ಆಜ್ ಕರ್ನಾಟಕಾಚೊ ಮುಖೆಲ್  ಮಂತ್ರಿ ಸಿದ್ದರಾಮಯ್ಯಾನ್ ಮಂಡನ್ ಕೆಲ್ಲ್ಯಾ 2015-16 ವ್ಯಾ ಆವ್ದೆಚ್ಯಾ ಬಜೆಟಾಂತ್ ಮಂಗ್ಳುರ್ ವಿಶ್ವ ವಿದ್ಯಾನಿಲಯಾಂತ್ ಕೊಂಕ್ಣಿ ಅಧ್ಯಯನ್ ಪೀಠ ಸುರು ಕರುಂಕ್ ಶಾಶ್ವತ್ ನಿಧಿ ಜಾವ್ನ್ ರು 2 ಕರೊಡ್ ಅನುದಾನ್ ಘೋಷಿತ್ ಕೆಲಾಂ.


ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿನ್ ಪಾಟ್ಲ್ಯಾ ಎಕಾ ವರ್ಸಾ ಥಾವ್ನ್ ಕೊಂಕ್ಣಿ  ಅಧ್ಯಯನ್ ಪೀಠಚೊ ವಾವ್ರ್ ಸುರು ಕೆಲ್ಲೊ.  ಢೆಲ್ಲಿ ವಚುನ್ ಮಾನ್ಶಾ ಸಂಪನ್ಮೂಲ್ ಖಾತ್ಯಾಚೊ ಸಂಪರ್ಕ್ ಯಿ ಕೆಲ್ಲೊ. ಬೆಂಗ್ಳುರ್ ಮುಖೆಲ್ ಮಂತ್ರಿ, ಸಂಸ್ಕೃತಿ ಮಂತ್ರಿ ಆನಿ ಹೆರ್ ಇಲಾಖ್ಯಾಂಚೊ ಸಂಪರ್ಕ್ ಕರ್ನ್ ನಿರಂತರ್ ವಾವ್ರ್ ಕೆಲ್ಲೊ. ಗೆಲೆತ್ಯಾ ಜನೆರ್ 18 ವೆರ್ ಬೆಂಗ್ಳುರ್ ಸಂಸ ಉಗ್ತ್ಯಾ  ಮಂದಿರಾಂತ್ ಚಲುಲ್ಲ್ಯಾ ಅಕಾಡೆಮಿ  ಗೌರವ್ ಪ್ರಶಸ್ತಿ ಕಾರ್ಯಾಂತ್ ಭಾಗ್ ಘೆತ್ ಲ್ಲ್ಯಾ ಮುಖೆಲ್ ಮಂತ್ರಿ ಶ್ರೀ ಸಿದ್ಧರಾಮಯ್ಯಾನ್ ಅಕಾಡೆಮಿ  ಅಧ್ಯಕ್ಷ್ ರೊಯ್ ಕ್ಯಾಸ್ತೆಲಿನೊಚ್ಯಾ ವಿನತೆಕ್ ಪಾಳೊ ದೀವ್ನ್ ಮಂಗ್ಳುರ್ ವಿವಿಂತ್ ಕೊಂಕ್ಣಿ ಪೀಠ ದಿಂವ್ಚೆಂ ಘೋಷಣ್ ಕೆಲ್ಲೆಂ. ಆನಿ ಆಜ್ ಬಜೆಟಿಂತ್ ಅನುದಾನ್ 2 ಕರೊಡ್  ಭಾಸಾವ್ನ್ ಮುಖೆಲ್ ಮಂತ್ರಿನ್ ಕರ್ನಾಟಕಾಂತ್ ಕೊಂಕ್ಣೆಚ್ಯಾ ವಾಡಾವಳಿಕ್ ವ್ಹಡ್ ತೆಂಕೊ ದಿಲಾ.

