ಕೊಂಕಣಿ ಲೋಕೋತ್ಸವ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2017, ಫೆಬ್ರವರಿ10, 11 ಮತ್ತು 12 ರಂದು ಮಂಗಳೂರಿನ ಪುರಭವನದಲ್ಲಿ ನಡೆಸಲುದ್ದೇಶಿಸಿದ ಕಾರ್ಯಕ್ರಮದ ಮಾಹಿತಿ

ಕಾರ್ಯಕ್ರಮದ ಧ್ಯೇಯೋದ್ದೇಶ:
ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಜಾನಪದಗಳ ಸೊಗಡನ್ನು ದೇಶದಲ್ಲೆಡೆ ಪ್ರಸರಿಸುವಂತೆ, ಕೊಂಕಣಿಯ ಸಮಸ್ತ ಭಾಂದವರನ್ನು ಒಟ್ಟುಗೊಡಿಸಿ, 3 ದಿನಗಳ ರಾಷ್ಟ್ರ ಮಟ್ಟದ ಕೊಂಕಣಿ ಲೋಕೋತ್ಸವವನ್ನು ನಡೆಸುವುದು. ಮೂರು ಧರ್ಮದ ಸುಮಾರು 41 ಸಮುದಾಯವನ್ನು ಹೊಂದಿರುವ ಕೊಂಕಣಿ ಭಾಷಿಕರ ವಿಭಿನ್ನ ಕಲೆ, ಸಂಸ್ಕೃತಿ, ಜಾನಪದ, ಆಚಾರ ವಿಚಾರಗಳು, ಆಹಾರ ಪದ್ದತಿಗಳ ಪ್ರದರ್ಶನ ನಡೆಸುವುದು. ಕೊಂಕಣಿಗೆ ಶ್ರೀಮಂತ ಜನಪದ ಪರಂಪರೆಯಿದೆ. ನಾಟಕ, ವಿವಿಧ ಜನಪದ ಕಲೆಗಳು, ಯಕ್ಷಗಾನ, ಗೀತೆ ಗಾಯನ, ವಿವಿಧ ನೃತ್ಯಪ್ರಕಾರಗಳು, ಕೊಂಕಣಿ ಸಿನೆಮಾಗಳು, ಇವೆಲ್ಲವನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುವುದು. ಈ ಮೂರು ದಿನಗಳ ಸಂಭ್ರಮದ ಲೋಕೋತ್ಸವವನ್ನು 2017, ಫೆಬ್ರವರಿ 10,11 ಮತ್ತು 12 ರಂದು ಮಂಗಳೂರಿನ ಪುರಭವನದಲ್ಲಿ ಬೆಳಿಗ್ಗೆ 9.00 ರಿಂದ ರಾತ್ರಿ 9.00 ರ ತನಕ ನಡೆಸಲಾಗುವುದು.

ಈ ಮೂರು ದಿನವೂ ಊರು ಪರವೂರಿನಿಂದ ಆಗಮಿಸಿದ ಜನರಿಗೆ ಉಟೋಪಚಾರ ವ್ಯವಸ್ಥೆ, ಕೊಂಕಣಿ ಜನ ಜೀವನ ವೈವಿಧ್ಯಮಯ ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಗಳು, ಮಾರಾಟ ಮಳಿಗೆಗಳು, ಸಾಂಪ್ರದಾಯಿಕ ಮತ್ತು ಆಧುನಿಕ ತಿಂಡಿ ತಿನಿಸುಗಳ ಆಹಾರ ಮಳಿಗೆಗಳು, ಉಡುಗೆ-ತೊಡುಗೆ ಮಳಿಗೆಗಳು, ಪುಸ್ತಕ ಮಾರಾಟ ಮಳಿಗೆಗಳು ಇರಲಿವೆ. ಇದಕ್ಕಾಗಿ ಪುರಭವನದ ಎರಡೂ ಕಡೆ ಅಗತ್ಯವಿರುವ ಬೃಹತ್ ಚಪ್ಪರ ಮತ್ತಿತರ ವ್ಯವಸ್ಥೆ ಮಾಡಲಾಗುವುದು.

