"ಕೊಂಕಣಿ ಅಕಾಡೆಮಿ ಭಾಷೆಖಾತಿರ್ ವಾವುರ್ತಾನಾ ಚಿತ್ರ್‌ಕಲಾ ಸಯ್ತ್ ಭಾಷಾ ವಾಡಾವಳಿಚೊ ಏಕ್ ವಾಂಟೊ ಮ್ಹಣ್ ಲೆಕುನ್ ಅಸಲೆಂ ಏಕ್ ಶಿಬಿರ್ ಮಾಂಡುನ್ ಹಾಡ್ಲಾಂ. ಹಾಂಗಾ ತಯಾರ್ ಜಾಲ್ಲಿಂ ಪಿಂತುರಾಂ ಕ್ಯಾಲೆಂಡರಾ ಮುಖಾಂತ್ರ್ ಘರಾ ಘರಾಂನಿ ಪಾವೊಂವ್ಚ್ಯಾ, ತ್ಯಾ ಮುಖಾಂತ್ರ್ ಚಿತ್ರ್‌ಕಲಾ ಲೊಕಾಮೊಗಾಳ್ ಕರ್‍ಚೊ ಅಕಾಡೆಮಿಚೊ  ಹೊ ವಾವ್ರ್ ಹೊಗ್ಳಿಕೆಕ್ ಫಾವೊ ಮ್ಹಣ್ ಫಾಮಾದ್ ಚಿತ್ರ್‌ಕಾರ್ ಗಣೇಶ್ ಸೋಮಯಾಜಿ ಹಾಣೆಂ ಸಾಂಗ್ಲೆಂ. ತೊ ಕಲಾಂಗಣಾಂತ್ 14-10-15 ವೆರ್ ಚಲ್‌ಲ್ಲ್ಯಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿನ್ ಆಯೋಜನ್ ಕೆಲ್ಲ್ಯಾ `ಕಲಾ ಕೊಂಕಣಿ ಚಿತ್ರಕಲಾ ಶಿಬಿರಾಚ್ಯಾ ಸಂಪ್ಣೆ ಕಾರ್ಯಾಂತ್ ಮುಖೆಲ್ ಸಯ್ರೊ ಜಾವ್ನ್ ಭಾಗ್ ಘೆವ್ನ್ ಕಲಾಕಾರಾಂಕ್ ಪ್ರಮಾಣ್ ಪತ್ರಾಂ ವಿತರಣ್ ಕರ್‍ನ್ ಉಲಯ್ತಾಲೊ.

ಅಕಾಡೆಮಿ ಅಧ್ಯಕ್ಷ್ ರೊಯ್ ಕ್ಯಾಸ್ತೆಲಿನೊನ್ ಕಾರ್ಯಾಚೆಂ ಅಧ್ಯಕ್ಷ್‌ಪಣ್ ಘೆತ್‌ಲ್ಲೆಂ. ಸಾದ್ಯಾ ಲೊಕಾಕ್ ಅರ್ಥ್ ಜಾಂವ್ಚೆ ತಸಲಿಂ ಪಿಂತುರಾಂ ರಚುನ್, ಕೊಂಕ್ಣಿ ಕಲಾ ಆನಿ ಜಿವಿತಾ ರಿತಿವಿಶ್ಯಾಂತ್ ಲೊಕಾಕ್ ಮಾಹೆತ್ ದಿಂವ್ಚ್ಯಾ ಅಕಾಡೆಮಿಚ್ಯಾ ಹ್ಯಾ ಪ್ರಯತ್ನಾಂತ್ ಹಾತ್ ಮೆಳಯಿಲ್ಲ್ಯಾ ಕಲಾಕಾರಾಂಕ್ ತಾಣೆಂ ಅಭಿನಂದನ್ ಪಾಟಯ್ಲೆಂ. ಈ ಪಿಂತುರಾಂ 2016 ವ್ಯಾ ವರ್‍ಸಾಚ್ಯಾ ಕೊಂಕ್ಣಿ ಕ್ಯಾಲೆಂಡರಾಂತ್ ವಾಪರ್‍ತಲ್ಯಾಂವ್ ಮ್ಹಣ್‌ಯಿ ತಾಣೆಂ ಕಳಯ್ಲೆಂ.

ಸ್ವಪ್ನ ನೊರೊನ್ಹಾನ್ ಶಿಬಿರಾಂತ್ಲೊ ಆಪ್ಲೊ ಆನ್ಬೋಗ್ ವಾಂಟುನ್ ಘೆತ್ಲೊ. ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ಹಾಣೆಂ ಸ್ವಾಗತ್ ಕರ್‍ನ್ ವಿಲ್ಸನ್ ಕಯ್ಯಾರಾನ್ ಆಬಾರ್ ಮಾಂದ್ಲೊ. ವಿತೊರಿ ಕಾರ್ಕಳಾನ್ ಕಾರ್ಯೆಂ ಚಲಯ್ಲೆಂ.

