Print

ಆಮಿ ಕೊಂಕ್ಣಿ ಉಲೊಂವ್ಕ್ ಲಜೆನಾಯೆ. ಆಮ್ಚಿ ಭಾಸ್ ಉರೊಂವ್ಕ್ ವಾವ್ರಿಜೆ. ಪೊರ್ವಾಂ ಚಲ್ಚ್ಯಾ ಸೆನ್ಸಸಾಂತ್ ಭಾಶೆಚಿ ಗಜಾಲ್ ಯೆತಾನಾ ಕೊಂಕ್ಣಿಚ್ ಉಲ್ಲೇಖ್ ಕರುಂಕ್ ಮಂಗ್ಳುರ್ಚಿ ಮೇಯರ್ ಶ್ರೀಮತಿ ಜೆಸಿಂತಾ ಆಲ್ಫ್ರೆಡ್ ಹಿಣೆ ಉಲೊ ದಿಲೊ. ತಿ 07-04-2015 ವೆರ್ ಮಂಗ್ಳುರ್ ಸಿಒಡಿಪಿ ಸಭಾಸಾಲಾಂತ್ ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿ ಥಾವ್ನ್ ಜಾಲ್ಲ್ಯಾ ಕೊಂಕ್ಣಿ ಶಿಕೊವ್ಪ್ಯಾಂಚ್ಯಾ ವಾರ್ಷಿಕ್ ಕಾರ್ಯಾಗಾರಾಂತ್ ಮುಖೆಲ್ ಸಯ್ರಿ ಜಾವ್ನ್ ಹಾಜರ್ ಆಸುನ್ ಆಪ್ಲೊ ಸಂದೇಶ್ ದಿತಾನಾ ಮ್ಹಣಾಲಿ. ಹ್ಯಾ ವೆಳಾರ್ ಸರ್ವ್ ಶಿಕೊವ್ಪ್ಯಾಂ ತರ್ಪೆನ್ ಅಕಾಡೆಮಿ ಥಾವ್ನ್ ಮೇಯರಾಕ್ ಸನ್ಮಾನ್ ಕೆಲೊ.

 

 

 

 

 

ಹ್ಯಾ ಕಾರ್ಯಾಂತ್ ಮಾಂಡ್ ಸೊಭಾಣ್ ಪ್ರಾಯೋಜಿತ್ `ದೆ. ಜೆಸ್ಸಿ ಕ್ಯಾಸ್ತೆಲಿನೊ ಸ್ಮಾರಕ್ ಶ್ರೇಶ್ಟ್ ಕೊಂಕ್ಣಿ ಶಿಕೊವ್ಪಿ ಪುರಸ್ಕಾರ್ ಉದ್ಯಾವರ್ಚ್ಯಾ ಸೈಂಟ್ ಫ್ರಾನ್ಸಿಸ್ ಕ್ಷೇವಿಯರ್ ಹೈಸ್ಕೂಲಾಚಿ ಶಿಕೊವ್ಪಿ ಶ್ರೀಮತಿ ತೆರೆಜಾ ಜೊಯ್ಸ್ ಪುರ್ಟಾಡೊ ಹಿಕಾ ಫಾವೊ ಜಾಲೊ. ತಿಕಾ ಫುಲಾಂ ಯಾದಿಸ್ತಿಕಾ ಆನಿ ರು. ೫೦೦೦/- ನಗ್ದೆನ್ ದೀವ್ನ್ ಮೇಯರಾನ್ ಮಾನ್ ಪಾಟಯ್ಲೊ. ಮಾಂಡ್ ಸೊಭಾಣ್ ಸಂಘಟಕ್ ಸ್ಟ್ಯಾನಿ ಆಲ್ವಾರಿಸ್ ಹಾಣೆ ವಿಂಚವ್ಣೆಚಿ ಪ್ರಕ್ರಿಯಾ ವಿವರಿಲಿ.