ಮೂರು ದಿನಗಳ ಪ್ರಮುಖ ಕಾರ್ಯಕ್ರಮಗಳು :
    ೨೦೧೭ ಫೆಬ್ರವರಿ ೧೦, ಶುಕ್ರವಾರ: ಪೂರ್ವಾಹ್ನ ೧೦.೦೦ ಗಂಟೆಗೆ ತ್ರಿ ದಿನದ ಲೋಕೋತ್ಸವದ ವೈಭವದ ಉದ್ಘಾಟನೆ
    ೨೦೧೭ ಫೆಬ್ರವರಿ ೧೧, ಶನಿವಾರ: ಅಪರಾಹ್ನ ೪.೦೦ ಗಂಟೆಗೆ ಬಲ್ಮಠ ಮೈದಾನದಿಂದ ಪುರಭವನದವರೆಗೆ ಜನಪದ ಕಲಾತಂಡಗಳ ವೈಭವದ ಮೆರವಣಿಗೆ
    ೨೦೧೭ ಫೆಬ್ರವರಿ ೧೨, ಭಾನುವಾರ: ಸಾಯಂಕಾಲ ೫.೦೦ ಗಂಟೆಗೆ ಅಕಾಡೆಮಿ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ, ಯುವ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ, ಪುಸ್ತಕ ಲೋಕಾರ್ಪಣೆ ಮತ್ತು ಸಮಾರೋಪ ಸಮಾರಂಭ.
    ಈ ಮೂರು ದಿನಗಳಲ್ಲಿಯೂ ರಾಜ್ಯದ ವಿವಿಧ ಸ್ಥಳಗಳ, ವಿವಿಧ ಕೊಂಕಣಿ ಸಮುದಾಯಗಳ ಕಲಾತಂಡಗಳು ಆಗಮಿಸಿ, ಮೂರು ದಿನಗಳು ಇಲ್ಲಿ ವಾಸ್ತವ್ಯವಿದ್ದು, ಕೊಂಕಣಿ ಜನಪದ ಕಲೆಯ ವೈವಿಧ್ಯತೆಯ ಅಗಾಧತೆಯನ್ನು ಲೋಕಕ್ಕೆ ಪರಿಚಯಿಸುವರು. ಈ ಮೂಲಕ ಕೊಂಕಣಿಯ ಸಂಸ್ಕೃತಿಯ ವಿನಿಮಯ ಹಾಗೂ ಕೊಡು-ಕೊಳ್ಳುವಿಕೆಗೆ ವೇದಿಕೆ ಒದಗಿಸಲಾಗುವುದು.


ಈ ಮೂರು ದಿನಗಳ ಇತರೆ ಕಾರ್ಯಕ್ರಮಗಳ ಕಿರು ನೋಟ:
ಮೊದಲ ದಿನ:
ಸ್ತ್ರೀಯರ ಮತ್ತು ಮಕ್ಕಳ ದಿನ : ಈ ದಿನ ಸ್ತ್ರೀಯರು ಮತ್ತು ಮಕ್ಕಳಿಂದ ದಿನವಿಡೀ ವೈವಿಧ್ಯಮಯ ಸಾಹಿತಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಟಿ ನಡೆಯಲಿವೆ. ಹಾಗೂ ಸಂಜೆ ಜನಪದ ಪ್ರದರ್ಶನಗಳು ನಡೆಯಲಿವೆ.

 ಎರಡನೇ ದಿನ:
ಯುವಜನರ ದಿನ : ದಿನವಿಡೀ ಕೊಂಕಣಿ ಯುವಜನರಿಗಾಗಿಯೇ, ವಿಶೇಷವಾಗಿ ಕಾಲೇಜು ಹಾಗೂ ಶಾಲೆಗಳಲ್ಲಿ ಕೊಂಕಣಿ ಕಲಿಯುವ ಹಾಗೂ ಕೊಂಕಣಿ ಕ್ಲಬ್‌ಗಳ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ, ಸಂಜೆ ವೈಭವದ ಜನಪದ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮೂರನೇ ದಿನ:
ಈ ದಿನ ಸಮಸ್ತ ಕೊಂಕಣಿ ಬಾಂಧವರ ದಿನ. ಈ ಕಾರ್ಯಕ್ರಮದಲ್ಲಿ ದಿನವಿಡೀ ವಿವಿಧ ಗೋಷ್ಟಿ, ಸಮ್ಮೇಳನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ. ಸಂಜೆ ಅಕಾಡೆಮಿಯ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಸಮಾರಂಭ ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಲೋಕೋತ್ಸವದ ಯಶಸ್ಸಿಗಾಗಿ ಸಮಿತಿಗಳು:
ಲೋಕೋತ್ಸವದ ಕಾರ್ಯಚಟುವಟಿಕೆಗಳನ್ನು ಸಾಂಗವಾಗಿ ನೆರವೇರಿಸಲು, ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಲು ಕೆಲ ಸಮಿತಿಗಳನ್ನು ರಚಿಸಲಾಗಿದೆ.
ಈ ಎಲ್ಲಾ ಸಮಿತಿಗಳಿಗೆ-
ಅಧ್ಯಕ್ಷರಾಗಿ, ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ
ಕಾರ್ಯದರ್ಶಿಗಳಾಗಿ ಡಾ. ಬಿ.ದೇವದಾಸ ಪೈ, ರಿಜಿಸ್ಟ್ರಾರ್
ಹಾಗೂ ಅಕಾಡೆಮಿ ಸದಸ್ಯರಾದ -
      ೧. ಶ್ರೀ ಜಯರಾಮ್ ಸಿದ್ದಿ   
      ೨. ಶ್ರೀ ಯಾಕೂಬ್ ಅಹ್ಮದ್ ಜಿ
      ೩. ಶ್ರೀ ಲಾರೆನ್ಸ್ ಡಿಸೊಜಾ
ಇವರು ಸದಸ್ಯರಾಗಿರುತ್ತಾರೆ.

