ಗಾಂವ್ಚ್ಯೊ ಭಾಸೊ ಉರ್‍ಚ್ಯಾಂತ್ ಮುಂಬಯ್‌ಗಾರಾಂಚೊ ಪಾತ್ರ್ ಮಹತ್ವಾಚೊ. ಭಾಸ್ ಉರ್‍ಲಿ ತರ್ ಜಿವಿತ್ ಸೊಭ್ತಾ.  ಕೊಂಕ್ಣಿ ಮ್ಹಳ್ಯಾರ್ ಫಕತ್ ಏಕ್ ಸಮುದಾಯ್ ನ್ಹಯ್. 41 ಸಮುದಾಯಾಂಚಿ ಭಾಸ್ ತಿ. ಕೊಂಕ್ಣ್ಯಾಂನಿ ಮಾಂಯ್‌ಭಾಶೆಂತ್ ಆಪ್ಲಿ ಅಸ್ಮಿತಾಯ್ ಸೊಧಿಜೆ ಆನಿ ತಿ ಸಂಸಾರಾಕ್ ದಾಕಯ್ಜೆ ಮ್ಹಣ್ ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ ಅಧ್ಯಕ್ಷ್  ರೊಯ್ ಕ್ಯಾಸ್ತೆಲಿನೊನ್ ಉಲೊ ದಿಲೊ. ತೊ ಮುಂಬಯ್ ಬೊರಿವಲಿಚ್ಯಾ ಸೈಂಟ್ ಫ್ರಾನ್ಸಿಸ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ರೀಸರ್ಚ್ ಸಂಸ್ಥ್ಯಾಚ್ಯಾ ಸಭಾಂಗ್ಣಾಂತ್ ಮಾರ್ಚ್ 07 ವೆರ್ ಕೊಂಕ್ಣೀ ಅಕಾಡೆಮಿನ್ ಮಾಂಡುನ್ ಹಾಡ್‌ಲ್ಲ್ಯಾ ಕೊಂಕಣಿ ಸಾಹಿತ್ಯ್ ಸಾಂಜ್ ಕಾರ್ಯಾಚೆಂ ಅಧ್ಯಕ್ಷ್‌ಪಣ್ ಘೆವ್ನ್ ಉಲಯ್ತಾಲೊ. 

ಕಾರ್ಯಾಚೊ ಮುಖೆಲ್ ಸಯ್ರೊ ಆಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಕಾರ್ಯಾಧ್ಯಕ್ಷ್ ಆಲ್ಬರ್ಟ್ ಡಬ್ಲೂ .ಡಿಸೊಜಾನ್ ಕಾರ್ಯೆಂ ಉಗ್ತಾಯ್ಲೆಂ. ಮಾನಾಚೆ ಸಯ್ರೆ ಜಾವ್ನ್ ಜಿಎಸ್‌ಬಿ ಸಭಾ ದಹಿಸರ್ ಹಾಚಿ ಸಹ ಸಂಚಾಲಕಿ ಸುಗುಣ ಕೆ.ಕಾಮತ್, ಫುಡಾರ್ ಪ್ರತಿಷ್ಠಾನಾಚೊ ಅಧ್ಯಕ್ಷ್ ಜೋನ್ ಡಿಸಿಲ್ವಾ, ನಾಟಕಕಾರ್ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಆನಿ ಅಕಾಡೆಮಿ ರಿಜಿಸ್ಟ್ರಾರ್ ಡಾ| ಬಿ.ದೇವದಾಸ ಪೈ ಆಸ್‌ಲ್ಲೆ.

