ಕೊಂಕಣಿಯ ಕಂಪನ್ನು ಪಸರಿಸುತ್ತಾ... ಒಂದು ವರ್ಷ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ರೊಯ್ ಕ್ಯಾಸ್ತೆಲಿನೊ ಇವರು ಅಧ್ಯಕ್ಷರಾಗಿ ಫೆಬ್ರವರಿ 26ಕ್ಕೆ ಒಂದು ವರ್ಷ ಆಯಿತು. ಕೊಂಕಣಿ ಅಕಾಡೆಮಿ ರಾಜ್ಯಾದ್ಯಾಂತ ತನ್ನ ವಿನೂತನ ಕೆಲಸ ಕಾರ್ಯಗಳ ಮುಖಾಂತರ ಸದ್ದು ಮಾಡಿತು. ಕೊಂಕಣಿ ಅಕಾಡೆಮಿಯ ಅಧ್ಯಕ್ಷರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ವತಹಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಬೆಂಗಳೂರಿನ ಒಂದು ಕಾರ್ಯಕ್ರಮದಲ್ಲಿ ಹೊಗಳಿದರು.


ವಿಭಿನ್ನ ಯೋಜನೆಗಳು, ವಿನೂತನ ಕಾರ್ಯಕ್ರಮಗಳು ಇವುಗಳ ಹಿನ್ನೆಲೆಯಲ್ಲಿ ಕೊಂಕಣಿ ಅಕಾಡೆಮಿಯ ವರ್ಷದ ಕಾರ್ಯಕ್ರಮಗಳ ಒಂದು ಪಕ್ಷಿನೋಟ.


1) ಮೂಲ ಧ್ಯೇಯೋದ್ಧೇಶಗಳ ಪ್ರಕಾರ ಅಕಾಡೆಮಿಯು ಮುಖ್ಯವಾಗಿ ಸಾಹಿತ್ಯ, ಕಲೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೈವಿಧ್ಯ ಪ್ರಕಾರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು.
ಅಂದರೆ ಸಾಹಿತ್ಯಿಕ, ಸಾಂಸ್ಕೃತಿಕ ಉತ್ಸವ, ಕಾರ್ಯಾಗಾರ, ಸಂವಾದ, ವಿಚಾರ-ಸಂಕಿರಣ ಇತ್ಯಾದಿ. ಅಕಾಡೆಮಿಯ ಕಾರ್ಯಕ್ರಮಗಳನ್ನು ಅಕಾಡೆಮಿಯು ನೇರವಾಗಿ ಅಥವಾ ಇತರ ಸಂಘ ಸಂಸ್ಥೆಗಳ ಜತೆ ಸಂಯುಕ್ತವಾಗಿ ವ್ಯವಸ್ಥೆಗೊಳಿಸಬೇಕು. ಈ ಕ್ಷೇತ್ರದಲ್ಲಿ ಅಕಾಡೆಮಿಯು ಕೆಲವು ದೊಡ್ಡ ಮಟ್ಟಿನ ಕಾರ್ಯಕ್ರಮಗಳನ್ನು ನಡೆಸಿದೆ.

ರಾಜ್ಯ ಮಟ್ಟದ ಕಾರ್ಯಕ್ರಮಗಳು:
ಮಾರ್ಚ್    

 • ಕೊಂಕಣಿ ಜಾಗೃತಿ ಅಭಿಯಾನಕ್ಕೆ ಚಾಲನೆ (೧೬-೦೩-೨೦೧೪)

ಎಪ್ರಿಲ್      

 • ಕೊಂಕಣಿ ಶಿಕ್ಷಕರ ವಾರ್ಷಿಕ ಸಮಾವೇಶ (೦೮-೦೪-೨೦೧೪)