ಹ್ಯಾ ವಾವ್ರಾಂತ್  ಆಧಾರ್ ದಿಲ್ಲ್ಯಾ ಕನ್ನಡ ಆನಿ ಸಂಸ್ಕೃತಿ ಮಂತ್ರಿ ಉಮಾಶ್ರೀ, ಮಂಗ್ಳುರ್ಚೆ ಶಾಸಕ್ ಜೆ ಆರ್ ಲೋಬೊ ಆನಿ ಐವನ್ ಡಿಸೊಜಾ, ಉದ್ಯಮಿ ಆನಿ ಕೊಂಕ್ಣಿ  ಮುಖೆಲಿ ಡಾ ದಯಾನಂದ ಪೈ ಹಾಂಚೊ ಅಕಾಡೆಮಿ ಅಧ್ಯಕ್ಷ್ ರೊಯ್ ಕ್ಯಾಸ್ತೆಲಿನೊನ್ ಆಬಾರ್ ಮಾಂದ್ಲಾ.

ವಿವಿ ಹಂತಾರ್ ಕೊಂಕ್ಣಿ ಪೀಠ ಸ್ಥಾಪನ್  ಜಾಲ್ಲ್ಯಾನ್ ಕೊಂಕ್ಣೆಚೆಂ ಉಂಚ್ಲೆಂ ಅಧ್ಯಯನ್, ಸಂಸೊಧ್, ಲೋಕ್‌ವೇದ್ ಅಧ್ಯಯನ್ ಆನಿ ದಾಖಲೀಕರಣ್, ಉಂಚ್ಲೆಂ ಶಿಕಪ್, ಪ್ರಬಂಧ್ ಮಂಡನ್, ಸಾಹಿತಿಕ್ ಕಾರ್ಯಾಗಾರಾಂ, ಡಾಕ್ಟರಲ್, ಪೋಸ್ಟ್ ಡಾಕ್ಟರಲ್ ಆನಿ ಫೆಲೋಶಿಪ್ ಕಾರ್ಯಿಂ, ಕೊಂಕ್ಣೆಂತ್ ಆನ್‌ಲೈನ್ ಪದ್ವಿ ಶಿಕಪ್ ಆನಿ ಕರೆಸ್ಪಾಂಡೆಂಟ್ ಶಿಕಪ್ ಸುರು ಜಾತಲೆಂ. ಕೆ.ಜಿ. ಥಾವ್ನ್ ಪಿ.ಜಿ. ಪರ್ಯಾಂತ್ ಸರ್ವ್ ಹಂತಾಂಚೆಂ ಕೊಂಕ್ಣಿ ಶಿಕಪ್ ವ್ಯವಸ್ಥಿತ್ ರಿತಿನ್ ಮಾಂಡುನ್ ಹಾಡ್ನ್, ಶಿಕ್ಪಾ ಸಂಬಂಧಿತ್ ಗರ್ಜೆಚಿ ಸರ್ವ್ ಸಾಹೆತ್ ಆನಿ ಮಾಹೆತ್ ತಯಾರ್ ಕರ್ಯೆತಾ. 

 

 

 

 

 

 

 

 


ಕೊಂಕಣಿ ಪೀಠಕ್ಕೆ 2 ಕೋಟಿ ಅನುದಾನ ಘೋಷಣೆ

ಕರ್ನಾಟಕದ 2015-16 ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಇವರು ಕನ್ನಡದ ಸೋದರ ಭಾಷೆ ಕೊಂಕಣಿಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ನೆರವು ನೀಡಲು ಶಾಶ್ವತ ನಿಧಿಯಾಗಿ ಕೊಂಕಣಿ ಅಧ್ಯಯನ ಪೀಠ ಸ್ಥಾಪಿಸಲು 2 ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದ್ದಾರೆ.
  
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪಿಸಲು ಕಳೆದ ಒಂದು ವರ್ಷದಿಂದ ಸತತವಾಗಿ ಪ್ರಯತ್ನಿಸಿದೆ. 2  ಕೋಟಿ ರೂಪಾಯಿ ಘೋಷಿಸಿದ ಮುಖ್ಯಮಂತ್ರಿಗಳನ್ನು ಹಾಗೂ ಸಹಕರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಮಂಗಳೂರು ದಕ್ಷಿಣ ಶಾಸಕರಾದ ಜೆ.ಆರ್. ಲೋಬೊ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೊಜಾ, ಕೊಂಕಣಿ ಮುಖಂಡ ಡಾ ದಯಾನಂದ ಪೈ ಅವರನ್ನು ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಅಭಿನಂದಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಅಧ್ಯಯನ ಪೀಠದ ಆರಂಭದಿಂದ
 