ಆಲ್ಬರ್ಟ್ ಡಿಸೊಜಾನ್ ಅಕಾಡೆಮಿನ್ ಪರ್ಗಟ್ಲೆಲೆಂ ಡಾ. ವಿನ್ಸೆಂಟ್ ಡಿಮೆಲ್ಲೊ, ವಸಯ್ ಹಾಚೊ ನೈಸರ್ಗಿಕ್ ಭಲಾಯ್ಕಿ ಪುಸ್ತಕ್ ಲೊಕಾರ್ಪಣ್ ಕೆಲೆಂ. ಹ್ಯಾ ಕಾರ್ಯಾಂತ್ ದಿವೊ ಸಂಪಾದಕ್ ಲೊರೆನ್ಸ್ ಕುವೆಲ್ಲೊ, ಕುಟಾಮ್ ಸಂಪಾದಕ್ ಹೆನ್ರಿ  ಡಿಪಾವ್ಲಾ, ಗುಲಾಬ್ ಸಂಪಾದಕ್ ಫಾವುಸ್ತೋ ಡಿಕೊಸ್ತಾ, ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಮುಂಬಯಿ ಹಾಚೊ  ಉಪಾಧ್ಯಕ್ಷ್ ಡಾ| ಸಿ.ಎನ್ ಶೆಣೈ ಆನಿ ಸಾಮಾಜಿಕ್ ಕಾರ್ಯಕರ್ತ್ ಮರ್ಲಿನ್ ಡೆಸಾ, ಮೀರಾರೋಡ್ ಹಾಂಕಾಂ ಮಾನ್ ಕೆಲೊ.

ಸಾಹಿತಿ ಶೀಲಾ ಕೊಳಂಬ್ಕಾರ್ ಹಿಚ್ಯಾ ಅಧ್ಯಕ್ಷ್‌ಪಣಾರ್ ಚಲ್‌ಲ್ಲ್ಯಾ ಪಯ್ಲ್ಯಾ ಗೋಷ್ಟಿಂತ್ ಡೊ ಎಡ್ವರ್ಡ್ ನಜ್ರೆತ್ ಹಾಚ್ಯಾ ಅನುಪಸ್ಥಿತೆಂತ್ ತಾಚೊ ಮಟ್ವ್ಯಾ ಕಾಣಿಯೆ ವಿಶ್ಯಾಂತ್ಲೊ ಪ್ರಬಂಧ್ ಅಕಾಡೆಮಿ ಸಾಂದೊ ಲುಲ್ಲುಸ್ ಕುಟಿನ್ಹಾನ್ ಸಾದರ್ ಕೆಲೊ ತರ್, ಸಿಜ್ಯೆಸ್ ತಾಕೊಡೆನ್ ಹಾಸ್ಯ್ ಬರ್‍ಪಾಂವಿಶಿಂ ಮಾಹೆತ್ ದಿಲಿ. ದುಸ್ರ್ಯಾ ಗೋಷ್ಟಿಚೆಂ ಸುಂಕಾಣ್ ನಾಟಕಿಸ್ತ್ ಫ್ರಾನ್ಸಿಸ್ ಒಲಿವೆರಾನ್ ಘೆತ್‌ಲ್ಲೆಂ. ಲೊರೆನ್ಸ್ ಡಿಸೊಜಾ ಕಮಾನಿನ್ ನಾಟಕಾವಿಶಿಂ ಆನಿ ಆನ್ಸಿ ಪಾಲಡ್ಕಾನ್ ಕವಿತೆಂವಿಶಿಂ ಮಾಹೆತ್ ದಿಲಿ. ನೆರಿ ನಜ್ರೆತ್ ಹಾಚ್ಯಾ ಅಧ್ಯಕ್ಷ್‌ಪಣಾರ್ ಚಲ್‌ಲ್ಲ್ಯಾ ಕವಿಗೋಷ್ಟಿಂತ್ ವಸುಂಧ ಪ್ರಭು, ವಲ್ಲಿ ಕ್ವಾಡ್ರಸ್ ಅಜೆಕಾರ್, ಫಿಲಿಪ್  ಡಿಸೊಜಾ, ಹೆಲೆನ್ ಗುಡಿನೊ, ವಿ. ಡಿಸಿಲ್ವಾ ಕಾಂಜೂರ್‌ಮಾರ್ಗ್, ಸಿಜ್ಯೆಸ್ ತಾಕೊಡೆ, ಐರಿನ್ ರೊಡ್ರಿಗಸ್ ಆನಿ ಪ್ರಸನ್ನ ನಿಡ್ಡೋಡಿನ್ ವಾಂಟೊ ಘೆತ್ಲೊ. 

