Print

ಕಾರವಾರದಲ್ಲಿ ಫೆಬ್ರವರಿ 07 ಮತ್ತು 08 ರಂದು ಕೊಂಕಣಿ ಅಕಾಡೆಮಿ ವತಿಯಿಂದ ಮಯೂರ ಶರ್ಮ ವೇದಿಕೆಯಲ್ಲಿ ಕರಾವಳಿ ಕೊಂಕಣಿ ಉತ್ಸವ ಜರಗಿತು. ಫೆಬ್ರವರಿ 7 ರಂದು ನಗರದ ಬೀದಿಗಳಲ್ಲಿ ಜಾನಪದ ಮೆರವಣಿಗೆ ನಡೆಯಿತು.  ಕಾರ್ಯಕ್ರಮಕ್ಕೆ ಶಾಸಕ ಸತೀಶ್ ಸೈಲ್ ಗುಮಟೆ ಬಾರಿಸುವ  ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯಿತು.

 2ನೇ ದಿವಸವಾದ ರವಿವಾರ ಫೆಬ್ರವರಿ 8 ರಂದು ನಡೆದ ಕೊಂಕಣಿ ಸಾಹಿತ್ಯ ಸಂಮೇಳನದಲ್ಲಿ ಎರಡು ನಿರ್ಣಯಗಳನ್ನು ಅಂಗೀಕರಿಸಲಾಯಿತು.
``ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಡ್ಡಾಯಗೊಳಿಸುವುದನ್ನು ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರಾದ ನಾವು ಸಂಪೂರ್ಣ ಬೆಂಬಲ ಘೊಷಿಸುತ್ತೇವೆ. ಇದೇ ವೇಳೆ ಕೊಂಕಣಿ ಮಾತೃಭಾಷಿಕರಾದ ನಮಗೆ ನಮ್ಮ ಮಾತೃಭಾಷೆಯನ್ನು ಉಳಿಸಲು ಮತ್ತು ಬೆಳೆಸಲು ಒಂದನೇ ತರಗತಿಯಿಂದಲೇ ದ್ವೀತೀಯ ಭಾಷೆಯಾಗಿ ಕಲಿಯಲು ಅವಕಾಶ ಮಾಡಿ ಕೊಡಬೇಕು.''

 

 

 

 

 

 

 


``ಕೇಂದ್ರ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ನೀಡುವಾಗ ಕೊಂಕಣಿಯ ಎಲ್ಲಾ ಐದು ಲಿಪಿಗಳಾದ ಕನ್ನಡ, ದೇವನಾಗರಿ, ರೋಮಿ, ಮಲಯಾಳಂ ಮತ್ತು ಪರ್ಸೊ ಅರಾಬಿಕ್ ಸಮಾನ ಮನ್ನಣೆ ನೀಡಬೇಕು.''

ಕರಾವಳಿ ಕೊಂಕಣಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಕೊಂಕಣಿ ಸಮುದಾಯಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಮಾತನಾಡಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ರಾಜ್ಯ ಸರಕಾರ ಈ ವಿಷಯದಲ್ಲಿ ಶೀಘೃ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ವಿನಂತಿಸಿದರು.

ಕಳೆದ ಬೆಳಗಾವಿ ಅಧಿವೇಶನದಲ್ಲಿ ಕೊಂಕಣಿ ಬಾಷೆಗೆ ವಿಧಾನ ಪರಿಷದ್ ಸಭಾಪತಿ ಬಿ ಎಚ್ ಶಂಕರಮೂರ್ತಿಯವರು  ಶಾಸಕ ಐವನ್ ಡಿಸೋಜಾ ರವರಿಗೆ ಮಾಡಿದ ಅವಮಾನವನ್ನು ಪ್ರಸ್ಥಾಪಿಸಿದ ಅವರು ಕೊಂಕಣಿ ಭಾಷೆ ನಮ್ಮ ಸಂವಿಧಾನದ ಅಡಿಯಲ್ಲಿ ಮಾನ್ಯತೆ ಪಡೆದಿದ್ದು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಅನುವಾದದ ಸೌಲಭ್ಯವನ್ನು ಅಳವಡಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

 

 

 

 

 

 

 

 


ಕೊಂಕಣಿ ಸಮುದಾಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಹಿರಿಯರಲ್ಲಿ ಜಾರ್ಜ ಫರ್ನಾಂಡಿಸ್ ಸಮಾಜ ಸೇವೆ, ಸಂಜಯ್ ಮಾಂಜರೇಕರ ಬ್ಯಾಂಕಿಂಗ್, ಡಾ. ಎಂ. ವ್ಹಾಯ್. ಸಾವಂತ ಶಿಕ್ಷಣ, ಬಿ. ವಿಲ್ಸನ್ ಚಿತ್ರಕಲೆ, ಶೀಮತಿ. ಶುಭಾಂಗಿ ಎಂ. ಶಿರೋಡಕರ ಸಮಾಜಸೇವೆ, ಶ್ರೀಮತಿ. ಕುಮುದ ಗಡಕರ ರಂಗಕಲಾ, ವಸಂತ ಸೈಲ ಲೋಕ ಕಲಾ, ಉದಯಕಾಂತ ಅಣವೇಕರ ನಾಟಕ, ದಿನೇಶ ಗಡಕರ ಸಂಗೀತ, ವಸಂತ ಪುಂಡಲೀಕ ಮಹಾಲೆ ಚಿತ್ರಕಲೆ, ಮೊಹಮ್ಮದ ಇರ್‍ಷಾದ್ ಹಬೀಬ ಖುರೇಷಿ ಕ್ರೀಡೆ, ಕಿರಿಯರಲ್ಲಿ ಕು. ನಿವೇದಿತಾ ಸಾವಂತ ಕ್ರೀಡೆ, ಕು. ಎಚ್. ಕೆ. ನಿವೇದಿತಾ ಕ್ರೀಡೆ, ಕು. ಸಂಜನಾ ಬಾಂದೇಕರ ಚಿತ್ರಕಲೆ, ಕು. ಮಂಗಲಾ ಪ್ರಭು ಕೊಂಕಣಿಶಿಕ್ಷಣ, ಕುಮಾರ ರಾಹುಲ ಬೋರಕರ ಕ್ರೀಡೆ, ಕು. ನಿತೀಶ್ ಕುಮಾರ ಕ್ರೀಡೆ, ರಾಹುಲ ದೇವಿದಾಸ ನಾಯ್ಕ ಕ್ರೀಡೆ, ಕು. ಸಚಿನ್ ಆರ್ ಪರೀಟ್ ಕ್ರೀಡೆ, ಮದನ್ ಎಂ. ನಾಯ್ಕ ನೃತ್ಯ.

ಕರಾವಳಿ ಕೊಂಕಣಿ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ಪಿ. ಕಾಮತ ಸ್ವಾಗತಿಸಿದರು, ಕಾರ್ಯಾಧ್ಯಕ್ಷ ವಸಂತ ಬಾಂದೇಕರ ವಂದಿಸಿದರು. ಸಮಿತಿ ಅಧ್ಯಕ್ಷ ಮಂಗೇಶ ದತ್ತಾ ನಾಯ್ಕ ಅಕಾಡೆಮಿ ಸದಸ್ಯರನ್ನು ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ಸುಮಂಗಲ ನಾಯ್ಕ ಹಾಗೂ ಸುನೀಲ ಬಾರಕೂರ ನಿರೂಪಿಸಿದರು.

ನಂತರ ವಿವಿಧ ತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.