ಕರ್ನಾಟಕದಲ್ಲಿ ಕೊಂಕಣಿಯು ಅಲ್ಪಸಂಖ್ಯಾತ ಭಾಷೆಯಾಗಿದ್ದು, ಈ ಭಾಷೆಯ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗ್ಗೆ ನಿರಂತರ ಸಂಶೋಧನೆ ಮತ್ತು ಅಧ್ಯಯನದ ಅಗತ್ಯವಿದೆ. ಕೊಂಕಣಿಯಲ್ಲಿ ಕೃತಿಗಳು, ಕೃತಿಕಾರರ ಬಗ್ಗೆ ಮಹತ್ವದ ಯಾವುದೇ ಸಂಶೋಧನೆಗಳು ನಡೆದಿಲ್ಲ. ಅದೇ ರೀತಿ ಕೊಂಕಣಿ ಜನಪರಂಪರೆ, ಮೌಖಿಕ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಾದ ಗಮನಾರ್ಹ ಸಂಶೋಧನೆಗಳು ಮತ್ತು ಅಧ್ಯಯನಗಳು ನಡೆಯಬೇಕಾಗಿವೆ.

ಸಾಕ್ಷರರಲ್ಲದವರೂ ಕೂಡ ಕನಿಷ್ಟ ಮೂರು ಭಾಷೆಗಳಲ್ಲಿ ಸರಾಗವಾಗಿ ಮಾತನಾಡುವ ಜಗತ್ತಿನ ಒಂದು ವಿಶೇಷ ಊರು ಮಂಗಳೂರು. ಸಾಕ್ಷರರು ಇನ್ನೂ ಹೆಚ್ಚು ಅಂದರೆ ಐದರಿಂದ ಏಳು ಭಾಷೆಗಳನ್ನು ದೈನಂದಿನ ವ್ಯವಹಾರ, ಸನ್ನಿವೇಶಗಳಲ್ಲಿ ಬಳಸಬಲ್ಲರು. ಅಲ್ಪಸಂಖ್ಯಾತ ಭಾಷೆಯಾದ ಕೊಂಕಣಿಯು ಸುಮಾರು 41 ಭಾಷಾ ಸಮುದಾಯಗಳಿಗೆ ಮಾತೃಭಾಷೆಯಾಗಿದ್ದು, ಕರ್ನಾಟಕದ ಕರಾವಳಿಯಲ್ಲಿ ಹೆಚ್ಚು ಜನಪ್ರಸ್ತುತಿ ಹೊಂದಿರುವ ಹಿನ್ನೆಲೆಯಲ್ಲಿ ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಧ್ಯಯನಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಅಧ್ಯಯನ ಪೀಠವೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅಕಾಡೆಮಿಯು ಕೆಲಸ ಆರಂಭಿಸಿತು. ಕೊಂಕಣಿ ಪೀಠ ಆರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರೂಪಾಯಿ 2 ಕೋಟಿಗಳನ್ನು ಠೇವಣಿಯಾಗಿ ಇರಿಸಬೇಕಾದುದರಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಇದರ ಅಗತ್ಯತೆಯನ್ನು ಮನಗಂಡ ಮುಖ್ಯಮಂತ್ರಿಗಳು ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಂಕಣಿ ಅಧ್ಯಯನ ಪೀಠ ನೀಡುವ ಭರವಸೆ ನೀಡಿದ್ದಾರೆ.

