Print

ಆಗಸ್ಟ್ 18, 2016: ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಹುಲುಸ್ವಾರ-ಚಾಮಗಾರ್ ಸಮುದಾಯದವರಿಗಾಗಿ, ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಸಿದ್ಧಿ ಸಮುದಾಯದವರ ಫೆಲೋಶಿಪ್ ಯೋಜನೆಗಳಿಗೆ ತಲಾ ರೂ. 10 ಲಕ್ಷದ ಅನುದಾನ ಸರ್ಕಾರದಿಂದ ಮಂಜೂರಾಗಿದ್ದು, ಅಕಾಡೆಮಿಯು ತಾನೇ ಸಿದ್ಧಪಡಿಸಿರುವ ಐದು ಹಂತಗಳುಳ್ಳ ಅಧ್ಯಯನ ಪೂರ್ಣ ಯೋಜನೆಯನ್ನು ವಿನ್ಯಾಸಗೊಳಿಸಿ, 6 ತಿಂಗಳ ಅವಧಿಯಲ್ಲಿ, ಎಡೆಬಿಡದೆ ಹತ್ತು ಹಲವು ಚಟುವಟಿಕೆಗಳಾಧರಿತ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿರುತ್ತದೆ.

 

 

ದಿನಾಂಕ 11 ಆಗಸ್ಟ್, 2016 ವಿಶೇಷ ಘಟಕ ಯೋಜನೆ:
ಪ್ರಾತ್ಯಕ್ಷಿಕೆ ಹಾಗೂ ಉದ್ಘಾಟನೆ : ಈ ಪ್ರಾತ್ಯಕ್ಷಿಕೆಯಲ್ಲಿ ಹುಲುಸ್ವಾರ್ ಮತ್ತು ಚಾಮಗಾರ್ ಸಮುದಾಯಗೆ ಸೇರಿದ ಯಲ್ಲಾಪುರದ ೩ ತಂಡಗಳಿಂದ ಹುಲ್ಲಿನ ಚಾಪೆ; ಕುಮಟಾ-ಮಿರ್ಜಾನದಿಂದ ೨ ತಂಡಗಳು, ಅಂಕೋಲಾದಿಂದ ೨ ತಂಡಗಳು ಮತ್ತು ಕಾರವಾರದ ೧ ತಂಡದಿಂದ ಬಿದಿರು ಮತ್ತು ಬೆತ್ತದಿಂದ ತಯಾರಿಸಿದ ವಸ್ತುಗಳು ಹಾಗೂ ಶಿರಸಿಯ ೧ ತಂಡದಿಂದ ಚರ್ಮದಿಂದ ತಯಾರಿಸಿದ ಕಲಾತ್ಮಕ ಚಪ್ಪಲಿಗಳ ಪ್ರದರ್ಶನವನ್ನು  ಶ್ರೀ ಎನ್. ಜೆ. ಸಾಳೊಂಕೆ, ಅಧ್ಯಕ್ಷರು, ನಗರಸಭೆ, ದಾಂಡೇಲಿ ಇವರು ಉದ್ಘಾಟಿಸಿ, ಪರಿಕರಗಳನ್ನು ವೀಕ್ಷಿಸಿದರು. ಶ್ರೀಮತಿ ಸುಮಂಗಳ ದೇಸಾಯಿ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಡಾ. ಬಿ. ದೇವದಾಸ ಪೈ, ರಿಜಿಸ್ಟ್ರಾರ್ ರವರು ಸ್ವಾಗತಿಸಿದರು. ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತಲಿನೊ, ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ  ಶ್ರೀ ಕೆ. ಜಿ. ಗಿರಿರಾಜ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಹಾಗೂ ಶ್ರೀ. ಬಿ. ಎನ್. ವಾಸರೆ, ಅಧ್ಯಕ್ಷರು, ಒಡನಾಡಿ, ದಾಂಡೇಲಿ ಇವರು ಉಪಸ್ಥಿತರಿದ್ದರು. ಶ್ರೀ ಲಾರೆನ್ಸ್ ಡಿ'ಸೋಜ, ಸದಸ್ಯರು ಧನ್ಯವಾದ ಅರ್ಪಿಸಿದರು ಹಾಗೂ ಕಾರ್ಯಕ್ರಮವನ್ನು ನಿರ್ವಹಿಸಿದರು.