ಮೇ         

 • ತಿಂಗಳಿಗೆರಡು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ (೦೮-೦೫-೨೦೧೪)
 • ಮೊಬೈಲ್ ಬಜಾರ್ ಯೋಜನೆಗೆ ಚಾಲನೆ ಮತ್ತು ವಸಂತ ಸಂಭ್ರಮ, ಬೆಂಗಳೂರು (೨೪-೦೬-೨೦೧೪)

ಜೂನ್      

 • ಗೌರವ ಪ್ರಶಸ್ತಿ, ಧಾರವಾಡ (೨೨-೦೬-೨೦೧೪)

ಜುಲೈ       

 • ಕೊಂಕಣಿ ಕ್ಲಬ್ ಸ್ಥಾಪನೆ (೦೩-೦೭-೩೦೧೪)

ಆಗಸ್ಟ್       

 • ಕೊಂಕಣಿ ಮಾನ್ಯತಾ ದಿನಾಚರಣೆ (೨೦-೦೮-೨೦೧೪)

ಸೆಪ್ಟೆಂಬರ್  

 • ಕೊಂಕಣಿ ಶಿಕ್ಷಕರ ದಿನಾಚರಣೆ (೦೨-೦೯-೨೦೧೪)
 • ಕೊಂಕಣಿ ಸಾಕ್ಷರತಾ ಅಭಿಯಾನ, ಬಾಳೆಹೊನ್ನೂರು (೧೪.೦೯.೨೦೧೪)

ಆಕ್ಟೋಬರ್   

 • ರಾಜ್ಯ ಮಟ್ಟದ ನಾಟಕ ತರಬೇತಿ ಶಿಬಿರ (೦೨, ೦೩, ೦೪-೧೦-೨೦೧೪)
 • ಬಹುಭಾಷಿಕ ಕಾರ್ಯಕ್ರಮ: ಕನ್ನಡ-ಕೊಂಕಣಿ ಸಾಮರಸ್ಯ ಲೋಕ, ಗುಂದ ಜೋಯಿಡಾ (೧೨-೧೦-೨೦೧೪)

ನವೆಂಬರ್   

 • ಕೊಂಕಣಿ ಮಕ್ಕಳ ದಿನಾಚರಣೆ (೧೨-೧೧-೨೦೧೪)

ಡಿಸೆಂಬರ್   

 • ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ (೨೦-೧೨-೨೦೧೪)

ಜನವರಿ   

 • ಸಾಂಸ್ಕೃತಿಕ ಮೇಳ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ, ಬೆಂಗಳೂರು (೧೭, ೧೮-೦೧-೨೦೧೫)

ಫೆಬ್ರವರಿ   

 • ಕರಾವಳಿ ಕೊಂಕಣಿ ಉತ್ಸವ, ಕಾರವಾರ (೧೪, ೧೫-೦೨-೨೦೧೫)

ಮಾರ್ಚ್   

 • ಕೊಂಕಣಿ ಸಾಹಿತ್ಯ ಸಂಜೆ, ಮುಂಬಯಿ (೦೬-೦೩-೨೦೧೫)
 • ಕೊಂಕಣಿ ಪೊರಾಬ್, ಹೊನ್ನಾವರ (೧೫,೧೬, ೧೭-೦೩-೨೦೧೫)

 

ಹೊರರಾಜ್ಯ ಕಾರ್ಯಕ್ರಮಗಳು :
ಅಕಾಡೆಮಿಯ ಹೊರರಾಜ್ಯ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ದೆಹಲಿ, ಮುಂಬಯಿ, ಕೊಚ್ಚಿ,  ಗೋವಾ, ಕೇರಳ ಇತ್ಯಾದಿ ಸ್ಥಳಗಳಲ್ಲಿ ಕೊಂಕಣಿ ಕಾರ್ಯಕ್ರಮಗಳು, ಸಭೆಗಳು ನಡೆದಿವೆ.