ತಶೆಂಚ್ ಅಕಾಡೆಮಿಚೆಂ ಹ್ಯಾ ಆವ್ದೆಚೆಂ 26 ವೆಂ ಪುಸ್ತಕ್ ಜಾವ್ನ್ ಹೆರೊಲ್ಪಿಯುಸ್ ಹಾಣೆ ಲಿಖ್ಲ್ಲೊ `ಕೊಂಕ್ಣಿ ಕ್ರಿಸ್ತಾಂವ್ ಕಾಜಾರಾಂ ಪುಸ್ತಕ್ ಮೇಯರಾನ್ ಲೊಕಾರ್ಪಣ್ ಕೆಲೊ.

ಸ್ವಾಗತ್ ಕರುನ್ ಪ್ರಸ್ತಾವಿಕ್ ಉಲೊವ್ಪ್ ದಿಲ್ಲ್ಯಾ ಅಕಾಡೆಮಿ ಅಧ್ಯಕ್ಷ್ ರೊಯ್ ಕ್ಯಾಸ್ತೆಲಿನೊನ್ ಆಮಿ ಎಕಾ ವರ್ಸಾಂತ್ ಕೊಂಕ್ಣಿ ಶಿಕ್ಪಾಚೊ ಜಾಯ್ತೊ ವಾವ್ರ್ ಕೆಲಾ. ಫುಡ್ಲ್ಯಾ ವರ್ಸಾ ಪಿಯುಸಿಕ್ ಪರ್ವಣ್ಗಿ ಮೆಳ್ತಲಿ. ದೆಕುನ್ ಚಡ್ ಆನಿ ಚಡ್ ಭುರ್ಗ್ಯಾಂನಿ ಹಾಚೊ ಫಾಯ್ದೊ ಜೊಡಿಜೆ ತರ್ ಶಿಕೊವ್ಪ್ಯಾಂನಿ ಕೊಂಕ್ಣಿ ಶಿಕೊಂವ್ಚೆಂ ತಶೆಂಚ್ ಕೊಂಕ್ಣಿ ಶಿಕ್ಪಾ ಥಂಯ್ ಭುರ್ಗ್ಯಾಂಕ್ ಪ್ರೇರಿತ್ ಕರ್ಚೊ ವಾವ್ರ್ ಪ್ರಾಮಾಣಿಕ್ಪಣಿ ಕರಿಜೆ ಮ್ಹಣ್ ಉಲೊ ದಿಲೊ. ತಶೆಂಚ್ ಕೊಂಕ್ಣಿ ಶಿಕೊವ್ಪ್ಯಾಂಖಾತಿರ್  ಸರ್ಕಾರಾಲಾಗಿಂ ಮಾಗ್ಣಿ ಕರ್ತಾನಾ ಧಾವೆಂತ್ ಕೊಂಕ್ಣಿ ಶಿಕ್ಚ್ಯಾ ಭುರ್ಗ್ಯಾಂಚೆಂ ಬಳ್ ಚಡಾಜೆ ಮ್ಹಣ್ ಉಲೊ ದಿಲೊ.

 

 

 

 

 

ವೆದಿ ಕಾರ್ಯಾ ಪಯ್ಲೆಂ `ಮಾಂಯ್ಭಾಸ್ ಶಿಕ್ಚಿ ಗರ್ಜ್ ಮ್ಹಳ್ಳೆವಿಶ್ಯಾಂತ್ ಮಣಿಪಾಲ್ ಟಿ.ಎಮ್.ಎ. ಪೈ ಶಿಕ್ಷಕ್-ಶಿಕ್ಷಣ್ ಮಹಾವಿದ್ಯಾಲಯ್ ಹಾಚೊ ಪ್ರಾಂಶುಪಾಲ್ ಪ್ರೊ. ಮಹಾಬಲೇಶ್ವರ್ ರಾವ್ ಹಾಣೆ ಉಪನ್ಯಾಸ್ ದಿಲೊ. ರೊನಿ ಕ್ರಾಸ್ತಾನ್ ಕೊಂಕ್ಣಿ ಕ್ವಿಜ್ ಚಲೊವ್ನ್ ವೆಲೆಂ. ಫುಡ್ಲ್ಯಾ ವರ್ಸಾಚಿ ಶಿಕ್ಪಾ ತಯಾರಿ ರಿಜಿಸ್ಟ್ರಾರ್ ಡೊ. ದೇವದಾಸ್ ಪೈ ಹಾಣೆ ಚಲಯ್ಲಿ.