ಈ ಕೆಳಗಿನ ಪ್ರತಿಯೊಂದು ಉಪಸಮಿತಿಯಲ್ಲಿ ಓರ್ವ ಸದಸ್ಯ ಸಂಚಾಲಕರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ೯ ಮಂದಿ ಸದಸ್ಯರು ಇರುತ್ತಾರೆ. ಈ ಎಲ್ಲಾ ಸಮಿತಿಗಳ ಸುಮಾರು ೧೫೦ ಜನರು ಸೇರಿ ಕೊಂಕಣಿ ಲೋಕೋತ್ಸವ ಸಂಘಟನಾ ಸಮಿತಿಯಾಗುತ್ತದೆ. ಈ ಸಮಿತಿಗಳ ನೆರವಿನಿಂದ, ಕಾರ್ಯಕ್ರಮದ ಎಲ್ಲಾ ಚಟುವಟಿಕೆಗಳು ಯಶಸ್ವಿಯಾಗಿ ನಡೆಯಲು ಸಹಾಯವಾಗುವಂತೆ ಅಯಾಯಾ ಸಮಿತಿಗಳಿಗೆ ಜವಾಬ್ದಾರಿಗಳನ್ನು ಹಂಚಿ ನೀಡಲಾಗಿದೆ.

೧.    ಸ್ವಾಗತ ಸಮಿತಿ  
ದೇಶ ವಿದೇಶದ ಅತ್ಯಂತ ಪ್ರಖ್ಯಾತ ಹಾಗೂ ಗಣ್ಯಾತಿಗಣ್ಯ ಕೊಂಕಣಿ iಹನೀಯರು, ಕೊಂಕಣಿ ಮಾತೃಭಾಷಿಕ ರಾಜಕಾರಣಿಗಳು ಈ ಸಮಿತಿಯಲ್ಲಿ ಇರಲಿದ್ದಾರೆ.
    ಗೌರವಾಧ್ಯಕ್ಷರು : ಶ್ರೀ ಬಸ್ತಿ ವಾಮನ್ ಶೆಣೈ
೨.    ಉದ್ಘಾಟನಾ ಮತ್ತು ಸಮಾರೋಪ ಕಾರ್ಯಕ್ರಮಗಳ ಸಮಿತಿ:
    ಸದಸ್ಯ ಸಂಚಾಲಕರು : ಶ್ರೀಮತಿ ಮಮತಾ ಕಾಮತ್
    ಅಧ್ಯಕ್ಷರು  : ಶ್ರೀ ವೆಂಕಟೇಶ್ ಬಾಳಿಗ          ಉಪಾಧ್ಯಕ್ಷರು : ಶ್ರೀಮತಿ ಐರಿನ್ ರೆಬೆಲ್ಲೊ
೩.    ಸಾಂಸ್ಕೃತಿಕ ಸಮಿತಿ:
    ಸದಸ್ಯ ಸಂಚಾಲಕರು  : ಶ್ರೀ ಕೆ. ದೇವದಾಸ ಪೈ   
     ಅಧ್ಯಕ್ಷರು  : ಶ್ರೀ ಎರಿಕ್ ಒಝೇರಿಯೊ       ಉಪಾಧ್ಯಕ್ಷರು : ಶ್ರೀ ಗೋಪಾಲ ಗೌಡ
೪.    ಸಾಹಿತಿಕ ಮತ್ತು ಅಧಿವೇಶನ ಸಮಿತಿ:
    ಸದಸ್ಯ ಸಂಚಾಲಕರು    :  ಡಾ. ಅರವಿಂದ ಶಾನಭಾಗ
      ಅಧ್ಯಕ್ಷರು  : ಶ್ರೀ ಅರುಣ್ ರಾಜ್ ರೊಡ್ರಿಗಸ್   ಉಪಾಧ್ಯಕ್ಷರು : ಡಾ. ಜಯವಂತ ನಾಯಕ್
೫    ವಸ್ತು ಪ್ರದರ್ಶನ ಸಮಿತಿ:  
    ಸದಸ್ಯ ಸಂಚಾಲಕರು   : ಶ್ರೀ ಶೇಖರ ಗೌಡ    
