Print

 

ಫೊಟೊ : ಸ್ಟ್ಯಾನ್ಲಿ ಬಂಟ್ವಾಳ

ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿನ್ ಕೊಂಕ್ಣಿ ನಾಟಕ್ ಸಭೆಚ್ಯಾ ಸಹಕಾರಾನ್ ಆಗಸ್ಟ್ 30 ವೆರ್ ಮಂಗ್ಳುರ್‍ಚ್ಯಾ ಡೊನ್ ಬೊಸ್ಕೊ ಸಾಲಾಂತ್ ಕೊಂಕ್ಣಿ ಕಲಾಕಾರಾಂಕ್ ಏಕ್ ಮಾಹೆತ್ ಸಭಾ ಆಪಯಿಲ್ಲಿ. ಕೊಂಕ್ಣಿ ನಾಟಕ್ ಸಭೆಚೊ ಅಧ್ಯಕ್ಷ್ ಮಾ. ಪೀಟರ್ ಡಿಸೊಜಾನ್ ದಿವೊ ಪೆಟವ್ನ್ ಕಾರ್ಯೆಂ ಉಗ್ತಾಯ್ಲೆಂ.

 


ಸಭೆಚೆಂ ಅಧ್ಯಕ್ಷ್‌ಪಣ್ ಘೆವ್ನ್ ಪ್ರಸ್ತಾವನ್ ದಿಲ್ಲ್ಯಾ ಅಕಾಡೆಮಿ ಅಧ್ಯಕ್ಷ್ ರೊಯ್ ಕ್ಯಾಸ್ತೆಲಿನೊನ್, ಕೊಂಕಣಿ ಕಲೆಚ್ಯಾ ವಾಡಾವಳಿಕ್ ವಾವುರ್‌ಲ್ಲ್ಯಾ ಕಲಾಕಾರಾಂಚೆಂ ರೂಣ್ ಫಾರಿಕ್ ಕರ್ಚೆಂ ಏಕ್ ಲ್ಹಾನ್ ಪ್ರೇತನ್ ಹೆಂ. ಸರ್ಕಾರಾ ಥಾವ್ನ್ ಸಾಹಿತಿ ಕಲಾಕಾರಾಂಕ್ ಜಾಯ್ತ್ಯೊ ಸವ್ಲತಾಯೊ ಆಸ್ಲ್ಯಾರೀ, ಮಾಹೆತಿಚ್ಯಾ ಉಣೆಪಣಾನ್ ಕೊಂಕ್ಣಿ ಮನಿಸ್ ಹಾಚೊ ಉಪ್ಯೋಗ್ ಜೋಡ್ನ್ ಘೆಂವ್ಕ್ ಫುಡೆಂ ಯೇನಾಂತ್. ದೆಕುನ್ ಕೊಂಕ್ಣಿ ಅಕಾಡೆಮಿನ್ ಮುಖೆಲ್ಪಣ್ ಘೆವ್ನ್, ಕಲಾಕಾರಾಂಚಿ ಮಾಹೆತ್ ಜಮೊವ್ನ್ ಸಂಬಂಧಿತ್ ಇಲಾಖ್ಯಾಕ್ ಪಾವಿತ್ ಕರ್‍ತಲಿ. ಹಿ ಏಕ್ ಸುರ್ವಾತ್ ಮಾತ್ರ್. ಫುಡೆಂ ಸಾಹಿತಿಂಕ್ ತಶೆಂಚ್ ಹೆರ್ ಗಾಂವ್ಚ್ಯಾ ಕಲಾಕಾರಾಂಕ್‌ಯಿ ಮಾಹೆತ್ ಸಭಾ ಜಮಯ್ತೆಲ್ಯಾಂವ್ ಮ್ಹಣ್ ಸಾಂಗ್ಲೆಂ.

ಮ್ಹಾಲ್ಗಡೊ ಕಲಾಕಾರ್ ಟೊನಿ ರುಜಾಯ್ ಹಾಣೆ ಮಾಹೆತ್ ಆಟಾಪ್ಚಿ ಕಡ್ತಿಲ್ ಮೆಕ್ಳಿಕ್ ಕೆಲಿ. ಕುಡ್ಮಿ ಸಮುದಾಯಾಚೊ ಮ್ಹಾಲ್ಗಡೊ ಕಲಾಕಾರ್ ಗೋಪಾಲ್ ಗೌಡಾನ್ ಗುಮಟ್ ವಾಜವ್ನ್ ಪರ್ಗಟ್ಣಿ ಕರ್‍ಚೆ ಮುಕಾಂತ್ರ್, ಕಲಾಕಾರಾಂನಿ ಹ್ಯಾ ಪ್ರಕ್ರಿಯೆಂತ್ ಭಾಗ್ ಘೆಂವ್ಕ್ ಉಲೊ ದಿಲೊ. ವೆದಿರ್ ಸಾರಸ್ವತ ಸಮಾಜಾಚೊ ನಿರಂಜನ್ ರಾವ್, ಕೊಂಕಣಿ ಸಾಂಸ್ಕೃತಿಕ್ ಸಂಘಾಚಿ ಅಧ್ಯಕ್ಷ್ ವಿದ್ಯಾ ಕಾಮತ್, ಆನಿ ಕೊಂಕಣಿ ಭಾಷಾ ಮಂಡಳಾಚಿ ಅಧ್ಯಕ್ಷ್ ಗೀತಾ ಕಿಣಿ ಆಸ್‌ಲ್ಲಿಂ.