ಸಾಂಸ್ಕೃತಿಕ್ ಕಾರ್ಯಾಂತ್ ಎಸ್ತೆರ್ ನೊರೊನ್ಹಾ, ಆಂಟನಿ ತಾವ್ರೊ, ರೊಯ್ಸಿ ಸಿಕ್ವೇರಾ, ಜೆರಿ ಬೊಂದೆಲ್, ರಾಯನ್ ಡಿಸೊಜಾ ಹಾಣಿಂ ಪದಾಂ ಗಾಯ್ಲಿಂ.  ಬಿಂದಾಸ್ ಪೆರ್ನಾಲ್ ಪಂಗ್ಡಾಚ್ಯಾ ಆಲ್ವಿನ್ ದಾಂತಿ, ಮೆಲ್ವಿನ್ ಕ್ಯಾಸ್ತೆಲಿನೊ, ಲೀಸಾ ಆನಿ ಸತೀಶಾನ್ ಹಾಸ್ಕುಳೆ ಸಾದರ್ ಕೆಲೆ ತರ್, ಅದ್ವಿತೀಯ ನಾಚ್ ಪಂಗ್ಡಾನ್ ನಾಚ್ ಸಾದರ್ ಕೆಲೆ.

ಸಂಪ್ಣೆ ಕಾರ್ಯಾಕ್ ಮಾನಾಚೊ ಸಯ್ರೊ ಜಾವ್ನ್ ಫಾ. ಪ್ರಾಂಕ್ಲಿನ್ ಹಾಜರ್ ಆಸ್‌ಲ್ಲೊ. ಅಕಾಡೆಮಿ ರಿಜಿಸ್ಟ್ರಾರ್ ಡಾ| ಬಿ.ದೇವದಾಸ ಪೈ ಹಾಣೆಂ ವಂದಿಲೆಂ. ಅಕಾಡೆಮಿ ಖಾತಿರ್, ಸಗ್ಳೆಂ ಕಾರ್ಯೆಂ ಅಪುರ್ಬಾಯೆನ್, ಸಾಲ್‌ಭರ್ ಲೊಕಾಸಮೊರ್ ಸಾದರ್ ಜಾಂವ್ಕ್ ವಾಂವ್ಟ್ ಕಾಡ್‌ಲ್ಲ್ಯಾ ಕವಿ ಆನ್ಸಿ ಪಾಲಡ್ಕಾಕ್ ಅಕಾಡೆಮಿ ಅಧ್ಯಕ್ಷಾನ್ ಯಾದಿಸ್ತಿಕಾ ದೀವ್ನ್ ಮಾನ್ ಕೆಲೊ.

ಕು. ಡೆಲನಿ ರೊಡ್ರಿಗಸ್ ಆನಿ ಕು. ಡೆಲಿಶಾ ರೊಡ್ರಿಗಸಾನ್ ಮಾಗ್ಣ್ಯಾ ನಾಚ್ ಸಾದರ್ ಕೆಲೊ. ವಿತೊರಿ ಕಾರ್ಕಳ್, ಲೊರೆನ್ಸ್ ಡಿಸೊಜಾ, ಸ್ಟೇನಿ ಸೆರಾವೊ, ಕೇರನ್ ವಾಸ್ ಆನಿ ಜೆರಿ ಡಿಸೊಜಾನ್ ಕಾರ್ಯೆಂ ಚಲಯ್ಲೆಂ.