ಸಕಾಳಿಂಚೆಂ ಕಾರ್ಯೆಂ ಅಕಾಡೆಮಿ ಸಾಂದೊ ಲೊರೆನ್ಸ್ ಡಿಸೊಜಾನ್ ಚಲಯ್ಲೆಂ ತರ್, ವೆದಿ ಕಾರ್ಯೆಂ ಕೊಂಕ್ಣಿ ಪ್ರಚಾರ್ ಸಂಚಾಲನ್ ಅಧ್ಯಕ್ಷ್ ಶೆಲ್ಡನ್ ಕ್ರಾಸ್ತಾನ್ ಚಲಯ್ಲೆಂ. ಕೊಂಕ್ಣಿ ಶಿಕೊವ್ಪಿ ಐವನ್ ಮಸ್ಕರೇನ್ಹಸಾನ್ ಧನ್ಯವಾದ್ ಪಾಟಯ್ಲೆ.

ಆಯ್ಚೆ ಸಕಾಳಿಂಚ್ ದೆವಾಧಿನ್ ಜಾಲ್ಲ್ಯಾ ಕೊಂಕ್ಣಿ ಫುಡಾರಿ ಶ್ರೀ ರಘುನಾಥ್ ಶೇಟ್ ಹಾಕಾ ಹ್ಯಾ ಸಭೆನ್ ಶೃದ್ಧಾಂಜಲಿ ಭೆಟಯ್ಲಿ.

 

 

 

 

 


ಕೊಂಕ್ಣಿ ಶಿಕ್ಷಕರ ವಾರ್ಷಿಕ ಸಮಾವೇಶ

"ನಾವು ಕೊಂಕಣಿಗರು. ನಮ್ಮ ಮಾತೃಭಾಷೆ ಕೊಂಕಣಿಯನ್ನು ಮಾತನಾಡಲು, ಬರೆಯಲು ಹಿಂಜರಿಯಬಾರದು. ಜಾತಿ ಗಣತಿಯಲ್ಲಿ ಭಾಷೆಯ ಬಗ್ಗೆ ಕೊಂಕಣಿಯನ್ನೇ ಉಲ್ಲೇಖಿಸಬೇಕು. ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜೆಸಿಂತ ಆಲ್ಪ್ರೆಡ್ ಹೇಳಿದರು. ಇವರು ನಗರದ ಸಿಒಡಿಪಿ ಸಭಾಂಗಣದಲ್ಲಿ 07-04-2014 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಕೊಂಕಣಿ ಶಿಕ್ಷಕರ ವಾರ್ಷಿಕ ಸಮಾವೇಶದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಈ ಕಾರ್ಯಕ್ರಮದಲ್ಲಿ ಮಾಂಡ್ ಸೊಭಾಣ್ ಪ್ರಾಯೋಜಿತ `ದಿ. ಜೆಸ್ಸಿ ಕ್ಯಾಸ್ತೆಲಿನೊ ಸ್ಮಾರಕ ಶ್ರೇಷ್ಟ ಕೊಂಕಣಿ ಶಿಕ್ಷಕ ಪುರಸ್ಕಾರವನ್ನು ಉದ್ಯಾವರದ  ಸೈಂಟ್ ಫ್ರಾನ್ಸಿಸ್ ಕ್ಷೇವಿಯರ್ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ತೆರೆಜಾ ಜೊಯ್ಸ್ ಪುರ್ಟಾಡೊ ಇವರಿಗೆ ನೀಡಲಾಯಿತು. ಅವರಿಗೆ ಹೂಗುಚ್ಛ, ಸ್ಮರಣಿಕೆ, ಹಾಗೂ ರೂ. ೫೦೦೦/- ನಗದು ನೀಡಿ ಮೇಯರ್ ಅವರು ಗೌರವಿಸಿದರು. ಮಾಂಡ್ ಸೊಭಾಣ್ ಸಂಘಟಕ ಸ್ಟ್ಯಾನಿ ಆಲ್ವಾರಿಸ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು.