   ಅಧ್ಯಕ್ಷರು  : ಶ್ರೀ ಸಂತೋಷ್ ಶೆಣೈ          ಉಪಾಧ್ಯಕ್ಷರು : ಶ್ರೀ ಜೇಮ್ಸ್ ಡಿಸೋಜ
೬.    ಊಟೋಪಚಾರ ಸಮಿತಿ:
    ಸದಸ್ಯ ಸಂಚಾಲಕರು  : ಶ್ರೀ ಕಮಲಾಕ್ಷ ಶೇಟ್
        ಅಧ್ಯಕ್ಷರು  : ಶ್ರೀಮತಿ ಗೀತಾ ಕಿಣಿ           ಉಪಾಧ್ಯಕ್ಷರು : ಶ್ರೀ ನವೀನ್ ಲೋಬೊ
೭.    ಮೆರವಣಿಗೆ/ಯುವಜನ ಸಮಿತಿ:
    ಸದಸ್ಯ ಸಂಚಾಲಕರು   : ಶ್ರೀ ಅಶೋಕ್ ಕಾಸರಕೋಡು     
   ಅಧ್ಯಕ್ಷರು  : ಶ್ರೀ ಜ್ಯಾಕ್ಸನ್ ಡಿಕೋಸ್ತಾ             ಉಪಾಧ್ಯಕ್ಷರು : ಶ್ರೀ ರತ್ನಾಕರ ಕುಡ್ವ
೮.    ಪ್ರಚಾರ/ಜನಸಂಪರ್ಕ ಸಮಿತಿ:
    ಸದಸ್ಯ ಸಂಚಾಲಕರು       : ಡಾ. ಚೇತನ ನಾಯ್ಕ್
    ಅಧ್ಯಕ್ಷರು  : ಶ್ರೀ ಎಲಿಯಾಸ್ ಫೆರ್ನಾಂಡಿಸ್     ಉಪಾಧ್ಯಕ್ಷರು : ಶ್ರೀಮತಿ ಸ್ಮಿತಾ ಶೆಣೈ
೯.     ಪ್ರಯಾಣ/ವಸತಿ ಸಮಿತಿ:
    ಸದಸ್ಯ ಸಂಚಾಲಕರು : ಶ್ರೀ ಲುಲ್ಲುಸ್ ಕುಟಿನ್ಹೊ
     ಅಧ್ಯಕ್ಷರು  : ಶ್ರೀ ಸ್ಟ್ಯಾನಿ ಆಲ್ವಾರಿಸ್        ಉಪಾಧ್ಯಕ್ಷರು : ಶ್ರೀ ನಿರಂಜನ ರಾವ್
೧೦.     ಕಛೇರಿ/ದಾಖಲಾತಿ ಸಮಿತಿ:
    ಸದಸ್ಯ ಸಂಚಾಲಕರು   : ಡಾ. ವಾರೀಜ ನಿರ್ಬೈಲ್
    ಅಧ್ಯಕ್ಷರು  : ಶ್ರೀ ವಿಕ್ಟರ್ ಮತಾಯಸ್        ಉಪಾಧ್ಯಕ್ಷರು : ಡಾ. ವಿಜಯಲಕ್ಷ್ಮಿ ನಾಯ್ಕ್
೧೧.     ಆಯೋಜನಾ ಸಮಿತಿ:
    ಸದಸ್ಯ ಸಂಚಾಲಕರು : ಶ್ರೀ ಶಿವಾನಂದ ಶೇಟ್
    ಅಧ್ಯಕ್ಷರು  : ಶ್ರೀ ಲುವಿಸ್ ಜೆ. ಪಿಂಟೊ     ಉಪಾಧ್ಯಕ್ಷರು : ಶ್ರೀಮತಿ ವಿದ್ಯಾ ಕಾಮತ್
೧೨.     ಅರ್ಥಿಕ ಸಮಿತಿ
    ಅಧ್ಯಕ್ಷರು  : ಶ್ರೀ ಎಮ್. ಎ. ರೆಹೆಮಾನ್      ಉಪಾಧ್ಯಕ್ಷರು : ಡಾ. ಬಿ.ದೇವದಾಸ ಪೈ

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]