2) ಸಾಹಿತ್ಯ, ಜನಪದ, ಕಲೆ, ಸಂಸ್ಕೃತಿಯ ಉಳಿಸುವಿಕೆಗಾಗಿಯು ಅಕಾಡೆಮಿ ಕಾರ್ಯ ನಿರ್ವಹಿಸಬೇಕು.
ಈ ಎಲ್ಲಾ ಕ್ಷೇತ್ರಗಳಲ್ಲಿ ವಿವಿಧ ತರಬೇತಿಗಳು, ಕಾರ್ಯಾಗಾರಗಳು, ಕೊಂಕಣಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕಾರ್ಯಾಗಾರಗಳು ನಡೆದಿವೆ.
 

ಯುವಜನ ಸಂಗಮ ತರಬೇತಿ:

 • ನಾಟಕ ಕ್ಷೇತ್ರ: ಕೊಂಕಣಿ ನಾಟಕ ತರಬೇತಿ, ಶಕ್ತಿನಗರ ೨.೧೦.೨೦೧೪ ರಿಂದ ೦೪.೧೦.೨೦೧೪
 • ಜಾನಪದ ಕ್ಷೇತ್ರ: ಕುಡುಬಿ, ಗುಮಟಾ - ತೊಣಿಯೊ ನೃತ್ಯ ತರಬೇತಿ ಶಿಬಿರ, ಬಜ್ಪೆ (ಪ್ರಾಯೋಜಕತೆ ೦೭.೧೨.೨೦೧೪ ರಿಂದ
 • ಶಿಕ್ಷಣ ಕ್ಷೇತ್ರ : ಕೊಂಕಣಿ ಶಿಕ್ಷಕರಿಗೆ ತರಬೇತಿ, ಕೊಂಕಣಿ ಮಾನ್ಯತಾ ದಿವಸ, ಕೊಂಕಣಿ ಮಕ್ಕಳ ದಿನಾಚರಣೆ, ಶಿಕ್ಷಕರ ವಾರ್ಷಿಕ ಕಾರ್ಯಕ್ರಮ ಇತ್ಯಾದಿ
 • ಕಲಾವಿದರ ಮಾಹಿತಿ ಸಂಗ್ರಹ

 ಸಾಕ್ಷ ಚಿತ್ರಗಳು

 •  ಪರಿಶಿಷ್ಟ ಪಂಗಡ (ಸಿದ್ದಿ) ಹಿರಿಯ ಕಲಾವಿದರ ಬಗ್ಗೆ
 •  ಪರಿಶಿಷ್ಟ ಜಾತಿ (ಮಂದಾರ) ಹಿರಿಯ ಕಲಾವಿದರ ಬಗ್ಗೆ
 •  ಕೊಂಕಣಿ ಕುಲಕಸುಬು, ಆಚಾರ ವಿಚಾರ ಬಗ್ಗೆ ಸಾಕ್ಷ್ಯ ಚಿತ್ರ


ಅಕಾಡೆಮಿಯ ವೈವಿಧ್ಯಮಯ ಚಟುವಟಿಕೆಗಳ ಬಗ್ಗೆ:

