2017 ಫೆಬ್ರವರಿ 10, 11 ಮತ್ತು 12 ರಂದು ನಡೆಯಲಿರುವ ಕೊಂಕಣಿ ಲೋಕೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕಾಗಿ ಸೂಕ್ತ ಕಲಾವಿದರಿಂದ
*-*-*-*-*

ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿಯು 2017 ಫೆಬ್ರವರಿ 10, 11 ಮತ್ತು 12 ರಂದು ಮೂರು ದಿನದ ರಾಷ್ಟ್ರ ಮಟ್ಟದ ಕೊಂಕಣಿ ಲೋಕೋತ್ಸವವೆಂಬ ಬೃಹತ್ ಕೊಂಕಣಿ ಸಮ್ಮೇಳನವನ್ನು  ಏರ್ಪಡಿಸಿದ್ದು, ಈ ಮಹಾಸಮ್ಮೇಳನದ ವೇದಿಕೆಯ ಮೇಲೆ ಮೂರೂ ದಿನಗಳಲ್ಲಿ ನಿರಂತರವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ - ಮೂರು ವಿಭಾಗಗಳಿಂದ ಅಂದರೆ

(1) ಕಾಲೇಜು ವಿದ್ಯಾರ್ಥಿಗಳು,

(2) ಮಹಿಳಾ ಮತ್ತು ಮಕ್ಕಳು,

(3) ಇತರ ಕಲಾವಿದಗಳಿಂದ ತಂಡಗಳಲ್ಲಿ ಗಾಯನ-ನೃತ್ಯ-ಅಭಿನಯ ಮಿಶ್ರಿತ  15 ನಿಮಿಷಗಳ ಕಾರ್ಯಕ್ರಮ ಹಾಗೂ

(4) ಜನಪದ ಕಲಾವಿದ ಪಂಗಡಗಳಿಂದ ಒಂದು ನಿರ್ದಿಷ್ಠ ನೃತ್ಯ ಪ್ರಕಾರದ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

 

ಆಸಕ್ತರು, ತಮ್ಮ  ತಂಡದ ವಿವರವನ್ನು ದಿ. 12.12.2016 ರ ಒಳಗಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಛೇರಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಭಾಗ್, ಮಂಗಳೂರು-575 003 ಇಲ್ಲಿಗೆ ಕಳುಹಿಸಬಹುದು. ಆಹ್ವಾನಿತ ತಂಡಗಳಿಗೆ ಸೂಕ್ತ ಗೌರವವಧನವನ್ನು ನೀಡಲಾಗುವುದು.

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]