 ಮುಂಬಯಿ: ಕೊಂಕಣಿ ಭಾಷಿಗರಲ್ಲಿ ಉಮೇದು ಭರಿಸಿದ ಕೊಂಕಣಿ ಸಾಹಿತ್ಯ ಸಂಜೆ

``ತವರೂರ ಬಹುತೇಕ ಮಾತೃಭಾಷೆಗಳು ಉಳಿಯಲು ಮುಂಬಯಿಗರ ಪಾತ್ರ ಅನನ್ಯ. ನಿಮ್ಮಂತವರ ಭಾಷಾಭಿಮಾನಿಗಳ ಸುಗಂಧ ಪರಿಮಳದಿಂದ ಭಾಷೆ ಉಳಿದಿದೆ. ಮಾತೃಭಾಷೆ ಬೆಳೆದಾಗ ಬದುಕು ಬೆಳಗುತ್ತದೆ. ಕೊಂಕಣಿ ಎಂದರೆ ಒಂದು ಸಮುದಾಯವಲ್ಲ. ಕೊಂಕಣಿಯು 41 ಸಮುದಾಯಗಳ ಮಾತೃಭಾಷೆ ಆಗಿ ಬಹು ಸಮುದಾಯದ ಭಾಷೆ ಆಗಿದೆ. ಇದು ಭೌಗೋಳಿಕ ಭಾಷೆಯೂ ಹೌದು. ಆದುದರಿಂದ ಭಾಷೆ ಬೆಳವಣಿಗೆಗೆ  ಪಂಗಡಗಳು ಅಡ್ಡಿಯಾಗಬಾರದು. ಭಾರತವು ಬಹು ಭಾಷೆಗಳಿಂದ ಬಲಿಷ್ಠಗೊಂಡು ಜಗತ್ತಿಗೆ ಯಜಮಾನನಾಗಿದೆ. ಪ್ರಾದೇಶಿಕ, ವ್ಯವಹಾರಿಕ ಭಾಷೆಕ್ಕಿಂತ ಮಾತೃಭಾಷೆ ಮಿಗಿಲಾದದ್ದು ಆದುದರಿಂದ ಕೊಂಕಣಿಗರು ಮಾತೃಭಾಷೆಯಲ್ಲಿ ಆತ್ಮೀಯತೆ ಮೈಗೂಡಿಸಿ ತಮ್ಮ ಅಸ್ಮಿತೆಯನ್ನು ಜಗತ್ತಿಗೆ ತೋರ್ಪಡಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೋ ಕರೆಯಿತ್ತರು.

 

 

 

 

 

 

 

 


ಹೊರರಾಜ್ಯ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಮಾರ್ಚ್ 06 ರಂದು  ಶುಕ್ರವಾರ ಸಂಜೆ ಮುಂಬಯಿಯ ಬೊರಿವಲಿ ಪಶ್ಚಿಮದ ಐ.ಸಿ ಕಾಲೋನಿ ಸನಿಹದ ಸೈಂಟ್ ಫ್ರಾನ್ಸಿಸ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ರೀಸರ್ಚ್ ಸಂಸ್ಥೆಯ ಸಭಾಗೃಹದಲ್ಲಿ ಕರ್ನಾಟಕ ಸರ್ಕಾರದ ಕೊಂಕಣಿ ಸಾಹಿತ್ಯ ಅಕಾಡೆಮಿ ಸಂಸ್ಥೆಯು ಆನ್ಸಿ ಪಾಲಡ್ಕಾ ಮುಂಬಯಿ ಅವರ ಸಾರಥ್ಯದಲ್ಲಿ ಆಯೋಜಿಸಿದ್ದ `ಕೊಂಕಣಿ ಸಾಹಿತ್ಯ ಸಂಜೆ' ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕ್ಯಾಸ್ತೆಲಿನೋ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಲ್ಡೇಲ್ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲೂ .ಡಿ ಸೋಜಾ ಹಾಗೂ ಗೌರವ ಅತಿಥಿಗಳಾಗಿ ಜಿಎಸ್‌ಬಿ ಸಭಾ ದಹಿಸರ್ ಇದರ ಸಾರಸ್ವತ ಕಲ್ಚರಲ್ ಮತ್ತು ರಿಕ್ರಿಯೇಷನ್ ಸೆಂಟರ್ ಸಹ ಸಂಚಾಲಕಿ ಸುಗುಣ ಕೆ.ಕಾಮತ್, ಫುಡಾರ್ ಪ್ರತಿಷ್ಠಾನದ ಅಧ್ಯಕ್ಷ ಜೋನ್ ಡಿ'ಸಿಲ್ವಾ, ನಾಟಕಕಾರ ಫ್ರ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಮತ್ತು ಅಕಾಡೆಮಿ ರಿಜಿಸ್ಟ್ರಾರ್ ಡಾ| ಬಿ.ದೇವದಾಸ ಪೈ ಉಪಸ್ಥಿತರಿದ್ದರು.