 •  ಡಿಕ್ಷನರಿ, ಅರ್ಥಕೋಶ, ಶಬ್ದಕೋಶ ಇತ್ಯಾದಿ ಅಭಿವೃದ್ಧಿ ಪಡಿಸುವುದು.
 •  ಜನಪದ ಕಲಾತಂಡಗಳಿಗೆ ಸಂಭಾವನೆ ನೀಡಿ ವಿಫುಲ ಪ್ರದರ್ಶನಕ್ಕೆ ಅವಕಾಶ
 •  ಕೊಂಕಣಿ ಬದುಕು, ಜನಜೀವನ ಬಗ್ಗೆ ಸಾಹಿತ್ಯ ಪ್ರಕಟಣೆ
 •  ಕೊಂಕಣಿಯ ಹಿಂದುಳಿದ ಸಮಾಜ ಬಾಂಧವರಿಗಾಗಿ ವಿಶೇಷವಾಗಿ ದಲಿತ, ಕುಡುಬಿ, ಖಾರ್ವಿ ಯುವಜನರಿಗೆ ಉತ್ಸವ ರೀತಿಯ ವಿವಿಧ ಕಾರ್ಯಕ್ರಮ ನಡೆಸಲಾಗಿದೆ. ಆಯಾ ಸಮುದಾಯದವರೇ ಕಾರ್ಯಕ್ರಮ ಸಂಘಟನೆ ಮಾಡಿ, ಜನರನ್ನು ಒಗ್ಗೂಡಿಸಿ, ವಿವಿಧ ರೀತಿಯ ಪ್ರದರ್ಶನ ನೀಡುತ್ತಾರೆ. ಅಕಾಡೆಮಿ ಅವರಿಗೆ ಮಾರ್ಗದರ್ಶನ ಮತ್ತು ಧನಸಹಾಯ ನೀಡುತ್ತದೆ. ಈ ಮೂಲಕ ಅವರು ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಡಲಾಗುತ್ತದೆ. ಗಾಬಿತ್, ದಾಲ್ದಿ, ಮೇಸ್ತ, ಸಿದ್ದಿ ಸಮುದಾಯದವರ ಬಗ್ಗೆ ಈಗಾಗಲೇ ಫೆಲೊಶಿಫ್ ಅಧ್ಯಯನ ನಡೆದಿದ್ದು ಪುಸ್ತಕ ರೂಪದಲ್ಲಿ ಅವು ಪ್ರಕಟವಾಗಲಿವೆ.
 • ಸುಮಾರು ೮೦ ಮಹಿಳೆಯರಿಗಾಗಿ ಕೊಂಕಣಿ ಓದು-ಬರೆಯುವ ಕೊಂಕಣಿ ಸರ್ಟಿಫಿಕೇಟ್ ಕಾರ್ಯಾಗಾರ ನಡೆಸಲಾಗಿದೆ.


3 ಸಾಹಿತ್ಯ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆ, ಗೃಂಥಾಲಯ ಅಭಿವೃದ್ಧಿ, ಪುಸ್ತಕ ಪಡೆಯುವುದು - ಸಂಗ್ರಹಿಸುವುದು ಇತ್ಯಾದಿ ಕೆಲಸಗಳು ನಿರಂತರವಾಗಿ ನಡೆಯಬೇಕು.

