Print

2014 ವ್ಯಾ ವರ್ಸಾಚಿ ಜಾನಪದ್ ಗೌರವ್ ಪ್ರಶಸ್ತಿ ಜೊಡ್‌ಲ್ಲೊ ಕಲಾಕಾರ್ ಗಜಾನನ ಮಹಾಲೆ, ಧಾರವಾಡ (84) ಆಜ್ ಅಂತರ್ಲೊ. ತೊ ನಾಚ್, ನಾಟಕ್, ಸಿನೆಮಾ ಆನಿ ಸಂಭ್ರಮಾಂನಿ ವೇಸ್ ಪಿಂತ್ರಾವ್ಣಿ (ಮೇಕಪ್) ಕರುನ್ ಫಾಮಾದ್ ಜಾಲ್ಲೊ. ಬೇಂದ್ರೆ ಆನಿ ಶ್ರೀರಂಗ ಹಾಂಚ್ಯಾ ನಾಟಕಾಂಕ್‌ಯಿ ಮೇಕಪ್ ಕೆಲ್ಲಿ ಖ್ಯಾತಿ ಹಾಚಿ.
 

 


ನಾಟಕ್ ನಟ್ ಜಾವ್ನ್‌ಯಿ ಮಹಾಲೆ ಮಾಮ್ ಫಾಮಾದ್. ತಶೆಂಚ್ ಸುರೇಶ್ ಹೆಬ್ಳಿಕರ್ ಆನಿ ಟಿ.ಎಸ್. ನಾಗಾಭರಣ ಹಾಂಚ್ಯಾ ಸಿನೆಮಾಂನಿ ನಟನ್ ಕೆಲಾಂ. ಮೇಕಪಾಕ್ ಜನಪದೀಯ್ ವಿನ್ಯಾಸ್ ದೀವ್ನ್ ಗಾಂವಾಂ ಗಾಂವಾಂನಿ ಸೆವಾ ದಿಲ್ಯಾ.
ಶ್ರೀ ಗಜಾನನ್ ಮಹಾಲೆ ಹಾಂಚಿ ಸೆವಾ ವಳ್ಕುನ್ ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿಚಿ `ಲೋಕ್‌ವೇದ್ ಗೌರವ್ ಪ್ರಶಸ್ತಿ-2014' ದೀವ್ನ್ ಹ್ಯಾಚ್ ಜನೆರಾಂತ್ ಬೆಂಗ್ಳುರಾಂತ್ ಮುಖೆಲ್ ಮಂತ್ರಿ ಶ್ರೀ ಸಿದ್ದರಾಮಯ್ಯನ್ ತಾಕಾ ಮಾನ್ ದಿಲ್ಲೊ.

ಮಹಾಲೆ ಹಾಂಚ್ಯಾ ಮರ್ಣಾಥಂಯ್ ಅಕಾಡೆಮಿ ಅಧ್ಯಕ್ಷ್ ರೊಯ್ ಕ್ಯಾಸ್ತೆಲಿನೊ, ರಿಜಿಸ್ಟ್ರಾರ್ ಡಾ ಬಿ. ದೇವದಾಸ ಪೈ ಹಾಣಿ ದೂಖ್ ವ್ಯಕ್ತ್ ಕೆಲಾಂ.
ಕೊಂಕಣಿ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದ ಗಜಾನನ ಮಹಾಲೆ ನಿಧನ


2014 ನೇ ಸಾಲಿನ ಕೊಂಕಣಿ ಅಕಾಡೆಮಿಯ ಜನಪದ ಗೌರವ ಪ್ರಶಸ್ತಿ ಪಡೆದ ಪ್ರಸಾದನ ಕಲಾವಿದ ಗಜಾನನ ಮಹಾಲೆ, ಧಾರವಾಡ ಇವರು (84) ಇಂದು ನಿಧನರಾದರು. ಶ್ರೀಯುತರು ನೃತ್ಯ, ನಾಟಕ, ಚಲನಚಿತ್ರ ಮತ್ತು ಇತರ ಸಮಾರಂಭಗಳಲ್ಲಿ ಪ್ರಸಾದನ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮನ್ನು ನಾಟಕ ಮತ್ತು ನೃತ್ಯ ಸಂಗೀತದಲ್ಲಿ ತೊಡಗಿಸಿಕೊಂಡಿದ್ದರು. ಬೇಂದ್ರೆ ಹಾಗೂ ಶ್ರೀರಂಗ ಇವರ ನಾಟಕಗಳು ಸೇರಿ ನೂರಾರು ನಾಟಕಗಳಿಗೆ ಪ್ರಸಾದನ ನೀಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ನಾಟಕ ನಟನಾಗಿ ಕೂಡ ಪರಿಚಯಿಸಿಕೊಂಡ ಇವರು ನಿರ್ದೇಶಕರಾದ ಸುರೇಶ್ ಹೆಬ್ಳಿಕರ್ ಇವರ ನಿರ್ದೇಶನದಲ್ಲಿ `ಚಮತ್ಕಾರ' ಹಾಗೂ ಟಿ.ಎಸ್.ನಾಗಾಭರಣ ಇವರ `ಸಿಂಗಾರೇವ್ವ' ಚಲನಚಿತ್ರಗಳಲ್ಲಿಯೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಪ್ರಸಾದನ ಕಲೆಗೆ ಜಾನಪದೀಯ ಮೆರಗು ನೀಡಿ ಹೆಸರುವಾಸಿಗೊಳಿಸಿರುವ  ಮಹಾಲೆ ಇವರ ಸೇವೆಯನ್ನು ಪರಿಗಣಿಸಿ, 2014ನೇ ಸಾಲಿನ ಕೊಂಕಣಿ ಅಕಾಡೆಮಿಯ ಜಾನಪದ ಪ್ರಶಸ್ತಿಯನ್ನು ಕಳೆದ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡಿ ಗೌರವಿಸಿದ್ದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ಹಾಗೂ ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ಅವರು ಮಹಾಲೆಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.