ಹ್ಯಾ ಶಿಬಿರಾಂತ್ ವೀಣಾ ಶ್ರೀನಿವಾಸ್ (ಕಾವಿಕಲಾ ಆನಿ ರಂಗೋಲಿ) ಸ್ವಪ್ನಾ ನೊರೊನ್ಹಾ (ಕ್ರಿಸ್ತಾಂವ್ ಕಾಜಾರ್ ಆನಿ  ಕುಂಬಾರ್) ವಿಶ್ವಾಸ್ ಎಂ., (ಸಿದ್ದಿ ನಾಚ್ ಆನಿ ಸಿದ್ದಿ ಆರಾಧಾನ್) ವಿಲ್ಸನ್ ಡಿಸೋಜ, (ನತಲಾಂ ಖೆಳ್ ಆನಿ ಚೂಡಿ ಪೂಜಾ) ಜೀವನ್ ಸಾಲ್ಯಾನ್ (ಕೃಷಿ ಆನಿ ಕೊಂಕಣಿಚೆ ೯ ನಾಚ್ ಪ್ರಕಾರ್) ತಶೆಂಚ್ ರವಿ ವಾಗ್ಳೆ (ಮೇಸ್ತ ಆನಿ ಖಾರ್ವಿ) ಹ್ಯೊ ಕೃತಿಯೊ ರಚ್ಲ್ಯಾತ್.


`ಕಲಾ ಕೊಂಕಣಿ' ಚಿತ್ರಕಲಾ ಶಿಬಿರ ಸಮಾರೋಪ

ಕೊಂಕಣಿ ಅಕಾಡೆಮಿ ಭಾಷೆಗಾಗಿ ಕೆಲಸ ಮಾಡುವಾಗ ಚಿತ್ರಕಲೆ ಕೂಡಾ ಭಾಷಾ ಬೆಳವಣಿಗೆಯ ಅಂಗ ಎಂದು ಭಾವಿಸಿ ಇಂಥ ಒಂದು ಶಿಬಿರವನ್ನು ಆಯೋಜಿಸಿದ್ದಾರೆ. ಕೊಂಕಣಿ ಕಲೆಯ ವಿವಿಧ ಚಿತ್ರಗಳನ್ನು ಕ್ಯಾಲೆಂಡರ್ ಮೂಲಕ ಮನೆಮನೆಗೆ ತಲುಪಿಸುವ, ಈ ಮೂಲಕ ಚಿತ್ರಕಲೆಯನ್ನು ಪ್ರಚುರಪಡಿಸುವ ಈ ಕೆಲಸ ಸ್ತುತ್ಯರ್ಹ ಎಂದು ಹಿರಿಯ ಕಲಾವಿದ ಗಣೇಶ ಸೋಮಯಾಜಿ ಅಬಿಪ್ರಾಯಪಟ್ಟರು. ಅವರು ಶಕ್ತಿನಗರದ ಕಲಾಂಗಣದಲ್ಲಿ 14-10-15 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿರುವ `ಕಲಾ ಕೊಂಕಣಿ ಎಂಬ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ಇವರು ವಹಿಸಿ, ಜನಸಾಮಾನ್ಯರಿಗೆ ಅರ್ಥವಾಗುವಂತಹ ಚಿತ್ರ ರಚಿಸಿ, ಕೊಂಕಣಿ ಕಲೆ ಮತ್ತು ಜೀವನ ರೀತಿಯ ವೈವಿಧ್ಯತೆಯ ಬಗ್ಗೆ ಜನರಲ್ಲಿ ಮಾಹಿತಿ ನೀಡುವಂತಹ ಅಕಾಡೆಮಿಯ ಈ ಪ್ರಯತ್ನಕ್ಕೆ ಕೈ ಜೋಡಿಸಿದ ಕಲಾವಿದರನ್ನು ಅಭಿನಂದಿಸಿದರು. ಈ ಚಿತ್ರಗಳನ್ನು 2016 ನೇ ಸಾಲಿನ ಕೊಂಕಣಿ ಕ್ಯಾಲೆಂಡರ್‌ನಲ್ಲಿ ಬಳಸಲಾಗುವುದು ಎಂದು ತಿಳಿಸಿದರು.

ಕಲಾವಿದೆ ಸ್ವಪ್ನ ನೊರೊನ್ಹಾ ಶಿಬಿರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.  ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ಸ್ವಾಗತಿಸಿ, ವಿಲ್ಸನ್ ಕಯ್ಯಾರ್ ಧನ್ಯವಾದವನ್ನಿತ್ತರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು.

ಈ ಶಿಬಿರದಲ್ಲಿ ವೀಣಾ ಶ್ರೀನಿವಾಸ್ (ಕಾವಿಕಲೆ ಮತ್ತು ರಂಗೋಲಿ) ಸ್ವಪ್ನಾ ನೊರೊನ್ಹಾ (ಕ್ರೈಸ್ತ ಮದುವೆ ಮತ್ತು ಕುಂಬಾರಿಕೆ) ವಿಶ್ವಾಸ್ ಎಂ., (ಸಿದ್ದಿ ನೃತ್ಯ ಮತ್ತು ಸಿದ್ದಿ ದೈವಾರಾಧನೆ) ವಿಲ್ಸನ್ ಡಿಸೋಜ, (ಕ್ರಿಸ್ಮಸ್ ಆಟ ಮತ್ತು  ಜಿಎಸ್‌ಬಿಯವರ ಚೂಡಿ ಪೂಜೆ) ಜೀವನ್ ಸಾಲ್ಯಾನ್ (ಕೃಷಿ ಮತ್ತು ಕೊಂಕಣಿಯ 9 ನೃತ್ಯ ಪ್ರಕಾರಗಳು) ಹಾಗೂ ರವಿ ವಾಗ್ಳೆ (ಮೇಸ್ತ ಮತ್ತು ಖಾರ್ವಿ) ಇವರು ಈ ಕೃತಿಗಳನ್ನು ರಚಿಸಿರುವರು.

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]