್ಯಾ ಬಾಬ್ತಿನ್ 2012 ಇಸ್ವೆಂತ್‌ಚ್ ಪಠ್ಯ್‌ಕ್ರಮ್ ತಯಾರ್ ಕರುನ್ ಇಲಾಕ್ಯಾಕ್ ದಿಲಾಂ ತರೀ, ಪದ್ವಿಪೂರ್ವ್ ಇಲಾಕ್ಯಾನ್ ಎದೊಳ್ ಕಾಂಯ್ ಕ್ರಮ್ ಘೆಂವ್ಕ್ ನಾ.

ಕೊಂಕ್ಣಿ ಭಾಶೆಕ್ ಭಾರತಾಚ್ಯಾ 22 ಅಧಿಕೃತ್ ಭಾಸಾಂ ಪಯ್ಕಿಂ ಏಕ್ ಮ್ಹಣ್ ಮಾನ್ಯತಾ ಮೆಳ್ಳ್ಯಾ. 1992 ಇಸ್ವೆಂತ್‌ಚ್ ಸಂವಿಧಾನಾಚ್ಯಾ 8ವ್ಯಾ ವೊಳೆರಿಂತ್ ಸೆರ್ವಲ್ಯಾ. ಕರ್ನಾಟಕಾಂತ್ ಹಿಂದೂ, ಮುಸ್ಲಿಮ್ ಆನಿ ಕ್ರಿಸ್ತಾಂವ್ ಧರ್ಮಾಕ್ ಸೆರ್ವಾಲ್ಲೊ ಸುಮಾರ್ 15 ಲಾಕ್ ಲೋಕ್ ಕೊಂಕ್ಣಿ ಉಲಯ್ತಾ. ತರೀ ಫಕತ್ ಕರಾವಳಿಚ್ಯಾ ತೀನ್ ಜಿಲ್ಲ್ಯಾಂಕ್ ಕೊಂಕ್ಣಿ ಶಿಕ್ಪಾಚೆ ಆವ್ಕಾಸ್ ಸೀಮೀತ್ ಕೆಲ್ಲ್ಯಾನ್ ಕೊಂಕ್ಣೆಚ್ಯಾ ವಾಡಾವಳಿಂತ್ ಉಣೆಂಪಣ್ ಜಾಲಾಂ ಮ್ಹಣ್ ಕೊಂಕ್ಣಿ ಭಾಷಿಕಾಂಚೊ ಅಭಿಪ್ರಾಯ್ ಜಾಲ್ಲ್ಯಾನ್ ಹಾಕಾ ಪರಿಹಾರ್ ಜಾವ್ನ್ ರಾಜ್ಯಾಚ್ಯಾ ಸರ್ವ್ ಜಿಲ್ಲ್ಯಾಂನಿ ಪ್ರಾಥಮಿಕ್ ಆನಿ ಪ್ರೌಢ್‌ಶಾಳಾ ಹಂತಾರ್, ತಶೆಂಚ್ ಪಿಯುಸಿಂತ್ ಕೊಂಕ್ಣಿ ಶಿಕೊಂವ್ಕ್ ಆವ್ಕಾಸ್ ಕರ್ನ್ ದೀಜೆ. ಆನಿ ಕೊಂಕ್ಣಿ ಭಾಷೆಚ್ಯಾ ಅಭಿವೃದ್ಧಿ ಖಾತಿರ್ ರಾಜ್ಯಾಚ್ಯಾ ಸರ್ವ್ ವಿಶ್ವ್‌ವಿದ್ಯಾನಿಲಯಾಂನಿ ಕೊಂಕ್ಣಿ ಅಧ್ಯಯನ್ ಪೀಠ ಆರಂಭ್ ಕರುಂಕ್ ಕ್ರಮ್ ಘೆಜೆ.

ದೇವ್ ಬರೆಂ ಕರುಂ.