 •  ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳಿಗೆ ಗೌರವ, ಭಾಗವಹಿಸುವಿಕೆ, ಗೋಷ್ಠಿಗಳು,
 •  ಪ್ರಾಥಮಿಕ, ಪ್ರೌಢಶಾಲಾ ಮಟ್ಟದಲ್ಲಿ ಇರುವ ಕೊಂಕಣಿ ಕಲಿಕಾ ಸೌಲಭ್ಯವನ್ನು ಪದವಿಪೂರ್ವ, ಡಿಎಡ್-ಬಿಎಡ್ ಹಾಗೂ ವಿಶ್ವವಿದ್ಯಾನಿಲಯ ಮಟ್ಟಕ್ಕೆ ವಿಸ್ತರಣೆ.
 •  ೨೫ ವಿವಿಧ ಕ್ಷೇತ್ರಗಳ (ಸಣ್ಣ ಕಥೆ, ಕವಿತೆ, ಕಾದಂಬರಿ, ನಾಟಕ, ಅನುವಾದ, ಲಲಿತ ಪ್ರಬಂಧ, ಆರೋಗ್ಯ ಮಾಹಿತಿ, ಭಾಷಾಕಲಿಕೆ, ವೈಜ್ಞಾನಿಕ ಚಿಂತನೆ, ಶಿಕ್ಷಕರ ಕೈಪಿಡಿ...) ಪುಸ್ತಕಗಳ ಪ್ರಕಟಣೆ.
 •  ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳ ಲೈಬ್ರೇರಿಗೆ ಉಚಿತ ಕೊಂಕಣಿ ಪುಸ್ತಕಗಳ ವಿತರಣೆ
 •  ಅಕಾಡೆಮಿ ಗೃಂಥಾಲಯಕ್ಕೆ ೧೨x೨೪ ಗಾತ್ರದಲ್ಲಿ ಪುಸ್ತಕ ಸಂಗ್ರಹಕ್ಕಾಗಿ ಹೊಸ ಕಪಾಟಿನ ವ್ಯವಸ್ಥೆ
 •  ಲ್ಯಾಪ್‌ಟಾಪ್, ಎಲ್.ಸಿ.ಡಿ., ಸೌಂಡ್ ಸಿಸ್ಟಮ್, ವೈಫೈ ಸೌಲಭ್ಯ.
 •  ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವ್ಯವಸ್ಥಿತ ರೀತಿಯಲ್ಲಿ ಕೊಂಕಣಿ ಪೀಠ ಸ್ಥಾಪನೆಗಾಗಿ ಕೆಲಸ.
 •  ಕೊಂಕಣಿ ಪೀಠ, ಕಾಲೇಜುಗಳಲ್ಲಿ ಕೊಂಕಣಿ ಬೋಧನೆ, ಸ್ನಾತಕೋತ್ತರ ಕೊಂಕಣಿ ಕೇಂದ್ರ ಸ್ಥಾಪನೆಗಾಗಿ ಗೋವಾ ವಿಶ್ವವಿದ್ಯಾನಿಲಯದಲ್ಲಿ ಎಂ. ಎ. ಅಭ್ಯಾಸಕ್ಕಾಗಿ ಸಂಯೋಜನೆ.
 •  ಕೊಂಕಣಿ ಸಾಹಿತ್ಯ ಪುಸ್ತಕಗಳ ಮಾರಾಟ ವ್ಯವಸ್ಥೆಗಾಗಿ `ಮೊಬೈಲ್ ಕೊಂಕಣಿ ಬಜಾರ್' ಯೋಜನೆ


4) ಇತರೆ ಸಂಘ ಸಂಸ್ಥೆಗಳೊಡನೆ ವಿಚಾರ ವಿನಿಮಯ ನಡೆಸಿ ಸಲಹೆ- ಸೂಚನೆ ಪಡೆಯುವುದು.

 •  ಗೋವಾ ಕೊಂಕಣಿ ಅಕಾಡೆಮಿ, ದಾಲ್ಗಾದ್ ಅಕಾಡೆಮಿ, ತಿಯಾತ್ರ್ರ್ ಅಕಾಡೆಮಿ, ಕಲಾ ಅಕಾಡೆಮಿ, ಕೇರಳ ಅಕಾಡೆಮಿ
 •  ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಪರಿಷತ್, (ಕೋಝಿಕೋಡ್ ಕಾರ್ಯಕ್ರಮ)
 •  ಮಂಗಳೂರು ವಿಶ್ವವಿದ್ಯಾನಿಲಯ (ಪೀಠ ಸ್ಥಾಪನೆಗಾಗಿ)
 •  ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ (ಪೀಠ, ಪಿಯುಸಿ ಕೊಂಕಣಿ, ಪ್ರಾಥಮಿಕ-ಪ್ರೌಢ ಶಾಲೆಗಳಲ್ಲಿ ಕೊಂಕಣಿ
 •  ಕೊಂಕಣಿ ಭಾಷಾ ಮಂಡಳ, ಮಹಾರಾಷ್ಟ್ರ (ಸಾಹಿತಿಕ ಸಂಜೆ)
 •  ದೆಹಲಿ ಕರ್ನಾಟಕ ಸಂಘ
 •  ಗೋವಾ ವಿಶ್ವವಿದ್ಯಾನಿಲಯ


5) ಕೊಂಕಣಿ ಭಾಷೆ, ಸಾಹಿತ್ಯ ಸಂಶೋಧನೆ, ಜಾನಪದ, ನಾಟಕ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಗೌರವ ಪ್ರಶಸ್ತಿ ಪುಸ್ತಕ ಬಹುಮಾನ ಮತ್ತು ಯುವ ಪುರಸ್ಕಾರ ನೀಡುವ ಕಾರ್ಯಕ್ರಮಗಳು.