ಕೊಂಕಣಿ ಅಕಾಡೆಮಿಚೊ ರಿಜಿಸ್ಟ್ರಾರ್ ಆನಿ ಕನ್ನಡ ಆನಿ ಸಂಸ್ಕೃತಿ ಇಲಾಖೊ ಉಡುಪಿ ಹಾಚೊ ಸಹಾಯಕ್ ನಿರ್ದೇಶಕ್ ಡಾ. ಬಿ. ದೇವದಾಸ ಪೈ ಹಾಣೆ  ಕನ್ನಡ ಆನಿ ಸಂಸ್ಕೃತಿ ಇಲಾಖೊ ತಶೆಂಚ್ ವಿವಿಧ್ ಅಕಾಡೆಮಿ ಥಾವ್ನ್ ಕಲಾಕಾರಾಂಕ್ ಮೆಳ್ಚ್ಯಾ ಸವ್ಲತಾಯೆವಿಶಿಂ ಮಾಹೆತ್ ದಿಲಿ. ಹೆಂ ಕಾಮ್ ಸಲೀಸಾಯೆನ್ ಫುಡೆಂ ವರುಂಕ್ ಅಕಾಡೆಮಿ ಮುಖೆಲ್ಪಣಾರ್ ಏಕ್ ಸಮಿತಿ ರಚ್ಲಿ.

ಸಂಚಾಲಕ ಡೊಲ್ಲಾ ಮಂಗ್ಳುರ್ ಹಾಣೆಂ ಆಬಾರ್ ಮಾಂದುನ್ ರೇಮಂಡ್ ಡಿಕುನ್ಹಾನ್ ಕಾರ್ಯೆಂ ಚಲಯ್ಲೆಂ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 ಕೊಂಕಣಿ ಕಲಾವಿದರಿಗೆ ಮಾಹಿತಿ ಸಭೆ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಂಕಣಿ ನಾಟಕ ಸಭೆಯ ಸಹಕಾರದಲ್ಲಿ ಆಗಸ್ಟ್ 30 ರಂದು ನಗರದ ಡಾನ್‌ಬಾಸ್ಕೊ ಸಭಾಂಗಣದಲ್ಲಿ ಕೊಂಕಣಿ ಕಲಾವಿದರಿಗೆ ಸರಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ಸಭೆ ನಡೆಯಿತು. ಕೊಂಕಣಿ ನಾಟಕ ಸಭೆಯ ಅಧ್ಯಕ್ಷ ವಂ. ಪೀಟರ್ ಡಿಸೋಜ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಕೊಂಕಣಿ ಕಲೆಯ ಬೆಳವಣಿಗೆಗಾಗಿ ದುಡಿದ ಕಲಾವಿದರ ಋಣ ಸಂದಾಯ ಮಾಡುವ ಒಂದು ಸಣ್ಣ ಪ್ರಯತ್ನ ಇದಾಗಿದ್ದು, ಸರಕಾರದಿಂದ  ಸಾಹಿತಿ ಕಲಾವಿದರಿಗೆ ಹಲವಾರು ಉಪಯುಕ್ತ ಯೋಜನೆಗಳಿದ್ದರೂ ಮಾಹಿತಿ ಕೊರತೆಯಿಂದ ಯಾರೂ ಇದರ ಪ್ರಯೋಜನ ಪಡೆಯಲು ಮುಂದೆ ಬರುತ್ತಿಲ್ಲ. ಹಾಗಾಗಿ ಕೊಂಕಣಿ ಅಕಾಡೆಮಿಯು ನೇತೃತ್ವ ವಹಿಸಿ ಕಲಾವಿದರ ಮಾಹಿತಿ ಸಂಗ್ರಹಿಸಿ, ಕ್ರೋಢೀಕರಿಸಿ, ಸಂಬಂಧಪಟ್ಟ ಇಲಾಖೆಗೆ ತಲುಪಿಸುತ್ತದೆ. ಇದೊಂದು ಆರಂಭ ಮಾತ್ರ. ಮುಂದೆ ಸಾಹಿತಿಗಳಿಗೆ ಹಾಗೂ ಇತರ ಊರುಗಳಲ್ಲಿಯೂ ಈ ಬಗ್ಗೆ ಮಾಹಿತಿ ಸಭೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಹಿರಿಯ ಕಲಾವಿದ ಟೊನಿ ರುಜಾಯ್ ಮಾಹಿತಿ ಪುಸ್ತಿಕೆಯನ್ನು ಬಿಡುಗಡೆಗೊಳಿಸಿದರು. ಮತ್ತೊರ್ವ ಕಲಾವಿದ ಗೋಪಾಲ ಗೌಡ ಗುಮಟೆ ಬಾರಿಸಿ ಪ್ರಕಟನೆ ನೀಡುವ ಮೂಲಕ ಕಲಾವಿದರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕರೆ ಕೊಟ್ಟರು. ವೇದಿಕೆಯಲ್ಲಿ ಸಾರಸ್ವತ ಸಮಾಜದ ನಿರಂಜನ್ ರಾವ್, ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ವಿದ್ಯಾ ಕಾಮತ್, ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷೆ ಗೀತಾ ಕಿಣಿ ಉಪಸ್ಥಿತರಿದ್ದರು.

ಕೊಂಕಣಿ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕರಾದ ಡಾ. ಬಿ. ದೇವದಾಸ ಪೈ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಈ ಕೆಲಸವನ್ನು ಮುನ್ನಡೆಸಲು ಅಕಾಡೆಮಿಯ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಯಿತು.

ಸಂಚಾಲಕ ಡೊಲ್ಲಾ ಮಂಗಳೂರು ವಂದಿಸಿ ರೇಮಂಡ್ ಡಿಕುನ್ಹಾ ಕಾರ್ಯಕ್ರಮ ನಿರ್ವಹಿಸಿದರು.

ಫೊಟೊ ಕೃಪೆ: ಸ್ಟ್ಯಾನ್ಲಿ ಬಂಟ್ವಾಳ