 


ವಿಧಾನ ಪರಿಷತ್ತಿನಲ್ಲಿ ಕೊಂಕಣಿ ಶಿಕ್ಷಣದ ಬಗ್ಗೆ ಕೊಂಕಣಿಯಲ್ಲಿ ಉಲ್ಲೇಖ

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಇಂದು ಶಾಸಕರಾದ  ಐವನ್ ಡಿಸೋಜರವರು ಕೊಂಕಣಿ ಶಿಕ್ಷಣದ ಬಗ್ಗೆ ಪ್ರಪ್ರಥಮ ಬಾರಿಗೆ ಕೊಂಕಣಿಯಲ್ಲಿ ಮಾತನಾಡಿದರು. ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಶ್ನೆಯ ಅಡಿಯಲ್ಲಿ ಮಾತನಾಡಿದ ಐವನ್ ಪಿಯುಸಿಯಲ್ಲಿ ಕೊಂಕಣಿ ಕಲಿಕೆಗೆ ಅವಕಾಶ ಇಲ್ಲದುದರ ಬಗ್ಗೆ ಪ್ರಸ್ತಾಪಿಸಿದರು. ಆದರೆ ಕೊಂಕಣಿ ಮಾತನಾಡುವುದರ ಬಗ್ಗೆ  ಆಕ್ಷೇಪಿಸಿದ ಸಭಾಪತಿ ಶ್ರೀ ಡಿ ಎಚ್ ಶಂಕರಮೂರ್ತಿ ಕನ್ನಡದಲ್ಲೇ ಮಾತನಾಡುವಂತೆ ಸೂಚಿಸಿದರು. ಆದರೆ ಈ ವಿಷಯದ ಬಗ್ಗೆ ತಾನು ಕೊಂಕಣಿ ಮತ್ತು ಅದರ ಕನ್ನಡ ಭಾಷಾಂತರವನ್ನು ನೀಡಿದ್ದು ತನ್ನ ಮಾತೃಭಾಷೆಯಲ್ಲೇ ಮಾತನಾಡಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರೂ ಸಭಾಧ್ಯಕ್ಷರು ನಿರಾಕರಿಸಿದ ಪರಿಣಾಮ ಐವನ್ ಡಿಸೋಜ ಕನ್ನಡದಲ್ಲಿ ತನ್ನ ಮಾತನ್ನು ಮುಂದುವರೆಸಿದರು. 

 

ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಶ್ನೆ 

ರಾಜ್ಯ ಸರ್ಕಾರವು 22 ವರ್ಷಗಳ ಹಿಂದೆಯೇ ಕೊಂಕಣಿ ಭಾಷೆಯ ಬೆಳವಣಿಗಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ, 2007ರಲ್ಲಿ ಕೊಂಕಣಿ ಭಾಷೆಯನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯನ್ನಾಗಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರಿಸಿ ಪ್ರಸ್ತುತ ಸುಮಾರು 1500 ವಿದ್ಯಾರ್ಥಿಗಳು ಕರಾವಳಿ ಕರ್ನಾಟಕದ 3 ಜಿಲ್ಲೆಗಳಾದ ದ.ಕ., ಉಡುಪಿ ಉತ್ತರ ಕನ್ನಡ ದಲ್ಲಿ ಕೊಂಕಣಿಯನ್ನು ತೃತೀಯ ಭಾಷೆಯನ್ನಾಗಿ ಅಭ್ಯಾಸ ಮಾಡುತ್ತಿದ್ದಾರೆ. 2012ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೊಂಕಣಿ ಸೇರ್ಪಡೆಗೊಂಡು 206 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ತೃತೀಯ ಭಾಷೆಯಲ್ಲಿ ಕೊಂಕಣಿ ಭಾಷೆ ತೇರ್ಗಡೆಗೊಂಡು ಯಶಸ್ವಿಯಾಗಿರುತ್ತಾರೆ.