ಇಷ್ಟೊಂದು ಬಹು ಸಂಖ್ಯೆಯಲ್ಲಿ ಭಾಗವಹಿಸುವಿಕೆ ಕೊಂಕಣಿ ಮಾತೃಭಾಷೆಯ ಉನ್ನತಿಯನ್ನು ಸಾರುತ್ತಿದೆ. ಸಮಾಜದ ಜೀವಂತಿಕೆಗೆ ಭಾಷೆಯೇ ತಾಯಿಬೇರುವಾಗಿದೆ. ಭಾಷೆ ಬೆಳೆದಾಗ ಸಂಬಂಧಗಳು ಬೆಸೆದು ಸಮಾಜ ಬಾಳುತ್ತದೆ. ಇದು ಕರ್ನಾಟಕ ಮಹಾರಾಷ್ಟ್ರದಲ್ಲಿ ಕೊಂಕಣಿಗರ ಮಿಲನವಾಗಿರುವುದು ಅಭಿನಂದನೀಯ ಎಂದು ಆಲ್ಬರ್ಟ್  ಡಿ'ಸೋಜಾ ಅಭಿಪ್ರಾಯ ಪಟ್ಟರು. 

 

 

 

 

 

 

 

 


ಜೋನ್ ಡಿ'ಸಿಲ್ವಾ ಮಾತನಾಡಿ ಮುಂಬಯಿಯಲ್ಲಿನ ಹಿರಿಯ ಸಂಸ್ಥೆ ಕೊಂಕಣ್ ಭಾಷಾ ಮಂಡಳ್ ಮಹಾರಾಷ್ಟ್ರ ಕೊಂಕಣಿಗರ ಸಕ್ರೀಯತೆ ಇಲ್ಲದೆ ಒಂದೆಡೆ ಉಳಿದಿದೆ. ಇದನ್ನು ಬೆಳೆಸುವಲ್ಲಿ ಕೊಂಕಣಿಗರು ಮುಂದಾಗಬೇಕು. ಅಲ್ಲದೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಘಟಕ ಹುಟ್ಟು ಹಾಕಬೇಕು. ಆ ಮೂಲಕ ಪರಸ್ಪರ ಸಂಬಂಧಗಳಿಂದ ಮುಂಬಯಿಯಲ್ಲೂ ಕೊಂಕಣಿ ಭವನ ರೂಪಿಸುವಂತಾಗಬೇಕು ಎಂದರು.

ಇದೊಂದು ಅರ್ಥಗರ್ಭಿತ ಕಾರ್ಯಕ್ರಮ. ಮರಾಠಿ-ಕೊಂಕಣಿಯ ಸಮ್ಮೀಲನ ಒಂದೆಡೆಯಾದರೆ ಜಿಎಸ್‌ಬಿ-ಕ್ರೈಸ್ತರ ವಿಲನವೂ ಹೌದು. ಭಾಷಾಭಿಮಾನದಿಂದ ಏಕತೆ ಮೆರೆದ ಕಾರ್ಯಕ್ರಮ. ಜನ್ಮಭೂಮಿ ಕಲಾಮಯವಾಗಲು ಮಾತೃಭಾಷಾ ಪಾತ್ರವೇ ಪ್ರಧಾನ. ಪೂರ್ವಜರು ರೂಪಿಸಿದ ಮಾತೃಭಾಷೆ ಮುನ್ನಡೆಸುವ ಋಣ ನಮಗಿದೆ ಇದನ್ನು ನಾವು ಮೌಕಿಕ ಮತ್ತು ಲಿಖಿತವಾಗಿ ಬೆಳೆಸಿ ಮಾತೃ ಭಾಷಾ ಅಂತರಂಗ ಶುದ್ಧಿಕರಿಸೋಣ ಎಂದು ಸುಗುಣ  ಕಾಮತ್ ನುಡಿದರು.

