ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಂಕಣಿ ಸಾಹಿತಿ/ಕಲಾವಿದರಿಗೆ ಗುರುತು ಪತ್ರ ವಿತರಿಸುವ ಕಾರ್ಯಕ್ರಮ, ಕೊಂಕಣಿ ನಾಟಕ ಸಭಾದ ಸಹಕಾರದಲ್ಲಿ 2016 ಫೆಬ್ರವರಿ 20 ರಂದು ಶನಿವಾರ ಸಂಜೆ 6.00 ಗಂಟೆಗೆ ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಗೌರವ ಅತಿಥಿಗಳಾಗಿ ಇನ್ಸೂರೆನ್ಸ್ ಎಂಇಎಂಜಿ ಇದರ ಜನರಲ್ ಮ್ಯಾನೇಜರ್ ಎಸ್ ಯು ಶ್ರೀಪತಿ ಭಾಗವಹಿಸಲಿದ್ದು, ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ಅಧ್ಯಕ್ಷತೆ ವಹಿಸಲಿದ್ದಾರೆ. 

ಈ ಸಂದರ್ಭದಲ್ಲಿ ಅಕಾಡೆಮಿ ಪ್ರಕಾಶನದ 8 ಪುಸ್ತಕಗಳನ್ನು ಲೋಕಾಪಣೆ ಮಾಡಲಾಗುವುದು.

* ಗೊಂಯ್ ಸಾಂಡುನ್ ಆಯ್ಲಿ ಮಾಂಯ್  - ಜೊಕಿಂ ಪಿರೇರಾ  (ಗುಮಟೆ ಹಾಡುಗಳು. ಸುಧಾರಿತ ಪುನರ್ ಮುದ್ರಣ)

* ಕರ್ವಾಲೊ - ಲಿಲ್ಲಿ ಮಿರಾಂದಾ (ಅನುವಾದಿತ ಕಾದಂಬರಿ)

* ವಾಸರಿಂತು ಹಾಂವ್ -  ಗೀತಾ ಸಿ. ಕಿಣಿ (ವೈವಿಧ್ಯಮಯ ಅಡುಗೆ)

* ಆಮಾಶೆಚೆ ಆದ್ಲಿ ರಾತ್  - ರೊನ್ ಮಾಯ್ಕಲ್ ಆಂಜೆಲೊರ್ (ಕಥಾ ಸಂಗ್ರಹ)

* ಭಾಡ್ಯಾಚಿ ಬಾಯ್ಲ್ - ಸಿಜ್ಯೆಸ್ ತಾಕೊಡೆ (5 ಕಿರು ನಾಟಕಗಳು)

* ಮ್ಹಾಕಾ ಜಿಯೆಂವ್ಕ್ ಸೊಡಾ - ರೊನ್ ರೊಚ್ ಕಾಸ್ಸಿಯಾ (ಕಾದಂಬರಿ)

* ವಿದೂಷಕ್ - ರಿಚ್ಚಿ ಜೋನ್ ಪಾಯ್ಸ್ (ವಿಡಂಬನೆಗಳ ಸಂಗ್ರಹ)

* ಕುಡ್ಮ್ಯಾಲಿ ಗುಮ್ಟಾಂ - ಎಂ. ಗೋಪಾಲ ಗೌಡ (ಕುಡುಮಿ ಗುಮಟೆ ಹಾಡು ಹಾಗೂ ಕೋಲಾಟ ಪದಗಳ ಸುಧಾರಿತ ಪುನರ್ ಮುದ್ರಣ)

ಸಭಾ ಕಾರ್ಯಕ್ರಮದ ನಂತರ ಎನ್.ಬಿ. ಕಾಮತ್ ರಚಿಸಿ, ಸಂತೋಶ್ ಶೆಣೈ ನಿರ್ದೇಶನದ ``ಪ್ರೊಫೆಸರ್ ಯಮ'' ಕೊಂಕಣಿ ನಾಟಕ ಸಾದರವಾಗಲಿದೆ.   

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]