 

 

ದಿನಾಂಕ: ೧೨ ಆಗಸ್ಟ್, ೨೦೧೬ (ಶುಕ್ರವಾರ) ಬೆಳಿಗ್ಗೆ ೧೦.೩೦ಗೆ ಉತ್ಸವದ ಸಾಂಸ್ಕೃತಿಕ ವೈಭವನ್ನು ಕೊಂಕಣಿ ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತಲಿನೊ ರವರು ಉದ್ಘಾಟಿಸಿದರು. ವಿ.ಘ.ಯೋ. ಪರಿಶಿಷ್ಟ ಜಾತಿಯ ಮತ್ತು ಗಿ.ಉ.ಯೋ. ಪರಿಶಿಷ್ಟ ಪಂಗಡಕ್ಕೆ ಸೇರಿದ ಹುಲುಸ್ವಾರ-ಚಾಮಗಾರ್, ಸಿದ್ಧಿ ಸಮುದಾಯದ ಜನರಲ್ಲಿ ಒಟ್ಟು ೩೦ ತಂಡಗಳಿಂದ ಪುಗಡಿ ಮತ್ತು ಜಾಕಾಯ್ ನೃತ್ಯ, ಧಮಾಮ್ ನೃತ್ಯ, ಶಿಗ್ಮೊ ನೃತ್ಯ, ದಫ್/ಢೋಲಕ್/ಮಾಂಡ್ ನೃತ್ಯ, ಸಾಂಪ್ರಾದಾಯಿಕ ನೃತ್ಯ, ಸಾಂಪ್ರಾದಾಯಿಕ ಆರತಿ ಗೀತೆಗಳು ಮತ್ತು ಆಚರಣೆ, ಬೇಡರ ವೇಷ ಹಾಗೂ ಹುಲಿ ವೇಷ ಈ ರೀತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೆಳಿಗ್ಗೆ ೧೦.೩೦ ಯಿಂದ ಸಂಜೆ ೪.೦೦ ರವರೆಗೆ ನಿರಂತರವಾಗಿ ವೇದಿಕೆ ಮೇಲೆ ಪ್ರದರ್ಶಿಸಿದರು. ಅತೀ ಉತ್ತಮ ಪ್ರದರ್ಶನ ನೀಡಿದ ತಂಡಗಳ ಆಯ್ಕೆ ಮಾಡಲು, ಅಕಾಡಮಿ ಸದಸ್ಯರಾದ ಶ್ರೀಮತಿ ವಾರಿಜಾ ನಿರ್‌ಬೈಲ್, ಶ್ರೀ ಲುಲ್ಲುಸ್ ಕುಟಿನ್ಹಾ, ಶ್ರೀ ಅರವಿಂದ್ ಶ್ಯಾನ್‌ಭಾಗ್ ಮತ್ತು ಶ್ರೀ ಕಮಲಾಕ್ಷ ಶೇಟ್ ಇವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಶ್ರೀ ಲಾರೆನ್ಸ್ ಡಿ'ಸೋಜ ರವರು ಕಾರ್ಯಕ್ರಮ ನಿರ್ವಹಿಸಿದರು.

 

 

    ಜನಪದ-ಜನಪರ ಉತ್ಸವದ ಸಾಂಸ್ಕೃತಿಕ ವೈಭವದ ಸಭಾ ಕಾರ್ಯಕ್ರಮವನ್ನು ಸಂಜೆ ೪.೦೦ ಗಂಟೆಗೆ ಶ್ರೀಮತಿ ಸುಮಂಗಳ ದೇಸಾಯಿ ಮತ್ತು ತಂಡ, ಗುಂದ ಇವರಿಂದ ಪ್ರಾರ್ಥನಾ ಗೀತೆ ಹಾಗೂ ನಾಡ ಗೀತೆಯ ಮೂಲಕ ಪ್ರಾರಂಭಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ದೀಪ ನೃತ್ಯದ ಮೂಲಕ ಸ್ವಾಗತಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತಲಿನೊ, ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಅತಿಥಿಗಳಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಶ್ರೀ ಆರ್. ವಿ. ದೇಶಪಾಂಡೆ, ದೊಡ್ಡ ಮತ್ತು ಮಾಧ್ಯಮ ಕೈಗಾರಿಕಾ ಇಲಾಖೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಶಿರಸಿ, ಮುಂಡಗೋಡು, ಹಳಿಯಾಳ, ಯಲ್ಲಾಪುರ, ಮಿರ್ಜಾನ-ಕುಮಟಾ, ಅಂಕೋಲ ಮತ್ತು ಕಾರವಾರದ ಹುಲುಸ್ವಾರ-ಚಾಮಗಾರ್, ಸಿದ್ಧಿ ಸಮುದಾಯದ ಕಲಾವಿದರ ಕುಲಕಸುಬಿಗೆ ಬೇಕಾದ ಪರಿಕರಗಳನ್ನು ವಿತರಿಸಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.