ಮಾತೆಯಂತೆ ಭಾಷೆ ಆದುದರಿಂದ ಮಾತೃ ಭಾಷೆ ಬೆಳೆದರೆ ಮಾತೆ ಮೆರೆಯುವಳು ಎಂದು ಫ್ರ್ರಾನ್ಸಿಸ್ ಕಾಸ್ಸಿಯಾ ತಿಳಿಸಿದರು. 

ಆಲ್ಬರ್ಟ್ ಡಿ'ಸೋಜಾ ಅವರು ಅಕಾಡೆಮಿ ಪ್ರಕಾಶಿತ ಡಾ| ವಿನ್ಸೆಂಟ್ ಡಿ'ಮೆಲ್ಲೊ ವಸಾಯಿ ಅವರ `ನೈಸರ್ಗಿಕ್ ಭಲಾಯ್ಕಿ' ಕೃತಿ ಬಿಡುಗಡೆ ಗೊಳಿಸಿದರು. ಹಾಗೂ ಅತಿಥಿವರ್ಯರು ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೆನ್ಸ್ ಕುವೆಲ್ಲೋ, ಕುಟಾಮ್ ಕೊಂಕಣಿ ಸಾಪ್ತಾಹಿಕದ ಸಂಪಾದಕ ಹೆನ್ರಿ ಡಿಪಾವ್ಲಾ, ಗುಲಾಬ್ ಸಂಪಾದಕ ಫಾವುಸ್ತೋ ಡಿಕೊಸ್ತಾ, ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಮುಂಬಯಿ ಸಂಸ್ಥೆಯ ಉಪಾಧ್ಯಕ್ಷ ಡಾ| ಸಿ.ಎನ್ ಶೆಣೈ ಮತ್ತು ಸಾಮಾಜಿಕ ಕಾರ್ಯಕರ್ತೆ ಮರ್ಲಿನ್ ಡೆಸಾ  ಮೀರಾರೋಡ್ ಅವರನ್ನು ಗೌರವಿಸಿ ಅಭಿನಂದಿಸಿದರು.

 

 

 

 

 

 

 

 


ಸಾಹಿತಿ ಶೀಲಾ ಕೊಳಂಬ್ಕಾರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಪ್ರಥಮ ಗೋಷ್ಠಿಯಲ್ಲಿ ಲುಲ್ಲ್ಲುಸ್ ಕುಟಿನ್ಹಾ ಬೆಂಗಳೂರು ಅವರು `ಕಿರುಕತೆ'ಗಳ ಬಗ್ಗೆ ಹಾಗೂ ಹೆಸರಾಂತ ಕವಿ ಸಿಜ್ಯೆಸ್ ತಾಕೋಡೆ ಅವರು `ಹಾಸ್ಯ ಲೇಖನ'ಗಳ ಕುರಿತು ಮಾಹಿತಿಯನ್ನಿತ್ತರು. ಫ್ರಾನ್ಸಿಸ್ ಒಲಿವೆರಾ ಅವರ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ದ್ವಿತೀಯ ಗೋಷ್ಠಿಯಲ್ಲಿ ಲಾರೆನ್ಸ್ ಡಿಸೊಜಾ ಕಮಾನಿ ಅವರು `ನಾಟಕ'ಗಳ ಬಗ್ಗೆ ಹಾಗೂ ಆನ್ಸಿ ಪಾಲಡ್ಕಾ `ಕವಿತೆ'ಗಳ ಬಗ್ಗೆ ಮಾಹಿತಿಯನ್ನಿತ್ತರು.  ಬಳಿಕ ಯುವಕವಿ  ನೆರಿ ನಜರೆತ್ ಅಧ್ಯಕ್ಷತೆಯಲ್ಲಿ ನಡೆಸಲಾದ ಕವಿಗೋಷ್ಠಿಯಲ್ಲಿ ವಸುಂಧ ಪ್ರಭು, ವಲ್ಲಿ ಕ್ವಾಡ್ರಸ್ ಅಜೆಕಾರ್, ಫಿಲಿಪ್  ಡಿ'ಸೋಜಾ, ಹೆಲೆನ್ ಗುಡಿನೋ, ವಿ.ಡಿಸಿಲ್ವಾ ಕಾಂಜೂರ್‌ಮಾರ್ಗ್, ಸಿಜ್ಯೆಸ್ ತಾಕೊಡೆ, ಐರಿನ್ ರೋಡ್ರಿಗಸ್ ಮತ್ತು ಪ್ರಸನ್ನ ನಿಡ್ಡೋಡಿ ಪಾಲ್ಗೊಂಡು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು.  

