Print

Aug 22, 2016:

ಕೊಂಕಣಿ ಭಾಷಾ ಮಾನ್ಯತೆ ರಜತ ಸಂಭ್ರಮ ವರ್ಷಕ್ಕೆ ಚಾಲನೆ

ಕಾರ್ಕಳದಲ್ಲಿ ಕೊಂಕಣಿ ಮಾನ್ಯತಾ ದಿವಸ್ - 2016

``ಈ ದೇಶದಲ್ಲಿ ಹತ್ತಾರು ಭಾಷೆ ಹಾಗೂ ಸಂಸ್ಕೃತಿಯ ಮುಖಾಂತರ ಈ ದೇಶವನ್ನು ಒಂದು ಮಾಡಿದಂತಹ ಸಮಾಜ ಇದು.  ತಮ್ಮ ತಮ್ಮ ಭಾಷೆಯ ಮೇಲೆ ಎಲ್ಲ್ಲರಿಗೂ ಒಳ್ಳೆಯ ಅಭಿಮಾನ ಇದೆ, ಭಾಷೆಯ ಜತೆಗೆ ಆಯಾಯ ಸಂಸ್ಕೃತಿಯೂ ಅಡಗಿದೆ ನಾವು ಅದರ ಮರೆಯಲು ಸಾಧ್ಯವಿಲ್ಲ, ಅವುಗಳಲ್ಲಿ ಕೊಂಕಣಿ ಭಾಷೆಯೂ ಒಂದು ಎಂದು ಕಾರ್ಕಳ ಶಾಸಕ ವಿ ಸುಲ್ ಕುಮಾರ್ ಹೇಳಿದರು.

ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಾರ್ಕಳದ ಕ್ರೈಸ್ತ ಸಮುದಾಯ, ಜಿ ಎಸ್ ಬಿ ಸಮುದಾಯ ಮತ್ತು ಆರ್ ಎಸ್ ಬಿ ಸಮುದಾಯದ ಸಹಕಾರದಲ್ಲಿ ವತಿಯಿಂದ ಕಾರ್ಕಳ ಎಸ್.ವಿ.ಟಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶನಿವಾರ 20.08.16 ರಂದು ಹಮ್ಮಿಕೊಳ್ಳಲಾದ ಕೊಂಕಣಿ ಮಾನ್ಯತಾ ದಿವಸ್ - 2016 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ನಮ್ಮ ಮಾತೃಭಾಷೆಗಳನ್ನು ಗೌರವಿಸಬೇಕು ಜತೆಗೆ ಮಕ್ಕಳಿಗೆ ಭಾಷೆಯ ಪ್ರಾಮುಖ್ಯತೆಯನ್ನು ಮನದಟ್ಟಾಗುವಂತೆ ಪೋಷಕರು ತಿಳಿಸಬೇಕು. ಭಾಷೆಯ ಕುರಿತು ಕಳಕಳಿ ನಮ್ಮಲ್ಲಿ ಹೆಚ್ಚಾಗಬೇಕು. ಭಾಷೆ ಉಳಿದಾಗ ಸಂಸ್ಕೃತಿ ಉಳಿಯುತ್ತದೆ  ಎಂದರು.

 

 

 

 

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷ ರೊಯ್ ಕ್ಯಾಸ್ತಲಿನೊ, ಮಾತನಾಡಿ, ಕೊಂಕಣಿಯನ್ನು 41 ಸಮುದಾಯದವರು ತಮ್ಮ ಮಾತೃ ಭಾಷೆಯನ್ನಾಗಿ ಬಳಸುತ್ತಿದ್ದಾರೆ. ಹಿಂದು, ಮುಸ್ಲಿಂ, ಕ್ರೈಸ್ತರಲ್ಲಿ ಕೊಂಕಣಿ ಮಾತೃಭಾಷೆಯ ಸಮುದಾಯಗಳಿವೆ. ಅಂತಹ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಕಳೆದ 22 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಬದ್ಧತೆಯನ್ನು ಸಾರಿದೆ ಎಂದರು.

ಈ ಸಂದರ್ಭದಲ್ಲಿ ಕೊಂಕಣಿ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ  ಪಾವ್ಲ್ ಮೊರಾಸ್, ಹಾಗೂ  ಕೊಂಕಣಿ ಶಿಕ್ಷಣದಲ್ಲಿ 10ನೇ ತರಗತಿಯಲ್ಲಿ  ಕಾರ್ಕಳ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕು. ಶ್ರೀವಿದ್ಯಾ ಭಟ್ ಮತ್ತು ಕು. ಸಂಜನಾ ಆಚಾರ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಿಶಾಲ್ ಕ್ವೀನಿ ಡಿಕೋಸ್ತ ನೀರುಡೆ ಮೂಡಬಿದರೆ, ಯುವ ಪ್ರತಿಭೆ  ರಾಜೇಶ್ ಪ್ರಭು ಪೆರ್ನಾಲ್,  ವಿಶ್ವಮಾನ್ಯ ಯೋಗಗುರು ಡಾ. ರಾಘವೇಂದ್ರ ಪೈ ಮೈಸೂರು ಇವರನ್ನು  ಸನ್ಮಾನಿಸಲಾಯಿತು. ಬಿ. ಪುಂಡಲೀಕ ಮರಾಠೆ ಶಿರ್ವ, ಲಾರೆನ್ಸ್ ಡಿಸೋಜ ಪರಿಚಯಿಸಿದರು. 