ಕೊಂಕಣಿ ಅಧ್ಯಯನ ಪೀಠದ ಧ್ಯೇಯೋದ್ದೇಶಗಳು
೧.    ಕೊಂಕಣಿ ಭಾಷೆಯ ಚರಿತ್ರೆ ಮತ್ತು ಬೆಳವಣಿಗೆ ಹಾಗೂ ಕೊಂಕಣಿ ಭಾಷಾ ವಿಜ್ಞಾನದ ವಿವಿಧ ವಿಚಾರಗಳ ಬಗ್ಗೆ ಅಧ್ಯಯನ ಹಾಗೂ ಸಂಶೋಧನಾ ಕಾರ್ಯ ಕೈಗೊಳ್ಳುವುದು.
೨.     ಕೊಂಕಣಿ ಜನರ ಜನಪದ, ಕಲಾಪ್ರಕಾರಗಳು, ಸಾಹಿತ್ಯ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ವಿಶ್ಲೇಷಿಸಿ ಅಧ್ಯಯನ ಹಾಗೂ ದಾಖಲೀಕರಣಗೊಳಿಸುವುದು.
೩.     ಕೊಂಕಣಿ ಸಾಹಿತಿಗಳು, ಕವಿಗಳು, ಬರಹಗಾರರು, ಪತ್ರಿಕೋದ್ಯಮಿಗಳು ಇತ್ಯಾದಿ ಇವರುಗಳಿಗಾಗಿ ಪ್ರಾಂತೀಯ / ರಾಷ್ಟ್ರೀಯ / ಅಂತರಾಷ್ಟ್ರೀಯ ಮಟ್ಟದ ಕಮ್ಮಟಗಳು, ಕಾರ್ಯಾಗಾರಗಳು, ಸಮಾವೇಶಗಳನ್ನು ಸಂಘಟಿಸುವುದು.
೪.     ವಿದ್ಯಾರ್ಥಿಗಳು ಸಹಿತ ಯುವಜನರಲ್ಲಿ ಕೊಂಕಣಿ ಮಾತೃಭಾಷೆಯನ್ನು ಸಂರಕ್ಷಿಸಿ ಬೆಳೆಸುವ ಅಗತ್ಯದ ಬಗ್ಗೆ ಅರಿವನ್ನು ಪಸರಿಸಿ ಸುದೃಢಗೊಳಿಸುವುದು.
೫.     ನರ್ಸರಿಯಿಂದ ಸ್ನಾತ್ತಕೋತ್ತರ ಮಟ್ಟದವರೆಗೆ ನಡುವಿನ ಎಲ್ಲಾ ಹಂತದ ಔಪಚಾರಿಕ ಶಿಕ್ಷಣದಲ್ಲಿ ವ್ಯವಸ್ಥಿತ ಕೊಂಕಣಿ ಬೋಧನೆಗೆ ಅಗತ್ಯ ಬೀಳುವ ಎಲ್ಲಾ ಭೋದನೆ, ಕಲಿಕೆ ಹಾಗೂ ತರಭೇತಿ ಸಾಮಾಗ್ರಿಗಳನ್ನು ಅಭಿವೃದ್ಧಿಪಡಿಸುವುದು.
೬.    ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಡಾಕ್ಟರಲ್, ಪೋಸ್ಟ್ ಡಾಕ್ಡರಲ್ ಹಾಗೂ ಫೆಲೋಶಿಪ್ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೊಂಕಣಿ ಭಾಷಾಧ್ಯಯನದ ಮಹಾ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದು.
೭.     ಕೊಂಕಣಿ ಭಾಷೆಯಲ್ಲಿ ಆನ್‌ಲೈನ್ ಪದವಿಗಳೂ ಸೇರಿ ಕರೆಸ್ಪಾಂಡೆನ್ಸ್, ದೂರಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಪ್ರೇರೇಪಿಸುವುದು.
೮.    ಸರಕಾರಿ ಏಜೆನ್ಸಿಗಳು, ವಿಶ್ವವಿದ್ಯಾನಿಲಯಗಳು, ಪ್ರಸಿದ್ಧ ಸ್ವಾಯುತ್ತ ಸಂಸ್ಥೆಗಳ ಸಹಯೋಗದೊಂದಿಗೆ ಪರಸ್ಪರ ಒಪ್ಪಂದ ವ್ಯವಸ್ಥೆಯೊಂದಿಗೆ ಒoU ಅಂತರ್‌ಶಾಸ್ತ್ರೀಯ , ಬಹುಭಾಷೀಯ  ವಿಧದ ಅಧ್ಯಯನಗಳನ್ನು ಪೋಷಿಸುವುದು.
೯.     ಕೊಂಕಣಿ ಭಾಷೆ, ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ಇತರ ಯಾವುದೇ ಸೂಕ್ತ ಧ್ಯೇಯೋದ್ದೇಶಗಳನ್ನು ಸಾಧಿಸಲು ಸಹಕಾರಿಯಾಗುವ ಯಾವತ್ತೂ ಚಟುವಟಿಕೆಗಳನ್ನು ಕೈಗೊಳ್ಳುವುದು.

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]