ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿನ್ ಜಿಲ್ಲಾ ಡಯಟ್ ಸಹಕಾರಾನ್ ಕೊಂಕ್ಣಿ ಶಿಕೊವ್ಪ್ಯಾಂಕ್ 16-07-2015 ವೆರ್ ಡಯಟ್ ಸಾಲಾಂತ್ ಎಕಾ ದಿಸಾಚೆಂ ಕಾರ್ಯಾಗಾರ್ ಮಾಂಡುನ್ ಹಾಡ್ಲ್ಲೆಂ.
ಕಾರ್ಯಾಗಾರ್ ಉಗ್ತಾವ್ನ್ ಉಲಯಿಲ್ಲ್ಯಾ ಡಯಟ್ ಪ್ರಾಂಶುಪಾಲ್ ಸಿಪ್ರಿಯನ್ ಮೊಂತೇರೊನ್ ಕೊಂಕ್ಣಿ ಶಿಕೊಂವ್ಕ್ ಸ್ವಂತ್ ಖುಶೆನ್ ಫುಡೆಂ ಆಯಿಲ್ಲ್ಯಾ ಶಿಕೊವ್ಪ್ಯಾಂಕ್ ಹೆಂ ಕಾರ್ಯಾಗಾರ್ ಆಸಾ ಕೆಲಾಂ. ಕುಶೆಲತಾಯ್ ಜೊಡ್ಲ್ಲೆ ಶಿಕೊವ್ಪಿ ವಿದ್ಯಾರ್ಥಿಂಚಿ ಕುಶಲತಾ ವಾಡೊಂವ್ಕ್ ಸಕ್ತಾತ್. ಗರ್ಜ್ ತರ್ ವಲಯ್ವಾರ್ ತರ್ಬೆತಿ ದೀಂವ್ಕ್ ಡಯಟ್ ಸಾಂಗಾತ್ ದಿತಾ ಮ್ಹಣ್ ಸಾಂಗ್ಲೆಂ.
ಅಧ್ಯಕ್ಷ್ಪಣ್ ಘೆತ್ಲ್ಲೊ ಅಕಾಡೆಮಿ ಅಧ್ಯಕ್ಷ್ ರೊಯ್ ಕ್ಯಾಸ್ತೆಲಿನೊನ್ ಕೊಂಕ್ಣಿ ಶಿಕಪ್ ಬರ್ಯಾನ್ ಫುಡೆಂ ವಚುನ್ ಆಸಾ. ಫುಡ್ಲ್ಯಾ ವರ್ಸಾಂನಿ ಕೊಂಕ್ಣಿ ಅಧ್ಯಯನ್ ಪೀಠಾಚ್ಯಾ ಸಹಕಾರಾನ್ ಕೊಂಕ್ಣೆಂತ್ ಉಂಚ್ಲ್ಯಾ ಶಿಕ್ಪಾಚೆ ಆವ್ಕಾಸ್ ಚಡ್ತಲೆ ದೆಕುನ್ ಚಡ್ ಆನಿ ಚಡ್ ಭುರ್ಗ್ಯಾಂನಿ ಕೊಂಕ್ಣಿ ಶಿಕೊಂಕ್ ಶಿಕೊವ್ಪ್ಯಾಂನಿ ಪ್ರೇರಿತ್ ಕರಿಜೆ ಮ್ಹಣ್ ಉಲೊ ದಿಲೊ.
ಅಕಾಡೆಮಿ ರಿಜಿಸ್ಟ್ರಾರ್ ಡಾ. ಬಿ. ದೇವದಾಸ್ ಪೈನ್ ಯೆವ್ಕಾರ್ ಮಾಗುನ್ ವಿತೊರಿ ಕಾರ್ಕಳಾನ್ ಆಬಾರ್ ಮಾಂದ್ಲೊ. ಎಚ್ ರಾಘವೇಂದ್ರ ರಾವ್ ಹಾಣೆ ಕಾರ್ಯೆಂ ಚಲಯ್ಲೆಂ.