 •  ಗೌರವ ಪ್ರಶಸ್ತಿ, ಧಾರವಾಡ ೨೦೧೩
 •  ಗೌರವ ಪ್ರಶಸ್ತಿ, ಬೆಂಗಳೂರು ೨೦೧೪

ಇತರೆ ಅನೇಕ ಕೊಂಕಣಿ ಸಮಾರಂಭದಲ್ಲಿ ಸಾಹಿತ್ಯ, ನಾಟಕ ಕಲೆ, ಲೇಖಕ, ವಿಮರ್ಶಕ, ಸಂಘಟಕ ಶಿಕ್ಷಕ, ವಿದ್ಯಾರ್ಥಿ-ಇತ್ಯಾದಿ ಹತ್ತಾರು ಸಾಧಕರನ್ನು ಗುರುತಿಸಿ ಗೌರವಿಸಿದೆ.

ಅಕಾಡೆಮಿಯ ಆಡಳಿತ
ಅಕಾಡೆಮಿಯೆಂದರೆ, ಸರಕಾರದಿಂದ ನಾಮ ನಿರ್ದೇಶಿತ ಒಬ್ಬರು ಅಧ್ಯಕ್ಷರು ಹಾಗೂ ೧೩ ಮಂದಿ ಸದಸ್ಯರ ಸಮಿತಿ ಹಾಗೂ ಕಚೇರಿ ಆಡಳಿತ ವಿಭಾಗದಲ್ಲಿ ಓರ್ವ ರಿಜಿಸ್ಟ್ರಾರು ಹಾಗೂ ಮೂವರು ಸರಕಾರಿ ಸಿಬ್ಬಂದಿಗಳಿರಬೇಕು. ಆದರೆ ಸಿಬ್ಬಂದಿಗಳ ಹುದ್ದೆಯು ಅನೇಕ ವರ್ಷದಿಂದ ಖಾಲಿ ಇರುತ್ತದೆ. ಸ್ಥಳೀಯವಾಗಿ ತಾತ್ಕಾಲಿಕ ಸಿಬ್ಬಂದಿಯವರನ್ನು ನೇಮಿಸಿ ಕಾರ್ಯಕ್ರಮ ನಡೆಸುವುದು ತುಂಬಾ ತ್ರಾಸದಾಯಕ. ಸರಕಾರದ ಪಾರದರ್ಶಕ ನಿಯಮ, ಆರ್ಥಿಕ ಸಂಹಿತೆ, ಸಾದಿಲ್ವಾರು ಸಂಹಿತೆ ಇತ್ಯಾದಿ ನಿಯಮಗಳನ್ನು ಪಾಲಿಸಿಕೊಂಡು ಖರ್ಚುವೆಚ್ಚ ಮಾಡಬೇಕಾಗುತ್ತದೆ.