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು| ಎಸ್ತೆರ್ ನೊರೋನ್ಹಾ, ಆಂಟನಿ ತಾವ್ರೋ, ರೊಯ್ಸಿ ಸಿಕ್ವೇರಾ, ಜೆರಿ ಬೊಂದೆಲ್, ರಾಯನ್ ಡಿಸೊಜಾ ಮತ್ತಿತರರು ಸಂಗೀತ ಸಾದರ ಪಡಿಸಿದರು. ಬಿಂದಾಸ್ ಪೆರ್ನಾಲ್ ತಂಡವು ಹಾಸ್ಯ ಕಾರ್ಯಕ್ರಮವನ್ನೂ ಹಾಗೂ  ಮುಂಬಯಿಯ ಅದ್ವಿತೀಯ ನೃತ್ಯ ತಂಡವು ನೃತ್ಯಾವಳಿಗಳನ್ನು ಪ್ರದರ್ಶಿಸಿದರು. 

ಜೆರಿ ಡಿಸೊಜಾ  ಸ್ವಾಗತಿಸಿದರು. ಕು| ಡೆಲನೀ ರೋಡ್ರಿಗಸ್ ಮತ್ತು ಕು| ಡೆಲಿಶಾ ರೋಡ್ರಿಗಸ್ ಪ್ರಾರ್ಥನಾ ನೃತ್ಯಗೈದರು. ವಿನ್ಸೆಂಟ್ ಡಿ'ಮೆಲ್ಲೊ ಕೃತಿ ಪರಿಚಯಿಸಿದರು. ವಲೇರಿಯನ್ ಲೋಬೊ, ಪ್ರಿಯಾ ಎ.ಡಿಸೊಜಾ, ಲಿನೆಟ್ ನೋರೋನ್ಹಾ ಮತ್ತು ರೀಟಾ ಅಲ್ಬುಕರ್ಕ್ ಸನ್ಮಾನಿತರನ್ನು ಪರಿಚಯಿಸಿದರು. ವಿಕ್ಟರ್ ಮಥಾಯಸ್ (ವಿತೊರಿ ಕಾರ್ಕಳ್), ಸ್ಟೇನಿ ಸೆರಾವೊ, ಕೇರನ್ ವಾಸ್, ಲಾರೆನ್ಸ್ ಡಿಸೋಜಾ ಕಾಸರಗೋಡು ಮತ್ತು ಜೆರಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಡಾ| ಬಿ.ದೇವದಾಸ ಪೈ  ವಂದನಾರ್ಪಣೆಗೈದರು.

 

 

 

 

 

 

 

 

 

(ಚಿತ್ರ   /  ವರದಿ : ರೋನ್ಸ್ ಬಂಟ್ವಾಳ್)

 

 

 

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]