 

 

 

 

 

ಇದೇ ಸಂದರ್ಭದಲ್ಲಿ ಅಕಾಡೆಮಿ ಪ್ರಕಟಣೆಗಳಾದ ನಾಜೂಕಯ್ಯ ದೊರಿಯೆರಿ ಚಮ್ಕತಾ (ಅನುವಾದಿತ ನಾಟಕ) - ಲತಾ ಪೈ, ಬೆಂಗಳೂರು, ಪಯ್ಸಾ ಪಯ್ಶಿಲೆಂ ಪಯಣ್ (ಪ್ರವಾಸ ಸಾಹಿತ್ಯ) - ಅನಿಲ್, ಪೆರ್ನಾಲ್, ಎಕಾ ಶಿಕೊವ್ಪ್ಯಾಚ್ಯಾ ಲಿಕ್ಣೆಂತ್ಲೆಂ (ಲೇಖನ ಸಂಗ್ರಹ) - ಜೊರ್ಜ್ ಕ್ಯಾಸ್ತಲಿನೊ, ನಕ್ರೆ, ಕೊಂಕಣಿ ರಾಮಾಯಣ (ಆರ್.ಎಸ್.ಬಿ. ಪ್ರಬೇಧ) - ಎಸ್. ನಾರಾಯಣ ಗವಳ್ಕರ್, ಈ ನಾಲ್ಕು ಪುಸ್ತಕಗಳು ಲೋಕಾರ್ಪಣೆಗೊಂಡಿತು. ವಿತೊರಿ ಕಾರ್ಕಳ ಪುಸ್ತಕ ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ಕಾರ್ಕಳ ವಲಯದ ವಂ. ಧರ್ಮಗುರುಗಳಾದ ಜೊಸ್ವಿ ಫೆರ್ನಾಂಡಿಸ್, ಸ್ತ್ರೀ ಸಂಘಟನೆಯ ಸಚೇತಕಿ ಸಿ. ಪ್ರೆಸಿಲ್ಲಾ ಡಿಸೋಜ,  ಕ್ರೈಸ್ಟ್  ಕಿಂಗ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಆವೆಲಿನ್ ಲೂಯಿಸ್, ಎಸ್.ವಿ.ಟಿ. ಆಡಳಿತ ಮಂಡಳಿಯ ಸಂಚಾಲಕ ಕೆ. ಪಿ. ಶೆಣೈ,  ಪುರಸಭಾ ಉಪಾಧ್ಯಕ್ಷ ಗಿರಿಧರ್ ನಾಯಕ್, ಶ್ರೀ ಕ್ಷೇತ್ರ ಲಕ್ಷ್ಮೀಪುರದ ಆಡಳಿತ ಮೋಕ್ತೆಸರ  ಟಿ. ಎ. ಜಗದೀಶ ನಾಯಕ್, ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಸಂಚಾಲಕ ಸುಭಾಸ್ ಕಾಮತ್, ಮೊದಲಾದವರು ಉಪಸ್ಥಿತರಿದ್ದರು. 

 

 

 

 

 

ರಿಜಿಸ್ಟಾ ರ್ ಡಾ.ದೇವದಾಸ ಪೈ ವಂದಿಸಿದರು. ಜಾರ್ಜ್ ಕ್ಯಾಸ್ತೆಲಿನೊ, ವಿಕ್ಟರ್ ಮತಾಯಸ್ ನಿರೂಪಿಸಿದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾತಂಡಗಳು, ರಾಜಾಪುರ ಸಾರಸ್ವತ್ ಮಹಿಳಾ ಮಂಡಳಿ ಲಕ್ಷ್ಮೀಪುರ, ಹಿರ್ಗಾನ ಕಾರ್ಕಳ, ಸ್ತ್ರೀಶಕ್ತಿ ಸಂಘಟನ್-ಅಜೆಕಾರ್, ಕಾರ್ಕಳ, ನಕ್ರೆ, ಮಿಯಾರ್ ಇವರಿಂದ ಸಾಂಸ್ಕೃತಿಕ ಹಾಗೂ ಠಾಗೋರ್ ದಾಸ್ ಮತ್ತು ತಂಡ, ಮಂಗಳೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮಗಳು ನಡೆದವು.

ಸಭಾ ಕಾರ್ಯಕ್ರಮದ ಮೊದಲು  ಕಾರ್ಕಳ ಅನಂತಶಯನ ದಿಂದ ಪ್ರಾರಂಭಗೊಂಡ ಪುರಮೆರವಣಿಗೆಯನ್ನು ಕಾರ್ಕಳ ಪುರಸಭಾ ಅಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್ ಚಾಲನೆ ನೀಡಿದರು. ಶ್ರೀದುರ್ಗಾ ಮಹಿಳಾ ಚಂಡೆ ಬಳಗ ಬಂಟಕಲ್ಲು, ಮಲ್ಲಿಕಾರ್ಜುನ ಜಾನಪದ ಕಲಾವೇದಿಕೆ ಹೆಬ್ರಿ, ಅರುಣ್ ಸುಬ್ಬ ಸಿದ್ಧಿ ಪಂಗಡ ಮೈನಳ್ಳಿ, ನ್ಯೂಸ್ಟಾರ್ ಬ್ರಾಸ್ ಬ್ಯಾಂಡ್ ಕಾರ್ಕಳ ಮತ್ತು ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

 
ವರದಿ:  ಪುಂಡಲೀಕ ಮರಾಠೆ, ಶಿರ್ವ
ಫೊಟೊ: ಸ್ನೇಹಾ ಸ್ಟುಡಿಯೊ, ಕಾರ್ಕಳ

 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
  

More Photos...