ನಮ್ಮ ಅಕಾಡೆಮಿಯು ಹೆಚ್ಚು ಕಾರ್ಯಕ್ರಮಗಳನ್ನು ನಡೆಸುವುದರ ಜತೆಗೆ ಸರಿಯಾಗಿ ನಿಯಮ ಪಾಲನೆ ಮಾಡುವಲ್ಲಿಯೂ ಹಿಂದೆ ಬಿದ್ದಿಲ್ಲ. ಇ ಟೆಂಡರ್‌ನಂತಹಾ ಪಾರದರ್ಶಕ ವಿಧಾನ ಬಳಸಿರುವ ಕರ್ನಾಟಕದ ಪ್ರಥಮ ಅಕಾಡೆಮಿಯು ನಮ್ಮದಾಗಿದೆ. ಎಲ್ಲಾ ಪಾವತಿಗಳನ್ನು ಚೆಕ್ ಮೂಲಕವೇ ನಡೆಸಲಾಗುತ್ತದೆ. ಈಗ ಇನ್ನೂ ಹೆಚ್ಚು ಜನಪರ ಹಾಗೂ ಪಾರದರ್ಶಕತೆಗಾಗಿ ಚೆಕ್ ರಹಿತ ನೇರ ಬ್ಯಾಂಕ್ ವರ್ಗಾವಣೆ (ಖ.ಖಿ.ಉ.S.) ವಿಧಾನದಲ್ಲಿ ಪಾವತಿ ನೀಡಲಾಗುತ್ತದೆ. ಎಲ್ಲಾ ಆರ್ಥಿಕ ಲೆಕ್ಕಾಚಾರಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ. ಅಕಾಡೆಮಿಯು ಸಾಕಷ್ಟು ಮಾಹಿತಿಗಳನ್ನು ಸಾರ್ವಜನಿಕರಿಗೆ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.


ಈ ಕಳೆದ ಒಂದು ಆರ್ಥಿಕ ವರ್ಷದಲ್ಲಿ ಸುಮಾರು ೧೨೫೨ ಚೆಕ್‌ಗಳ ಮೂಲಕ  ರೂ. ೧,೧೬,೨೩,೦೪೮/- ಮೊತ್ತವನ್ನು ಕಲಾವಿದರ, ಸಾಹಿತ್ಯ ಶಿಕ್ಷಣದ ಫಲಾನುಭವಿ ವ್ಯಕ್ತಿ, ಸಂಘ-ಸಂಸ್ಥೆಗಳಿಗೆ ನೀಡಿ ಕರಾರುವಾಕ್ಕಾದ ಲೆಕ್ಕಾಚಾರ ಇಡಲಾಗಿದೆ. ನಮ್ಮ ಕಚೇರಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯಲ್ಲಿ ದುಡಿಯುವ ಶಿಬಂಧಿ ಹಾಗೂ ರಿಜಿಸ್ಟ್ರಾರ್‌ರವರ ದಕ್ಷ ಮೇಲ್ವಿಚಾರಣೆಯಿಂದಾಗಿ ಈ ಶಿಸ್ತುಬದ್ಧ ವ್ಯವಸ್ಥೆ ಸಾಧ್ಯವಾಗಿದೆ.

ಈ ವರ್ಷದಲ್ಲಿ ಸುಮಾರು ೫ ಬಾರಿ ಸರ್ವ ಸದಸ್ಯರ ಸಭೆ, ೧೩ ಬಾರಿ ಸ್ಥಾಯಿ ಸಮಿತಿ ಸಭೆ ನಡೆಸಿ ಅಕಾಡೆಮಿಯಲ್ಲಿ ಕಾಲಕಾಲಿಕ ವ್ಯವಹಾರಗಳ ಬಗ್ಗೆ ಪರಿಶೀಲನೆ, ಚರ್ಚೆ ನಡೆಸಿ ಉಸ್ತುವಾರಿ ಕೈಗೊಳ್ಳಲಾಗಿದೆ.  ಇದಲ್ಲದೆ ಅಧ್ಯಕ್ಷರು ಹತ್ತಾರು ಬಾರಿ ಬೆಂಗಳೂರಿಗೆ ಪ್ರಯಾಣಿಸಿ, ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿ, ಇತರ ಸಚಿವರು, ಇಲಾಖಾ ಕಾರ್ಯದರ್ಶಿ, ನಿರ್ದೇಶಕರನ್ನು ಭೇಟಿ ಮಾಡಿ ಸರಕಾರ, ಇಲಾಖೆಯೊಡನೆ ಅಕಾಡೆಮಿ ಸಂಬಂಧ ಉತ್ತಮಗೊಳಿಸಿದ್ದಾರೆ.