 

 

    ಈ ಎರಡೂ ಯೋಜನೆಗಳಡಿ ತರಬೇತಿ ಪಡೆದ ಕಲಾವಿದರಿಗೆ ಮುಖ್ಯ ಅತಿಥಿಗಳು ಪ್ರಮಾಣ ಪತ್ರ ವಿತರಿಸಿದರು. ಸಾಂಸ್ಕೃತಿಕ ವೈಭವದಲ್ಲಿ ಅತೀ ಉತ್ತಮ ಪ್ರದರ್ಶನ ನೀಡಿದ ಎಲ್ಲಾ ಕಲಾ ತಂಡದವರಿಗೆ ಅಕಾಡಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತಲಿನೊ, ಮತ್ತು ಅಕಾಡೆಮಿ ಸದಸ್ಯರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀ ಶಿವರಾಮ ಹೆಬ್ಬಾರ್, ಮಾನ್ಯ ಶಾಸಕರು, ಯಲ್ಲಾಪುರ; ಶ್ರೀ ಎಸ್. ಎಲ್. ಘೊಟ್ನೇಕರ್, ಮಾನ್ಯ ಶಾಸಕರು, ವಿಧಾನ ಪರಿಷತ್; ಶ್ರೀ ರಾಜೇಂದ್ರ ಜೈನ್, ಕಾರ್ಯನಿರ್ವಾಹಕರು, ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್, ದಾಂಡೇಲಿ; ಫಾ| ಸೆಬಾಸ್ಟಿಯನ್ ಪಿಂಟೊ, ಧರ್ಮಗುರುಗಳು, ಅಂಬೆವಾಡಿ ಚರ್ಚ್; ಶ್ರೀ ಸುರೇಶ್ ಕಾಮತ್, ಉಪಪ್ರಧಾನ ನಿರ್ದೇಶಕರು, ಶ್ರೇಯಸ್ ಪೇಪರ್ ಮಿಲ್ಲ್, ದಾಂಡೇಲಿ; ಶ್ರೀ ಆರ್. ಪಿ. ನಾಯಕ್, ಸಮಾಜ ಸೇವಕರು, ದಾಂಡೇಲಿ; ಶ್ರೀ ದೇವಿದಾಸ್ ವೇಳಿಪ, ಅಧ್ಯಕ್ಷರು, ಕುಡುಬಿ ಸಮಾಜ, ಜೋಯಿಡಾ; ಶ್ರೀ ಎನ್. ಜೆ. ಸಾಳೊಂಕೆ, ಅಧ್ಯಕ್ಷರು, ನಗರ ಸಭೆ, ದಾಂಡೇಲಿ; ಶ್ರೀ ಸೈಯದ್ ತಂಗಳ್, ಸಮಾಜ ಸೇವಕರು, ದಾಂಡೇಲಿ; ಶ್ರೀ ಬಿ. ಎನ್. ವಾಸರೆ, ಅಧ್ಯಕ್ಷರು, ಒಡನಾಡಿ, ದಾಂಡೇಲಿ ಇವರು ಉಪಸ್ಥಿತರಿದ್ದರು. ಇವರಿಗೆ ಶ್ರೀ ರೊಯ್ ಕ್ಯಾಸ್ತಲಿನೊ ಇವರು ಯಾದಿಸ್ತಿಕಾ ನೀಡಿ ಗೌರವಿಸಿದರು.

ಹಾಜರಿದ್ದ ಎಲ್ಲರಿಗೆ ಡಾ. ಬಿ. ದೇವದಾಸ ಪೈ, ರಿಜಿಸ್ಟ್ರಾರ್ ರವರು ಧನ್ಯವಾದ ಸಮರ್ಪಿಸಿದರು. ಡಾ. ಚೇತನ್ ನಾಯಕ್, ಸದಸ್ಯರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇವರು ಕಾರ್ಯಕ್ರಮ ನಿರ್ವಹಿಸಿದರು.