 

2014-15ರ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ 4 ಖಾಸಗಿ ಕಾಲೇಜುಗಳಲ್ಲಿ ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರು, ರೋಸರಿಯೋ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಪದುವಾ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಪೊಂಪೈ ಪ.ದ. ಕಾಲೇಜು ಐಕಳಗಳಲ್ಲಿ ಕಾಲೇಜು ಮಟ್ಟದಲ್ಲಿ ಕೊಂಕಣಿ ಭಾಷೆಯನ್ನು ಐಚ್ಛಿಕ ಭಾಷೆಯಾಗಿ ಅಧ್ಯಯನ ಆರಂಭಗೊಂಡಿದ್ದು ಸುಮಾರು 150 ಕ್ಕೂ ಅಧಿಕ ವಿದ್ಯಾರ್ಥಿಗಳು ಕೊಂಕಣಿ ಭಾಷೆಯನ್ನು ಐಚ್ಛಿಕ ಬಾಷೆಯಾಗಿ ಅಭ್ಯಾಸಿಸುತ್ತಿದ್ದಾರೆ.

 

ಅದಾಗ್ಯೂ ಅತ್ಯಗತ್ಯ ಮತ್ತು ಪ್ರಮುಖವಾಗಿರುವ ಪದವಿಪೂರ್ವ (ಪಿ.ಯು.ಸಿ) ಹಂತದಲ್ಲಿ ಕೊಂಕಣಿ ಭಾಷೆ ಕಲಿಕೆಗೆ ಲಭ್ಯವಿರುವುದಿಲ್ಲ ಇದರಿಂದ ನಿರಂತರ ಕಲಿಕಾ ಸೌಲಭ್ಯಕ್ಕೆ ತಡೆಯುಂಟಾಗಿದೆ. ಈ ದಿಸೆಯಲ್ಲಿ 2012ರಲ್ಲಿಯೇ ಕರಡು ಪಠ್ಯಕ್ರಮವನ್ನು (ಸಿಲೆಬಸ್) ಚೌಕಟ್ಟಿನೊಂದಿಗೆ ಮನವಿ ನೀಡಿದರೂ ಪದವಿಪೂರ್ವ ಇಲಾಖೆ ಈವರೆಗೆ ಕ್ರಮ ಕೈಗೊಂಡಿಲ್ಲ ಕೊಂಕಣಿ ಭಾಷೆಯು ರಾಷ್ಟ್ರದಲ್ಲಿ 22 ಭಾಷೆಗಳಲ್ಲಿ ಒಂದಾಗಿ ಸಂವಿಧಾನದ 8ನೆ ಪರಿಚ್ಛೇದದಲ್ಲಿ ಸೇರ್ಪಡೆಗೊಂಡಿದ್ದರೂ ರಾಜ್ಯದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಮಂದಿ ಕೊಂಕಣಿ ಭಾಷೆ ಮಾತನಾಡುವ ಪ್ರಮುಖ 3 ಧರ್ಮಗಳಾದ ಹಿಂದೂ ಮುಸ್ಲಿಂ, ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದರೂ ಕೊಂಕಣಿ ಕಲಿಕೆಯನ್ನು 3 ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಿ ಕೊಂಕಣಿ ಭಾಷೆಯ ಅಭಿವೃದ್ದಿಗೆ ಹಿನ್ನಡೆಯಾಗಿದೆ ಎಂದು ಕೊಂಕಣಿ ಭಾಷಾ ಸಮಾಜವು ಅಭಿಪ್ರಾಯ ಪಟ್ಟಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಪ್ರಾಥಮಿಕ ಹಾಗೂ ಪ್ರೌಢ ಮಟ್ಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಯಲು ಹಾಗೂ ಪಿ.ಯು.ಸಿ ಮಟ್ಟದಲ್ಲಿ ಕೊಂಕಣಿ ಭಾಷೆಯನ್ನು ಭೋಧಿಸಲು ಮತ್ತು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳನ್ನು ಕೊಂಕಣಿ ಭಾಷೆಯ ಅಭಿವೃದ್ಧಿಯನ್ನು ಮಾಡಲು ಅವಕಾಶ ಮಾಡಿಕೊಡಬೇಕಾಗಿ ಮತ್ತು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಕೊಂಕಣಿ ಅಧ್ಯಯನ ಪೀಠವನ್ನು ಸ್ಥಾಪಿಸಲು ಕ್ರಮಕೈಗೊಳ್ಳಬೇಕಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಬಯಸುತ್ತೇನೆ.