ಅಕಾಡೆಮಿಯ ಈ ಅವಧಿಯ 26 ಪ್ರಕಟನೆಯಾದ ಹೆರೊಲ್ಪಿಯುಸ್ ಇವರು ಬರೆದ `ಕೊಂಕ್ಣಿ ಕ್ರಿಸ್ತಾಂವ್ ಕಾಜಾರಾಂ ಪುಸ್ತಕವನ್ನು ಮೇಯರ್ರವರು ಲೊಕಾರ್ಪಣೆಗೈದರು.

ಸ್ವಾಗತಿಸಿ ಪ್ರಸ್ತಾವನೆಗೈದ ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತಲಿನೊರವರು ನಾವು ಕೊಂಕಣಿ ಶಿಕ್ಷಣಕ್ಕಾಗಿ ಬಹಳ ಕೆಲಸ ಮಾಡಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿಗೆ ಅವಕಾಶ ದೊರೆಯುವ ಸಂಭವವಿದೆ. ಆದುದರಿಂದ ಹೆಚ್ಚೆಚ್ಚು ವಿದ್ಯಾರ್ಥಿಗಳು ಕೊಂಕಣಿ ಕಲಿಕೆಯ ಪ್ರಯೋಜನ ಪಡೆಯಬೇಕಾದರೆ ಶಿಕ್ಷಕರು ಕೊಂಕಣಿ ಕಲಿಸುವ ಮತ್ತು ಪ್ರೇರೇಪಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಕರೆ ಕೊಟ್ಟರು. ಅದೇ ರೀತಿ ಕೊಂಕಣಿ ಶಿಕ್ಷಕರಿಗಾಗಿ ಸರಕಾರದೆದುರು ಬೇಡಿಕೆ ಇಡುವಾಗ ಹತ್ತನೇ ತರಗತಿಯಲ್ಲಿ ಕೊಂಕಣಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ `ಮಾತೃಭಾಷೆ ಕಲಿಯುವ ಅಗತ್ಯ ಎಂಬ ವಿಷಯದ ಮೇಲೆ ಮಣಿಪಾಲದ ಟಿ.ಎಮ್.ಎ. ಪೈ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಮಹಾಬಲೇಶ್ವರ್ ರಾವ್ ಇವರು ಉಪನ್ಯಾಸ ನೀಡಿದರು. ರೊನಿ ಕ್ರಾಸ್ತಾ ಕೊಂಕಣಿ ಕ್ವಿಜ್ ನಡೆಸಿದರು. ಮುಂದಿನ ಶೈಕ್ಷಣಿಕ ವರ್ಷದ ತಯಾರಿಯನ್ನು  ರಿಜಿಸ್ಟ್ರಾರ್ ಡಾ. ದೇವದಾಸ್ ಪೈ ನಡೆಸಿ ಕೊಟ್ಟರು.

ಕಾರ್ಯಕ್ರಮವನ್ನು ಅಕಾಡೆಮಿ ಸದಸ್ಯರಾದ ಲೊರೆನ್ಸ್ ಡಿಸೊಜಾ ಮತ್ತು ಕೊಂಕ್ಣಿ ಪ್ರಚಾರ್ ಸಂಚಾಲನದ ಶೆಲ್ಡನ್ ಕ್ರಾಸ್ತಾ ಇವರು ನಿರ್ವಹಿಸಿದರು. ಐವನ್ ಮಸ್ಕರೇನ್ಹಸ್ ಇವರು ಧನ್ಯವಾದಗೈದರು.

ಇಂದು ನಿಧನರಾದ ಕೊಂಕಣಿ ಮುಂದಾಳು ಶ್ರೀ ರಘುನಾಥ್ ಶೇಟ್ ಇವರಿಗೆ ಈ ಸಭೆಯು  ಶೃದ್ಧಾಂಜಲಿ ಅರ್ಪಿಸಿತು.