ಅಕಾಡೆಮಿಯ ಸಮಿತಿಯಲ್ಲಿ ರಾಜ್ಯದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಸಮರ್ಥ ಉತ್ಸಾಹಿ ಸದಸ್ಯರಿದ್ದರೂ, ಅವರು ಅಕಾಡೆಮಿಯ ಚಟುವಟಿಕೆಗಳಲ್ಲಿ, ಕಾರ್ಯಕ್ರಮ ಆಯೋಜನೆಯಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಅವರಿಗೆ ನೀಡಬಹುದಾದ ಆರ್ಥಿಕ ಸೌಲಭ್ಯ ನಿರ್ಬಂಧಗಳಿಂದಾಗಿ ಸಾಧ್ಯವಾಗುತ್ತಿಲ್ಲ. ಅಕಾಡೆಮಿ ಕಾರ್ಯಕ್ರಮಗಳ ಸಿದ್ಧತೆಯು ಸಾಮಾನ್ಯವಾಗಿ ಕಠಿಣ ಈವೆಂಟ್ ಮ್ಯಾನೇಜ್‌ಮೆಂಟ್ ಚಟುವಟಿಕೆಯಾಗಿರುತ್ತದೆ. ಹಲವು ಬಾರಿ ಸತತವಾಗಿ ರಾತ್ರಿ ಹಗಲೆನ್ನದೆ ಕಾರ್ಯನಿರ್ವಹಿಸುವ ಅಗತ್ಯವಿರುತ್ತದೆ.  ಈ ಸಂದರ್ಭದಲ್ಲಿ ಸೀಮೀತ ಸರಕಾರಿ ವ್ಯವಸ್ಥೆಯ ಜತೆಗೆ ಅಧ್ಯಕ್ಷರು ತಮ್ಮ ಖಾಸಗಿ ವಲಯದ ಸಿಬ್ಬಂದಿ-ವ್ಯವಸ್ಥೆ-ಸೌಲಭ್ಯವನ್ನು ಬಳಸಿಕೊಳ್ಳುವುದು ತುಂಬಾ ಅನಿವಾರ್ಯ. ಇಂತಹ ಸನ್ನಿವೇಶದಲ್ಲಿ ಕಾರ್ಯಕ್ರಮಗಳನ್ನು ಸ್ಥಳೀಯ ಆಸಕ್ತರ ಸಹಾಯ ಪಡೆದು ನಡೆಸುವ ಒತ್ತಡ ಅನುಭವಿಸಬೇಕಾಗುತ್ತದೆ. ಯಾಕೆಂದರೆ ಕೊಂಕಣಿ ಜನರಿಗಾಗಿ ಪಡೆದ ಸರಕಾರದ ಅನುದಾನವನ್ನು ಸದುಪಯೋಗ ಮಾಡದೆ ಬಿಡುವಂತಿಲ್ಲ.


ಕೊಂಕಣಿ ಅಕಾಡೆಮಿಯ ಇನ್ನೊಂದು ವಿಶೇಷತೆ ಏನೆಂದರೆ ಎಲ್ಲಾ ಸದಸ್ಯರಿಗೂ ಅಕಾಡೆಮಿ ಆಡಳಿತ ಮತ್ತು ಕಾರ್ಯ ವಿಧಾನದ ಅನುಭವ ಪಡೆಯಲು, ವರ್ಷಕ್ಕೆ ನಾಲ್ವರು ಸದಸ್ಯರಿಗೆ ಸ್ಥಾಯಿ ಸಮಿತಿಯಲ್ಲಿ ಅವಕಾಶ ನೀಡಲಾಗುತ್ತಿದೆ.

 

 

 

Click here to read the PRESS RELEASE (PDF)

 

 

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]