ಉಪ್ರಾಂತ್ ವ್ಯಾಕರಣ ವಿಶ್ಯಾಂತ್ ರಾಕ್ಣೊ ಸಂಪಾದಕ್ ಫಾ. ವಾಲೇರಿಯನ್ ಫೆರ್ನಾಂಡಿಸ್, ಗದ್ಯ್ ಪಾಠಾ ವಿಶ್ಯಾಂತ್ ಪ್ರೇಮ್ಕುಮಾರ್ ಪುತ್ತೂರ್ ಆನಿ ಪದ್ಯ ವಿಶ್ಯಾಂತ್ ಸ್ಮಿತಾ ಶೆಣೈನ್ ಮಾಹೆತ್ ದಿಲಿ.
ಕೊಂಕಣಿ ಶಿಕ್ಷಕರಿಗೆ ಕಾರ್ಯಾಗಾರ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಜಿಲ್ಲಾ ಡಯಟ್ ಸಹಕಾರದಲ್ಲಿ ಕೊಂಕಣಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು 16-07-2015 ರಂದು ನಗರದ ಡಯಟ್ ಸಭಾಂಗಣದಲ್ಲಿ ಆಯೋಜಿಸಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಡಯಟ್ ಪ್ರಾಂಶುಪಾಲ ಸಿಪ್ರಿಯನ್ ಮೊಂತೇರೊ ಕೊಂಕಣಿ ಕಲಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬರುವ ಶಿಕ್ಷಕರಿಗಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕೌಶಲ್ಯವನ್ನು ಪಡೆದ ಶಿಕ್ಷಕರು ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಬಲ್ಲರು. ಅಗತ್ಯ ಬಿದ್ದರೆ ವಲಯವಾರು ತರಬೇತಿಗಳನ್ನು ಆಯೋಜಿಸಲು ಡಯಟ್ ಸಹಕಾರ ನೀಡುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ಕೊಂಕಣಿ ಕಲಿಕೆ ಸುಗಮವಾಗಿ ಮುಂದುವರಿಯುತ್ತಾ ಇದೆ. ಮುಂದಿನ ವರ್ಷಗಳಲ್ಲಿ ಕೊಂಕಣಿ ಅಧ್ಯಯನ ಪೀಠದ ಸಹಕಾರದಿಂದ ಕೊಂಕಣಿಯಲ್ಲಿ ಉನ್ನತ ಶಿಕ್ಷಣದ ಸಾಧ್ಯತೆಗಳು ತೆರೆಯವ ಅವಕಾಶವಿದೆ. ಹೆಚ್ಚೆಚ್ಚು ಮಕ್ಕಳು ಕೊಂಕಣಿ ಕಲಿಯಲು ಶಿಕ್ಷಕರು ಪ್ರೇರೆಪಿಸಬೇಕು ಎಂದು ಹೇಳಿದರು.
ಅಕಾಡೆಮಿ ರಿಜಿಸ್ಟ್ರಾರ್ ಡಾ. ಬಿ. ದೇವದಾಸ್ ಪೈ ಸ್ವಾಗತಿಸಿ, ವಿತೊರಿ ಕಾರ್ಕಳ ವಂದಿಸಿದರು. ಎಚ್ ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ನಂತರ ವ್ಯಾಕರಣದ ಬಗ್ಗೆ ರಾಕ್ಣೊ ಸಂಪಾದಕ್ ಫಾ. ವಾಲೇರಿಯನ್ ಫೆರ್ನಾಂಡಿಸ್, ಗದ್ಯದ ಬಗ್ಗೆ ಪ್ರೇಮ್ಕುಮಾರ್ ಪುತ್ತೂರ್ ಹಾಗೂ ಪದ್ಯದ ಬಗ್ಗೆ ಸ್ಮಿತಾ ಶೆಣೈ ಮಾಹಿತಿ ನೀಡಿದರು.
Comments powered by CComment